ಗುರುವಾರ, ನವೆಂಬರ್ 30, 2017

35. ಅಂಕಣ ಬರಹ- ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-4

[10/31, 2:10 PM] Prem: ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಸ್ತ್ರೀಯರಿಗಾಗಿಯೇ ಪತ್ರಿಕೆ ಒಂದಿದೆ.ಅದರ ಹೆಸರು 'ಸ್ತ್ರೀ ಜಾಗೃತಿ'. ಬೆಂಗಳೂರಿನಿಂದ ಪ್ರಕಟಿತ. ಯಾರು ಬೇಕಾದರೂ ತಮ್ಮ ಬರಹಗಳನ್ನು ಕಳುಹಿಸ ಬಹುದು. ಆದರೆ ಮಹಿಳೆಯರಿಗೆ ಉಪಯುಕ್ತವಾಗುವ ಮಾಹಿತಿ ಇರಬೇಕು. ಶ್ರೀಮತಿ ಶೋಭಾ ಹೆಚ್ ಜಿ ಇದರ ಸಂಪಾದಕರು. ಸಾಧ್ಯವಾದಲ್ಲಿ ಓದಿ. ಆನ್ ಲೈನಿನಲ್ಲೂ ಇದು ಲಭ್ಯ.
    ಅದಲ್ಲದೇ ಗೃಹಶೋಭಾ, ಪ್ರಿಯಾಂಕಾ,ವುಮನ್ಸ್ ಎರಾ, ಲೇಡೀಸ್ , ಮಹಿಳೆ ಮೊದಲಾದ ಪತ್ರಿಕೆಗಳೂ ಇವೆ. ಹಲವಾರು ದಿನಪತ್ರಿಕೆಗಳಲ್ಲಿ ಮಹಿಳೆಯರಿಗಾಗಿ 'ಮಹಿಳಾ ಸಂಪದ' ಮೊದಲಾದ ಅಂಕಣಗಳಿವೆ. ದೈನಿಕಗಳಲ್ಲಿ ಪ್ರತಿದಿನವೂ ಮಹಿಳೆಯರಿಗಾಗಿ ಬರಹಗಳಿವೆ.

  ಇಂದಿನ ಮಹಿಳೆಯರಿಗೆ ಅಕ್ಷರ ಕಲಿತರೆ ಸಾಕು. ವಿಚಾರ ಒದಗಿಸಲು ಎಲ್ಲಾ ಸಂವಹನ ಪತ್ರಿಕೆಗಳು ನಾ ಮುಂದು ತಾ ಮುಂದು ಎಂದು ಮುಂದಿವೆ. ಅಲ್ಲದೇ ಟಿ.ವಿ.ಚಾನೆಲ್ಗಳು, ರೇಡಿಯೋಗಳ ಚಾನೆಲ್ ಗಳಲ್ಲೂ, ಬ್ಯಾಂಕುಗಳಲ್ಲೂ ಮಹಿಳೆಯರಿಗೆ ಉಪಯುಕ್ತ ಅವಕಾಶಗಳಿವೆ.
  ಮೊಬೈಲ್ಗಳಲ್ಲೂ ಹೊಸ ಆ್ಯಪ್ ಗಳಿವೆ. ಬಳಸಿ.ತಿಳಿದುಕೊಳ್ಳಿ. ಉಪಯೋಗಿಸಿ..
[11/1, 12:46 PM] Prem: ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
   ನಾವು ಸ್ತ್ರೀಯರನ್ನು ಹೆಚ್ಚಾಗಿ ಗೌರವಿಸುವುದು,ಪೂಜಿಸುವುದು,ಆರಾಧಿಸುವುದು ಮಾತೃ ಸ್ವರೂಪಿಯಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾತೆ,ಅಮ್ಮ, ತಾಯಿ ಇತ್ಯಾದಿ ಪದಗಳನ್ನು ನಾವು ಸ್ತ್ರೀ, ದೇವಿ ಮತ್ತು ಗೋವಿಗೆ ಮಾತ್ರ ಬಳಸುತ್ತೇವೆ. ಕಾರಣ 'ಮಾತೆ' ಎಂಬ ಪದದಲ್ಲಿಯೇ ರಕ್ಷಣೆ, ಪ್ರೀತಿ,ವಾತ್ಸಲ್ಯ,ಕರುಣೆ,ದಯೆ, ತ್ಯಾಗ, ಹೊಂದಾಣಿಕೆ ಇವೆಲ್ಲ ಇರುವ,ಇವುಗಳನ್ನೆಲ್ಲ ಬಯಸುವ ಭಾವನೆಗಳಿವೆ. ನೋಡಿದರೂ,ನೋಡದೆಯೇ ಇದ್ದರೂ, ಎದ್ದರೂ,ಬಿದ್ದರೂ,ಭಯ,ಅಳು,ನಗು,ವಿಪರೀತ ಖುಷಿಯಾದರೂ ನಮ್ಮಿಂದ ಹೊರಬರುವ ಪದ 'ಅಮ್ಮಾ'.ಅದಕ್ಕೆಷ್ಟು ಪವರ್!
   ಅಬ್ಬಾ! ನೆನೆಸಿಕೊಂಡರೆ ಸಾಕು...ಮೈ ಜುಮ್ಮೆನ್ನುತ್ತದೆ,ಮನಸ್ಸು ನರ್ತಿಸುತ್ತದೆ! ಮನ ಮಗುವಾಗಿ ಬಿಡುತ್ತದೆ.. 'ಮ' ಕಾರ ಸರ್ವಶ್ರೇಷ್ಠವಾದ ಓಂಕಾರದಲ್ಲೂ ಇದೆ. ಸೂರ್ಯನಿಂದ ಹೊರಡುವ ಶಬ್ದವೂ ಅದೇ ಆಗಿದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತಾಗಿದೆ.
   ಊಂ... ಎಂದು ಅಳುವ ಮಗುವಿನ ದನಿಯಲ್ಲೂ 'ಮ'ಕಾರವಿದೆ. ಇದೇ ಅಮ್ಮನಿಗಾಗಿ ಕರೆಯಾಗಿದೆ. ಹುಟ್ಟಿದ ಎಳೆ ಮಗುವನ್ನೊಮ್ಮೆ ದಿಟ್ಟಿಸಿ ನೋಡಿ.ನಾವೂ ಕೂಡ ಒಂದು ದಿನ ಹಾಗೇ ಇದ್ದವರಲ್ಲವೇ?ನಾವು ಈಗಿರುವ ಮಟ್ಟಕ್ಕೆ ಬೆಳೆಯಲು ಶಕ್ತರಾದುದು ಅಮ್ಮನ ಪ್ರೀತಿ,ತ್ಯಾಗ, ಪೋಷಣೆಗಳಿಂದಲ್ಲವೇ?
  ಅಕ್ಕರೆಯಿಂದ ಮುತ್ತು ಕೊಟ್ಟು ತಾನು ತಿನ್ನದಿದ್ದರೂ ಮಗುವಿಗೆ ಕೊಟ್ಟು, ತನಗಿಲ್ಲದ,ತನಗೆ ಸಿಗದ,ತನ್ನಾಸೆಯವನೆಲ್ಲ ಮಗುವಿಗಿರಲಿ ಎಂದು, ತನ್ನದರಲ್ಲಿ ಉಳಿಸಿ,ತನ್ನ ರಕ್ತ,ಮಾಂಸ,ಮನ,ಹೃದಯ ಹಂಚಿ ನಮ್ಮನ್ನು ಬೆಳೆಸಿದ ಮಾತೆಗೂ, ಹರಸಿ ಸಲಹುತ್ತಿರುವ ಶಕ್ತಿ ಮಾತೆಗೂ, ಅನ್ನ,ನೀರು ನೀಡಿ ಸಾಕುತ್ತಿರುವ ಭೂ ಮಾತೆಗೂ, ಪೊರೆವ ಭರತ ಮಾತೆಗೂ,ಕನ್ನಡ ತಾಯಿ ಭುವನೇಶ್ವರಿಗೂ ಸಹೃದಯದ ವಂದನೆಗಳು. ತಾಯ ಪ್ರೀತಿಯನ್ನು ಮೀರಿದ ವಸ್ತುಗಳು,ಭಾವನೆಗಳು ಈ ಜಗದೊಳಿಹುದೇ?
@ಪ್ರೇಮ್@
[11/1, 1:28 PM] Prem: *ಕವನ-1
*ನಿನಗಿದೋ* *ನಮನ*
ನನ್ನ ಮೆದುಳ ನರಗಳಲಿ ಸ್ಪರ್ಶ ಸಿಂಚನವಾದಾಗ
ಹೊಳೆಯುವುವು ಹಲವು ನುಡಿ.

