ಬುಧವಾರ, ಜನವರಿ 29, 2020

1328. ಕವನ- ಚಂದಿರನಿಗೆ

ಅಮವಾಸ್ಯೆ ಬೇಡ..

ಚಂದದ ಚಂದಿರನೆ ನೀನೇಕೆ ನನಗಿಂದು ಅಮವಾಸ್ಯೆಯ ನೀಡಿದೆ?
ನನ್ನ ಕಾಣಲು ಬರದೆ ಅಮವಾಸ್ಯೆಯ ಕತ್ತಲನು ತುಂಬಿದೆ!

ಚುಕ್ಕಿ -ತಾರೆಗಳು ಮಿನುಗುತಿಹವು ತಮ್ಮದೇ ದರ್ಪದಲಿ!
ಆದರೇನು, ಇಳೆಗೆ ಕಳೆ ತರಲು ನೀನೇ ಬೇಕಲ್ಲವೇ ಇರುಳಲಿ?

ಹಗಲು ರವಿ ಕೊಡುವ ಬಿಳುಪು ಕಿರಣಗಳ ಕಾಂತಿ ಒಂದು ಬದಿಗೆ,
ಮತ್ತೆ ನನ್ನ ಬೇರೆ ಬದಿಯನೂ ತಣಿಸಬೇಕಲ್ಲವೇ ನೀತಿಯಲಿ ಸರ್ವರಿಗೆ!

ನೀನೇಕೆ ಬರದಾದೆ ಆದಿತ್ಯನ ಕಾಂತಿಯನೇ ಹೊತ್ತು ತಂಪಾಗಿ?
ತಿರೆ ಕಾದಿಹಳು ಬಾಳ ನಿಶೆಯ ಬೆಳಕಿಗಾಗಿ!

ಇಂದ್ರನ ರಥವ ದತ್ತು ಪಡೆದಾದರೂ ನೀ ಬರಬೇಕಿತ್ತು!
ಅಮವಾಸ್ಯೆಯೆಂಬ ಪದವ ನಿನ್ನ ಶಬ್ದಕೋಶದಿ ಅಳಿಸಿ ಹಾಕಬೇಕಿತ್ತು!

ನಿನ್ನಿರವೆ ನನಗೆ ಖುಷಿ ತಿಳಿಯದೇ ಸೋಮನೇ?
ನೀ ಬರಲು ಹಾಲ್ಚೆಲ್ಲಿದ ಬೆಳದಿಂಗಳು, ಮರೆತೆಯಾ ಮಾಮನೇ?

ಚಂದ್ರೋದಯದ ಗಳಿಗೆಗೆ ತಡಮಾಡದಿರು ಎಂದೆಂದೂ..
ಧರಣಿ ಕಾದು ಬೆಂಡಾಗಿಹಳು ತಿಳಿದುಕೋ ಮುಂದೂ..

ವಿರಹದುರಿಯಲಿ ಬೇಯುವೆ ನೀನಿರದ ಕ್ಷಣಗಳಲಿ
ಗಾಢಾಂಧಕಾರದಲಿ ನೆನೆಯುವೆ ನೀ ಬರದ ಕರಾಳ ಕಪ್ಪಿನಲಿ..

ಬೇಸರಿಸದಿರು ಧರಿತ್ರಿ ಮನವ ಅಮವಾಸ್ಯೆನು ತಂದು,
ಬೇಡುತಿಹೆ ಬೆಳಕ ನೀಡು ನೀನು ಮನಕೆ  ವರುಷದಲಿ ಪ್ರತಿದಿನವೂ ಬಂದು!
@ಪ್ರೇಮ್@
30.01.2020

ಮಂಗಳವಾರ, ಜನವರಿ 21, 2020

1317. ನ್ಯಾನೋ ಕತೆ-ಬುದ್ಧಿ ಬಂತು

ಬುದ್ಧಿ ಬಂತು!

ಅವನಿಗವಳು, ಅವಳಿಗವನು ಎಂಬ ಸುಂದರ ಸಂಸಾರದಂತಿರಬಹುದಿತ್ತು. ಆದರೆ ಮನೆಯಲ್ಲಿ ಎಲ್ಲರೊಂದಿಗೆ ಸರಿ ಬರದೆ ಬೆಕ್ಕಿನ ಬಿಡಾರ ಬೇರೆ ಎಂಬಂತೆ ತಮ್ಮದೇ ಸ್ವಂತ ಸೂರಾಗುವವರೆಗೆ ಬಾಡಿಗೆ ಮನೆಯಲ್ಲಿದ್ದರು ಮಂಗಳ, ಮಹೇಶ್. ಮನೆಯಲ್ಲಿ ತಮ್ಮವರೇ ಆಗದಿದ್ದ ಮೇಲೆ ಇತರರೊಂದಿಗೆ ಬೆರೆವರೇ? ಅಕ್ಕ ಪಕ್ಕದ ಜನರೊಂದಿಗೆ ಇಲ್ಲ ಸಲ್ಲದ ವಿಚಾರಕ್ಕೆ ದ್ವೇಷ ಕಟ್ಟಿಕೊಂಡರು. ಸುಮ್ಮನೆ ತಂಟೆಗೆ ಬಂದರೆ ಇತರರು ಸುಮ್ಮನಿರುವರೇ? ಎಲ್ಲ ಸೇರಿ ಒಟ್ಟಾಗಿ ಅವರಿಬ್ಬರನ್ನೂ ಚೆನ್ನಾಗಿ ತದಕಿದರು. "ಬಂದ ದಾರಿಗೆ ಸುಂಕವಿಲ್ಲ"ಎಂಬಂತೆ ಇದಕ್ಕಿಂತ ಸ್ವಂತ ಮನೆ, ಅತ್ತೆ ಮಾವರೇ ವಾಸಿಯೆಂದರಿತು ಮತ್ತೆ ಮರಳಿ ಗೂಡಿಗೆ ಹೋಗಿ ಸೇರಿಕೊಂಡರು. ಹಿರಿ ಜೀವಗಳಿಗೆ ಸಂತಸವಾಯ್ತು!
@ಪ್ರೇಮ್@
13.01.2019

1318. ಚುಟುಕು-ಮರೆಯಬೇಡ

ಮರೆಯಬೇಡ

ಭಯವಿರಲಿ ಭಕ್ತಿಯಿರಲಿ
ಹಿರಿಯ ಜೀವಗಳಲಿ ಇಂದು!
ಮುಂದೆ ನೀನೆ ಹಿರಿಯ ಜೀವ
ಮರೆಯ ಬೇಡ ಎಂದೂ..
ಗೌರವವ ತೋರುತಿರು
ಮರೆತು ಬೇಧಭಾವ !
ತನ್ನತನದಿ ಬದುಕುತಿರು
ಬಿಟ್ಟು ಕಾಮ ಕ್ರೋಧ..
@ಪ್ರೇಮ್@
10.01.2020

1320. ಚುಟುಕು-ನಗು

ನಗು

ನಿನ್ನೊಲವಿನ ನಗು ನಾನು
ನೀ ಬೀರುವ ಸವಿಜೇನು
ನಿನ್ನುತ್ತುಂಗದ ನುಡಿ ನಾನು
ಮೌನದಲೂ ಮಾತಾಡೊ
ತುಟಿಯರಳಿದ ಬಿರಿದ ಹೂ ನಾನು!
@ಪ್ರೇಮ್@
07.01.2020

1319. ಚುಟುಕು-ಬೇಕು

ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020

1327. ಪನ್ಪಿನಾಯೆ ಒರಿ ಬೋಡಾ

ಪನ್ಪಿನಾಯೆ ಒರಿ ಬೋಡಾ?

"ನಿಕ್ಲೆನ ಇಲ್ಲದ ಕಜವುನು ದೂರ ದಕ್ಕಡೆ, 
ಬೇತೆ ಜನಕ್ ಅವೆರ್ದ್ ತೊಂದರೆ ಆಪಿನಿ ಬೊರ್ಚಿ,
ಕಜವು ಸರಿ ಇಲವಾರಿ ಮಲ್ಪುಲೆ"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಅನ್ಯಾಯ,ಲಡಾಯಿ ಬೊರ್ಚಿ ಬಾಳ್ ಡ್
ಪರೊಂದು ಗಲಾಟೆ ಮಲ್ಪೊರ್ಚಿ
ಬೇತೆಕ್ಲೆಗ್ ನಿಕ್ಲೆರ್ದ್ ತೊಂದರೆ ಆಪಿನಿ ಬೊರ್ಚಿ"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಪ್ಲಾಸ್ಟಿಕ್, ಫೈಬರ್ ಪೊತ್ತವೊರ್ಚಿ,
ಮಣ್ಣ್ ಗ್ ವಿಷ ಪಾಡೊರ್ಚಿ
ಅಂಗಡಿದ ಜಟ್ ಪಟ್ ತಿಂಡಿ ತಿನೊರ್ಚಿ
ಆರೋಗ್ಯ ಹಾಲ್ ಮಲ್ತೊನೊರ್ಚಿ"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ನೆಮ್ಮದಿಡ್ ಬದ್ಕ್, ಪರನಿಂದೆ ಮಲ್ಪಡ
ಬರಿತಕ್ಲೆನ ಸುದ್ದಿಗ್ ಪೋವಡ
ಸರಿಯಾದ್ ತೆರಿದ್ ನಿಮೂರ್ತಿಡ್ ಬದ್ಕ್"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಬಾಲ್ ತೆಲಿಕೆ-ಕಣ್ಣೀರ್ ದ ಬಾಜನ
ಸುಖ ಕಷ್ಟ ಮಾನ್ಯಗತ್ತಂದೆ ಮರಕ್ ಬರುವಾ?
ಹೊಂದೊಂದು ಬದ್ಕ್ ಲ, ಒಂಜಿ ದಿನ ಪೋಯರೆ ಉಂಡು"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಎಲ್ಲೆದ ಚಿಂತೆ ದೇವೆರೆಗ್ ಬುಡು
ಇನಿತ ಸರ್ವ ಕಾರ್ಯ ಎಡ್ಡೆನೇ ಮಲ್ಪು
ನಾಲ್ ಜನಕ್ ಸಾಯಾದ್ ಬಾಲ್"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಜಾತಿ ಧರ್ಮಂದ್ ಲಡಾಯಿ ಮಲ್ಪಡ
ಪೂರ ಜನತಲಾ ನೆತ್ತೆರ್ ಒಂಜೇ
ಆಸ್ಪತ್ರೆದ ಮಂಚವುಗು ಜಾತಿಜ್ಜಿ"
ಉಂದೆನ್ ಪನ್ಪಿನಾಯೆ ಒರಿ ಬೋಡಾ?

"ಬದಲಾಯಿ ಕಾಲೊಡುಲಾ ಮನಸ್ ಬದಲ್ ಮಲ್ಪೊಚ್ಚಿ
ಮನುಷ್ಯತ್ವಡ್ ಬದ್ಕ್ ದ್ ತೋಜಾದ್ ಕೊರ್ಲ
ಏರ್ ದಾದನೇ ಮಲ್ಪಡ್, ಮಲ್ತಿನೇನ್ ಆಯೆನೇ ತಿನ್ಪೆ"
ಉಂದೆನ್ ಪನ್ಪಿನಾಯೆ ಒರಿ ಬೋಡಾ?
@ಪ್ರೇಮ್@
19.01.2020

1325.ಭಾವಗೀತೆ-ಮುರಳಿನಾದ

ಭಾವಗೀತೆ

ಮುರಳಿನಾದ

ಸನಿಹ ಬಾರೋ ಕೃಷ್ಣ ನಿನ್ನ
ಕೊಳಲ ಗಾನ ಕೇಳುವೆ.
ನಾದದಿಂದ ಮನದ ತುಮುಲ
ದೂರ ಮಾಡಿಕೊಳ್ಳುವೆ..
ಸಂಗೀತದ ಸ್ವರ ಮಾಧುರ್ಯ
ಉಸಿರಲಿ ಲೀನವಾಗ ಬೇಕಿದೆ..

ನಾನು ನೀನು ಒಂದೇ ಎಂದು
ಜಗಕೆ ಸಾರಿ ಹೇಳಬೇಕಿದೆ..
ಮೋಸ ಮಾಡದಿರನು ಹರನು
ಎನುವ ಭಾವ ಹರಿಸಬೇಕಿದೆ..

ಮುಕುಂದ ನಿನ್ನ ಗಾನ ಕೇಳಿ
ಮೈಯ ಮರೆಯ ಬೇಕಿದೆ
ಗಾನದಲ್ಲಿ ಬೆರೆತು ಲೀನವಾಗಿ 
ಮನ ತೇಲಾಡು ಎಂದಿದೆ..

ಮುರಳಿ ನಿನ್ನ ಕೊಳಲ ಹಿಡಿದ
ಕರವ ಹಿಡಿಯೆ ಕಾದಿಹೆ..
ಮರದ ನೆರಳ ಬಳಿಯೆ ನಿಂತು
ನಿನ್ನ ಬರವಿಗಾಗಿ ಕಾಯುವೆ..
@ಪ್ರೇಮ್@
31.12.2019

1326. ಚುಟುಕು-ಸಹೋದರಿ

ಚುಟುಕು
ಸಹೋದರಿ

ಮಲ್ಲಿಗೆ ಕಂಪಿನ
ಕೋಗಿಲೆ ಇಂಪಿನ
ಸೋದರಿ ನೀನಿರೆ ಭಯವೇಕೆ?
ಬದುಕಲಿ ಸಾಹಸ
ಧೈರ್ಯವ ತುಂಬುವ
ತಂಗಿಯೆ ನೀನಿರೆ ಭಯವೇಕೆ?
@ಪ್ರೇಮ್@
13.01.2020

1324. ಹೊಸತನ ತರಲಿ

ಹೊಸತನ ತರಲಿ

ಸ್ವಾಗತವು ನವವರುಷಕೆ
ಸುಸ್ವಾಗತವು ನವ ದಿನಕೆ
ಹರುಷವ ತರಲಿ ಬಾಳಿಗೆ 
ಹೊಸತನು ತರಲಿ ಬದುಕಿಗೆ..

ನಲಿವನು ಹರಡಲಿ ವಿಶ್ವದಲಿ.
ನೋವನು ಮರೆಸಲಿ ಮನಗಳಲಿ
ವಾತ್ಸಲ್ಯ ಬೆರೆಸಲಿ ಹೃದಯದಲಿ
ಉತ್ಸಾಹ ತರಲಿ ಬದುಕಿನಲಿ

ಮೆದುಳಿನ ನಡುವೆ ಸೇತುವೆಯಾಗಲಿ
ತಂತ್ರಜ್ಞಾನದ ಸದ್ಬಳಕೆಯಾಗಲಿ
ಮಾನವ ಮಾನವತೆಯನು ಸ್ಪುರಿಸಲಿ
ಪ್ರೀತಿಯ ಮಳೆಯು ಎಲ್ಲೆಡೆ ಸುರಿಯಲಿ

ಕರುಣೆಯ ಗುಣವು ಬೆಳೆಯಲಿ
ಉಗ್ರತನ ಶಮನವಾಗಲಿ
ಭೂ ತಾಯಿ ಮುನಿಸಿಕೊಳ್ಳದೆ ಇರಲಿ
ಪ್ರಕೃತಿ ಮಾತೆಯು ನಗುತಿರಲಿ..
@ಪ್ರೇಮ್@
01.01.2020

ಹೊಸ ಕ್ಯಾಲೆಂಡರ್ ವರುಷದ ಶುಭಾಶಯಗಳು..

1323. ಭಾವಗೀತೆ-ಇಂದು ನಾಳೆಗಳೊಡನೆ

ಭಾವಗೀತೆ

ಇಂದು-ನಾಳೆಗಳೊಡನೆ

ನಾಳೆಗಳ ನಾಲೆಯಲಿ
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೆ ಅನುಭವಿಸಿ...

ಮನವ ಮರ್ಕಟದಂತೆ
ಹರಿಯ ಬಿಡದೆಯೆ ಬಾಳಿ
ಮಂಜಾಗರೂಕತೆಯ ದೃಷ್ಟಿ ತಾಳಿ..
ಮಾನವತೆಗೆ ಬೆಳಕ ನೀಡಿ..

ಪ್ರತಿ ನಾಳೆಗಳಿಗಾಗಿ
ಇಂದಿನ ಕೊಲೆಯೇಕೆ?
ಇಂದಿನ ದಿನವನ್ನು 
ಇಂದೆ ಬಳಸಬಾರದೇಕೆ?

ಮೋಸದೊಲುಮೆಯು ಬರದೆ
ಪ್ರೀತಿಗೆ ಗೆಲುವಾಗಿ
ಇಂದು ನಾಳೆಗಳಾಟದಲಿ
ಇಂದು ಮನ ಹಗುರಾಗಿ..

ನಾಳೆ ಹೇಗೋ ಏನೋ
ಇಂದು ನಮ್ಮದೆ ಸಮಯ
ಸಂಯಮದಿ ಬಾಳಿರಲು
ತಾಳ್ಮೆ ಸರ್ವಗೆ ನ್ಯಾಯ..
@ಪ್ರೇಮ್@
02.01.2020

1322. ಸ್ವತಂತ್ರ ಬೇಕು

ಸ್ವತಂತ್ರ ಬೇಕು

ಬಂಧನವಿರದ ಬದುಕದು ಬದುಕು
ಬಂಧನವಿರೆ ಸಾಧ್ಯವೆ ಸಹಬಾಳ್ವೆ?
ಪ್ರಾಣಿಗೂ ಪಕ್ಷಿಗೂ ಸ್ವಾತಂತ್ರ್ಯ ಬೇಕು
ಪಂಜರದೊಳಗಡೆ ಖುಷಿ ಹೇಗೆ?

ಬಂಗಾರದ್ದಾದರೂ ಪಂಜರ ಬೇಡವು
ನಂಜಿನ ಐಸಿರ ಏಕಾಗಿ?
ಗಂಜಿಯ ತಿಂದರೂ ಸಂತಸ ಬಾಳದು
ಹಂಚುತ ತಿನ್ನುವ ಕ್ಷಣವಾಗಿ..

ಮುಂಜಾನೆ ಮಂಜಲೂ ಹನಿಯ ಸ್ವತಂತ್ರ
ಬದುಕದು ಹೊಳೆವುದು ಮುತ್ತಾಗಿ..
ನೇಸರ ತರುವ ಹೊನ್ನಿನ ಕಿರಣ
ಬಂಧನವಿರೆ ಬರದು ಧರೆಗಾಗಿ!

