[4/8, 8:12 PM] Wr Yathish Kamaje: *ಶ್ಯಾಮ ಸರ್* ರ ಶ್ರೀ ಗುರುಭ್ಯೋನಮಃ
ಚೆನ್ನಾಗಿ ಇದೆ ನಿಮ್ಮ ಶಿಕ್ಷಕರಾದ ಶ್ರೀ ರಾಘವೇಂದ್ರಾಚಾರ್ ರನ್ನು ನೆನೆಸಿಕೊಂಡಿದ್ದೀರ.
*ವರಲಕ್ಷ್ಮಿ ಮೇಡಂ* ತನ್ನ ತಾಯಿಯನ್ನು ನೆನೆದು ನಮನ ಸಲ್ಲಿಸಿದರು
*ಪ್ರೇಮ್* ಅವರು ತಮ್ಮ ಊರಿನ ಕಥೆಯ ಜೊತೆ ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರನ್ನು ನೆನೆಸಿ ಸುಂದರ ಬರಹ ರಚಿಸಿದ್ದಾರೆ
*ಕಲಾಪ್ರಿಯರವರು* ಗುರವಿನ ಕಾರ್ಯವನ್ನು ಹೇಳುತ್ತ ವಂದಿಸಿದ್ದಾರೆ.
*ಶಶಿವಸಂತರು* ತಮ್ಮ ಹಾಡಿಗೆ ಪ್ರೊತ್ಸಾಹ ನೀಡಿದ ಗುರುವನ್ನು ನೆನೆದಿರುವರು
*ವೆಂಕಟೇಶ್ವರ* ಸರ್ ಕನ್ನಡ ಗುರುಗಳಾದ ತಿಪ್ಪೇಸ್ವಾಮಿಯವರನ್ನು ಹೇಗೆ ಮರೆಯಲಿ ಎನ್ನುತ ನೆನೆದಿದ್ದಾರೆ.
*ಶೈಲಜಾರವರ* ಉತ್ತಮ ಬರಹ ಕಲಿಕೆ ಗೆ ತಾಯಿ ತಂದೆ ಸಮಾಜ ಪರಿಸರ ಹೀಗೆ ಎಲ್ಲವನ್ನೂ ನೆನೆದುಕೊಂಡರು.
*ಎಸ್ ನಾಗಮ್ಮ* ಗುರುಗಳಾದ ವೆಂಕಟರಮಣ ಭಟ್ ರವರನ್ನು ನೆನೆದು ಕೊಂಡಾಡಿದ್ದಾರೆ .
*ಶಿವಕುಮಾರ* ರವರು ಅಕ್ಕನ ಸ್ನೇಹಿತೆಯನ್ನು ನೆನೆದು ಕೊಂಡಿದ್ದಾರೆ.
*ಸುರೇಶ್ ಸರ್* ತನ್ನ ಸಾಧನೆ ದಾರಿದೀಪರಾದ ಹಲವು ಶಿಕ್ಷಕರನ್ನು ನೆನೆದಿದ್ದಾರೆ.
*ಮನೋಹರ* ರು ಉತ್ತಮ ಬರಹದಲ್ಲಿ ತಂದೆ ತಾಯಿ ಮೊದಲ ಗುರು ಎನ್ನಲು ಮರೆಯಲಿಲ್ಲ.
*ಗಂಧರ್ವ* ರು ಹೀಗೂ ಉಂಟೆ ಎನ್ನುತ ಸರಕಾರಿ ಶಾಲೆಯಲ್ಲಿ ನಿಜವಾಗಿ ನಡೆಯುವ ಸಂಗತಿ ತಿಳಿಸುತ್ತ ಅದೇ ನನಗೆ ಪ್ರೇರಣೆ ಎಂದಿರುವರು.
*ಮನುಜ* ಮೇಢಂ ಕೈ ಹಿಡಿದು ಕಲಿಸಿದ ಶಿವನಂಜಪ್ಪರನ್ನು ನೆನೆದಿದ್ದಾರೆ
ಎಲ್ಲರ ಬರಹವು ಚೆನ್ನಾಗಿ ಇದ್ದವು. ನನಗೆ ಸಮಯ ಕೊರತೆಯಿಂದ ಬರೆಯಲು ಸಾಧ್ಯವಾಗಲಿಲ್ಲ🙏
✍ಯತೀಶ್ ಕಾಮಾಜೆ
[4/10, 2:55 PM] Wr Yathish Kamaje: *ಪ್ರೇಮ್ ಮೇಡಂ ಚುಟುಕು ಬರೆಯಬೇಕಿತ್ತು ಸುಂದರವಾದ ಹನಿಗವನ ಬರೆದಿದ್ದೀರಿ*
[4/10, 3:21 PM] +91 88844 08950: *ಪ್ರೇಮ್ ಅವರೇ ಹನಿಗವನ ಚಂದ , ಇಂದು ಚುಟುಕು ಬರೀಬೇಕು*
[4/10, 5:18 PM] +91 99801 78424: ೧.ಪ್ರೇಮಾತ್ಮ ರವರ
ಕಳೆದುಕೊಳ್ಳಬೇಡಿ : ಅಮೃತದ ಡಬ್ಬಕ್ಕೆ ವಿಷದ ಚೀಟಿಯ ಬದಲಾಗದು ಎನ್ನುವ ಅರ್ಥ ದಲ್ಲಿ ಇದೆ ಚೆನ್ನಾಗಿ ಮೂಡಿದೆ.
೨. ರತ್ನಾ ರವರ
ಮನಸು : ಅಮೃತ ಮತ್ತು ಜೇನಿನ ವ್ಯತ್ಯಾಸ ಹೇಳುತ್ತಾ ಮಾನವನ ಮನಸ ಒಳ ನೋಟವನ್ನು ತೋರಿಸುವ ಪ್ರಯತ್ನ.
ದೇವಲೋಕ: ದೇವರು ಸಹಾ ಅಮೃತಕ್ಕಾಗಿ ಏಂತಹ ತಂತ್ರ ಮಾಡುವರು ಆದರೆ ಮಾನವರಿಗೆ ಅಮ್ಮನಿಂದ ಅಮೃತ ಸಿಗುವುದು ಎಂದು ಹೇಳುವ ಪ್ರಯತ್ನ.
