ಭಾನುವಾರ, ಜುಲೈ 30, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -195

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 195

 "ಬಾಳು ಬಂಗಾರವಾಗಿರಲಿ" ಎಂದು ಹಿರಿಯರು ಆಶಿಸಿದರೆ ಕಿರಿಯರು ಕೂಡ ಅದನ್ನೇ ಬಯಸುತ್ತಾರೆ.  ಹಿರಿ ಕಿರಿಯರು ಆಶಿಸುವ ಈ ಸಾಲನ್ನು ನೆನೆಸಿಕೊಂಡರೆ ಹೌದು ಎಲ್ಲರಿಗೂ ಬಂಗಾರವಾದಂತ ಬಾಳು ಬೇಕು. ಬಾಳನ್ನು ಬಂಗಾರವಾಗಿ ಸುವುದು ಹೇಗೆ? ಬಂಗಾರವೆಂದರೆ ಅತ್ಯಂತ ಬೆಳೆಬಾಳುವ ಲೋಹ. ಬಂಗಾರವನ್ನು ಇಷ್ಟಪಡದ ಮನಸ್ಸಾದರೂ ಯಾವುದು? ಬಾಳು ಬಂಗಾರವಾಗುವಂತೆ ಒಮ್ಮೆ ಮಾಡಿದರೆ ಸಾಕೆ ಮುಂದೆ ಬಾಳು ಬಂಗಾರವಾಗಿಯೇ ಇರುತ್ತದೆಯೇ? ಬಾಳು ಬಂಗಾರವಾಗಿದ್ದರೆ ಸಾಕೆ ಜಗದಲ್ಲಿ ಬದುಕಲು ?ಹಾಗಾದರೆ ಈ ಬಂಗಾರವೆಂದರೆ ಏನು? ಅಯ್ಯೋ ! ಈ ಬಂಗಾರದ ಮೇಲೆ ಅದೆಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ!  ಪ್ರತಿನಿತ್ಯ ಬಾಳುವ ಬಾಳನ್ನು ಬಂಗಾರ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇ? ಪ್ರತಿಯೊಬ್ಬರಿಗೂ ಅವರವರ ಬಾಳನ್ನು ಬಂಗಾರ ಮಾಡಿಕೊಳ್ಳಲೇ ಬೇಕೆ? ಬಾಳನ್ನು ಬಂಗಾರವಾಗಿಸುವುದು ಅತ್ಯಂತ ಸುಲಭದ ಕೆಲಸವೇ? ಹಾಗಾದರೆ ಎಲ್ಲರೂ ಯಾಕೆ ತಮ್ಮ ಬಾಳನ್ನು ಬಂಗಾರವಾಗಿಸಿಕೊಳ್ಳುತ್ತಿಲ್ಲ? ಅದೆಷ್ಟು ಜನ ತಮ್ಮ ಬಾಳನ್ನು ಬಂಗಾರವಾಗಿ ಮಾಡಿಕೊಂಡಿದ್ದಾರೆ? ಬಾಳು ಬಂಗಾರವೇ ಆಗಬೇಕೆ ಅದಕ್ಕಿಂತಲೂ ಬೆಲೆ ಬಾಳುವ ಲೋಹಗಳಲ್ಲವೇ? ಬಾಳು ವಜ್ರಬೇಕೆ ಆಗಬಾರದು? ಬಾಳು ಪ್ಲಾಟಿನಮ್ ಆಗಬಾರದೇ? ಇವನ್ನೆಲ್ಲ ನೀವು ನನಗೆ ತರಲೆ ಪ್ರಶ್ನೆಗಳು ಎಂದು ಹೇಳಬಹುದು. 
   ಅದೇನೇ ಇರಲಿ, ತರಲೆ,  ಹೊಗಳಿಕೆ,  ಒಳ್ಳೆಯದರ ನಡುವೆ ಜಗದಲ್ಲಿ ಪ್ರತಿಯೊಬ್ಬರ ಬಯಕೆ ಏನೆಂದರೆ, ಪ್ರತಿಯೊಬ್ಬರ ಬಾಳು ಕೂಡ ಚೆನ್ನಾಗಿರಬೇಕು.  ಅಂದರೆ ಪ್ರತಿಯೊಬ್ಬರಿಗೂ ಬಯಸಿದ್ದು ಸಿಗಬೇಕು,  ಕಷ್ಟಗಳು ಕಡಿಮೆಯಾಗಬೇಕು,  ದುಃಖಗಳು ಬರಬಾರದು,  ಸುಖವು ಎಲ್ಲರ ಬಾಳಿನ ಮಹಾಮಂತ್ರವಾಗಿರಬೇಕು. ಯಾರಿಗೂ ದುಃಖವಿರಬಾರದು , ಸಂತೋಷ ಮೈ ತುಂಬಿ ಹರಿಯುತ್ತಿರಬೇಕು ಅಷ್ಟೇ! ಅರೆ , ಅದು ಹೇಗೆ ಸಾಧ್ಯ? ನಾವು ನಮ್ಮ ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥಿಸಿದರೆ,  ಪ್ರತಿಯೊಬ್ಬ ವೈದ್ಯನು ಕೂಡಾ ದಿನ ಬೆಳಗಾದರೆ ' ನನ್ನಲ್ಲಿಗೆ ಅತ್ಯಂತ ಹೆಚ್ಚು ರೋಗಿಗಳು ಪ್ರತಿದಿನ ಬರಲಿ' ಎಂದು ಆ ದೇವರಲ್ಲಿ ಬೇಡುವುದಿಲ್ಲವೇ? ಪ್ರತಿಯೊಬ್ಬ ಕಾನೂನು ತಜ್ಞರು ಕೂಡ 'ತನ್ನ ಬಳಿ ನ್ಯಾಯ ಕೇಳಿಕೊಂಡು ಬಹಳಷ್ಟು ಜನರು ಬರಲಿ' ಎಂದು ಆ ದೇವರನ್ನೇ ಬಿಡುವುದಿಲ್ಲವೇ? "ನಾನು ಯಾರಿಗೂ ಸಿಗದ  ಕಳ್ಳನನ್ನು ಹಿಡಿಯುವಂತಾಗಲಿ, ಆ ಮೂಲಕ  ನನ್ನ ಕೆಲಸದಲ್ಲಿ ನನಗೆ ಬೇಗನೆ ಪ್ರಮೋಷನ್ ಸಿಗಲಿ"  ಎಂದು ಪೊಲೀಸ್ ಕೂಡ ಆ ದೇವರಲ್ಲಿ ಕೇಳುವುದಿಲ್ಲವೇ? ' ಹಳೆಯ ಕಟ್ಟಡಗಳು ಮುರಿದು ಬೀಳುತ್ತಲಿರಲಿ, ' ಹೊಸ ಕಟ್ಟಡಗಳು ನನ್ನಿಂದಲೇ ನಿರ್ಮಾಣವಾಗುವ ಹಾಗೆ ಮಾಡಪ್ಪ ದೇವರೇ '  ಎಂದು ಮನೆ ಕಟ್ಟುಲು ಪ್ಲಾನ್ ಮಾಡುವ ಇಂಜಿನಿಯರ್ ಆ ದೇವರನ್ನು , ಎಲ್ಲಾ ಮನೆಗಳನ್ನು ಕಟ್ಟಿ ಕೊಡುವ ಕಂಟ್ರಾಕ್ಟರ್ ಕೆಲಸ ನನಗೆ ಸಿಗಲಿ ಎಂದು ಕಂಟ್ರಾಕ್ಟರ್, ನಿತ್ಯ ಕೆಲಸ ನಮಗೆ ಸಿಗಲಿ ಎಂದು ಕೆಲಸಗಾರರು ಬೇಡಿಕೊಳ್ಳುತ್ತಲೇ ಇರುತ್ತಾರೆ ಅಲ್ಲವೇ?  ಹಾಗೂ  ಭೂಮಿ ಮೇಲೆ, ಪ್ರಪಂಚದಲ್ಲಿ ಹಲವಾರು ಕಾಯಿಲೆಗಳು ಅನ್ಯಾಯ ಅಕ್ರಮಗಳು,  ಸುಲಿಗೆ, ದಂಧೆ,  ಕೊಲೆ ಇವುಗಳು ಆಗುವುದರಿಂದ ಒಬ್ಬರಿಗೆ ಕಷ್ಟವಾದರೆ,  ಇನ್ಯಾರಿಗೋ ಅವರ ಕೆಲಸದ ಮೂಲಕ ಶುಭವಾಗಲಿದೆ, ಅಲ್ಲವೇ?  ದೇವರು ಕಷ್ಟ ಮತ್ತು ಸುಖ,  ಬಡವ ಮತ್ತು ಶ್ರೀಮಂತ, ನೋವು  ಮತ್ತು ನಲಿವು ಎಲ್ಲವನ್ನು,  ನೊಂದವರ ನೋವುಗಳನ್ನು ಕೂಡ ಆಲಿಸುತ್ತಾ ಈ ಜಗವನ್ನು ಸರಿದೂಗಿಸಿಕೊಂಡು ಹೋಗಬೇಕಿದೆ ತಾನೇ? ಪಾಪ ಯಾರ ಪ್ರಾರ್ಥನೆಯನ್ನು ಕೂಡಾ ಮನ್ನಿಸದೆ ಇರಲು ದೇವರಿಗೆ ಸಾಧ್ಯ ಇಲ್ಲ. ಒಬ್ಬ ಗಂಡಸಿನ ಪ್ರಾಣವನ್ನು ತೆಗೆಯಲು ಒಬ್ಬ ಹರಕೆ ಹೊತ್ತು, ಜನ ಕಳಿಸಿದ್ದರೆ, ಮತ್ತೊಂದು ಹೆಣ್ಣು ಜೀವ ತನ್ನ ಮಾಂಗಲ್ಯ ಭಾಗ್ಯವನ್ನು ಉಳಿಸಿ ಕೊಡಿ ದೇವರೇ ಎಂದು ಅವನಿಗಾಗಿ ಬೇಡುತ್ತಾ ಇರುತ್ತದೆ. ಪುಟಾಣಿ ಮಕ್ಕಳು ಊಟ ಇಲ್ಲದೆ ಅಳುತ್ತಾ ಬಿದ್ದುಕೊಂಡಿರಲು ಆ ದೇವರಿಗೇ ಅಯ್ಯೋ, ಪಾಪ ಅನ್ನಿಸಬಹುದು! ಅವನು ಮಾಡಿದ ಪಾಪಗಳನ್ನು ನೋಡಿ, ಇವನನ್ನು ಈಗಲೇ ಅಲ್ಲ, ನರಳಿ ನರಳಿ ಸಾಯಲು ಬಿಡಬೇಕು ಅನ್ನಿಸಲೂ ಬಹುದು. ಅದೇ ಮನುಷ್ಯನ ಜೀವನದಲ್ಲಿ ಪಾಪ , ಪುಣ್ಯಗಳ ಪರಿಕಲ್ಪನೆ ತಂದಿರಬಹುದು. 
   ಪಾಪ ಹಾಗೂ ಪುಣ್ಯಗಳು ಏನೆಂದು ಜನರಿಗೆ ತಿಳಿದಿದ್ದರೂ ಕೂಡ ತಾನು ಮಾಡುತ್ತಿರುವುದು ಪುಣ್ಯಕಾರ್ಯ ಅಲ್ಲ ಎಂದು ಗೊತ್ತಿದ್ದರೂ ಸಹ ಜನರು ಪಾಪದ ಕಾರ್ಯಗಳನ್ನೇ ಬಹಳಷ್ಟು ಮಾಡಲು ಇಚ್ಚಿಸುತ್ತಾರೆ. ಪಾಪದ ಕಾರ್ಯಗಳಲ್ಲಿ ಬಹಳಷ್ಟು ಸಂತೋಷಪಡುತ್ತಾರೆ ಮತ್ತು ಖುಷಿಯಿಂದ ಇರುತ್ತಾರೆ. ಪಾಪ ಮಾಡಿದರೆ ಕೆಟ್ಟದು ಪರರಿಗೆ ನೋವು ಕೊಡುವುದು ತಪ್ಪು