ಶುಕ್ರವಾರ, ಡಿಸೆಂಬರ್ 29, 2017

15.7 ಹನಿಗಳು/ಶಾಯರಿಗಳು-ಹೃದಯ

ಶಾಯರಿಗಳು/ಹನಿಗವನಗಳು
ಹೃದಯ
1. ಹೃದಯ ಹಾಡುತಿದೆ
    ಮನಕೆ ಸಂತಸವಾದಾಗ,
    ಹೃದಯ ಅಳುತಲಿದೆ
    ಮನವು ಬೇಸರದಿ ಕುದಿವಾಗ..

2. ಅಂದು-"ನೀ ನನ್ನ ಹೃದಯ
ನನ್ನ ಪ್ರೀತಿಯ ಇನಿಯ!"
ಇಂದು-"ನೀ ದೂರ ಹೋಗುವೆಯ?
ನನಗಿಹನು ಬೇರೆ ಗೆಳೆಯ!!"

3. ಹೂವಿನ ಹೃದಯ
ಬೇಕೆಂದಿತು ದುಂಬಿ!
ಸ್ವಾಗತಿಸಿತು ಹೂವು
ಮೈಮನದುಂಬಿ!!
ಕಾಯಾಯಿತು, ಹಣ್ಣಾಯಿತು!
ಜೀವನ ಫಲಿಸಿತು!

4.ಮನದ ಮಾತಿಗೆ
ತಲೆದೂಗಿತು ಹೃದಯ!
ಮನದ ಭಾಷೆಗೆ
ದನಿಯಾಯಿತು ಹೃದಯ!!

5. ಮಾತು ಮರೆತು
ಮೌನವಾದೆಯಾ ಹೃದಯ?
ಎನ್ನೆದೆ ಗೂಡಲಿ ಬಚ್ಚಿಟ್ಟ
ಭಾವನೆಗಳ ಬಿಚ್ಚಿ
ಸ್ವರ ಸಹಿತ ಹಾಡುವೆಯಾ?

6. ಕೋಗಿಲೆ ನೀ ಹಾಡು
ಬಿಚ್ಚಿಟ್ಟು ನಿನ್ನೆದೆಯಾ?
ನಾ ಆಲಿಸಿ ತಲೆದೂಗುವೆ,
ಮೆಚ್ಚಿ ನನ್ನ ಹೃದಯಾ!

7. ಬಲು ಕಷ್ಟ ಕಾಪಾಡಲು
ಈ ನನ್ನ ಹೃದಯ!
ಮೊದಲೇ ಅದ ಕದ್ದಿಹನು
ಈ ನನ್ನ ಇನಿಯ

@ಪ್ರೇಮ್@

14. ನಾನೇ ಬೆಳಕು (ಕವನ)

*ನಾನೇ ಬೆಳಕು*
ನಾನಲ್ಲವೇ ಕತ್ತಲೆ ಓಡಿಸುವ ಸರದಾರ?
ನಾನಲ್ಲವೇ ಕಣ್ಣ ಮಸೂರದ ಸಾಹುಕಾರ?

ನಾನಿಲ್ಲದಿರೆ ಏನ ಸನೋಡ ಬಲ್ಲೆ ನೀ?
ನನ್ನ ಸಹಾಯದಂದಲ್ಲವೇ ಜಗವ ತಿರುಗುವೆ ನೀ?

ನನ್ನ ನಯನಗಳು ಸೂರ್ಯ ಚಂದ್ರ,
ಚುಕ್ಕಿ,ಟಾರ್ಚ್,ಮೊಂಬತ್ತಿ,ಲಾಂದ್ರ.

ಮಿಂಚುಹುಳವೂ ಕೊಡಬಲ್ಲುದು ಬೆಳಕು,
ಮಾನವ ನಿನ್ನೊಳಿಹುದು ಕೇವಲ ತಳುಕು.

ಹುಲು ಮಾನವನೆ ಕತ್ತಲಲಿ ಏನ ಮಾಡಬಲ್ಲೆ?
ಬೆಳಕಿರೆ ಮಾತ್ರ ನಿನ್ನ ಶಕ್ತಿ ತೋರಬಲ್ಲೆ.

ವಿದ್ಯುತ್ ಇರೆ ತಾನೇ ಎಲ್ಲಾ ಕೆಲಸ?
ಕತ್ತಲಲ್ಲಿ ಸಾಧ್ಯವಾಗದು ತೆಗೆಯಲೂ ಕಸ!!

ನಾನೇ ಜಗದ ಕಣ್ಣು,ನಾನೇ ನಿಮ್ಮ ಹೊನ್ನು,
ಏನಿದ್ದರೇನು? ಕಾಣಲಾರಿರಿ ನಿಮ್ಮ ಬೆನ್ನು!!

ಜೀವನದ ಹಾದಿಯಲಿ ಕಿತ್ತು ಹಾಕಿ ಬಿಡಿ ಅಂಧಕಾರವನು,
ಹರಿಸಿ ಬೆಳಕ, ಬೆಳೆಯಿರಿ,ಬೆಳೆಸಿ ಗುಣಗಳನು....
@ಪ್ರೇಮ್@

ಗುರುವಾರ, ಡಿಸೆಂಬರ್ 28, 2017

23. ಕವನ -ಸಾಗರ

ಕವನ
ಸಾಗರ

ಜಗತ್ತಿನ ನೀರೆಲ್ಲವನು ತನ್ನಲಿರಿಸಿಕೊಂಡಿರುವೆ,
ಏಳು ಬೇರೆ ಬೇರೆ ಹೆಸರ ಕಟ್ಟಿಕೊಂಡಿರುವೆ.
ಗಗನದ ರಂಗಿನಾಟವ ಪ್ರತಿಬಿಂಬಿಸುವೆ,
ಖಂಡಗಳ ಒಂದೊಂದಾಗಿ ಜೋಡಿಸುವೆ//೧//

ಜಲ ಸಾರಿಗೆಗೆ ನಾನೇ ಮೂಲ,
ಜಲ ಸಂಪತ್ತಿಗೂ ನಾನೇ ಜಾಲ,
ಮಲಿನಗೊಳಿಸಿ ಮುಗಿಸದಿರಿ ನನ್ನ ಕಾಲ,
ನೆನಪಿಡಿ, ಜಲವಿಲ್ಲದೆ ಬದುಕೇ ಇಲ್ಲ! //೨//

ಹಲ ಜೀವಿಗಳಿಗೆ ನಾನಲ್ಲವೆ ಆಸರೆ?
ಕೆಲ ಮಾನವರೆ ಬತ್ತಿಸದಿರಿ ಕೊಳ-ಕೆರೆ!
ನನ್ನಿಂದಲೆ ಭೂ ತಾಯಿಗೆ ನೀಲಿ ಸೀರೆ,
ಕೊಳ್ಳಲಾರಿರಿ ನೀವ್ ಸಾಗರವ ಕಾಸಿರೆ?//೩//

ರಕ್ಷಿಸಿರಿ ನೆಲ,ಬೆಳೆ, ಮರ ಜಲವ,
ಸುರಿಯದಿರಿ ತರತರ ರಾಸಾಯನಿಕವ!
ತುರುಕದಿರಿ ನನ್ನೊಡಲಿಗೆ ನಿಮ್ಮಯ ಕಸವ,
ಬದುಕಿರಿ ಹಾಯಾಗಿ ಶುಚಿಯಾಗಿರಿಸಿ ಪರಿಸರವ.//೪//
@ಪ್ರೇಮ್//

