ಭಾನುವಾರ, ಮೇ 29, 2022

ಮಳೆಬಿಲ್ಲು

ಮಳೆಬಿಲ್ಲು
@ಪ್ರೇಮ್@
ಸಹಶಿಕ್ಷಕಿ, 
ಸ.ಪ.ಪೂ.ಕಾಲೇಜು ಮುಲ್ಕಿ
ರಾಗ - ಕೋಡಗನ ಕೋಳಿ

ಮಳೆಬಿಲ್ಲು ಶಾಲೆಗೆ ಬಂದಿತ್ತಾ..
 ಈ ವರ್ಷದಿಂದ..
 ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಪುಸ್ತಕ ಬದಿಗೆ ಇಟ್ಟು
ಬಳಪಾನ ಮರೆತೇ ಬಿಟ್ಟು//
ಆಟದಿ ಕುಣಿತದಿ ಸಂತಸ ಪಡುವ
 ಕ್ಷಣವ ತಂದಿತ್ತಾ
ಮಳೆಬಿಲ್ಲು ಶಾಲೆಗೆ ಬಂದಿತ್ತಾ ಇಲ್ಲಿ...//

ಹಳೆ ಹಳೆಯ ಗುಂಪಿನ ಆಟ
ಆಟಿಕೆಗಳ ತಯಾರಿ ಕೂಟ//
ಶಾಲೆಯ ಒಳಗೂ ಸಮ್ಮರ್ ಕ್ಯಾಂಪಿನ
ನೆನಪನು ತಂದಿತ್ತಾ..ಇಲ್ಲಿ ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ.....//

ನಾಟಕದ ಹಬ್ಬವೇ ಚಂದ
ಕಥೆಗಳ ಕೇಳುವುದಂದ//
ಚಿತ್ರ ಚಿತ್ತಾರದ ಅಂದದಲ್ಲಿ
ಶಾಲೆಯು ಮಿಂಚಿತ್ತಾ..ಇಂದು..
ಮಳೆಬಿಲ್ಲು ಶಾಲೆಗೆ ಬಂದಿತ್ತಾ//

ಕವಿತೆಯ ಕಟ್ಟಿದೆವಣ್ಣ
ಹಾಡನ್ನು ಹಾಡಿದೆವಣ್ಣ//
ಹಸಿರಿನೆಡೆಗೆ ಭಾರೀ ಖುಷಿಯಲಿ
ಗುಂಪು ಹೊರಟಿತ್ತಾ..ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಚಿತ್ರಗಳ ಜಗತ್ತೇ ಮೋಡಿ
ಗಣಿತದ ಗಮ್ಮತ್ತು ಕೂಡಿ//
ಇತಿಹಾಸವನು ನೆನಪಿಗೆ ತರುವ
ಕಾರ್ಯ ನಡೆದಿತ್ತಾ ಇಲ್ಲಿ...
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಬೆಂಕಿ ಇಲ್ಲದ ಅಡುಗೆ
ಸಾಂಬಾರ್  ತಿನಿಸುಗಳ ಬಳಕೆ//
ಮಕ್ಕಳ ಗೊಂಚಲು ಒಟ್ಟು ಸೇರಿ
ಸಂಭ್ರಮ ಪಟ್ಟಿತ್ತಾ...ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಕಸದಿಂದ ರಸವನು ಮಾಡಿ
ಶಾಲೆಯನು ಸಿಂಗಾರ ಮಾಡಿ//
ಶಾಲೆಯ ವೇಳೆ ರಜದ ದಿನದ
ಆನಂದ ತಂದಿತ್ತಾ.....ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಸರಕಾರಿ ಶಾಲೆಯು ಬೆಳೆಯೇ
ಮಕ್ಕಳು ಅಂದದಿ ಕಲಿಯೇ//
ಕಲಿಕಾ ಚೇತರಿಕೆ ಎಂಬ ವಿಧಾನ
ಹೊಸದಾಗಿ ಬಂದಿತ್ತಾ....ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//
@ಪ್ರೇಮ್@
28.05.2022