ಎಂದು ಗೊತ್ತಿದ್ದರೂ ಕೂಡ ಅದನ್ನೇ ಹೆಚ್ಚು ಹೆಚ್ಚಾಗಿ ಮಾಡುವವರೂ ಇದ್ದಾರೆ. ಆದದ್ದು ಆಗಲಿ ಏನು ಬೇಕಾದರೂ ಆಗಲಿ, ಒಂದು ದಿನ ಎಲ್ಲರೂ ಸತ್ತೇ ಹೋಗುವರು ಅಲ್ಲಿಯವರೆಗೆ ನಾನು ಚೆನ್ನಾಗಿ ಬದುಕುತ್ತೇನೆ ಎಂಬ ಸ್ವಾರ್ಥ ಭಾವವನ್ನು ಇಟ್ಟುಕೊಂಡು ಈ ಭೂಮಿಯ ಮೇಲೆ ಸಿಕ್ಕಿ ಸಿಕ್ಕಿದ ಹಾಗೆ ಬದುಕುವ ಮನುಷ್ಯರು ಬಹಳಷ್ಟು ಜನ ಇದ್ದಾರೆ. ಅದೇ ಪಾಪ ಕಾರ್ಯಕ್ಕೆ ಹೆದರಿ ಏನೇ ಕಷ್ಟ ಬಂದರೂ ಕೂಡ ಒಳ್ಳೆಯತನವನ್ನೇ ಮಾಡುತ್ತಾ ಒಳ್ಳೆಯದಾಗಿಯೇ ಬದುಕುವ ಇನ್ನೂ ಹಲವಾರು ಜನರು ಕೂಡ ಇದೇ ಭೂಮಿಯ ಮೇಲೆ ಇದ್ದಾರೆ. ಈ ಪಾಪ ಪುಣ್ಯಗಳ ಲೆಕ್ಕಾಚಾರವನ್ನು ಆ ದೇವರು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಮತ್ತೊಮ್ಮೆ ಹುಟ್ಟಿ ಬರುವ ಪುನರ್ಜನ್ಮದ ಕಥೆಗಳನ್ನು ನಾವು ಕೇಳಿದ್ದೇವೆ. ಪುನರ್ಜನ್ಮದಲ್ಲಿ ಹುಟ್ಟಿ ಬರುವಾಗ ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳನ್ನು ಹೊತ್ತುಕೊಂಡು ಪಾಪ ಮಾಡಿದ್ದರೆ ಕೆಟ್ಟದಾಗಿ ಹುಟ್ಟುತ್ತೇವೆ ಮತ್ತು ಪುಣ್ಯ ಮಾಡಿದ್ದರೆ ಒಳ್ಳೆಯ ಬದುಕನ್ನು ಪಡೆಯುತ್ತೇವೆ ಎಂದು ಹೇಳುತ್ತಾರೆ ಹಾಗೂ ಹಲವಾರು ಪುಸ್ತಕಗಳಲ್ಲಿ ಕೂಡ ಇದನ್ನೇ ಓದುತ್ತೇವೆ. ಎಲ್ಲಾ ಧರ್ಮಗಳ ದರ್ಶನಿಕರು ತಿಳಿದವರು ಗುರುಗಳು ಕೂಡ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತಾರೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವುದರಿಂದ ನೀವು ಪಾಪಕ್ಕೆ ಗುರಿಯಾಗುತ್ತಿರಿ ಎಂದು ಒತ್ತಿ ಒತ್ತಿ ಹೇಳುತ್ತಾರೆ. ಎಲ್ಲಾ ಜಾತಿ ಧರ್ಮಗಳು ಕೂಡ ಮನುಷ್ಯನಿಗೆ ಹೇಳುವುದು ಒಂದೇ ಉತ್ತಮ ಕಾರ್ಯಗಳನ್ನು ಮಾಡಬೇಕು ಮತ್ತು ನಾವು ಮಾಡುವ ಕಾರ್ಯಗಳು ಪರರಿಗೆ ನೋವನ್ನು ಉಂಟುಮಾಡುವ ಹಾಗಿರಬಾರದು. ಹಾಗೆ ಹೇಳಿದರು ಕೂಡ ಜನರು ಕಳ್ಳತನ,  ಮೋಸ,  ವಂಚನೆ,  ಕೊಲೆ , ಸುಲಿಗೆ , ಅತ್ಯಾಚಾರ,  ಅನಾಚಾರ , ಸುಳ್ಳು ಇವುಗಳನ್ನು ಮಾಡುತ್ತಲೇ ಬಂದಿದ್ದಾರೆ. ಹಾಗೆ ಮಾಡಿದವರು ಚೆನ್ನಾಗಿಯೇ ಬದುಕಿದ್ದನ್ನು ನೋಡಿ ಕೂಡ ಇದ್ದಾರೆ. ಒಳ್ಳೆಯವರಾಗಿಯೇ ಇದ್ದವರು ಬದುಕಿನಲ್ಲಿ ಕಷ್ಟಪಡುವುದನ್ನು ಕೂಡ ನೋಡಿ ಬದುಕುವವರು ಅದೆಷ್ಟೋ ಮಂದಿ ಇದ್ದಾರೆ. ಹಾಗಾದರೆ ನಿಜವಾಗಿಯೂ ಪಾಪ ಪುಣ್ಯ ಎಂಬುದು ಈ ಭೂಮಿಯ ಮೇಲೆ ಇದೆಯೇ?  