13. ಕವನ -1-ನನ್ನಮ್ಮ

ನನ್ನಮ್ಮ

ಅಮ್ಮನ ಹೊಟ್ಟೆಯೊಳಗಡಿಯಿಡುವ ಮುನ್ನವೇ
ಹಣೆಬರಹ ಬರೆದ ಪ್ರಕೃತಿ ನನ್ನಮ್ಮ//
ನವ ಮಾಸ ಹೊತ್ತು,ಹೆತ್ತು ಸಾಕಿ,
ಸಲಹಿ,ಬೆಳೆಸಿ ಬದುಕಲು ಕಲಿಸಿದ ನನ್ನಮ್ಮ//
ಮಳೆ,ಬೆಳೆ,ನೀರು,ಶುದ್ಧ ಗಾಳಿಯ ಒದಗಿಸಿದ
ಪರಿಸರ ಹಸಿರು ಮಾತೆ ನನ್ನಮ್ಮ//
ಹೊತ್ತು,ನೋಡಿ,ಸಲಹಿ,ಬೆಳೆಸಿ,ಬೈದು
ಹೊಟ್ಟೆ ತುಂಬಾ ತಿನ್ನಿಸಿ ಮುದ್ದಿಸಿದ ಅಜ್ಜಿಯೂ ನನ್ನಮ್ಮ//
ಹೊತ್ತು ಹೊತ್ತಿಗೆ ಸರಿಯಾಗಿ ನಮಗಾಗಿ ಬೇಯಿಸಿ,ಬಡಿಸಿ,
ಆರೋಗ್ಯ ಕೆಟ್ಟಾಗ ಹಪಹಪಿಸಿದ ಹಾಸ್ಟೆಲ್ ಆಂಟಿಯೂ ನನ್ನಮ್ಮ//
ಒಬ್ಬಳೇ ಅಡಿಗೆ ಗೊತ್ತಿಲ್ಲದೆ ಏನನ್ನೋ ಹೇಗೋ
ಬೇಯಿಸಿ ತಿನ್ನುವಾಗ ಆಗಾಗ ಬಂದು ಸಲಹೆ ಕೊಟ್ಟು ಕಲಿಸಿದ
ಪಕ್ಕದ ಮನೆಯಾಂಟಿ ನನ್ನಮ್ಮ//
ಎಲ್ಲೂ ದಿಕ್ಕು ಕಾಣದೆ,ಪರದೇಶಿಯಾಗಿ
ಯಾವುದೋ ಊರಲ್ಲಿ ಕೆಲಸಕ್ಕೆ ನಿಂತಾಗ
ಅನ್ನಪೂರ್ಣೇಶ್ವರಿಯಾದ ಪಿ.ಜಿ.ಆಂಟಿ ನನ್ನಮ್ಮ//
ಮಗು ಚಿಕ್ಕದಿರುವಾಗ, ಸಾಕಲು ಗೊತ್ತಿರದೆ ಪರದಾಡುತಲಿರುವಾಗ
ನನ್ನ ಮಗುವ ತನ್ನ ಮಗುವಂತೆ ಸಾಕಿದ ಯಾರದೋ ಅಜ್ಜಿ ನನ್ನಮ್ಮ//
ಈ ಲೋಕದ ಮಕ್ಕಳನೆಲ್ಲ ಪೊರೆವ
ಪ್ರೀತಿ ಕೊಟ್ಟು ಸಲಹುವ ದುರ್ಗಾ ಮಾತೆ ನನ್ನಮ್ಮ//
ಊಟಕ್ಕೆ,ಬಟ್ಟೆಗೆ ಹಣವ ಒದಗಿಸಿ ಕೊಟ್ಟು
ನನ್ನ ಕೆಲಸಕ್ಕೆ ಬದಲಾಗಿ ನನ್ನಲ್ಲಿಗೆ ಬರುವ ಲಕ್ಷ್ಮಿ
ನನ್ನಮ್ಮ//
ನನ್ನಲ್ಲಿರುವ ವಿದ್ಯೆಯದು ಹಗಲಿರುಳು ಜತೆಗಿಹುದು
ನಾ ಹೋದೆಡೆಯೆಲ್ಲ ಸಹಕರಿಸಿ ಸಾಕುವ ವಿದ್ಯಾ ಶಾರದೆ ನನ್ನಮ್ಮ//
ನನಗೆ ಉಸಿರಿತ್ತು ಕನ್ನಡ ಕಲಿಸಿ,ಕರುನಾಡಲಿ ಬೆಳೆಸುತಲಿರುವ
ಕನ್ನಡ ಮಾತೆ ಭುವನೇಶ್ವರಿ ನನ್ನಮ್ಮ//
ಮಾತೆಯ ಮಾತೆ, ಪ್ರಪಂಚದ ಯಾವ ಮೂಲೆಗೆ ತಿರುತಿರುಗಿದರೂ
ನಾನು ಭಾರತೀಯಳೆಂಬ ಹೆಮ್ಮೆಯ ಕೊಟ್ಟ ಭಾರತ ಮಾತೆ ನನ್ನಮ್ಮ//
@ಪ್ರೇಮ್@

12.My poems in English -2

Prem: Influenced by "off to outer space tomorrow morning " my poem...

1.That I am a student,going to the school

Bag is on my back, filled with books
Surrounding my feet by neat shoes,
My body is covered by coloured uniforms,
That I am a student, going to the school. //

Note books seated in my bag which I have completed,
Read text books, but I won't feel load,
Actively participated project report completed..
That I am a student going to the school. //

My books are my wealth and treasure,
Our teachers give us much pleasure,
Learning brings us more and more power,
That I am a student, going to the school! //

Activities make us all brightest,
Sports and games bring body of healthiest,
Yoga,  kerathe, bicycle lift us to be powerful,
That I am a student, going to the school... //
@Prem @

2. *School*

Students here and teachers there,
Pupils-teachers everywhere!
Every morning rush in busses,
Each evening run to houses! //

Shoes, ties, uniforms and books,
Papers, pens, pencils and scales!
Project reports, dictations and text books,
Exams, notes, homework and tests. //

Groups, prayer, Assembly and songs,
Yoga,  meditation, speech and debates,
Singing, dancing,  participating too,
Competitions held at other schools to go! //

Parents, Sdmc, teachers meet,
At noon Mid-day meals we eat!
Milk, books, uniforms, bicycles free,
Near our school we should plant tree! //

Come children,  you become students,
At school with your mates, picnic and trips,
Learn new things with easy practicals!
Here is the way to learn how the lives...//
@Prem @

11. 5 ನೋವಿನ ಶಾಯರಿಗಳು

ಶಾಯರಿಗಳು
1. ಮನ

ನನ್ನ ಮನದ ನೋವು ನಿನಗೆ
ಹೇಗೆ ಅರ್ಥವಾಗಬೇಕು ದೊರೆ?
ನೀ ಆಲಿಸಿದ್ದರಲ್ಲವೇ ನನ್ನ ಕರೆ?

2. ಬದುಕು
ಬದುಕ ನೋವ ಹಂಚಿಕೊಳ್ಳಲು
ಆರಿಸಿದೆ ಹಲವರಲ್ಲಿ ನಿನ್ನ!
ನನಗೇನು ಗೊತ್ತಿತ್ತು ಹಾಳು ಮನ ನಿನ್ನ!

3. ನೀ
ಅಂದು ನೀನಂದೆ ನೋವಲ್ಲೂ ನಲಿವಲ್ಲೂ
ನೀನೇ ನನ್ನ ಜೀವ!
ಇಂದು ನೀನಾದೆ ನನ್ನ ಪ್ರಾಣ ಹಿಂಡುವ ಜೀವಿ!

4. ನೋವು
ಕೊಡಬೇಡ ಮನಸಿಗೆ ಈ ತರ ನೋವು,
ಒಂದಲ್ಲ ಒಂದಿನ ನಾ ಕಳೆದ್ಹೋಗುವ ಮಾವು!
ಜೀವನದ ಮಾವು-ಬೇವಿನ ಬೆಲೆ
ಕಳೆದುಕೊಂಡ ಮೇಲೆ ನೋಡು ನೋವು.

5. ಬರೆವೆ
ಬರೆವೆ ನನ್ನ ನೋವ ಕವನ
ಓದಲು ಸಿಗದಿದ್ದರೂ ಜನ
ಸಿಗಬಹುದೊಂದು ಒಳ್ಳೆ ಮನ
ಇಂದಲ್ಲದಿದ್ದರೂ ಮುಂದೊಂದು ದಿನ...

@ಪ್ರೇಮ್@

ಮಂಗಳವಾರ, ಡಿಸೆಂಬರ್ 26, 2017

10. ಹಾಸ್ಯ ಹನಿ-ಪ್ರಿಯತಮೆಯ ಸಂಕಷ್ಟ

ಹಾಸ್ಯ ಹನಿಗವನ

*1. ಪ್ರಿಯತಮೆಯ ಕಷ್ಟ*

ನನ್ನಿನಿಯನ ನೋಟ
ಮೂಲಂಗಿಯ ತೋಟ!
ಕುಳಿತಾಗ ತಡೆಯಲಾಗುತ್ತಿಲ್ಲ ಕಾಟ,
ತರಲು ಓಡುವೆ ಬೇಲಿಯ ಗೂಟ!

@ಪ್ರೇಮ್@

73. 6. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-8

ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-6
ದಾನಮ್ಮ ಎಂಬ ಪುಟ್ಟ ಹುಡುಗಿ ಇದೀಗ ಎಲ್ಲಾ ಜಿಲ್ಲೆಗಳ ಬಂದ್ಗೆ ಕಾರಣ. ಛೆ! ಪಾಪ!ಅವಳ ಜೀವದ ಬಗ್ಗೆ ನೆನೆಸಿಕೊಂಡರೆ ಬೇಸರವಾಗುತ್ತದೆ.. ಒಂದೆರಡು ತೊಟ್ಟು ಕಣ್ಣಿಂದ ಹಾಗೇ ಜಾರಿ ಬೀಳುತ್ತವೆ. ನಿರ್ಭಯಾ ವಿಚಾರದಲ್ಲೂ ಹಾಗೇ ಆಗಿತ್ತು.ಮತ್ತದು ಮರುಕಳಿಸಿದೆ. ಇದಕ್ಕೆ ಮುಖ್ಯ ಕಾರಣ ಅಕ್ಷರಸ್ಥ ಮುಠ್ಠಾಳ ಜನರು! ಅನಕ್ಷರಸ್ಥ ಅವಿದ್ಯಾವಂತ ಜನರಿಗೂ ಹೆಣ್ಣು ಮಕ್ಕಳಿಗೆ ಭದ್ರತೆ ಕೊಡಲು, ಗೌರವಿಸಲು ಗೊತ್ತು.
  ಆದರೆ ಇಂದಿನ ಯುವ ಅಕ್ಷರಸ್ಥರಾದರೂ ಅವಿದ್ಯಾವಂತರು. ಬದುಕಿನ ವಿದ್ಯೆ ಅವರಲ್ಲಿ ಇಲ್ಲ! ನಾಚಿಕೆಯಾಗಬೇಕು ಗಂಡು ಜನ್ಮಕ್ಕೆ! ಬೇಡದ,ಕೆಟ್ಟ ವಿಡಿಯೋಗಳನ್ನೇ ನೋಡಿ ಬೆಳೆಯುತ್ತಿರುವ ಇಂದಿನ ಗಂಡು ಮಕ್ಕಳು ಅನೇಕರಿಗೆ ತಾಯಿ,ತಂಗಿ,ಅಕ್ಕ ಹೆಂಡತಿ ಇವರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ, ಇನ್ನು ಅವರು ಇತರ ಹೆಣ್ಣು ಮಕ್ಕಳನ್ನು ಯಾವ ರೀತಿ ನೋಡಿಯಾರು ಎಂಬುದಕ್ಕೆ ಜೀವಂತ ಉದಾಹರಣೆ ಇದು.
  ಆದರೆ ನಾನು ಕಂಡು ಕೊಂಡಂತೆ ತನ್ನ ಪಾಡಿಗೆ ತಾನಿದ್ದರೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳಿಗೆ ಇಲ್ಲಿನ ಜನರಿಂದ ಯೂವುದೇ ಕಿರಿಕಿರಿ ಆಗಲಿಕ್ಕಿಲ್ಲ! ಕಾರಣ ಇಲ್ಲಿ ಹೆಚ್ಚಿನವರಿಗೆ ತಾವೇ ದುಡಿದು ತಮ್ಮ ಜೀವನ ರೂಪಿಸಬೇಕಾದ ಅಗತ್ಯತೆ ಇದೆ. ತಮ್ಮ ಗುರಿ ಸಾಧಿಸಬೇಕಾದ ಕೆಲಸದೊಂದಿಗೆ ಅಕ್ಕ,ತಂಗಿ,ತಮ್ಮನ ಜವಾಬ್ದಾರಿ ಹೊರಬೇಕಿದೆ! ಇತರೆಡೆ ಜವಾಬ್ದಾರಿ ತಂದೆ ಹೊರುತ್ತಾರೆ..
ಅಲ್ಲದೆ ಬದಲಾದ ಕಾಲ, ಬದುಕು, ಜೀವನ ಶೈಲಿ, ತಂತ್ರಜ್ಞಾನ, ಬೆರಳತುದಿಯಲ್ಲಿ ಜಗತ್ತು ಅದರೊಂದಿಗೆ ನಾವು ಗಂಡು ಮಕ್ಕಳನ್ನು ಬೆಳೆಸುತ್ತಿರುವ ರೀತಿ ನೋಡಿದರೆ ಹೆಣ್ಣು ಮಗುವೊಂದು ಹುಟ್ಟಿದಾಗಲೇ ಭಯವಾಗುತ್ತದೆ!
     ಬದಲಾಗುತ್ತಿರುವ ಸಮಾಜಕ್ಕೆ ಮಹಿಳೆಯರು ತಮ್ಮ ಹೆಣ್ಣು ಮಕ್ಕಳನ್ನು ಹುಡುಗರಂತೆ,ಧೈರ್ಯ ಕೊಟ್ಟು ಬೆಳೆಸಬೇಕು. ಪಾಪ,ನಾಜೂಕು ಪದಗಳನ್ನೆಲ್ಲ ಕಿತ್ತುಹಾಕಿ ಹುಡುಗರ ಸಮಾನಕ್ಕೆ,ಹುಡುಗರಂತೆ ಬಳೆಸಿದರೆ ಮಾತ್ರ ಮುಂದೆ ಬದುಕಲು ಸಾಧ್ಯ. ಹೆಣ್ಣು ಹೆತ್ತವರೇ ಏಳಿ, ಎದ್ದೇಳಿ...
@ಪ್ರೇಮ್@