ನಾಳೆಯು ಏನೋ ಯಾರಿಗೆ ಗೊತ್ತು
ಬದುಕಲಿ ಬೇಡವು ಬಂಧನವು
ಸಂತಸ ಬೇಕದು ಇಂದಿನ ಬಾಳಿಗೆ
ನೆಮ್ಮದಿ ತಾನೇ ನೆರಳಾಗಿ?
@ಪ್ರೇಮ್@
03.01.2019

1321. ಚುಟುಕು-ಧೈರ್ಯ

ಧೈರ್ಯ

ಸೂರ್ಯ ಕುದಿಯುತ್ತಿದ್ದರೂ
ಅಂತರಂಗದ ಪ್ರೀತಿಯಿಂದಲ್ಲವೇ
ನಿತ್ಯ ಸಲ್ಲಾಪ ಸಾಧ್ಯ?
@ ಪ್ರೇಮ್@
06.02.2020

1366. ಲಾವಣಿ

ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು
ಕಟ್ಟೇ ಕಟ್ಟುತ್ತೇವಾ..
ಸ್ವಚ್ಛ ಭಾರತದಿ ಸುಂದರ ಪರಿಸರ ಕಟ್ಟೇ ಕಟ್ಟುತ್ತೇವಾ...

ಕೊಳಕು ಇಲ್ಲದ, ಪ್ಲಾಸ್ಟಿಕ್ ಇಲ್ಲದ
ನಾಡ ಕಟ್ಟುತ್ತೇವಾ...

ಕಟ್ಟುತ್ತೇವಾ...

ಮರಗಳಿರುವ, ಹಸಿರ ತುಂಬಿರುವ ದೇಶ ಕಟ್ಟುತ್ತೇವ....
ಕಟ್ಟುತ್ತೇವಾ..

ಹಸಿರೇ ನಮ್ಮ ದೇವರೆನುತಲಿ ಗಿಡವ ಬೆಳೆಸುತ್ತೇವಾ...
ಕಟ್ಟುತ್ತೇವಾ..

ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು
ಕಟ್ಟೇ ಕಟ್ಟುತ್ತೇವಾ..
ಸ್ವಚ್ಛ ಭಾರತದಿ ಸುಂದರ ಪರಿಸರ ಕಟ್ಟೇ ಕಟ್ಟುತ್ತೇವಾ...

ಕೊಳಕು ಇಲ್ಲದ, ಪ್ಲಾಸ್ಟಿಕ್ ಇಲ್ಲದ
ನಾಡ ಕಟ್ಟುತ್ತೇವಾ...
ಹಸಿಕಸ ಒಣಕಸ ಬೇರೆ ಮಾಡುತ 
ಸಾರಿ ಹೇಳುತ್ತೇವಾ...
ಕಟ್ಟುತ್ತೇವಾ...

ಮರಗಳಿರುವ, ಹಸಿರ ತುಂಬಿರುವ ದೇಶ ಕಟ್ಟುತ್ತೇವ...
ಹಸಿರೇ ನಮ್ಮ ದೇವರೆನುತಲಿ ಗಿಡವ ಬೆಳೆಸುತ್ತೇವಾ...
ಕಟ್ಟುತ್ತೇವಾ..
@ಪ್ರೇಮ್@

ಗುರುವಾರ, ಜನವರಿ 2, 2020

1316. ನಗುವೆಂದರೆ

2. ನಗುವೆಂದರೆ..

ನಗುವೆಂದರೆ ಎಂದೂ ಹಾಗೇನೇ..
ಜಗವ ಮರೆತು ಹೂ ಬಿರಿದಂತೆ..
ಅಳುವ ಮರೆತು ಸಿಹಿ ತಿಂದಂತೆ..
ಕಷ್ಟಗಳ ಮರೆತು ಸಿಹಿ ಉಂಡಂತೆ..
@ಪ್ರೇಮ್@
09.11.2019

1315. ಮಡದಿ ಇಲ್ಲದ ದಿನ

ಮಡದಿಯಿಲ್ಲದ ದಿನ...

ಮನೆಯ ಗೃಹಿಣಿ ತವರಿಗ್ಹೋಗೆ
ನಾನು ಮೆಚ್ಚಿದೆ.
ಸ್ವಾತಂತ್ರ್ಯವು ಸಿಕ್ಕಿತೆಂದು 
ಮನದಿ ಹಿಗ್ಗಿದೆ.

ಹೋಟೆಲೂಟ ತುಂದು ಬಂದು
ನಾನು ಮಲಗಿದೆ
ಅರ್ಧ ರಾತ್ರಿಯಲ್ಲೆ ಭೇದಿಯಿಂದ
ನಾನು ಸೊರಗಿದೆ..

ನಾನೇ ಅಡಿಗೆ ಮಾಡಲೆಂದು
ಒಲೆಯ ಹಚ್ಚಿದೆ.
ಚಿತ್ರಾನ್ನವೆ ಇರಲಿ ಎನುತ
ಟೋಮೆಟೋ ಹೆಚ್ಚಿದೆ.

ಅರಶಿಣವ ಹಾಕಲಿಕ್ಕೆ
ನಾನು ಮರೆತ್ಹೋದೆ!
ಇರಲಿ ನಾನೇ ತಿನುವೆ 
ಎನುತ ತಟ್ಟೆಗ್ಹಾಕಿದೆ.

ದೂರದಿಂದ ಮಾವನವರ
ನೆಂಟ್ರು ಬಂದರು.
ಅನ್ನ ನೋಡಿ ತಟ್ಟೆಯಲ್ಲಿ
ಅವರು ನಕ್ಕರು.

ಚಿತ್ರಾನ್ನವು ಎನ್ನಲದುವ
ಬೆಚ್ಚಿ ಬಿದ್ದರು.
ಫೋನಿನಲ್ಲಿ ಮಡದಿ ಕೇಳೆ
ತವರವರು ನಕ್ಕರು..
@ಪ್ರೇಮ್@
11.11.2019

1314. ಮಾನವರಾಗೋಣ

ಮಾನವರಾಗೋಣ..

ಎರಡು ಕೋಣೆಗಳ ಇಬ್ಭಾಗಿಸುವ ಗೋಡೆಯಾಗದಿರೋಣ,
ಎರಡು ತುಂಡುಗಳ ಜತೆಗೂಡಿಸುವ ಸೂಜಿಯಾಗೋಣ.//

ಹಾಲು ನೀರುಗಳಂತೆ ಮಿಲನಗೊಂಡ ಸ್ನೇಹಿತರಾಗೋಣ.
ನೀರಲಿ ಕರಗದ ಎಣ್ಣೆಯಂತೆ ಕೋಪಿಸಿ ನಿಲ್ಲದಿರೋಣ!//

ಮನಗಳ ಒಂದೆಡೆ ಜೋಡಿಸಿ ಕಟ್ಟುವ ಇಟ್ಟಿಗೆಯಾಗೋಣ.
ಹೃದಯವ ಒಡೆದು ಕುಟ್ಟಿ ಪುಡಿಮಾಡುವ ಸುತ್ತಿಗೆಯಾಗದಿರೋಣ!//

ಉತ್ತಮ ಆಲೋಚನೆ ಬೆಳೆಸಿಕೊಳ್ಳುವ ಯೋಗಿಗಳಾಗೋಣ.
ಉತ್ತಮ ಕಾರ್ಯವ ಪರರಿಗೆ ತಿಳಿಸುವ ಗುರುಗಳೆ ಆಗೋಣ.//

ತಗ್ಗಿ ಬಗ್ಗಿ ನಡೆಯಲು ಕಲಿಯುವ ವಿದ್ಯಾರ್ಥಿಯಾಗೋಣ.
ಸುಗ್ಗಿಯ ಕಾಲದಿ ಮೈಮನ ಮರೆಯುವ ರೈತನೇ ಆಗೋಣ//

ಊರಿಗೆ ಸಹಾಯ ಹಸ್ತವ ನೀಡುತ ಮುಖಂಡನಾಗೋಣ.
ಸಮಾಜವ ತಿದ್ದುತ, ಸತ್ಯವ ಹೇಳುತ ಕವಿಗಳೇ ಆಗೋಣ.//

ತಪ್ಪನು ತಿಳಿದು ಸರಿಪಡಿಸೆನುತಲಿ ನಾವೂ ಕಲಿಯೋಣ.
ಯೋಗ, ಧ್ಯಾನದಿ ಮೈಮರೆಯುತಲಿ ಆರೋಗ್ಯ ಹೊಂದೋಣ.//

ಪರರಿಗೂ ಕಷ್ಟವು ಇದೆಯೆಂದು ತಿಳಿಯುವ ಹಿತೈಷಿಯಾಗೋಣ 
ಅವರವರಿಗೆ  ಅವರಷ್ಟಕೆ ಬಾಳಲು ನೆಮ್ಮದಿ ನೀಡೋಣ.//

ತಾನೇ ಪ್ರಪಂಚದಿ ಜ್ಞಾನಿಯು ಎನುತ ಬೀಗದೆ ಬಾಳೋಣ.
ಹಲವಾರು ಭಾಷೆಯ ಕಲಿತು ನಾವು ಗೆಳೆಯರೇ ಆಗೋಣ.//

ಮೂಕ ಪ್ರಾಣಿಗೆ ಕರುಣೆಯ ತೋರುತ ಪ್ರಾಜ್ಞರಾಗೋಣ.
ಮಾನವತೆಯನು ಎತ್ತಿ ಹಿಡಿಯುತ ಮಾನವರಾಗೋಣ.//
@ಪ್ರೇಮ್@
12.11.2019

1313. ನಾ ಬರಲೇ

ನಾ ಬರಲೇ..

