ಮಂಗಳವಾರ, ಏಪ್ರಿಲ್ 30, 2019

974. ಕಾರ್ಮಿಕ

ಕಾರ್ಮಿಕ

ಕಾರ್ಮಿಕರೆಲ್ಲರು ದೇಶದ ಮಡಿಲು
ತನ್ನದೆ ಕಾಯಕ ರಾಷ್ಟ್ರದ ಒಡಲು..

ಜನಮನಕೆ ಸಹಕಾರಿಯು ಕಾರ್ಮಿಕ
ತನ್ನಿಂದಲೆ ದೇಶ ಸೇವೆಯು ಮಾರ್ಮಿಕ
ತಾನೆಂದಂತೆ ಇಡೀ ದಿನ ಕೆಲಸ
ಉಣ್ಣುವ ಕೈಗಳ ದಿನನಿತ್ಯದ ದುಡಿತ//

ಕೆಲಸದಿ ಸಂತಸ ಕಾಣುವ ರೈತ,
ಇತರಗೆ ಉಣಿಸುವುದರಲೆ ತಾ ಮೈ ಮರೆತ.
ತನ್ನಯ ಕಾರ್ಯವು ಪರರಿಗೆ ಸೀಮಿತ.
ಕೆಲಸ ಕಾರ್ಯವದು ನಡೆವುದು ಸಂತತ//

ಕಾರ್ಮಿಕನ ಕೈಗದು ಇಲ್ಲವು ಆಯಾಸ,
ದುಡಿಯುವ ಕರಗಳಿಗೆ ನಿತ್ಯವು ಸಂತಸ,!
ಮನಃಶುದ್ಧಿಯೆ ನಮ್ಮ ಕೆಲಸಕೆ ಧೈರ್ಯವು,
ಚಿತ್ತ ಶುದ್ಧಿಯಿಂದ ಕೆಲಸವು ಹಗುರವು//

ಕಾರ್ಮಿಕನೇ ಭಾರತ ದೇಶದ ಜೀವಾಳ,
ಕಾಯಕ ಮಾಡುವ ಯೋಗಿಯೇ ವಿರಳ!
ಮಾಯದ ಜೀವನ ಸಾಧ್ಯವೆ ಇಲ್ಲವು!
ಕಾಯಕ ಮಾಡುತ ಬದುಕು ಆನಂದವು//
@ಪ್ರೇಮ್@
01.05.2019

973. ವಚನ-13

ವಚನ-13

ನೆರವಿನ ಮನೆಯೊಳು ಕುಳಿತಿಹ ತಂದೆಯು
ಮಕ್ಕಳ ನೋಡಿ ನಗುತಲಿ ಪೊರೆದು
ಬೇಕಾದುದ್ದನೆಲ್ಲ ನೀಡುತ ಮೆರೆವೆ,
ನಂಬಿದ ಭಕುತಗೆ ವರವನು ನೀಡುವೆ.

ತಂದೆ ತಾಯಿಯರ ಕಾರ್ಯವ ಮಾಡುವೆ,
ಸತ್ತಂತಿಹರನು ಬಡಿದೆಚ್ಚರಿಸುವೆ,
ಮನದೊಳು ಇಣುಕಿ ಬುದ್ಧಿಯ ಹೇಳುವೆ,
ತಪ್ಪಿಗೆ ಸರಿಯಾದ ಶಿಕ್ಷೆಯ ನೀಡುವೆ
ನಮ್ಮಯ ಕಾಯುತ ನೀನಿರುವೆ ಸದಾ ಶಿವಾ....
@ಪ್ರೇಮ್@
01.05.2019

962. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41
ರಜೆಯ ಮಜಾ ಅನುಭವಿಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪೋಷಕರೇ..ಬೇಸಿಗೆ ಶಿಬಿರ ಒಂದೆರಡು ದಿನದ ಮಟ್ಟಿಗೆ ತೊಂದರೆಯಿಲ್ಲ, ಮಕ್ಕಳು ಎಷ್ಟು ಕಲಿತರೂ ನಮಗೆ ಸಾಲದು. ಕ್ರಾಫ್ಟ್, ಸಂಗೀತ, ನೃತ್ಯ, ವಾದ್ಯ, ತಬಲ, ಅಬಾಕಸ್, ಸ್ಪೆಲಿಂಗ್, ಬ್ರೈನ್ ಪವರ್..ಹೀಗೆ ಕ್ಲಾಸ್ ಗಳಿಗೆ ಲೆಕ್ಕವೇ ಇಲ್ಲ..ಮಕ್ಕಳಿಗೆ ಸ್ವಾತಂತ್ರ್ಯ, ಸ್ವತಂತ್ರವಾಗಿ ತನ್ನದೇ ದೃಷ್ಟಿಯಲ್ಲಿ ಪರಿಸರ ವೀಕ್ಷಸಲು, ಪರಿಸರದಲ್ಲಿನ ವಿಸ್ಮಯಗಳನ್ನು ತಿಳಿದುಕೊಳ್ಳಲು, ಹೋಗಲಿ ಹಗಲು ರಾತ್ರಿ ಹೇಗೆಂದು ತಿಳಿಯಲೂ ಕೂಡಾ ಯೂಟ್ಯೂಬ್ ಸರ್ಚ್ ಮಾಡಿಯೇ ತಿಳಿಯುವ ಕಾಲ ಬಂದಿದೆ.
   ಮಕ್ಕಳನ್ನು ಕ್ಯೂರಿಯಾಸಿಟಿ ಇರುವ ಮಕ್ಕಳಾಗಲು, ಮಕ್ಕಳಾಗಿ ಯೋಚನೆ ಮಾಡಲು ಬಿಡಬೇಕೇ ಹೊರತು ನಮ್ಮ ತಲೆಯಲ್ಲಿರುವುದನ್ನೆಲ್ಲ ಅವರಿಗೆ ತುರುಕಿ ಅವರನ್ನು  ಫ್ರಿಜ್ಗಳ ಹಾಗೆಯೋ ಶಾಪಿಂಗ್ ಮಾಲ್ ಗಳ ಹಾಗೆಯೋ ಇರಿಸಬಾರದು. ಅಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಕೈಗೆಟಕುವ ದರದಲ್ಲಲ್ಲ, ಬದಲಾಗಿ ಆರೋಗ್ಯಕ್ಕೂ ಒಳ್ಳೆಯದಾದದ್ದು ಅದಲ್ಲ, ಶೋ ಮಾತ್ರ! ಮಕ್ಕಳು ಉಪಯುಕ್ತ , ಇತರರು ಅನುಕರಿಸುವಂಥವರಾಗಬೇಕೇ ಹೊರತು ಇತರರು ದೂರ ಇಡುವ ಸ್ವಭಾವದವರಾಗದಂತೆ ಇರಿಸಬೇಕು. ಅವರ ಆಲೋಚನೆಗಳಿಗೂ ಮಹತ್ವ ಅವಕಾಶ ಕೊಡುವಂತಾಗಬೇಕು. ಅವರಿಗೆ ಅವರ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಾಗ ಅವರು ಏನಾದರೂ ಸಾಧಿಸುವತ್ತ ಒಲವು ತೋರುತ್ತಾರೆ. ಆದರೆ ಬಲವಂತದಿಂದ ಎಲ್ಲವನ್ನೂ ಅವರೆಡೆಗೆ ತುರುಕಿದರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇರದೆ ಮೂಕರಾಗುತ್ತಾರೆ. ಎಗರಾಡುತ್ತಾರೆ, ಕಿರುಚಾಡುತ್ತಾರೆ. ತಮ್ಮ ಅಸಹಾಯಕತೆ ಹಾಗೂ ಅತೃಪ್ತಿಯನ್ನು ಎಲ್ಲಾ ಕಡೆ ಕಕ್ಕುತ್ತಾರೆ.
ಆದಕಾರಣ ಅವರಿಗೂ ಸ್ವಾತಂತ್ರ್ಯ ಸಿಗಲಿ. ಮಾನಸಿಕವಾಗಿ, ದೈಹಿಕವಾಗಿ ಅವರು ಸ್ವತಂತ್ರರಾಗಲು ಬಿಡೋಣ. ನೀವೇನಂತೀರಿ?
@ಪ್ರೇಮ್@

972. ಪಪ್ಪ

ಕೊನೆಕ್ಷಣದಿ ನನ್ನ ನೆನೆದ ಪಪ್ಪ

ಒಂಭತ್ತು ತಿಂಗಳ ಬಸುರಿ ನಾನು
ಒಂಟಿಯಾಗಿ ಬಸ್ಸು ಹತ್ತಿ ಹೋಗುವ ಧೈರ್ಯವಿಲ್ಲ!
ಕನಸಲ್ಲಿ ಬಂದರು ಪಪ್ಪ!
ಪಾಪ, ತುಂಬಾ ಉಷಾರಿರಲಿಲ್ಲ ಅವರಿಗೆ!

ಕರೆದರು ಮಗಳನ್ನು! ಸಾಧ್ಯವಾದಷ್ಟು ಜೋರಾಗಿ,
ತನ್ನ ಶಕ್ತಿ ಮೀರಿ ಜೋರಾಗಿ ಕರೆಯುತ್ತಲೇ ಇದ್ದರು,
ಮೊದಲು ಜೋರಿದ್ದ ಶಬ್ದ ಕೊನೆಗೆ ನಿಧಾನವಾಗುತ್ತಾ ಬಂತು,
ಸ್ವರ ನಡುಗುತಲಿತ್ತು, ಕೊನೆಗೆ ಅದು ಇಲ್ಲವಾಯ್ತು!!!

ನಾನು ಎದ್ದೆ, ಅದು ನನ್ನ ಕನಸಾಗಿತ್ತು,
ಅಲ್ಲ, ಅದು ಕನಸಾಗಿರಲಿಲ್ಲ,
ನಿದ್ದೆಯಲ್ಲಿ ಕಂಡ ಸತ್ಯವಾಗಿತ್ತು!
ಅತ್ತು ಅತ್ತು ನನ್ನ ಕಣ್ಣುಗುಡ್ಡೆ ದೊಡ್ಡದಾಗಿತ್ತು!

ನಾನು ಅಸಹಾಯಕಳಾಗಿದ್ದೆ,
ಅಮ್ಮನಿಗೆ ಫೋನ್ ಮಾಡೋಣವೆಂದರೆ ನೆಟ್ವರ್ಕ್ ಸಿಗಲಿಲ್ಲ,
ಗಂಡನಿಗೆ ಫೋನ್ ಮಾಡಿ ಹೋಗಿ ಅಪ್ಪನನ್ನು ನೋಡಿ ಬರಲು ತಿಳಿಸಿದೆ!
ಮರುದಿನ ನನ್ನ ಸೀಮಂತ!
ಪಪ್ಪ, ಅಮ್ಮನಿಗೆ ಬರಲಾಗಲಿಲ್ಲ,
ನನ್ನನ್ನು ದೊಡ್ಡಮ್ಮನೊಡನೆ ಅಜ್ಜಿ ಮನೆಗೆ ಕರೆದುಕೊಂಡು ಹೋದರು!