೩.ಕೋರಾಪು ರವರ
ಹಿತಸ್ಪರ್ಶ : ಮಧುರ ಚುಂಬನ ಅಮೃತಕ್ಕೆ ಸಮಾನ - ಚೆನ್ನಾಗಿದೆ.
೪. ರಮೇಶ ರವರ
ತಾಯಿ: ಬೂಸ್ಟ್ ಹಾರ್ಲಿಕ್ಸ್ ಗಿಂತ ತಾಯಿಯ ಎದೆಯ ಹಾಲು ಅಮೃತ ಎಂದು ಹೇಳುವದು ಚೆನ್ನಾಗಿದೆ.
ಒಲವು: ನಿನ್ನ ಒಲವು ಅಮೃತಕ್ಕಿಂತ ಸವಿಯಾಗಿದೆ ಎನ್ನುತ್ತಾರೆ.
೫.ದೇವಿದಾಸ ರವರು
ಆಮಿಷ: ಅತಿಯಾದರೆ ಅಮೃತವು ವಿಷ ವಾಗುವುದು ಎನ್ನುವ ಎಚ್ಚರಿಕೆ ನೀಡಿರುವರು.
ದಾನ: ಅಮೃತ ಹಸ್ತದಿಂದ ದಾನ ಮಾಡಿದರೆ ಬಡವರ ಪ್ರಾಣ ಉಳಿಯುತ್ತದೆ ಎನ್ನುವಂತಿದೆ.
೬.ಪ್ರೇಮಾರ್ಜುನ ರವರ
ಅರಸಿ : ಅರಸಿಗೆ ಕೇಳುತ್ತಿರುವರು ಪ್ರೀತಿಯ ಅಮೃತವ ಬಡಿಸಲು ಅದು ಅವರಿಗೆ ಬೇಗ ದೊರೆಯಲಿ.
ವಿರಹಿ: ಅವಳಿಗೆ ಅಮೃತವ ಕೊಟ್ಟುರೂ ಈ ಪ್ರೀತಿಯಿಂದ ಕೈ ಸುಟ್ಟು ಕೊಂಡಿರುವರು.
೭.ಹಿರಿಸಾವೆ ರವರು
ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳನ್ನು ಕೊಡಿಸಿ ಒಳ್ಳೆಯ ಉಪ್ಪಿಟ್ಟು ಕವನ ತಯಾರಿಸಿರುವರು, ಅದನ್ನು ತಿಂದರೆ ಅಮೃತದಂತೆ ಎನ್ನುತ್ತಾರೆ.
೮. ಸಿದ್ದು ಸ್ವಾಮಿ ರವರ
ಸುರಕನ್ನೆ : ವಿರಹ ವೇದನೆ ಯ ಮನಕೆ ಅಮೃತ ವ ಉಣಿಸುವ ಪ್ರಯತ್ನ ಮಾಡಿದ್ದಾರೆ.
ಹರಿದು ಬಾ : ಒಲವಿನ ಅಣು ಅಣುವಿನಲ್ಲಿ ಅಮೃತವ ಹರಿಸುವಂತೆ ಬಯಸುತ್ತಾರೆ.
೯. ಸುಧಾ ರವರ
ಸರಿಸಾಟಿ : ಅಮ್ಮನ ಅಮೃತ ಅಪ್ಪನ ಒಲವಿಗೆ ಜಗದಲಿ ಯಾವುದು ಸರಿ ಸಾಟಿ ಇಲ್ಲವೆಂದು ಸಾರುತಿಹರು.
೧೦. ಚಂದ್ರಶೇಖರ ರವರ
ನನ್ನ ಅಮ್ಮ : ಅಮ್ಮನನ್ನು ಸರ್ವಸ್ವವನ್ನೂ ಧಾರೆ ಎಳೆದ ಅಮ್ಮನ ಅಮೃತ ಧಾರೆ ಎಂದಿದ್ದಾರೆ.
ಆ ಘಳಿಗೆ : ಮಡದಿಯ ಕೈ ಹಿಡಿದು ಘಳಿಗೆ ಅವರ ಪಾಲಿಗೆ ಅಮೃತ ಘಳಿಗೆಯಾಗಿದೆ ಎನ್ನುತ್ತಾರೆ.
೧೧. ಸಿ ಜಿ ವೆಂಕಟೇಶ ರವರ
ಅನ್ನ : ನಾಲ್ಕು ಸಾಲುಗಳಲ್ಲಿ ಅನ್ನವೇ ಅಮೃತ ಎಂದು ಸೊಗಸಾಗಿ ತಿಳಿಸಿದ್ದಾರೆ ಸೂಪರ್
ಅಮರ ಆತ್ಮರು : ಮಾನವನೇ ಮರುಗದಿರು ಕೊರದಿರು ಮಾನವ ನೀ ಅಮೃತ ಪುತ್ರ ಎಂದು ಹೇಳುತ್ತಾರೆ.
೧೨. ಡಾ.ಸುರೇಶ ರವರ
ಆಮಿಷ: ಅತೀ ಆಸೆ ಪಡಬಾರದು ಎಂದು ಚುಟುಕಿನಲ್ಲಿ ಚಿಟಿಕೆ ಯಾಗಿ ಹೇಳಿದ್ದಾರೆ.
ಸಿಹಿಮಾತು : ಮಾತು ಪರರ ನೊಯಿಸದಿರಲಿ ಎನ್ನುತ್ತಾ ಸಿಹಿ ಮಾತು ಅಮೃತ ಎನ್ನುತ್ತಾರೆ.
೧೩. ಮಾನಸಾ ಎ ಪಿ ರವರ
ಅಮೃತ ಪಾನ : ಗೆಳತಿಯ ಆಗಮನದಿಂದ ಬಾಳೆಲ್ಲ ಅಮೃತ ಪಾನವಾಗಿದೆ ಎನ್ನುವದು ಸುಂದರವಾಗಿದೆ.
ನಾಟಕ : ದೇವ ಮಾನವರಿಂದಲೂ ಅಮೃತ ಪಡೆಯುವುದಕ್ಕಾಗಿ ಎಷ್ಟೋ ನಾಟಕವಾಗಿದೆ ಎನ್ನುವ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.
