ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-15
ಮೋದಿ ಅಧಿಕಾರಕ್ಕೆ ಬಂದಾಗಿಂದ ಅಂಗನವಾಡಿ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರೂ ಹೇಳುವ ವಾಕ್ಯ ಒಂದೇ.'ಸ್ವಚ್ಛ ಭಾರತ! ಆದರೆ ನಿಜವಾಗಿಯೂ ಭಾರತ ಸ್ವಚ್ಛವಾಗುತ್ತಿದೆಯೇ? ಆಗಿದೆಯೇ.. ತಿಳಿಯ ಬೇಕಾದರೆ ಮಂಗಳೂರಿನ ರಸ್ತೆಗಳಲ್ಲೊಮ್ಮೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೋಗಿ. ರಾತ್ರಿ ಪಾರ್ಸೆಲ್ ತಿಂದು ಉಳಿದುದನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ರಸ್ತೆಗೆ ತಂದು ಚೆಲ್ಲಿದ್ದನ್ನು ತಿನ್ನಲು ನಾ ಮುಂದು, ತಾ ಮುಂದು ಎಂದು ಹೆಗ್ಗಣಗಳು ಕುಸ್ತಿ ಮಾಡುತ್ತಿರುತ್ತವೆ!
ಪ್ರತಿಯೊಬ್ಬರ ಮನೆಯಲ್ಲಿ ಬಳಸಿ ಉಳಿದ ಶಾಂಪೂ ಬಾಟಲಿ, ಹಿಟ್, ಪೌಡರ್, ನೀರು, ಬಿಯರ್, ಜ್ಯೂಸ್, ಎಣ್ಣೆ, ಮದ್ದು, ಶೇವಿಂಗ್ ಕ್ರೀಮ್, ಜೆಲ್... ಹೀಗೆ ಇವುಗಳೆಲ್ಲವುಗಳ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಕವರ್ ಗಳು, ತುಂಡಾದ ಚಪ್ಪಲಿಗಳು, ಹಾಲಿನ ಪ್ಯಾಕೆಟ್, ಹಣ್ಣು ತರಕಾರಿಗಳ ಸಿಪ್ಪೆಗಳು, ಮೊಟ್ಟೆ ಸಿಪ್ಪೆ, ಮೂಳೆ, ಉಳಿದ ,ಕೊಳೆತ ತರಕಾರಿ,ಹಣ್ಣು ,ಆಹಾರ ಪದಾರ್ಥಗಳು, ಬ್ಯಾಗು, ಕೊಡೆ,ಹಳೆ ಬಟ್ಟೆಗಳು, ಥರ್ಮಾಕೂಲ್ ಶೀಟುಗಳು,.. ಒಂದೇ ಎರಡೇ..
ಎಲ್ಲಾ ಮನೆಯ ಈ ಎಲ್ಲಾ ವಸ್ತುಗಳನ್ನು ಡಂಪ್ ಮಾಡೋದು ಎಲ್ಲಿ? ಲಾರಿಯಲ್ಲಿ ತುಂಬಿಸಿ ಹಾಕೋದೆಲ್ಲಿಗೆ? ಪ್ರತಿ ಹಳ್ಳಿ, ಪಟ್ಟಣದಲ್ಲಿ ಸಂಸ್ಕರಣಾ ಘಟಕಗಳಿವೆಯೇ..? ಅಕ್ಷರಸ್ಥರೇ ಊಟವನ್ನು ಪ್ಲಾಸ್ಟಿಕ್ ಕವರೊಳಗೆ ಹಾಕಿ ಡಸ್ಟ್ ಬಿನ್ ಗೆ ಎಸೆಯುವುದನ್ನು ನೋಡಿದ್ದೇನೆ. ಅದನ್ನು ತಿನ್ನಲು ಒಂದೆಡೆ ನಾಯಿಗಳು ಕಚ್ಚಾಡಿದರೆ ಮತ್ತೊಂದೆಡೆ ಬೀದಿಗೆ ಬಿಟ್ಟ ದನಕರುಗಳು ಪ್ಲಾಸ್ಟಿಕ್ ಕವರ್ ಸಮೇತ ತಿನ್ನುತ್ತಿರುವ, ತಿಂದು ಸಾಯುತ್ತಿರುವ ದೃಶ್ಯ ಸರ್ವೇ ಸಾಮಾನ್ಯ.
