ಭಾನುವಾರ, ಡಿಸೆಂಬರ್ 31, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -216

        ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ  -216

  ಒಂದು ಕಾಲವಿತ್ತು, ಹೊರಗೆ ಹೋಗುವುದು ಎಂದರೆ ಹೊರಡುವುದು. ಏನಿಲ್ಲ ಎಂದರೂ ಕೈ ಕಾಲು ಮುಖ ಸಾಬೂನು ಹಾಕಿ ತಿಕ್ಕಿ ತೊಳೆದು, ಒರೆಸಿ, ತಲೆ ಬಾಚಿ ಒಳ್ಳೆ ಬಟ್ಟೆ, ಪೌಡರ್, ಕುಂಕುಮ ಹಾಕಿ ಚಪ್ಪಲಿ ತೊಟ್ಟು ಹೊರ ನಡೆಯುವುದು. ಅಷ್ಟೇ ಮೇಕಪ್. ಆದರೆ ಕಾಲ, ಜನ, ಸಿಗುವ ವಿವಿಧ ಸೌಂದರ್ಯ ವರ್ಧಕಗಳು ಎಲ್ಲವೂ ಬದಲಾಗಿವೆ. ಈಗ ಜನ ಪಾರ್ಲರ್ ಗಳಿಗೆ ಹೋಗುತ್ತಾರೆ, ತಮ್ಮ ಬಣ್ಣ, ವೇಷ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಾರೆ.  ಅಷ್ಟೇ ಏಕೆ, ಮಡದಿಯ ಹಾಗೆ ಡ್ರೆಸ್ ಮಾಡಿಕೊಂಡು ಹೋಗುವ ಪುರುಷರು ಕೂಡಾ ಇರಬಹುದು!
                ಅದಿರಲಿ, ಈಗಿನ  ಮೇಕ್ ಆಫ್ ಹಾಗಲ್ಲ. ಅದನ್ನು ದೇಹದಲ್ಲಿ ಮುಖದ ಅಂದಕ್ಕೆ ಹಚ್ಚುವ ಕ್ರೀಂ, ಪೌಡರ್ ಗಳು ಮಾತ್ರ ಅಲ್ಲ ಇಂದು. ಹುಬ್ಬಿಗೆ, ಕಣ್ಣಿನ ರೆಪ್ಪೆಯ, ಗಲ್ಲಕ್ಕೆ, ಗಡ್ಡಕ್ಕೆ, ಕೆನ್ನೆಗೆ, ತುಟಿಗೆ, ಹಣೆಗೆ, ಕುತ್ತಿಗೆಗೆ, ಕಿವಿಗೆ, ಮೂಗಿಗೆ ಹೀಗೆ ಮುಖದ ಬೇರೆ ಬೇರೆ ಅವಯವಗಳಿಗೆ ಒಂದೊಂದಲ್ಲ, ಬೇಸಿಕ್, ಫೌಂಡೇಶನ್, ಕಲರಿಂಗ್, ಡಾರ್ಕ್ ಲುಕ್, ನೈಟ್ ಕಲರ್, ಸನ್ ಸ್ಕ್ರೀನ್, ಲೋಷನ್, ಕ್ರೀಂ, ಪೌಡರ್, ಜೆಲ್, ಆಯಿಂಟ್ಮೆಂಟ್, ಸ್ಟಿಕ್, ರೆಡಿ ಮೇಡ್ ಅಂತ ಏನೇನೋ ಬಂದಿದೆ. ಇವುಗಳಲ್ಲಿ ಹುಬ್ಬಿನ ಅಂದ, ಆಕಾರ, ಗಾತ್ರ, ಸ್ಥಾನ , ಬಣ್ಣ ಎಲ್ಲವನ್ನೂ ಬದಲಾಯಿಸಬಹುದು. ಹಿಂದಿನ ಕಾಲದ ಜನರಿಗೆ ಕೂದಲು ಬಿಳಿ ಆದಾಗ ಕಪ್ಪಾಗಿಸುವ ಆಸೆ ಇದ್ದು ಹೇರ್ ಡೈಗಳನ್ನು  ಬಳಸುತ್ತಿದ್ದರು. ಇಂದು ಅವು ಒಂದೇ ಬಣ್ಣದಲ್ಲಿ ಇಲ್ಲ. ಮಜೆಂದ, ಗ್ರೇ, ಬ್ಲಾಕ್, ಬ್ರೌನ್, ಬ್ರಿಂಜಲ್, ಬರ್ಗಂಡಿ ಹೀಗೆ ಹಲವಾರು ಬಣ್ಣಗಳಲ್ಲಿ ಲಭ್ಯ. ನಿಮ್ಮ ಕೂದಲಿನ ಬಣ್ಣ ನಿರ್ಧರಿಸುವವರು ನೀವೇ. ಕೂದಲು ಇದ್ದರೆ ಆಯಿತು. 
       ಕೂದಲು ಇಲ್ಲದೆ ಹೋದರೆ, ಅಥವಾ ಕಡಿಮೆ ಇದ್ದರೆ ಅದಕ್ಕೂ ಆರ್ಟಿಫಿಷಿಯಲ್ ಕೂದಲು ಸಿಗುತ್ತದೆ. ಕೂದಲು ನಾಟಿ ಮಾಡುವ , ನೆಡುವ ಚಿಕಿತ್ಸೆಯೂ ಇದೆ ಅಲ್ಲವೇ?  ದುಡ್ಡು ಇದ್ದರೆ ಆಯಿತು ಅಷ್ಟೇ. ದುಡ್ಡಿದ್ದವ ದೊಡ್ಡಪ್ಪ ಅಂತ ಹಿರಿಯರು ಸುಮ್ನೆ ಕಟ್ಲಿಲ್ಲ ಗಾದೆ. ಸಿಲಿಕಾನ್ ಇಂಜೆಕ್ಷನ್ ನಿಂದ ವಯಸ್ಸಾದ ಚರ್ಮದ ಮೇಲಿನ ಸುಕ್ಕುಗಳನ್ನು ಹೋಗಿಸಿ ಚಿಕ್ಕವರಂತೆ ಕಾಣಬಹುದಂತೆ! ಹಾಗಂತ ವಯಸ್ಸು ನಿಲ್ಲುವುದೇ? ಸಾವಿಗೆ ಮದ್ದಿಲ್ಲ. ಆದರೆ ಸಾಯುವವರೆಗೆ ಅಂದ ಬೇಡವೇ?
     ಮುಖದ ಮತ್ತು ಕೂದಲಿನ  ಅಂದ ಮಾತ್ರ ಅಲ್ಲ, ಕ್ಕೈಯ ಅಂದ ಹೆಚ್ಚಿಸಲು ಉಗುರುಗಳ ಅಂದ ಹೆಚ್ಚಿಸಲು, ರೋಮಗಳನ್ನೆಲ್ಲ ತೆಗೆದು, ಕ್ರೀಮುಗಳ ಹಚ್ಚಿ, ಗಂಡಸರ ಒರಟು ಕೈಗಳನ್ನು ಸ್ತ್ರೀ ವೇಶಕ್ಕೆ ಸಜ್ಜುಗೊಳಿಸಲು ಬಹುದು. ಹಾಗೆಯೇ ಉಗುರುಗಳು ಗಿಡ್ದವಾಗಿ ಇದ್ದರೆ , ಉದ್ದ ಉಗುರುಗಳು ಡಿಸೈನ್ ಡಿಸೈನ್ ಗಳಲ್ಲಿ ಸಿಗುತ್ತವೆ. ನಮಗೆ ಬೇಕಾದ ಆಕಾರದ ಉಗುರುಗಳನ್ನು ತಂದು ಬೆರಳಿಗೆ ಸಿಕ್ಕಿಸಿ ಬೇಕು ಬೇಕಾದ ಉಗುರು ಬಣ್ಣ, ಶೈನಿಂಗ್ ಗಳನ್ನೂ ತಂದು ಹಚ್ಚಿ ಕಾರ್ಯಕ್ರಮಗಳಿಗೆ ನಮ್ಮನ್ನು ನಾವು ಅಂದವಾಗಿ ಸಜ್ಜುಗೊಳಿಸಬಹುದು. ಇನ್ನು ಎದೆಯ ಭಾಗ, ಹಿಂದೆ ಹಿಪ್ ಎದ್ದು ಕಾಣಲು ಅದಕ್ಕೂ ದಪ್ಪ ಪ್ಯಾಡ್ ಗಳನ್ನು  ಬಳಸುತ್ತಾರೆ. ಬೇಕಾದ ಗಾತ್ರದವುಗಳನ್ನು ಬಳಸಿ ನಮ್ಮ ದೇಹದ ಆಕಾರಗಳನ್ನು ಎಲ್ಲರೂ ನಮ್ಮನ್ನೇ ನೋಡುವ ಹಾಗೆ ಬಳಸಿ ಅಂದಗೊಳಿಸ ಬಹುದು. 
   ಹೊಟ್ಟೆ ಮುಂದೆ ಬಂದಿದ್ದರೆ ಅದನ್ನು ಹಿಂದೆ ಕಳಿಸಿ ಹೊಟ್ಟೆಯನ್ನು ಚಿಕ್ಕದು ಮಾಡಿ ತೋರಿಸುವ ಬೆಲ್ಟ್ ಗಳು, ಚಡ್ಡಿಗಳು ಬಂದಿವೆ. ದುಡ್ಡು ಕೊಟ್ಟರೆ ಆಯಿತು! ತೊಡೆ ಚಿಕ್ಕದಾಗಿರಲಿ ಅಂತ ಅದಕ್ಕೂ ಬೆಲ್ಟ್. ಕೈಗೆ ಬಳೆ. ಕಿವಿ, ಮೂಗಿಗೆ ರಿಂಗುಗಳು,(ರಿಂಗು, ಓಲೆಗಳ ಗಾತ್ರ, ಆಕಾರ, ಡಿಸೈನ್ ಗಳನ್ನು  ಜಾತ್ರೆ, ಚಿನ್ನದ ಅಂಗಡಿ, ಗೂಗಲ್ ನಲ್ಲಿ ನೋಡಬಹುದು!), ಜುಮ್ಕಿ, ಮಾಟಿ, ಓಲೆ, ರಿಂಗ್, ಹ್ಯಾಂಗಿಂಗ್,  ಜುಮ್ಕ, ಹೀಗೆ ಇನ್ನೂ ಏನೇನೋ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇವೆ. ಬೆಳ್ಳಿ, ಜರ್ಮನ್ ಬೆಳ್ಳಿ, ಬಂಗಾರ, ಕಂಚು, ತಾಮ್ರ, ಹಿತ್ತಾಳೆ, ಪೇಪರ್, ಫೈಬರ್, ಚಿನ್ನ, ಮುತ್ತು, ಹವಳ , ಸೇರಿ ನವರತ್ನಗಳು, ವಜ್ರ ಹಾಗೂ ಇತರ ಬಣ್ಣ ಬಣ್ಣದ ಕಲ್ಲುಗಳು, ಪ್ಲಾಸ್ಟಿಕ್, ಫ್ಲೋರೈಡ್ ಕೋಟೆಡ್, ವನ್ ಗ್ರಾಂ ಗೋಲ್ಡ್, ಆರ್ಟಿಫಿಷಿಯಲ್ ಗೋಲ್ಡ್, ಬ್ಲಾಕ್ ಮೆಟಲ್, ವೈಟ್ ಮೆಟಲ್, ವೈಟ್ ಗೋಲ್ಡ್, ಪ್ಲಾಟಿನಂ, ರೋಡಿಯo ಹೀಗೆ ಹೊಸ ಹೊಸ ಮೆಟಲ್ ಗಳ ಲಕ್ಷಗಟ್ಟಲೆ ಡಿಸೈನ್ ಗಳ ಬಳೆ, ಉಂಗುರ, ಚೈನ್, ನೆಕ್ಲೇಸ್, ಸರ, ಕಾಲು ಗೆಜ್ಜೆ, ಬೈತಲೆ ಬೊಟ್ಟು, ಸೊಂಟ ಪಟ್ಟಿ, ಮೂಗಿನ ನತ್ತು ಹೀಗೆ ಒಡವೆಗಳ  ಭಂಡಾರವೇ ಇವೆ. ಕೊಳ್ಳುವುದು, ಹಾಕಿಕೊಳ್ಳುವುದು. ಬೇಕೆಂದರೆ ಇಡುವುದು, ಬೇಡ ಎಂದರೆ ಎಸೆದು ಬಿಡುವುದು! ಇನ್ನೇನು ಹೇಳಿ? ಈಗಂತೂ ಶಾಪಿಂಗ್ ಹುಚ್ಚು ಬಿಡಿಸಲಾರದ ಹುಚ್ಚು ಅಲ್ಲವೇ?
      ದಿನ ದಿನ ಮಾಮೂಲಿ ಅಂಗಡಿಗಳು ಕ್ರಮೇಣ ಸಾಯುತ್ತಾ ಬಂದು ಮಾಲ್ ಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಆನ್ ಲೈನ್ ವ್ಯಾಪಾರ ಹೆಚ್ಚಿ, ನಮ್ಮ ಹಳ್ಳಿಯ, ಊರಿನ ಅಂಗಡಿಗಳ ವ್ಯಾಪಾರಸ್ಥರು ಕೊಳ್ಳುವವರೆ ಇಲ್ಲದೆ ಬಡವರಾಗಿತ್ತಿರುವುದೆ ಅಲ್ಲದೆ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದ ತಮ್ಮ ವ್ಯಾಪಾರಿ ವೃತ್ತಿಯನ್ನು ನಿಲ್ಲಿಸುವ ಹಂತಕ್ಕೆ ನಾವು ಅವರನ್ನು ತಂದು ನಿಲ್ಲಿಸಿದ್ದೇವೆ. ಕಾರಣ ನಮ್ಮ ಫ್ಯಾನ್ಸಿ ಶೋಕಿ, ಮಾಲ್ ಆನ್ಲೈನ್ ವ್ಯಾಪಾರಗಳು. ಹಳೆಯದನ್ನು ಮರೆತು ಹೊಸದನ್ನು ಬಳಸುವ ಹುಚ್ಚು. 
   ಇನ್ನು ಕಾಲಿಗೆ ಧರಿಸುವ ಶೂಗಳು, ಚಪ್ಪಲಿಗಳು. ತಗ್ಗಿನ ಫ್ಲಾಟ್ ಚಪ್ಪಲಿಗಳಿಂದ ಹಿಡಿದು ಹೈ ಹೀಲ್ಸ್, ನೀಡಲ್ ಹೀಲ್ಸ್, ವೆರೈಟಿ ಶೂಗಳು ಅವುಗಳಲ್ಲೂ ಗ್ರ್ಯಾಂಡ್ ಬೇರೆ, ವಾಕಿಂಗ್ ಗೆ ಬೇರೆ, ಶಾಲೆಗೆ, ಆಫೀಸಿಗೆ, ಜಾಗಿಂಗ್ ಗೆ, ರನ್ನಿಂಗ್ ಗೆ, ಟ್ರಾವೆಲಿಂಗ್ , ಟ್ರಕಿಂಗ್ ಗೆ , ಮಳೆಗಾಲಕ್ಕೆ, ಚಳಿಗಾಲಕ್ಕೆ, ಸೆಕೆಗೆ ಹೀಗೆ ಬೇರೆ ಬೇರೆ ತರಹ, ಬಣ್ಣ, ಗಾತ್ರ, ಆಕಾರ, ಉದ್ದ, ಎತ್ತರ, ಪಾ, ಮಣಿಕಟ್ಟಿನ ವರೆಗೆ, ಗಂಟಿನವರೆಗೆ, ತೊಡೆಗಳ ವರೆಗೆ, ಹೀಗೆ ಎಲ್ಲಾ ರೀತಿಯ ಬೂಟು, ಚಪ್ಪಲಿಗಳ ಸರಮಾಲೆ. ಬೇಕಾದ್ದು ಕೊಳ್ಳಬಹುದು. ಬೇಡವೆಂದರೆ ಹಾಕಿ ಎಸೆಯಬಹುದು!
       ಇನ್ನು ಕೂದಲಿಗೆ ಬೇಕಾದ ಹೇರ್ ಬ್ಯಾಂಡುಗಳು, ಕ್ಲಿಪ್ ಗಳು, ರಬ್ಬರ್, ಹೇರ್ ಪಿನ್ನುಗಳು, ಸೂಜಿಗಳು, ಮೆಟಲ್ ಶೈನಿಂಗ್ ಕ್ಲಿಪ್ಸ್, ರಿಬ್ಸ್, ಬನ್ಸ್, ಅಬ್ಬಬ್ಬಾ ಒಂದೇ ಎರಡೇ? ಇಷ್ಟಾಗಿ ಮುಗಿಯಿತೇ? ಇಲ್ಲಪ್ಪ, ಬಟ್ಟೆ ಬರೆಯ ಪ್ರಪಂಚವೇ ಬೇರೆ. ರೇಷ್ಮೆ, ಟೆರಿಲಿನ್, ಸಾಫ್ಟ್ ಸಿಲ್ಕ್, ಕೈ ಮಗ್ಗ, ಕಾಟನ್, ನೈಲಾನ್, ಶಿಫಾನ್, ಮಸ್ಲಿನ್, ಜಾರ್ಜೆಟ್, ಜ್ಯೂಟ್, ನೆಟ್, ಸ್ಯಾಟಿನ್, ಟಿಶ್ಯೂ, ಲೆದರ್ ಬಟ್ಟೆ, ಕೋಟ್, ಸೀರೆ, ಪ್ಯಾಂಟ್ಸ್, ಬ್ಲೌಸ್, ರವಿಕೆ, ಜಾಕೆಟ್, ಫ್ರಾಕ್ ಹೀಗೆ ಬಗೆ ಬಗೆ ಬಣ್ಣ, ಆಕಾರ, ರೇಟಿನ ಬಟ್ಟೆಗಳ ಲೋಕವೇ ಮಾಯಾಲೋಕ. ಈಗೀಗ ಬೆಳ್ಳಿ ಚಿನ್ನದ ಬಟ್ಟೆಗಳೂ ಮಾರುಕಟ್ಟೆಗೆ ಬಂದಿದೆಯಂತೆ. ಮುಂದೆ ಅದು ಯಾವ ಹೊಸ ಶೈಲಿ ಬರುವುದೋ? ಮೈ ಮುಚ್ಚುವ ಬಟ್ಟೆ ಧರಿಸಿದರೆ ಸಾಕಪ್ಪಾ.. ಈಗ ಹಾಕಿಕೊಂಡು ಹೋಗುವ ಹರಕು ಚಡ್ಡಿ, ಅರ್ಧ ದೇಹ ಕಾಣುವ ಬ್ಲೌಸ್, ಫ್ರಾಕ್, ಜಾಕೆಟ್ ಗಳು, ಆ ಟಿವಿ ಸೀರಿಯಲ್, ಕಾರ್ಯಕ್ರಮಗಳ ಜಡ್ಜ್ ಗಳು, ನೋಡಲು ಬರುವ ವೀಕ್ಷಕರ, ಜಾತ್ರೆ, ದೇವಾಲಯ, ಕಾರ್ಯಕ್ರಮಗಳಿಗೆ ಬರುವ ಜನರು ಹಾಕುವ ಬಟ್ಟೆಗಳನ್ನು ನೋಡಿದರೆ ಕೆಲವೊಮ್ಮೆ ಭಿಕ್ಷುಕರೇ ಲೇಸು ಅನ್ನಿಸುತ್ತದೆ. 
   ಫ್ಯಾಷನ್ ಲೋಕ ಹಳೆಯದೇ ಆದರೂ, ಪಟಾಕಿ, ತರಕಾರಿ, ಹಣ್ಣು, ಬಾಟಲಿಗಳು ಅಷ್ಟೇ ಏಕೆ ಹಳೆ ಶಿಲಾಯುಗದ ಜನರ ಹಾಗೆ ಸೊಪ್ಪು ಕಟ್ಟಿಕೊಂಡು ಮೆರೆದು ಹಿಸ್ಟರಿ ರಿಪೀಟ್ಸ್ ಎನ್ನುವ ಮಾತನ್ನು ನಾವು ಹೌದು ಮಾಡಿ ತೋರಿಸಿದವರು. ಕೊನೆಯ ಆಶಯ ಒಂದೇ. ಈ ಎಲ್ಲಾ ಮೇಕ್ ಅಫ್, ಆಭರಣಗಳು, ಚಪ್ಪಲಿ, ಶೂಗಳ, ಬಟ್ಟೆ ಬರೆಗಳ ಒಳಗೆ ಇರುವ ದೇಹ ಆರೋಗ್ಯಯುತವಾಗಿ ಇರಲಿ, ಮನಸ್ಸು ಹಾಗೂ ಆಶಯಗಳು ಉದಾತ್ತವಾಗಿ ಚೆನ್ನಾಗಿ, ಉತ್ತಮ ಆಲೋಚನೆಗಳಿಂದ ತುಂಬಿರಲಿ. ಪರರಿಗೆ ನೋವು ತರದಿರಲಿ. ಅಷ್ಟೇ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
23.12.2023

   

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -217

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 217
       ಇದೀಗ ತಾನೇ ಕ್ರಿಸ್ಮಸ್ ಹಬ್ಬವನ್ನು ಮುಗಿಸಿದ ಕ್ರೈಸ್ತ ಬಾಂಧವರು ತಮ್ಮ ದೊಡ್ಡ ಹಬ್ಬ ಮುಗಿಯಿತೆಂದು ಸ್ವಲ್ಪ ಬೇಸರಗೊಂಡರೂ ಹೊಸ ವರ್ಷಕ್ಕೆ ಅಣಿಯಾಗುತ್ತಿದ್ದಾರೆ. ಅದೇ ಮುಸ್ಲಿಂ ಬಾಂಧವರು ಇನ್ನೊಂದೆರಡು ತಿಂಗಳಲ್ಲಿ ರಂಜಾನ್ ತಿಂಗಳ ಬರುವಿಕೆಗಾಗಿ ಸಿದ್ಧತೆಗಳನ್ನು ಬರದಿಂದ ಪ್ರಾರಂಭಿಸಿಕೊಳ್ಳುತ್ತಿದ್ದಾರೆ. ಜಾತಿ, ಮತ, ಧರ್ಮದ ಹೊರತಾಗಿ ಪ್ರಪಂಚದ ಎಲ್ಲಾ ಜನರು ಕೂಡ ಹೊಸ ವರ್ಷದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದು  ಆಂಗ್ಲರ ಹೊಸ ವರ್ಷವೇ ಆದರೂ ಕೂಡ ಹೆಚ್ಚಿನ ಎಲ್ಲಾ ದೇಶಗಳಲ್ಲೂ ಇದನ್ನೇ ಅನುಸರಿಸಲಾಗುತ್ತದೆ. ಆದರೆ ನಡು ನಡುವೆ ಕೊರೋನ ಸ್ವಲ್ಪ ಅಡ್ಡಿ ಉಂಟು ಮಾಡುತ್ತಿದೆ. ನಾನು ಅಲ್ಲಲ್ಲಿ ಇದ್ದೇನೆ ಏನು ಅಂತ ಮುಖವನ್ನು ತೋರಿಸಿಕೊಂಡು ಹಲವಾರು ಜನರ ಜೀವಕ್ಕೆ ಕುತ್ತು ತರುತ್ತಲೇ ಇದೆ. ಈ ಕೊರೊನ ಮಹಾಮಾರಿಯ ನಡುನಡುವಲ್ಲಿ ಹೊಸ ವರ್ಷದ ಆರಂಭಕ್ಕೆ ಸಿದ್ಧತೆಗಳು ಕೂಡ ತಯಾರಾಗಿವೆ. ಕೊರೋನ ಬರಲಿ ಅಥವಾ ಇನ್ನೇನಾದರೂ ಬರಲಿ ಜನ ತಮ್ಮ ಆನಂದದ ಕ್ಷಣವನ್ನು ಮರೆತು ಬಿಡಲು ಅಥವಾ ತ್ಯಜಿಸಲು ತಯಾರಿಲ್ಲ. ಎಂದರೆ ಮಾನವರು ಪ್ರಕೃತಿ ಸಹಜವಾಗಿ ಖುಷಿಯನ್ನು ಅನುಭವಿಸುವ ಜೀವಿಗಳು. 