೧೪. ಪ್ರಮೋದ ರವರ
ಪ್ರೇಮಾಮೃತ ಮತ್ತು ಜ್ಞಾನಾಮೃತ ಗಳು ಒಂದು ಪ್ರೇಮದ ಕುರಿತಾಗಿ ಮತ್ತೊಂದು ಆಧ್ಯಾತ್ಮದ ಕುರಿತಾಗಿ ಬರೆದಿರುವುದು ಚೆನ್ನಾಗಿದೆ.
೧೫. ಶಶಿವಸಂತ ರವರ
ಜೀವಾಮೃತ : ಜಲವು ಎಲ್ಲರ ಜೀವದ ಅಮೃತವೆಂದು ತಿಳಿಸುವ ಪ್ರಯತ್ನ ಮಾಡಿರುವರು.
ಸುಪ್ತ ಪ್ರೀತಿ : ಮಲಗಿದ್ದ ಎದೆಯೊಳಗೆ ಹನಿ ಪ್ರೀತಿಯು ಅಮೃತವಾಗಿದೆ ಎನ್ನುತ್ತಾರೆ.
೧೬.ಗೀತಾ ರವರ
ಅಮೃತ : ದಯೆ ಇಲ್ಲದವಗೆ ಅಮೃತವು ವ್ಯರ್ಥ ಎನ್ನುವರು.
೧೭. ಕಲಾಪ್ರಿಯ ರವರ
ಸಾಂತ್ವನ : ಸುಂದರ ಬದುಕಿಗೆ ತಾಯಿಯ ಪ್ರೀತಿಯ ಅಮೃತ ಒಂದೇ ಸಾಕು ಎನ್ನುವದು ಸತ್ಯ.
ಅಮೃತ ಸಿಹಿ ದನಿ: ಪ್ರಿಯತಮೆ ದನಿ ಯೇ ಅಮೃತ ಎನ್ನುವರು ಕವಿಗಳು.
೧೮.ಅಪರ್ಣ ರವರ
ನಿನ್ನ ನೆನಪು : ಬಣ್ಣದ ಅಕ್ಷರಗಳು ಮತ್ತು ನುಡಿಗಳು ಅಮೃತದ ಬಟ್ಟಲುಗಳು ಎನ್ನುತ್ತಾರೆ ತಮ್ಮ ಚುಟುಕಿನಲ್ಲಿ ಸುಂದರವಾಗಿದೆ.
ತಿಳಿಸು: ನೋವಿನಿಂದ ಅಮೃತದ ಪ್ರೀತಿಯು ಹೇಗೆ ವಿಷವಾಯಿತು ತಿಳಿಸು ಎಂದು ಪ್ರಶ್ನೆಯೇ ಚುಟುಕು.
೧೯.ಯತೀಶ ರವರ
ಅಮೃತ ಹಸ್ತ: ಗೆದ್ದರೆ ಅವನ ಕೈಗಳು ಅಮೃತ ಹಸ್ತದಂತೆ ಎನ್ನುತ್ತಿರುವರು.
ದೇವತೆಯ ಕೈಯಲ್ಲಿ ; ವಿಷವು ಸಹಾ ಅಮ್ಮ ನ ಕೈಯಿಂದ ಅಮೃತ ವಾಗುವದು ಇದು ನಿಜವಾದ ಮಾತು ಸರ್.
೨೦.ವರಲಕ್ಷ್ಮಿ ರವರ
ಬಡವರ ಬದುಕಿನಲ್ಲಿ ಗಂಜಿಯೇ ಅಮೃತ ಎನ್ನುವದು ಬಹಳ ನಿಜವಾದ ಮಾತು.
೨೧.ವಾಣಿ ರವರ
ಜಡ: ದೇಹ ಮೋಹ ದಾಹ ನೋವ ಪದಗಳ ಸರಿಯಾಗಿ ಜೋಡಿಸಿ ಚುಟುಕು ಬರೆಯುವ ಪ್ರಯತ್ನ.
ನಾನು : ನಾನು ಎನ್ನುವದು ಹಗಲು ಇರಳು ದಣಿದು ಕೊನೆ ಮಲಗುವದು ಆರಡಿಮೂರಡಿಯಲಿ ಎನ್ನುವದು ಚೆನ್ನಾಗಿದೆ.
೨೨.ಪ್ರೇಮ ರವರ
ಗೋಮಾತೆ : ಎಲ್ಲರೂ ತಾಯಿಯ ಹಾಲು ಅಮೃತ ಎನ್ನುತಾ ಚುಟುಕ ಬರೆದರೂ ಇವರು ವಿಭಿನ್ನ ವಾಗಿ ಗೋಮಾತೆ ಹಾಲು ಅಮೃತ ಎನ್ನುತ್ತಾರೆ ಕವಿಗಳು ಸುಂದರವಾಗಿದೆ.
ವಿಷ : ನಿಜ ಸರ್ ಈಗಿನ ಊಟವು ಬಹಳ ಕಲುಷಿತವಾಗಿದೆ ಎಂದು ತಿಳಿಸುವ ಪ್ರಯತ್ನ.
೨೩. ಅಂಬುಜ ರವರ
ದಿವ್ಯ ಔಷದ: ತಾಯಿಯ ಹಾಲು ಹಸು ಕಂದಮ್ಮಗಳಿಗೆ ದಿವ್ಯ ಔಷದ ಎನ್ನುವ ಸಂದೇಶ ಸಾರಿದ್ದಾರೆ.
ಆನಂದಿಸುವೆ: ಎಲ್ಲರ ಚುಟುಕು ಕವನಗಳ ಓದುವದೇ ಅಮೃತ ಕುಡಿದಂತೆ.
೨೪. ನಾ ಕನ್ನಡಿಗ ರವರ
ದಾಸನಾದೊಡೆ : ಚುಟುಕು ತುಂಬಾ ಚೆನ್ನಾಗಿದೆ. ಅಮೃತವ ಯಾರು ಯಾವಾಗ ಹೇಗೆ ಅಂದುಕೊಳ್ಳುತ್ತಾರೆ ಎನ್ನುವ ಸೊಗಸಾಗಿ ತಿಳಿಸಿರುವಿರಿ.
೨೫. ಭಾರತಿರವೀಂದ್ರ ರವರ
ಅಮ್ಮ : ಅಮ್ಮ ನ ಜೊತೆ ಮತ್ತು ಅಮ್ಮನ ಅಮೃತ ಹಸ್ತಕ್ಕೆ ಸಮನಾರು ಇಲ್ಲವೆಂದು ಸಾರಿಹರು.