ಆ ನುಡಿಯು ಹರಿಯುವುದು ಎದೆಯಾಳಕೆ..
ಹರಿದ ನುಡಿವಾಹಿನಿಯ ತಲುಪಿಸುವವು ನರನಾಡಿಗಳು..

ಅಲ್ಲಿಂದ ನುಡಿ ತೆರಳುವುದು ಕೈಯ ಕಡೆಗೆ..
ಕೈ ಬೆಟ್ಟು ಮಾಡಿ ತೋರಿಸುವುದು ಬೆರಳಿನೆಡೆಗೆ..

ಬೆರಳಿಗದ ಜನಮನಕೆ ತಲುಪಿಸುವ ಸಡಗರ..
ಹುಡುಕಾಡುವುದು ಎಲ್ಲಿದೆ ನನಗಾಧಾರ?

ಸಹಾಯಕ್ಕೆ ಧಾವಿಸಿ ಬರುವುದಾಗ ಲೇಖನಿ ಮಿತ್ರ
ಬರೆಯುವ ಮನದ ನುಡಿಯನು ಮಾಡಿ ಸಣ್ಣ ಗಾತ್ರ!

ಕತೆ,ಕವನ,ವಿಮರ್ಶೆ,ರೂಪಕ,ಕಾವ್ಯ,ಗದ್ಯ!
ಏನೇ ಇರಲಿ ನೀ ಗೀಚುವೆ ಮಾಡಿ ಹೃದ್ಯ..

ಓ ನನ್ನ ಲೇಖನಿಯೇ ನಿನಗಿದೋ ನಮನ.
ಇಲ್ಲಿಗೆ ಮುಗಿಸುವೆ ನಿನ್ನಲ್ಲೆ ಬರೆಸುವ ನನ್ನ ಕವನ!

@ಪ್ರೇಮ್@
[11/1, 1:29 PM] Prem: *ನನ್ನ ಕವನ
*ನನ್ನೊಡಲ* *ಕತೆ* *
ಯೋಚಿಸದೆ ಹಿಂದು-ಮುಂದು ಒಂದು
ಓ ಮಾನವಾ ನೀ ಹುಟ್ಟಿಹೆ ನನ್ನೊಡಲಲಿಂದು1ಪ1

ನನ್ನೊಡಲ ಬಗೆಬಗೆದು,ಸಾರಿಸಿ,ಸುಲಿದು,
ರಾಸಾಯನಿಕಗಳ ಬೆರೆಸಿ,ಕರಗಿಸಿ ಕುಡಿದು,
ಅಳಿದುಳಿದುದ ನನ್ನೊಳಗೆ ಸುರಿಸುರಿದು,
ನನ್ನೊಳಿಹ ಗಿಡ-ಮರಗಳ ಕಡಿಕಡಿದು..1೧1

ನನ್ನೊಡಲಲಿ ಬೆಚ್ಚಗಿಹ ಜೀವಿಗಳ ಮಾಡುವೆ ಬರಿದು,
ನಾ ಸೊರಗಿ,ಬಳಲಿ ಬಂಡಾಗಿಹೆನಿಂದು.
ಯಾರ ಬಳಿ ಹೇಳಿಕೊಳ್ಳಲಿ ಸಂಕಷ್ಟ ನನ್ನದು?
ನನ್ನ ಅಂಗಾಲುಗಳು ನೀರಿಲ್ಲದೆ ಒಡೆಯುತಿಹುದು 1೨1