ಕನಸು ಕರಗಿ ಕಣ್ಣೀರಾದ ಬಾಳಿಗೆ
ನಿರ್ಮಲ ನಗುವಾಗಿ ನಾ ಬರಲೇ?

ಕೊಳೆಯ ತುಂಬಿ ನಾರುವೆಡೆಯು
ಪರಿಮಳದ ತಂಗಾಳಿಯಾಗಿ ಬೀಸಿ ಬರಲೇ?

ಸೋತು ಹೋಗಿ ಬೇಸರದಿ ಕಂಗಾಲಾಗೆ
ವಿಜಯ ಪತಾಕೆಯಾಗಿ ಹಾರಿ ಬರಲೇ?

ಕೊಳಕು ಮನದಿ ನಲುಗಿ ಬೀಳುತಲಿರಲು
ಮಂಜುಳ ನಾದನಾಗಿ ಬರುತ ಎಬ್ಬಿಸಲೇ?

ಇಳೆಯ ಒಳಗೆ ಮಮತೆಯ ಜಯವ ಮರೆಯೆ
ಅಂಬುಜವಾಗಿ ಅರಳಿ ಸಂತಸವ ತರಲೇ?

ರತ್ನದಂಥ ಮಾತುಗಳ ಮರೆತು ಬಾಳುವಾಗ
ದಿವ್ಯಗೀತವಾಗಿ ನಿನ್ನ ನಯನ ತೆರೆಸಲೇ?

ಸಾಹಿತ್ಯ ಸುಧೆಯ ಮರೆತು ಬಿಡಲು
ಪಂಕಜದಂತೆ ಮಾನಸಪುತ್ರಿಯಾಗಲೇ?

ಸಿದ್ಧಗೊಂಡ ನೈಜ ಬಾಳು ಹಾಳು ಮಾಡೆ
ಮದ್ದಿನಂತೆ ಬಂದು ನಾನು ಹಿತವ ನೀಡಲೇ?

ರಜನಿಯಲ್ಲಿ ಜನರು ನಿಜದ ಸಹನೆ ಮರೆತು
ದೂರಕ್ಕಟ್ಟುವಾಗ ಬಂದು ಬರಸೆಳೆದುಕೊಳ್ಳಲೇ?

ದ್ವೇಷದಿಂದ ಮನವು ನಿನ್ನ ದೂರಮಾಡಿ ಅಳುತಿರಲು
ಪ್ರೇಮದಿಂದ ಬಂದ ಜ್ಯೋತಿಯಾಗಿ ಬೆಳಗಲೇ?
@ಪ್ರೇಮ್@
13.11.2019

1312. ಮಗುವಂತೆ

ಮಗುವಂತೆ...

ಮಗುವಿನಂತೆ ಸಿಹಿನಗುವ ಬೀರಿ
ಮಗುವಿನಂತೆ ಸಂತಸವ ಸಾರಿ
ಮಗುವಿನಂತೆ ಮನದಣಿಯೆ ಹಾರಿ
ಮಗುವಿನಂತೆ ಮರದಡಿಯಲಿ ಜಾರಿ...

ಮಗುವಿನ ನಗುವ ಮುಖದಿ ತೋರಿ
ಮಗುವಿನ ಸುಖವನು ಗಾಳಿಗೆ ತೂರಿ
ಮರೆತಿಹಳು ಹಾಲೂಡಲು ಹೊಸ ನಾರಿ!
ಮುಂದಾಗಿಹಳು ಸಾಗಿಸೆ ತನ್ನ ಗುರಿ!

ತನ್ನ ಮಗುವ ತಾನೇ ಮಾರಿ
ಜೀವನ ಕಟ್ಟೊ ಬಡತನದ ಪರಿ
ಮಗುವೆ ತಾನೇ ಮನೆಯ ಸಿರಿ?
ಬದುಕಬೇಕು  ಸುಖ- ಕಷ್ಟ ಮೀರಿ!

ಬಾಳ ಬೇಕು ಸಣ್ಣ ಕಡ್ಡಿ ಗೀರಿ
ಮಾಡಬೇಡಿ ಮಕ್ಕಳ ಸೋಮಾರಿ
ತಿನ್ನಲಿ ಉತ್ತಮ ಸೊಪ್ಪು-ತರಕಾರಿ
ಗೆಲುವು ಬೇಕು ಬದುಕಲಿ ಭಾರಿ...

ಸಾಗಬೇಕು ತನ್ನಯ ಮರಿ
ನೆನಪಿರಬೇಕು ನಿತ್ಯ ಹರಿ!
ಆಗಬೇಡ ಎಂದೂ ಕುರಿ,
ಇರಲಿ ನಿನಗೆ ದೊಡ್ಡ ಗುರಿ!
@ಪ್ರೇಮ್@
14.11.2019

1311. ಅಮೃತ ಸಂಗಮ

ಅಮೃತ ಸಂಗಮ

ಸ್ನೇಹದ ಮಿಲನವು ಸ್ನೇಹ ಸಂಗಮವು
ಕವಿ ಹೃದಯಗಳ ಗೆಲ್ಲುವ ಛಲವು
ಅರಿತ ಮನಗಳ ಜೋಡಿಸೊ ಸೇತುವೆ
ಕೊಂಡಿಯು ಭದ್ರವು ತನ್ಮಯರಾಗೆ

ತಂಡದ ಮುಖಂಡ ಬಾನಿನ ಚಂದಿರ
ಗಂಧರ್ವ ಶ್ಯಾಮ ಪುಟ್ಟ ರತ್ನರು
ವಿಜಯದ ಮೆಟ್ಟಿಲಿಗೆ ಕಾರ್ಯಕ್ರಮ
ಯಾರಿಗೂ ಬೇಡ ಪದನಾಮ..

ತಂಬೆಲರ ತುದಿಯಲಿ ತಂಪನೆಯ ತಂಗಾಳಿ
ಚಂದಿರನ ಅಡಿಯಲಿ ತಣ್ಣನೆಯ ಪದತಳಿ
ತೋರಣವು ಕನ್ನಡಕೆ ಕೃತಿ ಸಮರ್ಪಣೆಯಲಿ
ಮರಳಿ ಬರುವಂತಿದೆ ಅಂಗಳಕೆ ಖುಷಿಯಲಿ..

ತಡಬಡಿಸೆ ಬರವಣಿಗೆ ತೃಪ್ತಿಯಾಗದು ಇಲ್ಲಿ
ವಿಮರ್ಶೆಯೇ ಕೈಗನ್ನಡಿ ತಿದ್ದಿಕೋ ಅಲ್ಲಲ್ಲಿ..
ತರುಲತೆಯ ತವರಂತೆ ಸಂಗಮದ ಸಮರ್ಪಣೆ
ಗುಂಪಿಗಿದೋ ಈ ಸಣ್ಣ ಗೀತೆ ಅರ್ಪಣೆ..
@ಪ್ರೇಮ್@
18.11.2019

1310. ಇವೆಲ್ಲಾ ತಲೆನೋವೇ

ಇವೆಲ್ಲಾ ತಲೆನೋವೇ..

ಮನೆಗೆ ನೆಂಟರು ಬರುವರೆಂದರೆ ತಲೆನೋವೇ..
ಹತ್ತಿರದ ಬಂಧುಗಳ ಮದುವೆಯೆಂದರೂ ತಲೆನೋನವೇ..

ತಲೆಗೆ ಸಂಸಾರದ ಭಾರ ಬೀಳಲು ತಲೆನೋವು
ಮಕ್ಕಳು ಓದಲು ಹಿಂದೆ ಬೀಳಲು ತಲೆನೋವು
ಮಡದಿಯು ತವರು ಮನೆಗೆ ಓಡಲು ತಲೆನೋವು
ಗುಡಿ ಮಂದಿರದಲಿ ಮಹಾನ್ ಪೂಜೆಯು ತಲೆನೋವು!

ಆಫೀಸಲ್ಲಿ ಕೆಲಸ ಅತಿ ಹೆಚ್ಚಾಗಲು ತಲೆನೋವು
ಮನೆಯಲಿ ಹೆಂಡತಿಗೆ ಕೋಪ ಬರಲು ತಲೆನೋವು
ಮಾವ ಆಸ್ತಿ ಕೊಡದಿರೆ ಮತ್ತಷ್ಟು ತಲೆನೋವು
ಅತ್ತೆ ಮಗಳ ನೋಡಲು ಬಂದರೆ ಅಳಿಯಗೆ ತಲೆನೋವು

ಹೆಣ್ಣು ನೋಡಲು ಹೋದರೆ ಗೆಳತಿಗೆ ತಲೆನೋವು
ಗಂಡು ನೋಡಲು ಬಂದರೆ ಪ್ರಿಯಕರನ ನೆನೆದು ತಲೆನೋವು
ತಂದೆ ಗೆಳತಿಯೊಂದಿಗಿರುವುದ ನೋಡಿದೊಡೆ ತಲೆನೋವು
ಮೊಬೈಲ್ ಸೀಕ್ರೆಟ್ ತಂಗಿ ನೋಡಲು ತಲೆನೋವು
ಪಕ್ಕದ ಮನೆಯಾಂಟಿ ಸಿನಿಮಾ ಥಿಯೇಟರಲಿ ಸಿಗಲು ತಲೆನೋವು