ಹಸಿದಾಗ : ಬೇಸಿಗೆಯಲ್ಲಿ ನೀರು ಅಮೃತ ಹಸಿದಾಗ ಅನ್ನ ಅಮೃತ ಎಂದು ತಿಳಿಸುವ ಪ್ರಯತ್ನ.
೨೬.ಪ್ರಭಾಕರ ರವರ
ಅರಿಯದವರು : ಹಾಲು ಮೊಸರು ಜನಿಸಿದ ಸತ್ಯವನ್ನು ಚುಟುಕಿನಲ್ಲಿ ತಿಳಿಸಿದ್ದಾರೆ.
ಸರಾಯಿ : ಚುನಾವಣಿ ಕಾಲಕ್ಕೆ ಸರಾಯಿ ಅಮೃತ ನೋಟು ಪಡೆದು ಓಟು ಹಾಕುವ ಈಗಿನ ಸ್ಥಿತಿ ಯ ಅನಾವರಣವಾಗಿದೆ.
ಒಟ್ಟಿನಲ್ಲಿ ಎಲ್ಲಾ ಕವಿಗಳ ಚುಟುಕುಗಳು ಚೆನ್ನಾಗಿ ಮೂಡಿಬಂದಿವೆ. ಅವುಗಳ ಓದಿ ನನ್ನ ಅನಿಸಿಕೆ ಎರಡು ಸಾಲಿನಲ್ಲಿ ಬರೆಯುವ ಪ್ರಯತ್ನ ಮಾಡಿರುವೆ.
ಕವಿ ಭಾವ ಧಕ್ಕೆ ಯಾಗಿದ್ದಲ್ಲಿ ಕ್ಷಮಿಸಬೇಕು.
✍ಅರುಣಕುಮಾರ ಮ ನರಗುಂದ
ರಾಣಿಬೇನ್ನೂರ
9980178424.
[4/13, 8:15 AM] Wr Jabiulla Mulla: *ಸ್ಪರ್ಧೆಯ ವಿಷಯ*
*ಜಗದ್ರಕ್ಷಕ ಶ್ರೀಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಹೆಂಡತಿಯರು ಎಂಬುದು ಎಲ್ಲ ಬಲ್ಲವರು ಹೇಳಿದರೂ, ಸುರಸುಂದರಿ ಕೋಪಿಷ್ಟೆ ಸತ್ಯಭಾಮೆ ಎಂದರೆ ಕೃಷ್ಟನಿಗೆ ಅತಿಯಾದ ಪ್ರೀತಿ... ಅವಳ ಒಲಿಸಿಕೊಳ್ಳಲು ಭಾಮೆಯ ಕಾಲನ್ನೂ ಕೂಡಾ ಒತ್ತುತ್ತಾನೆ. ಗಂಡಸರಿಗೆ ಇದೇನು ಹೊಸತಲ್ಲ ಬಿಡಿ... ಸುಮ್ಮನೆ ಒಲಿದು ಬರುವ ಹೆಣ್ಣಿಗಿಂತ ಕೊಂಚ ಕೋಪಗೊಂಡ ಹೆಣ್ಣಿನ್ನು ರಮಿಸಿ ಒಲಿಸಿಕೊಳ್ಳುವುದರಲ್ಲಿ ಕೃಷ್ಣನಿಗೆ ಮಹದಾನಂದವಿತ್ತೆಂದು ಕಾಣುತ್ತದೆ. ಹೀಗೆ ಕೋಪಗೊಂಡ ಭಾಮೆಯನ್ನು ಕೃಷ್ಣನು ಪರಿಪರಿಯಾಗಿ ಹೊಗಳಿ ಒಲಿಸಿಕೊಳ್ಳುವ ಸಂದರ್ಭಕ್ಕೆ ಅಪರೂಪವೆಂಬಂತೆ ಅನುರೂಪವಾದ ಭಾವಗೀತೆ ಬರೆಯಿರಿ.*
*(ಉದಾಹರಣೆಗೆ ರವಿಚಂದ್ರ ಚಿತ್ರದ "ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ" ಗೀತೆ ಕೇಳಿ, ಆದರೆ ಅದರ ಶೈಲಿ ಇರಲಿ ಯಥಾ ನಕಲು ಮಾಡಬೇಡಿ.)*
ಜಬೀ ಗುರುಗಳೇ ನಮಸ್ತೆ...
ಭಾವಗೀತಾ ಸ್ಪರ್ಧೆಗೆ ತಾವು ನೀಡಿರುವ ಸಂದರ್ಭಕ್ಕೆ ತಕ್ಕಂತೆ ಗೀತೆ ರಚಿಸುವಲ್ಲಿ ಎಲ್ಲರ ಪ್ರಯತ್ನ ಉತ್ತಮವಾದುದಾಗಿದೆ... ಆದರೆ ಪಾಲ್ಗೊಳ್ಳುವರ ಸಂಖ್ಯೆ ಕಡಿಮೆ ಏಕೋ ತಿಳಿಯುತ್ತಿಲ್ಲ....
ಒಂದು ಕೆಲಸ ಮಾಡಿ... ಅಡ್ಮಿನ್ ದ್ವಯರಿಬ್ಬರ ಬಳಿ ಮಾತಾಡಿ ಸ್ವಲ್ಪ ದಿನ ಈ ವಾರದ ಸ್ಪರ್ಧೆಯನ್ನು ನಿಲ್ಲಿಸಿಬಿಡಿ... ಆನಂತರ ಅಡ್ಮಿನ್ ಗಳು ಹೇಗೆ ಹೇಳುತ್ತಾರೋ ಹಾಗೆ ಮುಂದುವರೆಯಬಹುದು... ಇದು ನನ್ನ ಅಭಿಪ್ರಾಯ...
ಇನ್ನು ತೀರ್ಪಿನ ವಿಚಾರಕ್ಕೆ ಬಂದರೆ...