ಇದ್ದರೆ ಪಾಪಿ ಯಾಕೆ ಬಹಳಷ್ಟು ಖುಷಿಯಿಂದ ಬದುಕುತ್ತಿದ್ದ? ಯಾವಾಗಲೂ ಬೇರೆಯವರಿಗೆ ಒಳಿತಾಗಲಿ ಎಂದು ಬಯಸುತ್ತಿರುವ ಮನುಷ್ಯರಿಗೆ ಅದೇಕೆ ಅಷ್ಟೊಂದು ದೊಡ್ಡ ಕಷ್ಟಗಳು ಎದುರಾಗುತ್ತವೆ? ಪ್ರತಿದಿನ ಸಿಕ್ಕಾಪಟ್ಟೆ ತಿಂದು, ಕೂಡಿದ್ದು ತೇಗಿ,  ಪರರಿಗೆ ಕಷ್ಟ ಕೊಟ್ಟು,  ಪರರನ್ನು ಹಿಂಸಿಸಿ, ಕುಟುಂಬದ ಸದಸ್ಯರಿಗೆ ನೋವು ಕೊಟ್ಟು ಅವರನ್ನು ಬಹಳಷ್ಟು ಕೆಳಕ್ಕೆ ತಳ್ಳಿ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋವಲ್ಲಿ ಮುಳುಗಿಸಿ ತಾನು ಸ್ವಾರ್ಥಿಯಾಗಿ ಬದುಕುತ್ತಿರುವ ಕೂಡ ಅತ್ಯಂತ ಒಳ್ಳೆಯದಾಗಿ ಬದುಕುತ್ತಿದ್ದು, ಯಾರಿಗೂ ಏನೂ ಕೆಟ್ಟದ್ದು ಬಯಸದ ತನ್ನಷ್ಟಕ್ಕೆ ತಾನು ತನ್ನ ಕುಟುಂಬವನ್ನು ಸಲಹುತ್ತ ಯಾವುದೇ ಕೆಟ್ಟ ಚಟಗಳು ಇಲ್ಲದೆ ಇರುವಂತಹ ಮನುಷ್ಯನಿಗೆ ಇದ್ದಕ್ಕಿದ್ದ ಹಾಗೆ ಕ್ಯಾನ್ಸರ್ ನಂತಹ ಮಹಾಮಾರಿಗಳು ಆಕ್ರಮಿಸಿಕೊಂಡಾಗ,  ಜನರು ದೇವರಿಗೆ ಬೈದುಕೊಳ್ಳಲು ಪ್ರಾರಂಭಿಸುತ್ತಾರೆ. ಅವನು ಮಾಡಿದ ತಪ್ಪುಗಳಾದರು ಏನು, ಪ್ರಪಂಚದಲ್ಲಿ ಕೆಟ್ಟದನ್ನು ಮಾಡಿದವನಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾರೆ. ಆದ್ದರಿಂದ ನಾವು ದೇವರನ್ನು ಇನ್ನು ಮುಂದೆ ನಂಬುವುದಿಲ್ಲ ಎಂದು ಬಿಡುತ್ತಾರೆ. ಬಹಳಷ್ಟು ವರ್ಷಗಳ ಕಾಲ ತನಗಾಗಿ ಒಂದು ಒಳ್ಳೆಯ ಹುಡುಗ ಸಿಗಲಿ ಎಂದು ಕಾಯುತ್ತಾ ಕುಳಿತ ಒಳ್ಳೆಯ ಕುಟುಂಬದ ಉತ್ತಮ ಗುಣವುಳ್ಳ ಹುಡುಗಿಗೆ ಯಾವುದೇ ಒಳ್ಳೆಯ ಹುಡುಗ ಸಿಗದೇ ಕೊನೆಗೆ ಎರಡನೇ ಸಂಬಂಧದ ಹುಡುಗನಿಗೆ  ಮದುವೆ ಮಾಡಿ ಕೊಟ್ಟಾಗ, ಅದೇ ಊರಿಡೀ ಹಾರಾಡುತ್ತಾ ಬಜಾರಿಯಂತೆ  ಮೆರೆಯುತ್ತಿದ್ದ ಹುಡುಗಿಗೆ ಉತ್ತಮ ಸಂಬಂಧದ ಹುಡುಗ ಸಿಕ್ಕಿ ಅವಳ ತಪ್ಪುಗಳೆಲ್ಲ ಕ್ಷಮಿಸಿ ಅವಳನ್ನು ದೇವಿಯಂತೆ ನೋಡಿಕೊಳ್ಳುವಂತಹ ಹುಡುಗ ಅವಳ ಬಾಳಲ್ಲಿ ಬಂದಾಗ,  ಉತ್ತಮ ಗುಣದ ಹುಡುಗಿಗೆ ಯಾವಾಗಲೂ ತೊಂದರೆ ಕೊಡುವ ಕುಡುಕ ಗಂಡ ಸಿಕ್ಕಿದಾಗ, ತುಂಬಾ ಸಿರಿವಂತಳಾದ ಹುಡುಗಿಗೆ ತುಂಬಾ ಬಡವನಾದ ಹುಡುಗ ಸಿಕ್ಕಿದಾಗ ಜನ ದೇವರನ್ನು ಶಂಕಿಸಲು ಪ್ರಾರಂಭಿಸುತ್ತಾರೆ. ದೇವರು ಅದೇ ಏಕೆ ಕೆಲವರಿಗೆ ಮೋಸ ಮಾಡುತ್ತಾನೆ, ಒಳ್ಳೆಯವರಿಗೆ ಕೆಕೆ ಕೆಟ್ಟದನ್ನು ಮಾಡುತ್ತಾನೆ, ಉತ್ತಮ ಗುಣ ನಡತೆ ಇರುವ ಜನರ ಬಾಳಿನಲ್ಲಿ ಅದು ಯಾಕೆ ನೋವನ್ನು ಬಹುತೇಕವಾಗಿ ತರುತ್ತಾನೆ? ಇದೇ ಮೊದಲಾದ ಪ್ರಶ್ನೆಗಳು ಜನರ ಬಾಳಿನಲ್ಲಿ ಉದ್ಭವಿಸುತ್ತವೆ. ಆಗ ದೇವರು ಎಂಬುದು ತನ್ನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ದೇವರನ್ನು ನಂಬುವವನು ಕೂಡ ತನ್ನ ಕಷ್ಟಗಳ ಮೂಲಕ ನೊಂದು ಬೆಂದಾಗ ನಾಸ್ತಿಕನಾಗಿ ಬದಲಾಗುತ್ತಾನೆ. ಪ್ರಪಂಚದಲ್ಲಿ ದೇವರು ಎಂಬ ಒಂದು ಶಕ್ತಿ ಇರುವುದು ಸುಳ್ಳು, ನಾನು ಕಷ್ಟ ಪಟ್ಟರೆ ಮಾತ್ರ ನಾನು ದುಡಿದು ಬದುಕಬಹುದು, ಬಾಳು ಬಂಗಾರವಾಗುವುದು ದೇವರಿಂದ ಅಲ್ಲ, ಅದು ನನ್ನ ಕಷ್ಟದಿಂದ ಮಾತ್ರ, ನಾನು ಕೂಡ ಪರವಂತೆ ಸ್ವಾರ್ಥಿ ಆಗಬೇಕು, ನಾನು ದುಡಿದದ್ದರಲ್ಲಿ ಬೇರೆ ಯಾರಿಗೂ ಕೊಡಬಾರದು, ಎಂಬ ನಂಬಿಕೆಗಳನ್ನು ಹೆಚ್ಚಿಸಿಕೊಂಡು ಕಷ್ಟಪಟ್ಟು ದುಡಿದು ಬದುಕುವವರು ಇದ್ದಾರೆ. ಅದೇ ತಾನು ದುಡಿದುವುದರಲ್ಲಿ ಹಲವಾರು ಜನಕ್ಕೆ ಸಹಾಯ ಮಾಡುತ್ತಾ ನನ್ನ ಈ ಬದುಕಲ್ಲಿ ಸ್ವಲ್ಪ ಪುಣ್ಯ ಕಾರ್ಯವಿರಲಿ. ದೇವರು ನನಗೆ ಉತ್ತಮ ಬದುಕನ್ನು ನೀಡಿದ್ದಾನೆ, ನನ್ನಿಂದ ಹಲವಾರು ಜನರು ಸಂತಸದಿಂದ ಬದುಕುವ ಹಾಗೆ ಆಗಲಿ, ಅವರಿಗೆ ಸಹಾಯ ಮಾಡಿದ ಪುಣ್ಯ ನನ್ನ ಮುಂದಿನ ಜನ್ಮಕ್ಕು ಒಂದಿಷ್ಟು ಇರಲಿ. ನಾನು ಇನ್ನು ಮುಂದೆಯೂ ಕೂಡ ಹುಟ್ಟಿ ಬಂದಾಗ ಉತ್ತಮವಾದ ಬಾಳನ್ನಡೆಸುವ ಹಾಗೆ ಆಗಲಿ. ನನ್ನಿಂದ ಹಲವಾರು ಜನ ಬಡವರಿಗೆ ಸಹಾಯವಾಗಲಿ. ನನ್ನ ದುಡಿತದ ಒಂದು ಪಾಲು ನಿರ್ಗತಿಕರಿಗೆ ಸೇರಲಿ. ದಲಿತರು ಹಿರಿಯರು ರೋಗಿಗಳು ದೈಹಿಕ ಅಂಗಾಂಗಗಳನ್ನು ಸರಿಯಾಗಿ ಪಡೆಯದೆ ಇರುವವರು, ಮಾನಸಿಕವಾಗಿ ನೊಂದುಕೊಂಡು ಬದುಕುತ್ತಿರುವವರು, ತಮ್ಮ ಕುಟುಂಬದಿಂದ ಕಷ್ಟಕ್ಕೊಳಗಾದವರು, ಒಬ್ಬೊಬ್ಬರೇ ಕೊನೆಗಾಲದಲ್ಲಿ ಬದುಕುತ್ತಾ ಇರುವವರು, ರೋಗಗಳಿಂದ ನರಳುತ್ತಿರುವವರು ಇದೇ ಮೊದಲಾದ ಜನರಿಗೆ ತಮ್ಮ ಆದಾಯದ ಒಂದಷ್ಟು ಹಣವನ್ನು ಮೀಸಲಿರಿಸಿ ಅವರನ್ನು ಸಾಕುತ್ತಿರುವವರು, ಹಾಗೆ ತಮ್ಮ ಜೀವನವನ್ನು ಇಂಥವರಿಗಾಗಿಯೇ ಮುಡಿಪಾಗಿರಿಸಿದವರು, ಪರರ ನೋವನ್ನು ಮರೆಸುವ ಧ್ಯೇಯವನ್ನು ಹೊತ್ತು ಬದುಕುತ್ತಿರುವ ಮತ್ತು ತಮ್ಮ ಜೀವನವನ್ನು ಅದಕ್ಕಾಗಿ ಬಲಿ ಕೊಡುತ್ತಿರುವ ಹಲವಾರು ಜನರು ಇದ್ದಾರೆ. ಅವರು ತಮ್ಮ ಬಾಳು ಇದರಿಂದಾಗಿಯೇ ಬಂಗಾರವಾಗುವುದೆಂದು ನಂಬಿದ್ದಾರೆ. 
ನಮ್ಮ ಬದುಕು ಬಂಗಾರವಾಗಲು  ನಾವೇನು ಮಾಡುತ್ತಿದ್ದೇವೆ? ಸ್ವಾರ್ಥದ ಬಾಳುವೆಯೇ? ಕಷ್ಟದ ದುಡಿಮೆಯೇ? ನೊಂದವರಿಗೆ ಸಾಂತ್ವನ ನೀಡುವಂತಹ ಉತ್ತಮವಾದ ಕೆಲಸವೇ? ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಸಣ್ಣ ಸಹಾಯವೇ? ಇವುಗಳನ್ನು ಮತ್ತೆ ಮತ್ತೆ ಪರಿಶೀಲಿಸಿಕೊಂಡು ನಮ್ಮ ನಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳುವ ಕೆಲಸವನ್ನು ನಾವು ನಾವೇ ಮಾಡಬೇಕಾಗಿದೆ ಅಲ್ಲವೇ! ನೀವೇನಂತಿರಿ?
@ಹನಿ ಬಿಂದು@
29.07.2023