ಅಂಕಲ್ ಗೆ ಕಾಲೇಜೋದುವ ಮಗಳಿರಲು ತಲೆನೋವು
ಆಂಟಿಗೆ ತನ್ನ ಕೂದಲುದ್ದ ಬಂದರೆ ತಲೆನೋವು
ಮನೆಯಲಿ ಕಾರ್ಯಕ್ರಮವಿರಲು ತಲೆನೋವು

ಗದ್ದೆಯಲಿ ಹಸಿರು  ಬೆಳೆ ಬರದಿರಲು ತಲೆನೋವು
ತೋಟಕ್ಕೆ ಹುಳ ಬರಲು ಮತ್ತೆ ತಲೆನೋವು
ಜ್ವರ ಬಂದು ಸುಸ್ತಾಗೆ ಬಹುದೊಡ್ಡ ತಲೆನೋವು
ಮಾವನ ಮಗಳಿಗೆ ಕೊಟ್ಟ ಪತ್ರ ಮಾವ ನೋಡೆ ತಲೆನೋವು
ಅತ್ತೆ ಅಮ್ಮ ಹೆಂಡತಿ ಒಟ್ಟಾದರೆ ಮಹಾನ್ ತಲೆನೋವು

ತಲೆಯೇ ಇಲ್ಲದಿದ್ದರೂ ತಲೆಯೊಳಗೇನಿಲ್ಲದಿರಲು ತಲೆನೋವು
ವಿಧಿ ಮಾತ ಕೇಳದಿರಲು ಬರಬರುತ ತಲೆನೋವು
ವಯಸಾಗುವುದ ನೆನೆನೆನೆದು ಏರುತ್ತದೆ ತಲೆನೋವು
ಅಂದುಕೊಂಡ ಕೆಲಸವಾಗದಿರಲು ತಲೆನೋವು.
@ಪ್ರೇಮ್@
19.11.2019

1309. ಹಾಯ್ಕುಗಳು

ಹಾಯ್ಕುಗಳು

ಮನಗಳಲಿ 
ಮತಕ್ಕಾಗಿ ಜಗಳ
ಬಾರದಿರಲಿ..

ಮನದೊಳಗೆ 
ದೇವ ಸ್ತುತಿಗೆ ಅಲ್ಪ
ಜಾಗವಿರಲಿ..

ಮನದಂಚಲಿ
ಮದನೆಯ ಪ್ರೀತಿಗೆ
ಬೆಲೆಯಿರಲಿ.

ಮನಕೆಂದಿಗೂ
ಮನುಜ ಗುಣಗಳ
ತಿಳಿದಿರಲಿ..
@ಪ್ರೇಮ್@
20.11.2019

1308. ಧರೆಗೆ

ಧರೆಗೆ..


ತಾಯೇ ಏಕೆ ಮುಚ್ಕೊಂಡಿರುವೆ
ಮಂಜಲ್ ನಿನ್ನ ಮೈನಾ..
ಜನ್ರು ನಿನ್ಗೆ ಬಿಡ್ತಾ ಇಲ್ವಾ
ಕೊಟ್ರಾ ಎಲ್ಲಾ ಕೈನಾ...

ಹೊದ್ಕೊಂಡಂಗೆ ಕುಂತ್ಕಂಡ್ ನೀನು
ಯಾರ್ನ ನೋಡ್ತಿದ್ದೀಯ?
ಚಳಿಯೋ ನನ್ಗೆ ತಡಿಯಕ್ಕಾಯ್ತಿಲ್ಲ
ಯಾಕ್ ಹಿಂಗ್ ಮಾಡ್ತಿದ್ದೀಯ?

ರವಿಯು ಬರೋಕೆ ಕಾಯ್ತವ್ನಲ್ಲ
ಬರ್ಲಿ ಕಿರಣದ್ ಬೆಳಕು.
ಕವಿಯು ಕುಂತು ಬರಿತವ್ನಲ್ಲ
ಹೋಗ್ಲಿ ಮನದ ಮುಸುಕು..

ಬೇಡದ್ದೆಲ್ಲ ಮೇಲ್ ಮೇಲೆ
ಬಿಸಾಕ್ಬೇಡ್ರಂತ ತೋರ್ಸು!
ನಿನ್ನಯ ಕಷ್ಟವ ಅರಿಯದ ಜನಕೆ
ಹಿಡ್ಕೊಂಡ್ ನಾಲ್ಕು ಬಾರ್ಸು..
@ಪ್ರೇಮ್@
22.11.2019

1307.ನುಲಿನುಡಿ

ನುಲಿನುಡಿ..

ನದಿಯಲಿ ನದಿಯದು ಸಂಗಮವಾಗೆ
ಸಾಗರ ತುಂಬಬಹುದು.
ಕೆರೆ ಕೊಳ ಹಳ್ಳವು ತುಂಬುತ ಹರಿಯೆ
ನದಿಗದು ನೀರು ಸಾಗುವುದು..

ಮುದ್ದಿನ ಪುಟಾಣಿ ಮಕ್ಕಳು ಕಲಿಯೆ
ನಾಳಿನ ದೇಶವು ಮೆರೆಯುವುದು
ಸದ್ದಿಲ್ಲದೆಯೇ ಕಾರ್ಯವ ಮಾಡಲು
ಬದುಕಿನ ಚಿಗುರದು ಮೊಳೆಯುವುದು..

ನಾಡಿನ ಭಾಷೆಯ ಬಳಸಲು ಎಲ್ಲರೂ
ಕನ್ನಡ ತಾನಾಗೇ ಬೆಳೆಯುವುದು
ಓದುತ ಬರೆಯುತ ಅಕ್ಷರ ಬಳಸಲು
ಭಾಷೆಯ ವೃದ್ಧಿಯು ಬೆಳಗುವುದು.

ಮನೆಮನದಲಿ ಮಾತೃಭಾಷೆಯ  ಮರೆತರೆ
ಮುಂದಿನ ಪೀಳಿಗೆಗದು ಸಾಯುವುದು
ನಮ್ಮಯ ಸಂಸ್ಕೃತಿ ನಾವೇ ಉಳಿಸಲು
ಸರ್ವರು ಪಣ ತೊಟ್ಟು ಕಾಯುವುದು..

ಭಾಷೆಯ ಕಲಿತು ತಿಳಿದೆಡೆ ಬಳಸಿ
ಸಂದರ್ಭಕೆ ಸರಿ ಬಳಸೋಣ
ಕನ್ನಡ ತಾಯಿಯ ಅನ್ನದ ಋಣವನು
ಸಾಹಿತ್ಯ ಸೇವೆಯಲಿ ನೀಡೋಣ..

ನಾನು ನನ್ನದು ಎನ್ನಲು ಕನ್ನಡ
ಮರೆತರೂ ಮರೆಯದೆ ಹೋಗುವುದು
ನನ್ನದು ಎಂಬ ಪ್ರೀತಿಯು ನಮ್ಮನು
ಸರ್ವೆಡೆಯಲ್ಲೂ ಕಾಯುವುದು..
@ಪ್ರೇಮ್@
23.11.2019

1306ಬದುಕು ಚೆನ್ನಾಗಿರಲಿ

ಬದುಕು ಚೆನ್ನಾಗಿರಲಿ..

ಗೆಳೆಯರ ಬಳಗವು
ಸೆಳೆಯುತಲಿರಲಿ
ಎಳವೆಯ ಮನದಲಿ
ಮೊಳೆತಂತಿರಲಿ..

ಕೊಳೆ ಕಸಗಳು ಬದುಕಲಿ
ದೂರವೆ ಸಾಗಲಿ
ಸರಳತೆ ಮಾತಲಿ
ಇಣುಕುತಲಿರಲಿ..

ತಳುಕದು ತಲುಪದೆ
ತಣ್ಣಗೆ ಇರಲಿ
ಬಳಪದಿ ಕಲಿತಿಹ
ಗುಣ ನೆನಪಿರಲಿ..

ದಳದಲಿರುವ ಬಣ್ಣದ
ಪುಷ್ಪವೆ ಬರಲಿ
ತಳದಲಿ ಆದರೂ
ಮುರುಟದೆ ಇರಲಿ..

ಕರುಳಿನ ಕೂಗಿಗೂ
ಕರುಣೆಯು ಬರಲಿ
ಛಲದಲಿ ಬದುಕುವ
ಪ್ರೇರಣೆ ಇರಲಿ...
@ಪ್ರೇಮ್@
25.11.2019

1305. ಗಝಲ್-2

ಗಝಲ್

ವದನದೊಳಗೆ ವಕ್ರತೆ ಕಾಣಸುತಿದೆ ಪ್ರೀತಿ ಕಳೆದು ಹೋಗಿದೆಯಲ್ಲ ಸಖಿ!
ನಯನದೊಳಗಿನ ಹೊಳಪು ಮಾಸಿದೆ ವಿರಹ ಬಂದು ಬಿಟ್ಟಿದೆಯಲ್ಲ  ಸಖಿ!

ಪ್ಯಾರ್ ಮೋಸ ಮಾಡಿ ಓಡಿ ಬೇರೆ ಜಾಗ ಸೇರಿ ನೋವ ಬಿಟ್ಟು ಹೋಗಿದೆ!
ಜಿಂದಗಿ ಮರಳುಗಾಡಿನಂತೆ ಬರಡಾಗಿ ಒಣಗಿ ಹೋಗಿದೆಯಲ್ಲ ಸಖಿ!