ಕೆರೆಗಳ ಬತ್ತಿಸಿ,ಸಾಗರಗಳ ಹಾಳುಗೆಡಹುತಿದ್ದು,
ನನ್ನೊಡಲನೆ ಕೊರೆ ಕೊರೆದು ಬಾವಿ ಬರಿದಾಗಿಸಿದ್ದು,
ನನ್ನ ರಕ್ತವನೆ ಹೀರುವಿರಿ ಮೊಗೆಮೊಗೆದು,
ಈ ಭೂತಾಯ ಮೇಲೆ ನಿಮಗೆ ಕನಿಕರವೆ ಬರದು...! 1೩1

ಮನುಜಾ ನಿನಗೆಂದೂ ಬುದ್ಧಿ ಬರದು,
ಆಗಲಿದೆ ಶೀಘ್ರವೇ ನನ್ನೊಡಲು ಬರಿದು,
ಕರಗಿಸದಿರು ನೀ ನೆಲ-ಜಲ ಸಂಪತ್ತ ತಿಂದು,
ಅವೆಲ್ಲ ಇರಲಿ ಹೀಗೇ ಇಂದೂ ಮುಂದೂ....

@ಪ್ರೇಮ್@
[11/2, 10:54 PM] Prem: ನ್ಯಾನೋ ಕಥೆ
*ಹುಡುಗಿಯೊಬ್ಬಳ ವ್ಯಥೆ*
ನನ್ನ ತಂದೆ,ತಾಯಿ,ಬಂಧು ಬಳಗವ ತೊರೆದು ನಾ ಮನೆ ಬಿಟ್ಟು ಬಂದೆ. ಅಲ್ಲಿಗೇ ಮುಗಿಯಿತು ನನ್ನ ಜೀವನದಾಟ.
@ಪ್ರೇಮ್@
[11/5, 12:41 PM] Prem: *ಪ್ರೀತಿ*
*ಈ ಭುವಿಯಲಿ ಬದುಕುವ*
*ಪ್ರತಿ ಪ್ರಾಣಿ ಪಕ್ಷಿಯೂ*
*ಬೇಡುವವು ಪ್ರೀತಿಗಾಗಿ*1೧1

*ತನ್ನನ್ನು ತಾನಾಗಿ ಪ್ರೀತಿಸುವ ಕರುಳಿಗೆ*
*ಸಮರ್ಪಿಸುವವು ತಮ್ಮ ಬಾಳು*
*ಅನ್ನ-ಆಹಾರ ಗಾಳಿ-ನೀರಂತೆ*
*ಪ್ರೀತಿಯೂ ಬೇಕಲ್ಲ ನಮಗೆ?*1೨1

*ಪ್ರೀತಿಯಲಿ ಇಲ್ಲ ಚಿಕ್ಕವ,ದೊಡ್ಡವ*
*ಎಲ್ಲರೂ ಒಂದೆ ಇಲ್ಲಿ*
*ಯಾರಿಲ್ಲಿ ಮೇಲಿಲ್ಲ, ಯಾರೂ ಕೀಳಲ್ಲ*
*ಜಾತಿ-ಮತ ಭೇದವೂ ಇಲ್ಲ*1೩1

*ತಂದೆ-ತಾಯಿ, ಅಜ್ಜಿ-ತಾತನ ಪ್ರೀತಿ*
*ಅಕ್ಕ-ತಂಗಿ, ಅಣ್ಣ-ತಮ್ಮರ ಪ್ರೀತಿ*
*ಬಂಧು-ಬಳಗ,ಗೆಳೆಯ,ಸಂಗಾತಿಯರ ಪ್ರೀತಿಗೆ*
*ಕಟ್ಟಲಾದೀತೇ ಬೆಲೆಯ?*1೩1

*ನಮ್ಮ ಪ್ರೀತಿಯ ಪಥಕೆ ಸೋಲುಂಟೆ ಎಂದೂ*
*ನಿಶ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಿದವರುಂಟೇ?*
*ಹೃದಯ-ಮನಸನು ಈ ಶುದ್ಧ ಪ್ರೀತಿಯಿಂದ ತಾನೇ*
*ಎಲ್ಲರೂ ಎಲ್ಲೆಡೆ ಗೆಲ್ಲುವುದು?*1೪1

*ಏನೇ ಪರೀಕ್ಷೆಗಳು ಬದುಕಲಿ ಬರಲಿ*
*ಪ್ರೀತಿಯ ತಾಯತ ಕೈಗಳಲಿರಲಿ*
*ಮಾಡುವ ಪ್ರತಿ ಕಾರ್ಯದಲೂ*
*ಪ್ರೀತಿಯಿರಲು ವಿಘ್ನಗಳಿರದು*

