ಶನಿವಾರ, ಜುಲೈ 30, 2022

ಚುಟುಕು

ಚುಟುಕು

ಓಡುವ ರೈಲಿಗೂ ನಿಲ್ದಾಣ ಇರುವುದು
ಓದುವ ಮಗುವಿಗೂ ಹವ್ಯಾಸ ಬೆಳೆವುದು
ಓರೆ - ಕೋರೆಯ ಸರಿಪಡಿಸುತ ನಡೆವುದು
ಓಟದ ಬದುಕಲಿ ಸಹಾಯ ಚಾಚುವುದು..
@ಪ್ರೇಮ್@

ಪ್ರಾರ್ಥನೆ

ಪ್ರಾರ್ಥನೆ
ದೇವ ನಿನ್ನ ನಂಬಿ ನಾನು ಬದುಕಿ ಬಾಳುವೆ
ನಿನ್ನ ದಯೆಯ ನಮಗೆ ನೀಡು ಹರಸೆ ಬೇಡುವೆ//

ನಿನ್ನ ಕರುಣೆಯಿಂದ ಎಲ್ಲ ಯಶವು ಕಾಣಲಿ
ನಿನ್ನ ಶಕ್ತಿಯೊಲವು ಸೇರಿ ಬದುಕು ಸಾಗಲಿ//

ನಿತ್ಯ ನಾನು ಬೇಡುವೆನು ಕಾಯೋ ನಮ್ಮನು
ಸತ್ಯ ಶಾಂತಿ ಕೀರ್ತಿ ಕೊಟ್ಟು ಸಲಹು ನಮ್ಮನು//
@ಪ್ರೇಮ್@
23.05.2022

ಶುಕ್ರವಾರ, ಜುಲೈ 15, 2022

ದಶಕ -89

 ದಶಕ -89


ನಾವು ನಮ್ಮ ನಡುವೆ ಗೋಡೆ ಕಟ್ಟಿದ್ದೇವೆ

ನಾವು ನಮ್ಮ ನಡುವೆ ಕಂದಕ ತೋಡಿದ್ದೇವೆ

ಮಳೆ ಚಳಿ ಸೆಕೆ ಬೆವರು ಬಿಸಿ ಗಾಳಿ ಬರುತ್ತಿರಲಿ

ಮರಗಳ ಕಡಿದು ಸರ್ವ ನಾಶ ಮಾಡುತ್ತಿದ್ದೇವೆ..


ಮಾತು ಕಡಿಮೆ ಮಾಡಿ ಮೌನವಾಗಿದ್ದೇವೆ

ಬೇಡದ ಕಡೆ ಮಾತನಾಡಿ ಸೋತವರಾಗಿದ್ದೇವೆ

ನೀತಿ ಇಲ್ಲದೆ ಬದುಕಿ ಅಮಾನವರಾಗಿದ್ದೇವೆ

ಕೋಟೆಗಳ ಕಟ್ಟಿ ಸಾಮ್ರಾಜ್ಯ ಸ್ಥಾಪಿಸಿದ್ದೇವೆ..


ಮನಗಳ ನಡುವೆ ನೋವಿನ ದ್ವೇಷ ಹಂಚಿದ್ದೇವೆ

ಹೃದಯಗಳ ನಡುವಿನ ಸೇತುವೆ ಮುರಿದಿದ್ದೇವೆ.

@ಪ್ರೇಮ್@

14.07.2022