ನವಿರಾದ ಕನಸುಗಳ ಪೋಣಿಸಿ ನನ್ನೆದೆ ದಾರದಲಿ ಮಾಲೆ ಕಟ್ಟಿ ಕೊಟ್ಟಿದ್ದೆ ಅಂದು!
ರವಿ ಚಂದ್ರ ತಾರೆಗಳ ಆಗಸದಿ ಕಿತ್ತುಹಾಕಿ ನೇತಾಡಿಸಿದಂತೆ ಮಾಡಿರುವೆಯಲ್ಲ ಸಖಿ!

ಬಯಲು ಸೀಮೆಯಲಿ  ಅರಳಿದ ಹಳದಿ ಸೂರ್ಯಕಾಂತಿಯುಂತೆ ಬಂದೆ ಬಾಳಲಿ!
ಬಯಕೆ ತೋರಿಸಿ ಮನದಿ ಬದುಕ ಮಂದಿರಕೆ ಬೆಂಕಿ ಇಟ್ಟು ದೂರಾದೆಯಲ್ಲ ಸಖಿ!

ಎಳೆ ಚಿಗುರ ಆತುರದಂದದಿ ಉತ್ಸಾಹದ ಚಿಲುಮೆ ಚಿಮ್ಮಿಸಿದ್ದೆ ನೀನಂದು!
ತುತ್ತ ತುದಿಯ ಗೋಪುರದಿಂದ ಎತ್ತಿ ಕೆಳಗೆ ಹಾಕಿದಂದದಿ ಬೀಳಿಸಿದೆಯಲ್ಲ ಸಖಿ!

ಹಾಳು ಹಂಪೆಯ ತೆರದಿ ಬಾಳು ಬೆಳಗಲಿಲ್ಲವು ಈ ಜಗದೊಳಗಿನ ಬಾಂಧವ್ಯದಲಿ!
ವೇದನೆಯ ಕಾವಿನಲಿ ದೇಹ ಹೂವಿನಂತೆ ಮುದುಡಿ ಬಾಡಿ ಬಳಲಿದೆಯಲ್ಲ ಸಖಿ!

ಪ್ರೇಮವೇ ಪ್ರತಿ ಕ್ಷಣದ ಉಸಿರೆಂಬುದ ನಂಬಿ ನಡೆಯುವವನ ಜಾಡಿಸಿಬಿಟ್ಟೆ!
ಮರಕಡಿದು ಮಣ್ಣಿಗೆ ಗೊಬ್ಬರವೂ ಆಗದಂತೆ ಉರುಳಿಸಿ ಕಡಿದುಬಿಟ್ಟೆಯಲ್ಲ ಸಖಿ!
@ಪ್ರೇಮ್@
28.11.2019

1304 .ಗಝಲ್-1

ಗಝಲ್

ವದನದೊಳಗೆ ವಕ್ರತೆ ಕಾಣಸುತಿದೆ ಪ್ರೀತಿ ಕಳೆದು ಹೋಗಿದೆಯಲ್ಲ ಸಖಿ!
ನಯನದೊಳಗಿನ ಹೊಳಪು ಮಾಸಿದೆ ವಿರಹ ಬಂದು ಬಿಟ್ಟಿದೆಯಲ್ಲ  ಸಖಿ!

ಪ್ಯಾರ್ ಮೋಸ ಮಾಡಿ ಓಡಿ ಬೇರೆ ಜಾಗ ಸೇರಿ ನೋವ ಬಿಟ್ಟು ಹೋಗಿದೆ!
ಜಿಂದಗಿ ಮರಳುಗಾಡಿನಂತೆ ಬರಡಾಗಿ ಒಣಗಿ ಹೋಗಿದೆಯಲ್ಲ ಸಖಿ!

ನವಿರಾದ ಕನಸುಗಳ ಪೋಣಿಸಿ ನನ್ನೆದೆ ದಾರದಲಿ ಮಾಲೆ ಕಟ್ಟಿ ಕೊಟ್ಟಿದ್ದೆ ಅಂದು!
ರವಿ ಚಂದ್ರ ತಾರೆಗಳ ಆಗಸದಿ ಕಿತ್ತುಹಾಕಿ ನೇತಾಡಿಸಿದಂತೆ ಮಾಡಿರುವೆಯಲ್ಲ ಸಖಿ!

ಬಯಲು ಸೀಮೆಯಲಿ  ಅರಳಿದ ಹಳದಿ ಸೂರ್ಯಕಾಂತಿಯುಂತೆ ಬಂದೆ ಬಾಳಲಿ!
ಬಯಕೆ ತೋರಿಸಿ ಮನದಿ ಬದುಕ ಮಂದಿರಕೆ ಬೆಂಕಿ ಇಟ್ಟು ದೂರಾದೆಯಲ್ಲ ಸಖಿ!

ಎಳೆ ಚಿಗುರ ಆತುರದಂದದಿ ಉತ್ಸಾಹದ ಚಿಲುಮೆ ಚಿಮ್ಮಿಸಿದ್ದೆ ನೀನಂದು!
ತುತ್ತ ತುದಿಯ ಗೋಪುರದಿಂದ ಎತ್ತಿ ಕೆಳಗೆ ಹಾಕಿದಂದದಿ ಬೀಳಿಸಿದೆಯಲ್ಲ ಸಖಿ!

ಹಾಳು ಹಂಪೆಯ ತೆರದಿ ಬಾಳು ಬೆಳಗಲಿಲ್ಲವು ಈ ಜಗದೊಳಗಿನ ಬಾಂಧವ್ಯದಲಿ!
ವೇದನೆಯ ಕಾವಿನಲಿ ದೇಹ ಹೂವಿನಂತೆ ಮುದುಡಿ ಬಾಡಿ ಬಳಲಿದೆಯಲ್ಲ ಸಖಿ!

ಪ್ರೇಮವೇ ಪ್ರತಿ ಕ್ಷಣದ ಉಸಿರೆಂಬುದ ನಂಬಿ ನಡೆಯುವವನ ಜಾಡಿಸಿಬಿಟ್ಟೆ!
ಮರಕಡಿದು ಮಣ್ಣಿಗೆ ಗೊಬ್ಬರವೂ ಆಗದಂತೆ ಉರುಳಿಸಿ ಕಡಿದುಬಿಟ್ಟೆಯಲ್ಲ ಸಖಿ!
@ಪ್ರೇಮ್@
28.11.2019

1303. ಕ

ಕ...
ಕಾಕಾಕಾಕಾ ಕಾಕಾಕಾಕಾ
ಕವನ ಬಂತಪ್ಪಾ ಒಳ್ಳೆ ಕವನ ಬಂತಪ್ಪಾ
ಕವನವು ಬಂದು ಕವಿಯ ಪೆನ್ನಿಗೆ
ಕೆಲಸ ತಂತಪ್ಪಾ..ಒಳ್ಳೆ ಕೆಲಸ ತಂತಪ್ಪಾ..

ಕಾಕಾಕಾಕಾ ಕಾಕಾಕಾಕಾ
ಕಾಲ ಬಂತಪ್ಪಾ...ಕೆಟ್ಟ..ಕಾಲ ಬಂತಪ್ಪಾ..
ಈ ಕಾಲದಲ್ಲಿ ಮೊಬೈಲು ಬಂದು ಕೆಟ್ಟು ಹೋಯ್ತಪ್ಪಾ..
ಜನರ ಗುಣವು ಕೆಟ್ಟು ಹೋಯ್ತಪ್ಪಾ..

ಕಾಕಾಕಾಕಾ... ಕಾಕಾಕಾಕಾ
ಕರಾಳ ಕ್ಷಣವು ಬಂತಪ್ಪಾ..ನಾಡಿಗೆ..ಕರಾಳ ಕ್ಷಣವು ಬಂತಪ್ಪಾ
ಮಳೆಯು ಬಂದು..ನೆರೆಯು ಉಕ್ಕಿ..ನಾಡ ನುಂಗಿತಪ್ಪಾ..
ಕಲಿಯುಗದಿ ಶಾಣೆ ಮಳೆಯಪ್ಪಾ.. ಮನೆಯು ಮುಳುಗಿತಪ್ಪಾ..

ಕಾಕಾಕಾಕಾ..ಕಾಕಾಕಾಕಾ..
ಕೋಟಿ ಹೋಯಿತಪ್ಪಾ..ನೋಟು..ಬ್ಯಾನಾಗಿ ಹೋಯಿತಪ್ಪಾ..
ಒಂದು ಸಾವಿರ ಎತ್ತಲೋ ಹೋಗಿ..ಎರಡ್ ಸಾವ್ರ ಬಂತಪ್ಪಾ..ನೋಟು..ಎರಡ್ ಸಾವ್ರ ಬಂತಪ್ಪ.
ತೆರಿಗೆ ಹೆಚ್ಚಿತಪ್ಪಾ..ಜನರಿಗೆ...ತೆರಿಗೆ ಹೆಚ್ಚಿತಪ್ಪ...

ಕಾಕಾಕಾಕಾ ....ಕಾಕಾಕಾಕಾ..
ಕಾಣದಾದನಪ್ಪಾ...ದೇವಾ..ಕಾಣದಾದನಪ್ಪ
ಕಾಗೆ ಗುಬ್ಬಿ ಕೋಗಿಲೆ ನವಿಲು..ಕಾಣದಾದವಪ್ಪ..
ಕೊರೆಯೊ ಚಳಿಯಲಿ ಯೋಧನನುಭವ ಓದೋನಿಲ್ಲಪ್ಪ..ಪಾಪ ..ಓದೋನಿಲ್ಲಪ್ಪ..