@ *ಪ್ರೇಮ್* @
[11/6, 3:04 PM] Prem: *ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ*
*ಮಾತೆಯರ ಪ್ರೀತಿಯ ಬಗ್ಗೆ ಕಳೆದ ವಾರ ಬರೆದಿದ್ದೆ,ನಮ್ಮ ಮಾತೆಯ ಮಹತ್ತರ ಪಾತ್ರ ನಮ್ಮ ಜೀವನದಲ್ಲಿ ಹೇಗಿದೆ ಅಂತ ನಮ್ಮೆಲ್ಲರಿಗೆ ತಿಳಿದಿದೆ. ಅಂತೆಯೇ ನಮ್ಮೆಲ್ಲರ ಮೇಲೆ ಪ್ರಹಾರ ನಡೆಸುವ,ಎಲ್ಲರನ್ನು ಪ್ರೀತಿಸುವ ಹಾಗೂ ಎಲ್ಲರ ಜೀವನ ಅಲ್ಲೋಲ ಕಲ್ಲೋಲ ಮಾಡುವ ಜೀವಿ ಮನೆಯಲ್ಲಿದ್ದರೆ ಅದು ಸಹೋದರಿಯರು. ಜಗಳವಾಡುತ್ತಾ, ಟೀಸ್ ಮಾಡುತ್ತಾ ಗೋಳಾಡಿಸಿ, ಅಷ್ಟೇ ಪ್ರೀತಿಸಿ, ತನಗೆ ಬೇಕಾದ್ದನ್ನು ಗಿಟ್ಟಿಸಿಕೊಂಡು,ತಂಗಿ- ತಮ್ಮಂದಿರ ಜವಾಬ್ದಾರಿ ಹೊತ್ತು, ತಂದೆ,ತಾಯಿಯರ ಜವಾಬ್ದಾರಿಗೆ ಹೆಗಲು ಕೊಡುವ, ತಂದೆಯನ್ನು ಅಪರಿಮಿತ ಪ್ರೀತಿಸುತ್ತಾ,ಅಮ್ಮ ಏನು ಮಾಡಿದರೂ ಸರಿ ಆಗಲಿಲ್ಲ ಎನ್ನುತ್ತಾ ಗೊಣಗಾಡುತ್ತ,ಒಳಗೊಳಗೇ ಅಮ್ಮನ ಕಷ್ಟ ಕಂಡು ಮರುಗುತ್ತಾ,ಅಕ್ಕ-ಅಣ್ಣಂದಿರ ಪರ್ಸ್ ಖಾಲಿ ಮಾಡುತ್ತಾ, ಅವರಿಂದ ಬುದ್ಧಿ ಹೇಳಿಸಿ ಕೊಳ್ಳುತ್ತಾ, ತರಲೆ ಮಾಡುತ್ತಾ ಇರುವ, ಇಡೀ ಸಂಸಾರ ನಡುಗಿಸುವ ಕ್ಯಾರೆಕ್ಟರ್ ಈ ಸಹೋದರಿಯರದ್ದು.*
  *ಸಂಸಾರಕ್ಕೆ ಕಣ್ಣು, ಹೊನ್ನು, ಗುರಿ-ದಾರಿ ತಪ್ಪಿದರೆ ಬಾಯಿಗೆ ಮಣ್ಣು. ತುಂಬಾ ನಾಜೂಕು ಇವರು.ಯಾವಾಗ ಹೇಗೆಂದು ಹೇಳಲಾಗದು. ಅಪ್ಪ-ಅಮ್ಮನ ಮರ್ಯಾದೆ ಉಳಿಸುವವರು,ತೆಗೆಯುವವರೂ ಇವರೇ. ಎರಡು ಸಂಸಾರಕ್ಕೆ ಸೇತುವೆ. ಎರಡೂ ಮನೆಯ ಲಕ್ಷ್ಮಿಯರು.*
*ಈಗಿನ ಟಿ.ವಿ ಚಾನೆಲ್ ಗಳ ಧಾರಾವಾಹಿಗಳನ್ನು ಆಳುತ್ತಾ ಇರುವವರೂ ಇವರೇ. ಮಗನಿಗಿಂತ ಮಗಳೇನೂ ಕಡಿಮೆ ಇಲ್ಲ ಎಂದು ತೋರಿಸುವವರು ಇವರು.*
*ಇವರಿಲ್ಲದೆ ಜಗತ್ತಿಲ್ಲ, ಅಂದ ಅಲಂಕಾರಗಳಿಲ್ಲ. ಬಣ್ಣಗಳ ಬದುಕಂತೂ ಇಲ್ಲವೇ ಇಲ್ಲ. ಫ್ಯಾನ್ಸಿ,ಬದಲಾಗುವ ಸ್ಟೈಲ್ ಗಳಿಗೆ ಹೊಂದಿಕೊಂಡ ಇವರು ಜವಾಬ್ದಾರಿಗೂ ಸೈ, ಕೆಲಸಕ್ಕೂ ಸೈ. ಆಧಾರಕ್ಕೂ ಸೈ. ಇಂಥ ಸಹೋದರಿ ರಕ್ಷೆ ಕಟ್ಟಿ ರಕ್ಷಿಸುತ್ತಾಳೆ, ಪೆಟ್ಟು ಕೊಟ್ಟು ಶಿಕ್ಷಿಸುತ್ತಾಳೆ ಕೂಡಾ.*
*ಕೆಲವೊಮ್ಮೆ ಅಳಿಸುವ,ನಗಿಸುವ,ಅಕ್ಕರೆಯ,ಪ್ರೀತಿಯ,ಸಕ್ಕರೆಯ ಸವಿ ಕೊಡುವ, ಕಾರದ ಸನ್ನಿವೇಶ ತರುವ ಸಹೋದರಿಯರನ್ನು ಪಡೆದ ನಾವೆಲ್ಲರೂ ಧನ್ಯ ಅನ್ನಿಸುವುದಿಲ್ಲವೇ? ನಿಮ್ಮ ಸಹೋದರಿಯರೊಂದಿಗೆ ಕಳೆದ ಆ ಸುಮಧುರ ಘಳಿಗೆಗಳನ್ನೊಮ್ಮೆ ಸ್ಮರಸಿಕೊಳ್ಳಿ. ಮನಕ್ಕೆ ಹಿತವಾಗಿರುತ್ತೆ. ನೀವೇನಂತೀರಿ?*
@ಪ್ರೇಮ್@
[11/8, 12:26 PM] Prem: ಸ್ಪರ್ಧೆಗೆ ಕವನ
*ಜೀವನ ರಾಗ*
ನನ್ನಮ್ಮನ ಉದರದಲಿ ನಾ ಉದಯಿಸಿದ
ಆ ಸುಮಧುರ ಸಮಯವೆ ನನ್ನೀ ಜೀವನ ಪಲ್ಲವಿ1೧1

ನನ್ನಪ್ಪ ಅಮ್ಮ ಒಟ್ಟು ಸೇರಿ ತಿನಿಸಿದ
ಆ ಮೊದಲ ಕೂಳು ನನ್ನ ಆರೋಗ್ಯ ಪಲ್ಲವಿ1೨1

ನನ್ನಕ್ಕ ಕೈ ಹಿಡಿದು ಮೊದಲ ಹೆಜ್ಜೆ ಇರಿಸಿದ ಕ್ಷಣ
ನನ್ನ ಜೀವ-ಪಯಣದ ಪಲ್ಲವಿ1೩1

ನನ್ನ ಮೊದಲ ಗುರು ನನ್ನ ಕೈ ಹಿಡಿದು
ಮೊದಲಕ್ಷರ ತೀಡಲಡಿಯಿಟ್ಟ ಗಳಿಗೆ
ನನ್ನ ಬದುಕಿನ ಕಲಿಕಾ ಪಲ್ಲವಿ1೪1