ಅದರ ಮರುದಿನ ಪಪ್ಪನನ್ನು ನೋಡಲು ಕರೆದುಕೊಂಡು ಹೋಗುತ್ತೇನೆಂದರು ಮಾವ!
ಅವತ್ತೆ ರಾತ್ರಿ, ರಾತ್ರಿ ಹನ್ನೆರಡು ಗಂಟೆಗೆ ಬಾಗಿಲು ಬಡಿದ ಶಬ್ದವಾಯಿತು!
ಹಲವಾರು ದಿನಗಳಿಂದ ಉಷಾರಿಲ್ಲದ ಪಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು!
ಕೊನೆಗೂ ಪಪ್ಪನನ್ನು ಜೀವಂತ ನೋಡಲು ಆಗಲೇ ಇಲ್ಲ!
ಆ ನೋವು ನನ್ನ ಸದಾ ಕಾಡುತ್ತಲೇ ಇದೆ..
ಇಂದು, ಈಗಲೂ, ಮುಂದೂ...

@ಪ್ರೇಮ್@
01.05.2019

ಸೋಮವಾರ, ಏಪ್ರಿಲ್ 29, 2019

962. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41
ರಜೆಯ ಮಜಾ ಅನುಭವಿಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪೋಷಕರೇ..ಬೇಸಿಗೆ ಶಿಬಿರ ಒಂದೆರಡು ದಿನದ ಮಟ್ಟಿಗೆ ತೊಂದರೆಯಿಲ್ಲ, ಮಕ್ಕಳು ಎಷ್ಟು ಕಲಿತರೂ ನಮಗೆ ಸಾಲದು. ಕ್ರಾಫ್ಟ್, ಸಂಗೀತ, ನೃತ್ಯ, ವಾದ್ಯ, ತಬಲ, ಅಬಾಕಸ್, ಸ್ಪೆಲಿಂಗ್, ಬ್ರೈನ್ ಪವರ್..ಹೀಗೆ ಕ್ಲಾಸ್ ಗಳಿಗೆ ಲೆಕ್ಕವೇ ಇಲ್ಲ..ಮಕ್ಕಳಿಗೆ ಸ್ವಾತಂತ್ರ್ಯ, ಸ್ವತಂತ್ರವಾಗಿ ತನ್ನದೇ ದೃಷ್ಟಿಯಲ್ಲಿ ಪರಿಸರ ವೀಕ್ಷಸಲು, ಪರಿಸರದಲ್ಲಿನ ವಿಸ್ಮಯಗಳನ್ನು ತಿಳಿದುಕೊಳ್ಳಲು, ಹೋಗಲಿ ಹಗಲು ರಾತ್ರಿ ಹೇಗೆಂದು ತಿಳಿಯಲೂ ಕೂಡಾ ಯೂಟ್ಯೂಬ್ ಸರ್ಚ್ ಮಾಡಿಯೇ ತಿಳಿಯುವ ಕಾಲ ಬಂದಿದೆ.
   ಮಕ್ಕಳನ್ನು ಕ್ಯೂರಿಯಾಸಿಟಿ ಇರುವ ಮಕ್ಕಳಾಗಲು, ಮಕ್ಕಳಾಗಿ ಯೋಚನೆ ಮಾಡಲು ಬಿಡಬೇಕೇ ಹೊರತು ನಮ್ಮ ತಲೆಯಲ್ಲಿರುವುದನ್ನೆಲ್ಲ ಅವರಿಗೆ ತುರುಕಿ ಅವರನ್ನು  ಫ್ರಿಜ್ಗಳ ಹಾಗೆಯೋ ಶಾಪಿಂಗ್ ಮಾಲ್ ಗಳ ಹಾಗೆಯೋ ಇರಿಸಬಾರದು. ಅಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಕೈಗೆಟಕುವ ದರದಲ್ಲಲ್ಲ, ಬದಲಾಗಿ ಆರೋಗ್ಯಕ್ಕೂ ಒಳ್ಳೆಯದಾದದ್ದು ಅದಲ್ಲ, ಶೋ ಮಾತ್ರ! ಮಕ್ಕಳು ಉಪಯುಕ್ತ , ಇತರರು ಅನುಕರಿಸುವಂಥವರಾಗಬೇಕೇ ಹೊರತು ಇತರರು ದೂರ ಇಡುವ ಸ್ವಭಾವದವರಾಗದಂತೆ ಇರಿಸಬೇಕು. ಅವರ ಆಲೋಚನೆಗಳಿಗೂ ಮಹತ್ವ ಅವಕಾಶ ಕೊಡುವಂತಾಗಬೇಕು. ಅವರಿಗೆ ಅವರ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಾಗ ಅವರು ಏನಾದರೂ ಸಾಧಿಸುವತ್ತ ಒಲವು ತೋರುತ್ತಾರೆ. ಆದರೆ ಬಲವಂತದಿಂದ ಎಲ್ಲವನ್ನೂ ಅವರೆಡೆಗೆ ತುರುಕಿದರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇರದೆ ಮೂಕರಾಗುತ್ತಾರೆ. ಎಗರಾಡುತ್ತಾರೆ, ಕಿರುಚಾಡುತ್ತಾರೆ. ತಮ್ಮ ಅಸಹಾಯಕತೆ ಹಾಗೂ ಅತೃಪ್ತಿಯನ್ನು ಎಲ್ಲಾ ಕಡೆ ಕಕ್ಕುತ್ತಾರೆ.
ಆದಕಾರಣ ಅವರಿಗೂ ಸ್ವಾತಂತ್ರ್ಯ ಸಿಗಲಿ. ಮಾನಸಿಕವಾಗಿ, ದೈಹಿಕವಾಗಿ ಅವರು ಸ್ವತಂತ್ರರಾಗಲು ಬಿಡೋಣ. ನೀವೇನಂತೀರಿ?
@ಪ್ರೇಮ್@

969. ನ್ಯಾನೋ ಕತೆ-18-ಭರವಸೆ

ನ್ಯಾನೋ ಕತೆ

ಭರವಸೆ

ನಾಲ್ಕು ಜನರ ಹಾಗೆ ಬದುಕಬೇಕೆಂದು ಆಸೆಪಟ್ಟಿದ್ದ ಮೋಹಿನಿಯ ಬಾಳಿನಲ್ಲೀಗ ಭರವಸೆಯ ಬಿರುಗಾಳಿ ಬೀಸತೊಡಗಿದೆ. ಹಿಡಿದ ಸಣ್ಣ ತಿಂಡಿಯ ವ್ಯಾಪಾರ ಕೈ ಹಿಡಿದು ಬೇಡಿಕೆ ಅಪಾರವಾಗಿದೆ. ಕಷ್ಟ ಪಟ್ಟು ಪ್ರಾರಂಭಿಸಿದ ದುಡಿಮೆ ಫಲ ನೀಡುತಿದೆ. ಊರಿನಿಂದ ರುಚಿ ಇತರ ಊರುಗಳಿಗೂ ಸಾಗಿ ಮನ್ನಣೆಗಳಿಸಿದೆ. ಬದುಕಿಗೆ ಇನ್ನೇನು ತಾನೇ ಬೇಕು. ಬಾಳಲಿ ಜೊತೆಯಾಗಲು ಮೋಹನ ಕಾದು ಕುಳಿತಿದ್ದಾನೆ!
@ಪ್ರೇಮ್@
30.04.2019

970. ವಚನ-12

ವಚನ-12

ಮನಕೆ ಮನದ ವಿಶ್ವಾಸ!
ಹೃದಯಕೆ ಹೃದಯದ ವಿಶ್ವಾಸ,
ಮನುಜಗೆ ಮನುಜನೊಳಿರಬೇಕು ವಿಶ್ವಾಸ,
ಮನುಷ್ಯತ್ವವ ಪಾಲಿಸುವಲಿ ಬೇಕು ವಿಶ್ವಾಸ!
ಬದುಕು ನಿಂತಿಹುದು ವಿಶ್ವಾಸದ ಮೇಲೆ..
ಸರ್ವರಿಗೆ ನಿನ್ನೊಳಿರಲು ವಿಶ್ವಾಸ ನೀ ಕಾಯುವೆ ಶಿವಾ...
@ಪ್ರೇಮ್@
30.04.2019

968. ಹನಿಗವನ-ಬಾಂಧವ್ಯ

ಹನಿಗವನ -ಬಾಂಧವ್ಯ

ನಮ್ಮಿಬ್ಬರದು ಸುಮಧುರ ಬಾಂಧವ್ಯ
ಅಲ್ಲಿ ನಾನು ನೀನು ಮಧುರ ಕಾವ್ಯ!
ನಾ ಚರಣವಾದರೆ ನೀ ಪಲ್ಲವಿ..
ಪ್ರೀತಿಯಿಂದಲೇ ನೀ ಇದ ಕಟ್ಟಿರುವಿ!!

ಮನೆ ಮಠವೇಕೆ ಪ್ರೀತಿಯ ನಡುವೆ
ಹಂಗಿಲ್ಲದೆ ಬದುಕೆ ಇನ್ಯಾರ ಗೊಡವೆ?
ತುತ್ತು ಅನ್ನ, ನೀರು ಸಾಕು
ಪ್ರೇಮದಲೆ ಒಗ್ಗರಣೆ ಹಾಕು!

@ಪ್ರೇಮ್@
23.04.2015

967. ಹನಿಗವನ

ಹನಿಗವನ- ಕೆಂಪು ದೀಪದ ಹೂವು

ನೀ ಮುಡಿದು ಜಾರಿದ ಹೂವು!!
ಬೇಡ ಯಾರಿಗೂ ಗೆಳೆತನದ ಕಾವು!!
ಕೊಡಲಿಲ್ಲ ಯಾರಿಗೂ ನೋವು..!
ನೋಡಲಿಚ್ಛಿಸರು ನಿನ್ನ ಮುಂಜಾವು..!

ಮನೆಯ ಕಷ್ಟಕೆ ನೀನಾಗಿಹೆ ಕಲ್ಪ,
ಸೌರಭ ಬೀರದ ನಂದಿಹ ಪುಷ್ಪ!
ಹಣವದು ಬೇಕು, ನೀ ಮಾತ್ರ ಅಲ್ಪ!
ನಿನ್ನ ಬದುಕ ಬಗ್ಗೆ ನೀ ನೋಡಿಕೋ ಸ್ವಲ್ಪ!!

@ಪ್ರೇಮ್@
24.04.2019

966. ಹೇಗೆ ತೀರಿಸಲಿ?

ತೀರಿಸಲಿ ಹೇಗೆ?

ಹೊತ್ತ ತಾಯ್ನಾಡ ಋಣ ತೀರಿಸಲಿ ಹೇಗೆ?
ಹೆತ್ತ ತಾಯಿಗೆ ಗೌರವ ಕೊಡಲಿ ಹೇಗೆ?
ಸಾಕಿದ ತಂದೆಗೆ ಉಡುಗೊರೆ ಕೊಡಲಿ ಏನು?
ಬೆಳೆಸಿದ ಅಜ್ಜಿಗೆ ಮುದ ನೀಡಲಿ ಹೇಗೆ?