*ನಿನ್ನ ನಲ್ಲ* ಉತ್ತಮವಾದ ಭಾವದಿಂದ ಕೂಡಿದ್ದರೂ, ಕೆಲವೆಡೆ ಸಾಲುಗಳು ಗದ್ಯವೆನಿಸುವಂತಿದೆ, ಹಾಡಲು ಕೂಡಾ ಸುಲಭವಾಗುವಂತಿಲ್ಲ... ಹಾಗಾಗಿ ಆಯ್ಕೆಗೆ ಪರಿಗಣಿಸುತ್ತಿಲ್ಲ...ಷ
*ನನ್ನೊಲುಮೆ* ಗೀತೆಯಂತಿರದೆ ಪ್ರಾಸಕ್ಕಾಗಿ ಜೋತುಬಿದ್ದ ಕವನವಾಗಿದೆ... ಸಾಲುಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ.... ಇದೂ ಕೂಡ ಆಯ್ಕೆ ಆಗುತ್ತಿಲ್ಲ...
*ಕೋಪ ಬಿಟ್ಟು ಬಾರೆ ಬಳಿಗೆ* ಭಾವಗೀತೆ ಬರೆಯುವ ಪ್ರಯತ್ನ ಮೊದಲ ಬಾರಿಯದು ಎನಿಸುವಂತಿದೆ... ಈ ಗೀತೆಯಲ್ಲೂ ಕೂಡಾ ಪ್ರಾಸಕ್ಕಾಗಿ ಪದಗಳ ಕೂಡಿಸಿದಂತಿದೆ, ಅಲ್ಲಲ್ಲಿ ಸಾಲುಗಳ ಅರ್ಥ ಅರ್ಥವಾಗದೇ ಯೋಚಿಸುವಂತಾಗುತ್ತದೆ... ಉಹು ಆಯ್ಕೆಯಾಗುತ್ತಿಲ್ಲ.
*ಕೋಪವ ಬಿಡು* ಒಂದು ಉತ್ತಮವಾದ ಪ್ರಯತ್ನ.... ಭಾವ ತುಂಬಿದ ಗೀತೆ.... ಆಯ್ಕೆಗೆ ಪರಿಗಣಿಸಿರುವೆ...
*ಬಿಂಕ ಬಿಡು ಭಾಮೆ* ಗೀತೆ ನೀವು ಉದಾಹರಣೆಗೆ ಕೊಟ್ಟಿರುವ ಚಿತ್ರಗೀತೆಯ ಪದಗಳನ್ನೇ ಆಯ್ದು ಜೊತೆಗೆ ಒಂದಷ್ಟು ಪದಗಳ ಸೇರಿಸಿ ಮಾಡಿದಂತಾ ಗೀತೆಯಾಗಿದೆ.... ಆಯ್ಕೆಯಾಗುತ್ತಿಲ್ಲ...
*ಬಾರೆ ಭಾಮೆ*... ಪ್ರಯತ್ನ ಚಂದವಿದೆ ಎಂದಷ್ಟೇ ಹೇಳಬಹುದು... ಗೀತೆಯ ಮೊದಲ ಚರಣದಲ್ಲಿ *ನಿನ್ನ ನನ್ನ ಮುದ್ದಿನ ಗಿಳಿ, ನನ್ನ ಅರಮನೆಯ ಗಿಳಿ* ಎಂಬ ಸಾಲುಗಳ ನೋಡಿದರೆ ಸುಮ್ಮನೇ ಏನೋ ಒಂದು ಗೀಚಿದರಾಯ್ತು ಎಂದು ಬರೆದಂತಿದೆ... *ನಿನ್ನ ಮನಸು ಹೂವಿನ ಮಲ್ಲೆ* ಎಂದು ಇನ್ನೊಂದು ಕಡೆ ಹೇಳುತ್ತಾರೆ... ಮಲ್ಲೆ ಅಂದರೆ ಹೂವು... ಈ ಹೂವಿನ ಮಲ್ಲೆ ಅಂದರೆ ಯಾವುದೋ ಕಾಣೆ... ಆಯ್ಕೆಗೆ ಯೋಗ್ಯವಲ್ಲ....
*ನಿವೇದನೆ*.... ಉತ್ತಮವಾದ ರಚನೆ ಮತ್ತು ಭಾವತುಂಬಿದ ಗೀತೆ ಆಗಿದೆ... ಬೇರೆಲ್ಲ ಗೀತೆಗಳ ನೋಡಿದ ಮೇಲೆ ಈ ಗೀತೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ... ಆಯ್ಕೆಗೆ ಪರಿಗಣಿಸಿರುವೆ...
*ಶುಭವಾಗಲಿ*
*ಧನ್ಯವಾದಗಳು*
[4/13, 11:40 AM] +91 99161 42983: ಪ್ರೇಮ್ ರವರ *ಬದುಕು* ಬಹಳ ಚೆಂದ ಮೂಡಿದೆ. ಸುಖ- ದುಃಖಗಳ ನಡುವಿನ ಸಂಧಾನ ಬದುಕು ಎಂದಿದ್ದಾರೆ.
ಸ್ವಾರ್ಥ ಸಣ್ಣತನಗಳ ಬಲಿದಾನ ವಾಗಿ ಸಹನೆ -ತ್ಯಾಗಗಳ ವರದಾನವಿದ್ದರೆ ಬದುಕೆಷ್ಟು ಶಾಂತಿಯುತವಲ್ಲವೆ..
*ಸಹಾಯ* ಹನಿಗವನ ಪ್ರಕೃತಿ ಹಾಗೂ ರೈತನ ನಡುವಿನ ಮೂಕಸಂಧಾನಕ್ಕೆ ಸಾಕ್ಷಿಯಾದಂತಿದೆ...ಭೂಮಿ ಬಾನಿನ ಪರಸ್ಪರ ಸಂಧಾನವನ್ನು ರೈತ ಅವಲಂಬಿಸಿ ಬದುಕುತ್ತಾನೆ ಎಂಬುದನ್ನು ಹನಿಹನಿಯಾಗಿ ಚೆಂದ ವರ್ಣಿಸಿ ಬರೆದಿದ್ದಾರೆ..
ಧನ್ಯವಾದಗಳು ಸರ್ ಒಳ್ಳೆಯವೆರಡು ಹನಿ ಕುಡಿಸಿದಿರಿ..