ಶನಿವಾರ, ಜುಲೈ 29, 2023

it's raining

It's Raining

It's the life of a drop of water
She never wants to sit still
She was moving in the river with her friends and relatives happily
She crossed many ups and downs
With lots of laughs and tears!

She jumped to the sea with its fellows
And gathered there in the wast salty 
One fine day sun dried her up to the clouds
She didn't want to dry, but helpless!

Clouds made her more hot and she burnt 
Lost her identity ,life and breath
One fine day air cooled the clouds 
It's the turning point of its life!

The drop tried to separate alone
She got her freedom and shape
She jumped in to the earth
Thunder and lightning helped her
She was very happy in her life

Again she fell down on a green leaflet
Then she moved into the mouth of a spider
Came out and stored on the stem
Joined more drops and jumped to the earth!

Mingled with many such drops and cooled the mud
Flew away to the fields and grown paddy!
Then danced with the river drops
Again being happy with all together in life cycle..
@HoneyBindu@
29.07.2023

ಶುಕ್ರವಾರ, ಜುಲೈ 21, 2023

CCRT

यह हमारा training था

यह हमारा training था
जहां तेरह स्टेट के शिक्षक थे।

यह हमारा training था
जहां सारे भारत एक थे।

यह हमारा training था
जहां खाने की कुछ कमी नही थी।

यह हमारा training था
जहां पैंसठ शिक्षक एक थे।

यह हमारा training था
जहां हर दिन एक राज्य का प्रदर्शन होता था।

यह हमारा training था
जहां master resource persons आते थे।

यह हमारा training था
जहां डांस म्यूजिक लिटरेचर मिलते थे।

यह हमारा training था
जहां सब की भाषा अपनी थी।

यह हमारा training था
जहां सारे टीचर्स छात्र थे।

यह हमारा training था
जहां शिक्षक सुन ने के बाद बोलते थे।

यह हमारा training था
जहां से हम विविध ज्ञान ले जायेंगे।

यह हमारा training था
जहां सारे कल्चर मिल जायेंगे।

यह हमारा training था
जहां ccrt टीम काम करते हैं।

यह हमारा training था
जहां का सेंटर हमारा प्लेटफार्म थी।

यह हमारा training था
जहां डायरेक्टर साब भी मिलते थे।

यह हमारा training था
जहां सौंदर्य mam सारथी है।

Written by, 
Prema
Asst Teacher
G.P.U.College Mulki
Dakshina Kannada
Karnataka 
@Hani Bindu@
21.07.2023

ಭಾವಗೀತ

ಭಾವಗೀತೆ

ಪಾಡು

ಭಾವದಲೆಗಳಲಿ ತೇಲಿ ಹೋಗಲಿ
ನೋವು ಎಂಬ ಛಾಯೆ
ಸಾವಿಗಂಟುತಲಿ ಬೆಳೆದ ಜೀವಿಗಳ
ಮೋಹವಿಲ್ಲಿ ಮಾಯೆ..

ಇಂದು ಇಲ್ಲಿ ನಾಳೆ ಇನ್ನೆಲ್ಲೋ
ಬದುಕ ಹೆಜ್ಜೆ ಸಾಲೆ
ಕಂದು ಬರುವರೆಗೆ ಕೋಪ ಮತ್ಸರವು
ಸಿಡುಕು ಏಕೆ ಬಾಳೆ..

ಭೋಗ ಭಾಗ್ಯದೊಳು ಭೀತಿ ಕುಂದಿಹುದು
ಪ್ರೀತಿಗೆಲ್ಲಿ ಜಾಗ?
ಮೋಸ ವಂಚನೆಯ ಬೀಜ ಬಿತ್ತಲು
ನೀತಿಗೆಲ್ಲಿ ರಾಗ?

ನಾನು ನಂದೆ ಮೆರೆವ ಎದೆಯೊಳಗೆ
ಹಂಚಿಕೊಳುವ   ಹಾಡೆ?
ನಾಯಿ ನರಿಯಂತೆ ಕಿತ್ತು ತಿನುತಿರಲು 
ಮುಂಚಿನಂತೆ ಪಾಡೆ?
@ಹನಿಬಿಂದು@
21.07.2023

ಬುಧವಾರ, ಜುಲೈ 19, 2023

ದಶಕ

ಪ್ರೇಮ್ ನ ದಶಕಗಳು -1

ನಿಮ್ಮ ನೋವ ಹಂಚಿಕೊಳ್ಳದಿರಿ ಎಂದೂ
ತಮ್ಮ ಬೇಳೆ ಬೇಯಿಸಿಕೊಳ್ಳುವವರಿಹರು ಮುಂದು
ತನುಮನದಲಿ ಪ್ರೀತಿಯಿರದು ಸರ್ವರಲಿ
ಬದಲಾಗಿ ದ್ವೇಷ ರೋಷದಿ ಕುದಿವರು ತಾವಾಗಿ..