ಮಂಜಿನ ಮಳೆಯನು ಸುರಿಸದೆ
ಬೆಂಕಿಯ ಬರಹವ ಬರೆಯದೆ
ಮುಂದಾಲೋಚನೆಯಲಿ, ನಲುಗುವಂತಾಗದೆ
ಮುಸುಕಿನ ಪರದೆಯ ಸರಿಸುತಲಿ...

ಪಯಣದ ಬಾಳಲಿ ನೆನಪಲಿ ಸಾಗುತ
ಪಂಜರದೊಳಗಿನ ಪಕ್ಷಿಯಂತಿರಿಯಸದೆ,
ಪೃಥ್ವಿಯ ಮೇಲೆ ನಲಿದಾಡುತ ಬದುಕುತ,
ಅಂಬರವೇರುವ ಸಂತಸ ತಾಳುತ!

ಬಾಳುವೆ ಕೊಟ್ಟ ಸರ್ವಗೆ ಶರಣು!
ಕಾಯುತಲಿರುವ ಯೋಧಗೆ ನಮನ!
ಪೊರೆಯುತಲಿರುವ ದೇವಗೆ ಕೈಜೋಡಿಪೆ.
ತಿದ್ದುತ ಅಕ್ಷರ ಕಲಿಸಿದ ಗುರುವಿಗೂ ವಂದಿಪೆ!

ನಿಮ್ಮಯ ಪ್ರೀತಿಗೆ ಚಿರಋಣಿ ನಾನು
ಬಾಗುತ ಪೊಡಮಡುವೆನು ಸಕಲರಿಗೆ
ಏನನು ಕೊಡಲು ಕಡಿಮೆಯು ಅದುವೆ
ನನ್ನನೆ ನಾನರ್ಪಿಸಿ ಕೊಳ್ಳುವುದು ಸರಿಯೇನೋ...

@ಪ್ರೇಮ್@
25.04.2019

965. ಸತ್ಯಸಂಧತೆ

ಸತ್ಯಸಂಧತೆ

ಮಾವಿನ ತಳಿರದು ಹಸಿರಾಗಿರುವಂತೆ
ಮಾತಲು ಬೇಕು ಹಸಿರಿನ ಛಾಯೆ!
ಅಮೃತ ಕಲಶದ ಹೆಸರಿದ್ದೊಡೆಯೇನು,
ಅಮೃತವದರಲಿ ಸುರಿದೊಡೆ ತಾನೇ ಮಾಯೆ!!

ಬಾಳಲಿ ಬೇಡವೆ ಸತ್ಯದ ಕಾವು,
ನೋವಲಿ ನಗುವು, ನಗುವಲಿ ಅಳುವೂ!
ಬಯಸದೆ ಬರುವನು ಸಾವಿನ ನೆಂಟ!
ಎಲ್ಲರ ಒಳಗೂ ಇಹನೊಬ್ಬ ತುಂಟ!!

ಊರಿಗೆ, ದೇಶಕೆ ಸುಳ್ಳನು ಅರುಹಿಯು,
ನಿನ್ನ ಹೃದಯದ ಜೊತೆ ಬಚ್ಚಿಡಲಾರೆ!
ಮೂಟೆಯ ಕಟ್ಟಿ ,ಸುಳ್ಳನು ಎಸೆಯೋ,
ಸತ್ಯವ ಹೇಳುತ ಬಾಳಲಿ ಬೆಳೆಯೋ...

ಕುರುಡನಿಗೂ ಕಣ್ಣಾದುದು ಸತ್ಯ!
ಕಿವುಡನಿಗೂ ಕಿವಿಯಾದುದು ಸತ್ಯ!
ಮಿಥ್ಯದ ಬಾಗಿಲ ತೆರೆಯಲೇ ಬೇಡ!
ಅಲ್ಲೇ ಊರಾಚೆ ಅದು ಕೊನೆಯಾಗಲಿ ನೋಡಾ!!
@ಪ್ರೇಮ್@
26.04.2019

964. ಶಾಯರಿ-13

ಶಾಯರಿ

ನನ್ನ ಬಾಳದು ನಿನ್ನ ಸೇರಿ ನಂದನ!
ನಿನ್ನ ತನುವದು ನನ್ನ ಮನದೊಳು ಬಂಧನ!
ನಮ್ಮೀ ಬದುಕು ನಿತ್ಯ ಪ್ರೇಮದ ಚೇತನ!
ನಾಡಿ ಮಿಡಿತದೊಳು ಮೌನ ರಾಗದ ನರ್ತನ!!
ಇಷ್ಟು ನಾ ನಿನ್ನ ಹೊಗಳಲು ಕಾರಣ,
ನನ್ನೀ ಗೊರಿಲ್ಲಾದಂಥ ಕರಿ ವದನ!!!
@ಪ್ರೇಮ್@
18.04.2019

963. ಶಾಯರಿ-12

ಶಾಯರಿ..

ಕೆಂಪು ಗುಂಡಿ ಒತ್ತಿದರೆ
ಬಾಗಿಲು ತೆರೆದುಕೊಳ್ಳುವುದೆಂದರು...
ರಂಗನಿಗೆ ಪರೀಕ್ಷಿಸುವ ಮನಸಾಯ್ತು!
ಒತ್ತಿ ಕಾದು ಕುಳಿತ ಪೋರ!
ತಿಳಿಯಿತು ಕೊನೆಗೆ ಬಾಗಿಲು ತೆರೆಯದಾಗ!
ಒತ್ತಿದ್ದು ಪಕ್ಕದ ಆಂಟಿಯ ದೊಡ್ಡ ಸಿಂಧೂರ!!!!
@ಪ್ರೇಮ್@
20.04.2019

962. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41
ರಜೆಯ ಮಜಾ ಅನುಭವಿಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪೋಷಕರೇ..ಬೇಸಿಗೆ ಶಿಬಿರ ಒಂದೆರಡು ದಿನದ ಮಟ್ಟಿಗೆ ತೊಂದರೆಯಿಲ್ಲ, ಮಕ್ಕಳು ಎಷ್ಟು ಕಲಿತರೂ ನಮಗೆ ಸಾಲದು. ಕ್ರಾಫ್ಟ್, ಸಂಗೀತ, ನೃತ್ಯ, ವಾದ್ಯ, ತಬಲ, ಅಬಾಕಸ್, ಸ್ಪೆಲಿಂಗ್, ಬ್ರೈನ್ ಪವರ್..ಹೀಗೆ ಕ್ಲಾಸ್ ಗಳಿಗೆ ಲೆಕ್ಕವೇ ಇಲ್ಲ..ಮಕ್ಕಳಿಗೆ ಸ್ವಾತಂತ್ರ್ಯ, ಸ್ವತಂತ್ರವಾಗಿ ತನ್ನದೇ ದೃಷ್ಟಿಯಲ್ಲಿ ಪರಿಸರ ವೀಕ್ಷಸಲು, ಪರಿಸರದಲ್ಲಿನ ವಿಸ್ಮಯಗಳನ್ನು ತಿಳಿದುಕೊಳ್ಳಲು, ಹೋಗಲಿ ಹಗಲು ರಾತ್ರಿ ಹೇಗೆಂದು ತಿಳಿಯಲೂ ಕೂಡಾ ಯೂಟ್ಯೂಬ್ ಸರ್ಚ್ ಮಾಡಿಯೇ ತಿಳಿಯುವ ಕಾಲ ಬಂದಿದೆ.
   ಮಕ್ಕಳನ್ನು ಕ್ಯೂರಿಯಾಸಿಟಿ ಇರುವ ಮಕ್ಕಳಾಗಲು, ಮಕ್ಕಳಾಗಿ ಯೋಚನೆ ಮಾಡಲು ಬಿಡಬೇಕೇ ಹೊರತು ನಮ್ಮ ತಲೆಯಲ್ಲಿರುವುದನ್ನೆಲ್ಲ ಅವರಿಗೆ ತುರುಕಿ ಅವರನ್ನು  ಫ್ರಿಜ್ಗಳ ಹಾಗೆಯೋ ಶಾಪಿಂಗ್ ಮಾಲ್ ಗಳ ಹಾಗೆಯೋ ಇರಿಸಬಾರದು. ಅಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಕೈಗೆಟಕುವ ದರದಲ್ಲಲ್ಲ, ಬದಲಾಗಿ ಆರೋಗ್ಯಕ್ಕೂ ಒಳ್ಳೆಯದಾದದ್ದು ಅದಲ್ಲ, ಶೋ ಮಾತ್ರ! ಮಕ್ಕಳು ಉಪಯುಕ್ತ , ಇತರರು ಅನುಕರಿಸುವಂಥವರಾಗಬೇಕೇ ಹೊರತು ಇತರರು ದೂರ ಇಡುವ ಸ್ವಭಾವದವರಾಗದಂತೆ ಇರಿಸಬೇಕು. ಅವರ ಆಲೋಚನೆಗಳಿಗೂ ಮಹತ್ವ ಅವಕಾಶ ಕೊಡುವಂತಾಗಬೇಕು. ಅವರಿಗೆ ಅವರ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಾಗ ಅವರು ಏನಾದರೂ ಸಾಧಿಸುವತ್ತ ಒಲವು ತೋರುತ್ತಾರೆ. ಆದರೆ ಬಲವಂತದಿಂದ ಎಲ್ಲವನ್ನೂ ಅವರೆಡೆಗೆ ತುರುಕಿದರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇರದೆ ಮೂಕರಾಗುತ್ತಾರೆ. ಎಗರಾಡುತ್ತಾರೆ, ಕಿರುಚಾಡುತ್ತಾರೆ. ತಮ್ಮ ಅಸಹಾಯಕತೆ ಹಾಗೂ ಅತೃಪ್ತಿಯನ್ನು ಎಲ್ಲಾ ಕಡೆ ಕಕ್ಕುತ್ತಾರೆ.
ಆದಕಾರಣ ಅವರಿಗೂ ಸ್ವಾತಂತ್ರ್ಯ ಸಿಗಲಿ. ಮಾನಸಿಕವಾಗಿ, ದೈಹಿಕವಾಗಿ ಅವರು ಸ್ವತಂತ್ರರಾಗಲು ಬಿಡೋಣ. ನೀವೇನಂತೀರಿ?
@ಪ್ರೇಮ್@

961. ವಚನ-11

ವಚನ-11

ಭರತ ಭೂಮಿಯೊಳ್ ಗೌರವ ಹೆಣ್ಣಿಗೆ
ಪದದೊಳ್ ಮಾತ್ರ ಕಂಡಿಹೆನು
ಕಾರ್ಯದೊಳೆಂದೂ ಕಾಣದಾದೆ ಶಿವಾ...
@ಪ್ರೇಮ್@

960. ವಚನ-10

ವಚನ-10

ಹೊಸಯುಗದಲಿ ಎದುರು ಮಾತನಾಡದವ
ಜಂಗಮಗಂಟೆಯಲಿ ಗೆಳೆಯನಾಗುವ..
ಕೈಯಲ್ಲಿ ಕಂಪ್ಯೂಟರ್ ಹಿಡಿದವ
ಬದುಕಲ್ಲಿ ಸಿರಿವಂತನೆನಿಸುವ..
ಒಳ್ಳೆ ಮನಕೆ ಜಾಗವೆಲ್ಲಿಯದೋ ಶಿವಾ?