       ಒಂದಾದ ಮೇಲೆ ಒಂದು ಅದರ ನಂತರ ಮತ್ತೊಂದು ಹೊಸ ವರ್ಷ ನಮ್ಮ ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹೊಸ ವರುಷಕ್ಕೆ ಹೊಸದಾದ ಒಂದೊಂದು ಗುರಿಯನ್ನು ಇಟ್ಟುಕೊಳ್ಳುವುದು ಒಳಿತು. ಈ ವರ್ಷ ನಾನು ಇಂತಹ ಗುರಿಯನ್ನು ಸಾಧಿಸುತ್ತೇನೆ ಎಂದು ಮೊದಲೇ ಬರೆದಿಟ್ಟುಕೊಂಡು ಜನವರಿಯಿಂದ ಡಿಸೆಂಬರ್ ವರೆಗೂ ಆ ಗುರಿಯನ್ನು ಸಾಧಿಸಲು ಅಥವಾ ಯಾವ ತಿಂಗಳಲ್ಲಿ ಸಾಧಿಸಬೇಕು ಆ ತಿಂಗಳಿಗೆ ನಿಖರವಾದ ಗುರಿಯಿಟ್ಟು ಅದನ್ನು ಸಾಧಿಸಿ ಗೆದ್ದಿರಬೇಕು ಇಲ್ಲದಿದ್ದರೆ ಜೀವನದಲ್ಲಿ ಅಂದುಕೊಂಡಂತೆ ಆಗುವುದಿಲ್ಲ. ಯಾವಾಗಲೂ ಇಡುವ ಗುರಿಗಿಂತ ಸ್ವಲ್ಪ ಎತ್ತರದಲ್ಲಿಯೇ ಇರಬೇಕು. ಡಾಕ್ಟರ್ ಎ. ಪಿ. ಜೆ . ಅಬ್ದುಲ್ ಕಲಾಂ  ಅವರು ಹೇಳುವ ಹಾಗೆ ಸಣ್ಣ ಸಣ್ಣ ಗುರಿಗಳು ಗುರಿಗಳೇ ಅಲ್ಲ ಮತ್ತು ಸಣ್ಣ ಸಣ್ಣ ಗುರಿಗಳಲ್ಲಿಟ್ಟುಕೊಂಡವ ಮನುಷ್ಯರು ಆಶಾವಾದಿಗಳಲ್ಲ . ಬದಲಾಗಿ ಜೀವನದ ಗುರಿಯು ತುಂಬಾ ದೊಡ್ಡದಿರಬೇಕು ಮತ್ತು ಆ ಗುರಿಯನ್ನು ಸಾಧಿಸಲು ರಾತ್ರಿ ಮಾತ್ರವಲ್ಲ , ಹಗಲು ಕೂಡ ಕನಸನ್ನು ಕಾಣಬೇಕು ಕನಸು ಕಂಡರೆ ಸಾಲದು , ಆ ಕನಸಿನತ್ತ ಹೋಗಲು ಹಗಲು - ರಾತ್ರಿ ನಿದ್ದೆ ಇಲ್ಲದೆ ಯೋಚಿಸಬೇಕು ಮತ್ತು ಕಾರ್ಯ ಪ್ರವೃತ್ತರಾಗಬೇಕು.  ಆಗ ಮಾತ್ರ ನಾವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯ ಕಠಿಣ ಪರಿಶ್ರಮವೇ ಸಾಧನೆಯ ಯಶಸ್ಸಿನ ಅಡಿಗಲ್ಲು. 

           ಹೊಸ ವರ್ಷ ಬಂತು ಎಂದು ಹೊಸದಾದ ಆಚರಣೆಗೆ ಶುರು ಮಾಡಿ ಒಂದು ವರ್ಷವಿಡೀ ಬದುಕನ್ನು ಯಾವುದೇ ಕನಸುಗಳಿಂದ ಸಿಂಗರಿಸದೆ ಮತ್ತೊಂದು ಹೊಸ ವರ್ಷ ಬರುವವರೆಗೂ ಕಾದು ಅದನ್ನು ಆಚರಿಸುತ್ತಾ ಹೀಗೆ ವರ್ಷದಿಂದ ವರ್ಷದಿಂದ ವರ್ಷ ಕಳೆಯುತ್ತಾ ಹೋದರೆ ಬದುಕಿನಲ್ಲಿ ಯಾವ ಗುರಿಯನ್ನು ಕೂಡಾ ತಲುಪಲು ಸಾಧ್ಯವಿಲ್ಲ. ಬದುಕಿನಲ್ಲಿ ಪ್ರತಿ ವರ್ಷವೂ ವಿಭಿನ್ನವಾಗಿರಬೇಕು ಅದರ ಜೊತೆಗೆ ಪ್ರತಿ ವರ್ಷದಲ್ಲೂ ನಮ್ಮ ಧೈರ್ಯ ಪುಟಗಳಲ್ಲಿ ಬರೆದಿಡುವಂತಹ ಹೊಸ ಹೊಸ ಗುರಿಗಳಲ್ಲಿಟ್ಟುಕೊಂಡು ಅವುಗಳನ್ನು ಸಾಧಿಸಲು ಪ್ರಯತ್ನಿಸಬೇಕು ಕೆಲವೊಮ್ಮೆ ಕೆಲವೊಂದು ಗುರಿಗಳನ್ನು ನಾವು ಸಾಧಿಸಬಹುದು ಇನ್ನು ಕೆಲವೊಮ್ಮೆ ನಮ್ಮ ಗುರಿಗಳು ಗುರಿಗಳಾಗಿಯೇ ಉಳಿದು ಹೋಗುತ್ತವೆ ಅವುಗಳನ್ನು ಮುಂದಿನ ವರ್ಷವಾದರೂ ಸಾಧಿಸುವುದು ನಮ್ಮ ಛಲವಾಗಲೇ ಬೇಕು. 
              ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ಮತ್ತು ಗುರಿ ನಮ್ಮಲ್ಲಿರಬೇಕು ಆಗ ಮಾತ್ರ ಸಾಧನೆಗೆ ಒಲಿಯುತ್ತದೆ ಇಲ್ಲದೆ ಹೋದರೆ ಅವು ಕನಸುಗಳಾಗಿಯೇ ಮನದೊಳಗೆ ಕುಳಿತುಬಿಡುತ್ತವೆ. ಪ್ರಪಂಚದಲ್ಲಿ ಮುಖ್ಯವಾಗಿ ಬದುಕಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಆರೋಗ್ಯ ಯಾರು ನೆಮ್ಮದಿಯಿಂದ ಆರೋಗ್ಯಯುತವಾಗಿತ್ತು ಬದುಕುತ್ತಾನೆಯೋ ಅವನ ಜೀವನ ಸಂತಸಮಯವಾಗಿಯೂ ಇರುತ್ತದೆ. ನಾವು ನೆಮ್ಮದಿಯನ್ನು ಪಡೆಯುವ ಸಲುವಾಗಿ ಆಸ್ತಿ ಅಂತಸ್ತು ಧನ ಕನಕ ಸಂಬಂಧಗಳ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಇದು ಯಾವುದರಿಂದಲೂ ನೆಮ್ಮದಿ ಸಿಗದೇ ಒಂಟಿಯಾಗಿ ಬದುಕುವ ನಿರ್ಧಾರ ಮಾಡುತ್ತೇವೆ. ಆಗ ನಮ್ಮ ಧೈರ್ಯವೇ ನಮ್ಮ ಗೆಳೆಯನಾಗುತ್ತದೆ ಮತ್ತು ನಮ್ಮ ಬುದ್ಧಿಯೇ ನಮ್ಮ ಗುರುವಾಗುತ್ತದೆ . ನಾವು ನಡೆದದ್ದೇ ದಾರಿಯಾಗುತ್ತದೆ ಮತ್ತು ನಮ್ಮ ದಾರಿಗೆ ದಾರಿಹೋಕರು ಮತ್ತು ದಾರಿ ತೋರುವವರು ನಾವೇ ಆಗಿರುತ್ತೇವೆ. ಸರಿಯಾದ ದಾರಿಯಲ್ಲಿ ಹೋದವನಿಗೆ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ ಬೇರೆ ಬೇರೆ ಯಾವುದೋ ದಾರಿಯಲ್ಲಿ ಹೋಗಿ ಗುರಿ ತಲುಪಲು ಸಾಧ್ಯವೇ ಇಲ್ಲ. ಆ ಸರಿಯಾದ ದಾರಿಯನ್ನು ಕಂಡುಕೊಳ್ಳುವ ನಮ್ಮ ಉದಾತ ಕೆಲಸವು ನಮ್ಮಲ್ಲಿ ಇರಬೇಕು. ನಾವು ಸಾಗುತ್ತಿರುವ ದಾರಿಯ ಯಾವುದೋ ಆಗಿದ್ದು ಬದುಕು ನಮ್ಮನ್ನು ಇನ್ನು ಯಾವುದೋ ದಾರಿಯತ್ತಕೊಂಡು ಹೋಗಬಹುದು.  ಅಲ್ಲಿ ನಮಗೆ ಗೆಳೆಯರು ಹಾಗೆಯೇ ಬಂಧುಗಳು ಅಥವಾ ಪರಿಚಯವೇ ಇಲ್ಲದ ಇನ್ಯಾರೋ ಸಹಾಯ ಮಾಡಬಹುದು.          

         ಒಟ್ಟಿನಲ್ಲಿ ಅದ್ಯಾವುದಾದರೂ ಒಳ್ಳೆಯ ದಾರಿಯನ್ನು ಹಿಡಿದು ಬದುಕಿನ ಗುರಿಯನ್ನು ತಲುಪಿದಾಗ ಆನಂದ ಹೊಂದಿ ಬದುಕು ಸರಳವೆನಿಸುತ್ತದೆ . ಆಗ ನಮಗೆ ನಮ್ಮ ಜೀವನದ ಗುರಿ ಮತ್ತು ಉದ್ದೇಶ ಅರ್ಥವಾಗುತ್ತದೆ. ಅದೇ ಜ್ಞಾನದ ಅರಿವು ಇಲ್ಲದೆ ಸಿಕ್ಕಿದಂತೆ ಬದುಕಿ ನಮ್ಮೊಂದಿಗೆ ಬದುಕಿನಲ್ಲಿ ಜೊತೆ ಸೇರಿದವರಿಗೂ ಕಷ್ಟವನ್ನೇ ಕೊಟ್ಟು ಬದುಕಿನಲ್ಲಿ ಯಾವುದೇ ಕನಸುಗಳಿಲ್ಲದೆ ಯಾವುದೇ ಗುರಿಗಳಿಲ್ಲದೆ ಬದುಕುತ್ತಾ ಇತರರಿಗೂ ತೊಂದರೆಯನ್ನು ಕೊಡುತ್ತಾ ಬಾಳಿ ಬದುಕಿದವನ ಬದುಕು ಶೂನ್ಯ ಮತ್ತು ಪ್ರಾಣಿಗಳ ಹಾಗೆ ಅಲ್ಲವೇ? ಪ್ರಾಣಿಗಳಾದರೂ ತಿಂದು ಏನೂ ಇಲ್ಲ ಅಂದರೂ ಗೊಬ್ಬರವನ್ನಾದರೂ ಕೊಡುತ್ತವೆ. ಮಾನವರಿಗಿಂತ ಎಷ್ಟೋ ಮೇಲು ಬಿಡಿ ಅವು. ಪರೋಪಕಾರ, ಪರಹಿಂಸೆ ಕೊಡದೆ ಇರುವಲ್ಲಿ. 

        ಮರವು ಕೂಡ ಹುಟ್ಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸದೆ ಇದ್ದರೂ ಸಹ ಹಲವಾರು ಜನರಿಗೆ ಹೂ,  ಹಣ್ಣು,  ನೆರಳು,  ಕಟ್ಟಿಗೆ, ಕಾಯಿ, ಹಾಗೂ ಹಲವಾರು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಸರೆಯಾಗಿ ಬದುಕುತ್ತದೆ. ಆ ವೃಕ್ಷಕಿಂತಲೂ ಕಡೆ ನಮ್ಮ ಬದುಕು ಎಂದು ಆಗಬಾರದು ಅಲ್ಲವೇ? ಅದಕ್ಕಾಗಿ ಸಾಧನೆ ಬೇಕು ಸಾಧನೆಗಳನ್ನು ದಾಖಲಿಸಿಕೊಳ್ಳಬೇಕು. ಸಾಧನೆಗೆ ಬೆನ್ನ ಹಿಂದೆ ಹತ್ತಿ ಸಾಧಿಸುವುದು ಕೂಡ ಮುಖ್ಯ. ಸಾಧಕನನ್ನು ಯಾರು ಕೂಡಾ ಹಿಡಿಯಲಾರರು. ಸಾಧನೆಯ ಹಿಂದೆ ಹೊರಟವನನ್ನು ಸಾಧನೆಯೂ ಅಪ್ಪಿಕೊಳ್ಳುತ್ತದೆ. ಬದುಕಿನಲ್ಲಿ ಹೆದರಿ ಓಡಿದವನನ್ನು ಸಾವು ಅಪ್ಪಿಕೊಳ್ಳುತ್ತದೆ. ಯಾರ ಅಪ್ಪುಗೆಯಲ್ಲಿ ಬಂಧಿತರಹಾಗಬೇಕು ಎಂಬುದನ್ನು  ನಮ್ಮ ಬದುಕಲ್ಲಿ ನಿರ್ಧರಿಸುವವರು ನಾವೇ. 

       ಇಂದು ಇಲ್ಲೇ ಇರುತ್ತೇವೆ ನಾಳೆ ಮತ್ತೆ ಇನ್ನು  ಎಲ್ಲಿಗೋ ಹೋಗುತ್ತೇವೆ. ನಮ್ಮದು ನಿರಂತರ ಪಯಣದ ಬದುಕು. ಬದುಕಿನ ಬಂಡಿಯನ್ನು ಎಳೆಯುತ್ತಿರುವಾಗ ಹಲವಾರು ಜನರು ಹತ್ತಿ ಕೊಳ್ಳುತ್ತಾರೆ ಮತ್ತೆ ಹಲವಾರು ಜನರು ತಮ್ಮ ತಮ್ಮ ನಿಲ್ದಾಣ ಬಂದಾಗ ಇಳಿದುಕೊಳ್ಳುತ್ತಾರೆ. ಆದರೆ ನಮ್ಮ ಬದುಕು ತನ್ನದೇ ಆದ ಗುರಿಯಲ್ಲಿ ಸಾಗುತ್ತಿರುತ್ತದೆ. ಹೀಗೆ ನಮ್ಮ ಬದುಕು ತನ್ನದೇ ಗುರಿಯಲ್ಲಿ ಸಾಗುತ್ತಿರುವಾಗ ಹಲವಾರು ಜನರಿಗೆ ಸಹಾಯ ಹಸ್ತವನ್ನು ಕೂಡ ನೀಡುವಂತಾಗಬೇಕು. ನಾಲ್ಕಾರು ಜನರು ನಮ್ಮ ಹೆಸರನ್ನು ಕರೆದು ನೆನಪಿಟ್ಟುಕೊಳ್ಳುವ ಹಾಗೆ ಆಗಬೇಕು. ಇದನ್ನೆಲ್ಲ ಕನಸು ಕಾಣುವವರು ಮತ್ತು ಆ ಕನಸನ್ನು ನನಸಾಗಿಸುವವರು ನಾವೇ. ಹೊಸ ವರ್ಷಕ್ಕೆ ಹೊಸದಾದ ಕನಸುಗಳು ಬರಲಿ ಆ ಕನಸುಗಳು ಈಡೇರಲಿ ನಮ್ಮ ಕನಸಿನಿಂದ ಹಲವಾರು ಜನರಿಗೆ ಸಹಕಾರ ಸಹಾಯ ಸಿಗಲಿ ಅವರ ಬದುಕಿಗೆ ಅದು ಅಡಿಪಾಯವಾಗಲಿ, ಉತ್ತಮ ಜೀವನನ ಮಗು ಸಿಗಲಿ ಮತ್ತು ನಮ್ಮೊಂದಿಗೆ ಇದ್ದವರಿಗೂ ಸಿಗಲಿ ಎಂಬ ಆಶಾ ಭಾವನೆಯೊಂದಿಗೆ ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ಇದೀಗಲೇ ಹೊಸ ಗುರಿಯನ್ನು ಹೊಸ ವರ್ಷಕ್ಕೆ ಇಟ್ಟುಕೊಂಡಿದ್ದೀರಲ್ಲ? ನಿಮ್ಮ ಜೀವನದ ಗುರಿಯು ಆದಷ್ಟು ಬೇಗನೆ ನೆರವೇರಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ನೀವೇನಂತೀರಿ?
@ಹನಿಬಿಂದು@
26.12.2023

ಮಂಗಳವಾರ, ಡಿಸೆಂಬರ್ 19, 2023

ಶೀಶುಗೀತೆ: ಹೀಗೊಮ್ಮೆ

ಶಿಶುಗೀತೆ: ಹೀಗೊಮ್ಮೆ


ಮಕ್ಕಳ ಬಳಗದ ಪುಕ್ಕಲ ಇಂದು
ರಕ್ಕಸ ಕಥೆಯನು ಓದಿದ್ದ
ಸಿಕ್ಕರೆ ನನ್ನನು ಬಿಟ್ಟನೆ ಎಂದು
ಪಕ್ಕನೆ ತನ್ನಲೆ ಕೇಳಿದ್ದ

ಜಗ್ಗದೆ ಕುಗ್ಗದೆ ಬಗ್ಗದೆ ಬದುಕುವೆ
ಎನ್ನುವ ಹಾಡನು ಹಾಡಿದ್ದ
ಹೆದರದೆ ಬೆದರದೆ ಕೊರಗದೆ ಇರುವೆ
ಕೆದರದೆ ಕೂದಲು ಎಂದಿದ್ದ

ಆದರೆ ಇಂದು ಎಲ್ಲೋ ಭಯವು
ಓದಿದ ಕಥೆಯು ನೆನಪಿತ್ತು
ಕಾದರೆ ಭಯವು ಹೆಚ್ಚುವುದೆಂದು
ನಾದದ ಮೊರೆಯನು ಹೊಕ್ಕಿತ್ತು


ಸಂಗೀತ ಕೇಳುತ ಎಲ್ಲವ ಮರೆಯಲು
ಮಂಗನ ಮನವು ನೆನೆಸಿತ್ತು
ಸಂಘದ ಇತರರು ನಗುವರು ಎಂದು
ಛಂಗನೆ ನೆಗೆಯುವ ಕಸರತ್ತು!
@ಹನಿಬಿಂದು@
20.12.2023

ಶುಕ್ರವಾರ, ಡಿಸೆಂಬರ್ 15, 2023

ಗುಂಡಿನ ಗುಂಡಿಗೆ

ಗುಂಡಿನ ಗುಂಡಿಗೆ

ಹೌದು, ನಾನೇಕೆ ಕೋವಿಯೊಳಗೆ ತೂರಿ 
ಯಾರನ್ನಾದರೂ ಸಾಯಿಸುವ ಕಾರ್ಯಕ್ಕೆ
ಆ ನರಹಂತಕನಿಗೆ ಸಹಕಾರ ನೀಡಲಿ..?
ಬೇಕಾದರೆ ಕೋವಿಯನ್ನೆ ಎಸೆದು ಸಾಯಿಸಲಿ ಅವನು
ಮತ್ತೆ ನನ್ನನ್ನು ತನ್ನೊಳಗೆ ಸೇರಿಸಿಕೊಂಡು
ಕೆಟ್ಟ ಕಾರ್ಯಕೆ ನನ್ನ ಹೆಸರು ಕಟ್ಟಿ
ನನ್ನನ್ನೇ ಪಾಪಿಯನ್ನಾಗಿ ಮಾಡದೇ ಇರಲಿ

ನಾನೊಬ್ಬನೇ ಹೋಗಿ ಯಾರಿಗೆ ಡಿಕ್ಕಿ ಹೊಡೆದರೂ
ನನ್ನ ವೇಗಕ್ಕೆ, ಭಾರಕ್ಕೆ ಯಾರೂ ಸಾಯಲಾರರು
ಯಾರಾದರೂ ನನ್ನ ತಿಂದು ನುಂಗಿ ಬಿಟ್ಟರೂ
ವೈದ್ಯರು ಬಂದು ಹೊರಗೆ ತೆಗೆದಾರು
ಸಾಯಿಸುವುದು ಯಾರೋ
ಹೆಸರು ಮತ್ಯಾರಿಗೋ..ಶಕ್ತಿ ಇಲ್ಲದವರಿಗೆ

ಹೌದು, ನನಗೆಲ್ಲಿಂದ ಬಂತು ಶಕ್ತಿ..
ಆ ಕೋವಿಯ ದುಷ್ಟ ಸಹವಾಸದಿಂದಲೇ 
ಗಂಧ ಮಾರುವವಳ ಗೆಳೆತನ ಮಾಡಿದರೆ ಪರಿಮಳ
ಅದೇ ಮೀನು ಮಾರುವವಳ ಜೊತೆ...?
ನಾನೂ ಕೂಡ ಆ ಕೋವಿಯ ಸಹವಾಸ ಬಿಡಬೇಕು

ಹಾಗಾದರೆ ನಾ ಒಂಟಿ ಅಲ್ಲವೇ?
ನನ್ನನ್ನೇಕೆ ತಯಾರಿಸಿದ್ದಾರೆ?
ಪರರ ಸಾಯಿಸಲೆಂದೇ ನಾ ಹುಟ್ಟಿರುವೆನೇ?
ಪರರ ಜೀವ ತೆಗೆಯಲು ನಾ ಬಂದಿರುವೆನೇ..
ಅಯ್ಯೋ ..ದೇವಾ..ವಿಧಿಯೇ..

ಆದರೆ ಕೋವಿಯ ಜೊತೆಗಾರ ನಾ ಗುಂಡು
ಗುಂಡಾದ ನನಗೆ ಗಂಡೆದೆ ಇರಬೇಕಲ್ಲ
ಸಾಯಿಸಲು ನಾ ಏಕೆ ಹೆದರುತ್ತಿರುವೆ?
ನನ್ನ ಜನನ ಕೋವಿಯೊಂದಿಗೆ ಜೀವ ಕಳೆಯಲು
ಹುಟ್ಟಿದ ಜೀವಿ ಸಾಯಲೇ ಬೇಕಲ್ಲವೇ?
ಶಿವನ ಕಾರ್ಯವೇ ನನ್ನದು? 
ನಾನಷ್ಟು ದೊಡ್ಡವನೇ ?

ಅರೆರೆ ...ಹಾಗಾದರೆ ನಾ ಶ್ರೇಷ್ಠನೇ ? 
ಜೀವ ತೆಗೆಯುವುದುಶ್ರೇಷ್ಠ ಕಾರ್ಯವೇ! 
ಅದೇ ನನ್ನ ಜೀವಮಾನದ  ಕೆಲಸವೇ?
ಕೋವಿ ಇಲ್ಲದೆ ನನಗೆ ಜೊತೆ, ಬಾಳು ಇಲ್ಲವೇ?
ನಾನೇಕೆ ಹೀಗೆ ಸಾಯಿಸಲು ಹುಟ್ಟಿರುವೆ
ನನಗೆ ಕೊಡಲು ದೇವರಿಗೆ ಬೇರೆ ಕೆಲಸ ಇರಲಿಲ್ಲವೇ?
ವಿಧಿಯ ಲೇಲೆಯೇ?

