ಶನಿವಾರ, ಮಾರ್ಚ್ 26, 2022

ಚುಟುಕುಗಳು

ಚುಟುಕು

ಭರವಸೆ

1. 

ಬಾಳಲಿ ಭವ್ಯ ಭರವಸೆ ಬೇಕು
ಭೋಗದ ಭಾವನೆ ಬಯಲಿಗೆ ಬಿಸಾಕು
ಬಿಚ್ಚಿದ ಬಾಯನು ಮುಚ್ಚಲು ಕಷ್ಟ
ಬೀಜದ ಗಿಡವದು ಕಡಿದರೆ ನಷ್ಟ!!

2. 

ನಿರಂತರ ಮನದಲಿ ಬದುಕುವ ಭರವಸೆ
ನಿಸ್ವಾರ್ಥ ಬದುಕಲಿ ನೆಮ್ಮದಿ ವರಸೆ
ನಿಜಗುಣ ಮರೆವುದು ನೋವಿನ ಸುಳಿಯಲಿ
ನಿರೂಪನಾದರೂ ನಗುವನು ನಾರಾಯಣ ನಲಿವಲಿ!!

3.

ಭರವಸೆ ಬಾನಿಗೆ ಭಾನಿನ ತೆರದಲಿ
ಭಾಗ್ಯವು ಬೆಳಕಿನ ಕಿರಣದ ನೂಲಲಿ
ಬಿಸುಟರೆ ನೋವನು ನೆಮ್ಮದಿ ಬಾಳಲಿ
ಬಿದ್ದರೂ ಏಳಲೇ ಬೇಕೀ ಜಗದಲಿ..
@ಪ್ರೇಮ್@
26.03.2022

ಗುರುವಾರ, ಮಾರ್ಚ್ 17, 2022

ದಶಕ 59

ದಶಕ -59

ಜಾತಿ ಮತ ಧರ್ಮಕ್ಕಿಂತ ಹೆಚ್ಚಾಗಿ
 ಮನುಷ್ಯತ್ವ ಎಂಬ ಗುಣಕ್ಕೆ ಬೆಲೆ ಕೊಡಿ.
ದೈವ ದೇವರು ಪೂಜೆ ಪುರಸ್ಕಾರಕ್ಕಿಂತಲೂ
ಬದುಕು, ಉಸಿರು ಆರೋಗ್ಯ ಕಾಯಿರಿ!

ಬದುಕಿದರೆ ನಾಳೆ ಪೂಜೆ ಮಾಡಬಹುದು
ಆರೋಗ್ಯವಿದ್ದರೆ ಮುಂದೆಯೂ ಬಾಡೂಟ ತಿನ್ನಬಹುದು
ಇಂದಿನ ನೆಮ್ಮದಿಯ ಹಾಳು ಮಾಡದಿರಿ
ಪರರ ಮಾತು ಕೇಳಿ ಗುಂಡಿಗೆ ಬೀಳದಿರಿ!

ಆಸ್ಪತ್ರೆಯ ಮಂಚಗಳಿಗೆ ಯಾವ ಜಾತಿಯೂ ಇಲ್ಲ
ಸರ್ವ ದೇಹಗಳಲ್ಲೂ ಹರಿವುದು ರಕ್ತವೇ ಅಲ್ವಾ..?
@ಪ್ರೇಮ್@
17.03.2022

ಮಂಗಳವಾರ, ಮಾರ್ಚ್ 8, 2022

ಭಯವೇಕೆ ಶಿವನಿರಲು

ಭಯವೇಕೆ ಶಿವನಿರಲು

ಭಯವೇಕೆ ಶಿವನಿರಲು ತನುವಿನಲಿ ಲಿಂಗ ರೂಪದಲಿ
ಮುನಿಸೇಕೆ ಆ ದೇವನಲಿ ಕಾಣದಂತಿಹನು ಎನುತಲಿ!

ಹರನಿರಲು ಪೊರೆವವರು ಅದಾರು ಬೇಕಾಗಿದೆ
ವರವಿತ್ತು ಕಾಯುವನು ಹಗಲಿರುಳು ಎನ್ನದೆ
ತನುಮನದಿ ಬೆರೆತು ಹರಸುವನು ಅನವರತ
ಅನುದಿನವು ಬಕುತರನು ನೋಡುವನು ನಗುನಗುತ!