@ಪ್ರೇಮ್@
24.04.2019

959. ವಚನ-6

ವಚನ-6

ದಯೆಯಿಲ್ಲದ ಧರ್ಮ ವ್ಯರ್ಥವಾದಂತೆ
ಕನಿಕರವಿಲ್ಲದ ಬಾಳು ವ್ಯರ್ಥ!
ಸಹನೆಯಿಲ್ಲದ ಮನವೂ ವ್ಯರ್ಥ ಶಿವಾ!
@ಪ್ರೇಮ್@
25.04.2019

958. ವಚನ-7

ವಚನ-7

ವಸುಧೆಯೊಳಗೆ ವ್ಯಸನಕೆ
ದಾಸನಾಗಿ ಬದುಕಿದೊಡೆ
ಬದುಕಿನೊಳು ವಿಷಹೊಕ್ಕಿ
ಪಶುವಿಗಿಂತ ಕೀಳಾಗಿ ,
ಬಹುಜನರಿಂದ ಬೇರಾಗಿ,
ಬಾಳ ಸವೆಸಬೇಕಾಗುವುದು ಶಿವಾ..
@ಪ್ರೇಮ್@
26.04.2019

971. ಪ್ರೀತಿ ಹಕ್ಕಿ

ಪ್ರೀತಿಹಕ್ಕಿ

ನನ್ನೆದೆಯ ಹಕ್ಕಿಯದು ಹಾರಿದೆ
ನಿನ್ನೊಲವತ್ತ...
ಅತ್ತಿತ್ತ ನೋಡುತ್ತ...
ಪ್ರೀತಿ ಕಾಳನು ಹುಡುಕಾಡುತ್ತ....

ಮೌನದಿಂದಲೆ ಬಂದು ಬರಸೆಳೆದು ತಬ್ಬುತ್ತ..
ಪ್ರೇಮ ರಾಗಗಳ ಎದೆಯೊಳಗೆ ಹಾಡುತ್ತಾ..
ಮನದ ಭಾವವ ಬಿರು ಮಳೆಯಾಗಿ ಸುರಿಸುತ್ತ..
ಪ್ರೀತಿಯುದಕಕೆ ಹಾತೊರೆದು ಕರೆಯುತ್ತಾ...

ತುಟಿಯ ಜೇನನು ಹೀರೊ ಬಯಕೆಯನು ತೋರುತ್ತಾ..
ಕೈಯೊಳಗೆ ಕೈಯನಿಟ್ಟು, ಕಣ್ಣಲ್ಲೆ ಮಾತನಾಡುತ್ತ..
ಇಂಚಿಂಚು ಪ್ರೀತಿಯ ಮೊಗೆ ಮೊಗೆದು ಕುಡಿಯಲೆಂದು
ನಿನ್ನೆದೆ ಗೂಡಿನೊಳಗೆ ಹಾರಿ ಬಂದಿದೆಯಿಂದು..

ಮೊಟ್ಟೆಯಿಡುವ ಮುನ್ನ ಗರಿಗರಿಯಾದ ಗರಿಗಳಲಿ
ಗೂಡ ಕಟ್ಟುವ ತವಕ...
ಗೂಡಿನೊಳು ಬೆಚ್ಚಗೆ ನಿನ್ನ ಸೇರಿ
ಮಲಗಿ ದಣಿವಾರಿಸೊ ಪುಳಕ!!

ಪ್ರೀತಿಯಪ್ಪುಗೆಯಲಿ ಮೈ ಮರೆತು
ಪ್ರೇಮ ಪಕ್ಷಿಗಳೆರಡು ಸೇರಿ
ಆಗಸದಿ ಸ್ವಚ್ಛಂದದಿ ಹಾರುತ್ತಾ
ಸಮಯ ಕಳೆಯುವ ಮನಸು..

ಪಾಶ ಬಂಧನವ ಕಿತ್ತೊಗೆದು
ಸ್ವತಂತ್ರ ಪ್ರೀತಿಯ ಅನುಭವಿಸೋ ಸಂತಸ..
ಬಂದು ಒಟ್ಟಿಗೆ ಸೇರಿ
ದಿನವ ಕ್ಷಣವಾಗಿಸೊ ಹರುಷ...

ಪ್ರೀತಿಯ ಕರೆಯ ಧ್ಯಾನದಲಿ
ಹಕ್ಕಿಯು ರಾಗ ಹಾಡುತಲಿ
ನಿದ್ದೆಗೆ ಜಾರಿ ಕನಸ ಕಾಣುತಲಿ
ಮಗದೊಂದು ಲೋಕದಿ ಪಯಣಿಸುತಲಿ...

@ಪ್ರೇಮ್@
30.04.2019

957. ವಚನ-9

ನೀ ತಿನ್ನುವ ಅಮೃತ ಮಣ್ಣು
ನೀ ಕುಡಿಯುವ ಪಾನಕ ನೀರು..
ಪ್ರಪಂಚದ ಯಾವ ಮೂಲೆಗೆ ತೆರಳಿದರೂ
ನಿನಗದುವೆ ಸಲ್ಲುವುದು ತಮ್ಮಾ..
ಆದರೂ ನಾ ಮೇಲು ನೀ ಕೀಳೆಂದು
ಅದು ಹೇಗೆ ನಿರ್ಧರಿಸಿ ಬಿಡುವೆ ಶಿವಾ..
@ಪ್ರೇಮ್@
28.04.2019

956. ವಚನ-8

ವಚನ-8

ನೋವು ಕಾಣದ ಮನವ ಜಗದಲಿ
ಎತ್ತ ಕಾಣುವೆ ಮನುಜನೆ?
ಹುಟ್ಟು ಸಾವಿನ ಕೊಂಡಿಯೆಡೆಯಲಿ
ನೋವು ನಲಿವಿನ ಕೀಲಿಲ್ಲವೇ ಶಿವಾ!??
@ಪ್ರೇಮ್@
29.04.2019

955. ಮಂಗಳ ನಾದ

ಮಂಗಳ ನಾದ

ನಿನ್ನ ಹಾಡು ಮಧುರ ಗಾನ
ನಾನೆ ಅದನು ಹಾಡಲು.
ಭಕ್ತಿ ಹಾಡು ಸವಿಯ ಗಾನ
ನನ್ನ ಕಂಠ ಉಲಿಯಲು...//

ಮಾತು ಬೇಡ ಪದವು ಸಾಕು
ನಿನ್ನ ನಾಮ ಹಾಡಲು,
ಕೃತಕ ಬೇಡ ನಿಜವೆ ಸಾಕು
ನಿನ್ನ ಹಾಡಿ ಹೊಗಳಲು..//

ನೀನು ನಿತ್ಯ ನೀನೇ ಸತ್ಯ
ನನ್ನ ಬಾಳು ಬೆಳಗಲು,
ಈಶ ನಿನ್ನ ವರವು ಅಗತ್ಯ
ನಮ್ಮ ಬದುಕು ಕಳೆಯಲು..//

ದೇವ ಎಂದು ಕೂಗಿ ಕರೆಯೆ
ನಿನ್ನ ಕಿವಿಗೆ ಕೇಳಲು,
ಭಕುತರೊಡಲ ಕರೆಯ ದನಿಗೆ
ನಿನ್ನ ಶಕ್ತಿ ತೋರಲು...//

ಭಕ್ತಿ ಭಾವ ಪರವಶದಲಿ
ಭಕ್ತ ನಿನ್ನ ಬೇಡಲು,
ಭವದ ಚಿಂತೆ ತೊರೆಯುವಂತೆ
ನೀನು ವರವ ನೀಡಲು..//

@ಪ್ರೇಮ್@
29.04.2019

ಶುಕ್ರವಾರ, ಏಪ್ರಿಲ್ 26, 2019

954. ಎಂಕ್ಲೆನೊರ ತೂವರಾ

ಎಂಕ್ಲೆನ್ ಒರ ತೂವರಾ..

ಕೇನೊಂದುಲ್ಲ ಸಾದಿದ ಬರಿಟ್ ಬೂರ್ದಿನ
ನೀರ್ ಪರ್ದ್ ದಕ್ ದಿನ ಬಾಟ್ಲಿಲು ಪೂರಾ
ತರೆ ದೆರ್ತ್ ದೆರ್ತ್ ದ್
ಎನನ್ ತೂವರಾ ಒರ?

ಕೇನೊಂದುಲ್ಲ ಖಾಲಿಮಲ್ತ್ ನಿಕ್ಲೆ ಜೋಕುಲು
ಮಲ್ಲಾಕುಲು ಟೈಂಪಾಸ್ ಗ್ ಪಂದ್
ತಿಂದ್ ದಕ್ ದಿನ ಕುರ್ಕುರೆ, ಲೇಸ್ ದ ಖಾಲಿ ಪ್ಲಾಸ್ಟಿಕ್ ದ ಗಂಟುಲು
ಎಂಕ್ಲೆನ್ ತೂವರಾ ಒರ?

ಕೇನೊಂದುಲ್ಲ ಒಯ್ತ್ ದಕ್ ದಿನ ಪಿನ್ನ್, ಆನಿ, ರಬ್ಬರ್
ತುಂಡಾತಿನ ಚೆಂಡ್, ಬಾಲ್ದಿ
ಎಂಕ್ಲೆಗ್ ಒರ ಮುಕ್ತಿ ಬೋಡು!
ಎಂಕ್ಲೆನ್ ಒರ ತೂವರಾ..

ಲಕ್ಕ್ ಲಕ್ಕ್ ದ್ ಉಂತುದಿನ ಆ
ಮಧು, ಪಾನ್ ಪರಾಗ್, ಮಾರುತಿ ತಿಂದ್ ದಕ್ ದಿನ
ರಾಶಿ ರಾಶಿ ಪಕೇಟ್ ಲು
ಎಂಕ್ಲೆನ್ ಒರ ತೂವರಾ...

ಇಲ್ಲದ ಕಜವುನ್ ತೊಟ್ಟೆಡ್ ಕಟ್ಟ್ ದ್
ಮಾರ್ಗಗ್ ದಕ್ಕ್ ನಗ ಗೊತ್ತಾಪುಜಿ
ನಮ ಏತ್ ಪಾಪಿಲು ಪಂದ್!

ಅವೆನ್ ತಿಂದಿನ ಕಕ್ಕೆ, ಏಡ್, ಪಕ್ಕಿ, ಪೆತ್ತ, ಬೋರಿಲೆನ ಬಂಜಿಗ್ ಪೋದು
ಆ ಬಾಯಿ ಬರಾಂದಿ ಜೀವೊಲು
ಬೇನೆಡ್ ನೆಗಾರ್ ನೆಗಾರ್ ದ್
ಸೈನಗ ಅವು ಏತ್ ಶಾಪ ಪಾಡಯ!

ಪೂರ ಕಜಾವುನು, ಒರಿದಿನ ಕೋಡೆ ಮೊರಾನಿದ ವನಸ್
ಒಂಜೆ ತೊಟ್ಟೆಡ್ ಪಾಡ್ ದ್
ಪಿದಾಯಿ ದಕ್ಕ್ ನಗ ನಮಕ್
ನಮ್ಮ ಕಜವು ಪೋಂಡ ಯಾವು..

ದುಂಬುದ ಆಲೋಚನೆ ಮಲ್ಪುನಕ್ಲು ನಮತ್ತ್..!!
ನಮ್ಮ ಜೋಕ್ಲೆಗೇ ಟೇಸ್ಟ್ ಪೌಡರ್ ಪನ್ಪಿ
ವಿಷ ಪಾಡಿನ ವನಸ್ ದುಡ್ಡು
ಕೊರ್ದು ಹೋಟೆಲ್ಡ್ ಗೆತ್ ಕೊರ್ದ್ ತಿನ್ಪಿನಕ್ಲು ನಮ!!

ನೂಡಲ್ಸ್, ಗೋಬಿ, ಮಂಚೂರಿ ಸಿಕ್ಸ್ಟಿ ಬುಡ್ಂಡ
ಅರಿತ ಮುಡಿ, ಬನ್ನಂಗಾಯಿ ಗೊತ್ತಿಪ್ಪಂದಿ ಜೋಕುಲು
ದುಂಬುಗು ಬೆಲ್ಲ ತಾರಾಯಿನ್ ಲಾ ಪಿಚ್ಚರ್ ಡೇ ತೂವೊಡಾ ದಾನ್ನ!
ಭೂಮಿಗ್ ಪೂರ ವಿಷ ಮೈತ್ದಾತ್ಂಡ್!

ಕೋರಿಗ್ ಮಲ್ಲಾಯೆರೆ ಇಂಜೆಕ್ಷನ್!
ಪೆತ್ತಗ್ ಪೇರಾಯೆರೆ ಕೆಮಿಕಲ್!
ಪೇರ್ ದಪ್ಪ ಆಯರೆ ಮರ್ದ್!
ತರಕಾರಿ ಬೇಗ ಬುಳೆಯರೆ ಸ್ಪ್ರೇ!
ಪೂರ ಸ್ಟಾಕಾಪಿನಿ ನಮ್ಮ ಬಂಜಿಡೇ?!!!
@ಪ್ರೇಮ್@

ವಿಮರ್ಶೆಗಳು

[4/26, 12:19 PM] Wr S K Hiremat: @ಪ್ರೇಮ್@  ಅವರ. *ಸತ್ಯಸಂಧತೆ*
ಒಂದು ಚಂದದ ಕವನ

ಸತ್ಯದ ಮಹತ್ವವನ್ನು ಈ ಕವನದಲ್ಲಿ ಬಹಳ ಸೊಗಸಾಗಿ ವ್ಯಕ್ತಪಡಿಸಲಾಗಿದೆ. ಸುಳ್ಳನ್ನು ಊರ ಬಾಗಿಲಿನಿಂದಾಚೆ ಕೊನೆಗೊಳಿಸ ಬೇಕೆಂಬುದು ಕವಿಯ ಆಶಯವಾಗಿದೆ. ಊರಿಗೆ ದೇಶಕ್ಕೆ ಜಗಕ್ಕೆ ಸುಳ್ಳು ಹೇಳಿದರೂ ಕೂಡ ಸತ್ಯ ಏನೆಂಬುದು ಆತ್ಮಕ್ಕೆ ಸ್ಪಷ್ಟವಾಗಿರುತ್ತದೆ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಎಲ್ಲರ ಒಳಗೂ ಒಬ್ಬ ತುಂಟ ನಿದ್ದಾನೆ ಅವನು ಸತ್ಯವನ್ನು ಅರಿತಿರುತ್ತಾನೆ. ಸಾವು ಎಂಬುದು ಬಯಸದೆ ಬರುವಂತಹ ನೆಂಟ .ಹಾಗಾಗಿ ಬದುಕಿರುವ ಸ್ವಲ್ಪ ಸಮಯದಲ್ಲಿ ಸತ್ಯವನ್ನು ಪರಿಪಾಲಿಸುವ ಅಗತ್ಯತೆ ಇದೆ .
ಬಹಳ ಅರ್ಥಪೂರ್ಣ ಕವನ .ಚೆನ್ನಾಗಿದೆ ಶುಭವಾಗಲಿ

ತ್ರಿನೇತ್ರಜ
[4/26, 12:28 PM] Wr Shindhe: ಕವಿಯತ್ರಿ *ಪ್ರೇಮ್* ಮೇಡಂ ಅವರ *ಸತ್ಯಸಂಧತೆ* ಜೀವನದಲ್ಲಿ ಸತ್ಯಕ್ಕೆ ಕೊಡಬೇಕಾದ ಬೆಲೆ ಮತ್ತು ಇಡಬೇಕಾದ ಅದರ ನೆಲೆ ಎಲ್ಲಿ ಎಷ್ಟು ಹೇಗೆ ಅನ್ನೋದು ಅತ್ಯಂತ ಸ್ಪಷ್ಟವಾಗಿ ಸುಂದರ ಉಪಮೇಗಳ ಮೂಲಕ ಹೇಳಹೊರಟಿದ್ದಾರೆ.ಸತ್ಯವನ್ನೋದು ದೂರವಿಟ್ಟರೆ ಬದುಕಿಂದ ಅದರಿಂದ ಆಗಬೇಕಾಗದ ಸಮಸ್ಯೆಗಳು ಪ್ರತಿ ಸಾಲಲ್ಲಿ ಅಡ್ಡ ನಿಂತು ಕೈ ಬೀಸುತ್ತಿವೆ👌🏻
*ಮಾವಿನ ತಳಿರು ಹೇಗೆ ಹಸಿರಾಗಿ ಇರ್ತವೆವೋ ಹಾಗೆ ಮಾತಲ್ಲು ಹಸಿರಿರಬೇಕು.ಆ ಹಸಿರು ಇರಬೇಕಾದರೆ ಅಲ್ಲಿ ಸತ್ಯದ ಛಾಯೆ ಇರಬೇಕು.ಬರಿ ಅಮೃತ ಕಲಶ ಅಂತಾ ಹೆಸರಿಟ್ಟರೆ ಸಾಕೆ ಅದರಲ್ಲಿ ಅಮೃತವಿದ್ದರೆ ಮಾತ್ರ ಅದಕ್ಕೆ ಅರ್ಥ ಮತ್ತು ಅದರ ಒಳಮರ್ಮಗಳ ಮಾಯೆ ತಿಳಿಯುವುದು ಹಾಗೆ ಜೀವನದಲ್ಲಿ ಮನುಷ್ಯ ಅಂತಾ ಮಾತ್ರ ಇದ್ದರೆ ಸಾಕೆ ಅವನೊಳಗೆ ನಾಗರಿಕತೆ ಸತ್ಯ ಪ್ರಮಾಣಿಕತೆ ನಿಸ್ವಾರ್ಥತತೆ ಇತ್ಯಾದಿಗಳಿದ್ದಾಗ ಮಾತ್ರ ಆತ ಮನುಷ್ಯನಾಗಬಲ್ಲ.👌🏻ಜೀವನದಲ್ಲಿ ಸತ್ಯದ ಮಾರ್ಗ ಹಿಡಿದವನಿಗೆ ಒಂದು ವಿಶಿಷ್ಟ ಶಕ್ತಿ ಇರುತ್ತೆ ನೋವಲಿ ನಗುವ,ನಗುವಲಿ ಅಳುವ ಕಾರಣ ಅವನಿಗ ಜೀವನದ ನೈತೀಕ ಮೌಲ್ಯಗಳರಿತವನು ಅಂತಹ ಅರಿವು ನಿಮಗೆ ಬೇಡವೆ...?ಸಾವು ಅನಿರೀಕ್ಷಿತ ಹೇಗೋ ಅದು ಬರುವವರೆಗೆ ಎಲ್ಲರೊಟ್ಟಿಗಿನ ಸಂತೋಷದ ಕ್ಷಣಗಳು ಕಳೆದು ಬಿಡಬೇಕು ಇಲ್ಲಾ ಕಳಿತಾ ಇರಬೇಕು.👌🏻ಸಮಾಜಕ್ಕೆ ನೀನು ಎಷ್ಟೆ ಸುಳ್ಳು ಹೇಳಿ ನಂಬಿಸಿದರು ನಿನ್ನ ಆತ್ಮಸಾಕ್ಷಿ ಮಾತ್ರ ಅಸಲಿ ಮುಖ ನೋಡಿರುತ್ತೆ ಅದಕ್ಕೆ ಮಾತ್ರ ನಿ ವಂಚಿಸಲಾರೆ ಸುಳ್ಳು ಬರಿ ಪ್ರತಿಯೊಂದರ ಪೊಳ್ಳುತನಗಳ ಗಳಿಕೆ ಮಾಡಿಸುತ್ತೆ ಅದು ಗಟ್ಟಿಯಲ್ಲ.ಗಟ್ಟಿಯಾಗಿ ಬೆಳಿಬೇಕು ಬೆರಿಬೇಕು ಅಂದ್ರೆ ಸತ್ಯವನ್ನ ಹೇಳಬಿಡಬೇಕು ಕೇಳಿಬಿಡಬೇಕು.👌🏻ಕುರುಡ ಕೂಡಾ ನೋಡಬಲ್ಲ ಕಿವುಡನೂ ಕೇಳಬಲ್ಲ ಅದು ಅವರಿಗಿರುವ ಸತ್ಯದ ದೃಷ್ಟಿ ಮತ್ತು ಆಲಿಸುವಿಕೆ ಶಕ್ತಿ.ಅವರಂತೆ ನೀನು ಸುಳ್ಳನೂ ನೋಡಿ ಕುರುಡಾಗಿರು ಕೇಳಿ ಕಿವುಡಾಗಿರು ಸತ್ಯಕ್ಕೆ ಮಾತ್ರ ಕಣ್ಣು ಕಿವಿ ಹೃದಯ ಎಲ್ಲವೂ ತೆರೆದಿಡು ಸುಳ್ಳಿನ ಗಂಟು ಮನೆ ಮನ ಊರಾಚೆ ಇಡು  
*ಇಲ್ಲವಾದಲ್ಲಿ ಸತ್ಯದೊಂದಿಗೆ ಸಂಧಿಸಿ ಸೆಣಸುವ ಶಕ್ತಿ ನಮ್ಮಲ್ಲೆಂದಿಗೂ ಹುಟ್ಟದು ಅನ್ನೋ ನೇರ ಸಂದೇಶ*

*ರಾಜೇಶ ಎಲ್ ಶಿಂಧೆ*

ಬುಧವಾರ, ಏಪ್ರಿಲ್ 24, 2019

953. ನಲ್ಲೆಗೊಂದು ಪತ್ರ

ನನ್ನ ನಲ್ಲೆಗೊಂದು ಪತ್ರ..