[4/13, 12:05 PM] +91 94498 10822: ಜೀವರಾಜ ಸರ್ ಅವರ,,,ವ್ಯವಸ್ಥೆ,,, ತೇಪೆಹಾಕು,,,ಅದ್ಭುತ ರಚನೆಗಳು,,,ನಿಮ್ಮ ಹನಿಗವನಗಳು ವ್ಯವಸ್ಥೆ ಗೆ ಹಿಡಿದ ಕೈಗನ್ನಡಿಗಳಿದ್ದಂತೆ,,,ಹಾಗೆಯೆ ನಿಮ್ಮ ಪದಬಂಧಗಳು,,,ನವ್ಯಕಾವ್ಯವನ್ನು ಬಿಂಬಿಸುತ್ತವೆ,,,,🙏
ಅಪರ್ಣಾ ಅವರ,,,ಜೀವನ,,,ಅಲಿಖಿತ ಸಂಧಾನ,,,ಸುಂದರ ಭಾವದ ಹನಿಗವನಗಳು,,,ಜೀವನದಲ್ಲಿ ಸಾಮರಸ್ಯ ಸಂಧಾನ ಆವಶ್ಯಕ ,,ಮದುವೆ ಅನ್ನು ವುದು ಅಲಿಖಿತ ಸಂಧಾನ,,, ನಿತ್ಯ ಸತ್ಯ,,,🙏
ಚಂದ್ರಶೇಖರ ಅವರ,,,ಕದನ ಸಂಧಾನಕ್ಕೆ ತಿರುಗಿದ್ದು ಮದುವೆಗೆ ದಿನಗಣನೆ ಪ್ರಾರಂಭವಾಗಿದೆ,ತಮ್ಮ ಬಾಳು ಬಂಗಾರವಾಗಲಿ
ಪ್ರೇಮ ಅವರ ,,ಬದುಕು,,ಸಹಾಯ,,ಹನಿಹನಿಗಳು ಬಲು ಸುಂದರ,,,ಹೊಂದಾಣಿಕೆ ಸಂಧಾನವೇ ಬದುಕು,,, ಭುವಿ ಮತ್ತು ರೈತನ ನಡುವಿನ ಸಂಧಾನ
ಸಾರ್ಥಕವಾದುದು🙏
ಯತೀಶ್ ಸರ್ ಅವರ ನಿದ್ರೆಯಲ್ಲಿ,,,ನಡೆದ ಸಂಧಾನ ಹಾಸ್ಯಮಯ ವಾಗಿದ್ದು ಅದ್ಭುತ ಕಲ್ಪನಾ ಶಕ್ತಿಯ ಪ್ರತೀಕ,,, ಶಕ್ತಿ ಪ್ರದರ್ಶನ ,,,ಮಹಾಭಾರತದ ಕಪಟ ನಾಟಕ ಸೂತ್ರಧಾರಿ ಶ್ರೀಕೃಷ್ಣ ಪರಮಾತ್ಮನ ಶಕ್ತಿ ಪ್ರದರ್ಶನ ಬಿಂಬಿಸುವಂತ ಪ್ರಯತ್ನ ಅದ್ಭುತ,,,🙏
[4/17, 8:34 AM] +91 99450 72718: ಪ್ರೇಮ್ ಸಾರ್ ನಿಮ್ಮ ಶಾಯರಿ ಅದ್ಭುತವಾಗಿದೆ
[4/17, 8:55 AM] +91 95905 78892: ಪ್ರೇಮ್ ಸಾರ್ ನಿಮ್ಮ ಶಾಯರಿ ಅದ್ಭುತವಾಗಿದೆ ಸೂಪರ್ ಸರ್
[4/17, 10:47 AM] Wr Yathish Kamaje: *ಚಂಪೂ* ರವರ ಎರಡೂ ಶಾಯರಿಗಳು ಚೆನ್ನಾಗಿ ವೆ
ಸ್ವಲ್ಪ ಹನಿಗವನದಂತೆ ಕಾಣುತ್ತದೆಯಾದರು ಮಾಡಿರುವ ಹೋಲಿಕೆ ಮತ್ತು ಪದಪುಂಜಗಳು ಮನಸೂರೆ ಗೊಳಿಸುತ್ತದೆ.
*ರಮೇಶ್* ರವರ ಎರಡೂ ಶಾಯರಿ ಹನಿಗವನದಂತೆ ಸಾಗಿದೆ.
*ಪ್ರೇಮಾರ್ಜುನರ* ಶಾಯರಿ ಗದ್ಯ ಶೈಲಿ ಯಲ್ಲಿದೆ.
*ಪ್ರೇಮ್* ಅವರ ಶಾಯರಿ ಚಂದವಿದೆ
ಸಹೇಲಿ ಎಂದರೆ?
ಎರಡನೇ ಶಾಯರಿ ಸಪ್ಪೆ ಎನಿಸಿತು.
*ದೇವಿದಾಸರ* ಶಾಯರಿಗಳು ಚೆನ್ನಾಗಿ ಇದೆ ಮೊದಲ ಶಾಯರಿಗೆ ಕೊನೆಯಲ್ಲಿ ಪಂಚ್ ಕೊಡಬಹುದಿತ್ತು.
*ಪ್ರಶಾಂತ್* ಸರ್ ಶಾಯರಿ ಅತ್ಯುತ್ತಮವಾಗಿದೆ👌👌
*ವರಲಕ್ಷ್ಮಿ* ಮೇಡಂ ಪ್ರಯತ್ನದಲ್ಲಿ ಇದ್ದಾರೆ👍
*ಕೋರಾಪುರವರ* ಶಾಯರಿ ಚೆನ್ನಾಗಿ ದೆ
*ಚಂದ್ರಶೇಖರ* ರ ಶಾಯರಿ ವಾಚ್ಯ ವಾಗಿದೆ.
*ಮಾನಸ* ರವರು ನಿನ್ನ ಕಣ್ಣೋಟ ಮನದಲಿ ಏರಿಸಿದೆ ನಶೆ ಎಂದರೆ ಸರಿ ಆಗುತ್ತಿತ್ತು.
*ಶ್ಯಾಮ* ಸರ್ ಸುಂದರವಾದ ಶಾಯರಿ
*ದಿವ್ಯರದು* ಪ್ರಯತ್ನ ಎನಿಸಿತು ಸುಂದರವಾಗಿದೆ
*ಸಿದ್ದು* ಸ್ವಾಮಿ ಅವರದು ಹನಿಗವನ ಆಗಿದೆ
*ಮಾನಸ* ಎಪಿ ಘಮ-ಸಮ ಚೆನ್ನಾಗಿದೆ.