ಕಾಕಾಕಾಕಾ...ಕಾಕಾಕಾಕಾ..
ಕಾಲ ಕೆಟ್ಟೋಯ್ತು..ಈಗಿನ.ಕಾಲ ಕೆಟ್ಟೋಯ್ತು..
ಕಾಲ ಕೆಡ್ತೋ ಜನರು ಕೆಟ್ರೋ..
ಕಳ್ರು ಹೆಚ್ಚಾದ್ರೋ..ನಾಡಲಿ..ಕಳ್ರು ಹೆಚ್ಚಾದ್ರೋ..
ಕಾಸು ತುಂಬಿ ಕಾಲು ಕೀಳೋ ನಾಯಕ್ರು ಬಂದರೋ..
ಓಟು ಹಾಕಿ ಬಡವರಾದ ಜನರು ಅತ್ತರೂ
ದಿನವೂ...ಜನರು ಅತ್ತರು..
@ಪ್ರೇಮ್@
01.12.2019

1302. ನೀ ಮೀಟಿದ

ಮೂಲ ಹಾಡು....ನೀ ಮೀಟಿದ ನೆನಪೆಲ್ಲವೂ

ನೀ...

ನೀ ಬಂದಿಹ ಬಾಳೆಲ್ಲವೂ
ಸಂತಸದ ಗೂಡಾಗಿದೆ..
ನೀ ಬಾಳಲಿ ಬರದಿದ್ದರೆ
ಬರಿದಾದ ಗೂಡಾಗಿದ್ದೇ...

ಬಯಸಿದನು ನೀ ನೀಡಿ
ಮನದುಂಬಿ ಹಾರೈಸಿದೆ..
ಮನದಣಿಯೆ ನೀ ಹರಸಿ
ಬದುಕೆಲ್ಲ ಹಗುರಾಗಿಸಿದೆ..
ಸಂತಸವೂ ನೀ ನನ್ನ ಸಂಭ್ರಮವೂ ನೀ...
ಸಾಹಿತ್ಯ ನೀ ನನ್ನ ಸೌರಭವೂ ನೀ..
ನಾನು ನೀನು ಮಾತ್ರ ಇನ್ನು ಈ ಬಾಳಲಿ ಎಂದೂ...//ನೀ//
@ಪ್ರೇಮ್@
05.12.2019

1301. ಸುಮ್ಮನೆ

ಸುಮ್ಮನೆ


ಮೊಬೈಲ್ ಬಳಸುವೆವು
ಮಾತನಾಡಲು ಸಮಯವಿಲ್ಲ
ಕರೆಮಾಡಲು ಪುರುಸೊತ್ತಿಲ್ಲ
ಯಾರ ಬಗ್ಗೆಯೂ ತಿಳಿದಿಲ್ಲ
ಮನಸ್ಸಿಗೆ ಶಾಂತಿಯಿಲ್ಲ

ದುಡಿಯುತ್ತಲೇ ಇರುವೆವು
ಖರ್ಚಿಗೆ ಹಣವಿಲ್ಲ
ಸಾಲ ಕೊಡಲು ದುಡ್ಡಿಲ್ಲ
ದಾನ ಮಾಡಲು ಧನವಿಲ್ಲ
ಕೈ ಜೋಡಿಸಲು ಕೈ ಉದ್ದವಿಲ್ಲ!

ಬದುಕುತ್ತಲೇ ಇರುವೆವು
ಮುಖದಿ ನಗೆ ತರಲಾಗದು
ನೋಡಿ ನಗು ಬರದು
ಮಾತನಾಡಲಾಗದು
ಕಷ್ಟ ಸುಖ ವಿಚಾರಿಸಲಾಗದು..

ಸಮಯವಿಲ್ಲ ನಮಗೆ
ಸರಿಯಾಗಿ ತಿನ್ನಲು
ಮನೆಮಂದಿಯ ಗಮನಿಸಲು
ಮಕ್ಕಳನ್ನು ಮಾತನಾಡಿಸಲು
ಹಿಂದಿನಂತೆ ಜತೆಗೂಡಲು..

ನಾವು ಬದುಕುತ್ತಿದ್ದೇವೆ
ನಾವು ದುಡಿಯುತ್ತಿದ್ದೇವೆ
ನಾವು ಹೆಸರು ಮಾಡುತ್ತಿದ್ದೇವೆ
ನಾವು ಪ್ರಶಸ್ತಿ ಪಡೆಯುತ್ತಿದ್ದೇವೆ

ನಾವು ಸಂತಸದಿಂದಿರುವೆವಾ..
ನಾವು ಟೆನ್ಶನ್ ಬಿಟ್ಟಿದ್ದೇವಾ
ನಾವು ನಗುವುದ ಕಲಿತಿರುವೆವಾ
ನಾವು ನೋವು ನಲಿವು ಹಂಚುವೆವಾ..
@ಪ್ರೇಮ್@
08.12.2019

1300. ಗಝಲ್-3

ಗಝಲ್

ನಿನ್ನೊಡನೆ ಕಳೆದು ಕಳೆಯುತಿಹ ಕ್ಷಣಗಳು ಅದೆಂಥ ನವಿರು
ಮೌನದಲು ಮಾತಾಡುವ ಭಾಷೆಯದು ನಗುವಂಥ ನವಿರು..

ಕಣ್ಣುಗಳು ಕಲೆತಾಗಿನ ಭಾವದೊಲವ ಅಂದ ಆನಂದ
ಪ್ರತಿ ಸ್ಪರ್ಶಕೂ ಮೃದು ತನು ತಲ್ಲಣ ಮನಕ್ಕೆಂಥ ನವಿರು!

ಹೆಜ್ಜೆಯೊಂದಿಗೆ ಹೆಜ್ಜೆಯನುಭವ ಹೃದಯದ ಹಿಡಿ ಪ್ರೀತಿ
ಮೀಟುವಂತಹ ರಾಗ ರಸದಲಿ ಪಕ್ವ ಲತೆಯಂಥ ನವಿರು!

ದೃಶ್ಯ ಶ್ರವಣದ ನಡುವೆಯಲ್ಲದೆ ನಾಸಿಕದ ಉಸಿರುಸಿರಲಿ
ಕೃಶವೇ ಆಗದೆ ವೇಗದೋಡುವ ಅಲೆಯಂಥ ನವಿರು.

ಇನಿದನಿಯ ಸನ್ನೆಯ ಸಹಿತ ಸವಾಲು ಸವಿನೆನಪಿಗೆ ಸ್ವಾಗತ
ಸಾರ್ಥಕ ಬದುಕಿನ ಸಂತೃಪ್ತಿಯ ನವಿಲಿನಂಥ ನವಿರು..

ಮಹಲಿನಲ್ಲು ಕುಹಕವಿರದ ನಿತ್ಯ ನಮ್ರ ನವೆಯು 
ಮಜಲಿಲ್ಲದ ಮೋಹವದು ಸ್ವಚ್ಛ  ಸ್ನೇಹದಂಥ ನವಿರು

ಹಸಿರ ಮುದವ ವದನಕೆ ನೀಡುವಂದದಿ ಗರಿಗೆದರುವ ಲೋಕ
ಪ್ರೇಮನಾದದಿಂದ ನಾಡಿಬಡಿತ ನಡೆಸುವಂಥ ನವಿರು!
@ಪ್ರೇಮ್@
12.12.2019

1299.ಗಝಲ್-4

ಗಝಲ್

ನನ್ನಮ್ಮನ ಬದುಕಿಗೆ ಸಂತಸ ತಂದ ನಾನೇ ಅಂಬಾರಿ
ತಲೆ ಮೇಲೆ, ಎದೆಯಲಿ  ಬಿರಿದ ನಾನೇ ಅಂಬಾರಿ!

ಬಣ್ಣ ಬಣ್ಣದ ರೂಪ ಧರಿಸಿ ನಗುತಲಿ ಜನಿಸಿರುವೆ
ಕಣ್ಣ ಮಾತ್ರವಲ್ಲ ಮನವನೂ ಕುಕ್ಕಿದ ನಾನೇ ಅಂಬಾರಿ!

ದೇವರ ಪಾದ ಸೇರಲೆಂದು ಅಣಿಯಾಗಿ ಕುಳಿತು ಕಾಯುತಿರುವೆ,
ನೂಲಿನ ಸಹಾಯದಿ ದೇವಾಲಯಕೆ ಬಂದಿಳಿದ ನಾನೇ ಅಂಬಾರಿ!

ಒಂದೇ ದಿನದ ಪುಟ್ಟದಾದ ನಗೆಯು ನನ್ನ ಬಾಳುವೆ!
ಮದುವೆ ಮನೆಗೂ ಹೋಗಿ ಮೆರೆದ ನಾನೇ ಅಂಬಾರಿ!

ಜನ ವಿಷವ ಚುಚ್ಚಿ ಮದ್ದು ನೀಡಿ ಸಲಹುವರು.
ಪೂಜೆ-ತಿಥಿ,ಭಜನೆ, ಶೃಂಗಾರಕೆ ಬಂದ ನಾನೇ ಅಂಬಾರಿ!

ಶೋಕಿ ಜನರ ಕೈಗೆ ಸಿಕ್ಕಿ ಬೆಂದು ಹೋದೆ ಬದುಕಲಿ
ಶೋಭಾಯಾತ್ರೆ, ಮೆರವಣಿಗೆ,ನೃತ್ಯ ವೈಭವಕ್ಕಾಗಮಿಸಿದ ನಾನೇ ಅಂಬಾರಿ!