ನಿತ್ಯ ನನ್ನ ಕನಸಲ್ಲಿ ಕಾಡುವ ಸುಂದರ ನಲ್ಲೆ...ವಾಟ್ಸಪ್, ಫೇಸ್ಬುಕ್, ಈ-ಮೇಲ್ ಮೆಸೆಂಜರ್, ಶೇರ್ಚಾಟ್ ಗಳ ಈ ಕಾಲದಲ್ಲೂ "ಓಲ್ಡ್ ಇಝ್ ಗೋಲ್ಡ್" ಎನ್ನುವ ಮಾತಿನಂತೆ ನಿನಗೊಂದು ಪತ್ರ ಬರೆಯಲು ಹೊರಟಿರುವೆ. ಕಾರಣವೇನೆಂದು ಕೇಳುವೆಯಾ? ಇದೋ ಹೇಳುವೆ.
     ಮನದ ಭಾವಗಳು ಹರಿದು ಕೈಗೆ ಬಂದು, ಕೈಯಿಂದ ಪೆನ್ನಿನ ಮೂಲಕ ಅಚ್ಚಾದಾಗ ಸಿಗುವ ಆ ಅಕ್ಷರದಾನಂದ! ಅದು ನಾನೇ ಬರೆದ ನನ್ನದೇ ಹಸ್ತಾಕ್ಷರವದು! ಎಂತಹ ಮುದ್ದು ಮುದ್ದಾದ ಭಾವನೆಗಳುಳ್ಳ ಪದಗಳ ಪಟ್ಟಿ! ಅನರ್ಘ್ಯ ಸಾಲುಗಳು! ಮಮತೆಯ ಕರೆಯೋಲೆಯಿದು!
     ನೀ ನನ್ನ ಹೃದಯ ಗೆದ್ದಂತೆ, ಜನ ನಿನ್ನ ಹೃದಯದಲಿರಿಸಿಕೊಳ್ಳುವ ಗುಣ ನಿನ್ನಲಿರಲಿ. ವರುಷಕೊಮ್ಮೆ ಬರುವ ಜನುಮ ದಿನದಂದು ಗಿಡ ನೆಟ್ಟು ಆಚರಿಸುವ ನೀತಿಯಿರಲಿ..

   ನನ್ನ ಮನದರಸಿಯ ಬಗೆಗೆ ನನಗಿರುವ ಕನಸುಗಳಲಿ ಸ್ವಚ್ಛತೆಯ ಅರಿವೂ ಬಹಳ ಮುಖ್ಯವಾದುದು. ನಮ್ಮ ಸ್ವಚ್ಛತೆ ನಮಗೆ ಹೆಮ್ಮೆ. ಸ್ವಚ್ಛತೆಯಿದ್ದಲ್ಲಿ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಅಡಿಗೆಮನೆಯ ಸ್ವಚ್ಛತೆ ನೋಡಿ ಒಂದು ಹೆಣ್ಣಿನ ಗುಣಮಟ್ಟ ಅಳೆಯಬಹುದಂತೆ. ಅಡಿಗೆ ಮನೆ ಮಾತ್ರವಲ್ಲ, ಮನೆಯ ಇತರ ಕೋಣೆಗಳೂ, ಅಂಗಳ, ಛಾವಣಿ, ಸಾಮಾನು, ಸರಂಜಾಮುಗಳು,ಮನೆಯ ಸುತ್ತಮುತ್ತಲಿನ ಸ್ವಚ್ಛತೆಗೆ ಆದ್ಯತೆ ನೀಡುವಂತಾಗಬೇಕು. ಜೊತೆಗೆ ವೈಯಕ್ತಿಕ ಸ್ವಚ್ಛತೆ ಕೂಡಾ.
  ಪ್ರೀತಿಯೇ ಬದುಕಿನ ಮೂಲವಾಗಬೇಕು. ಪ್ರೀತಿಯೊಂದಿದ್ದರೆ ಗುಡಿಸಲೂ ಅರಮನೆಯಾಗಬಲ್ಲುದು, ಗಂಜಿಯೂ ಮೃಷ್ಟಾನ್ನವಾಗಬಲ್ಲುದು. ಜೀವನವು ನಡೆಯುವಷ್ಟು ಸಂಬಳ, ಅಪರಿಮಿತ ಪ್ರೀತಿ ಇರುವ ಬದುಕು ನಮ್ಮದಾಗಲಿ. ಇರಲೊಂದು ಸೂರು, ತೊಡಲು ಬಟ್ಟೆಯಿದ್ದರೆ ಸಾಕು.
   ಮನದಂಚಿನ ಭಾವಗಳ ಒಬ್ಬರಿಗೊಬ್ಬರು ಅರ್ಥೈಸಿ, ಗೌರವಿಸಬೇಕು. ಪರೋಪಕಾರಕ್ಕೆ ಸ್ಥಳವಿರಬೇಕು. ಪರಹಿತವ ಬಯಸಬೇಕು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿಯಿರಬೇಕು. ಕಷ್ಟ ಪಟ್ಟು ದುಡಿದ ಅನುಭವ ಇರಬೇಕು. ಜೀವನ ಕಲ್ಲು ಮುಳ್ಳಿನ ಹಾಸಿಗೆಯೆಂದು ಅರ್ಥೈಸಿಕೊಂಡಿರಬೇಕು ನನ್ನ ನಲ್ಲೆ.
   ಇನ್ನೂ ಇದೆ ಹೇಳಲು. ಮುಂದಿನ ಪತ್ರದಲ್ಲಿ ತಿಳಿಸುವೆ. ಈ ಪತ್ರಕ್ಕೆ ಉತ್ತರಿಸು.
          ಪ್ರೀತಿಯಿಂದ.
                          @ಪ್ರೇಮ್@
                         24.04.2019

ವಿಮರ್ಶೆಗಳು

[4/1, 1:44 PM] Wr Anupama Anupallavi: ಪ್ರೇಮ್ ಅವರ ಭಾವಸುಮ

ಕವನದ ಭಾವ ಚೆಂದವಾಗಿದೆ.
ಪ್ರೇಮದ ನವಿರಾದ ಒಲುಮೆಯ ಕಾವ್ಯ ಸರಳವಾಗಿ ಸುಂದರವಾಗಿದೆ.

ತುಸು ಬೇಸರ ಯಾಕೆ ಅಂಥಾ ಅರ್ಥ ಆಗಲಿಲ್ಲ‌.
ಪದ್ಯದ ಸಾಲಂಕಾರಗಳ ಬಗ್ಗೆ ಹೆಚ್ಚು ಒತ್ತು ಕೊಡಿ ಉಳಿಂದಂತೆ ಕವನ  ಉತ್ತಮವಾಗಿದೆ.
[4/2, 6:41 PM] Wr Vijaya Kundapur: *ಪ್ರೇಮ್ ಅವರ ಅವಸರವೇಕೆ*

ಅವಸರಿಸರಿ ಬಾರದಿರು ಓ ತರುಳೆ
ಇಂದಿಗೂ ಎಂದೆಂದಿಗೂ ಈ ಮನಸು ಕೇವಲ ನಿನ್ನದು
ನಿನ್ನ ಮಧುರ ಅನುಭೂತಿಯಲಿ ಈ ಮನಸು ತೇಲಿ ನೂರು ಕನಸು ಹೆಣದರೂ ಅದನ್ನು ಆವರಿಸಿ ರಮಿಸುವ ಸಖಿ ಮಾತ್ರ ನೀನೇ ಎಂಬ ಭಾವದ ಕವನ ಸೊಗಸಾಗಿದೆ...

ಶುಭವಾಗಲಿ
[4/3, 7:26 AM] Wr Rathna Badavanalli: ಮೊದಲ ಕವನ ಪ್ರೇಮ್ ರವರ *ನಿನ್ನಿಂದ*
ಎಲ್ಲವೂ ನಿನ್ನಿಂದೆನುವ ಭಾವ
ಮೊದಲ ಚರಣವೇ ಬಳ್ಳಿಗೆ ಮರವು ಆಸರೆ
ಚೆಂದದ ಸಾಲು
ಭಾನೂ
ಬಾನು ಸರಿ
ಕೊನೆಯ ಚರಣದಲ್ಲಿ
ನಿನ್ನಿರವಿಂದ

ನಿನ್ನಿರುವಿಂದ ಆದರೂ ಸರಿ
ನಿನ್ನರವಿಂದ  ಅಂದರೂ ಅರ್ಥವಿದೆ
ಆದಷ್ಟೂ ಒಂದು ಪದ ಪದೇ ಪದೇ ಬಳಕೆಯಾಗದಂತೆ ಬರೆದರೆ ಚೆಂದ ಕವನ,ಕವಿತೆ ಯಾವುದಾದರೂ
ಹಾಗೂ ಬಳಕೆ ಮಾಡಿದರೆ
ಕ್ರಮವಾಗಿ ಬಳಸಿದರೆ ಚೆಂದ
ಅನಿಸಿಕೆ ಹೇಳಿದೆ
ಬೇಸರ ಬೇಡ
[4/3, 7:33 AM] +91 84948 17130: *ಪ್ರೇಮ್ ರವರೆ*

ಬಲು ಸುಂದರ ಹಾಗೂ ಪ್ರಾಸಭರಿತ ಕವಿತೆಗೆ ನನ್ನ ನಮನಗಳು..
ಅದೆಷ್ಟು ಸೊಗಸಾಗಿದೆ ತಮ್ಮ ಕವಿತೆ ಓದಲು ಎಂದರೆ, ಕುಣಿಯುತ ಕುಣಿಯುತ ಪುಟ್ಟ ಮಕ್ಕಳೇ ಹಾಡುವಂತಿದೆ.

ಓದುವಾಗ ಸಾಲುಗಳು ಕೆಳಗಿನಂತಿದ್ದರೆ ಇನ್ನೂ ಸೂಪರ್ ಆಗ್ತವೆ ಅನ್ನುಸ್ತು.

ಮುನ್ನಡೆಗೆ ಆಲಿಂಗನ ನೆರವು

ಬದುಕಲಿ ಸಾಗಲು ಪ್ರೀತಿಯ ಒಲವು

ಎತ್ತರಕೇರುತ ಸಾಗುವ ಮನವು

ಧರೆಗಾನಂದ ತಣ್ಣನೆ ನೆನಯುತ

ನಾನು ನನ್ನದೆಂಬುದು ಎಲ್ಲಿಂದ
ಸರ್ವಸಮರ್ಪಿಸಿ ಪಡೆವಾನಂದ

[4/3, 8:03 AM] Wr Abhi: *ಪ್ರೇಮಾ ಮೇಡಂ ಅವರ ನಿನ್ನಿಂದ ಕವಿತೆ*

ನಾನು ನನ್ನಿಂದ ಏನೂ ಇಲ್ಲ, ಎಲ್ಲವೂ ನಿನ್ನಿಂದ ಎಂದು‌ ಸಾರುತಿರುವ ನಿಮ್ಮ ಕವಿತೆ ಚಂದ ಚಂದ!! ಎಷ್ಟೋ ಬರಹಗಳು ಬರಹದ ಹಂಗಿಗೆ ಬಿದ್ದು‌ ಸ್ವಲ್ಪಮಟ್ಟಿಗೆ ಭಾವದಲ್ಲಿ ಕೊರತೆ ಕಾಣಿಸಿಬಿಡುತ್ತದೆ. ನೀವು ಎರಡನ್ನೂ ‌ಸರಿದೂಗಿಸಿಕೊಂಡು ಹೋಗಿದ್ದೀರಿ.