*ಸುರೇಶರ* ಕೊನೆಯಲ್ಲಿ ಉತ್ತಮವಾದ ಪಂಚ್ ನೀಡಬಹುದಿತ್ತು.
*ಲಲಿತ* ಮೇಡಂ ಸಾಮರಸ್ಯ ಚೆನ್ನಾಗಿ ಇದೆ ಅಮಲು ಹನಿಗವನದತ್ತ ಸಾಗಿತು
*ರಜನಿಯವರ* ಶಾಯರಿ ಚೆನ್ನಾಗಿ ದೆ
*ರವಿಕುಮಾರ್* ಎರಡನೇ ನಿಶೆ ಸೂಪರ್ ಆಗಿದೆ ಪಕ್ಕ ಶಾಯರಿ ಎನಿಸಿತು👌👌.
ತಪ್ಪಿದ್ದರೆ ಮನ್ನಿಸಿ ಇವುಗಳು ನನ್ನ ಅಭಿಪ್ರಾಯ ಗಳಷ್ಟೆ🙏
ಕ್ಲಾಸ್ ತೆಗೋಬೇಡಿ😔
✍ಯತೀಶ್ ಕಾಮಾಜೆ
[4/18, 7:33 AM] +91 88618 88130: ಎಲ್ಲರಿಗೂ ನಮಸ್ಕಾರ
ಪ್ರೇಮ್ ಅವರ ಪ್ರಯತ್ನ ಉತ್ತಮವಾಗಿದೆ, ಆದರೆ ಶಾಯರಿಗಳಲ್ಲಿ ಮುಖ್ಯವಾಗಿ ಪಂಚ್ ಇರಬೇಕು... ಭಾವತೀವ್ರತೆ ಇರಬೇಕು ಎನ್ನುವುದು ಅಭಿಪ್ರಾಯ
ಪ್ರಯತ್ನ ಮುಂದುವರೆಸಿ...
[4/19, 6:03 PM] +91 96635 84827: ಶಾಯರಿಗಳು
1. ಮನವೇಕೆ ಇಂದು ಕಲುಷಿತವಾಗಿದೆ?
ಹೆಣ್ಣು ಮಕ್ಕಳ ಬಲಿಯಾಗಿದೆ!
ರಾಜಕೀಯದ ಕುತಂತ್ರವಿದು!
ಇಂಥ ಅಧಿಕಾರಶಾಹಿ ಕುತಂತ್ರಿಗಳ
ದಬ್ಬಿ ನೂಕಬಾರದೆ ಗುಂಡಿಗೆ?
2. ಹೃದಯ,ಈ ಮನ ,ಆ ಮನ
ಎಲ್ಲವೂ ಸ್ವಚ್ಛವಾಗಿರಿಸೋಣ
ನಮ್ಮ ಮಕ್ಕಳೂ ನಮ್ಮನ್ನೇ ನೋಡಿ
ಕಲಿಯುತ್ತಾರೆ ತಾನೇ..
ಅವರಿಗೆ ಮಾದರಿಯಾಗೋಣ..
@...@
ಸನ್ಮಿತ್ರರೇ..
ಶಾಯರಿ ೧..
ರಚನೆಯು ಕೇವಲ ಪ್ರಶ್ನೆಯ ಮಾತುಗಳಂತೆ ತೋರುತ್ತದೆ, ಆದರೂ ಕವಿಯಾಶಯ ಸಾಮಾಜಿಕ ಕಳಕಳಿಯನ್ನು ಹೊಂದಿದೆ, ದುಷ್ಡ ಸಮಾಜ ನಿರ್ಮಾಣಗೊಂಡಿದೆ, ಬ್ರಷ್ಟಾಚಾರ, ಕುತಂತ್ರ, ಅತ್ಯಾಚಾರ, ಗಲಭೆ, ಕೊಲೆ, ಅಶಾಂತಿ ಎಂಬ ರಕ್ಕಸಿ ಕೃತ್ಯಗಳಿಂದ ಮನ ನೊಂದು ವಿಚಲಿತಗೊಂಡ ಹತಾಶ ಭಾವದಿಂದ ಪ್ರಶ್ನಿಸುವ ಜಾಣ್ಮೆ ಇಲ್ಲಿದೆ..
೨
ಮುಂದಿನಾರಿನಂತೆ ಹಿಂದಿನಾರುಗಳು ಹೋಗುತ್ತವೆ. ತಾಯಂತೆ ಮಗಳು ನೂಲಿನಂತೆ ಸೀರೆ ಎಂಬಂತೆ.. ನಮ್ಮನ್ನು ನೋಡಿ ಸೂಕ್ಷ್ಮ ಮತಿಗಳಾದ ಮಕ್ಕಳು ಈ ಸಮಾಜದಲ್ಲಿ ಕಲಿಯುತ್ತಾರೆ, ಹಾಗಾಗಿ ನಾವುಗಳು ಸಭ್ಯರಾಗೋಣ, ಎಂಬಾಶಯ ಹೊತ್ತ ಸಾಲುಗಳು ಇವಾಗಿವೆ..
ಈ ಎರಡು ರಚನೆಗಳು ಚುಟುಕದಂತೆ ಕಾಣುತ್ತವೆ, ಶಾಯರಿಯಾಗಿ ರೂಪಿಸಲು ಸಾಕಷ್ಡು ಕಸರತ್ತು ಮಾಡಬೇಕು.. ಅದ್ಯಯನ ಬೇಕು.
ಕವಿ ತಾನು ಶಾಯರಿ ಕಲಿಯುವಲ್ಲಿ, ಶಬ್ದ ಬಳಕೆಯಲ್ಲಿ ಕೆಲವು ಕಡೆ ಗತ್ತಿಲ್ಲದಿರುವುದು, ಉತ್ತಮಪಡಿಸಲು ಸಾಲುಗಳ ಲಯದೆಡೆಗೆ ಗಮನ ಹರಿಸಬೇಕಿದೆ, ಭಾವನೆಗಳಿಗೆ ಒತ್ತು ಕೊಟ್ಡಿಲ್ಲ, ಭಾವನೆಗಳ ಬಗ್ಗೆ ಮತ್ತಷ್ಡು ಸರಸ ಹೆಚ್ಚಿಸಿಕೊಳ್ಳಬೇಕಾಗಿದೆ, ಕೇವಲ ೪-೮ ಸಾಲುಗಳಿಗೆ ಮಿತಿಗೊಳಿಸದೆ ಮುಂದುವರೆಸುವ ಪ್ರಯತ್ನ ಒಳ್ಳೆಯದು..