ಸೋಮವಾರ, ಡಿಸೆಂಬರ್ 25, 2017

9. 5 ಹನಿಗಳು-ಮಹಿಳೆ

ಹನಿಗವನಗಳು
1.ಮಹಿಳೆ
ಹುಟ್ಟಿದ ಮನೆ ಬಿಟ್ಟುಬಂದು,
ಗಂಡನ ಮನೆ ತನ್ನದೆಂದು
ದುಡಿವ ಪರಮ ಸಖಿ,
ಆದರಲ್ಲ ಅಲ್ಲಿ ಸುಖಿ!

2. ಅಮ್ಮ
ತನ್ನ ಕಷ್ಟ ಮರೆತು
ತನ್ನ ಬದುಕು ಮರೆತು,
ಮಕ್ಕಳ ಬದುಕ ಕಟ್ಟುವ ಮಾತೆ
ಬದುಕ ಕೊಡುವ ದೇವಮಾತೆ.

3. ತಂತ್ರಜ್ಞಾನ

ಬೆರಳ ತುದಿಯಲ್ಲೆ ವಿಶ್ವ,
ಗೊತ್ತಿಲ್ಲ ಪಕ್ಕದ ಮನೆಯವ!
ರಾತ್ರಿ ಹಗಲು ಕೈಲಿಮೊಬೈಲ್!
ಎಲ್ಲ ಫ್ರೀ ಡಾಟಾ,ಕಾಲ್,
ಮನೆಗೆ, ನೆಂಟರಿಗಿಲ್ಲ ಒಂದೂ ಕಾಲ್!

4. ಹಣ
ಬದುಕಲು ಬೇಕು ನೋಟು,
ಓಟಿಗೂ ಬೇಕು ನೋಟು!
ಧರಿಸಬಹುದು ಒಳ್ಳೆ ಕೋಟು,
ಅದರ ಜೊತೆ ಬೂಟು!
ಬಂದರೆ ಎಲ್ಲರ ಓಟು!!

5. ಬಾ
ನನ್ನ ಹೃದಯ ರಾಜ!
ತಾರೊ ನನಗೆ ರೋಜ!
ಹಾಕಿ ಬಾ ರಜಾ,
ಬದುಕಲಿರಲಿ ಸ್ವಲ್ಪ ಮಜಾ!

@ಪ್ರೇಮ್@

ಬುಧವಾರ, ಡಿಸೆಂಬರ್ 20, 2017

8. ಕಿರುಗತೆ -ಪ್ರಿಯತಮೆಯ ಮನದಾಳ

ಪ್ರಿಯತಮೆಯ ಮನದಾಳ(ಕಿರುಗತೆ)

ಅದೆಷ್ಟು ಹಂಬಲಿಸುತ್ತಿರುವೆ ನಿನ್ನ ನುಡಿಗಾಗಿ, ನಿನ್ನ ಕರೆಗಾಗಿ? ತಡೆಯಲಾಗದೆ ನಾನೇ ಕರೆ ಮಾಡಿದರೂ ನೀನು ಸದಾ ಬ್ಯುಸಿ... ಸಮಯವೇ ಇಲ್ಲವೇ ನಿನ್ನ ಬಳಿ ನನಗಾಗಿ?
  ಮರುಕಳಿಸುತ್ತಾ ಕುಳಿತಿರುವೆ ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳ...ವಾವ್!ಅದೆಷ್ಟು ರಮ್ಯ ನನ್ನ ಬಾಳಿಗೆ!ನಿನ್ನ ನೋಡುತ್ತಾ ಕಣ್ಣಲ್ಲೇ ಕವನ ಕಟ್ಟೋದು ತುಂಬಾ ಇಷ್ಟ ನನಗೆ.. ನಿನ್ನ ಕಣ್ಣ ಬಿಂಬದಲ್ಲಿ ನನ್ನ ನಾನು ನೋಡಲು ಕಾತರಗೊಂಡಿರುವೆ. ಆದರೇನು? ನಿನ್ನಲ್ಲಿಲ್ಲವಲ್ಲ ನನಗಾಗಿ ಸಮಯ? ನನ್ನ ಎದೆ ಕದದ ಬಾಗಿಲನು ಒಡೆದು ನನ್ನ ಹೃದಯದರಮನೆ ಸೇರಿ ಅಲ್ಲೆ ಚಿಲಕ ಹಾಕಿ ಒಳ ಕುಳಿತವ ನೀನು... ನನ್ನ ಎದೆಗುಡಿಯಲಿ ನಿತ್ಯ ಪೂಜೆ ನಿನಗೆ..ನಿನಗೆ ತಿಳಿದಿದೆ ನನ್ನ ಈ ಅಗಾಧ ಪ್ರೀತಿಯ ಆಳ!
   ಆದರೂ ನನ್ನಲೊಂದು ಯಕ್ಷ ಪ್ರಶ್ನೆ ಕಾಡುತ್ತಿದೆ,ನನ್ನಂತೆ ನೀನೂ ಭಾವುಕ ಅಂದುಕೊಂಡಿರುವೆ.ನನ್ನ ಮನದಾಳದ ಅನಿಸಿಕೆ ಸರಿ ಎಂದಾದರೆ ನಿನಗೂ ನನ್ನ ನೆನಪು ಆಗಾಗ ಸುಳಿಯಬೇಕಿತ್ತಲ್ಲವೇ? ನಿನ್ನ ಬದುಕಿಗೂ ನನ್ನ ಅಗತ್ಯ ಕಾಣಬೇಕಲ್ಲವೇ? ಒಂದೇ ಕೈಯಲ್ಲಿ ಚಪ್ಪಾಳೆ ಬರದು..ನೀನೂ ಕೈ ಸೇರಿಸಿದರೆ ಮಾತ್ರ ನಮ್ಮ ಬದುಕು ಚಪ್ಪಾಳೆಯ ಮಳೆಗರೆವುದು..
ಇನಿಯಾ ನನ್ನ ಭಾವನೆಗಳಿಗೆ ಬೆಲೆಕೊಡುವೆ ತಾನೇ? ಪ್ರೀತಿ ಎಂದರೆ ವಿಶ್ವಾಸ,ನಂಬಿಕೆ ನನಗೆ,ನಿನಗೆ ಎಲ್ಲರಿಗೂ. ನನ್ನ ನಂಬಿಕೆಯ ಗಿಡಕ್ಕೆ ನೀರೆರೆದು ನನ್ನ ಬದುಕನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಿನ್ನದು. ನೀನೇ ಹೀಗೆ ಸುಮ್ಮನಾದರೆ ಹೇಗೆ?
   ಮೌನಂ ಸಮ್ಮತಿ ಲಕ್ಷಣಂ ಎನ್ನಲೇ ಆಥವಾ ಮೌನಂ ದೂರ್ತ ಲಕ್ಷಣಂ ಎಂದು ಜರಿಯಲೇ? ನಿನಗೆ ನಾನು ಜರಿಯುವುದೇ...ಛೆ..ನನ್ನ ಹೃದಯ ಸಾಮ್ರಾಜನಲ್ಲವೇ ನೀ.. ಪ್ರಪಂಚದ ಸಾವಿರಾರು ಹುಡುಗರಲ್ಲಿ ನನಗಾಗಿ ಆರಿಸಿಕೊಂಡದ್ದು ನಿನ್ನೊಬ್ಬನನ್ನೇ ಅಲ್ಲವೇ?
     ನೀ ನನ್ನವನು,ನನ್ನ ಹೃದಯ ಕಮಲದಲಿ ರಾರಾಜಿಸುವ ರಾಜ! ರಾಜನಿಗಾರೂ ಸಾಟಿಯಿಲ್ಲ ಅಲ್ಲವೇ? ರಾಜ ತನ್ನ ಜವಾಬ್ದಾರಿಯನ್ನು ಮರೆಯ ಬಾರದು ತಾನೇ? ರಾಣಿ ನನಗಾಗೇ ಕಾಯುತಿರುವಳು, ನನ್ನ ಕರೆಗೆ ಓಗೊಟ್ಟು ಬರುವಳು ಎಂಬ ನಂಬಿಕೆ ನಿನ್ನಲ್ಲಿರುವಂತೆ ನನ್ನೊಳಗೂ ಇದೆಯಲ್ಲವೇ?
    ನಿನ್ನುಸಿರು ನನಗಾಗಿ ನನ್ನುಸಿರು ನಿನಗಾಗಿ ಎಂದಾದ ಮೇಲೆ ನನ್ನ ಮರೆವುದು ಸರಿಯೇ? ರಾಜನಿಗೆ ಸಾವಿರ ಕೆಲಸಗಳಿರಬಹುದು ಅದರೊಳಗೆ ರಾಣಿಯನು ಕಡೆಗಣಿಸ ಬಾರದಲ್ಲವೆ ಪ್ರಭು! ನಿನ್ನ ಕಾರ್ಯ ವೈಖರಿ, ಆಲೋಚನೆಗಳ ಮಹಾಪೂರ ಅದ್ಭುತ! ನಿನಗೆ ನೀನೇ ಸಾಟಿ ನನ್ನ ರಾಜ! ಹೆಮ್ಮೆಯಿದೆ ನನಗೆ ನಿನ್ನ ಬಗ್ಗೆ ಆದರೆ ತುಂಬಾ ಸಿಟ್ಟಿದೆ ನನಗೆ ನೀ ತೋರದ ಕಾಳಜಿಯ ಬಗ್ಗೆ!
  ನಿನಗಿರಬಹುದು ನೂರಾರು ನೋವುಗಳು..ಆದರೆ ಹಂಚಿಕೊಳ್ಳಲು ನಾನಿಲ್ಲವೇ? ಅದನ್ನೆಲ್ಲ ನಿನ್ನಲ್ಲೇ ಏಕೆ ಬಚ್ಚಿಟ್ಟುಕೊಂಡು ಕೊರಗುತ್ತಿರುವೆ ಇನಿಯಾ?
  ಬದುಕುವ ಪ್ರತಿ ಜೀವಿಗೂ ದುಃಖವಿದೆಯಲ್ಲವೇ? ನಮ್ಮನ್ನು ನಾವು ಸಂತೈಸಿಕೊಂಡು ಇತತರಿಗೆ ಸಂತಸ ಕೊಡುವುದೇ ಜೀವನದ ಗುಟ್ಟಲ್ಲವೇ? ನಮ್ಮದೇನೇ ಕಷ್ಟವಿದ್ದರೂ ನಮ್ಮ ಕರ್ತವ್ಯವನ್ನು ಪೂರೈಸಿ ಹಿಂದಿರುಗಲೆಂದೇ ಬಂದ ಶಪಿತ ಗಂಧರ್ವರಲ್ಲವೇ ನಾವು? ನಮ್ಮ ಬುದ್ಧಿ ಮಟ್ಟ, ನಮ್ಮ ಕಾರ್ಯ ವೈಖರಿ,ನಮ್ಮ ಮಟ್ಟ ನಮಗೆ ತಿಳಿದಿದೆ.ಹಾಗಿರುವಾಗ ನಮ್ಮ ಯಾವುದೇ ತರಹದ ಭಾವನೆಗಳನ್ನು ನಾವೇ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕಲ್ಲವೇ? ಹೇಳು ಗೆಳೆಯಾ!"
ಗೆಳೆಯನದೊಂದೆ ಉತ್ತರ "ಸಾರಿ,ತಪ್ಪಾಯಿತು". ಹೆಣ್ಣು ಕ್ಷಮಯಾ ಧರಿತ್ರಿ!
@ಪ್ರೇಮ್@