ಕೊನೆಯ ಪ್ಯಾರಾ ತುಂಬಾ ಇಷ್ಟವಾಯಿತು. ನಿನ್ನಿರವಿಂದ ಪದ ಬಳಕೆ ಇಷ್ಟವಾಯಿತು. ಕನ್ನಡ ಭಾಷೆಯ ಶ್ರೀಮಂತಿಕೆ ಇದು. ಪದ ತಪ್ಪಾಗಿ ಟೈಪಿಸಿದ್ದೀರಾ ಎಂದುಕೊಂಡೆ, ಆದ್ರೆ ಆ್ಯಕ್ಚೂಯಲಿ ಆ ಥರ ಪದ ಇದೆ.‌

*ಇರವು = ಅಸ್ತಿತ್ವ, ಇರುವಿಕೆ*

*ಎಲ್ಲವೂ ಅವನ ದಯೆ, ನಾನು ನನ್ನದು ನಶ್ವರ* ಎಂಬ ಸಂದೇಶ ನೀಡಿದ ನಿಮ್ಮ‌ ಕವಿತೆಯನು ಓದಿ ಬೆಳ್ಳಂಬೆಳಗ್ಗೆ ಚೂರು ಎಕ್ಸ್‌ಟ್ರಾ ಒಳ್ಳೆಯವನಾದೆ.

ಇಷ್ಟವಾಯಿತು ಮೇಡಂ

ಧನ್ಯವಾದಗಳು

ಅಭಿ
[4/3, 9:58 AM] +91 96636 35341: ಪ್ರೇಮ ಅವರ *ನಿನ್ನಿಂದ*
    
ಪ್ರತಿಯೊಂದು ಬಳ್ಳಿಗು ಮರವೆ ಆಸರೆ
ಪ್ರಯಿಯೊಂದು ಮಗುವಿಗು ತಾಯಿಯ ಪ್ರೀತಿಯೆ ಆಸರೆ
ಈ ಜೀವನದಲ್ಲಿ ಚೆನ್ನಾಗಿ ಬಾಳಬೇಕು ಎತ್ತರಕ್ಕೆ ಬೆಳೆಯಬೇಕು ಎಂದರೆ ಎಲ್ಲದಕ್ಕು ಪ್ರೀತಿಯ ಸಹಕಾರ ಬೇಕು' ಒಳ್ಳೆಯ ಗುಣಬೇಕು ನಾನು ನನ್ನಿಂದ ಅಹ್ಂ ಅನ್ನುವುದನ್ನು ಬಿಟ್ಟರೆ ಬದುಕಲಿ ಮೇಲೆರಲು ಸಾಧ್ಯ್..
ಜೀವನದಲ್ಲಿ ಮುಂದೆ ಬರಬೇಕು ಸಾಧನೆ ಮಾಡಬೇಕು ಅಂದರೆ ಶ್ರದ್ಧೆ, ಆತ್ಮಬಲ, ಮಾಡೆ ಮಾಡುವೆ ಎನ್ನುವ ಛಲವಿರಬೇಕು ಆವಾಗ ನಾವು ಕಂಡ ಕನಸುಗಳೆಲ್ಲ ನನಸಾಗುವುದು ಖಚಿತ, ಹಾಗೆ ಮಾನವ ಮಾನವರನ್ನು ಅರ್ಥ ಮಾಡಿಕೊಳ್ಳದೆ ಬದುಕುವುದರಿಂದ ಯಾವ ಪ್ರಯೋಜನವಿಲ್ಲ ' ಅರಿತು ಬೆರೆತು ಬಾಳಬೇಕು , ಸಂಕೊಚವನ್ನು ಬಿಟ್ಟು ನಾನು ಎನ್ನುವುದನ್ನು ಬಿಟ್ಟು ನಾನೊಬ್ಬ ಮಾನವನೆಂದು ತಿಳಿದು ಇನ್ನೊಬ್ಬ ಮಾನವನಿಗೆ ಬೆಲೆ ಕೊಟ್ಟು ಮಾನವಿಯತೆಯ ದೃಷ್ಟಿಯಿಂದ ಪ್ರೀತಿಯಿಂದ ಸಹಕರಿಸುತ್ತ ಬಾಳಬೇಕು ಇದುವೆ ಸತ್ಯ ಇದುವೆ ಜೀವನ
  ಈ ಪ್ರೀತಿ ಎನ್ನುವ ಮಹಾಸಾಗರದಲ್ಲಿ , ತೆಲುತ್ತ ಸಾಗಬೇಕು' ಜೀವನದ ಪ್ರತಿ ಕ್ಷಣವನ್ನು ಇನ್ನೊಬ್ಬರನ್ನು ಪ್ರೀತಿಸುತ್ತ ತನ್ನ ತಾ ಪ್ರೀತಿಸುತ್ತ ಕೋಪ ತಾಪಗಳನ್ನೆಲ್ಲ ಬಿಟ್ಟು
ಈ ಪ್ರೀತಿಯೆಂಬ ಸಾಗರದಲ್ಲಿ ಮುಳುಗಬೇಕು ಮಿನುಗಳಂತೆ ಈಜುತ್ತ ತೆಲುತ್ತ ಕುಣಿಯುತ್ತ ಜೀವನದ ಬಂಡಿ ಸಾಗಿಸಬೇಕು
ನಿನ್ನನ್ನು ನೀನು ಅರಿತು ಬಾಳಿದಾಗ ಈ ಜೀವನ ತುಂಬ ಸೊಗಸು
*ನಾನು ನನ್ನಿಂದ ಬಂದುದು ಎಲ್ಲಿಂದ..?* ಹೌದು ಈ ನಾನು ಬಂದಾಗಿನಿಂದ ಈ ಜೀವನ ಈ ಬದುಕು ಈ ಪ್ರಪಂಚ ನರಕವಾಗಿದೆ
ಮಾನವಿಯತೆಯನ್ನು ಭಸ್ಮ್ ಮಾಡುತ್ತಿದೆ
ಮನುಷ್ಯ ಮನುಷ್ಯರನ್ನೇ ಕೊಂದು ತಿನ್ನುತ್ತಿದೆ ಈ ನಾನೆಂಬ ಮೂಢ
ಈ ನಾನು ಅನ್ನುವುದು ಬಂದಿದ್ದೆ:- ನಮ್ಮಿಂದ,ನಮ್ಮ್ ಅತಿ ಆಸೆಗಳಿಂದ, ನಮ್ಮ್ ಕೆಟ್ಟ ಆಲೋಚನೆಗಳಿಂದ, ನಮ್ಮ್ ಪಂಚೆಂದ್ರಿಯಗಳ ಸುಖಕ್ಕಾಗಿ ಬಯಸುವುದರಿಂದ...
  ನಾನು ಅಂದರೆ ಬೇರೆ ಏನಿಲ್ಲ್- *ಅಹ್ಂ,ಭ್ರಮೆ,ನಮ್ಮ್ ಜೀವಂತ ಸಮಾಧಿ, ನಾನೆ ಶ್ರೇಷ್ಠ ಅನ್ನುವ ಭಾವ,ನಾನೆ ಎಲ್ಲವು ನನ್ನಿಂದ,ಎಲ್ಲರು ನನ್ನ ಮಾತೆ ಕೇಳಬೇಕು ಎಂದು ಮಾಡುವ ವಿಚಾರ*
    ಓ ಮೂಢ ಮನುಜನೇ ಬಿಡು ಈ ನಾನು ಎನ್ನುವುದನ್ನು.. ಎಂದು ಹೇಳುತ್ತ ಬರೆದಿರುವ ಈ ನಿಮ್ಮ ಕವನ ಸುಂದರ...
*ಸರ್ವವ ಸಮರ್ಪಿಸಿ ಪಡೆಯುವ ಆನಂದ*
ಹೌದು ಎಲ್ಲವನ್ನು ಬಿಟ್ಟು ಒಳ್ಳೆಯ ಮನಸಿಂದ, ಒಳ್ಳೆಯ ದಾರಿಯಿಂದ, ಒಳ್ಳೆಯ ಮಾನವಿಯತೆಯ ಹಾದಿಯಲ್ಲಿ ಬದುಕುವುದರಿಂದ, ಪ್ರೀತಿ ಪ್ರೇಮವನ್ನು ಹಂಚುತ್ತ, ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮಾನವರಂತೆ ಬಾಳುವುದರಿಂದ ಸಿಗುವ ಆನಂದ ಬೇರೆ ಎಲ್ಲಿಯೂ ಸಿಗುವುದಿಲ್ಲ
ಎಲ್ಲವು ನಮ್ಮಲ್ಲೇ ಇದೆ ಹಾಗಾಗಿ ನನ್ನದು ನನ್ನಿಂದ ನಾನು ಎನ್ನುವುದನ್ನು ಬಿಡು ಓ ಮನವೇ ಎಂದು ಹೇಳುವ ಈ ನಿಮ್ಮ ಭಾವನೆಯ ಸುಂದರ ಬರಹಳಿಗೆ...ನನ್ನ ನಮನಗಳು

*ನಾನು*… ಎನ್ನುವವನಿಗೂ ಸಾವಿದೆ
*ನೀನು* ಎನ್ನುವವನಿಗೂ ಸಾವಿದೆ
   ಇಷ್ಟೆ ವ್ಯತ್ಯಾಸವೆಂದರೆ::-- *ನಾನು ಎನ್ನುವವ ತನ್ನನ್ನು ತಾ ಪ್ರೀತಿಸದೆ ಇನ್ನೊಬ್ಬರ ಪ್ರೀತಿಯನ್ನು ಪಡೆಯದೆ ಎಲ್ಲರೂ ಜೊತೆಗಿದ್ದರು ಸಾಯುವಾಗ ಅನಾಥವಾಗಿ ಹೋಗುವನು*

*ನೀನು ಎಂದು ಬಾಳುವವನು ತನ್ನನ್ನು ತಾ ಅರಿತು, ಇತರರನ್ನು ಅರಿತು,*
*ತನ್ನನ್ನು ತಾ ಪ್ರೀತಿಸುತ್ತ ಇತರರನ್ನು ಪ್ರೀತಿಸುತ್ತ ಸಾಯುವಾಗ ತನ್ನ ಸಾವಿನ ಜೋತೆಗೆ ಪ್ರೀತಿಯೆನ್ನು* *ಹೊತ್ತುಕೊಂಡು ಹೋಗುವನು,*
  *ಎಲ್ಲರ ಮನದಲ್ಲಿ ಅಮರವಾಗಿ ನೆಲೆಸುವನು..*