ಮುಖದಲಿ ಕೊಂಕು ನಗು ಇಹುದು ತಾನಾಗಿ
ನಂಬಿ ಬಿಟ್ಟರೆ ಮೋಸ ಹೋಗುವಿರಿ ನೀವಾಗಿ
ಕಂಬಿ ಎಣಿಸಬೇಕು ನಮ್ಮ ಸಹಾಯಕೆ ನಾವೇ
ನಂಬಿಕೆಗೆ ಅರ್ಹರ ಹುಡುಕಲು ಹೊರಟರೆ ಸಾವೇ..

ನೆನಪಿರಲಿ ಕಾಲವಿದು ಕಲಿಯುಗ ಕೇಳೋ ಅಣ್ಣ
ಬಟ್ಟೆಯೊಡನೆ ಮನಸ್ಸು ಕೂಡಾ ಬೇರೆ ಬೇರೆ ಬಣ್ಣ!
@ಪ್ರೇಮ್@
21.11.2021

ಹಾರೈಕೆ

ಮನದ ಹಾರೈಕೆ

ನಡೆನುಡಿಯ ನಡುವಿನಲಿ
ನುಡಿಯೊಂದು ಕೆಡವದಿರಲಿ
ಸಡಗರದ ಸಮಯದಲು
ಪಡೆಯೊಡನೆ ನಗುವೆ ಇರಲಿ

ಸೌಹಾರ್ದವು  ಜೊತೆಗಿರಲಿ
ಸಾಮರಸ್ಯ ಬಳಿ ಬರಲಿ
ಸಹಕಾರದ  ಮನೋಭಾವದ
ಸದ್ಚಿಂತನೆ ಸದಾ ಇರಲಿ

ದೇಶ ದೇಶ ಒಂದಾಗಲಿ
ಗಡಿಯ ಯುದ್ಧ ದೂರಾಗಲಿ
ಜಾತಿ ಮತವು ಹಳತಾಗಲಿ
ಒಮ್ಮನಸ್ಸು ಮೂಡಿ ಬರಲಿ

ಬಾಳ ಶಾಂತಿ ಮಾಸದಿರಲಿ
ಹುಟ್ಟುಹಬ್ಬ ಖುಷಿ ತರಲಿ
ದೇವನೊಲುಮೆ ನಿತ್ಯ ಸಿಗಲಿ
ಸುಖ ಸಂತಸ ನಲಿಯುತಿರಲಿ
@ಹನಿಬಿಂದು@
19.07.2023

ಶನಿವಾರ, ಜುಲೈ 15, 2023

ತಪ್ಪು

ಮಾಡಿದ ತಪ್ಪು

ಇಷ್ಟಕ್ಕೂ ನಾ ಮಾಡಿದ ತಪ್ಪೇನು ಗೊತ್ತೇ?
ನನ್ನ ನೋವನ್ನೂ ಗಮನಿಸದೆ ಪರ ಹಿತವ ಬಯಸಿದ್ದು
ನನ್ನ ಬದುಕನ್ನು ಬಲಿಕೊಟ್ಟು ಪರರ ಸಂತಸಕ್ಕೆ ಹಪಹಪಿಸಿದ್ದು
ನನ್ನ ಲೋಕವ ಮರೆತು ಪರರಿಗೆ ಸಹಾಯ ಮಾಡಿದ್ದು

ನನ್ನ ಬಾಳನ್ನು ತೊರೆದು ಪರರ ಬಾಳಿಗೆ ದೀಪ ಹಚ್ಚಲು ಹೋದದ್ದು
ಪರಹಿತದ ಭಾವನೆಯಿಂದ ಪರರ ಕಣ್ಣೀರು ಒರೆಸಲು ಸಹಾಯ ಮಾಡಿದ್ದು

ನನ್ನ ಸುಖ ಮರೆತು ಪರರಿಗೆ ಸಂತಸ ಕೊಟ್ಟದ್ದು
ನನ್ನ ನೋವನ್ನೂ ಲೆಕ್ಕಿಸದೆ ಪರರ ನೋವಿಗೆ ದನಿಯಾದದ್ದು
ಸ್ವಾರ್ಥ ತೊರೆದು ನಿಸ್ವಾರ್ಥದಿಂದ ಪ್ರೀತಿಯ ಸಾಕಿ ಸಲಹಿದ್ದು

ಯಾವುದೇ ಕ್ಷಣಿಕ ಸುಖ ಬಯಸದೆ ಸುದೀರ್ಘ ಬಾಳಿಗೆ ಸಹಕರಿಸಿದ್ದು
ಪರರ ಕನಸುಗಳ ಈಡೇರಿಸಲು ಕೈಗೆ ಕೈ ಜೋಡಿಸಲು ಹೋದದ್ದು

ಪರರ ಬಾಳಿನಲಿ ಸಿಗದ ಸಂತಸವ ಕೊಟ್ಟು ತೃಪ್ತಿಪಡಿಸಲು ಹೆಣಗಾಡಿದ್ದು
ನನಗಾಗಿ ನಾ ಏನನ್ನೂ ಬಯಸದೆ
ಪರರ ದುಃಖವ ಒರೆಸುವ ಕೈಗಳಾಗಿದ್ದು

ಪರರ ನೋವಿನ ಕಣ್ಣೀರು ತದೆದದ್ದು
ಪರರ ಬದುಕಲ್ಲಿ ಆನಂದ ಕಾಣಲು ಬಯಸಿದ್ದು
ಪರರಿಗೆ ಉತ್ತಮವಾಗಲಿ ಎಂದು ಹಾರೈಸಿದ್ದು