ನನ್ನಜ್ಜಿ ನನ್ನನು ಪಕ್ಕದಲಿ ಕೂರಿಸಿ,
ಚಿಕ್ಕ ಕಥೆಯೊಂದ ಹೇಳಿದ್ದು ನನ್ನ ಕವನದ ಪಲ್ಲವಿ1೫1

@ಪ್ರೇಮ್@
[11/13, 11:19 AM] Prem: ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಕುಡಿತ ಎನ್ನುವುದು ದೇಶವನ್ನಷ್ಟೇ ಹಾಳು ಮಾಡುವುದಲ್ಲ. ಅದಕ್ಕೆ ದಾಸರಾದ ಪ್ರತಿಯೊಂದು ಕುಟುಂಬಗಳನ್ನೂ ಅದು ಬಿಡದೆ ಕಾಡುತ್ತದೆ. ಪುರುಷರು ಬಾರ್ ಗಳಲ್ಲಿ ಹೋಗಿ ಕುಳಿತು ದುಡಿದದ್ದರಲ್ಲಿ ಕಂಠ ಪೂರ್ತಿ ಕುಡಿದು, ರಸ್ತೆಯಲ್ಲಿ ಕೆಲವರು ಬಿದ್ದರೆ ಇನ್ನು ಕೆಲ ಕುಡುಕರು ಕಷ್ಟಪಟ್ಟು ಮನೆಸೇರಿಕೊಳ್ಳುತ್ತಾರೆ. ಮತ್ತೆ ಕೆಲವರು ಯಾರಿಗೂ ಗೊತ್ತಾಗದು ಅಂದುಕೊಂಡು ಕಾಡಲ್ಲಿ ಹೋಗಿ ಕುಡಿದು ಬರುವವರಿದ್ದರೆ ಇನ್ನುಾ ಕೆಲವರು ಮನೆಗೆ ತಂದು ಡೈಲಿ ಚಹ ಕುಡಿದ ಹಾಗೆ ಕುಡಿಯುವವರೂ ಇದ್ದಾರೆ. ಕುಡಿತದಲ್ಲೇ ಮುಳುಗಿ ಮನೆಗೇ ಹೋಗದೆ ಮಡದಿ ಮಕ್ಕಳು ಯಾರೆಂದೂ ತಿಳಿಯದವರೂ ಇದ್ದಾರೆ.
  ಇದು ಕುಡಿಯುವ ಪುರುಷರ ಬಗೆಗಾದರೆ, ಆತಂಕಕಾರಿ ವಿಷಯ ಏನಂದರೆ ಕುಡುಕಿ ಮಹಿಳೆಯರದ್ದು! ಈಗಂತೂ ಕುಡಿತ ಸ್ಟೈಲ್ ಗಾಗಿ ಒಂದೆಡೆಯಾದರೆ, ಗಂಡ ತಾನು ಕುಡಿಯುವಾಗ ಗಲಾಟೆ ಮಾಡದೆ ಸುಮ್ಮನಿರಲಿ ಎಂದು ಹೆಂಡತಿಗೆ ಕುಡಿಸಿ ಅವರನ್ನೂ ಕುಡಿತಕ್ಕೆ ದಾಸರನ್ನಾಗಿಸುವ ಕುಟುಂಬಗಳು ಹಲವಾರಿವೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ.
  'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಈ ಹಿಂದಿನ ಕಲಿಕಾ ಘೋಷಣೆ. ಈಗ ಅದನ್ನು ಬದಲಾಯಿಸ ಬೇಕು ಹೇಗೆಂದರೆ 'ಹೆಣ್ಣೊಂದು ಕುಡಿಯಲು ಕಲಿತರೆ ಬಾರೊಂದು ತೆರೆದಂತೆ' ಎಂಬ ಹೊಸ ಘೋಷಣೆ ಬೇಕಾಗುತ್ತದೇನೋ. ವಿದೇಶಗಳ ಅಂಧಾನುಕರಣೆಗಳಲ್ಲಿ ಇದೂ ಒಂದು. ನಾವು ಅಕ್ಷರ ಕಲಿತ ಹೆಣ್ಣು ಮಕ್ಕಳಾಗಿದ್ದು, ಇದನ್ನು ತಡಮಾಡದೆ ತಡೆಯಲು ಪ್ರಯತ್ನಿಸಬಹುದಲ್ಲವೇ? ನೀವೇನಂತೀರಿ?
@ಪ್ರೇಮ್@
[11/20, 11:00 AM] Prem: ಜೀವನ ರಥ
ನಮ್ಮ ಬದುಕ ಪಥ,
ನೂಕಬೇಕು ಜೀವನ bರಥ,
ಜನ ನೂರಾರಿಹಲು ಸ್ವಂತ,
ಜೀವನ ಮುಟ್ಟಲೊಂದು ಹಂತ.

ಬದುಕ ರಥ ತಾವೇ ಎಳೆದು,
ತನ್ನ ಯಾತ್ರೆಯ ತಾನೇ ಬರೆದು
ಪರಶಿವನ ಆಜ್ಞೆಗೆ ಮಣಿದು,
ಕ್ಷಣವೆಲ್ಲ ಹಾಡಿ,ಕುಣಿದು,ದಣಿದು,

ನಡೆಯಬೇಕು ಜೀವನ ರಥ ಯಾತ್ರೆ
ಹುಟ್ಟು,ನಾಮಕರಣ,ಪಾಣಿಗ್ರಹಣ ಜಾತ್ರೆ,
ಕೊನೆಯಲ್ಲಿ ಖಾಲಿಮಾಡಬೇಕೀ ಭೂ ಪಾತ್ರೆ,
ಹೊರಡಬೇಕು ಕೊನೆಗೊಳಿಸಿ ನಮ್ಮ ಯಾತ್ರೆ.