ಕವಿ ಭಾವಕ್ಕೆ ಧಕ್ಕೆ ಆದಲ್ಲಿ ಕ್ಷಮಿ ಇರಲಿ
   
  ಆಕಾಶ ವಿ ಸಂಬಾಜಿ*
           *ಬೀದರ್
[4/5, 7:09 AM] +91 81519 46429: ಪ್ರೇಮ್ ಮೇಡಂ ಅವರ ತಲ್ಲಣ

ಇಳೆಯು ಕಂಪೆನಕೊಂಡ್ರೆ  ಮನದಲ್ಲಿ ತಲ್ಲಣ ಮೂಡೆ ಮೂಡುತ್ತೆ ಅವಾಗ ಬಾಳಿನಲ್ಲಿ ನೋವಿನ ಸಿಂಚನ ನುಸುಕೋದು ಸಹಜ ಮನದಿ ನಡುಕ ಮೂಡಿ ಇಳೆಯು ಸಿಡುಕ ಗೊಂಡಿ ತನನವಾಗುತ್ತೆ ಜಗದಲ್ಲಿ ಇರುವ ಜೀವಗಳು ಕಣ ಕಣಗೊಳ್ಳುತ್ತೆ ಸತ್ಯ ಮೇಡಂ ಇಳೆ ಏನಾರ ಕಂಪನವಾಗಿಬಿಟ್ರೆ ಮನುಷ್ಯನಿಂದ ಹಿಡಿದು ಜಲಚರ ರಾಶಿಗಳು ಕಂಪನಗೊಂಡೆಗೊಳ್ಳುತ್ತೆ ಜಗದ ಜೀವಗಳ ಕಣಗಳಿಗೆ ನಡುಕು ಶುರುವಾಗಿ ಇಳೆಯ ಮೇಲೆ ಸಿಡುಕು ಶುರುವಾಗುತ್ತದೆ ....

ಭೂಮಿ ಬಿರಿದರೆ ಮನಕ್ಕೆ ಭಯ ಬದುಕ ನುಂಗಲು ತವಕ ಬಹಳವು ಹೌದು ನಿಜ ಭೂಮಿಯಲ್ಲಿ ಬಿರುಕು ಮೂಡಿದ್ರೆ ಭಯದ ಜೊತೆಗೆ ಬದುಕು ನಾಶವಾಗಬಹುದು ಎಂಬ ಭಯವು ಸಹ ಕಾಡುತ್ತೆ ತಾಯ ಒಡಲಲ್ಲಿ ಬೆಂಕಿ ಕಂಡ್ರೆ ಕುದಿವ ಮಾತೆಯ ಉದರ ಸುಡುತ್ತೆ ಹಂಗೆ ಇಳೆಯ ಒಡಲಿಗೆ ಬೆಂಕಿ ಬಿದ್ದರೆ ನಮ್ಮ ಬದುಕು ನಾಶವಾದಂತೆ ....

ಹೃದಯ ಢವಢವ ಎನ್ನುವುದು ಒಡೆದ ಕಾವಿಗೆ ಮನದಿ ನಿತ್ಯ ನೋವು ಕಾಡುವುದು ಸಂಕಟದ ಉಪಟಳಕ್ಕೆ ಗೆಲುವನ್ನೇ ಮರೆಸುವ ಜೀವ ಸಾವಿಗೆ ಸುತ್ತಾದರೆ ಮೌನದಲೆ ಕಳೆಯುವುದು ಸಕಲ ನೋವುಗಳು ಹೌದು ಹೃದಯ ಢವಢವ ಆದ್ರೆ ಒಡಲು ಕಾವೇರುತ್ತೆ ಏನೋ ಒಂಥರಾ ಸಂಕಟ ನೋವಿನ ಬೇನೆ ಶುರುವಾಗುತ್ತೆ ಎಲ್ಲವನ್ನು ಮರೆಸುವ ಜೀವ ಸತ್ತರೆ ಮಾತು ಬಾರದೆ ಮೌನದಲ್ಲೇ ಸಕಲ ನೋವುಗಳನ್ನು ಕಳೆಯಬೇಕಾದ ಪರಿಸ್ಥಿತಿ ಬರುತ್ತೆ ....

ಜೀವ ಭಾವದಲ್ಲಿ ಸೇರಿದ್ರೆ ನರ್ತನ ಶುರುವಾಗುತ್ತೆ ಇದರ ಕೆಲಸ ಸೃಷ್ಟಿಕರ್ತನದಾಗಿರುತ್ತೆ ಧರೆ ನಡುಗಿ ಕಡಲು ಉಕ್ಕುವುದು ಸಕಲ ಸಾಗರ ನೀರು ಉಕ್ಕಿ ಹರಿಯುವುದು ಧರೆ ನಡುಗಿದರೆ ಕಡಲು ತಾನಾಗೇ ಉಕ್ಕುತ್ತೆ ಎಲ್ಲ  ಸಾಗರದ ನೀರನ್ನ ಉಕ್ಕಿಸಿ ದಡಕ್ಕೆ ತೇಲಿಸುತ್ತೆ ...

ಇಳೆಯ ಕಾರ್ಯಕ್ಕೆ ಎಂದು ಧನ್ಯನು ಕೊಳೆಯ ತೊಲಗಿಸುವ ಸದಾ ಕಾರ್ಯಕ್ಕೆ ಮಾನ್ಯ ನು ಹೌದು ಭೂಮಿ ತನ್ನ ಕಾರ್ಯವನ್ನ ನಿರ್ವಹಿಸುತ್ತೆ ಹಂಗೆ ಕೊಳೆಯನ್ನು ತೊಲಗಿಸಿ ಸಾದ ಮಾನ್ಯವಾಗಿರುತ್ತೆ ತಾಳ್ಮೆ ಮಿತಿಯಲ್ಲಿ ತಾಯಿ ನಡೆಸಲು ಏರುವ ಬಿಸಿಲಿಗೆ ಮಾತೆ ನಡುಗುತ್ತೆ ..ಎಷ್ಟು ಚೆನ್ನಾಗಿ ತಲ್ಲಣದ ಮೂಲಕ ಇಳೆಯ ಬಗ್ಗೆ ಉಲ್ಲೇಖಿಸಿದ್ದೀರಾ ಇಳೆಯ ಕಾರ್ಯದಿಂದ ಹಿಡಿದು ನಡುಗುವ ಬಿಸಿಲಿನ ಕಂಪನಕ್ಕೆ ಹೋಲಿಸಿ ಸೃಷ್ಟಿ ಕರ್ತದಲ್ಲಿ ಜೀವ ಭಾವವನ್ನು ನರ್ತನ ಮಾಡಿಸಿ ಅದ್ಭುತವಾಗಿ ತಲ್ಲಣ ಗೊಳಿಸಿದ್ದೀರಾ ಪದಗಳನ್ನ ಅರ್ಥಪೂರ್ಣವಾಗಿ ಪೋಣಿಸಿ ....ಧನ್ಯವಾದಗಳು ಶುಭವಾಗಲಿ ..

ಕವಿ ಭಾವಕ್ಕೆ ದಕ್ಕೆ ಬಂದಲಿ ಕ್ಷಮೆ ಇರಲಿ
[4/9, 6:44 AM] +91 86186 53608: *ಪ್ರೇಮ್ ಅವರು ಭಾರತಿಗೆ ಕೊಟ್ಟ ಸಲಹೆ,, ನಿಜವಾಗಿಯೂ ಒಪ್ಪುವಂತಿದೆ....*
ಇದೊಂದು ಒಳ್ಳೆಯ ಚಿಂತನೆ,,, ಮಾರ್ಮಿಕ ನೀತಿ ಬೋಧನಾ ಶೈಲಿ ತೋರುವ ಕವನ.... ಮನುಜ ಮರವ ಕಡಿದು
ಜಗವ ನಾಶ ಮಾಡುತಿಹನು,, ಆದರೆ ತನ್ನನ್ನು ತಾನೇ ವಿಕೋಪಕ್ಕೆ ತಳ್ಳಿಕೊಳ್ಳುತ್ತಿರುವ
ಜ್ಞಾನ ಅರಿವು ಅವನಿಗಾಗುತ್ತಿಲ್ಲ....
ಹೀಗಾಗಿ ಮುಯ್ಯಿಗೆ ಮುಯ್ಯ್ ಎಂಬಂತೆ,
ಮರಗಳೇ ಮನುಜನೆದುರು
ತಿರುಗಿ ಬಿದ್ದರೆ ಆಗಲಾದರು ಅರಿವಾಗುವುದೇನೋ ಮನುಕುಲಕ್ಕೆ.....
'ಮರಗಳೇನು ತಿರುಗಿ ಬೀಳಲಾರವು,,,
ಸಾಧ್ಯವಾದರೆ ಅರಿವಿರುವ ಮನುಜರೇ ಅರಿತುಕೊಂಡರಾಯ್ತು'*

ಶಿವಕುಮಾರ
[4/10, 5:20 PM] Wr Shashirekha: *ಪ್ರೇಮಕ್ಕ ಅವರ ಕುಣಿಯೋಣು ಬಾರಾ ಕವನ*

*ಸುಗ್ಗಿ ಅನ್ನೋದು ರೈತನ ಬಾಳಲ್ಲಿ ಪ್ರತೀ ಬಾರಿಯೂ ಪ್ರತೀ ವರ್ಷವೂ ಬರುವ ಮಹತ್ವದ ಘಟ್ಟ*

*ಭೂತಾಯಿಗೆ ಒಂದು ವಿಧದಲ್ಲಿ ಹೆರಿಗೆಯ ಸಂಭ್ರಮ*
*ಮತ್ತೆ ಬೀಜಗಳನು ತನ್ನೊಡಲಲಿ ಹೊತ್ತು ಬೆಳೆಸುವ ಸಡಗರ ತಂದುಕೊಳುವ ಕಾಲ*

*ಅಂತಹ ಸುಗ್ಗಿಯ ಬಗೆಗೆ ಬರೆದ ಕವನ ಸುಂದರ*

[4/12, 7:18 AM] +91 98446 38300: ಪ್ರೇಮ ಅವರ ಒಲವಿನ ಹೃದಯಕೆ ಹುಟ್ಟು ಹಬ್ಬದ ಶುಭಾಶಯಗಳು.
ನೀವು ಬರೆದ ಕವನದಲಿ ಅವರ ನಿಮ್ಮ ನಡುವಿನ ಮಧುರ ಭಾಂದವ್ಯದ ಒಡನಾಟದ ಬದುಕಿನ ಅವರೊಂದಿಗಿನ ಜೀವನ ತರಂಗಗಳು ಸುಂದರವಾದ ಪದಗಳಲಿ ಮೂಡಿಬಂದಿದೆ ಕವನ ಸುಂದರ ಭಾವನೆಯೊತ್ತ ಸಾಲುಗಳು.
ಶುಭವಾಗಲಿ ನಿಮ್ಮಿಬ್ಬರ ಬದುಕಿನ ಪಯಣದಲಿ ಸದಾ.