ಬೇಕು ಬೇಡಗಳ ಪಟ್ಟಿಯನು ತಾನೇ ತಯಾರಿಸುವನು
ವರಗಳ ಮಳೆಯನು ಸುರಿದು ತಾ ಸಲಹುವನು
ಕರುಣೆಯ ಸ್ಪರ್ಶವನು ನೀಡಿ ಮರೆಯದಿರುವವನು
ಮಾತೆಯಂತೆ ಕಾಣುತಲಿ ಅಪ್ಪುಗೆಯ ನೀಡುವನು

ನನ್ನದು ನಿನ್ನದು ಎನ್ನಲೇನು ಇದೆ ಬುವಿಯಲಿ
ತನ್ನದು ತಾನೇ ಎನ್ನಲು ಎಲ್ಲಿದೆ ಜಗದಲಿ?
ಬರುವಲೂ ಏನಿಲ್ಲ, ಹೋಗುವಾಗ ಏನೂ ಇಲ್ಲ
ಬಿಟ್ಟು ಹೋಗುವುದು ಬರಿಯ ಪ್ರೀತಿ ನೀತಿ ಎಲ್ಲ
@ಪ್ರೇಮ್@
08.03.2022

ಶುಕ್ರವಾರ, ಮಾರ್ಚ್ 4, 2022

ದಶಕ -49

ದಶಕ -49
ಕರ್ಣನ ಪಾತ್ರವೇಕೆ ನಮಗೆ ಇಷ್ಟವಾಗುತ್ತದೆ?
ವಿಷಯ ಅದೆಷ್ಟು ಆಳ, ಅದೆಂಥ ಸುಲಭ!
ಎಲ್ಲವೂ ಇದ್ದು ಏನೂ ಇಲ್ಲದ ಹಾಗೆ!
ಎಲ್ಲಾ ಅರಿತಿದ್ದರೂ ಉಪಯೋಗ ಇಲ್ಲದಂತೆ!

ರಾಜನಾದರೂ ರಾಜನಲ್ಲ, ಅರಮನೆಯಿದ್ದರು ತನಗಲ್ಲ
ಗೆಳೆಯನಾದರೂ ಒಳ್ಳೆಯವನಿಗಲ್ಲ! ಅಮ್ಮನಿದ್ದರೂ ಅನಾಥ!
ಕಲಿತ ವಿದ್ಯೆಗೆ ಬೆಲೆ ದೊರಕಿಲ್ಲ, ದೇವನ ಕರುಣೆ ಇಲ್ಲ!
ಸೂರ್ಯ ಪುತ್ರನಾದರೂ ಹೇಳಿ ಕೊಳ್ಳುವಂತಿಲ್ಲ!

ಇದ್ದೂ ಇಲ್ಲದ ಬಾಳು ಬಾಳಿದವನಿಗೇ ಗೊತ್ತು!
ಕೊಟ್ಟ ಮಾತು ತಪ್ಪದವನ ಕಷ್ಟ ಯಾರಿಗೆ ಗೊತ್ತು!
@ಪ್ರೇಮ್@
04.03.2022

ದಶಕ -50

ದಶಕ -50
ಊರ್ಮಿಳೆ ಎಂದರೆ ತಾಳ್ಮೆಯ ಮೂರ್ತಿ
ಭೂಮಿಯ ಹಾಗಿನ ಕಾದ ಸಂಪ್ರೀತಿ!
ಲಕ್ಷ್ಮಣ ಹೋದನು ರಾಮನ ಜೊತೆಯಲಿ
ಕಾಯುತ ಕುಳಿತಳು ಬದುಕಿನ ರಥದಲಿ

ಸೀತೆಯ ಜೊತೆಯಲಿ ರಾಮನು ಇದ್ದನು
ಒಂಟಿಯ ಬದುಕಲಿ ತಾನೇ ಗೆದ್ದಳು!
ಮನದಲಿ ನೋವನು ನುಂಗುತ ಮರೆತಳು
ಅರಮನೆ ಆದರೂ ಸೆರೆಮನೆ ಮಿಂದಳು!

ಬದುಕೇ ಹಾಗೆ ತಿರುವಿನ ಹಾದಿ!
ಹಣಕೂ ಗುಣಕೂ ಇಲ್ಲಿಲ್ಲ ತಳಹದಿ!
@ಪ್ರೇಮ್@
04.03.2022