@ಪ್ರೇಮ್@
[11/24, 7:54 PM] Prem: ಕವನ
*ಮನ*
ತನ್ಮಯತೆ ಏಕೀ ಮನವೇ ನಗುವು ಬೇಡವೇ?
ಎಂದೆಂದೂ ನಗುತಿರು ನೀನು, ಖುಷಿಯು ಬೇಡವೇ?1ಪ1

ಮನವೆ ನೀನುಯ್ಯಾಲೆಯಂತೆ ತೂಗುತಿರುವೆಯಾ?
ಮೇಲೆ ಕೆಳಗೆ ಜೀಕಿ ಜೀಕಿ ಬಾಗುತಿರುವೆಯಾ?
ಅಪ್ಪ-ಅಮ್ಮ ಗೆಳೆಯರು ಎಂದೂ ಮರೆತು ಬಿಡುವೆಯಾ?
ಒತ್ತಡದ ಬದುಕಲಿ ನೀನೂ ತೇಲುತಿರುವೆಯಾ1೧1

ನನ್ನ ನಿನ್ನ ಭಾವ-ಬಂಧ ಅಳಿಸಲಾಗದು,
ಸಂಬಂಧ ಸರಮಾಲೆಯನು ಬಿಡಿಸಲಾಗದು.....
ಯಾರು ಏನೇ ಮಾಡಿದರೂನೂ ನಿನ್ನ ಒಡೆಯಲಾಗದು..
ದೃಢ ಮನದ ಸಂಕಲ್ಪವನೂ ಕಡಿಯಲಾಗದು1೨1

ನಿನಗೆ ನೀನೇ ಯಜಮಾನನು ಎಂದೂ ಮರೆಯಬೇಡವೋ,
ನಿನಗೆ ನೀನೇ ದೊರೆಯು, ಎಂದೂ ಬಾಗ ಬೇಡವೋ,
ನಿನ್ನ ಶಕ್ತಿ ಇತರರಿಗಿರದೂ ಎಂದು ಅರಿತುಕೋ,
ಅವರೆದೆಯ ಗುಂಡಿಗೆ ಮಿಡಿತ ಕೇಳಿ ತಿಳಿದುಕೋ1೩1
@ಪ್ರೇಮ್@
[11/25, 6:13 PM] Prem: ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ'ಎಂಬುದು ಸಂಸ್ಕೃತ ವಾಕ್ಯ. ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರಿಗೆ ಪೂಜ್ಯ ಭಾವನೆ,ಗೌರವ, ಸಂಪ್ರದಾಯ, ಕಟ್ಟಳೆಗಳು ಹೆಚ್ಚಾಗಿರುವುದು ಭಾರತದಲ್ಲೆ. ಈಗೀಗ ನೋವು,ಭಯ,ಆತಂಕಗಳಿರುವುದೂ ಇಲ್ಲಿಯೇ. ಹೆಣ್ಣು ಮಕ್ಕಳು ಹುಟ್ಟುವ ಮೊದಲೇ ಬ್ರೂಣದಲ್ಲೇ ಅವರನ್ನು ಕೊಲ್ಲುವುದು, ಹುಟ್ಟಿದ ಕೂಡಲೇ ಬಾಯಿಗೆ ಭತ್ತ ತುಂಬಿಸಿ,ಕತ್ತು ಹಿಚುಕಿ ಸಾಯಿಸಿ, ಕಸದ ತೊಟ್ಟಿಗೆ ಎಸೆಯುವ ಹೀನ ಕಾರ್ಯ ಮಾಡುವುದೂ ಇಲ್ಲಿಯೇ.
ನಾರಿಯರನ್ನು ಪೂಜಿಸುವ ಭಾರತದಲ್ಲಿ ಹುಟ್ಟಿದ್ದೇನೆಂಬ ಹೆಮ್ಮೆಯಿದ್ದರೆ, ಹೆಣ್ಣು ಬ್ರೂಣಗಳನ್ನು ಸಾಯಿಸುವ ದೇಶದಲ್ಲಿ ಇದ್ದೇನೆ ಎನ್ನುವ ಬೇಸರವಿದೆ. ಎಷ್ಟೇ ಕಷ್ಟ ಬಂದರೂ ,ಭಾರತೀಯಳಾದರೂ,ಹೆಣ್ಣು ಮಗುವೆಂದು ಜರಿಯದೆ, ಬೆದರದೆ, ಬೆಳೆಸಿ, ಓದಿಸಿ,ಬದುಕುವ ದಾರಿ ತೋರಿಸಿದ ಹೆತ್ತಮ್ಮನ ಬಗ್ಗೆ ಗೌರವವಿದೆ.
ಹತ್ತು,ಹಲವಾರು ಜಾತಿ,ಒಳಜಾತಿ,ಪಂಗಡ,ಗುಂಪು,ವಿವಿಧ ಧರ್ಮಗಳನ್ನು ಹೊಂದಿರುವ ಭಾರತದಲ್ಲಿ ತಮ್ಮದೇ ಆದ ರೀತಿ,ರಿವಾಜು ಪ್ರತಿ ಹೆಣ್ಣಿಗಿದೆ.ಕೆಲ ಹೆಣ್ಣು ಮಕ್ಕಳು ತಲೆ ಕೆಳಗೆ ಹಾಕಿ ಸರ್ವಥಾ ಅದನ್ನು ಪಾಲಿಸಿದರೆ,ಮತ್ತೆ ಕೆಲವರು ಧಿಕ್ಕರಿಸಿ,ತಮಗಿಷ್ಟ ಬಂದಂತೆ ಬದುಕುತ್ತಾರೆ. ಇನ್ನು ಕೆಲವರು ದೂರದ ದೇಶಗಳಿಗೆ ವಿದ್ಯೆ,ಗಳಿಕೆಗಂದು ಹಾರಿ ಅಲ್ಲೆ ನೆಲೆಸಿದರೆ ಮತ್ತೆ ಕೆಲವರು ಇನ್ನೂ ಮನೆಯೊಳಗೆ ಪಾತ್ರೆ ತಿಕ್ಕುತ್ತಲೇ ಇದ್ದಾರೆ.
  ಆದರೆ ಪ್ರತಿ ಮಹಿಳೆ ಕೇವಲ ಗೃಹಿಣಿಯಾಗಿ ಉಳಿದಿಲ್ಲ. ಬದಲಾಗಿದ್ದಾಳೆ 'ಹೌಸ್ ಮೇಕರ್' ಆಗಿದ್ದಾಳೆ. ಮುಂದುವರಿದು ಡ್ರಾಯಿಂಗ್, ಪೈಂಟಿಂಗ್, ಟೈಲರಿಂಗ್, ಎಂಬ್ರಾಯಿಡರಿ, ಎಂಬೋಝಿಂಗ್ ಮೊದಲಾದ ಹವ್ಯಾಸಗಳೂ ಬೆಳೆದಿವೆ. ಅದರೊಂದಿಗೆ ಯುವಜನ ಮೇಳ,ಹಾಡುವುದು,ನೃತ್ಯ, ಆಟಗಳೂ ಅವರ ಸಂಗಾತಿಗಳು.
ಈಗಂತೂ ಅವಕಾಶಗಳು ಅನಂತಾನಂತ ಕೈ ಚಾಚಿ ಕರೆಯುತ್ತಿವೆ. ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಹಲವಾರಿವೆ. ಬ್ಯಾಂಕ್,ಕಛೇರಿಗಳಲ್ಲಿನ ಕೆಲಸಗಳೀಗ ಸಲೀಸಾಗಿವೆ.
ಮಹಿಳೆ ಭಾರತದಲ್ಲೂ ದುಡಿಯುತ್ತಿದ್ದಾಳೆ, ವಿದೇಶಕ್ಕೆ ಹಾರುತ್ತಿದ್ದಾಳೆ. ಹೀಗೇ ಮುಂದುವರಿದರೆ ದೇಶಕ್ಕೆ ಮುಕ್ತಿಯಲ್ಲವೇ?
@ಪ್ರೇಮ್@