ನಾ ಹುಟ್ಟಿರುವೆ, ಒಂದು ದಿನ ಸಾಯುವೆ
ಸಾಯುವ ಮೊದಲು ಒಂದು ಜೀವದ ಒಳ ಹೋಗುವೆ
ಸತ್ತರೂ ಸರಿ, ಬದುಕಿದರೂ ಸರಿ
ನನಗೆ ವಹಿಸಿದ ಕಾರ್ಯ ನಾ ಮಾಡಲೇ ಬೇಕು
ನಾನು ಗುಂಡಲ್ಲವೇ .. 
ಗಂಡೆದೆ ಬೇಕಲ್ಲವೇ ನನಗೆ?
@ಹನಿಬಿಂದು@
28.11.2023






 

Feelings

Feelings

You are the person whom I believe in my world
Whom I adore in my life
Whom I trust for ever and now too
Whom I care always as mine and my own 
With whom I  wish to  share all my feelings

You are the person with whom I am ready to travel around the world
With whom I have my true dreams
With whom I wished to spend my precious time
To whom I have spent lot of my life

You are the person whom I carved deep inside the heart
To w my heart beats and pumps
To whom my veins breath and cells dance
To whom my tongue tastes and eyes search

You are the person to whom I yarn in the whole lifetime
To whom I wait for months to meet
To whom I wish to talk every seconds
To whom I wish to see in my dream.
To whom I wish to breath my last
@HoneyBindu@
29.11.2023

ಬದುಕಿನ ಆಟ


ಬದುಕಿನ ಆಟ 

ಬಟ್ಟೆಯೊಳಗಿನ ದೇಹ ಕಾಣದು
ದೇಹದೊಳಗಿನ ಭಾವ ನಿಲುಕದು
ಭಾವದೊಳಗಿನ ಬಂಧ ತಿಳಿಯದು
ಭಾವ ಬಂಧಕೆ ಬಟ್ಟೆ ಸಾಕಾಗದು

ದಾರಿ ದೂರವೂ ಪ್ರೀತಿ  ಮಧುರ
ಕೋರಿ ಸಂಬಂಧವ ಮನವು ಸನಿಹ 
ಮಾರಿ ಅಷ್ಟ ಐಶ್ವರ್ಯ ಧನವನು
ಪಡೆಯಲಾಗದು ಪ್ರೀತಿ ಋಣವನು

ಮೋಹ ಕಾಮ ಸ್ವಾರ್ಥ ಮತ್ಸರ
ಶುದ್ಧ ಪ್ರೀತಿಯು ತರುವ ವಿಚಾರ
ತಾನು ತನ್ನದು ತನಗೇ ಬೇಕೆನುತ
ವೇಣು ನಾದದ ಬಲೆಗೆ ಬೀಳುತ

ಒಂಟಿ ಬದುಕು ತೀರಾ ನೀರಸ
ಗಂಟು ಹಾಕಲು ಪರರ ಸಾಹಸ
ಜಂಟಿಯಾಗಿ ಇರಲು ಕಷ್ಟವೂ
ತಂಟೆ ಮಾಡುತ ಜಗಳ ಕದನವೂ

ಪ್ರೀತಿ ನೆಮ್ಮದಿ ಶಾಂತಿ ಅರಸುತ
ಭೀತಿ ಬಾಳುವೆ ನಿತ್ಯ ಕಳೆಯುತ
ಕೋಟಿ ಹಣದ ಆಸೆ ಇಡುತ
ಮೇಟಿ ವಿದ್ಯೆಯೇ ಮೇಲು ಎನುತ

ಬದುಕಿನಾಟವು ಸಾಗಿ ಮುಂದು
ನೋವಿನಾಟಕೆ ಕೊನೆಯು ಎಂದು
ತನು ಮನದ ಸಂತಸ ಬಯಸಿ ಇಂದು
ಮನುಜ ಬಯಕೆಗೆ ಅಂತ್ಯ ಎಂದು?
@ಹನಿಬಿಂದು@
03.12.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214
     ಯಾವುದೇ ಕೆಲಸ ಆಗಿರಲಿ. ಅದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸದ ಬೀಜ ಮಾನವತೆ ಎಂಬ ಮರಕ್ಕೆ ಮೂಲ ಅಲ್ಲವೇ?  ನಾ ಮಾಡುವೆ ಎಂಬ ಆತ್ಮಸ್ಥೈರ್ಯ ಎಲ್ಲರಿಗೂ ಎಲ್ಲಾ ಕಡೆ ಬರಲು ಸಾಧ್ಯ ಇಲ್ಲ. ನಾನಿದ್ದೇನೆ ಎಂದು ನಮ್ಮ ಸುಪ್ತ ಮನಸ್ಸು ನಮಗೆ ಧೈರ್ಯ ಕೊಡಬೇಕು. ಬಿದ್ದಾಗ ಹಿಡಿದೆತ್ತಬೇಕು . ಗೆಳೆಯನಂತೆ ಬೆನ್ನಿಗೆ ನಿಲ್ಲಬೇಕು, ಮಡದಿಯಂತೆ ಜತೆಗಾರನಾಗಿ ತಿದ್ದಿ ನಡೆಸಬೇಕು, ಅಣ್ಣನಂತೆ ಕೈ ಹಿಡಿದು ಮುನ್ನಡೆಸಬೇಕು, ತಂದೆಯಂತೆ ಜವಾಬ್ದಾರಿ ಹೊರಬೇಕು. ಆ ಮೂಲಕ ನಮ್ಮ ನಿರ್ಮಾತೃ ನಾವೇ ಆಗಿರಬೇಕು. ಅಲ್ಲವೇ?

     ಹೌದು, ಈ ಒಂದು  ಕಾರ್ಯವನ್ನು ನಾನು ಮಾಡಲು ಖಂಡಿತವಾಗಿಯೂ ಶಕ್ತನಾಗಿದ್ದೇನೆ ಇದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸ ಇರುವುದು ಅದು ಎಂದಿಗೂ ಕೂಡ ಅಹಂಕಾರ ಎಂದು ಪರಿಗಣಿಸಲ್ಪಡುವುದಿಲ್ಲ. ಅದು ಆತ್ಮವಿಶ್ವಾಸದ ಪರಮಾವತಿ ಆದ್ರೆ ಅಹಂಕಾರ ಎನ್ನುವುದು ಹಾಗಲ್ಲ ತನಗೆ ಮಾಡಲು ಗೊತ್ತಿಲ್ಲ ಎಂದು ತಿಳಿದರು ಕೂಡ ನಾನೇ ಮಾಡುವೆ ನಾನು ಮಾಡುತ್ತೇನೆ ಎಂದು ಹೋಗುವುದಿದೆಯಲ್ಲ ಅದು ಅಹಂಕಾರ. ನಾನು ಮಾಡಿದ್ದು ಸರಿಯಾಗದಿದ್ದರೂ ಪರವಾಗಿಲ್ಲ ಇತರರು ಆ ಕೆಲಸವನ್ನು ಮಾಡಬಾರದು ನಾನೇ ಅದರ ಯಜಮಾನನಾಗಬೇಕು ಎಂದು ಬಯಸುವುದು ಅಹಂಕಾರ. 
         ಆತ್ಮವಿಶ್ವಾಸ ಒಳ್ಳೆಯದು.  ಅದು ಜ್ಞಾನವಿದ್ದಾಗ ಮಾತ್ರ ನಮಗೆ ಬರುವಂತದ್ದು. ಆತ್ಮವಿಶ್ವಾಸವಿರುವ ವ್ಯಕ್ತಿ ಯಾವ ಕೆಲಸವನ್ನೇ ಆದರೂ ಅವನಿಗೆ ಕೊಟ್ಟಾಗ ಅವನು ಸರಿಯಾಗಿಯೆ ಮಾಡುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಜ್ಞಾನದ ಒಂದು ಹಂತ ಬುದ್ಧಿಮತ್ತೆ, ಮತ್ತೊಂದು ಹಂತ ಆತ್ಮ ವಿಶ್ವಾಸ . ಆತ್ಮವಿಶ್ವಾಸವನ್ನು ಅಹಂಕಾರದೊಡನೆ ಎಂದಿಗೂ ಹೋಲಿಸಿಕೊಳ್ಳಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಗಾದೆ ಮಾತೊಂದಿದೆ ಆದಕಾರಣ ಅಹಂಕಾರ ಮನುಷ್ಯನನ್ನು ಕೊಲ್ಲುತ್ತದೆ ಮತ್ತು ಯಾವುದೇ ಕೆಲಸಗಳನ್ನು ಮಾಡುವುದನ್ನು ತಡೆದುಬಿಡುತ್ತದೆ. ಆತ್ಮವಿಶ್ವಾಸ ಹಾಗಲ್ಲ ನಾನು ಈ ದೇಶವನ್ನು ಆಳಿಯೇ ಅಳುತ್ತೇನೆ ಎಂದು ಆತ್ಮವಿಶ್ವಾಸ ಇದ್ದವ ಮಾತ್ರ ಆಳುವ ಕೆಲಸಕ್ಕೆ ಸಜ್ಜಾಗುತ್ತಾನೆ ಅಹಂಕಾರಿ ಒಂದು ಅಥವಾ ಎರಡೇ ದಿನದಲ್ಲಿ ಅಥವಾ ಒಂದೇ ಒಂದು ಕ್ಷಣದಲ್ಲಿ ಬಿದ್ದು ಹೋಗುತ್ತಾನೆ ಇವನನ್ನು ಯಾರೂ ಕೂಡ ಗೌರವಿಸುವುದೆ ಇಲ್ಲ. 
                 ಆತ್ಮವಿಶ್ವಾಸ ಹೀರೋನ ಗುಣವಾದರೆ ಅಹಂಕಾರ ವಿಲನ್  ನ ಗುಣ. ಜನ ಎಂದಿಗೂ ಹೀರೋವನ್ನು ಇಷ್ಟಪಡುತ್ತಾರೆಯೆ  ಹೊರತು ವಿಲನ್ ನ ಗುಣಗಳನ್ನು ಇಷ್ಟ ಪಡುವುದಿಲ್ಲ. ಹಾಗೆಯೇ ಆತ್ಮವಿಶ್ವಾಸ ಮತ್ತು ಅಹಂಕಾರ ಕೂಡ.  ಜನರು ಇತರರ ಆತ್ಮವಿಶ್ವಾಸವನ್ನು ಬಯಸುತ್ತಾರೆಯೆ  ಹೊರತು ಯಾವುದೇ ಕಾರಣಕ್ಕೂ ಯಾವಾಗಲೂ ಯಾರದ್ದೇ ಅಹಂಕಾರವನ್ನು ಯಾವುದೇ ಜನರು ಯಾವುದೇ ದೇಶದಲ್ಲೂ ಇಷ್ಟಪಡುವುದಿಲ್ಲ. 
     ನಮ್ಮಲ್ಲೂ, ನಮ್ಮ ಒಳಗೂ ಕೂಡ ಎಂದಿಗೂ  ಆತ್ಮ ವಿಶ್ವಾಸ ಬೆಳೆಯುತ್ತಾ ಹೋಗಲಿ. ಅಹಂಕಾರ ಎಂದಿಗೂ ನಮ್ಮ ಜೀವನದಲ್ಲಿ ಇನ್ನು ಮುಂದೆ  ಸುಳಿಯದೆ  ಇರಲಿ,  ಅಹಂಕಾರ ಕೆಟ್ಟದ್ದು,  ಆತ್ಮವಿಶ್ವಾಸ ಒಳ್ಳೆಯ ಗುಣ.  ಸದಾ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳೋಣ ಮತ್ತು ಅಹಂಕಾರವನ್ನು ನಮ್ಮಿಂದ ದೂರ ಓಡಿಸೋಣ , ನೀವೇನಂತೀರಿ?
@ಹನಿಬಿಂದು@
08.12.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -213

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -213
         ಹಾಯ್...ಹೇಗಿದ್ದೀರಿ ಎಲ್ಲರೂ? ಚಳಿಗಾಲ ಆರಂಭ ಆಗಿದೆ. ಒಳಗೆ ಬೆಚ್ಚನೆ ಕುಳಿತಿದ್ದ ಸ್ವೆಟರ್, ಕ್ಯಾಪ್, ಶೂಸ್, ಇವನ್ನೆಲ್ಲ ತೆಗೆದುಕೊಂಡು ಬೆಳಗ್ಗೆ ವಾಕಿಂಗ್ ಹೋಗುವಾಗಲೂ ಅದನ್ನು ತೊಟ್ಟುಕೊಂಡೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಈ ಚಳಿಯ ಸಮಯದಲ್ಲಿ ನಮ್ಮ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಚಾಲೆಂಜಿನ ಕೆಲಸವೇ ಸರಿ. ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸಿಕೊಳ್ಳುವುದು ಮತ್ತು ಚರ್ಮದ ತೇವವನ್ನು  ಕಾಪಾಡಿಕೊಳ್ಳಲು ವ್ಯಾಸೆಲಿನ್ , ಲೋಷನ್, ಕ್ರೀಂ ಮಂತಾದ ಹಲವಾರು ಚರ್ಮದ ಕ್ರಿಮಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯ. ಹಲವಾರು ಚರ್ಮದ ಕ್ರಿಮಿಗಳ ಬೆಲೆ ಅಂತ ಎಂದು ಗಗನಕ್ಕೆ ಮುಟ್ಟಿದೆ. ಸೌಂದರ್ಯವರ್ಧಕಗಳ ಹೆಸರಿನಲ್ಲಿಯೇ ಕಂಪೆನಿಗಳು ಮಹಿಳೆಯರಿಂದ ಹಲವಾರು ರೂಪಾಯಿಗಳಷ್ಟು ದೋಚಿಕೊಂಡು ಹಗಲು ದರೋಡೆ ಮಾಡುತ್ತಾ ಸಿರಿವಂತರಾಗುತ್ತಿದ್ದಾರೆ. ಮಹಿಳೆಯರೂ ಅಷ್ಟೇ , ಸೌಂದರ್ಯ ವರ್ಧಕಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಅದೆಷ್ಟೇ ಕಂಪೆನಿಗಳು ಸೌಂದರ್ಯ ವರ್ಧಕಗಳ ಉತ್ಪಾದನೆ ಪ್ರಾರಂಭಿಸಿದರೂ ಕೂಡ ಎಲ್ಲಾ ಕಂಪನಿಯ ಸೌಂದರ್ಯ ವರ್ಧಕಗಳು ಕೂಡ ನಿತ್ಯ ಬಳಕೆಯಾಗುತ್ತಲೇ ಇವೆ. 
                 ಸೌಂದರ್ಯ ವರ್ಧಕಗಳನ್ನು ಬಳಸಿಕೊಳ್ಳುವಾಗ ಅದರ ಬಗ್ಗೆ  ಯಾರು ಮಾಹಿತಿ ನೀಡಿದರು ಎಂಬ ಅಂಶವನ್ನು ಗಮನಿಸುವುದರ ಜೊತೆಗೆ ನನ್ನ ಚರ್ಮಕ್ಕೆ ಯಾವುದು ಉತ್ತಮ , ನನ್ನ ದೇಹದ ಮಾದರಿಗೆ ಯಾವುದು ಸರಿ ಹೊಂದುತ್ತದೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಇನ್ನು ಕೆಲವು ಮಹಿಳೆಯರು ಸಾವಿರಗಟ್ಟಲೆ ಹಣ ಕೊಟ್ಟು ಸೌಂದರ್ಯ ವರ್ಧಕಗಳನ್ನು ಮನೆಗೆ ತಂದುಕೊಂಡು ಬಂದು,  ಅದನ್ನು ಸರಿ ಇಲ್ಲ ಎಂದು  ಉಪಯೋಗಿಸದೆ ಅದರ ಕೊನೆಯ ಅವಧಿ ಮುಗಿಯುವವರೆಗೆ ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡು ಮತ್ತೆ ಅದನ್ನು ಬಿಸಾಕಿ ಬಿಡುತ್ತಾರೆ. ಈ ತರಹ ಮಾಡದೆ ಸರಿಯಾದ ಸೌಂದರ್ಯದ ತಜ್ಞರ ಬಳಿ ಸಲಹೆ ಪಡೆದು,  ಅವರು ಹೇಳಿದ ಸರಿಯಾದ ಕ್ರೀಮು, ಪೌಡರ್, ಬಿಂದಿ ಇವೇ ಮುಂತಾದುವನ್ನು ತೆಗೆದುಕೊಂಡು ಉಪಯೋಗಿಸುವುದು ಒಳ್ಳೆಯದು. ಸಿಕ್ಕಿ ಸಿಕ್ಕಿದ ಕ್ರೀಮುಗಳು , ಕಾಜಲ್,  ಐ ಲೈನರ್,  ಲಿಪ್ ಸ್ಟಿಕ್, ಬೇಸ್ ಕ್ರೀಂ, ಶೇಡಿಂಗ್,  ಫೇಸ್ ವಾಶ್,  ಫೇಸ್ ಪ್ಯಾಕ್, ಪೌಡರ್, ಮಸ್ಕರಾ, ಲಿಪ್ ಲೈನರು, ಬೇಸ್ ಕ್ರೀಂ ಮೊದಲಾದ ಮೇಕಪ್ ಐಟಂಗಳು ಕಡಿಮೆ ಬೆಲೆಗೆ ಸಿಕ್ಕಿದರೂ ಕೂಡ ಅವುಗಳನ್ನು ಒಟ್ಟಾರೆಯಾಗಿ ತೆಗೆದುಕೊಳ್ಳದೆ ಸರಿಯಾದ ಸಲಹೆಯ ಪ್ರಕಾರ ತೆಗೆದುಕೊಂಡು ಬಳಸಬೇಕು. ಇಲ್ಲದೆ ಹೋದರೆ ಚರ್ಮದ ಇನ್ಫೆಕ್ಷನ್, ತೊಂದರೆಗಳು, ತುರಿಕೆ, ಕಜ್ಜಿ, ಊತ, ಕಲೆ ಉಂಟಾಗಬಹುದು. 

         ಯಾರೇ ದುಡಿದಿರಲಿ ಹಣವು ಕಷ್ಟ ಪಡದೆ ಸಿಗದು ಅದನ್ನು ವ್ಯಯ ಮಾಡಬಾರದು. ಆ ಮೇಕಪ್ ಐಟಂಗಳಿಗೆ ಸುರಿಯುವ ಹತ್ತಾರು ಸಾವಿರ ರೂಪಾಯಿಗಳನ್ನು ಯಾರೋ ಬಡವರಿಗೆ ಕೊಟ್ಟರೆ ಅವರು ಒಂದು ತಿಂಗಳು ಊಟ ಮಾಡಿ ನೆಮ್ಮದಿಯಾಗಿರಬಹುದು ಎಂಬ ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ತಾನು ಬಳಸುವ ಈ ವಸ್ತುವಿನಿಂದ ನಾನು ನಿಜವಾಗಿ ಅಂದ ಕಾಣುವೆನೆ, ಆ ಬಣ್ಣ ನನ್ನ ಚರ್ಮದ ಬಣ್ಣಕ್ಕೆ ಸರಿ ಹೊಂದುವುದೇ ಎಂದು ಕನ್ನಡಿಯಲ್ಲಿ ಸರಿಯಾಗಿ ನೋಡಬೇಕು. ಜೊತೆಗೆ ಒಮ್ಮೆ ಫೋಟೋ ತೆಗೆದು ನೋಡಬೇಕು. ಮನಸ್ಸಿಗೆ ಸಮಾಧಾನ ಆಗದೆ ಇದ್ದರೆ ಅದನ್ನು ಬಳಸ ಬಾರದು. ಇತರರಿಗೆ ಅಸಹ್ಯ ಹುಟ್ಟಿಸುವ ಹಾಗೆ ನಮ್ಮ ಮೇಕ್ ಅಪ್ ಇರಬಾರದು ಅಲ್ಲವೇ?ನೈಜತೆಗೆ ಹತ್ತಿರ ಇರಬೇಕು. ಹಲವಾರು ಸೌಂದರ್ಯ ವರ್ಧಕಗಳು ನಮ್ಮಲ್ಲಿ ಚರ್ಮಕ್ಕೆ ಹೊಂದಿಕೊಳ್ಳದೆ ಬೇರೆ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಅಂತಹ ತೊಂದರೆಗೆ ನಾವೇ  ಎಡೆ ಮಾಡಿ ಕೊಡಬಾರದು. ಕೂದಲಿಗೆ ಬಣ್ಣ ಹಾಕಿ, ಅದನ್ನು ನೇರ ಮಾಡಲು ಹೋದ ಮಹಿಳೆ ಒಬ್ಬಳು ಅದನ್ನು ಸರಿ ಮಾಡಲು ಮತ್ತೆ ಐವತ್ತು ಸಾವಿರದವರೆಗೆ ಖರ್ಚು ಮಾಡಬೇಕಾಗಿ ಬಂತು. ಆದರೂ ಕೂದಲು ಚೆನ್ನಾಗಿ ಆಗಲಿಲ್ಲ. ಮುಖದಲ್ಲಿ ಕ್ರೀಂ ಹಾಕಿ ಇನ್ಫೆಕ್ಷನ್ ಆದ ಒಬ್ಬ ಮಹಿಳೆಗೆ ತನ್ನ ಮುಖ ಮೊದಲಿನಂತೆ ಆಗಲು ಒಂದು ಲಕ್ಷ ಖರ್ಚಾಯಿತು. ಕೋನ್ ಬಳಸಿ ಮದರಂಗಿ ಹಾಕಿ ಕೈಯಲ್ಲೆಲ್ಲಾ ಗುಳ್ಳೆ ಬಂದು ಅದನ್ನು ಸರಿ ಪಡಿಸಲು ಆರು ತಿಂಗಳು ಬೇಕಾಯಿತು ಮತ್ತು ಹಣವೂ ಖರ್ಚಾಯಿತು. ಕಡಿಮೆ ಟಿ ಎಫ್ ಎಂ ಪ್ರಮಾಣ ಕಡಿಮೆ ಇರುವ ಸಾಬೂನನ್ನು ಪ್ರತಿದಿನ ಹಾಕಿ ಸ್ನಾನ ಮಾಡುವುದರಿಂದ ಗರ್ಭಿಣಿ ಮಹಿಳೆಗೂ ಗರ್ಭಪಾತ ಆಗುವ ಸಂಭವ ಇದೆ ಎಂದು ಸಂಶೋಧನೆಗಳಿಂದ ದೃಢ ಪಟ್ಟಿದೆ. ಉತ್ತಮ ಗುಣಮಟ್ಟದ ಸಾಬೂನು, ಮಾರ್ಜಕಗಳನ್ನೆ ಬಳಸಬೇಕು ಎಂದು ನಮಗೆ ಇದರಿಂದ ತಿಳಿಯುತ್ತದೆ. ಕ್ರೀಂ ಗಳು ಕೂಡಾ ಹಾಗೆಯೇ ಅಲ್ಲವೇ? 
             ಮನೆಯಲ್ಲಿ ಸಿಗುವಂತಹ ಹಲವಾರು ಆಯುರ್ವೇದಿಕ್ ವಸ್ತುಗಳನ್ನು ಬಳಸಿಕೊಂಡು ಸೌಂದರ್ಯವರ್ಧಕಗಳನ್ನು ತಯಾರಿಸುವುದನ್ನು ನಾವು ಕಲಿತುಕೊಳ್ಳಬೇಕು. ಯೂಟ್ಯೂಬ್ ಚಾನೆಲ್ ಗಳಲ್ಲಿ , ಟಿವಿಗಳಲ್ಲಿ ಹಲವಾರು ವೈದ್ಯರುಗಳು ಹಾಗೂ ಸೌಂದರ್ಯ ತಜ್ಞರು ಹಲವಾರು ಸಲಹೆಗಳನ್ನು ಪ್ರತಿನಿತ್ಯ ತಮ್ಮ ವಿಡಿಯೋದ ಮೂಲಕ ನೀಡುತ್ತಾ ಬಂದಿದ್ದಾರೆ. ಅವುಗಳಲ್ಲಿ ತಮಗೆ ಸರಿಹೊಂದುವ ವಸ್ತುಗಳನ್ನು ಮಾಡಿಕೊಂಡು ಅದನ್ನು ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲ ಮನೆಯಲ್ಲೇ ಸಿಗುವ ಅಡುಗೆ ಮನೆಯ ಹಾಗೂ ತರಕಾರಿ ಹಣ್ಣು ಈ ರೀತಿಯ ವಸ್ತುಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ರಾಸಾಯನಿಕಗಳಿಂದ ದೂರವಿರುವಂತೆ ನಮ್ಮನ್ನು ನಾವೇ ನೋಡಿಕೊಳ್ಳಬೇಕು. 
             ಎಲ್ಲರಿಗೂ ನಾವು ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಆದರೆ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಬಾರದು. ಅದಕ್ಕೆ ಆದಷ್ಟು ಆಯುರ್ವೇದ ವಸ್ತುಗಳನ್ನು ಬಳಸುವುದನ್ನು ಕಲಿಯಬೇಕು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ. ಮನೆಯಲ್ಲಿ ವೇಸ್ಟ್ ಎಂದು ಬಿಸಾಡುವ ಹಲವಾರು ಹಣ್ಣುಗಳ ಮತ್ತು ತರಕಾರಿಗಳ ಸಿಪ್ಪೆಗಳು, ತರಕಾರಿ, ಹಣ್ಣು, ಅಡುಗೆ ಮನೆಯ ವಸ್ತುಗಳು ಇವುಗಳನ್ನೆಲ್ಲ ಬಳಸಿ ಉತ್ತಮವಾದ ರಾಸಾಯನಿಕ ವಲ್ಲದ ಹಲವಾರು ಸೌಂದರ್ಯ ವರ್ತಕಗಳನ್ನು ನಾವೇ ಮನೆಯಲ್ಲಿ ತಯಾರಿಸಿಕೊಂಡು ನಮ್ಮ ಸೌಂದರ್ಯ ಹಾಗೂ ಆರೋಗ್ಯವನ್ನು ಕೂಡ ವೃತ್ತಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಾದರೆ ಆಯುರ್ವೇದಿಕ್ ಹಾಗೂ ನಾಟಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಹಿರಿಯರಿದ್ದರೆ ಅಜ್ಜಿ ಅಜ್ಜಂದಿರು ಅಪಾರ ಅನುಭವಗಳನ್ನು ಮತ್ತು ಜ್ಞಾನವನ್ನು  ಹೊಂದಿದವರಾಗಿರುತ್ತಾರೆ. ಅವರ ಸಲಹೆಗಳನ್ನು ಪಡೆದುಕೊಳ್ಳಬಹುದು.
          ತಾವೇ ಸ್ವತ: ಬೇರೆ ಬೇರೆ ಪುಸ್ತಕಗಳನ್ನು ಓದಿ ಅವುಗಳಿಂದ ಜ್ಞಾನವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಅವುಗಳನ್ನು ಕಲಿತು ನಮ್ಮ ಸೌಂದರ್ಯ ವರ್ಧಕಗಳನ್ನು ನಾವೇ ತಯಾರು ಮಾಡಿಕೊಳ್ಳಬಹುದು. ಇದರಿಂದ ಯಾವ ರೀತಿಯ ಸಮಸ್ಯೆಯು ಉಂಟಾಗದು. ತಿಂದು ಬಿಸಾಕುವ ದಾಳಿಂಬೆ ಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆ, ಮಾವಿನ ಹಣ್ಣು ಕಲ್ಲಂಗಡಿ ಹಣ್ಣು ಮೊದಲಾದ ಹಣ್ಣುಗಳ ಸಿಪ್ಪೆಗಳಿಂದ ತುಪ್ಪ ಹಾಗೂ ಜೇನುತುಪ್ಪವನ್ನು ಬಳಸಿಕೊಂಡು ಹಲವಾರು ಸೌಂದರ್ಯ ವರ್ಧಕಗಳನ್ನು ತಯಾರಿಸುತ್ತಾರೆ. ಮನೆಯ ತೋಟದಲ್ಲೇ ಬೆಳೆಯುವಂತಹ ಅಲೋವೆರಾ ಹಾಗೂ ತೆಂಗಿನೆಣ್ಣೆಯನ್ನು ಉಪಯೋಗಿಸಿಕೊಂಡು ಹಾಗೆಯೇ ದಾಸವಾಳದ ಎಲೆ ಹೂಗಳನ್ನು ಬಳಸಿಕೊಂಡು ತಲೆಯ ಸ್ನಾನಕ್ಕೆ ಬೇಕಾದ ಶಾಂಪೂವನ್ನು ತಯಾರಿಸಿಕೊಳ್ಳುತ್ತಾರೆ. ಇವೆಲ್ಲ ಹೆಚ್ಚು ಖರ್ಚು ಇಲ್ಲದೆ ಸಿಗುವಂತಹ ವಸ್ತುಗಳು. ಅಡುಗೆ ಮನೆಯಲ್ಲಿ ಇರುವಂತಹ ಕಡಲೆಹಿಟ್ಟು, ಅರಿಶಿನ,  ಕೊಬ್ಬರಿ ಎಣ್ಣೆ, ತೆಂಗಿನಕಾಯಿಯ ನೀರು ಇವುಗಳನ್ನೆಲ್ಲ ತಮ್ಮ ಅಂದವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳಬಹುದು. 
   ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಿದ ಬಾಡಿ ಸ್ಪ್ರೇಗಳು,  ಸೆಂಟುಗಳು ಅವುಗಳ ವಾಸನೆಯಿಂದಾಗಿ ನಮ್ಮನ್ನು ನೆಮ್ಮದಿಯಾಗಿರಲಿ ಬಿಡುವುದಿಲ್ಲ,  ನಮ್ಮ ಜೊತೆಗಿದ್ದವರಿಗೂ ಕೂಡ ಅದು ತಲೆನೋವನ್ನು ತರುತ್ತವೆ. ಇಂತಹ ರಾಸಾಯನಿಕಗಳನ್ನು ಮೈಗೆ ಹಚ್ಚಿಕೊಂಡು ಚರ್ಮದ ಕಾಯಿಲೆಗಳನ್ನು ಧರಿಸಿಕೊಳ್ಳುವ ಬದಲಾಗಿ ದೇಹವನ್ನು ಎಣ್ಣೆಯಿಂದ ಶುದ್ಧಗೊಳಿಸಿ ಚೆನ್ನಾಗಿ ಸ್ನಾನ ಮಾಡಿ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು. 
  ನಮ್ಮ ದೇಹವನ್ನು ರಾಸಾಯನಿಕಗೊಳಿಸಿಕೊಳ್ಳದೆ ಪ್ರಕೃತಿದತ್ತವಾಗಿ ಬೆಳೆಸಲು ಪ್ರಕೃತ ಅಂದವನ್ನು ಪಡೆಯಲು ಬಯಸಿ ಅಂತಹ ವಸ್ತುಗಳನ್ನು ಉಪಯೋಗಿಸಿ ಯಾವುದೇ ಕಾಯಿಲೆಗಳಿಲ್ಲದೆ ಚೆನ್ನಾಗಿ ಬಾಳೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
02.12.2023