ಭಾನುವಾರ, ಮೇ 22, 2022

ಲಿಮೆರಿಕ್

ಲಿಮೆರಿಕ್

ಬಾಳು

ಅರೆಗಳಿಗೆ ಮನ ಯೋಚಿಸುವುದು
ಇನ್ನೊಂದು ಕ್ಷಣ ಬೇಸರಿಸುವುದು
ನಡುವೆ ಹಲ ಕೆಲಸಗಳ ಒತ್ತಡದಾಟ
ಮಕ್ಕಳು ಸಂಸಾರದ ಒಳ ಜಂಜಾಟ!
ಬದುಕು ಹೀಗೆಯೇ ಸುಖ ಕಷ್ಟಗಳ ಸರಮಾಲೆಯಿದು.
@ಪ್ರೇಮ್@
23.05.2022

ಮಂಗಳವಾರ, ಮೇ 17, 2022

https://writer.pocketnovel.com/?referrer=pruthvi.soori@pocketfm.com

_*ಕನ್ನಡದಲ್ಲಿ ಕಥೆ, ಕಾದಂಬರಿ ಸೇರಿದಂತೆ ಕುತೂಹಲಕಾರಿ ಬರಹವನ್ನು ಬರೆಯುವವರಿಗೆ ಒಂದು ಸುವರ್ಣಾವಕಾಶ.*_ ನಿಮ್ಮ ಬಿಡುವಿನ ವೇಳೆ ಕಥೆ, ಕಾದಂಬರಿ ಬರೆದು ಸಂಭಾವನೆ ಪಡೆಯಲು ನಿಮಗಾಗಿ ಇಲ್ಲಿದೆ ಅವಕಾಶ.

*ಬರಹ ಹೇಗಿರಬೇಕು?*
ಕನ್ನಡದಲ್ಲಿ ನೀಳ್ಗತೆ ಅಥವಾ ಕಾದಂಬರಿ  ಬರೆಯ ಬೇಕಿರುತ್ತದೆ.

*ಸಂಭಾವನೆ ಪಡೆಯುವುದು ಹೇಗೆ?*
 ಬರೆಯಲು ಶುರು ಮಾಡಿದ ಒಂದು ತಿಂಗಳಲ್ಲಿ ಮೂವತ್ತು ಸಾವಿರ ಪದ ಮುಗಿಸಿದರೇ welcome bonus 3000 rupees ಸಿಗಲಿದೆ, ಬಳಿಕ ಮುಂದಿನ ತಿಂಗಳಿನಿಂದ ‌ಮೂವತ್ತು ದಿನದೊಳಗೆ ಐವತ್ತು ಸಾವಿರ ಪದ ಮುಗಿಸಿದರೆ (Writers Benefit Program WBP) 6000 rupees ಸಿಗಲಿದೆ. ತಿಂಗಳಲ್ಲಿ ಐವತ್ತು ಸಾವಿರ ಪದಕ್ಕಿಂತ ಹೆಚ್ಚು ಪದಗಳ ಬರಹವನ್ನು ಬರೆದರೂ ಹೆಚ್ಚಿಗೆ ಸಂಭಾವನೆ ಪಡೆಯಬಹುದು.

ಬರವಣಿಗೆಯಲ್ಲಿ ಆಸಕ್ತಿ ಇರುವ ಯಾರು ಬೇಕಾದರೂ ಬರೆಯಬಹುದು. 

ಮಾಹಿತಿಗಾಗಿ: 
*ಪೃಥ್ವಿ ಸೂರಿ* +91 82775 89859

*ಈಗಲೇ ರಿಜಿಸ್ಟರ್ ಆಗಿ..* https://writer.pocketnovel.com/?referrer=pruthvi.soori@pocketfm.com