ಪ್ರತಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿನ ಕಸದ ರಾಶಿ ನೋಡಿದರೆ ತಿಳಿಯುತ್ತದೆ, ಸ್ವಚ್ಛ ಭಾರತ ಹೇಗೆ ಸಾಧ್ಯ ಎಂದು! ಕಸದ ವಿಲೇವಾರಿ ಮತ್ತು ಸಂಸ್ಕರಣೆ, ಹಸಿಕಸ, ಒಣಕಸ ಬೇರ್ಪಡಿಸುವಿಕೆ ಇದು ಎಲ್ಲಾ ಮನೆಗಳಲ್ಲಿ ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ.. ಬಸ್ಸಿನಲ್ಲಿ ಪ್ಲಾಸ್ಟಿಕ್ ಕವರೊಳಗೆ ವಾಂತಿ ಮಾಡಿ ಆ ಕವರನ್ನು ಕಂಡ ಕಂಡಲ್ಲಿ ಬಿಸಾಡೋದೇ ತಾನೇ..? ಮತ್ತೆ ಹಿಡ್ಕೊಂಡು ಹೋಗ್ಲಿಕ್ಕಾಗ್ತದಾ..ಒಂದು ಸಣ್ಣ ವಿಚಾರ.ಚಾಕ್ಲೇಟ್ ಪೇಪರನ್ನು ಕಂಡ ಕಂಡಲ್ಲಿ ಬಿಸಾಕಬಾರದು, ಬ್ಯಾಗ್ ನಲ್ಲಿ ಹಾಕಿ ಮನೆಗೆ ತಂದು ವಿಲೇವಾರಿ ನಾವೆಷ್ಟು ಜನ ಮಾಡ್ತೇವೆ? ನಾವೆಷ್ಟು ಜನ ನಮ್ಮ ಮಕ್ಕಳಿಗೆ ಅದನ್ನು ಹೇಳಿ ಕೊಟ್ಟಿದ್ದೇವೆ? ನಾವೆಷ್ಟು ಪ್ಲಾಸ್ಟಿಕ್, ಪೇಪರ್, ವೇಸ್ಟ್ ಬಾಟಲಿಗಳು, ಬಟ್ಟೆ, ಚಪ್ಪಲಿ, ಸ್ಟೆಪ್ಲರ್ ಪಿನ್ ಗಳನ್ನು ಪರಿಸರಕ್ಕೆ ಬಿಸಾಡಿಲ್ಲ! ಪ್ರಕೃತಿಗೆ ಅದ್ಯಾವುದನ್ನೂ ಬಿಸಾಕುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳಲಾರೆವೇ.. ನೀವೇನಂತೀರಿ?
@ಪ್ರೇಮ್@
ನಿಜಕ್ಕೂ ಇದು ಅಚ್ಚರಿಯ ಸಂಗತಿ, ಆದರೆ ಸ್ವಚ್ಚ ಭಾರದ ಪ್ರತಿಯೊಬ್ಬನ ಎಡೆಯೊಳಗಿದ್ದರೆ ಮಾತ್ರ ಸಾಧ್ಯ....
ಪ್ರತ್ಯುತ್ತರಅಳಿಸಿನಿಮ್ಮ ಮಾತು ಸತ್ಯ ನಾವೆಲ್ಲ ಇತರಹದ ಬದುಕಿನವರೆ...
ಬದಲಾಗಬೇಕು ಒಂದು ದಿನ ಬದಲಾಗುತ್ತೆ ಕೆಟ್ಟ ದಿನ..
ಬದಲಾವಣೆ ಜಗದ ನಿಯಮ.