   

ಮಂಗಳವಾರ, ಡಿಸೆಂಬರ್ 5, 2023

you

You

You are the person whom I believe in my world
Whom I adore in my life
Whom I trust for ever and now too
Whom I care always as mine and my own 
With whom I  wish to  share all my feelings

You are the person with whom I am ready to travel around the world
With whom I have my true dreams
With whom I wished to spend my precious time
To whom I have spent lot of my life

You are the person whom I carved deep inside the heart
To w my heart beats and pumps
To whom my veins breath and cells dance
To whom my tongue tastes and eyes search

You are the person to whom I yarn in the whole lifetime
To whom I wait for months to meet
To whom I wish to talk every seconds
To whom I wish to see in my dream.
To whom I wish to breath my last
@HoneyBindu@
29.11.2023

ತುಳು ಕಬಿತೆ ಬದ್ಕ್

ಬದ್ಕ್
ಕೆಲವೊರ ತೋಜುಂಡು ನಮ ಬಗ್ಗೆರೆ ಬಲ್ಲಿ
ಬಗ್ಗಿನ ಮನಸ್ ಗ್ ಗುದ್ದು ಜಾಸ್ತಿಗೆ
ಪೂರಾ ಧಿಕ್ಕರಿಸದ್ ನಡತಿನಾಯೆ
ಬದ್ಕ್ ಡ್ ಏಪಲ ಮಲ್ಲಾಯೆ

ಯಾನ್ ಎನ್ನ ಎಂಕೆ ಬೋಡು
ಪನ್ಯಾಯೆ ಮಾತ್ರತ್ ನಿಕ್ ಪಂದ್
ಬದ್ಕ್ ದಿನಾಯೆಲ  ಭೂಮಿಡ್ ಒರಿದಿಜೆ
ಏತ್ ಮೆರೆಂಡಲ ಏತ್ ತಗ್ಗಂಡಲ
ಒರ ಪೋಪಿನಿ ಮೂಜಿ ಆಜಿದ ಗುಂಡಿಗೋ ಕಾಟಗೋ
ತುಂಬೆರೆ ಬರೋಡು ಬೇತೆಕ್ಲೆ

ಎಲಿತ ಲೆಕ್ಕ ಸಾರ ವರ್ಷ ಬದುಕುನೆಕ್
ಪಿಲಿತ ಲೆಕ್ಕ ನಾಲ್ ದಿನತ ಬಾಳ್ವೆ ಯಾವಂದ
ತನ್ನತನಟ್ ಬದ್ಕಿನ ಪರ್ಮೆ ಇಪ್ಪುಂಡು
ಪರಾಯನ್ ಗೆಂನ್ಪoದಿನ ಕುಸಿ ಇಪ್ಪುಂಡು
@ಹನಿಬಿಂದು@
06.12.2023

ಭಾನುವಾರ, ಡಿಸೆಂಬರ್ 3, 2023

ಕಾರಣ

ಕಾರಣ
ಸ್ವರ್ಗದ ಮದುವೆಯ ಭೂಮಿಗೆ ಬರಲು
ಬದಲಾಯಿತು ಈಗ ಹೇಗೆ?
ಭೂಮಿಯ ಮೇಲಿನ ಮನುಜರ ಪಾಪ
ಕೊಡವನು ತುಂಬಿಸೋ ಹಾಗೆ

ಒಳ್ಳೆಯ ಕಾರ್ಯಕ್ಕೆ ಜನರದು ಬರಲು
ಹರಸಿ ಆಶೀರ್ವಾದ ಮಾಡಿ
ನಾಲ್ಕು ದಿನಗಳ ಬಳಿಕ ನೋಡಲು
ಅತ್ತೆ ಮಾವನ ಮೋಡಿ

ನಾದಿನಿ ಅತ್ತಿಗೆ ಎಲ್ಲರೂ ಕೂಡಿ
ಬಂದ ಹೆಣ್ಣಿಗೆ ಕಷ್ಟ
ಜೀವವ ತೆಗೆದರು ಹೊರಗೆ ಬಿಸಾಡಿ
ತವರು ಮನೆಗದೋ ನಷ್ಟ

ಯಾರದೋ ಹೆಣ್ಣನ್ನು ಮನೆಗದು ತಂದು
ಹೀಗೆ ಮಾಡುವುದು ಸರಿಯೇ
ಆಸೆ ಆಕಾಂಕ್ಷೆ ಕನಸು ನನಸು
ಆಕೆಗೂ ಇಹುದು ಅಲ್ಲವೇ?

ಹೆಣ್ಣಿನ ಮನವನು ಅರಿಯದ ಗಂಡಗೆ
ಸ್ವರ್ಗದಲ್ಲಿ ಏಕೆ ನಿಶ್ಚಯ
ನೋವನ್ನು ಕೊಟ್ಟು ನಗುವ ಹೃದಯಕ್ಕೆ
ಆಗಲಿ ನೋವಿನ ನಿಶ್ಚಯ..
@ಹನಿಬಿಂದು@
04.12.2023


ನನ್ನ ಬಗ್ಗೆ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212
       ನಮ್ಮ ಸುಪ್ತ ಮನಸ್ಸನ್ನು ಒಮ್ಮೆ ಎಚ್ಚರಿಸಿ ಕೊಳ್ಳೋಣ. ನಮ್ಮ ಮನಸ್ಸಿನಿಂದ ನಾವು ಏನು ಆಲೋಚಿಸುತ್ತೇವೆಯೋ  ಅದೇ ಆಗುತ್ತೇವೆ. ನಮ್ಮ ಮೆದುಳಿಗೆ ಬಹಳ ಶಕ್ತಿ ಇದೆ. ಅದನ್ನು ಸ್ವಲ್ಪ ಆದರೂ ಬಳಸಿ ಕೊಳ್ಳೋಣ . ನಮ್ಮ ಮೆದುಳಿಗೆ ಉತ್ತಮ ಅಂಶಗಳನ್ನು ತುಂಬಿಸಿ ಕೊಳ್ಳೋಣ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಕಿವಿ, ಕಣ್ಣು, ಕಾಲು, ಕೈ ಗಳೇ ಇಲ್ಲದ ಮನುಷ್ಯರು ಬದುಕನ್ನು ನಮಗಿಂತ ಚೆನ್ನಾಗಿ ನಡೆಸುತ್ತಾ ಇರುವಾಗ ಎಲ್ಲಾ ಅಂಗಾಂಗಗಳನ್ನು ಸರಿಯಾಗಿ ಪಡೆದ ಮಾನವರು ಬದುಕಿಗೆ ಹೆದರಿ ಬದುಕನ್ನು ತಾನೇ ಕೊನೆಗೊಳಿಸುವ ಹಾಗಿದ್ದರೆ ನಮಗೆ ದೇವರು ಉತ್ತಮ ಶರೀರ, ಒಳ್ಳೆಯ ಮನಸ್ಸು , ಆಲೋಚನೆಗಳನ್ನು ಕೊಟ್ಟು ಏನು ಪ್ರಯೋಜನ?  ವಿದ್ಯಾರ್ಥಿಗಳಿಗೆ ಏನಾದರೂ ಕಲಿಸುವ ಮೊದಲು ಶಿಕ್ಷಕರಿಗೆ ತಮ್ಮ ಮನದಲ್ಲಿ ಧನಾತ್ಮಕ ಯೋಚನೆ ಹೊಂದಿರಬೇಕು. ನಮಗೇ ಬದುಕು ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ನಮಗೆ ರೂಪಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಿಕ್ಷಕ ತನ್ನ ವಿದ್ಯಾರ್ಥಿಗಳು, ತನ್ನ ಮಕ್ಕಳ ಭವಿಷ್ಯ ರೂಪಿಸಬಲ್ಲನೇ? ಹಾಗೆಯೇ ಪೋಷಕರೂ ಕೂಡ. ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರೇ ತಮ್ಮ ಬಾಳನ್ನು ಕೊನೆಗೊಳಿಸಲು ನಿರ್ಧರಿಸಿದರೆ ಮಕ್ಕಳ ಗತಿ ಏನು? ಇನ್ನು ಕೆಲವರು ಬಾಳಿ ಬದುಕಬೇಕಾದ ಮಕ್ಕಳ ಬಾಳನ್ನು ಕೂಡಾ ಚಿವುಟಿ ಬಿಸಾಕಿ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ಏನೂ ಅರಿಯದ ಮುಗ್ದ ಕಂದರು ಬಲಿಯಾಗುತ್ತಾರೆ. 
     ಆಲೋಚನೆ ಬದಲಿಸಿದರೆ ಸಾಕು ಅಷ್ಟೇ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ, ನಾವು ಮೇಲೆ ಏರುವುದು, ಎತ್ತರಕ್ಕೆ ಏರಿ ಸಾಧನೆಗೆ ಚುಕ್ಕಿ ಇಡುವುದು ಎಲ್ಲವೂ ನಾವೇ, ನಮ್ಮ ಆಲೋಚನೆಗಳೇ. ನಾನು ಏನೂ ಮಾಡಲು ಆಗದು, ನನ್ನ ಬಳಿ ಏನೂ ಇಲ್ಲ ಎಂದು ಹೇಳುವವರು ಕೊನೆಗೂ ಬದುಕಿನಲ್ಲಿ ಸಕ್ಸಸ್ ಎನ್ನುವ ಪದ ಕಾಣಲು ಸಾಧ್ಯವೇ?

      ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯರು,  ಬದಲಾದರೆ ಮಾತ್ರ ಮುಂದಿನ ದೇಶದ ಭಾಷ್ಯ ಬದಲಾಗುತ್ತದೆ. ಅವರೇ ಹೆದರಿ ಬಾಲ ಮುದುರಿ ಹೋದರೆ ಇನ್ನು ಸಮಾಜ ತಿದ್ದುವವರು ಯಾರೋ... ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿನಲ್ಲಿ ಇವರೂ ಸೇರಿ ಹೋಗಿದ್ದಾರೆ.  ನಮ್ಮ ಬದುಕಿನ ರೂವಾರಿಗಳು, ಇಂಜಿನಿಯರ್ ಗಳು, ಬಿಲ್ಡರ್ ಗಳು, ಮೇಸ್ತ್ರಿಗಳು, ಮೇಷ್ಟ್ರುಗಳು, ಗೈಡ್ ಗಳು, ಎಸ್ಟಿಮೇಟರ್ ಗಳು, ಪ್ಲಾನರ್ ಗಳು ಎಲ್ಲವೂ ನಾವೇ.
          ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ನಮ್ಮ ಆಲೋಚನೆಗಳು ಬಹಳಷ್ಟು ಎತ್ತರದಲ್ಲಿ ಇರಬೇಕು. ಆಕಾಶಕ್ಕಿಂತಲೂ ಎತ್ತರದ ಗುರಿಗಳನ್ನು ಇಟ್ಟುಕೊಂಡರೆ ಆಕಾಶದವರೆಗಾದರೂ ತಲುಪಬಹುದು. ಅದರ ಬದಲು ಸಾವಿನ ಬಗ್ಗೆ ಚಿಂತೆ ಮಾಡಲು ಕನಸಿನ, ಗುರಿಯ ನಡುವೆ ಸಮಯ ಎಲ್ಲಿದೆ? ಸಾವು ಒಂದು ದಿನ ಬಂದೇ ಬರುತ್ತದೆ. ಅದು ತನ್ನ ದಿನವನ್ನು ಎಣಿಸುತ್ತಾ ಕಾದು ಕುಳಿತು ದಿನ ಲೆಕ್ಕ ಹಾಕುತ್ತಿದೆ. ಅದು ಯಾವಾಗ ಬೇಕಾದರೂ ಬರಲಿ ನಾವು ಅದನ್ನು ಖುಷಿಯಿಂದ ಸ್ವೀಕರಿಸಲು ತಯಾರಾಗಬೇಕೇ ಹೊರತು, ನಮ್ಮ ಕನಸುಗಳನ್ನು ಮುರಿಯುವುದಲ್ಲ. ಕನಸು, ಜೊತೆಗೆ ಗುರಿ ಒಟ್ಟಾಗಿ ಓಡುತ್ತಲೇ ಇರಬೇಕು. ಗುರಿಯ ಕಡೆ ಸಾಗುವ ಈ ಬದುಕಿನ ಓಟದ ನಡುವೆ ಸಾವಿನ ದಿನ ಮರೆತು ಹೋಗಬೇಕು. 
     ಸಾಯುವುದು ಸುಲಭ. ನಾಡಿಯನ್ನು ನಿಲ್ಲಿಸಿದರೆ ಆಯಿತು,ಹೃದಯ ಬಡಿತ ನಿಂತರೆ ಆಯಿತು. ಆದರೆ ಆಲೋಚನೆಗಳನ್ನು  ನಿಯಂತ್ರಿಸಿ  ಅದರ ಜೊತೆ ಹೋರಾಡಿ ಬದುಕಿನಲ್ಲಿ ಜಯ ಗಳಿಸುವುದು ಇದೆಯಲ್ಲ ಅದು ಗ್ರೇಟ್. ಅದನ್ನು ಮಾಡುವುದು ಒಂದು ತಪಸ್ಸು. ನಾನು ಆ ತಪಸ್ವಿ ಆಗಲಿದ್ದೇನೆ ಎಂಬ ಉದಾತ್ತ ಆಲೋಚನೆ ಮನದಲ್ಲಿ ಬಂದರೆ ಸಾಕು. ಸುಪ್ತ ಮನಸ್ಸು ಮೇಲೆದ್ದು ಅದೇನನ್ನೋ ಸಾಧಿಸಲು ರೆಡಿ ಆಗಿ ಬಿಡುತ್ತದೆ. ನಾನು, ನೀನು, ಅವನು, ಇವನು ಯಾರೂ ಇರದೆಯೂ ಜಗ ನಡೆಯುತ್ತದೆ. ಯಾರೋ ಹೇಳಿದ ಮಾತಿದು. "ಈ ಜಗತ್ತು ನಮಗೆ ಅನಿವಾರ್ಯವೇ ಹೊರತು ನಾವು ಜಗತ್ತಿಗೆ ಅನಿವಾರ್ಯ ಅಲ್ಲ." ನಾವೇನೋ ಈ ಜಗತ್ತಿನಲ್ಲಿ ಚಿಕ್ಕದನ್ನು ಸಾಧಿಸಲು ಬಂದಿದ್ದೇವೆ. ಅದನ್ನು ಮಾಡಿಯೇ ತೀರಬೇಕು. ಕಳುಹಿಸಿದನಿಗೆ ಹಿಂದೆ  ಕರೆಸಿಕೊಳ್ಳಲು ಗೊತ್ತಿದೆ. ಎಲ್ಲೋ ಓದಿದ ನೆನಪು. ನಾವೇನಾದರೂ ಈಗ ನಮ್ಮನ್ನು ನಾವು ಸಾಯಿಸಿಕೊಂಡು ಅಕಸ್ಮಾತ್ ಮನುಷ್ಯರಾಗಿ ಮತ್ತೆ ಹುಟ್ಟಿ  ಬಂದರೆ...? ಈಗಾಗಲೇ ಸಾಕಾಗಿದೆ...ಮತ್ತೆ ಎಲ್. ಕೆ. ಜಿ ಯಿಂದ ಓದಬೇಕು ಮತ್ತೆ ಕಲಿಯಬೇಕು, ಮತ್ತೆ ಅದೇ ಕಲುಷಿತ ನೀರು, ಆಹಾರ, ಗಾಳಿ ಸೇವಿಸಬೇಕು. ಮತ್ತೆ ಕಾಂಪಿಟೇಶನ್ ಬದುಕು. ಅದೆಲ್ಲ ಯಾಕೆ.... ಬದುಕು ಇದ್ದಷ್ಟು ದಿನ ಆರಾಮಾಗಿ ಇದ್ದು ಬಿಡೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
24.11.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212

       ನಮ್ಮ ಸುಪ್ತ ಮನಸ್ಸನ್ನು ಒಮ್ಮೆ ಎಚ್ಚರಿಸಿ ಕೊಳ್ಳೋಣ. ನಮ್ಮ ಮನಸ್ಸಿನಿಂದ ನಾವು ಏನು ಆಲೋಚಿಸುತ್ತೇವೆಯೋ  ಅದೇ ಆಗುತ್ತೇವೆ. ನಮ್ಮ ಮೆದುಳಿಗೆ ಬಹಳ ಶಕ್ತಿ ಇದೆ. ಅದನ್ನು ಸ್ವಲ್ಪ ಆದರೂ ಬಳಸಿ ಕೊಳ್ಳೋಣ . ನಮ್ಮ ಮೆದುಳಿಗೆ ಉತ್ತಮ ಅಂಶಗಳನ್ನು ತುಂಬಿಸಿ ಕೊಳ್ಳೋಣ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಕಿವಿ, ಕಣ್ಣು, ಕಾಲು, ಕೈ ಗಳೇ ಇಲ್ಲದ ಮನುಷ್ಯರು ಬದುಕನ್ನು ನಮಗಿಂತ ಚೆನ್ನಾಗಿ ನಡೆಸುತ್ತಾ ಇರುವಾಗ ಎಲ್ಲಾ ಅಂಗಾಂಗಗಳನ್ನು ಸರಿಯಾಗಿ ಪಡೆದ ಮಾನವರು ಬದುಕಿಗೆ ಹೆದರಿ ಬದುಕನ್ನು ತಾನೇ ಕೊನೆಗೊಳಿಸುವ ಹಾಗಿದ್ದರೆ ನಮಗೆ ದೇವರು ಉತ್ತಮ ಶರೀರ, ಒಳ್ಳೆಯ ಮನಸ್ಸು , ಆಲೋಚನೆಗಳನ್ನು ಕೊಟ್ಟು ಏನು ಪ್ರಯೋಜನ?  ವಿದ್ಯಾರ್ಥಿಗಳಿಗೆ ಏನಾದರೂ ಕಲಿಸುವ ಮೊದಲು ಶಿಕ್ಷಕರಿಗೆ ತಮ್ಮ ಮನದಲ್ಲಿ ಧನಾತ್ಮಕ ಯೋಚನೆ ಹೊಂದಿರಬೇಕು. ನಮಗೇ ಬದುಕು ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ನಮಗೆ ರೂಪಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಿಕ್ಷಕ ತನ್ನ ವಿದ್ಯಾರ್ಥಿಗಳು, ತನ್ನ ಮಕ್ಕಳ ಭವಿಷ್ಯ ರೂಪಿಸಬಲ್ಲನೇ? ಹಾಗೆಯೇ ಪೋಷಕರೂ ಕೂಡ. ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರೇ ತಮ್ಮ ಬಾಳನ್ನು ಕೊನೆಗೊಳಿಸಲು ನಿರ್ಧರಿಸಿದರೆ ಮಕ್ಕಳ ಗತಿ ಏನು? ಇನ್ನು ಕೆಲವರು ಬಾಳಿ ಬದುಕಬೇಕಾದ ಮಕ್ಕಳ ಬಾಳನ್ನು ಕೂಡಾ ಚಿವುಟಿ ಬಿಸಾಕಿ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ಏನೂ ಅರಿಯದ ಮುಗ್ದ ಕಂದರು ಬಲಿಯಾಗುತ್ತಾರೆ. 
     ಆಲೋಚನೆ ಬದಲಿಸಿದರೆ ಸಾಕು ಅಷ್ಟೇ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ, ನಾವು ಮೇಲೆ ಏರುವುದು, ಎತ್ತರಕ್ಕೆ ಏರಿ ಸಾಧನೆಗೆ ಚುಕ್ಕಿ ಇಡುವುದು ಎಲ್ಲವೂ ನಾವೇ, ನಮ್ಮ ಆಲೋಚನೆಗಳೇ. ನಾನು ಏನೂ ಮಾಡಲು ಆಗದು, ನನ್ನ ಬಳಿ ಏನೂ ಇಲ್ಲ ಎಂದು ಹೇಳುವವರು ಕೊನೆಗೂ ಬದುಕಿನಲ್ಲಿ ಸಕ್ಸಸ್ ಎನ್ನುವ ಪದ ಕಾಣಲು ಸಾಧ್ಯವೇ?

      ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯರು,  ಬದಲಾದರೆ ಮಾತ್ರ ಮುಂದಿನ ದೇಶದ ಭಾಷ್ಯ ಬದಲಾಗುತ್ತದೆ. ಅವರೇ ಹೆದರಿ ಬಾಲ ಮುದುರಿ ಹೋದರೆ ಇನ್ನು ಸಮಾಜ ತಿದ್ದುವವರು ಯಾರೋ... ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿನಲ್ಲಿ ಇವರೂ ಸೇರಿ ಹೋಗಿದ್ದಾರೆ.  ನಮ್ಮ ಬದುಕಿನ ರೂವಾರಿಗಳು, ಇಂಜಿನಿಯರ್ ಗಳು, ಬಿಲ್ಡರ್ ಗಳು, ಮೇಸ್ತ್ರಿಗಳು, ಮೇಷ್ಟ್ರುಗಳು, ಗೈಡ್ ಗಳು, ಎಸ್ಟಿಮೇಟರ್ ಗಳು, ಪ್ಲಾನರ್ ಗಳು ಎಲ್ಲವೂ ನಾವೇ.
          ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ನಮ್ಮ ಆಲೋಚನೆಗಳು ಬಹಳಷ್ಟು ಎತ್ತರದಲ್ಲಿ ಇರಬೇಕು. ಆಕಾಶಕ್ಕಿಂತಲೂ ಎತ್ತರದ ಗುರಿಗಳನ್ನು ಇಟ್ಟುಕೊಂಡರೆ ಆಕಾಶದವರೆಗಾದರೂ ತಲುಪಬಹುದು. ಅದರ ಬದಲು ಸಾವಿನ ಬಗ್ಗೆ ಚಿಂತೆ ಮಾಡಲು ಕನಸಿನ, ಗುರಿಯ ನಡುವೆ ಸಮಯ ಎಲ್ಲಿದೆ? ಸಾವು ಒಂದು ದಿನ ಬಂದೇ ಬರುತ್ತದೆ. ಅದು ತನ್ನ ದಿನವನ್ನು ಎಣಿಸುತ್ತಾ ಕಾದು ಕುಳಿತು ದಿನ ಲೆಕ್ಕ ಹಾಕುತ್ತಿದೆ. ಅದು ಯಾವಾಗ ಬೇಕಾದರೂ ಬರಲಿ ನಾವು ಅದನ್ನು ಖುಷಿಯಿಂದ ಸ್ವೀಕರಿಸಲು ತಯಾರಾಗಬೇಕೇ ಹೊರತು, ನಮ್ಮ ಕನಸುಗಳನ್ನು ಮುರಿಯುವುದಲ್ಲ. ಕನಸು, ಜೊತೆಗೆ ಗುರಿ ಒಟ್ಟಾಗಿ ಓಡುತ್ತಲೇ ಇರಬೇಕು. ಗುರಿಯ ಕಡೆ ಸಾಗುವ ಈ ಬದುಕಿನ ಓಟದ ನಡುವೆ ಸಾವಿನ ದಿನ ಮರೆತು ಹೋಗಬೇಕು. 
     ಸಾಯುವುದು ಸುಲಭ. ನಾಡಿಯನ್ನು ನಿಲ್ಲಿಸಿದರೆ ಆಯಿತು,ಹೃದಯ ಬಡಿತ ನಿಂತರೆ ಆಯಿತು. ಆದರೆ ಆಲೋಚನೆಗಳನ್ನು  ನಿಯಂತ್ರಿಸಿ  ಅದರ ಜೊತೆ ಹೋರಾಡಿ ಬದುಕಿನಲ್ಲಿ ಜಯ ಗಳಿಸುವುದು ಇದೆಯಲ್ಲ ಅದು ಗ್ರೇಟ್. ಅದನ್ನು ಮಾಡುವುದು ಒಂದು ತಪಸ್ಸು. ನಾನು ಆ ತಪಸ್ವಿ ಆಗಲಿದ್ದೇನೆ ಎಂಬ ಉದಾತ್ತ ಆಲೋಚನೆ ಮನದಲ್ಲಿ ಬಂದರೆ ಸಾಕು. ಸುಪ್ತ ಮನಸ್ಸು ಮೇಲೆದ್ದು ಅದೇನನ್ನೋ ಸಾಧಿಸಲು ರೆಡಿ ಆಗಿ ಬಿಡುತ್ತದೆ. ನಾನು, ನೀನು, ಅವನು, ಇವನು ಯಾರೂ ಇರದೆಯೂ ಜಗ ನಡೆಯುತ್ತದೆ. ಯಾರೋ ಹೇಳಿದ ಮಾತಿದು. "ಈ ಜಗತ್ತು ನಮಗೆ ಅನಿವಾರ್ಯವೇ ಹೊರತು ನಾವು ಜಗತ್ತಿಗೆ ಅನಿವಾರ್ಯ ಅಲ್ಲ." ನಾವೇನೋ ಈ ಜಗತ್ತಿನಲ್ಲಿ ಚಿಕ್ಕದನ್ನು ಸಾಧಿಸಲು ಬಂದಿದ್ದೇವೆ. ಅದನ್ನು ಮಾಡಿಯೇ ತೀರಬೇಕು. ಕಳುಹಿಸಿದನಿಗೆ ಹಿಂದೆ  ಕರೆಸಿಕೊಳ್ಳಲು ಗೊತ್ತಿದೆ. ಎಲ್ಲೋ ಓದಿದ ನೆನಪು. ನಾವೇನಾದರೂ ಈಗ ನಮ್ಮನ್ನು ನಾವು ಸಾಯಿಸಿಕೊಂಡು ಅಕಸ್ಮಾತ್ ಮನುಷ್ಯರಾಗಿ ಮತ್ತೆ ಹುಟ್ಟಿ  ಬಂದರೆ...? ಈಗಾಗಲೇ ಸಾಕಾಗಿದೆ...ಮತ್ತೆ ಎಲ್. ಕೆ. ಜಿ ಯಿಂದ ಓದಬೇಕು ಮತ್ತೆ ಕಲಿಯಬೇಕು, ಮತ್ತೆ ಅದೇ ಕಲುಷಿತ ನೀರು, ಆಹಾರ, ಗಾಳಿ ಸೇವಿಸಬೇಕು. ಮತ್ತೆ ಕಾಂಪಿಟೇಶನ್ ಬದುಕು. ಅದೆಲ್ಲ ಯಾಕೆ.... ಬದುಕು ಇದ್ದಷ್ಟು ದಿನ ಆರಾಮಾಗಿ ಇದ್ದು ಬಿಡೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
24.11.2023
@ಹನಿಬಿಂದು@

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -211

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -211

                 ಬದುಕಿನ ದಾರಿಯಲ್ಲಿ ಒಂಟಿತನ ನಮ್ಮ ಸ್ನೇಹಿತ. ಹಿಂದಿನ ಜನ್ಮದ ತಪ್ಪುಗಳೋ ಏನೋ ಈ ಜನ್ಮದಲ್ಲಿ ಒಂಟಿತನದ ಶಾಪವಾಗಿ ಆಗಾಗ ಕಾಡುತ್ತಾ ಇರುತ್ತದೆ. ಬಂಧು, ಬಳಗ, ಗೆಳೆಯರು, ಇಷ್ಟರು ಯಾರೇ ಇದ್ದರೂ ಕೂಡ ಇದು ಕಾಡುತ್ತಲೇ ಇರುತ್ತದೆ.  ಏನೂ ಮಾಡಲು ಆಗದು. ಬಂದ ಬದುಕನ್ನು ಅನುಭವಿಸಬೇಕು, ಏನಾದರೂ ಸಾಧಿಸಬೇಕು ಅಷ್ಟೇ. ನಾವಿನ್ನೂ ಕಲಿಯುವುದು ಬಹಳವಿದೆ ಬದುಕಿನಲ್ಲಿ. ನಮ್ಮವರು ಅಂದುಕೊಂಡ ಯಾರೂ ನಮ್ಮವರಲ್ಲ. ಅವರ ಮನಸಿನಲ್ಲಿ ಬೇರೆ ಇನ್ನು ಯಾರೋ ಇರುತ್ತಾರೆ. 
        ನಾವು ಅಂದುಕೊಂಡ ಹಾಗೆ ನಮ್ಮ ಬದುಕು ಇಲ್ಲ. ಇತರರು ಇನ್ನೇನೋ ಅಂದುಕೊಂಡಿರುತ್ತಾನೆ. ದೇವರಲ್ಲಿ ಒಬ್ಬ ಬದುಕು ಬೇಡಿದರೆ, ಇನ್ನೊಬ್ಬ ಅವನ ಸಾವು ಬೇಡುತ್ತಾನೆ. ಕನ್ಫ್ಯೂಸ್ ಆದ ದೇವರು ಆತ ಸಾವು ಬದುಕಿನ ನಡುವೆ ಹೊರಳಾಡುವ ಹಾಗೆ ಮಾಡಿ ಬಿಡುತ್ತಾನೆ. ಇತ್ತ ಸಾಯಲೂ ಆಗದು , ಅತ್ತ ಬದುಕಲು ಕೂಡಾ ಆಗದು. ಅದೇ ನಮ್ಮ ಬಾಳಿನ ಮರ್ಮ ಅಲ್ಲವೇ?
          ನೋವುಗಳ ಮೇಲೆ ನೋವು, ಏಟಿನ ಮೇಲೆ ಏಟು, ಬರೆಯ ಮೇಲೆ ಬರೆ, ಒಂದು ಸಣ್ಣ ಸಕ್ಕರೆ ಹನಿ ನಡುವೆ. ಆ ಸಿಹಿ ಬಾಯಿಗೆ ಬಿದ್ದ ಕೂಡಲೇ ಮನುಷ್ಯ ಎಲ್ಲವನ್ನೂ, ಎಲ್ಲಾ ಕಷ್ಟಗಳನ್ನೂ ಮರೆತು ಇನ್ನು ನನ್ನ ಬದುಕು ಹೀಗೆಯೇ ಸಿಹಿಯಾಗಿ ಇರುತ್ತದೆ ಎಂಬ ಭ್ರಮೆಯಲ್ಲಿ ಬದುಕುತ್ತಾ ಇರುತ್ತಾನೆ. ಮತ್ತೆ ಕಷ್ಟಗಳ ಸಾಲು ಬಂದಾಗ ಸ್ವಲ್ಪ ಧೈರ್ಯದಿಂದ ಎದುರಿಸುತ್ತಾ, ಸಕ್ಕರೆ ಹನಿಯನ್ನು ನೆನಪಿಸುತ್ತಾ, ಹಾನಿ, ನೋವು ಎಲ್ಲಾ ಎದುರಿಸುತ್ತಾ ಸಾಗುತ್ತಾನೆ. ಮತ್ತೆ ಸೋತು ಸಾವಿಗೆ ಹತ್ತಿರವಾಗಿದ್ದೇನೆ ಎನ್ನುವಾಗ ಮತ್ತೊಂದು ಸಕ್ಕರೆ ಹನಿ..ಹೀಗೆಯೇ ದೇವರು ನಮ್ಮನ್ನು ಮಂಗ ಮಾಡುವುದು! ಹನಿ ಸಿಹಿಯ ಬದುಕು ಸರ್ವರದ್ದು! 
    
         ಏನೋ.. ಈ ಬದುಕು ಏನೇನೂ ಸರಿ ಇಲ್ಲ ಅನ್ನಿಸಿ ಬಿಡುತ್ತದೆ ಒಮ್ಮೊಮ್ಮೆ. ಒಂಟಿತನದ , ಬೇಸರದ, ನೋವಿನ, ಬಾಧೆ , ಬವಣೆ ಒಂದೆಡೆ ಆದರೆ ಮತ್ತೇನೇನೋ ಕೊರತೆಗಳು ಕಾಡುತ್ತಿರುತ್ತವೆ. ಎತ್ತರಕ್ಕೆ ಏರಲು ಆಗದ ಬಯಕೆಗಳು. ಯಾವುದನ್ನೂ ಸಾಧಿಸಲು ಒಂಟಿತನದ , ಹಣದ ಖರ್ಚಿನ, ಇತರರ, ಸಮಾಜದ, ಆಡಿಕೊಳ್ಳುವವರ, ಭಯ ಬಿಡದು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹಿರಿಯರು ಹೇಳಿದ್ದಾರೆ. ಹಿರಿಯರ ಮಾತಿಗೆ ತಲೆಬಾಗಿ ನಡೆ ಎಂದು ವೇದ , ಪುರಾಣ, ಗೀತೆಗಳು ಹೇಳಿವೆ.  ನಡುವೆ ಹೊತ್ತು ತಿರುಗುತ್ತಿರುವ ಜವಾಬ್ದಾರಿಗಳ ಮೂಟೆ. ನಮ್ಮದಲ್ಲ ಎಂದು ಗೊತ್ತಿದ್ದರೂ ನಮಗಾಗಿ ಅಲ್ಲ,  ಬೇರೆಯವರ ಬದುಕಿಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿದೆ. 

            ಎಲ್ಲೋ ಒಂದು  ಬೀಜ ಬಿದ್ದು ಹುಟ್ಟಿ ಅಲ್ಲೇ ಮರವಾಗಿ ಬೆಳೆದು ಎಲೆ, ಹೂ, ಹಣ್ಣು, ಕಾಯಿ, ನೆರಳು, ಗಾಳಿ ಕೊಡುವ ಮರದಂತೆ ಅಲ್ಲ ನಾವು. ಇನ್ನೆಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆಲ್ಲೋ ಸಾಧಿಸ ಹೊರಟವರು. ಇಂದು ನಮ್ಮೊಡನೆ ನಮ್ಮವರಾಗಿ ಇರುವವರು ನಾಳೆ ಇನ್ನೆಲ್ಲೋ ಪರರಾಗಿ ಉಳಿದು ಬಿಡುತ್ತಾರೆ. ನಾನು, ನನ್ನದು,  ನನಗೆ,  ನನಗಾಗಿ,  ಯಾರೂ ಇರದೆ ಇರಬಹುದು. ನಮ್ಮವರು ಅಂದುಕೊಂಡವರು ಪರರ ಪಾಲಾಗಿರಬಹುದು. ನಮ್ಮನ್ನು ಅವರು ಮರೆತಿರಲೂ ಬಹುದು. ನಮ್ಮೊಡನೆ ಕಳೆದ ಕ್ಷಣಗಳ ಮೆಲುಕು ಹಾಕುತ್ತಾ ಇರಲೂ ಬಹುದು. ಸಂತೋಷದಲ್ಲಿ ಕುಣಿದು ಕುಪ್ಪಳಿಸುವ ಆನಂದದ ಬದುಕಲ್ಲಿ ಮೆರೆದಾಡುತ್ತಾ ಇರಲೂ ಬಹುದು. 

            ಕಾಲ ನಿಲ್ಲದು, ಓಡುತ್ತಲೇ ಇರುತ್ತದೆ. ಪ್ರತಿ ಕ್ಷಣವೂ ಬದಲಾಗುತ್ತಲೇ ಇರುವ ದೇಹ, ಮನಸ್ಸು, ಪ್ರಕೃತಿ, ಆಲೋಚನೆಗಳು. ಆದರೆ ದಿಕ್ಕುಗಳು ಬದಲಾವಣೆ ಆಗದು. ಭೂಮಿ ಚಲಿಸುತ್ತಲೇ ಇದ್ದರೂ, ಋತು, ಹಗಲು ಇರುಳು ಬದಲಾಗುತ್ತಲೇ ಇದ್ದರೂ ಅದು ಸೂರ್ಯನನ್ನು ಬಿಟ್ಟು ಇನ್ನೊಂದು ನಕ್ಷತ್ರದ ಸುತ್ತ ಸುತ್ತಲು ಆಗದು, ಹೋಗದು. ಇದಂತೂ ಜಗತ್ತಿನ ಸತ್ಯ. ಹಾಗೆಯೇ ಸೂರ್ಯ ಕೂಡಾ. ತನ್ನ ಸುತ್ತ ಸಾವಿರ ಗ್ರಹಗಳು ಸುತ್ತುತ್ತಲೇ ಇದ್ದರೂ ಗಾಳಿ, ಬೆಳಕು, ನೀರು, ಹಸಿರು ಕೊಟ್ಟು ಕಾಪಿಟ್ಟದ್ದು ವರವಿತ್ತುದು ಧರೆಗೆ ಮಾತ್ರ. ಇನ್ನೊಂದು ಗ್ರಹ ಹಾಗೆ ಇರಲಾರದು. ಧರೆಯನ್ನು ನೋಡಲೆಂದೇ ಪ್ರತಿ ನಿತ್ಯ ರವಿ ಬೆಳಗೆದ್ದು ಬರುತ್ತಾನೆ. ಒಂದೇ ಒಂದು ಕಾರಣ. ತನಗಾಗಿ ಅಲ್ಲ, ಇಳೆಗಾಗಿ. ಧರಣಿಯ ಆರೋಗ್ಯಕರ ಸೌಂದರ್ಯ ಉಳಿಸಲಿಕ್ಕಾಗಿ. ಹಕ್ಕಿಗಳ ಚಿಲಿಪಿಲಿ, ಇಬ್ಬನಿಯ ಬಿಂದುಗಳ ಬೆಳಕಿನಾಟ, ಹನಿಗಳ ಉದುರುವಿಕೆಯ ತಂಪು ಇವುಗಳನ್ನು ನೋಡಲು ಸಿಗುವುದು ಆ ಸೂರ್ಯ ದೇವರ ತರಹ ಬಂದಾಗಲೇ ಅಲ್ಲವೇ. ಭಾನು ಇಲ್ಲದೆ ಇಳೆ ಇಹಳೆ? ಸದಾ ಇಳೆ ಕಾಯುವುದು, ಸುತ್ತುವುದು, ಹಗಲು ರಾತ್ರಿಗೆ, ತನ್ನ ಹಸಿರ ಸೊಬಗಿನ ಮೈಸಿರಿಗೆ ಆಕೆ ಆಧರಿಸಿರುವುದು ಸೂರ್ಯನನ್ನೇ. ಅದು ಆ ಆದಿತ್ಯನಿಗೂ ತಿಳಿದ ಕಾರಣ ಪ್ರತಿ ಮುಂಜಾನೆ ಬಂದು ಇಣುಕಿ ಬಿಡುತ್ತಾನೆ. ವರ್ಷಾನು ವರ್ಷದಿಂದಲೂ ಸೂರ್ಯ ಹಾಗೂ ವಸುದೆಯರ ಜತೆ ತಿರುಗಾಟ ನಿಂತಿಲ್ಲ. ನಿಂತರೆ ಇಳೆ ಇರಲಾರಳು. ಅಂದೇ ಹಸಿರಿನ, ಜೀವ ಜಗತ್ತಿನ ಕೊನೆ. ಪ್ರಪಂಚದ ಪ್ರಳಯ. ಇದು ಅಸಾಧ್ಯ. ಏಕೆಂದರೆ ನಾರಾಯಣನ ಲೆಕ್ಕಾಚಾರ ಬೇರೆಯೇ ಇದೆ. ಹತ್ತವತಾರಗಳನ್ನು ಎತ್ತಿ ಇನ್ನೊಂದು ಹೊಸ ಅವತಾರ ಎತ್ತಿ ಬರಲು ಕಾಯುತ್ತಿರುವ ಅವನು ಭೂಮಿಯನ್ನು ತಾ ಬರುವ ಮೊದಲು ಅಥವಾ ಬಂದು ಸ್ವಚ್ಚ ಗೊಳಿಸಬೇಕಿದೆ. ಈ ಸುತ್ತಾಟದ ಬದುಕಿನಲ್ಲಿ ಯಾರ ಸುತ್ತ ಯಾರು ಸುತ್ತಬೇಕೋ ಅವರೇ ಸುತ್ತಬೇಕು, ಪರರು ಸುತ್ತಿದರೂ, ಪರರ ಹಿಂದೆ ಇವರು ಸುತ್ತಿದರೂ ಬದುಕಿನ ಲೆಕ್ಕಾಚಾರವೇ ಬೇರೆಯಾಗಿ ಹೋಗುತ್ತದೆ. ಭೂಮಿಯು ರವಿಯ ಸುತ್ತ, ಚಂದಿರ ಭೂಮಿಯ ಸುತ್ತ! 
         ಬದುಕೇ ಹಾಗೆ. ಅಲ್ಲೊಂದು ಸಿಸ್ಟಂ ಇದೆ. ಅದನ್ನು ಪಾಲಿಸಬೇಕು. ತನಗಾಗಿ ಅಲ್ಲ, ಈ ಸಮಾಜಕ್ಕಾಗಿ ಬದುಕಬೇಕು. ಸಮಾಜ ಎಂದರೆ ನಾವೇ, ಆದರೆ ಸಮಾಜ ಸರಿ ಇಲ್ಲ ಎನ್ನುತ್ತೇವೆ. ಮನುಷ್ಯನನ್ನು ಹೊರತುಪಡಿಸಿ ಇತರ ಎಲ್ಲಾ ಜೀವಿ, ನಿರ್ಜೀವಿಗಳು ಸರಿ ಇರುವಾಗ ತನಗೆ ತಾನು ಸರಿ ಇಲ್ಲ ಎಂದು ತಿಳಿದೂ ಕೂಡ ಮನುಷ್ಯ ತಪ್ಪೇ ಮಾಡುತ್ತಾ ಬದುಕುತ್ತಾ ಇದ್ದಾನೆ. ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿ ಕೊಳ್ಳುತ್ತಾ ಇದ್ದೇನೆ ಎಂದು ಅರಿತರೂ ಕೂಡಾ ಇಂದೇ ಸಾಯಲಿಕ್ಕಿಲ್ಲ, ಮೆಲ್ಲ ಪೆಟ್ಟು ಕೊಟ್ಟುಕೊಳ್ಳುತ್ತೀನೆ ಅಂತ ತಾನು ನೋವು ಭರಿಸುತ್ತಲೇ ಇರುತ್ತಾನೆ. ಅದು ಇತರರಿಗಾಗಿ ಎಂದು ಅರಿತರೂ, ಅದು ತನ್ನ ಜವಾಬ್ದಾರಿ ಎಂಬಂತೆ ಹಣ, ಧನ, ಸಂಪತ್ತು, ಆಸ್ತಿ ತುಂಬಿಡುತ್ತಾ ತನ್ನ ಬದುಕಿನ ಕಾಯಕ ಅದೇ ಎನ್ನುತ್ತಾ ತಾನು ಸರಿಯಾಗಿ ಬೇಕಾದ್ದನ್ನು ತಿನ್ನುವುದನ್ನು ಕೂಡ ಮರೆತು ಬೇಡದ ರುಚಿಕರ ವಸ್ತುವಿನ ಹಿಂದೆ ಅದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದರೂ ಕೂಡ ಖುಷಿಗಾಗಿ ರುಚಿಗಾಗಿ ಓಡುತ್ತಾ ಇರುತ್ತಾನೆ. 
   ಎಲ್ಲವನ್ನೂ ಇಲ್ಲೇ, ಯಾರಿಗಾಗಿಯೋ ಬಿಟ್ಟು ಕೊನೆಗೆ ಒಂದು ದಿನ ಕೋಪ, ರೋಷ, ದ್ವೇಷ, ಜಗಳ, ಪ್ರೀತಿ, ಮೋಹ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಿ ತನಗೆ ಗೊತ್ತಿಲ್ಲದ ದಾರಿಯಲ್ಲಿ ಒಂಟಿಯಾಗಿ ಬಂದ ಹಾಗೆಯೇ ಆತ್ಮಕ್ಕೆ ಮೋಕ್ಷ, ಚಿರ ಶಾಂತಿ ಹುಡುಕುತ್ತಾ ನಡೆದು ಬಿಡುತ್ತಾನೆ. ಕೆಲವರು ಮತ್ತೆ ಖುಷಿ ಪಟ್ಟರೆ ಇನ್ನು ಕೆಲವರು ದುಃಖ. ಒಟ್ಟಿನಲ್ಲಿ ಸುತ್ತುವ ಕಾರ್ಯ ಇಲ್ಲಿ ದೇಹದ ಜೊತೆಗೆ ಮುಗಿದಿರುತ್ತದೆ. ಮುಂದಿನ ಹಿಂದಿನ ಬದುಕಿನ ಯಾವ ಅಧ್ಯಾಯವೂ ನೆನಪಿನಲ್ಲಿ ಇರುವುದಿಲ್ಲ. 
  ಸಾಧನೆಯ ಹಿಂದೆ ಹೋದವನು, ಕಟುಕನೂ, ಬಡವನೂ , ಧನಿಕನೂ, ಮಹರ್ಷಿಯೂ,  ಮಾನವಂತನೂ, ಹೀನನೂ, ಮೂರ್ಖನೂ ಪಂಡಿತನೂ,ಸಾಧಿಸಿ ಗೆದ್ದವ, ಸೋತವ , ಸಾಧನೆ ಮಾಡದವ, ಕುಡಿದ ಮತ್ತಿನಲ್ಲಿ ತೇಲಾಡಿದವ, ಸೋತವ, ದೈವಾಂಶ ಶಂಭೂತ ಎಲ್ಲರದ್ದೂ ಇದೇ ಕಥೆ. 
       ಇಲ್ಲಿ ಇದ್ದಷ್ಟು ದಿನ ಬದುಕುವುದು ಕೇವಲ ಆರೋಗ್ಯ, ನೆಮ್ಮದಿ, ಪರಿಶುದ್ಧ ಪ್ರೀತಿಗಾಗಿ. ಇವಿಷ್ಟಕ್ಕೆ ಮನುಷ್ಯ ಅದೆಷ್ಟು ಕಷ್ಟ ಪಡುತ್ತಾನೆ, ಅದೆಷ್ಟು ಸಾಧನೆ, ರೋಗ, ದ್ವೇಷ, ಜಗಳ, ಕದನ, ಆಟ ಓಟ! ಅಬ್ಬಾ ಮನಸ್ಸುಗಳನ್ನು ಅರಿಯುವುದು ಮತ್ತು ಅದರ ನಡುವೆ ಬದುಕುವ ಕಾರ್ಯ ಏಳು ಸುತ್ತಿನ ಕೋಟೆಯ ಒಳಗೆ ಎಲ್ಲರ ಕಣ್ಣು ತಪ್ಪಿಸಿ ನುಗ್ಗುವಷ್ಟು ಕಷ್ಟ. ಬೆರೆತು ಬಾಳುವುದು ಸ್ವರ್ಗ ಸುಖ ಅಂತಾರೆ. ಆ ಮನಸ್ಸುಗಳು ಬೆರೆಯುವ ಕಾರ್ಯ ಅದೆಷ್ಟು ಕಷ್ಟ ಅಲ್ಲವೇ? ಮನದ ಮೂಲೆಯಲ್ಲಿ ಸೇಡು, ದ್ವೇಷ, ಮೋಸ, ರೋಷ, ಹಗೆತನದ ಒಂದು ಸಣ್ಣ ಬೂದಿ, ಹೊಗೆ , ಕಿಡಿ ಇದ್ದರೂ ಸಾಕು. ಅದು ಬದುಕನ್ನು ನಾಶ ಮಾಡಿ ಬಿಡುತ್ತದೆ. 
  ಕೆಲವೊಮ್ಮೆ ಮೇಲೇರುತ್ತಾ ಹೋದವ ತನಗೆ ಗೊತ್ತಿಲ್ಲದ ಹಾಗೆ ಏರುತ್ತಲೇ ಹೋಗುತ್ತಾನೆ. ಕಾಲದ ಮಹಿಮೆ. ತಾನು, ತನ್ನದು ಅಂತ ಏನೂ ಇಲ್ಲ, ನಾವು ಕೂಡಿ ಇಟ್ಟದ್ದು, ದುಡಿದದ್ದು, ಬೆಳೆಸಿದ್ದು ಇವು ಯಾವುವೂ ನಮ್ಮವಲ್ಲ. ನಮ್ಮದು ಅಂತ ಸ್ವಂತವಾಗಿ ಉಳಿಯುವುದು ಉಸಿರು ಒಂದೇ. ಆದರೆ ಆ ಉಸಿರು ಇರುವವರೆಗೂ ಒಂಟಿ ಹೋರಾಟ. 
  ಕೊನೆ ಕ್ಷಣಗಳು ಕ್ಷಣ ಕ್ಷಣಕ್ಕೂ ಹತ್ತಿರವಾಗುತ್ತಿವೆ. ಹೊರಡಲು ಸ್ವಲ್ಪ ಸ್ವಲ್ಪ ತಯಾರಿ ಮಾಡಿಕೊಳ್ಳ ಬೇಕಿದೆ. ಸ್ವಲ್ಪ ಕೋಪ, ಸ್ವಲ್ಪ ದ್ವೇಷ ಇಟ್ಟುಕೊಂಡರೂ ಸ್ವರ್ಗದ ಬಾಗಿಲು ತಟ್ಟಲು ಆಗದು. ಏಕೆಂದರೆ ಮೆಲೊಬ್ಬ ಇರುವನಲ್ಲ, ಎಲ್ಲವನ್ನೂ ನೋಡಲು, ಮತ್ತೆಲ್ಲವನ್ನೂ ಲೆಕ್ಕಾಚಾರ ಮಾಡಿ ಬರೆದು ಇಡಲು! 