37. ಗಝಲ್-1

ಗಝಲ್-1

ನಮ್ಮನು ಸಲಹುವ ಗಿಡಮರ
ಬಳ್ಳಿಯ ಪೂಜಿಸಿ ಗೌರವಿಸಿ..
ನಮ್ಮನು ಹೆತ್ತು ಹೊತ್ತು ಸಾಕಿ
ಸಲಹುವ ಮಾತಾಪಿತರನು ಗೌರವಿಸಿ..

ಕಲ್ಲನು,ಗುಡಿಯನು,ಮೂರ್ತಿಗಳನು
ದಿನಾಲು ಸುತ್ತುವ ಬದಲು
ಸ್ವಚ್ಛ ಪರಿಸರವ ಪೂಜಿಸಿ,
ಪ್ರಾಣಿ ಪಕ್ಷಿಗಳ ಮಾತನು ಗೌರವಿಸಿ..

ಬಣ್ಣದ ಬದುಕ, ಚಂದದ
ಮನೆಯ ಆಯುವ ಬದಲು
ನಿಸರ್ಗದ ಕಡೆಗೆ ಗಮನಿಸಿ
ಒಮ್ಮೆಅದನೆ ಗೌರವಿಸಿ..

ಪ್ಲಾಸ್ಟಿಕ್ ಬಳಸದೆ, ಮಾರ್ಗಕೆ ಎಸೆಯದೆ
ನಾಡನು ಸುಂದರವಾಗಿರಿಸಿ,
ರಸ್ತೆಯ ಬದಿಯಲಿ ಗಿಡಗಳ ನೆಟ್ಟು
ನಾಡಿನ ಅಂದವ ಗೌರವಿಸಿ..

@ಪ್ರೇಮ್@

7. Short Poem -in English-1

1. Sea Gull

Sea gulls are white
It won't comes at night..
It eats the fishes..
Comes out from bushes...
@Prem@

2. Fish

I like fish
As a dish
It lives in the sea
I feel free
After eating fish
I calmly rush...
@ Prem@

ಮಂಗಳವಾರ, ಡಿಸೆಂಬರ್ 19, 2017

6. 5 ಹನಿಗವನಗಳು- ಬದುಕು

ರಾಗಿಯ ಕಾಳಂದದಿ ಜೀವನ..
ನೋಡಲು ಕಪ್ಪು..
ಯಾರಿಗೂ ಬೇಡ..
ಸರಿಯಾಗಿ ಪುಡಿಮಾಡಿ
ಹದವಾಗಿ ಕುದಿಸಿ ಮುದ್ದೆ ಮಾಡಿ
ಸಾಂಬಾರಿನೊಂದಿಗೆ ನುಂಗಿದರೆ
ಆಗ ತಿಳಿವುದದರ ಮಹತ್ವ..
ತಾಳ್ಮೆ ಕಡಿಮೆ ನಮ್ಮ ಹತ್ರ..
@ಪ್ರೇಮ್@

ಮನವೇ ಹೋಗು ನೀ
ಭಾರವಾಗಿದೆ ಜೀವನ
ನೇಸರನಂತೆ ಸುಡುತಿದೆ ಮನ
ಬೇಡವಾಗಿದೆ ತನುಮನ...
@ಪ್ರೇಮ್@

ಬದುಕೇ ಹಾಗೆ
ತಂತಿ ಮೇಲಿನ ನಡಿಗೆ
ತಪ್ಪಿದರೆ ಅಡಿಗೆ,
ಒಪ್ಪಿದರೆ ತಂತಿಗೆ..
@ಪ್ರೇಮ್@

: ಬದುಕ ಹೂ ಮಾಲೆಯಲಿ
ಸರಿಯಾದ ಪೋಷಣೆ ಅಗತ್ಯ..
ನೀರು ಹನಿಸಿ ಬಟ್ಟೇಲಿ ಕಟ್ಟಿ
ಕಾಪಾಡಬೇಕು ನಿತ್ಯ..
ಇಲ್ಲದಿರೆ ಬಾಡಿ ಹೋಗೋದು ಸತ್ಯ..
@ಪ್ರೇಮ್@

ಬದುಕ ತಾಂಬೂಲ
ಸವಿಯಲು ಸುಲಭವಿಲ್ಲ..
ಗಟ್ಟಿ ಗೋಟಡಕೆ..
ಒಣಗಿಹ ಎಲೆ..
ಕಲ್ಲು ಕಲ್ಲಾದ ಸುಣ್ಣ
ಬೇಕಾದಷ್ಟು ಹೊಗೆಸೊಪ್ಪು..
ತಾಳೆಯೇ ಇಲ್ಲ ಯಾವುದಕ್ಕೂ..
@ಪ್ರೇಮ್

5. 5 ಹನಿಗವನಗಳು-ಬದುಕು

ರಾಗಿಯ ಕಾಳಂದದಿ ಜೀವನ..
ನೋಡಲು ಕಪ್ಪು..
ಯಾರಿಗೂ ಬೇಡ..
ಸರಿಯಾಗಿ ಪುಡಿಮಾಡಿ
ಹದವಾಗಿ ಕುದಿಸಿ ಮುದ್ದೆ ಮಾಡಿ
ಸಾಂಬಾರಿನೊಂದಿಗೆ ನುಂಗಿದರೆ
ಆಗ ತಿಳಿವುದದರ ಮಹತ್ವ..
ತಾಳ್ಮೆ ಕಡಿಮೆ ನಮ್ಮ ಹತ್ರ..
@ಪ್ರೇಮ್@