33. 3 ಕವನಗಳು

1.ಬಾಲ್ಯವೇ ಎಲ್ಲಿ ಹೋದೆ?

ನನ್ನ ಎದೆಯ ಕದವ ತಟ್ಟಿ,
ಪ್ರೀತಿಯನ್ನು ಎಳೆದು ಕಟ್ಟಿ,
ಅಮ್ಮನೊಲವ ಪಟ್ಟಿ ಕಟ್ಟಿ,
ತಮ್ಮ-ತಂಗಿಯೊಡನೆ ಕಟ್ಟಿ-ಮೀಟಿ..

ಗೆಳೆಯರೊಡನೆ ಮದುವೆಯಾಟ,
ಚಿಟ್ಟೆಯೊಡನೆ ಕೋಳಿಯಾಟ,
ಪಕ್ಕದ ಮನೆಗೆ ಇಣುಕು ನೋಟ,
ಆಟದಂಗಳಕ್ಕೆ ತಪ್ಪದ ಓಟ..

ಕ್ಲಾಸಿನಲ್ಲಿ ಓದು-ಬರಹಕ್ಕೆ ಫೈಟು,
ತಂಗಿ-ತಮ್ಮನ ಅಂಗಿ ಟೈಟು,
ಚಾಕಲೇಟು ಬೈಟು-ಬೈಟು,
ಮನೆಯಲೆಲ್ಲ ಕೋಲಿನೇಟು..

ಮುದ್ದು ಬಾಲ್ಯ ಎಲ್ಲಿ ಹೋದೆ?
ಗುದ್ದಿ ಗುದ್ದಿ ಓಡಿ ಹೋದೆ..
ಪೆದ್ದುತನವ ನೀಡಿ ಹೋದೆ..
ನೀನೇಕೆ ಬಲು ದೂರವಾದೆ?
@ಪ್ರೇಮ್@

2.ತಂಗಾಳಿ

ತಾಗಿ ತಣ್ಣಗೆ ತಂಪಾದ ತಂಗಾಳಿ,
ತಣಿಸಿದೆ ತನ್ಮನ ತಂಪಿನಿರುಳಲಿ.....

ತಡರುತ್ತ, ತೊಡರುತ್ತ,ತಡವರಿಸುತ್ತ ಬಂತು,
ತಣ್ಣನೆಯ ತಂಗಾಳಿ ತಳಮಳವ ತಂತು....

ತೋರಣದಿ ತಾತನು ತರಿಸಲಿಲ್ಲ ಅದನು,
ತಾಯತದಿ ತಮ್ಮ ತರಲಾಗಲಿಲ್ಲ ತರುವನು...

ತೋರದು ತನು-ಮನ ತಂಪು ತಂಗಾಳಿ,
ತಡೆಯದು ತವಕವ ತಬ್ಬುವ ತವಕದಲಿ...

ತವರಿಗೆ ಬರುವ ತವರ ಕುಡಿಯಂತೆ,
ತಾಗುತ ತಂದಿತು ತನ್ಮಯತೆ...

ತಂಗಾಳಿ ತಂದಿತು ತಂಪಿನ ಅನುಭವ,
ತಣಿಸಿತು,ಕುಣಿಸಿತು ನನ್ನೀ ಮನವ....
@ಪ್ರೇಮ್@

3.ಕ್ಷಣ

ನಿನ್ನೊಡನೆ ಕಳೆವ ಪ್ರತಿಕ್ಷಣ
ಅದೇನು ಚಂದ!
ಅದೆಂಥ ಅಪರಿಮಿತ ಉತ್ಸಾಹ!
ಸರಸ-ಸಲ್ಲಾಪದ
ಅತಿ ಮಧುರ ಕ್ಷಣಗಳು
ಸ್ವರ್ಗವೇ ಧರೆಗಿಳಿದು ಬಂದಂತೆ...
2. ಕಿರಣ
ನೀ ನನ್ನ ಪ್ರೀತಿ ಕಿರಣ
ಬಿಡಬೇಡ ಪ್ರೇಮದ ಬಾಣ
ಜತೆಗೇ ಸಾಗಲಿ ನಮ್ಮೀ ಬಾಳ ಪಯಣ
ನಿನ್ನೆದೆಯೇ ನನ್ನಿರುವಿನ ತಾಣ..
@ಪ್ರೇಮ್@