ಪರರ ಹೃದಯದಲ್ಲಿ ಗೂಡು ಕಟ್ಟಿದ್ದು
ಪರರ ಕಣ್ಣುಗಳಲ್ಲಿ ನನ್ನ ಸಂತಸ ಕಂಡಿದ್ದು
ಪರರ ಆಸೆಯ ನೆರವೇರಿಸಿದ್ದು
ಪರರ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದ್ದು

ಪರರ ನೋವಿಗೆ ಮುಲಾಮು ಹಚ್ಚಿದ್ದು
ಪರರ ಭಾವನೆಗಳಿಗೆ ಸ್ಪಂದಿಸಿದ್ದು
ಪರರ ಬದುಕಲ್ಲಿ ಚೆನ್ನಾಗಿ ಇರಲಿ ಎಂದು ಆಶಿಸಿದ್ದು
ಪರರು ಕೊಟ್ಟ ಕಷ್ಟಗಳ ಮರೆತದ್ದು
ಪರರಿಗೆ ಬದುಕನ್ನು ಮುಡಿಪಾಗಿ ಇಟ್ಟದ್ದು

ಪರರ ಕಣ್ಣಲ್ಲಿ ನನ್ನ ಸುಖವ ನೋಡಿದ್ದು
ಪರರನ್ನು ಕೂಡ ತನ್ನವರೆಂದು ಆಧರಿಸಿದ್ದು
ಪರರ ಜೊತೆಗೆ ಕನಸು ಹೆಣೆದದ್ದು
ಪರರು ನಮ್ಮವರು ಎಂಬ ಭಾವ ಬೆಳೆಸಿಕೊಂಡಿದ್ದು

ಪರರ ಏಳಿಗೆಯ ಅನವರತ ಬಯಸಿದ್ದು
ಪರೋಪಕಾರಿಯಾಗಿ ಬಾಳ ರಥವ ಸಾಗಿಸಿದ್ದು
ತನ್ನ ನೋವನ್ನು ಅಡಗಿಸಿ ಇತ್ತು ಪರರಿಗೆ ಸಂತಸ ಬಯಸಿದ್ದು
ನನ್ನ ಖುಷಿಯ ಪರ ಹಿತಕೆ ಮರೆತದ್ದು
@ಹನಿ ಬಿಂದು@
16.07.2023

ನಾವಲ್ಲ

ನಾವಲ್ಲ
ಯಾರಿಗೋ ನೋವಾದಾಗ
 ಕೊರಗದವರು ನಾವಲ್ಲ

ಯಾರಿಗೋ ತೊಂದರೆಯಾದಾಗ
ಮರುಗದವರು ನಾವಲ್ಲ

ಯಾರಿಗೋ ಕಷ್ಟ ಬಂದಾಗ
ಬೇಸರ ಪಡದವರು ನಾವಲ್ಲ

ಯಾರಿಗೋ  ಬೇಡವಾದಾಗ
ಸಾಯುವವರು ನಾವಲ್ಲ

ಯಾರಿಗೋ  ಬೇಸರವಾದಾಗ
ಖುಷಿ ಪಡುವವರು ನಾವಲ್ಲ

ಪರರ ಸುಖ ಸಂತೋಷವನ್ನು
ಕಿತ್ತು ಕೊಳ್ಳುವವರು  ನಾವಲ್ಲ

ಯಾರದೋ ಕಣ್ಣಿನಿಂದ ನೆತ್ತರು ಸುರಿದರೂ
ಒರೆಸದೇ ಇರುವವರು ನಾವಲ್ಲ

ಯಾರದೋ ಕಣ್ಣೀರ ಧಾರೆಗೆ
ಕಾರಣರಾಗುವವರು ನಾವಲ್ಲ

ಯಾರದೋ ಬದುಕ ಸೋಲಿನ ಬೀಗಕ್ಕೆ
ಕೀಯಾಗುವವರು  ನಾವಲ್ಲ

ಯಾರದೋ ನಾಳಿನ ಬಾಳಿಗೆ
ಕೊಳ್ಳಿ ಇಡುವವರು ನಾವಲ್ಲ.
@ಹನಿಬಿಂದು@
15.07.2023

ಬುಧವಾರ, ಜುಲೈ 5, 2023

ಗಝಲ್

ಗಝಲ್

ಬರೆಯಬೇಕೆನಿಸಿದೆ ಹೊಸದಾದ ನವ ರೂಪದ ಗಝಲ್
ಮರೆಯಬೇಕೇನಿಸಿದೆ ಹಳೆಯ ಮೋಹದ ಗಝಲ್

ನೋವು ಕಷ್ಟ ದುಃಖದ ಜೀವನ ಸಾಕಾಗಿದೆ
ಹೊಸೆಯ ಬೇಕೆನಿಸಿದೆ ಜೀವನದ ಗಝಲ್

ನಲಿವಿನ ಸಂತಸ-ಸುಖದ ಸಾಲುಗಳು ಬೇಕಾಗಿವೆ
ನವಿಲಿನಂತೆ ಕುಣಿಯ ಬೇಕೆನಿಸಿದೆ ಗಝಲ್

ಗರಿಬಿಚ್ಚಿ ಹಾರಿ ನಭದಿ ತೇಲಾಡಬೇಕಿದೆ
ಮರೆತು ಮರೆಸಲು ಮರೆಯಬೇಕಿದೆ ಗಝಲ್

ಪ್ರೇಮದ ಸಾಲುಗಳ ಸ್ನೇಹದ ಪದಗಳಲಿ ಹೊಸೆಯಬೇಕಿದೆ
ಪ್ರೀತಿಭರಿತ ಮಾತುಗಳ ಆಡಬೇಕಿದೆ ಗಝಲ್
@ಹನಿಬಿಂದು@
06.07.2023