ಮನವೇ ಹೋಗು ನೀ
ಭಾರವಾಗಿದೆ ಜೀವನ
ನೇಸರನಂತೆ ಸುಡುತಿದೆ ಮನ
ಬೇಡವಾಗಿದೆ ತನುಮನ...
@ಪ್ರೇಮ್@

ಬದುಕೇ ಹಾಗೆ
ತಂತಿ ಮೇಲಿನ ನಡಿಗೆ
ತಪ್ಪಿದರೆ ಅಡಿಗೆ,
ಒಪ್ಪಿದರೆ ತಂತಿಗೆ..
@ಪ್ರೇಮ್@

: ಬದುಕ ಹೂ ಮಾಲೆಯಲಿ
ಸರಿಯಾದ ಪೋಷಣೆ ಅಗತ್ಯ..
ನೀರು ಹನಿಸಿ ಬಟ್ಟೇಲಿ ಕಟ್ಟಿ
ಕಾಪಾಡಬೇಕು ನಿತ್ಯ..
ಇಲ್ಲದಿರೆ ಬಾಡಿ ಹೋಗೋದು ಸತ್ಯ..
@ಪ್ರೇಮ್@

ಬದುಕ ತಾಂಬೂಲ
ಸವಿಯಲು ಸುಲಭವಿಲ್ಲ..
ಗಟ್ಟಿ ಗೋಟಡಕೆ..
ಒಣಗಿಹ ಎಲೆ..
ಕಲ್ಲು ಕಲ್ಲಾದ ಸುಣ್ಣ
ಬೇಕಾದಷ್ಟು ಹೊಗೆಸೊಪ್ಪು..
ತಾಳೆಯೇ ಇಲ್ಲ ಯಾವುದಕ್ಕೂ..
@ಪ್ರೇಮ್

4. ಹನಿಗವನ- ನವರಸ ಜೀವನ

ರಸಕಾವ್ಯದ ರಸರಂಜಿನಿ
ರಸನಿಮಿಷದ ರಸಪಲ್ಲವಿ
ರಜದಿನಗಳ ರಜನಿಯಲಿ
ರವಿದಿರಿಸಿನ ರಥಯಾತ್ರೆಯ
ರಂಗಸ್ಥಳದಲಿ ರಾರಾಜಿಸಿ
ರಸಗವಳವ ರುಚಿಸುತ್ತಲಿ
ರವರವದ ನರಕಕ್ಕೆ
ರವಾನಿಸದಿರು ರಘುವರನೆ
ರಂಗಾದ ರತ್ನಾಸನವ
ರದ್ದಾಗಲಿ ರಕ್ಕಸಕಲೆ
ರಂಜಿಸಲಿ ರಸಿಕತೆಯ
ರತಿಮನ್ಮಥ ರಂಗಿನಾಟ
ರಂಪಾಟ ರಚಿಸದೆ,
ರಂಗಾಗಲಿ ರಥಜೀವನ..
@ಪ್ರೇಮ್@

3. ಹನಿಗವನ-ತಾಯಿಗೆ

ನಮ್ಮ ತಾಯಿ ಭಾರತಿ
ನಿನಗಿದೋ ಆರತಿ..
ನೀಡು ಭಾರತೀಯರೆಲ್ಲರಿಗೆ
ಸ್ನೇಹದ ಸದ್ಗತಿ....
@ಪ್ರೇಮ್@

ಸೋಮವಾರ, ಡಿಸೆಂಬರ್ 18, 2017

48. ಗಝಲ್- 3

1. ಗಝಲ್

ಹಿಂದೆ ಕಳೆದ ದಿನಗಳದೇ ನೆನಪು,
ಆ ಕ್ಷಣವೇ ಚೆನ್ನಾಗಿತ್ತು..
ನಿನ್ನ ತೊಡೆಯ ಮೇಲೆ ನಾ ಮಲಗಿ ನಿದ್ರಿಸಿ,
ನೀ ತಟ್ಟುವ ಕ್ಷಣ ಚೆನ್ನಾಗಿತ್ತು....

ನಿನ್ನ ಕಣ್ಣಲಿ ನನ್ನ ಕಣ್ಣನಿಟ್ಟು ಕಣ್ ಗಳಲ್ಲೇ
ನಮ್ಮ ಮಾತಿನ ಸರಸದ ಕ್ಷಣ ಚೆನ್ನಾಗಿತ್ತು..
ನನ್ನೆದೆಯಲಿ ನೀ,ನಿನ್ನೆದೆಯಲಿ ನಾ,
ಆ ಮಧುರ ಕ್ಷಣವೇ ಚೆನ್ನಾಗಿತ್ತು..

ನಿನ್ನದರಕೆ ನನ್ನದರದ ಸ್ಪರ್ಶದಿ
ಸೂರ್ಯಾಸ್ತದ ಬಣ್ಣವೇ ಚೆನ್ನಾಗಿತ್ತು..
ಸಿಹಿ ಸಮಯದ ನೆನಪು ಉಕ್ಕಿ
ಬರದಿರೆ
ಹಳೆ ಮನಸ್ಸೇ ಚೆನ್ನಾಗಿತ್ತು!

ನಿನ್ನಂದಕೆ ಮನಸೋತು ಆ ಇರುಳಲಿ
ಕಂಡ ಸಿಹಿಗನಸೇ ಚೆನ್ನಾಗಿತ್ತು..
ನನ್ನಂದಕೆ ನಾ ಗಮನವ ಕೊಡದೆ
ಅರಿವಿಲ್ಲದ ಭಾವನೆ ಚೆನ್ನಾಗಿತ್ತು..

ನೀ ನನ್ನ ಬದುಕಲಿ ಬರದಿದ್ದರೆ
ಆ ಕ್ಷಣಗಳೆ ಚೆನ್ನಾಗಿತ್ತು,
ಬಂದ್ಹೋಗುವ ಗಳಿಗೆಯ ಆ ದೇವನು
ಕೊಡದಿದ್ದಿದ್ದರೆ ಚೆನ್ನಾಗಿತ್ತು...
@ಪ್ರೇಮ್@

ಶನಿವಾರ, ಡಿಸೆಂಬರ್ 16, 2017

2. ವಿಮರ್ಶೆ

*ಚುಟುಕುಗಳು*

*೧ ಮಾನವತೆ*

ಸ್ವಚ್ಛಂದದಿ ಹಾರಿಸಿ ಬಿಡು
ಮಾನವತೆಯ ಹಕ್ಕಿಯ
ಸ್ವಾರ್ಥದ ಪಂಜರದೊಳು
ಬಂಧಿಯಾಗಿಸದೆ ...

ವಾಹ್... ಈ ಪುಟ್ಟ ಪುಟ್ಟ ಮಹಾನ್ ಸಾಲುಗಳು ನನ್ನನ್ನೂ ಚಿಕ್ಕದಾಗಿ ಬರೆಯುವಂತೆ ಪ್ರೇರೇಪಿಸಿದ್ದು. 'ಮಾನವತೆಯ ಹಕ್ಕಿ' ,'ಸ್ವಾರ್ಥದ ಪಂಜರ' ಎಲ್ಲಿಂದೆಲ್ಲಿಯ ಕವಿಯ ಹೋಲಿಕೆ! ಗ್ರಹಿಸಲಸಾಧ್ಯ ಸಾಮಾನ್ಯ ಮನಸಿಗೆ.... ಈ ರೂಪಕಗಳನ್ನಿತ್ತ ಕವಿಗಿದೋ ನಮನ.ಸೂಪರ್...

*೨ ಒಲವು*

ನಿನ್ನೊಲವ ಮಂದಿರದಿ
ನಾ ನಿನ್ನ ಮಹಾರಾಣಿ ...
ನನ್ನ ನೆನಪಿನ ಪಂಜರದಿ
ನೀನೆನ್ನ ಸೆರೆಯಾಳು ...

ನಿಮ್ಮ imagination
ತಂಬಾ ಇಷ್ಟ. ಒಲವ ಮಂದಿರ,ನೆನಪಿನ ಪಂಜರ....ರೂಪಕಗಳು ಕವಿಮನಸಿಗೆ ಕವಿಯೇ ಸಾಟಿ ಎಂಬುದನು ಮತ್ತೊಮ್ಮೆ ರುಜುವಾತುಗೊಳಿಸಿದಂತಿವೆ! ಸಣ್ಣ ಸಾಲಲ್ಲೆ ಒಲವ ಒರತೆ ಉಕ್ಕಿ ಹರಿದಿದೆ !!

*೩ ತೃಪ್ತಿ*

ನಿನ್ನೊಲವ ಕನಸಲಿ ಕಟ್ಟಿದ
ಹಕ್ಕಿ ಗೂಡೇ ಸಾಕೆನಗೆ ಇನಿಯ
ಪ್ರೀತಿ ಇರದ ಚಿನ್ನದ ಪಂಜರದಲಿ
ಬಂಧಿಯಾಗುವುದಕ್ಕಿಂತ ...