72. ಗಝಲ್ -2

1.ಗಝಲ್
ನನ್ನ ಜೀವನದಿ ನೀ ಬಂದು
ಸೇರಿ ನಾವು ಒಂದಾಗಿದ್ದು ನಾದ11

ನಾವಿಬ್ಬರು ಒಂದಾಗಿ ಜೀವನದಿ
ಸುಖ ಜೀವನ ಹಾಡಿದ್ದು ನಾದ11

ನಿನ್ನೊಲವು ನನ್ನದಾಗಿ ನನ್ನ
ಉಸಿರು ನಿನ್ನದಾಗಿ ಬೆರೆತದ್ದು ನಾದ11

ನಾ ನೀನಾಗಿ ನೀ ನಾನಾಗಿ
ನಮ್ಮಿಬ್ಬರ ಅನುರಾಗ ನಾದ11

ನಿನ್ನಿಂದ ಪಡೆದ ಅನುಭವ
ನೀ ನೀಡಿದ ಭಾವ ನನ್ನ ನಾದ11

ನೀ ಮೀಟಿದ ದನಿಯು
ನನ್ನೆದೆಯಲಿ ಅನುರಣಿಸಿದ್ದು ನಾದ11

@ಪ್ರೇಮ್@

2.ಗಝಲ್
ಮೋಡಕ್ಕೆ ತಂಗಾಳಿ ಸೋಕಿ,ತಂಪಾಗಿ ನೀರಾಗಿ ಸುರಿದಾಗ ಅಲ್ಲಿ ಸಂತಸ...
ಹೇಳಲೇನೋ ಹರುಷ,ನೋಡಲೇನೋ ಪುಳಕ..

ಮಳೆ ಸುರಿವ ನಾದ ನಿನಾದದ ವೈಭವ,
ಅದ ಪದಗಳಲಿ ಕಟ್ಟಿ ಕೊಡಲಾರದ ಪುಳಕ...

ಖುಷಿಯಿಂದ ಉಬ್ಬಿಹೋದ ದುಂಬಿಯ ಹಾರಾಟ
ಮನದಣಿಯೆ ನೋಡಿ ಆದ ಆನಂದದಲ್ಲೇನೋ ಪುಳಕ...

ಆ ಕೆಂಪು ಮಣ್ಣಿನ ಕಣಕಣದಿಂದ ಹೊರಬಂದ
ಆ ಸುಗಂಧದಲ್ಲೇನೋ ನವ ಪುಳಕ...

ಪ್ರಾಣಿ-ಪಕ್ಷಿಗಳು ತಮ್ಮ ಬಳಗವ ಕೂಗಿ ಕರೆದು
ಗೂಡಿನೊಳು ಕೂಡಿ ಹಾಕಿ ಮುತ್ತಿಡುವ ಕ್ಷಣ ಮೈ-ಮನ ಪುಳಕ..
@ಪ್ರೇಮ್@

58. 7. ಹನಿಗವನಗಳು

ಹನಿಗವನಗಳು

1.ಪಾಲಿಶ್
ನೋಡುತ್ತಾ ಕುಳಿತಿದ್ದೆ
ಅವಳ ನೇಲ್ ಪಾಲಿಶ್...
ಅರಿತೇ ಇಲ್ಲ
ನನ್ನ ಕೆನ್ನೇಲಿ ಅಚ್ಚಾದ
ಅವಳ 'ಬೂಟ್ ' ಪಾಲಿಶ್!!!
@ಪ್ರೇಮ್@

2.ಸತ್ಕಾರ
ಮಾತಲಿ ಮಮಕಾರ
ಬಿರುಸಿನ ಸತ್ಕಾರ!
ಎದೆಯಲಿ ಬರಬರ
ಮೆಣಸಿನ ಉರಿಕಾರ!!!
@ಪ್ರೇಮ್@

3.ಅರಸ
ಹೇಳಿಕೊಳ್ಳೋಕೆ ನಾ
ನಿನ್ನ ಅರಸ!
ನೀ ಹಿಂಡುತಿರುವೆ
ನನ್ನ ಜೀವ 'ರಸ'!!
@ಪ್ರೇಮ್@

1.ನಾಚಿಕೆ
ನೀ ಹೂವಿನಂತೆ ನಾಚಿ
ನೀರಾದುದೆಲ್ಲ ಸೇರಿ
ದೊಡ್ಡ ಹೊಂಡವಾಯಿತು..
ನೋಡುತ್ತಾ ನೋಡುತ್ತಾ
ನಾನದರೊಳಗೆ ಜಾರಿ ಬಿದ್ದೆ!!
ಇಂದಿಗೂ ಒದ್ದಾಡುತ್ತಿದ್ದೇನೆ!
ಮೇಲೆ ಬರಲಾಗುತ್ತಿಲ್ಲ!!

2. ಜೀವನ
ಗುರುಗಳು ಕಲಿಸಿದರು
'ಜೀವನ ಹೂವು-ಮುಳ್ಳು
ಸಮನಾಗಿ ಸ್ವೀಕರಿಸಿ'!
ಈಗ ಅರ್ಥವಾಗಿದೆ ಏನೆಂದರೆ
ಹೂವು ಬೇಗ ಬಾಡುತ್ತದೆ,
ಮುಳ್ಳು ಬಾಡದು...

3. ಹೂವು
ನಾನಂದುಕೊಂಡೆ ನೀ ಕಳ್ಳಿಯ
ಹೂವಂತೆ ಅಂದವೆಂದು!
ಕೊನೆಗೆ ತಿಳಿಯಿತು ನೀ
ಹೂವಿನ 'ಕಳ್ಳಿ'ಯೆಂದು!!!

೪.ಹೂ
ನೀ ಮೊಗ್ಗಾಗಿ ಬಂದೆ ನನ್ನ ಬಾಳಿಗೆ
ಅರಳಿ ನಿಂದೆ ಜೊತೆಜೊತೆಗೆ,
ಬಾಡಿ ಹೋಗುವೆಯೆಂದು ಭಯಪಟ್ಟೆ ನಾ...
ಆಗ ತಿಳಿಯಿತು ನೀ ಪ್ಲಾಸ್ಟಿಕ್ ಹೂವೆಂದು..!!!
@ಪ್ರೇಮ್@