ಶಬ್ದ ಸಿಂಗಾರ, ಸಾಲು ತೋರಣ, ಭಾವನೆಗಳೈಸಿರಿ, ಪ್ರತಿಮಾತ್ಮಕತೆ, ವಸ್ತುವಿಷಯ, ನಿರೂಪಣೆ.. ಎಲ್ಲಾ ಒಳಗೊಂಡು..
೦೫/೧೦ ಅಂಕಗಳು ಪ್ರಾಪ್ತವಾಗಿವೆ.
ಮತ್ತಷ್ಡು ಪ್ರಯತ್ನ ಉತ್ತಮವೆಂತ ಹಾರೈಸುತ್ತ
ಶುಭಾಶಯಗಳೊಂದಿಗೆ..
🌸🌸🌸🌸🌸🌸🌸
[4/20, 7:39 AM] +91 99644 19639: ಪ್ರೇಮ್ ರವರ ಮೊದಲ ಶಾಯರಿ
ನಮ್ಮ ಪಯಣದ ಜಟಕಾ ಬಂಡಿಯ ಸಾರಥಿ ಕರೆದೊಯ್ಯುವಲ್ಲಿಗೆ ನಮ್ಮ ಪಯಣ. ಅದು ಮದುವೆಗೋ ಮಸಣಕೋ ನಮ್ಮರಿವಿಗೆ ಬಾರದು. ಇಂದಿನ ಮೋಸವಂಚನೆಯ ವಿಷ ವರ್ತುಲದಲ್ಲಿ ಬದುಕು ಅಸಾಧ್ಯ ಅನ್ನಿಸಿದರೂ ನಾಳೆ ಶುಭ ದಿನ ಬರುಬಹುದೆಂಬ ಆಶಾ ಗೋಪುರದಿಂದ ಬದುಕು ಮುಂದುವರೆಯುತ್ತದೆ ಎಂದು ಹೇಳಿ ಧೈರ್ಯ ತುಂಬುವ ನುಡಿಗಳು.
2ನೇ ಶಾಯರಿ
ಸ್ಶಾಶಾನ ವಾಸಿ ಶಿವ. ಆದ್ದರಿಂದ ಅದುವೆ ಅವನ ಮನೆ. ನಾವು ಅರಮನೆಯಲ್ಲಿ ವಾಸಿಸಿದರೂ ಮಸಣಕೆ ಹೋಗೋದು ತಪ್ಪದು.
ಅದರ ಬಗ್ಗೆ ತುಚ್ಛ ಬುದ್ದಿಯನ್ನು ಬಿಡಿರೆಂಬ ಹಿತನುಡಿ ಸುಂದರವೀಗಿದೆ.
ಇವು ಶಾಯರಿಗಳಾಗಿ ಕಾಣುತಿಲ್ಲ. ಹನಿಗವನದಂತಿದೆ.
ಧನ್ಯವಾದಗಳು
ಶ್ಯಾಮ ✍
[4/21, 5:26 PM] +91 81475 09143: ಶಾಯರಿ
1. ಮತ್ತೆ ಮತ್ತೆ
ಮಳೆ ಬಂತು
ಮಣ್ಣನೆಲ್ಲ
ಮೆಲ್ಲಮೆಲ್ಲನೆ
ಮೆತ್ತನೆಯಾಗಿ
ಮಾರ್ಪಡಿಸಿತು.
ಮೈದಾನವೆಲ್ಲ
ಮಿದುವಾಗಿ
ಮೈದುಂಬಿತು
ಮೇದಿನಿಯಂತು
ಮಳೆಯಿಂದಾಗಿ
ಮಿಂದು ಮಿಂದು
ಮುದಪಟ್ಟಳು..
ಮೈಮನಸು-
ಮನರಂಜಿಸಿತು.
ಮೋಹಕವಾದ
ಮೋಡದುಂಡೆ
ಮಳೆತರಿಸಿ
ಮರೆಯಾಯಿತು.!!!
ಮನಸೋಲ್ಲಾಸದಿ
ಮಹಾಜನತೆ
ಮಹಾದೇವಗೆ
ಮತ್ತೆಮತ್ತೆ
ಮಂಗಳಾರತಿ
ಮಾಡುತಿತ್ತು..
ಮಾತೆಯಂದದಿ
ಮಹಾದೇವನು
ಮೌನವಾಗೇ
ಮಳೆಯಿತ್ತನು!
ಮಳೆ
ಮಾತ್ರ
ಮೈದಳೆದು
ಮನಸೋ ಇಚ್ಛೆ
ಮೋಜಿಂದ
ಮರುಳಾಗಿ
ಮೇದಿನಿಯ
ಮೈಕಳೆಯ
ಮುದದಿಂದ
ಮುರಿಯುತ್ತಿತ್ತು!
@ಪ್ರೇಮ್@
................
ಸರ್,
ಇದು ಶಾಯರಿ ಅಂತೆ ಇಲ್ಲ....
ಇದು ಸುಮಧುರ ಸುಂದರ ಕವನ ಆಗಲು ಬಲು ಚಂದ..
ತುಂಬಾ ಚಂದ ಇದೆ ಚುಪರ್...
ಮನ ಕುಣಿಯುವಂತೆ ತಣಿಸುವಂತೆ ಆ ಮಣ್ಣಿನ ವಾಸನೆ...
ವಿಜ್ಞಾನಿಗಳು ಹೇಳುವಂತೆ ಜಗತ್ತಲ್ಲಿ ಅತ್ಯಂತ ಸುಗಂಧ ಎಂದು ಈ ಮಣ್ಣಿನ ವಾಸನೆ ಎಂದು ಹೇಳಿದ್ದಾರೆ...
ಅದು ಮಳೆಯ ಸಂದರ್ಭದಲ್ಲಿ....
🙏☺