ಗೆದ್ದರೂ ಸೋತರೂ ಜನ ತಲೆ ಬಾಗಲೆ ಬೇಕು. ಇಲ್ಲದೆ ಹೋದರೆ ಪದಕ ಹಾಕಲು ಆಗದು. ಸೋತವರು ಮತ್ತೆ ಮತ್ತೆ ಪ್ರಯತ್ನಿಸಿ ವಿಜಯಿಗಳಾಗಬೇಕು. ಪ್ರಯತ್ನದಲ್ಲಿ ಕೂಡಾ ಸೋತರೆ? ದೇವರನ್ನೇ ಕೇಳಬೇಕು ಅಲ್ಲವೇ? ಎಲ್ಲಾ ಆದ ಬಳಿಕ ಕೊನೆಗೆ ಶಿವನ ಪಾದವೇ ಗತಿ. ಇದೇ ಬದುಕು. ನೀ ಉತ್ತಮವಾಗಿ ಬದುಕು.ನೀವೇನಂತೀರಿ?
@ಹನಿಬಿಂದು@
18.11.2023

ಶನಿವಾರ, ನವೆಂಬರ್ 18, 2023

It's happy

It's happy

It's happy to be with you friends in my life
Happy to be with you all my students
Immense pleasure to be with our children
Much love to be with cutest relatives

A great fun to be with worth colleague
Happiest moments to be with  parents
Lucky to be with experienced grand parents
Most delicious hours to be with classmates

Like to be with old school friends
Nice to meet our teachers 
Heaven to be with whole joint family
Hearty pleasure to be with small kids

Dignity to have a meeting with dignitaries
Love to be with lovely beautiful ladies
Long live our soul with happiness
Love to live this small and cute life.
@HoneyBindu@
19.11.2023




ಶುಕ್ರವಾರ, ನವೆಂಬರ್ 17, 2023

ಖುಷಿಯ ಕ್ಷಣ

ಖುಷಿಯ ಕ್ಷಣ

ಅಂದು ಮೊಬೈಲ್ ತೋರಿತು ಕರೆಯಿದೆ
ನಿಮ್ಮ ಮಗಳ ಕವನ ಚೆನ್ನಾಗಿದೆ
ಕವನಗಳ ಪಟ್ಟಿಯಲ್ಲಿ ಮೇಲಿದೆ 
ಇಮ್ಮಡಿಯಾದ ಸಂತಸ ಬಂದಿದೆ

ಮತ್ತೆ ಕಾತರ ಕಳವಳ ಆತಂಕದೊಳಗೆ 
ಮತ್ತೊಂದಿಷ್ಟು ಖುಷಿ ಖುಷಿ ಒಳಗೊಳಗೆ
ಕೆಲಸದ ಒತ್ತಡ ಅತ್ತಿತ್ತ ಓಡಾಟದ ನಡುವಿಗೆ
ಎಲ್ಲವನ್ನೂ ಮರೆಯಿಸಿದ ದೀಪಾವಳಿ ಹಬ್ಬ

ಬಂಧುಗಳ ಒಟ್ಟು ಸೇರುವಿಕೆ ಅಲ್ಲಿ
ಅಡುಗೆ ಹರಟೆ ಮೆಲುಕು ಮಾತಲ್ಲಿ
ಜೊತೆಯೂಟ ನೆನಪು ಹಿರಿಯ ಮುಖಗಳಲ್ಲಿ
ಹಸಿರಿನ ಜೊತೆ ಬಾಲ್ಯದ ನೆನಪೂ ಜೊತೆಯಲ್ಲಿ

ಸಂಜೆ ಅಲ್ಲಿಂದ ಇಲ್ಲಿಗೆ ಓಡಾಟ
ಕೆಲಸದ ಒತ್ತಡದ ಗೋಳಾಟ
ಹಬ್ಬದ ರಜೆಯ ಮುಗಿದಾಟ
ಆಗಲೇ ಫಲಿತಾಂಶದ ಹುಡುಕಾಟ

ಬಂದೇ ಬಂತು ಐದು ಗಂಟೆಗೆ ಲಿಂಕು
ಮಕ್ಕಳ ಜಗಲಿ ಪತ್ರಿಕೆಯ ಕಡೆಯಿಂದ
ಹೆದರಿ ಹೆದರಿ ಜೋರಾದ ಎದೆ ಬಡಿತ
ತೆರೆಯುತ್ತಲೇ ಮೊದಲ ಪುಟದಲ್ಲಿ 
ಹಾ, ಇಲ್ಲ, ಬೇರೊಂದು ಸುಂದರ
ಪುಷ್ಪದಂತಹ ಮುಗುಳುನಗೆಯ ಹೊತ್ತ ಮಗು

ನೋಡಲು ಆನಂದ, ಮುಂದಿನ ಪುಟ
ಅದೋ ಅಲ್ಲಿತ್ತು, ಮೊದಲ ಸ್ಥಾನದ
ಮತ್ತೊಂದು ಹೆಸರು ಮಗಳದೆ ಆಗಿತ್ತು
ಅದೊಂದು ಸಡಗರ, ಹಬ್ಬ, ಆನಂದ

ಕಾತರ ಖುಷಿ ಕಣ್ಣೀರು ಒಂದಾದ ಕ್ಷಣ
ಮರೆಯಲಾರದ ಅಮೃತ ಘಳಿಗೆ
ಹರ್ಷ, ಕುಣಿಯುವಷ್ಟು, ಲೋಕದ ಸಿಹಿ
ಎಲ್ಲಾ ಒಮ್ಮೆಲೇ ತಿಂದಷ್ಟು ಹಿತ ಭಾವ

ಹೀಗೆಯೇ ಉಳಿಯಲಿ ಈ ಸಂತೋಷ
ಮಗನಾಗಲಿ ಮಗಳಾಗಲಿ ಉತ್ತಮ ಗುಣವಿರಲಿ
ಹೆಣ್ಣು ಮಗು ಎಂದವಗೆ ತಿಳಿಯಲಿ
ಹೆಣ್ಣು ಹೊನ್ನೆಂದು...
@ಹನಿಬಿಂದು@
15.11.2023


ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

      ನನ್ನೊಳಗಿನ ನಾನೆಂಬ ಗೆಳತಿಯ ಜೊತೆಗೆ ಒಂದಿಷ್ಟು ಹರಟೆ, ಮಾತು, ಸಿಂಹಾವಲೋಕನ, ಪರೀಕ್ಷೆ, ಸರಿ ತಪ್ಪುಗಳ ಲೆಕ್ಕಾಚಾರ, ಬೇಕಾದ್ದು ಬೇಡದರ ಚೂರು ಕ್ಲೀನಿಂಗ್.
ನಾನು ಸೌಮ್ಯ ಸ್ವರೂಪಿ. ಆದರೆ ಸ್ವಲ್ಪ ಹಠಮಾರಿ. ಯಾರಾದರೂ ನನ್ನನ್ನು ಡಿ ಗ್ರೇಡ್ ಮಾಡಿದರೆ ನಾ ಒಪ್ಪಿಕೊಳ್ಳಲಾರೆ. ಕಾರಣ ನನಗೆ ಒಳ್ಳೆ ಮನಸ್ಸಿದೆ, ಹೃದಯ ಚೆನ್ನಾಗಿದೆ. ಮನದ ಯಾವುದೇ ಮೂಲೆಯಲ್ಲಿ ದುರಾಸೆ, ಕಪಟ, ರೋಷ, ದ್ವೇಷಗಳು ಇಲ್ಲ. ಬಹಳ ಜನರಿಂದ ಆದ ನೋವಿದೆ. ಆ ನೋವಿಗೆ ನಾನು ದ್ವೇಷ ಸಾಧಿಸಲು ಹೋಗುತ್ತಿಲ್ಲ. ಬದಲಾಗಿ ಶಾಂತ, ನಿಶಬ್ದ, ಸೈಲೆಂಟ್ ಇವೇ ನನ್ನ ಅಸ್ತ್ರಗಳು.
  ಮಂಡೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವ ಸ್ವಭಾವ ನನ್ನದಲ್ಲ. ಎದುರಿನ ವ್ಯಕ್ತಿ ಹೇಗೆ ಇದ್ದಾನೆ, ಅವನ ಶಕ್ತಿಯ ಇತಿ ಮಿತಿಗಲೇನು ಎಂದು ಸದಾ ತಿಳಿಯುತ್ತೇನೆ. ಪರರ ಬಗ್ಗೆ ಅವರಿವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಫಿಲ್ಮ್ ಆಕ್ಟರ್ಸ್, ಸೀರಿಯಲ್ ಆಕ್ಟರ್ಸ್, ಕ್ರಿಕೆಟರ್ಸ್, ಡಾನ್ಸರ್ಸ್ ಇಂಥವರ ಖಾಸಗಿ ಜೀವನದ ಬಗ್ಗೆ ಮಾತನಾಡಿ ಅವರನ್ನು ಡಿ ಗ್ರೇಡ್ ಮಾಡುವ ಸ್ವಭಾವ ನನಗಿಲ್ಲ. ಏಕೆಂದರೆ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಯಾರು ಯಾವ ಕಾಲದಲ್ಲಿ ಯಾರೊಡನೆ ಬದುಕುತ್ತಾರೆ, ಎಲ್ಲಿ ಬದುಕುತ್ತಾರೆ, ಎಲ್ಲಿ ಸಾಯುತ್ತಾರೆ ಅಂತ ಡಿಸೈಡ್ ಮಾಡಿರುವುದು ವಿಧಿ. ನಾನಲ್ಲ ನೀವಲ್ಲ. ಪ್ರತಿ ಒಬ್ಬರ ಮನೆಯ ದೋಸೆಯು ತೂತಿರುವಾಗ ಇನ್ನು ಯಾರ ಮನೆಯ ದೋಸೆಯ ಬಗ್ಗೆ ಮಾತನಾಡಲು ಇನ್ನೇನು ಹೊಸತು ಉಳಿದಿದೆ ಅಲ್ಲವೇ?
   ಮಾನವತೆ ಇದೆ ನನ್ನಲ್ಲಿ. ಕಷ್ಟಕ್ಕೆ ಕರಗುತ್ತೇನೆ, ಇಲ್ಲದೆ ಇದ್ದರೂ ಸಹಾಯ ಮಾಡಲು ಹೋಗಿ ನಾನೇ ಸಿಕ್ಕಿ ಬೀಳುತ್ತೇನೆ. ಮತ್ತೆ ಆ ಬಲೆಯಲ್ಲಿ ಒದ್ದಾಡಿ ನೋವು ತಂದುಕೊಳ್ಳುತ್ತೇನೆ. ಪರರನ್ನು ಪಾಪ ಎಂದು ಸಹಾಯ ದೃಷ್ಟಿಯಿಂದ ನೋಡಿ, ಸಹಾಯ ಮಾಡಲು ಹೋದಾಗ ಅವರೇ ನನ್ನ ಗುಂಡಿಗೆ ನೂಕಿ ಹೋಗುತ್ತಾರೆ. ಕಷ್ಟ ಪಟ್ಟು ಎದ್ದು ಬರುತ್ತೇನೆ. ಸಡನ್ ಕೋಪದ ಕೈಗೆ ಬುದ್ಧಿ ಕೊಡುವ ಗುಣ ನನ್ನದು ಅಲ್ಲ. ಯೋಚಿದುವೆ.
  ಸ್ವಲ್ಪ ಉಡಾಫೆ ಸ್ವಭಾವ. ಮಾಡಬೇಕಾದ ಕೆಲಸವನ್ನು ಲಾಸ್ಟ್ ಡೇಟ್ ವರೆಗೆ ಪೆಂಡಿಂಗ್ ಇಟ್ಟು ಕೊನೆ ಕ್ಷಣದಲ್ಲಿ ಮಾಡಲು ಹೋಗಿ ಎಡವಟ್ ಮಾಡಿಕೊಳ್ಳೋದು ನನ್ನ ಕೆಲಸ. ಅದು ಪರೀಕ್ಷೆಯೇ ಇರಲಿ, ಜೀವನ ಪರೀಕ್ಷೆಯೇ ಇರಲಿ, ಬೇರೆ ಕೆಲಸವೇ ಇರಲಿ. 
ಮತ್ತೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಕೆಟ್ಟ ಯೋಚನೆ ಮಾಡುತ್ತಾರೆ ಅಂತ ನಾನು ಅಂದುಕೊಳ್ಳುವುದಿಲ್ಲ. ಕಾರಣ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚಿಸುವುದಿಲ್ಲ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸಲು ಏನೂ ಇಲ್ಲ, ನಾನು ಸೊಳ್ಳೆ,ಇರುವೆ,  ಜಿರಳೆ, ಜೇಡದ ಹೊರತು ಯಾವ  ಪ್ರಾಣಿ, ಪಕ್ಷಿ, ಕೀಟವನ್ನು ಕೂಡಾ ಸಾಯಿಸಿಲ್ಲ. ಮನುಷ್ಯರಿಗೆ ಅನ್ಯಾಯ ಮಾಡಲಿಲ್ಲ, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಲಿಲ್ಲ, ಪಾರ್ಶಿಯಾಲಿಟಿ ಅಂತೂ ಮಾಡಲೇ ಇಲ್ಲ. ಎಲ್ಲಾ ಮಕ್ಕಳಿಗೂ ತಿದ್ದಿ ಬುದ್ಧಿ ಹೇಳುತ್ತೇನೆ, ಕೇಳದೆ ಹಠ ಮಾಡಿದವನಿಗೆ ಸ್ವಲ್ಪ ಖಾರವಾಗಿಯೇ ಹೇಳುತ್ತೇನೆ. ಅದು ಅವನ ಒಳ್ಳೆಯದಕ್ಕೆ. ಎಲ್ಲರಿಗೂ ತುಂಬಾ ಪ್ರೀತಿ ಕೊಡುತ್ತೇನೆ ನನ್ನಲ್ಲಿ ಸಾಧ್ಯ ಆದಷ್ಟು. ನೋವು ಕೊಟ್ಟವರಿಗೂ ಕೆಟ್ಟದು ಬಯಸುವುದಿಲ್ಲ. ಬದಲಾಗಿ ದೇವರೇ ಅವರನ್ನು ನನ್ನ ಬದುಕಿನಿಂದ ದೂರ ಇರಿಸು ಎಂದು ಬೇಡುತ್ತೇನೆ.
  ದೇವರಲ್ಲಿ ನಾನು ಮನಸ್ಸಿಗೆ ಹಾಗೂ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇಷ್ಟನ್ನು ಬಿಟ್ಟು ಮತ್ತೆ ಕೇಳುವುದು ಸರ್ವೇ ಜನಾಃ ಸುಖಿನೋ ಭವಂತು ಇಷ್ಟೇ. ಎಲ್ಲರೂ ಚೆನ್ನಾಗಿರಲಿ, ಎಲ್ಲರನ್ನೂ ಚೆನ್ನಾಗಿ ಇಡಿ ಎಂದು. ಮಾನವನ ಕ್ರೂರತೆ ತೊಲಗಲಿ ಎಂದು ಬೇಡುತ್ತೇನೆ. ರಾಕ್ಷಸ ಪ್ರವೃತ್ತಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಸಣ್ಣ ಮಕ್ಕಳ ಮೇಲೂ ಅತ್ಯಾಚಾರ ಇವುಗಳೆಲ್ಲ ಮನ ನೋಯಿಸುವ ಕಾರ್ಯಗಳು ಅಲ್ಲವೇ? ವಿಷ ಉಣಿಸಿ ಮಾನವ ಹಾಗೂ ಪ್ರಾಣಿ ಪಕ್ಷಿ ಮೀನುಗಳನ್ನು ಸಾಯಿಸುವುದು, ತಲ್ವಾರ್, ಚಾಕು ಚೂರಿ ಹಾಕಿ ಸಾಯಿಸುವುದು ಇವೆಲ್ಲ ಕರುಳು ಹಿಂಡುವ ನೋವುಗಳು. 
  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದರೂ ಪರ ಧರ್ಮದವರನ್ನು ಹೀಗಳೆಯುವುದು ನನಗೆ ಆಗದ ವಿಷಯ. ಬೈಬಲ್, ಕುರಾನ್, ಗೀತೆ ಓದಿರುವ ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಲ್ಲರ ಜೊತೆಗೂ ಗೆಳೆತನವೂ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರನ್ನು ಕೂಲಂಕುಷವಾಗಿ ಬರಹಗಾರ್ತಿಯ ಕಣ್ಣಲ್ಲಿ ನೋಡಿದಾಗ ನನ್ನ ಅರಿವಿಗೆ ಬಂದದ್ದು ಎಲ್ಲಾ ಜಾತಿ ಧರ್ಮಗಳಲ್ಲಿ ಜನರು ಒಳ್ಳೆಯವರೂ ಇದ್ದಾರೆ, ಕೆಟ್ಟವರು ಕೂಡಾ ಇದ್ದಾರೆ. ಒಳ್ಳೆಯ ಜನರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕೆ ಉದಾಹರಣೆ ಪುನೀತ್ ರಾಜಕುಮಾರ್, ಡಾ. ಎ.ಪೀ.ಜೆ. ಅಬ್ದುಲ್ ಕಲಾಂ, ಮದರ್ ತೆರೆಸಾ, ರಾಜ್ ಕುಮಾರ್, ಕಲ್ಪನಾ ಚಾವ್ಲಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಸಾಲುಮರದ ತಿಮ್ಮಕ್ಕ, ಅಬ್ರಹಾಂ ಲಿಂಕನ್. ಜನರ ಎದೆಯಲ್ಲಿ ಇನ್ನೂ ಒಳ್ಳೆಯತನಕ್ಕೆ ಪ್ರೀತಿ, ಜಾಗ ಇದ್ದೇ ಇದೆ ಅಲ್ಲವೇ?
       ಮನುಷ್ಯರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟವರೆ..ಕಾರಣ ಇತರರು ಬಯಸದ ಯಾವುದಾದರೂ ಕೆಟ್ಟ ಗುಣ ನಮ್ಮೊಳಗೆ ಇರಬಹುದು.  ಅಥವಾ ನನಗೆ ಇಷ್ಟ ಆದ ನನ್ನ ಗುಣ ಇತರರಿಗೆ ಇಷ್ಟ ಆಗದೆ ಇರಬಹುದು. ಎಲ್ಲರೂ ಐಶ್ವರ್ಯ ರೈ ಅವರ ಸೌಂದರ್ಯವನ್ನು ಹೊಗಳಿದರೆ "ಅವಳಿಗಿಂತ ಸುಂದರಿಯರು ಬೇರೆ ಇಲ್ವಾ?" ಎನ್ನುವವರೂ ಇರಬಹುದು. ಅದು ಅವರವರ ಭಾವಕ್ಕೆ ನಿಳುಕಿದ್ದು. ನಮ್ಮ ನಮ್ಮ ಜ್ಞಾನದ ಎತ್ತರಕ್ಕೆ ನಾವು ಮಾತನಾಡಬಲ್ಲೆವು ಅಲ್ಲವೇ! ವಿಜ್ಞಾನಿಗಳಿಗೆ ತಿಳಿದ ಮಾಹಿತಿ ಬಹುಶಃ ಕನ್ನಡ ಪ್ರಾಧ್ಯಾಪಕರಿಗೆ ಗೊತ್ತಿಲ್ಲ. ಕನ್ನಡ ಪಂಡಿತರಿಗೆ ತಿಳಿದ ಭಾಷಾಜ್ಞಾನ ಡಾಕ್ಟರಿಗೆ ಗೊತ್ತಿರಲಿಕ್ಕಿಲ್ಲ, ವ್ಯಕ್ತಿತ್ವ ಬದಲಾವಣೆ ಇದೆ. ಹಾಗಂತ ಯಾರೂ ಮೇಧಾವಿಗಳು ಅಲ್ಲ ಎಂದಲ್ಲ, ಯಾರೂ ದಡ್ಡರು ಕೂಡ ಅಲ್ಲ, ಅವರವರ ಜ್ಞಾನ ಅವರಿಗೆ ಇದೆ. ಯಾವುದೋ ಒಂದು ವಿಷಯ ಎಲ್ಲರಿಗೂ ತಿಳಿದಿರಬೇಕು ಎಂದೇನೂ ಇಲ್ಲ ಅಲ್ವಾ? 
ಇನ್ನು ಬಟ್ಟೆ ಬರೆಗಳ ವಿಷಯಕ್ಕೆ ಬಂದಾಗ ಕೆಲವೊಂದು ಮಾಡೆಲ್ ಗಳು, ಸಿನೆಮಾ ನಟರು, ನಟಿಯರು, ಟಿವಿ ಧಾರಾವಾಹಿ, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಧರಿಸುವ ಅರ್ಧಂಬರ್ಧ ಮಾನವನ್ನೂ ಮುಚ್ಚಲು ಹಿಂದುಳಿದ ಬಟ್ಟೆಗಳು ನನಗೆ ಇಷ್ಟ ಆಗದು. ನಾನು ಅವುಗಳನ್ನು ಹಾಕುವುದೂ ಇಲ್ಲ, ಇಷ್ಟ ಪಡುವುದು ಕೂಡ ಇಲ್ಲ. ನಾವು ಹಿರಿಯರು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಮಾದರಿ ಆಗಿರಬೇಕು, ಹಿರಿಯರೇ ಬಿಕಿನಿಯಲ್ಲಿ ಕುಣಿದರೆ ಕಿರಿಯರು ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ತಪ್ಪಿಲ್ಲ. ಅಲ್ಲಿಗೆ ನಮ್ಮ ಸಂಸ್ಕೃತಿ ನಾಶ ಮಾಡುವುದು ನಾವೇ ಅಲ್ಲವೇ? ಅದಕ್ಕೆ ನನ್ನ ಸಹಮತ ಇಲ್ಲ. 
   ಬದುಕು ನಾಲ್ಕು ದಿನ, ಪಾಪ ಪುಣ್ಯಗಳ ನಂಬುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ಇದರ ಬಗ್ಗೆ ಹೇಳಿವೆ. ಸ್ವರ್ಗ, ನರಕದ ಕಲ್ಪನೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇದೆ. ಹಾಗಾಗಿ ಒಳ್ಳೆಯತನಕ್ಕೆ ನನ್ನ ಮತ. 
  ಪರಿಸರ ನನ್ನ ಲವರ್. ತುಂಬಾ ಪ್ರೀತಿಸುವೆ ಹಸಿರನ್ನು. ನನ್ನ ಕಾರ್ಯಗಳಲ್ಲಿ ಇಪ್ಪತ್ತು ವರ್ಷಗಳ ಮೊದಲೇ ಪ್ಲಾಸ್ಟಿಕ್ ಭೂಮಿಗೆ ಬಿಸಾಡಲಾರೆ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ವ್ಯಕ್ತಿ ನಾನು. ಯಾವುದೇ ಚಾಕಲೇಟು ಕವರ್, ಬಾಟಲಿಯನ್ನು ಮನೆ ತನಕ ತಂದು ಮತ್ತೆ ಕಸದ ತೊಟ್ಟಿಗೆ ಹಾಕುವ ಪರಿಪಾಠ ಇದೆ. ಅದಕ್ಕೆ ನನ್ನ ಮೇಲೆ ನನಗೆ ಹೆಮ್ಮೆ.
ನೋವಿದೆ, ನಲಿವಿದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಖುಷಿ ಇದೆ. ಸಾಧನೆಯ ಗೆಲುವಿದೆ , ಇನ್ನೂ ಸಾಧಿಸ ಬೇಕೆಂಬ ಛಲವಿದೆ, ಸಾಧಿಸಲು ಬಹಳ ಇದೆ ಕಲಿತದ್ದು ಏನೂ ಸಾಲದು ಎಂಬ ತಿಳಿವಿದೆ, ಕೆಲವೊಂದು ವಿಷಯದಲ್ಲಿ ಅಸಹಾಯಕಳಾಗಿ ಬಿಟ್ಟೆ ಎಂಬ ಕಣ್ಣೀರಿದೆ, ಬದುಕು ನಾವು ಅಂದುಕೊಂಡ ಹಾಗೆ ಇಲ್ಲ, ವಿಧಿ ಲಿಖಿತದಂತೆ ಇದೆ ಎಂಬ ಅರಿವಿದೆ, ಕಷ್ಟ ಪಟ್ಟರೆ ಸುಖ ಖಂಡಿತ ಎಂಬ ಜ್ಞಾನವಿದೆ, ಬದುಕಿನ ದಾರಿಯ ಎಡರು ತೊಡರುಗಳ ಬಗ್ಗೆ, ನೋವು ನಲಿವಿನ ಬಗ್ಗೆ ತಿಳಿದಿದೆ. ಪರರಿಗೆ ನೋವು ಕೊಡದೆ ಬದುಕಿದ ಸಮಾಧಾನವೂ ಇದೆ. ಮುಂದೆ ಸಾಗುವಾಗ ಇರುವ ತೊಂದರೆಗಳ ಬಗ್ಗೆ ಭಯವಿದೆ. ಪ್ರತಿ ಹೆಜ್ಜೆಯ ಮೇಲೂ ಗಮನ ಇದೆ. 
   ನನ್ನ ಗುಣವನ್ನು ನಾ ಬಹಳ ಪ್ರೀತಿಸುವೆ, ಸೋಮಾರಿತನ ದ್ವೇಷಿಸುವ ನಾನು ಪರರಿಗೆ ನೋವು ಕೊಡಲಾರೆ. ಸರ್ವರಿಗೂ ನನ್ನಲ್ಲಿ ಪ್ರೀತಿ, ಸ್ನೇಹವಿದೆ. ಮೋಸವಿಲ್ಲ. ಸಹಾಯ ಬಯಸುವವರು ಬಹಳ ಜನ , ಸಹಾಯ ಮಾಡಲಾಗದ ಅಶಕ್ತತೆಗೆ ನೋವಿದೆ. ನನ್ನತನವಿದೆ. ಪರರಿಗೆ ಸಹಾಯ ಮಾಡಿದ ಹೆಮ್ಮೆ ಇದೆ. ಬೇಡದ್ದನ್ನು ತಿರಸ್ಕರಿಸಿದ ತೃಪ್ತಿ ಇದೆ. ಒಂಥರಾ ಡೇರಿಂಗ್ ಇದೆ, ಅಳುಕುತನವೂ ಇದೆ. ಒಟ್ಟಿನಲ್ಲಿ ಮಾನವತೆ ಇರುವ ಮಾನವ ಗುಣವಿದೆ. 
ಎಲ್ಲವೂ ಸರಿ, ಎಲ್ಲವೂ ಸತ್ಯ, ಹೀಗಿದ್ದರೆ ಮನುಷ್ಯ ದೇವರಾಗಿ ಬಿಡುತ್ತಾನೆ. ಮನುಷ್ಯ ಹಾಗಿದ್ದರೆ ದೇವರಿಗೆ ರೆಸ್ಪೆಕ್ಟ್, ಮೌಲ್ಯ, ಬೆಲೆ ಇಲ್ಲ. ಆದ ಕಾರಣ ದೇವರು ಮನುಷ್ಯನನ್ನು ದೇವರಾಗಲು ಬಿಡಲಾರ ಅಲ್ಲವೇ? ತನ್ನ ಸೀಟು ಹೋದರೆ? ಭೂ ಲೋಕದಲ್ಲಿ ಎಲ್ಲಾ ಕುರ್ಚಿಗಾಗಿಯೇ ಕಾದಾಟ, ಜಗಳ, ಓಟು, ಮೃತ್ಯು ಎಲ್ಲಾ ನಡೆಯುತ್ತದೆ. ಹೆಸರು, ಖ್ಯಾತಿಗೆ ಜನ ಬೇಗ ಬಲಿಯಾಗುತ್ತಾರೆ. 
ಎಲ್ಲರ ಬದುಕಿನ ತಿರುಳು ಇಷ್ಟೇ. ಬರುವಾಗ ತರಲಿಲ್ಲ, ಹೋಗುವಾಗ ಕೊಂಡು ಹೋಗುವುದಿಲ್ಲ, ಬರಿಗೈಲಿ ಬಂದು ಹಾಗೆಯೇ ಹೋಗುವ ಬದುಕಿನಲ್ಲಿ ಆಸೆ, ಆಮಿಷ, ಅಧಿಕಾರ, ಮದ, ಮಾತ್ಸರ್ಯ, ಹೊಟ್ಟೆಕಿಚ್ಚು, ನಂಜು. 
ಹತ್ತಿರವಿದ್ದರೂ  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ..
ಸದಾ ನಾ ನೇನೆಸುವ ಕವಿ ಸಾಲುಗಳು. ನೀವೇನಂತೀರಿ?
@ಹನಿಬಿಂದು@
16.11.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -209