ಮುದ್ದಿನಿಂದ ಹಿಡಿದು ಕಟ್ಟಿರೆನ್ನ ಬೇಗ ನಾನು ನಲುಗುವೆ!
ಪ್ರೀತಿಯ ಸಂಕೇತದಿಂದ ಗೆಳತಿಗಾಗಿ ತಂದ ನಾನೇ ಅಂಬಾರಿ!
@ಪ್ರೇಮ್@
19.12.2019

1298. ಬೆರಗಾದ ಬೆರಗು

ಬೆರಗಾದ ಬೆರಗು

ಬರದಿಂದ ತತ್ತರಿಸಿದ ಬಡಕಲಾದ 
ಬರಡು ಭೂಮಿಯಂತೆ ಬಡಕಲಾದ
ಬರದ ನಾಡಿನಲಿ ನೀರು ಕಾಣದೆ ಬೆಳೆದ
ಬೆಂಬಿಡದೆ ಬೆಳೆಯಲು ಬಿಡದಿಹ ಜಾಗದಲಿಹ
ಬಿಸುಟ, ಬಹಳ ಬಟಾಬಯಲಾದ 
ಬೋಳು ಬಿಸಿ ಬಿಸಿಲಲಿ ಬೆಳೆಯದೆ ಬೆಳೆದ
ಬಸಿರಿಂದ ಬಂದಾಗಲೇ ಒಗೆದಂತಿಹ
ಬೆವರು ಸುರಿಸಿ ನೊಂದು ಬೆಂದ
ಬೇಸರದಿ ಬೇನೆಯ ಅನುಭವಿಸಿ ನೊಂದು ಬೆಂದ
ಭೀಕರ ಪ್ರವಾಹಕೆ ತುತ್ತಾದ
ಬಿರುಬಿಸಿಲ ನಡುವೆ ಬಿರುಸಾಗಿ ಧೂಳುಂಡ
ಭೋರ್ಗರೆವ ಜಲಪಾತದಿ ನೀರಡಿ ಸಿಲುಕಿದ
ಬೊಬ್ಬಿಟ್ಟು ಯಾರೂ ಬರದ ಪರಿಸ್ಥಿತಿಯಲಿಹ
ಬಹಳವೇ ಕಾದು ಬೆಂಗಾವಲಿಲ್ಲದೆ ಬದುಕಿದ
ಬೇಸರದಿ ಕುದಿದು ಬೇಡಿಕೆಯೇ ಇಲ್ಲದ
ಬವಣೆಯೇ ಮೈವೆತ್ತ ಭವಸಾಗರ ದಾಟದ
ಬಗಲಿನ ಚೀಲಕೂ ಗತಿಯಿಲ್ಲದೆ ತತ್ತರಿಸಿದ
ಬೋಧನೆಯ ಕೇಳದೆ ಬೋಳಾದ ಮರದಂತಿಹ
ಬದನೆಕಾಯಿ ಸುಟ್ಟಂತೆ ಕರಕಲಾದ ಬದುಕನು
ಬೆರಗಾಯ್ತು ನೋಡಿ ಬೇಸರದ ಮುಖವನು.

ನಗುವ ಕಲಿ ನಗುತ ಬಾಳು ನಗುವ ಹಂಚು
ಬಾಳು ಮೂರೇ ದಿನ ಹೋಗಲುಂಟು ತಾಳು!
@ಪ್ರೇಮ್@
23.12.2019

1297. 4 ಹಾಯ್ಕುಗಳು

ಹಾಯ್ಕುಗಳು

ಮನೆಯೊಳಗೆ
ಧನಕನಕವಿತ್ತು!
ಮನ ಬರಿದು!

ಮನ ಮುದದಿ
ಬೀಗಿತ್ತು ಸಡಗರ!
ಮಗನೋಡಿದ್ದ!


ಮನದಂಚಲಿ
ಕಣ್ಣೀರ ಧಾರೆ ಚಿಮ್ಮಿ
ಎದೆ ಹಗುರ!


ಮಾನವೀಯತೆ
ಇರದ ಮನವೇಕೆ?
ಮಾದರಿಯಾಗಿ!
@ಪ್ರೇಮ್@
24.12.2019

1296. ಪರಿಸ್ಥಿತಿ

ಪರಿಸ್ಥಿತಿ

ವಿಪರೀತ ಏರಿದೆ ಭಾರತದಲ್ಲಿ
ವಿದ್ಯಾವಂತರ ಶೇಕಡಾ ಪ್ರಮಾಣ
ಜನ ಸಂಖ್ಯೆ ಏರಿಕೆಯತ್ತ ಪಯಣ!
ಬುದ್ಧಿವಂತಿಕೆಯ ಮನಗಳ ಲಕ್ಷಣ
ಕೋಮುಗಳ ನಡುವಿನ ಘರ್ಷಣ!

ಪರದೇಶದ ಜನರೊಡನೆ ಸಂಬಂಧ
ಪಕ್ಕದ ಮನೆಯವನೊಡನಿಲ್ಲ ಮಾತಂದ
ಜನರ ಮನದೊಳಗ ಕಲ್ಪನೆಯು ಮತಾಂಧ!
ಸ್ವಾರ್ಥ ಬದುಕಲಿ ಹೇಗೆ ಬರುವುದು ಅಂದ?

ತಮ್ಮಷ್ಟಕೆ ಓಡಾಡಲು ಸಣ್ಣ ವಾಹನ,
ಸಮಯಕ್ಕೆ ಬಂದು ಹೋರಡುವುದು ತಕ್ಷಣ
ಮಾತಿಲ್ಲ,ಕತೆಯಿಲ್ಲ ಮೊಬೈಲಲ್ಲೆ ತನುಮನ
ವೀಡಿಯೋ, ಚಾಟ್, ಫೋಟೋಗಳೆ ಜೀವನ!

ವಿಪರೀತ ಸಂಕುಚಿತವು ಪ್ರೀತಿಯ ದಾಹ
ರಾಸಾಯನಿಕಗಳ ಪ್ರಭಾವ ಬೆಳೆದಿದೆ ದೇಹ!
ಪರರ ಒಳಿತಿನ ಬಗೆಗಿಲ್ಲವು ಮೋಹ
ದೇಶಕ್ಕೂ ಮಾಡುವರು ಮಕ್ಕಳೇ ದ್ರೋಹ!

ಮನ ಬೆಳಗದೆ ತಮ್ಮ ಮನೆ ಬೆಳಗದು ಎಂದೂ
ಹೃದಯಕೆ ಹೊಂದಾಣಿಕೆ ಶಿಕ್ಷಣ ಬೇಕಿದೆ ಇಂದು
ಹೋರಾಟ ಹೊಡೆದಾಟ ನಮ್ಮಲ್ಲಿ ಏಕಾಗಿ ಅಲ್ಲಾ?
ಬಂದಲ್ಲಿಗೆ ಒಂದು ದಿನ ಹೋಗಲಿದ್ದೇವೆ ಎಲ್ಲ
@ಪ್ರೇಮ್@
25.12.2019

1294. ಬದ್ ಕ್

ಬದ್ ಕ್

ಬದುಕುನಕುಲು ಬದ್ಕಡ್ ಬುಡ್ಲೆ
ಬದ್ ಕ್ದ್ ಲಾ ಬದ್ ಕಂದಿನಕುಲುಲ್ಲೆರ್ ಮಸ್ತ್ ಜನ ಭೂಮಿಡ್
ದಿನಲ ಬದ್ ಕೊಂದು ಸೈಪಿನಕ್ಲುಲಾ ಉಲ್ಲೆರ್
ದಿನದಿನ ಸೈಯೊಂದು ಬದುಕುನಕುಲು ಏತೋ ಜನ ಉಲ್ಲೆರ್
ಬದ್ ಕ್ದ್ ಲಾ ಸೈದಿನಕ್ಲೆನ ಲೆಕ್ಕನೇ ಇಜ್ಜಿ!
ಬದ್ಕ್ ದ ಬಾಕಿಲ್ ದ ಬೀಗ ಪಾಡ್ದ್ ಕುಲ್ದಿನಾಯಗ್
ವಾ ಬಾಕಿಲ್ ಗೆತ್ಂಡಲಾ ಗೊತ್ತಾವ?
ಬದ್ಕೆ ರೆಗೇ ಪುಟ್ಟಿನಾಯಗ್ ಬದ್ ಕ್ದ ಬೆಲೆ ಗೊತ್ತಾವು!
ಸೈತೊಂದು ಬದುಕುನಾಯಗೆಂಚ ಗೊತ್ತು ಬದ್ಕ್ ದ ಬೆಲೆ?

ಬುಲೆ ಪೋಂಡಲ, ಇಲ್ಲ್ ಬದ್ ಕ್ ಪೋಂಡಲ
ಬೊಡೆದಿ, ಜೋಕುಲು ದೂರಾಂಡಲ
ಹಠಟ್ ಬದುಕುನಾಯರ್ದ್ ಬದ್ಕೆರೆ ಕಲ್ಪೊಡು..
ತಾನ್ ಬದ್ಕ್ ದ್ ಬದ್ಕಾವರೆ ಕಲ್ಪೊಡು.
ಬದ್ಕ್ ದ ಉಜ್ಜಾಲ್ ನ್ ಮಾನಾದ್ ತೂಂಕೊಡು..
@ಪ್ರೇಮ್@
2.1.2020