ಪ್ರೀತಿಗಿಂತ ಯಾವುದೂ ಮಿಗಿಲಲ್ಲ ಎಂದು ಈ ರೂಪಕ ಸಾಲುಗಳು ಸಾರಿ ಹೇಳುತ್ತವೆ... ಪ್ರೀತಿಯ
ಕನಸ ಹಕ್ಕಿಗೂಡು ಚಿನ್ನದರಮನೆಗಂತ ಲೇಸು ಎಂದಾಗ ಬೇಂದ್ರೆಯವರ 'ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು...
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.."
ಈ ಗೀತೆಯನ್ನು ನೆನಪಿಸಿತು...
@ಪ್ರೇಮ್@

*ಸುಧಾ ಎನ್. ತೇಲ್ಕರ್*

29. ಕವನ-ಸ್ನೇಹ ಹಸ್ತ

ಸ್ನೇಹ ಹಸ್ತ (ಕವನ)

ಸ್ನೇಹದಿಂದ,ಸ್ನೇಹದಲ್ಲಿ ಬೆರೆತು,
ಒಳ್ಳೆ ಸ್ನೇಹಿತರಾಗಿ ಎಲ್ಲರೊಡನೆ,
ಸ್ನೇಹಮಯ ಜೀವಿಯಾಗಿ,
ಪರರ, ತನ್ನವರ ಸ್ನೇಹಿತನಾಗಿ,
ತನ್ನ ಬದುಕನ್ನೇ ಸ್ನೇಹಕ್ಕಾಗಿ,
ಸ್ನೇಹಿತರಿಗಾಗಿ ಮುಡಿಪಾಗಿಟ್ಟು,
ಸ್ನೇಹಿತರಿಗಾಗಿ ಬದುಕಿ,ಬಾಳಿ,
ಸ್ನೇಹಿತರಿಗಾಗೇ ತನ್ನ ಬಂಗಾರದ
ಬಾಳನ್ನು ಸಮರ್ಪಿಸಿದ ಕೀರ್ತಿ
ಸಲ್ಲಬೇಕಾದುದು ಮತ್ಯಾರಿಗಲ್ಲ,
ಕಾದು ವೀರ ಮರಣವನಪ್ಪಿ,
ಹುತಾತ್ಮರಾದ ಯೋಧರಿಗೆ...
@ಪ್ರೇಮ್@

86. 5 ಹನಿಗಳು

1.ನನ್ನ ಹನಿ

ನನ್ನ ಕಲ್ಪನೆಯ ಹನಿ
ನನ್ನ ಜೀವಹಾರದ ಮಣಿ,
ಜೀವದೊಲುಮೆಯ ಖನಿ
ಕೆಂಪು ಮೂತಿಯ ಅರಗಿಣಿ.

2. ಆಸೆ

ಮೊಗೆಮೊಗೆದು ನೊರೆ ಸೂಸಿ
ದಡದತ್ತ ಕೈ ಮೈಯ ಬೀಸಿ,
ಮತ್ತದೇ ವೇಗದಲಿ ಹಿಂದೈದು
ತಾಯೊಡಲ ಸೇರುವ
ಕಡಲಾಳದ ದೈತ್ಯ ತೆರೆ
ನಾನಾಗುವಾಸೆ ಮುದ ನೀಡಲು...

3. ಆನಂದ

ನೀ ನನ್ನ ಬಾಳಿಗೆ ಬರೆ,
ನೀ ನನ್ನ ಬಾಳಿನೊಳಿರೆ,
ನೀ ನನ್ನ ಜೊತೆಯಲಿರೆ,
ನೀ ನನ್ನ ಬಳಿ ಬರೆ,
ನೀ ನನ್ನ ಕೈ ಹಿಡಿದಿರೆ,
ನನಗಾನಂದ ಕೊಡುತಿರೆ
ನನ್ನ ಜೀವನ ಪಾವನ...

4. ಮೇಘ

ಮಳೆ ಮೇಘ ಬಂತು
ಮಳೆಯನ್ನು ತಂತು...
ಭೂಮಿಗೆ ಬಿತ್ತು,
ಸಿಹಿನೀರ ಮುತ್ತು...
ಬಿತ್ತೋ ಬಿತ್ತು....
ಮಳೆ ಬಿಲ್ಲ ಸೊತ್ತು...

5.  ಅಕ್ಕಿ
ಬಂದಿದೆಯಂತೆ ಹೊಸ ಪ್ಲಾಸ್ಟಿಕ್ ಅಕ್ಕಿ,
ಆಸ್ಪತ್ರೆ ಸೇರಿದ್ರು ಬಾಯಿಗೆ ಸಿಕ್ಕಿ
ನೋಡಬಾರದೆ ತಿನ್ನುವಾಗ ಮುಕ್ಕಿ ಮುಕ್ಕಿ..
ಕಡಿಮೆ ಮಾಡಬೇಕು ಚೈನಾ ಟೆಕ್ಕಿ...

65. 3 ಚುಟುಕುಗಳು

*1.ನೀ...*
ನನ್ನ ಹೃದಯ ಪಂಜರದಿ
ಬಚ್ಚಿಟ್ಟ ಮರಿ ಗುಬ್ಬಿ ನೀ..
ನೀ ಹೊರ ಬರಲಾರೆ..
ನಾ ನಿನ್ನ ಬಿಟ್ಟು ಇರಲಾರೆ...

2. ಪಂಜರದ ಪಕ್ಷಿ

ಪಂಜರದ ಪಕ್ಷಿ ನಾ...
ಉತ್ತರಿಸೆನ್ನ ಪ್ರಶ್ನೆಗೆ..
ಏ ಮಾನವ ನಿನಗೆ
ಬೇಕಾದ ಸ್ವಾತಂತ್ರ್ಯವ
ನನಗೇಕೆ ಕೊಡಲಿಲ್ಲ ನೀ?

3. ಮೀನು
ಪಕ್ಷಿಗಳನಷ್ಟೆ ಅಲ್ಲ,
ಮನುಜ ನೀ ನನ್ನನೂ
ಪಂಜರದೊಳಗೆ ಹಾಕಿ
ಕೂಡಿ ನಿನ್ನ ಮನೆಯೊಳಿರಿಸಿಹೆಯಾ?

@ಪ್ರೇಮ್@

ಶುಕ್ರವಾರ, ಡಿಸೆಂಬರ್ 15, 2017

63. 1. Article

Hard work
I believe in hard work because on my life each and every ups of my life I reached by working hard.  To climb a tenth floor we must climb step by step from the first floor. We may depend on luck it's like a lift. Not for all,  only for some lucky people it may support. But climbing is perfect and expected. It's sure that no break ups to hard work and dedication.
  We should work hard to achieve anything in any field. Even godly people like Rama, Krishna in epic stories reached the goal of their work by working hard. If we read the autobiographies of great achievers there also we can find it. 
  Hard work is like a tonic to any achiever. To reach his healthy goal one should take this tonic and kick the opportunity as a foot ball.
@Prem @

62. 5 ಹನಿಗಳು

1.ನನ್ನ ಹನಿ

ನನ್ನ ಕಲ್ಪನೆಯ ಹನಿ
ನನ್ನ ಜೀವಹಾರದ ಮಣಿ,
ಜೀವದೊಲುಮೆಯ ಖನಿ
ಕೆಂಪು ಮೂತಿಯ ಅರಗಿಣಿ.

2. ಆಸೆ

ಮೊಗೆಮೊಗೆದು ನೊರೆ ಸೂಸಿ
ದಡದತ್ತ ಕೈ ಮೈಯ ಬೀಸಿ,
ಮತ್ತದೇ ವೇಗದಲಿ ಹಿಂದೈದು
ತಾಯೊಡಲ ಸೇರುವ
ಕಡಲಾಳದ ದೈತ್ಯ ತೆರೆ
ನಾನಾಗುವಾಸೆ ಮುದ ನೀಡಲು...

3. ಆನಂದ

ನೀ ನನ್ನ ಬಾಳಿಗೆ ಬರೆ,
ನೀ ನನ್ನ ಬಾಳಿನೊಳಿರೆ,
ನೀ ನನ್ನ ಜೊತೆಯಲಿರೆ,
ನೀ ನನ್ನ ಬಳಿ ಬರೆ,
ನೀ ನನ್ನ ಕೈ ಹಿಡಿದಿರೆ,
ನನಗಾನಂದ ಕೊಡುತಿರೆ
ನನ್ನ ಜೀವನ ಪಾವನ...

4. ಮೇಘ

ಮಳೆ ಮೇಘ ಬಂತು
ಮಳೆಯನ್ನು ತಂತು...
ಭೂಮಿಗೆ ಬಿತ್ತು,
ಸಿಹಿನೀರ ಮುತ್ತು...
ಬಿತ್ತೋ ಬಿತ್ತು....
ಮಳೆ ಬಿಲ್ಲ ಸೊತ್ತು...

4. ಅಕ್ಕಿ
ಬಂದಿದೆಯಂತೆ ಹೊಸ ಪ್ಲಾಸ್ಟಿಕ್ ಅಕ್ಕಿ,
ಆಸ್ಪತ್ರೆ ಸೇರಿದ್ರು ಬಾಯಿಗೆ ಸಿಕ್ಕಿ
ನೋಡಬಾರದೆ ತಿನ್ನುವಾಗ ಮುಕ್ಕಿ ಮುಕ್ಕಿ..
ಕಡಿಮೆ ಮಾಡಬೇಕು ಚೈನಾ ಟೆಕ್ಕಿ...