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -209

    ಬಾಳಿನಲ್ಲಿ ಮಾನವನಾದರೆ ಗಂಡಾಗಿ ಹುಟ್ಟಬೇಕು. ರಾತ್ರಿ ಎಷ್ಟು ಹೊತ್ತಿನ ವರೆಗೂ ಎಲ್ಲೂ,ಯಾರ ಜೊತೆಯೂ ಕೇವಲ ಒಂದು ಚಡ್ಡಿ ತೊಟ್ಟರೂ ಯಾರೂ ಏನೂ ಅನ್ನಲಾರರು. ಜೊತೆಗೆ ಅವರ ಮಾನ ಮರ್ಯಾದೆ ಹೋಗದು. ಮನೆಯ ಹಿರಿಯರ ಕಡಿವಾಣ ಇರದು. ಹೆಣ್ಣು ಮಕ್ಕಳಿಗೆ ಇದ್ದ ಹಾಗೆ ಅವರಿಗೆ ಅಲ್ಲಿ ಹೋಗಬೇಡ, ಇಲ್ಲಿ ಬರಬೇಡ, ಅವನ ಬಳಿ ಮಾತನಾಡಬೇಡ, ಯಾರದೇ ಬೈಕಿನಲ್ಲಿ , ಕಾರಿನಲ್ಲಿ ಓಡಾಡಬೇಡ, ಅದೂ ಇದೂ ತಿನ್ನಬೇಡ ಹೀಗೆ ಕಂಡೀಷನ್ ಇಲ್ಲ. ಆದರೆ ಅದೇ ಬದುಕಾಗಬಾರದು. ಪರರನ್ನು ಅವಂಬಿಸಿಯೇ ಬದುಕು ಸಾಗಿದರೆ ತನ್ನತನ ಇರದು. ತಾನು ಹುಟ್ಟಿದ ಬಳಿಕ ಮರದಂತೆ ನಾಲ್ಕು ಜನರಿಗೆ ನೆರಳಾದರೂ ಕೊಡಬೇಕು ಅಲ್ಲವೇ! ಹೂ ಹಣ್ಣು ಕೊಡಲು ಸಾಧ್ಯ ಆಗದೇ ಇದ್ದರೂ ಸಹ ಆದೀತು ಅಲ್ಲವೇ? ಪರೋಪಕಾರಿ ಆಗಿರ ಬೇಕೇ ಹೊರತು ಪರ ಉಪದ್ರವಿ ಆಗಬಾರದು. 

    ಹಿಂದಿನ ಕಾಲದಲ್ಲಿ ಪ್ರತಿ ಸಂಜೆ ಸ್ನಾನ ಮಾಡಿ ದೀಪ ಬೆಳಗಿಸಿ ಭಜನೆ ಹಾಡಿದ ಬಳಿಕ ಒಳ್ಳೆಯ ಮನಸ್ಸು, ನೆಮ್ಮದಿ, ಧನಾತ್ಮಕ ಶಕ್ತಿ, ಉದಾತ್ತ ಆಲೋಚನೆಗಳು ಬರುತ್ತಿದ್ದವು. ಇಂದಿನ ದಿನಗಳಲ್ಲಿ ಟಿವಿ ಸೀರಿಯಲ್ ಗಳ ನಾಟಕ ಹೆಚ್ಚಿನ ಮಹಿಳೆಯರ ಮನಸ್ಸನ್ನು ಹಾಳು ಮಾಡಿ ಮನಸ್ಸಿನ ಮಾಲಿನ್ಯಕ್ಕೆ ಎಡೆ ಮಾಡಿ ಸಂಸಾರ ಹಾಳು ಮಾಡಿದೆ ಮತ್ತು ಮಾಡುತ್ತಿದೆ ಎಂದರೆ ತಪ್ಪಾಗದು. 
  ನಿನ್ನೆ ನವೆಂಬರ್ ಹನ್ನೊಂದು, ಕರ್ನಾಟಕದ ವೀರ ಮಹಿಳೆ ಒನಕೆ  ಓಬವ್ವನ ಜನ್ಮದಿನ. ಕರ್ನಾಟಕದ ಮಹಿಳೆಯರು ಅನಾದಿ ಕಾಲದಿಂದಲೂ ಶೂರ, ದಿಟ್ಟ ವೀರರು ಎಂಬುದಕ್ಕೆ ಸಾಕ್ಷಿ ಅವಳು. ಆ ದಿಟ್ಟತನವನ್ನು ಇಂದಿನ ಮಹಿಳೆ ತೋರದೆ ಇದ್ದರೆ ಈಗಿನ ಹಾಗೆಯೇ ದೌರ್ಜನ್ಯ, ಕೊಲೆ , ಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಹೆಣ್ಣನ್ನು ಯಾವ ರೀತಿಯಿಂದಲೂ ಆಗಬಹುದು, ದೈಹಿಕವಾಗಿ ಅನುಭವಿಸಬೇಕು ಎಂಬ ವಾಂಛೆಯು ಅವಳನ್ನು ಸಾಯಿಸಿ ಶವದ ಜೊತೆ ಚಕ್ಕಂದವಾಡುವವರೆಗೂ ಈ ತಾಂತ್ರಿಕ ಯುಗದಲ್ಲಿ ತಲುಪಿದೆ ಎಂದರೆ ಜನರ ಮನಸ್ಸು ಎಷ್ಟು ಮಲಿನಗೊಂಡಿರಬೇಕು! ಯೋಚಿಸಬೇಕಾದ ಸಂಗತಿ. ಮತ್ತಿನ ಮತ್ತಲ್ಲಿ ತಾಯಿ ಯಾರು ಅಕ್ಕ ತಂಗಿಯರು ಯಾರು ಮಗಳು ಯಾರು ಎಂದು ಆಲೋಚಿಸದೆ ತನ್ನ ಆಸೆಯ ಕೈಗೆ ಮನಸ್ಸು ಕೊಟ್ಟ ಭೂಪನನ್ನು ಕೊಂದರೂ ಪಾಪ ಬಾರದು. ಎಲ್ಲರೂ ಕೆಟ್ಟವರೆ ಎಂದಲ್ಲ. ಆದರೆ ಕೆಟ್ಟ ಹುಳಗಳು ಈಗಲೂ ಇವೆ ಎನ್ನುವುದು ಸತ್ಯ. ಅದು ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ. ಕಾಟ ಕೊಡುವ ಅತ್ತೆ, ನಾದಿನಿ, ಓರಗಿತ್ತಿ, ಸವತಿ ಎಲ್ಲರೂ ಹೆಂಗಸರೇ. ಹೆಣ್ಣನ್ನು ಕೀಳಾಗಿ ನೋಡುವ ಪತಿ, ಮಾವ, ಭಾವಂದಿರು, ಉಳಿದ ಅಪರಿಚಿತ ಗಂಡಸರು ಮೇಲ್ ಎಂದು ಕರೆಸಿಕೊಳ್ಳಲು ಅನ್ ಲಾಯಕ್ ಅಲ್ಲವೇ?
    ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ. ಈಗ ಬೊಬ್ಬಿಟ್ಟರೆ ಎಂಬ ಯಾವ ಪ್ರಯೋಜನವೂ ಇಲ್ಲ. ಇದೀಗ ಹಬ್ಬ ಅದರಲ್ಲೂ ಎಲ್ಲರೂ ಆಚರಿಸುವ ದೀಪಾವಳಿ ಹಬ್ಬ ದಿವಾಳಿಯಾಗಿ ಬಂದಿದೆ. ಕಾರಣ ಈ ವರ್ಷ ಎಲ್ಲಾ ಪಟಾಕಿಗಳನ್ನು ಹಚ್ಚುವ ಹಾಗಿಲ್ಲ. ಕೇವಲ ಗ್ರೀನ್ ಸೀಲ್ ಇರುವ ಪರಿಸರ ಸ್ನೇಹಿ ಪಟಾಕಿಗಳನ್ನು ರಾತ್ರಿ ಎಂಟರಿಂದ ಹತ್ತರ ವರೆಗೆ ಮಾತ್ರ ಹಚ್ಚಿ ಖುಷಿ ಪಡಿ ಎಂದು ಮೇಲಿನಿಂದ ಆದೇಶ ಬಂದಿದೆ. ಮಣ್ಣಿನ ಹಣತೆಯಿಂದ ದೀಪ ಹಚ್ಚೋಣ ಬಿಡಿ. ಕುಂಬಾರರಿಗೆ ಸಹಾಯ ಆಗುತ್ತದೆ. ಹಾಗೆಯೇ ಪಟಾಕಿ, ಸ್ವಲ್ಪ ಶಾಪಿಂಗ್ ಕಟ್ ಮಾಡಿ ಸ್ವಲ್ಪ ಪರಿಸರ ಶುದ್ಧ, ಹಾಗೆಯೇ ಬಡವರಿಗೆ ಒಂದಿಷ್ಟು ದಾನ ಮಾಡಿ ಮನಸ್ಸಿನ ಮಾಲಿನ್ಯವನ್ನು ಕೂಡ ಸರಿಪಡಿಸಿಕೊಳ್ಳೋಣ ಅಲ್ಲವೇ? ಯಾರಿಗೆ ಗೊತ್ತು ಯಾವಾಗ ಪಟ್ಟ ಬಿದ್ದು ಸಾಯುತ್ತೇವೆ ಅಂತ? ಸಾಯುವ ಕೊನೆ ಕ್ಷಣದವರೆಗೂ ಕೈಲಾದ ಸಹಾಯ ಮಾಡೋಣ. ಇತರರ ಮನಸ್ಸು ನೋಯೊಸದೆ ಇರೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.11.2023

ಸೋಮವಾರ, ನವೆಂಬರ್ 6, 2023

Thought

Thought

Think thik and think
After let it drop in ink!
Thought may be new
Unique and never told..

Manage goodness in thought
Mapping mind in high esteem
Migration of heart to upper level
So that thought should be
 A marvelous quote!

Thinking should provoke
Minds and hearts
Knowledge and feelings
Creativity and ideas 
Motivations should sprout
By spontaneous flow of thought..
@HoneyBindu@
07.11.2023

ಶುಕ್ರವಾರ, ನವೆಂಬರ್ 3, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -207

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -207          

     ನಮ್ಮ ರಾಜ್ಯ ಕರ್ನಾಟಕದ ನಾಡಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಭುವನೇಶ್ವರಿ ದೇವಿಗೆ ಗೌರವದ ನಮನ ಹಾಗೂ ನಮ್ಮ ದೇಸಿ ಸಂಸ್ಕೃತಿಯ ಅನಾವರಣ, ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ, ವಿಧ ವಿಧ ಕರ್ನಾಟಕ ಹಾಗೂ ದೇಶ ವಿದೇಶಗಳ ಕಲಾಕಾರರು, ಬರಹಗಾರರು, ಹಾಡುಗಾರರು, ಕವಿ ಬಂಧುಗಳಿಗೆ ಅವರವರ ಪ್ರತಿಭೆಗಳಿಗೆ ಅನಾವರಣ ಮಾಡಿಕೊಡಲು ಮೈಸೂರು ವೇದಿಕೆಯಾಗಿದೆ. ಹಾಗೆಯೇ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಹೊಸ ಹೊಸ ಪ್ರತಿಭೆಗಳಿಗೆ ಕೂಡಾ ಅಲ್ಲಿ ಅವಕಾಶ ಸಿಗುತ್ತಿದೆ. ಇಷ್ಟು ಮಾತ್ರ ಅಲ್ಲ, ನಮ್ಮ ಕರ್ನಾಟಕದ ಹಲವು ವ್ಯಾಪಾರಿಗಳಿಗೂ ತಮ್ಮ ವ್ಯಾಪಾರಕ್ಕೆ ಇಲ್ಲಿ ಎಕ್ಸಿಬಿಷನ್ ನಲ್ಲಿ ಅವಕಾಶ ಇದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕಲೆಯಲ್ಪಡುವ ಮೈಸೂರು ಮಹಾರಾಣಿಯ ಹಾಗೆ ಝಗಮಗಿಸುತ್ತಿದೆ. ಎತ್ತ ನೋಡಿದರೂ ದೀಪದ ಸಾಲುಗಳು. ಅಂದವಾದ ಅರಮನೆ. ವಿಶ್ವ ವಿಖ್ಯಾತ ಜಂಬೂ ಸವಾರಿ. ಬನ್ನಿ ಪೂಜೆ. ಆನೆ ಕುದುರೆಗಳ ಸಾಲು. ತಾಲೀಮು. ಸೈಕಲ್, ಬೈಕುಗಳ ಜೊತೆ ಆಟ. ಎಲ್ಲವೂ ಚಂದವೇ. ಕುಸ್ತಿ, ಕತ್ತಿವರಸೆ ಇಂತಹ ದೇಸಿ ಕ್ರೀಡೆಗಳಿಗೆ ಅವಕಾಶ. ರಾಜರ ಆಳ್ವಿಕೆಯ ಒಂದು ಅಂಶವನ್ನು ನಾವಿಲ್ಲಿ ಮತ್ತೆ ಕಾಣಲು ಸಾಧ್ಯ ಅಲ್ಲವೇ?     ಇದು ರಾಜ್ಯದ ಸಂಭ್ರಮ ಆದರೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ, ರಾಜ್ಯದ ರಾಜಧಾನಿ ಹಾಗೂ ಹಲವು ತಾಲೂಕು ಕೇಂದ್ರಗಳಲ್ಲೂ , ಹಲವು ದೇವಿ ದೇವಾಲಯಗಳಲ್ಲೂ , ಊರಿನಲ್ಲೂ, ಹಲವಾರು ಮನೆಮನೆಗಳಲ್ಲಿ ದಸರಾ ಗೊಂಬೆ ಇಟ್ಟು  ಪೂಜಿಸಿ ತಮ್ಮದೇ ಆದ ಶೈಲಿಯಲ್ಲಿ  ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.ದೇವಾಲಯಗಳಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲೂ ದೇವಿಯ ವಿವಿಧ ರೂಪಗಳಾದ  ಪ್ರಥಮ ದಿನ ಶೈಲಪುತ್ರಿ ,ದ್ವಿತೀಯ ದಿನ ಬ್ರಹ್ಮಚಾರಿಣಿ ,  ತೃತೀಯ ದಿನ ಚಂದ್ರಘಂಟಾ , ಚತುರ್ಥಿ ದಿನ ಕೂಷ್ಮಾಂಡ  ಪಂಚಮ ದಿನ ಸ್ಕಂದಮಾತಾ . ಷಷ್ಠಿ ದಿನ ಕಾತ್ಯಾಯಿನಿ, ಸಪ್ತಮಿ ದಿನ ಕಾಳರಾತ್ರಿ , ಅಷ್ಟಮಿ ದಿನ  ಮಹಾಗೌರಿ ಹಾಗೂ ನವಮಿ ದಿನ ಸಿದ್ಧಿದಾತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ. ಎಲ್ಲಾ ದೇವಿಯ ರೂಪಕ್ಕೂ ಪ್ರತ್ಯೇಕ ಕಥೆಗಳಿವೆ. ಆಯಾ ರೂಪದಲ್ಲೇ ದೇವಿಯನ್ನು ಏಕೆ ಪೂಜಿಸಬೇಕು ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ತದ ನಂತರ ಹತ್ತನೆಯ ದಿನ ಉತ್ತಮ ದಿನ. ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ವಿಜಯ ದಶಮಿಯಷ್ಟು ಒಳ್ಳೆಯ ದಿನ ಬೇರಿಲ್ಲ. ತಮ್ಮ ತಮ್ಮ ಆಯುಧಗಳ ಪೂಜೆ, ಯಾವುದೇ ಶುಭ ಕಾರ್ಯದ ಆರಂಭ, ಬನ್ನಿ ಪೂಜೆ ಇವೆಲ್ಲ ಹತ್ತನೆ ದಿನದ ದಶಮಿಯಂದು. ಗೊಂಬೆಗಳ ವಿಸರ್ಜನೆಯ ಕಾರ್ಯವೂ ಅಂದೇ ನಡೆಯುತ್ತದೆ.   ನವರಾತ್ರಿಗೆ ನವರಂಗ್ ಅಥವಾ ನವ ವಿಧವಾದ ಬಣ್ಣಗಳು ದೇವಿಯ ಶೃಂಗಾರಕ್ಕೆ ಮೀಸಲು. ಅಂತೆಯೇ ನಮ್ಮ ಮಹಿಳೆಯರು ಕೂಡಾ ಅದೇ ಬಣ್ಣ ಉಟ್ಟು ಖುಷಿ ಪಡುತ್ತಾರೆ. ಮೊದಲನೇ ದಿನ ಬಿಳಿ, ಎರಡನೇ ದಿನ ಕೆಂಪು, ಮೂರನೇ ದಿನ ನೀಲಿ, ನಾಲ್ಕನೇ ದಿನ ಹಳದಿ, ಐದನೇ ದಿನ ಹಸಿರು, ಆರನೇ ದಿನ ಊದ ಬಣ್ಣ ಅಥವಾ ಸಿಮೆಂಟ್ ಬಣ್ಣ, ಏಳನೇ ದಿನ ಕೇಸರಿ, ಎಂಟನೇ ದಿನ ನವಿಲ ಹಸಿರು ಮತ್ತು ಒಂಭತ್ತನೇ ದಿನ ಗುಲಾಬಿ ಬಣ್ಣಗಳು ದೇವಿಯ ಪೂಜಾ ಅಲಂಕಾರಕ್ಕೆ ಮೀಸಲು. ಇದೇ ಬಣ್ಣ ಎಂದು ಗುರುತಿಸಿದವರು ನಾವುಗಳೇ. ಒಟ್ಟಿನಲ್ಲಿ ದಸರೆಯ ಸಮಯದಲ್ಲಿ ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವರ್ಣಮಯವಾಗಿ ಆಚರಣೆ ನಡೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ , ಗುಜರಾತಿನಲ್ಲಿ ಗಾರ್ಭಾ ಹೀಗೇ ವಿವಿಧ ರಾಜ್ಯಗಳಲ್ಲಿ ಹೆಸರುಗಳಲ್ಲಿ ಅದು ನಡೆಯುತ್ತದೆ. ಒಟ್ಟಿನಲ್ಲಿ ಪೂಜೆ, ಅಲಂಕಾರದ ಮೂಲಕ ಶಕ್ತಿ ಸೇವೆ ಹಾಗೂ ಸಂಸ್ಕೃತಿಯ ಅನಾವರಣ ಇಲ್ಲಿ ನಡೆಯುತ್ತದೆ.     ಭಾರತ ಕಲೆ ಸಂಸ್ಕೃತಿಯ ತವರೂರು. ಪ್ರತಿ ನಾಲ್ಕು ಕಿಲೋ ಮೀಟರ್ ಗೆ ಬದಲಾಗುವ ಭಾಷಾ ಶೈಲಿ, ಆಚರಣೆಗಳು, ಆಹಾರ ಪದ್ಧತಿ, ವಿವಿಧತೆಯನ್ನು ತಂದಿವೆ, ವಿವಿಧ ಪೂಜಾ ವಿಧಾನ ಭಕ್ತಿಯನ್ನು ಮೆರೆಸಿವೆ.      ಶ್ರೀಮತಿ ವಾಸಂತಿ ಅಂಬಲಪಾಡಿ ಅವರ ಒಂದು ಅವಾಬಿಯ ತುಣುಕನ್ನು ಇಲ್ಲಿ ಹೇಳಬೇಕೆಂದು ಅನ್ನಿಸುತ್ತಿದೆ. ಅದರ ಭಾವಾರ್ಥ ಹೀಗಿದೆ. ಹಿಂದಿನ ಕಾಲದಲ್ಲಿ ದೇವಿಯ ಪಾತ್ರ ಮಾಡಬೇಕೆಂದಿದ್ದರೆ ವ್ರತ, ಪೂಜೆ, ಉಪವಾಸ ಮಾಡಬೇಕಿತ್ತು, ಆದರೆ ಇಂದು ಮೇಕಪ್ ಮ್ಯಾನ್ ಒಬ್ಬ ಇದ್ದರೆ ಸಾಕು. ಕಾಲ ಬದಲಾಗಿದೆ, ಪಾಶ್ಚಾತ್ಯರು ಕಾಲಿಟ್ಟ ಬಳಿಕ ಭಾರತದಲ್ಲಿ ಇಲ್ಲಿನ ಭಕ್ತಿ, ನಂಬಿಕೆ ಕಡಿಮೆಯಾಗಿ ಹೊರದೇಶದ ಫ್ಯಾನ್ಸಿ ಬದುಕು ಹೆಚ್ಚಿದೆ. ಅದರ ಜೊತೆ ಇಲ್ಲಿನ ಸಾಂಪ್ರದಾಯಿಕ ಉಡುಗೆ, ತೊಡುಗೆ, ಪದ್ದತಿ, ಆಚಾರ, ವಿಚಾರಗಳ ಮೇಲೂ ಬಲವಾದ ಅಡ್ಡ ಪರಿಣಾಮ ಬೀರಿ ತುಂಡು ತುಂಡಾದ, ಹರಿದ, ಅಲ್ಲಲ್ಲಿ ತೂತಾದ, ಮೈ ಮುಚ್ಚದ, ಮಾನ ಮರ್ಯಾದೆಯನ್ನು ಕೂಡಾ ಹರಾಜು ಹಾಕುವ ಬಟ್ಟೆಗಳು ಟಿವಿ ಶೋ ಗಳಿಂದ ಹಿಡಿದು, ವಿವಿಧ ಕಾರ್ಯಕ್ರಮಗಳು, ನಿತ್ಯ ಬದುಕು, ಅಲೆದಾಟ, ಸುತ್ತಾಟಗಳಲ್ಲೂ, ಕಾಣಿಸಿಕೊಂಡು ಕೆಲವೊಮ್ಮೆ ನೋಡುಗರ ಕಣ್ಣಿಗೆ ಹೇಸಿಗೆ ಹುಟ್ಟಿಸುತ್ತವೆ. ಅಷ್ಟು ಮಾತ್ರವಲ್ಲ, ಕೆಲವೊಂದು ಬಟ್ಟೆಗಳು ಪೋಷಕರೇ ತಮ್ಮ ಮಕ್ಕಳನ್ನು ಕಾಮದ ದೃಷ್ಟಿಯಲ್ಲಿ ನೋಡುವಂತೆ ಆಗಿದೆ. ನಮ್ಮದೇ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವ ವಿಧಾನವೂ ಬದಲಾಗಿದೆ. ಅಲ್ಲಲ್ಲಿ ಧರ್ಮ ಸಂಸ್ಕೃತಿ ನೆಲೆಸಿ ಬೆಳೆಸಲು ಇಂತಹ ಹಬ್ಬ , ಹರಿದಿನ ಪೂಜಾ ವಿಶೇಷಗಳು ಸಹಕಾರಿ. ಹೀಗಾದರೂ ನಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯ ಸಾಗಲಿ ಎಂದು ಆಶಿಸೋಣ ಅಲ್ಲವೇ? ನೀವೇನಂತೀರಿ?@ಹನಿಬಿಂದು@
21.10.2023  