ಮಂಗಳವಾರ, ಡಿಸೆಂಬರ್ 12, 2017

30. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-3

ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಸ್ತ್ರೀಯರ ಸಬಲತೆ ಭಾರತದಲ್ಲಿ 21ನೇ ಶತಮಾನದಲ್ಲೂ ಸಾಲದು.ಇದಕ್ಕೆ ಮುಖ್ಯ ಉದಾಹರಣೆ ಆಗಾಗ ಪೇಪರ್ಗಳಲ್ಲಿ ಓದುವ ಸಾಮೂಹಿಕ ಅತ್ಯಾಚಾರ. ಇದರಲ್ಲಿ ಪುರುಷರಷ್ಟೇ ಮಹಿಳೆಯರ ಪಾಲೂ ಇದೆ. ಅದು ಹೇಗೆಂದರೆ ಯಾವುದೇ ಹುಡುಗನನ್ನು ಸಾಕುವವಳು ತಾಯಿ. ಸ್ವಂತ ತಾಯಿ ಇಲ್ಲವೇ ಸಾಕು ತಾಯಿ. ಆ ತಾಯಿ ಎಂದಿಗೂ ಹುಡುಗಿಯರ ಬಗ್ಗೆ ಕೆಟ್ಟದಾಗಿ ಅಥವಾ ಕೀಳಾಗಿ ನಡೆದುಕೊಳ್ಳಲು, ಅವರಿಗೆ ಗೌರವ ಕೊಡದಿರಲು ಹೇಳಿಕೊಡಲಾರಳು. ಆದರೆ ಅವಳ ಬೆಳೆಸುವ ರೀತಿ ಎಲ್ಲೋ ಎಡವಿರಬಹುದು. ಅಥವಾ ಮಗ ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಯಾವುದೋ ಹೆಣ್ಣಿನ ವರ್ತನೆ ಅವನನ್ನು ಆ ಕೆಲಸಕ್ಕೆ ಮನಃಪರಿವರ್ತನೆ ಮಾಡಿರಬಹುದು. ಅಲ್ಲಿ ಆ ಹೆಣ್ಣಿನ ಪಾತ್ರ ಇದೆ ಎಂದಾಯಿತು.
  ಅಜ್ಜಿ,ತಾಯಿ,ತಂಗಿ,ಅಕ್ಕಂದಿರ ಜೊತೆ ಪ್ರೀತಿಯಲ್ಲಿ ಬೆಳೆದ ಯಾವ ಸಭ್ಯ ಹುಡುಗನೂ ಸಹ ಒಂದು ಹೆಣ್ಣಿನ ಮಾನ ಕಾಪಾಡುವನೇ ಹೊರತು ಅವನೆಂದಿಗೂ ಮಾನ ಕಳೆಯಲಾರ!
  ಮನುಷ್ಯ ಮನುಷ್ಯತ್ವ ಇಲ್ಲದೆ ಇದ್ದರೆ ಅವರು ಪ್ರಾಣಿಗಳಿಗೆ ಸಮಾನ. ಇದು ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. ಯಾವುದೇ ಹೆಣ್ಣು ಮುಂದುವರಿಯದೆ  ಯಾವ ಗಂಡಿಗೂ ಮುಂದುವರೆಯಲು ಧೈರ್ಯ ಬರಲಿಕ್ಕಿಲ್ಲ! ಅಲ್ಲದೇ "ಲೇಡೀಸ್ ಕೇಸ್ ಗೆ ಬೇಲ್ ಇಲ್ಲ, ಅವರ ಸುದ್ದಿ ನಮಗ್ಯಾಕೆ?ಒಂದು ಕ್ಷಣಕ್ಕಾಗಿ ಜೀವನ ಹಾಳು ಮಾಡಿಕೊಳ್ಳೋದು ಏಕೆ?" ಎಂದುಕೊಂಡು ಹಲವರು ಸುಮ್ಮನಿದ್ದರೆ, ಇನ್ನು ಕೆಲವರು ತಮ್ಮದೇ ಆದ ಗುರಿಗಳನ್ನಿಟ್ಟುಕೊಂಡು ಅದಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಕೆಲಸವಿಲ್ಲದ, ಮನೆಯಲ್ಲಿ ಬೇಕಾದಷ್ಟು ತಿಂದು ತೇಗುವಷ್ಟಿದ್ದು,ಮಾಡಲು ಕೆಲಸವಿಲ್ಲದ, ದುಷ್ಚಟಗಳಿಗೆ ದಾಸರಾದ, ಪೋಷಕರ ಪ್ರೀತಿ ಹಾಗೂ ಕಾಳಜಿ ಇಲ್ಲದ ಇಂತಹ ಹೀನ ಕೃತ್ಯಕ್ಕೆ ಕಾರಣರಾಗುತ್ತಾರೆ. ಇದನ್ನೆಲ್ಲ ಚಲನಚಿತ್ರಗಳಲ್ಲಿ,ಟಿವಿಗಳಲ್ಲಿ ನಾವಿದನ್ನು ನೋಡುತ್ತಲೇ ಇರುತ್ತೇವೆ!
   ಮನಸ್ಸುಗಳನ್ನು ಎಂದೂ ಕೆಡಲು ಬಿಡಬಾರದು. ಹುಡುಗನಾಗಲಿ, ಹುಡುಗಿಯಾಗಲಿ ,ಎಲ್ಲೇ ಇರಲಿ,ತಮ್ಮ ಎಲ್ಲೆಯೊಳಗೆ ಬದುಕಲು ಕಲಿಯಬೇಕು. ಪೋಷಕರು ತಮ್ಮ ಮಗ,ಮಗಳು ಹೇಳಿದ್ದನ್ನೆಲ್ಲ ಕೋಲೆ ಬಸವನಂತೆ ನಂಬದೆ,ಪ್ರತ್ಯಕ್ಷವಾಗಿ, ಪ್ರಮಾಣಿಸಿ ನೋಡಬೇಕು. ತಮ್ಮ ಮಕ್ಕಳೆಡೆಗೆ ಸದಾ ಗಮನ ಕೊಡಬೇಕು. ಕೆಟ್ಟ ದಾರಿಗಳೆಡೆ ಹೋಗುವುದು ಸುಲಭವಾದರೂ, ಒಮ್ಮೆ ಕೆಟ್ಟ ಚಟಕ್ಕೆ ದಾಸನಾದರೆ ಸರಿಯಾಗುವುದು ಕಷ್ಟ. ಸಮಾಜಕ್ಕೆ ಒಳ್ಳೆಯ ಮಕ್ಕಳನ್ನು ಕೊಡುವ ಜವಾಬ್ದಾರಿ ಪ್ರತಿ ತಂದೆ ತಾಯಿಗೂ ಇದ್ದಲ್ಲಿ ಈ ತರಹದ ಯಾವುದೇ ಕುಕೃತ್ಯಗಳಾಗಲು ಸಾಧ್ಯವಿಲ್ಲ. ನೀವೇನಂತೀರಿ?
@ಪ್ರೇಮ್@

ಶನಿವಾರ, ಡಿಸೆಂಬರ್ 9, 2017

31. ಕವನ-ಧರಣಿಗೆ ಶರಣು

*ಧರಣಿಗೆ ಶರಣು*
ಹಸಿರ ಸೀರೆಯುಟ್ಟು, ಕೇಸರಿ ಹಣೆಯ ಬೂಟ್ಟು,
ತಿಳಿ ನೀರ ನದಿಯಲಿ ಪಾದ ತೊಳೆದಿಟ್ಟು,
ನಾದ ನಿನಾದಕ್ಕೆ ಪಕ್ಷಿ ಕಲರವ ಗಾನ,
ನೆಮ್ಮದಿ ಬೇಕೆಂದರೆ ಕಾನನದ ನೀರವ ಮೌನ//

ಹರಿವ ತೊರೆ,ಜಲಪಾತದ ತಳುಕು,
ಕೊರೆವ ಚಳಿ, ಋತುಗಳ ತಿರುಗುವ ಝಳಕು..
ಕುಸುಮಗಳಂದ, ನೋಟದುದ್ದಕ್ಕೂ ಸಾಲದು,
ಅಂದ ವರ್ಣಿಸಲು ಈ ಜೀವನವೇ ಸಾಲದು//

ಚೆಲುವೆ ಧರಣಿ, ಸರ ಪಕ್ಷಿಗಳ ಸಾಲು,
ಬರುವ ಸೂರ್ಯ ನಿನ್ನ ನೋಡಲು ದಿನಾಲು,
ಮರ,ಬಂಡೆ, ಕಡಲ ರಾಶಿ ನಿನಗವೆ ಕಾವಲು,
ದಾರಿ ದೂರವದು ನಿನ್ನ ನೂಲು...//

ರಂಗಿನಾಟ ಪಶು-ಪಕ್ಷಿ-ಪ್ರಾಣಿ ಕೀಟಕೆ,
ಮೋಜಿನಾಟ ಮಾನವ ಜನ ಕುಲಕೆ,
ಧರಣಿ ಮಾತೆಯೇ ನಿನ್ನೊಲವಿಗೆ,ಗೆಲುವಿಗೆ ಶರಣು,
ಸಾಲವು ನೋಡಿ ಸವಿಯಲು ನನ್ನೆರಡು ಕಣ್ಣು....//

@ಪ್ರೇಮ್@

ಶುಕ್ರವಾರ, ಡಿಸೆಂಬರ್ 8, 2017

32. ಕವನ-ಮಗಳಿಗೆ

*ಮಗಳಿಗೆ*
ಹೆಣ್ಣಾಗಿಹೆನಂದು ಕೊರಗದಿರು ಮಗಳೇ,
ಹುಡುಗನಿಗಿಂತ ಕಡಿಮೆಯಿಲ್ಲದಂತೆ ಬೆಳೆಸಿಹೆವು ನಿನ್ನ..

ಮಾತಿನಲಿ ಮಾತ್ರವಲ್ಲ,ಧೈರ್ಯದಲಿ ಬೇಕು,
ಅದ ಬೆಳೆಸಿಹೆವು ನಿನ್ನಲಿ,ನಿನಗೆ ನೀನೇ ರಕ್ಷೆ.

ಎದೆಗುಂದದಿರು ಎಂದಿಗೂ,ಮರೆಯದಿರು ಮನವ,
ಹೃದಯದ ಮಾತು ಕೇಳು, ಬುದ್ಧಿ ಬಳಸು,
ತಿಳಿದುಕೋ ಎಂದೂ,ಶಕ್ತಿಗಿಂತ ಯುಕ್ತಿ ಮೇಲು..

ಯಾರೇ ಎದುರಾಗಲಿ,ದರ್ಪ ಬೇಡ,
ಪ್ರೀತಿಗೆ ಸೋಲದವರಿಲ್ಲ, ಸೋತು ಗೆಲ್ಲಲು ಕಲಿ,ಮಾಡಿ ತಿಳಿ..

ಕೈ ಕೆಸರಾದರೆ ಬಾಯಿ ಮೊಸರು, ದುಡಿಮೆ ಕಲಿ,
ಒಳ್ಳೆ ಬುದ್ಧಿ,ಒಳ್ಳೆ ಗುಣವದು ದೇವರ ಹರಕೆಯ ಫಲ...

ಬೆಳೆಸಿಕೊ ಮನವ, ದುರಾಸೆ ಬೇಡ ಧನಕೆ,
ಬದುಕಲು ಕಲಿ,ಬದುಕಿದು ದೇವರ ಹರಕೆ...

@ಪ್ರೇಮ್@
08.12.17

ಗುರುವಾರ, ಡಿಸೆಂಬರ್ 7, 2017

47. Wishes- Poem in eng

My dear friends,
Push all worries.
The festive of lights has come,
To add the happiness in sum.

Let us clean our minds, with our new clothes.
Stop burning crackers
Start adding pleasures.

Let the heart cheer with brightness,
Children enjoy with sweets.
Let the nature not spoil,
Air,water,land,our food and oil,
Also keep clean our soil,
Let the earth not boil.

My dears here are plenty of wishes,
To you, your family and friends.
Let's get brighten and brighten others
Hope that peace, health, wealth increase
With lord Laxmi's blessings.

@Prem@

60. 4. ಹನಿ ಕವನಗಳು

[8/29, 10:48 AM] Prem: ಮನದ ಮಾತು
ಕಣ್ಣಲ್ಲಿ ಬಂದಾಗ
ಕಣ್ಣೀರಾಯಿತು....
ಮುಖದಲ್ಲಿ ಬಿಂಬಿತವಾದಾಗ
ಮೌನವಾಯಿತು....

@ಪ್ರೇಮ್@

[8/29, 10:48 AM] Prem: ನನ್ನ ನಲ್ಲೆ
ನೀ ಎಲ್ಲೇ?
ನಾ ಇಲ್ಲೆ...
ಯಾಕೆ ಬರಲೊಲ್ಲೆ?
@ಪ್ರೇಮ್@

[8/29, 10:48 AM] Prem: ನಂಬಿಕೆಯೇ ಜನಮನ.
ನಂಬಿಕೆಯೇ ಬಹುಮಾನ.
ನಂಬಿಕೆಯೇ ಅಭಿಮಾನ
ನಂಬಿಕೆಯೇ ಜೀವನ.
@ಪ್ರೇಮ್@

[8/29, 10:48 AM] Prem: ಆತಿಥ್ಯ
ನೋಡಲು ಸುಮಧುರ.
ಮಾತಲಿ ವೈಯ್ಯಾರ..!
ಎದೆಯಲಿ ಬರಬರ
ಮೆಣಸಿನ ಉರಿಕಾರ!!!
@ಪ್ರೇಮ್@

[9/9, 11:16 AM] Prem: ಕೃಷಿ ಎಂಬ ಪದವೇ ಅರ್ಥಗರ್ಬಿತ. ಹೊಸತನ್ನು ಪರಿಸರದ ಸಹಾಯದಿಂದ ಬೆಳೆ, ತರು ಎಂಬ ಇಂಗಿತ. ಹೊಸತು ಎಂದ ಕ್ಷಣ ನಮ್ಮ ಮೈ,ಮನಸು ಪುಳಕಗೊಳ್ಳುತ್ತದೆ.ಕಿವಿ ಅರಳುತ್ತದೆ.ಉತ್ಸಾಹದ ಚಿಲುಮೆ ಪುಟಿಯುತ್ತದೆ.
ಸಾಹಿತ್ಯ ಕೃಷಿ ಇದರ ಒಂದು ಅಂಗ.ಬಂದ ಚಿಗುರನ್ನು ಚಿವುಟದೆ,ಸ್ವಲ್ಪ ಮಣ್ಣು,ಸ್ವಲ್ಪ ನೀರು ಹಾಕಿ ಬೆಳೆಯಲು ಸ್ಥಳವಿತ್ತರೆ ಸಾಕು,ಅದು ತಂತಾನೇ ಅಸ್ತಿತ್ವ ಕಂಡುಕೊಳ್ಳುತ್ತದೆ.
ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲೂ ಕವಿಮನಸುಗಳಿವೆ.ಅವು ಒಂಟಿಯಾಗೋ,ಗುಂಪಿನಲ್ಲೋ ಚಿಗುರುಗಳಿಗೆ ನೀರು,ಮಣ್ಣು,ಗೊಬ್ಬರ ಹಾಕಿ ಬೆಳೆಸುತ್ತಿವೆ.ಇದು ಸ್ವಾಗತಾರ್ಹ ಬೆಳವಣಿಗೆ.
  ಮಾಹಿತಿ ತಂತ್ರಜ್ಞಾನ,ಅದರ ಉಪ ಉತ್ಪನ್ನಗಳು ಇಂದಿನ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂಬ ಮಾತು ಇಂದು ಎಲ್ಲೆಡೆ ಕೇಳಿ ಬರುತ್ತಿರುತ್ತಿರುವ ಈ ದಿನಗಳಲ್ಲೇ ಸದ್ದಿಲ್ಲದೆ ಸಾಹಿತ್ಯ ಕೃಷಿ ಬೆಳೆಯುತ್ತಿದೆ ಎನ್ನುವುದಕ್ಕೆ 'ಭಾವದೀಪ್ತಿ' ಕವನ ಸಂಕಲನವೇ ಸಾಕ್ಷಿ.
    ವೈಜ್ಞಾನಿಕ ತಂತ್ರಜ್ಞಾನದ ಬೆಳವಣಿಗೆ,ಅದರ ಮಕ್ಕಳಾದ ವಾಟ್ಸಪ್,ಫೇಸ್ ಬುಕ್ ಇವುಗಳನ್ನು ನಮ್ಮ ಯುವ ಮನಸುಗಳು ಸರಿಯಾಗಿ ಬಳಸಿಕೊಂಡಲ್ಲಿ ಸಾಹಿತ್ಯ ಕೃಷಿ ಮೇರು ಪರ್ವತಕ್ಕೇರುವಲ್ಲಿ ಎರಡು ಮಾತಿಲ್ಲ.ನೀವೇನಂತೀರಿ?
@ಪ್ರೇಮ್@

[10/2, 3:16 PM] Prem: *ಯೋಧ*
ನೀ ನೆಲದ ಉಸಿರು
ನೀ ತಾಯ ಹಸಿರು.
ನೀ ದೇಶದ ನಾಡಿ
ನೀ ಕಾಯುವೆ ಗಡಿ.

ದೇಶದ ಬಡಿತ ನೀ
ಆತ್ಮದ ತುಡಿತ ನೀ
ಮಂಜಿನ ಹನಿಯು ನೀ
ದಿವ್ಯ ಪ್ರಭೆಯು ನೀ.

ತನ್ನ ನೆತ್ತರ ಹರಿಸಿ,
ಪರರ ಒಲುಮೆಯ ಹರಸಿ
ಜೀವನವನೆ ಮುಡಿಪಾಗಿಸಿ
ದೇಹವ ಭೂತಾಯಿಗಾಗಿ ಕರಗಿಸಿ,

ತನ್ನತನವ ಮರೆತು,
ತನ್ನವರ ದೂರ ತೊರೆದು
ಜನನಿಗಾಗಿ ಕಾದು
ಶತೃವನು ತೇದು

ತನ್ನ ಬದುಕನು
ತಾಯಿಗರ್ಪಿಸಿಹನು
ಬಲಿಷ್ಠನಾದವನು
ನಮಗಾಗಿ ಗುಂಡಿಗದೆ ಕೊಡುವವನು

ಓ ಧೀರ ಯೋಧರೇ
ನಮ್ಮ ಕಾಯ್ವ ಸಹೋದರರೇ
ನಿಮಗಿದೋ ಅಂತರಾಳದ
ಶುಭ ಹಾರೈಕೆಗಳು.

@ಪ್ರೇಮಾ@

[10/6, 12:05 PM] Prem: *ನಾನೇ ತೋರಣ*
ಭೂಮಿಯ ಬಣ್ಣವ ಧರಿಸಿಹೆ ನಾನು,
ಹೇಳುವೆ ಉಳಿಸಿ ನೈಜ ಹಸಿರನು.

ಮುನುಜನೆ ಕಟ್ಟಿ ಅವನೆ ಬಿಚ್ಚುವನು
ಹಸಿ ಹಸಿ ಮಾವಿನ ಎಲೆಗಳನು.

ನಾ ಬಯಸುವೆ ಕೇವಲ ನೂಲನ್ನು,
ಒಟ್ಟಿಗೆ ಬಂಧಿಸಿ ಬಿಡುವೆ ಎಲೆಗಳನು.

ತಳಿರಾಗಿಹ ನಾ ಹೇಳುವೆ ಗುಟ್ಟೊಂದನ್ನು,
ಪಾಲಿಸಿರೆಂದೂ ನಿಮ್ಮಲಿ ಒಗ್ಗಟ್ಟನ್ನು.

ಯಾರನೂ ಜರಿಯದೆ 'ಅನರ್ಹನು'
ಎಂದು,ನೋಡಿರಿ ನನ್ನಯ ಸ್ಥಾನವನು.

ನಾ ಹಸಿರ ತೋರಣ ಹೇಳುವೆ-ತನು-
ಮನದಿ ಪೂಜಿಸಿರಿ ಪರಿಸರವನು.

ಕಲಿಯಿರಿ ನನ್ನಿಂದ,ನೋಡಿರಿ ನನ್ನನು
ರಕ್ಷಿಸಿ ಗಿಡ-ಮರ-ಬಳ್ಳಿಯನು.
@ಪ್ರೇಮ್@