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -208

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 208

      ಬದುಕಿನಲ್ಲಿ ಗಾಳಿ, ನೀರು, ಅಹಾರಕ್ಕಿಂತಲೂ ಮುಖ್ಯವಾದ ಒಂದು ಭಾವವಿದೆ. ಅದು ಪ್ರೀತಿ. ಮನುಷ್ಯನ ಬದುಕಿನ ಮೂಲ ಬೇರು. ಬಾಳ್ವೆಯ ಇತಿಹಾಸ, ವಿಜ್ಞಾನ, ಗಣಿತದ ಲೆಕ್ಕಾಚಾರ, ಭಾಷಾ ಬಳಕೆ ಎಲ್ಲವೂ. ಶಾಲೆಯಲ್ಲಿ ಮಕ್ಕಳು ನೋಡಿ, ಶಿಕ್ಷಕರು ಕಲಿಸಿದ ಪಾಠ ಬಾರದೆ ಹೋದರೂ, ಪರೀಕ್ಷೆಯಲ್ಲಿ ಒಂದು ಅಂಕವೂ ಬಾರದೆ ಇದ್ದರೂ ತನ್ನ ಪ್ರೀತಿಸುವ ಹುಡುಗಿ ಅಥವಾ ಹುಡುಗನಿಗೆ ಪತ್ರ ಬರೆಯಲು ಬರುತ್ತದೆ ಅವರಿಗೆ. ಅದು ಯಾವ ಯಾವುದಾದರೂ ಕೋಡ್ ಪದ ಬಳಸಿ, ಅದು ಯಾವ ಭಾಷೆಯದಾದರೂ ಅಕ್ಷರ ಬಳಸಿ ತಮ್ಮ ಮನದ ಭಾವನೆಗಳನ್ನು ಪದಗಳ ಅಥವಾ ಚಿತ್ರಗಳ ರೂಪದಲ್ಲಿ ಬಿಂಬಿಸಿ ತಾವು ಅವರ ಪ್ರೀತಿಯನ್ನು ಪಡೆಯಲು ಹಾತೊರೆಯುತ್ತಾರೆ ಅಲ್ಲವೇ? ಇದು ಜೀವಿಗಳಿಗೆ ಪ್ರಕೃತಿ ಸಹಜ ಕೊಡುಗೆ. ಕೋಗಿಲೆ ಹಾಡುವುದು, ನವಿಲು ನರ್ತಿಸುವುದು ಎಲ್ಲವೂ ಪ್ರೀತಿಗಾಗಿ ಅಲ್ಲವೇ? ದುಂಬಿ ಹಾರುವುದು, ಮೋಡಗಳು ಕೂಡುವುದು ಕೂಡ ಹಾಗೆಯೇ. ಇಲ್ಲದೆ ಹೋದರೆ ಮಳೆಯಿಲ್ಲ, ಬೆಳಕಿಲ್ಲ, ಹಸಿರಿಲ್ಲ. ಭೂಮಿ ಸೂರ್ಯನ ಸುತ್ತ ತಿರುಗದೆ ಇದ್ದರೆ, ದಿನಾ ಬೆಳಗ್ಗೆ ಸೂರ್ಯ ಉದಯಿಸಿ ಭೂಮಿಗೆ ಕಾಣಿಸಿ ಕೊಳ್ಳದೆ ಇದ್ದರೆ ಜಗ ಹಸಿರಿನಲ್ಲಿ ಝಗಮಗಿಸಲು ಸಾಧ್ಯವೇ?
         ನಮ್ಮನ್ನು ತುಂಬಾ ಪ್ರೀತಿಸುವವರಿಗೆ ನಾವು ಅವರ ಪರ್ಮಿಷನ್ ಕೇಳಿ ಪ್ರೀತಿ ಮಾಡಲ್ಲ, ಕರೆ ಮಾಡಲ್ಲ, ಕೇರ್ ಮಾಡಲ್ಲ ಅಲ್ವಾ? ನಮಗೆ ಅವರು ಸದಾ ಬೇಕು. ಹಾಗಾಗಿ ನಾವು ಅವರ ಪ್ರೀತಿಯನ್ನು ಯಾರ ಜೊತೆಗೂ ಹಂಚಿ ಕೊಳ್ಳಲು ಇಷ್ಟ ಪಡಲ್ಲ. ಅವರನ್ನು ಬಿಟ್ಟು ಇರುವ, ಬದುಕುವ ಮಾತೇ ಇಲ್ಲ. ಅದು ಬದುಕಿನ ಬಾಂಧವ್ಯ. ಪ್ರೀತಿ ಎಟರ್ನಲ್ ಅಂತಾರೆ ಆಂಗ್ಲರು. ಅದೊಂದು ದೇವ ಗುಣ. ಅದು ಹುಟ್ಟಿದರೆ ಸಾಯದು. ಪ್ರೀತಿ ಪರಿಶುದ್ಧ, ನಿಷ್ಕಲ್ಮಶ. ಭೂಮಿಯ ಮೇಲೆ ಬದುಕುವ ಕೆಲವು ಮಾನವನನ್ನು ಬಿಟ್ಟು ಇತರ ಪ್ರಾಣಿಗಳು ಅದನ್ನು ಅನುಭವಿಸಿ ಬದುಕುತ್ತವೆ. ಮೋಸ, ವಂಚನೆ, ದ್ರೋಹ ಇವೆಲ್ಲ ಮನುಷ್ಯ ಗುಣಗಳು. 
    ಪರಿಶುದ್ಧ ಪ್ರೀತಿಗೆ ಈ ಮನುಷ್ಯ ಗುಣಗಳು ಅಡ್ಡ ಬರಲು ಸಾಧ್ಯವೇ ಇಲ್ಲ. ಅದಕ್ಕೆ ಲೈಲಾ ಮಜ್ನು ಜೋಡಿ ಇಂದಿಗೂ ಪ್ರಖ್ಯಾತ. ಪರಿಶುದ್ಧ ಪ್ರೀತಿ ಒಟ್ಟಿಗೆ ಇರಲು ಬಯಸುತ್ತದೆ, ಮಾನಸಿಕವಾಗಿ. ಅಲ್ಲಿ ದೇಹ ಖಂಡಿತಾ ಮುಖ್ಯ ಅಲ್ಲ. ನಮ್ಮ ದೇಹ ಕೊಳೆತು ನಾರುವ ಮೂಳೆ ಮಾಂಸ ಅಷ್ಟೇ. ಹೆಚ್ಚೆಂದರೆ ನೂರು ವರ್ಷದ ಆಯುಷ್ಯ. ಆದರೆ ಪ್ರೀತಿ ಹಾಗಲ್ಲ. ಜನ್ಮ ಜನ್ಮಾಂತರದ ಬಂಧ . ಅದೊಂದು ನಂಬಿಕೆ, ಅದು ಭರವಸೆ. ಅದು ಒಂದೇ ಎನ್ನುವ ಭಾವ, ಸಮೀಕರಿಸಲು, ಸರಿದೂಗಿಸಲು, ಬಿಡಿಸಲು, ಮಂಡಿಸಲು ಆಗದ, ಇದುವರೆಗೆ ಪೂರ್ತಿಯಾಗಿ ಯಾರೂ ಪದಗಳಲ್ಲಿ ವಿವರಿಸಿ  ಹೇಳಲು ಆಗದ ಖುಷಿ, ನೋವು, ಕಣ್ಣೀರು, ಸುಖ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ ವರ್ಗಗಳು ಅಲ್ಲಿ ಇರಲೇಬೇಕು. ಅದು ಅತ್ಯುನ್ನತ ಪ್ರೀತಿ. ಎಲ್ಲವನ್ನೂ ಮರೆತು ಮಗುವಿನ ಹಾಗೆ ಪ್ರೀತಿಸುತ್ತಾ, ಪ್ರೀತಿಯಿಂದ, ಖುಷಿ ಕೊಡುತ್ತಾ ಬಾಳುವುದು. ಈ ರೀತಿ ಬದುಕುವ ಮನುಷ್ಯರು ಸಾವಿರಕ್ಕೆ ಒಬ್ಬರು ಸಿಗಬಹುದು ಅಷ್ಟೇ. ಬದುಕಿನಲ್ಲಿ ಅವರು ಸದಾ ಸುಖಿಗಳು. 
 ಆದರೆ ಯಾರು ನಮ್ಮ ಕೇರಿಂಗ್ ಅನ್ನು ಇಷ್ಟ ಪಡಲ್ಲ, ಡಿಸ್ಟರ್ಬ್ ಅಂದುಕೊಳ್ತಾರೆ, ಇವರು ಯಾಕಾದ್ರೂ ಕರೆ ಮಾಡ್ತಾರೋ ಅನ್ನಿಸಿದರೆ, ಅವರಿಗೆ ನಮ್ಮ ಕಾಲ್, ಮೆಸ್ಸೇಜ್ ಕಿರಿ ಕಿರಿ ಅನ್ನಿಸುವುದೋ ಅವರು ನಮ್ಮವರಲ್ಲ. ಅವರು ನಮ್ಮನ್ನು ಮನಸಾರೆ ಪ್ರೀತಿಸುವವರು ಖಂಡಿತಾ ಅಲ್ಲ. ಇಷ್ಟನ್ನು ಮನದಟ್ಟು ಮಾಡಿಕೊಳ್ಳ ಬೇಕು. 
ನಿಜವಾದ ನಿಷ್ಕಲ್ಮಶ ಪ್ರೀತಿ ಬದುಕಿನಾದ್ಯಂತ ಎಲ್ಲವನ್ನೂ ಸಹಿಸುವ ಶಕ್ತಿ ನೀಡುತ್ತದೆ. ಕಾರಣ ನಮ್ಮ ಪಾಯಿಂಟ್ ಪ್ರೀತಿಸುವ ವ್ಯಕ್ತಿ. ಕಾರಣ ಅವರು ನಾಳೆ ನಮ್ಮೊಡನೆ ಇರಬಹುದು ಅಥವಾ ಇಲ್ಲದೆ ಇರಬಹುದು. ಇರುವಷ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು, ಕೇರ್ ಮಾಡುವುದು ನಮ್ಮ ಕರ್ತವ್ಯ. ಅದೇ ನಿಜವಾದ ಪ್ರೀತಿ. ಆ ಪ್ರೀತಿ ಸಿಕ್ಕಿದ ಮನುಷ್ಯ ಮಾತ್ರ ಬದುಕನ್ನು ನಿಜವಾಗಿ ಎಂಜಾಯ್ ಮಾಡ್ತಾನೆ. ಇಲ್ಲ ಅಂದರೆ ಪರ್ವತದ ತುದಿಗೆ ಹತ್ತಿ ಎಣ್ಣೆ ಹೊಡೀತಾ, ಸಿಗರೇಟ್ ಸೇದುತ್ತಾ ಅದರಲ್ಲೇ ಖುಷಿ ಪಡ್ತಾ ಇರ್ತಾನೆ. ಹೆಂಗಸರು ಅದೇನೇನೋ ಸಂಘ, ಡಾನ್ಸ್, ಮಹಿಳಾ ಕ್ಲಬ್, ಟೂರ್  ಅಂತ  ಸುತ್ತುತ್ತಾ ಇರ್ತಾರೆ. ನಿಜವಾದ ಪ್ರೀತಿ ಇರುವವರು ನಾನು ಬ್ಯುಸಿ ಎಂದು ಎಂದಿಗೂ ಹೇಳಲಾರರು. ಅದೇ ಮಾತನ್ನು ಪ್ರೀತಿಯಿಂದ ಒಂದು ನಿಮಿಷದಲ್ಲಿ ಮನವರಿಕೆ ಮಾಡಿ ಕೊಡುತ್ತಾರೆ ಅಲ್ಲವೇ? ಬೈಗುಳವನ್ನೂ , ಬುದ್ದಿ ಮಾತುಗಳನ್ನೂ ಅಂದವಾದ ಪದಗಳಲ್ಲಿ ಹೇಳಿದರೆ, ನಿಧಾನವಾಗಿ ಹೇಳಿದರೆ, ಮನ ಮುಟ್ಟುವಂತೆ ಅರ್ಥ ಮಾಡಿಸಿದರೆ ಪ್ರೀತಿ ಕಡಿಮೆ ಆಗುವುದೇ? ಒಟ್ಟಿನಲ್ಲಿ ಮನುಷ್ಯನನ್ನು ನಿಜವಾದ ದಾರಿಯಲ್ಲಿ ಸರಿಯಾಗಿ ಕರೆದುಕೊಂಡು ಹೋಗುವುದು ನಿಷ್ಕಲ್ಮಶ ಪರಿಶುದ್ಧ ಪ್ರೀತಿ ಮಾತ್ರ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
02.10.2023

ಹಾರೈಕೆಗಳು

ಗೆಳತಿ ಶಕುವಿಗೆ

ನಿನ್ನ ಒಡನಾಟದ ಆ ಸವಿ ಅದೆಂತು ಮರೆಯಲು ಸಾಧ್ಯ ಗೆಳತಿ? ಜೊತೆಗೆ ಕಳೆದ ಮೂರು ವರುಷಗಳ ನೆನಪು ನೂರು ವರುಷಗಳವರೆಗೆ. ಕಠಿಣ ಪರಿಶ್ರಮ ,ಶ್ರದ್ಧೆ, ವಿಶ್ವಾಸ ,ತನ್ನತನ , ಕಷ್ಟ ಸಹಿಷ್ಣುತೆ, ಎಲ್ಲಾ ಸಂದರ್ಭಗಳಲ್ಲಿ ಸ್ಥಿತಪ್ರಜ್ಞತೆ ಇವುಗಳೆಲ್ಲ ನಾ ನಿನ್ನ ನೋಡಿ ಹಾಗೂ ನಿನ್ನ ಗೆಳೆತನದಲ್ಲಿ ಕಲಿತ ಗುಣಗಳು.ನಿನ್ನ ಗೆಳೆತನ ನನಗೆ ಬಹಳ ಒಳ್ಳೆಯ ಗುಣಗಳನ್ನು ಕಲಿಸಿಕೊಟ್ಟಿದೆ ಎಂದರೆ ತಪ್ಪಲ್ಲ. ಬದುಕಿನಲ್ಲಿ ಉತ್ತಮ ಗೆಳೆಯರನ್ನು ಹೊಂದುವುದು ಕೂಡ ಒಂದು ದೈವದತ್ತ ವರವೇ ಸರಿ.
ಉತ್ತಮ ಗೆಳೆಯರು ಮತ್ತು ಉತ್ತಮ ಪುಸ್ತಕಗಳು ನಮ್ಮ ಜೀವನವನ್ನು ಬಹಳಷ್ಟು ನಿರ್ಧರಿಸಿದೆ ಎಂದು ತಿಳಿದವರು ಹೇಳುತ್ತಾರೆ. ನನ್ನ ಜೀವನದಲ್ಲಿ ನಾನು ಏನಾದರೂ ಅಲ್ಪಸಲ್ಪ ಸಾಧಿಸಿದ್ದರೆ ಅದರಲ್ಲಿ ನಿನ್ನ ಪ್ರಭಾವವು ಇರಬಹುದು ಎಂದು ನನ್ನ ಅನಿಸಿಕೆ. ಯಾವುದೇ ಸಾಧನೆಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಧೈರ್ಯ ಮುಖ್ಯ ಎಂದು ಆದಾಗ ಹೇಳಿಕೊಟ್ಟ ಗೆಳತಿ ನೀನು. ನೋವಿನಲ್ಲಿ ನಗಿಸಿ ಬದುಕಿಗೆ ಧೈರ್ಯ ತುಂಬಿದ ಶಕ್ತಿ. ನಿನ್ನ ನೋಡಿ ಕಲಿಯುವುದು ಬಹಳಷ್ಟು ಇದೆ.
ಸಾಧನೆ ನಮ್ಮ ಆಲೋಚನೆಗಳನ್ನು ತಲುಪಬಲ್ಲ ಸಾಧನ ಎಂಬುದನ್ನು ನಿನ್ನಿಂದ ಕಲಿತೆ. ಯಾರು ಏನೇ ಹೇಳಿದರೂ ನಮ್ಮ ಮನದ ಮಾತನ್ನು ಕೇಳಿ ಅದರಂತೆ ನಡೆಯಬೇಕು ಎಂದು ತೋರಿಸಿದ ದಿಟ್ಟೆ ನೀನು .

ನಿನ್ನ ವಿದ್ಯಾರ್ಥಿಗಳು ಅದೃಷ್ಟವಂತರು. ಒಂದು ದಿನವಾದರೂ ನಿನ್ನ ವಿದ್ಯಾರ್ಥಿಯಾಗಿ ನಿನ್ನ ತರಗತಿಯಲ್ಲಿ ಕುಳಿತುಕೊಳ್ಳಲು ಆಸೆ ಇದೆ. ಸಾಧನೆಗೆ ಸಮಯ ಬೇಕಿಲ್ಲ. ಯಾವಾಗಲೂ ಸಾಧಿಸಬಹುದು, ಮನಸ್ಸು ಮುಖ್ಯ ಎಂಬುದನ್ನು ಬದುಕಿನಲ್ಲಿ ನಿಜವಾಗಿ ತೋರಿಸಿಕೊಟ್ಟ ನಿನಗೆ ಜನುಮ ದಿನದ ಶುಭಾಶಯಗಳು.
ಉತ್ತಮ ಭವಿಷ್ಯ ಕ್ಕೆ ಮನದುಂಬಿ ಹಾರೈಕೆಗಳು. ಸಾಧನೆ ಮತ್ತಷ್ಟು ಹೆಚ್ಚಲಿ. ನಿನ್ನ hard work, dedication, smiling nature, disciplined life ನನ್ನಲ್ಲೂ ಬರಲಿ..
@ಹನಿಬಿಂದು@
04.11.2023


ಬುಧವಾರ, ಅಕ್ಟೋಬರ್ 25, 2023

ಬೀಸುತಿರಲಿ ತಂಗಾಳಿ

ಬೀಸುತಿರಲಿ ತಂಗಾಳಿ

ಬದುಕ ನಾವೆಯಲಿ ಬೀಸಿತು
ಹಿತವಾದ ತಂಗಾಳಿ
ಸೆಕೆಯಿಂದ ಬೆವರ ಹನಿ ಹೊದ್ದು
ಕಿತ್ತೆಸೆದ ಭಾವದ ಬೇರಿನ 
ಒಳಗಿಂದ ಸ್ಪುರಿಸಿದ ಅದೇನೋ 
ತಣ್ಣನೆಯ ಕುಳಿರ್ಗಾಳಿ..

ಪಂಕದ ಗಾಳಿ ಸಾಲದೆನಿಸಿ
ಏಸಿ ಕೂಲರ್ ಗಳ ಬದಿಗೆಸೆದು
ಅಲ್ಲೆಲ್ಲೋ ದೂರದ ಬೆಟ್ಟದ ತುದಿಯಲ್ಲಿ
ಪ್ರಕೃತಿಯ ರಮ್ಯ ಮಡಿಲಲ್ಲಿ
ಝುಳು ಝುಳು ಹರಿವ ತುಂಗೆಯ ದಡದಲ್ಲಿ
ಶಾಂತವಾಗಿ ಕುಳಿತು ಒಂದಷ್ಟು ಹೊತ್ತು
ಮೈ ಮನ ಹಗುರಾಗಿಸಿ ಇಹಪರ ಮರೆತು

ತನ್ನಷ್ಟಕ್ಕೆ ತಾನೇ ಬದಲಾಗಿ
ಕೊಂಚವಾದರೂ ಸುಧಾರಿಸಿ ಬೆಳೆಯಬೇಕು
ಆಲೋಚನೆಗಳ ಬದಲಾಯಿಸಿ
ಸಾಗರದ ಅಲೆಯಂತೆ ಚಿಮ್ಮಿ ದಡಕ್ಕೆ ಹಾರಿ ಬರಬೇಕು

ಮುಗಿಲಿಂದ ಅವಿತು ಕುಳಿತ ತುಂತುರು ಮಳೆ ಹಾನಿಯಾಗಿ
ಭೋರ್ಗರೆದು ಇಳೆಗೆ ಅಪ್ಪಿ 
ಮಣ್ಣಿನೊಡನೆ ಮುದ್ದಾಡಿ
ಮಣ್ಣಿನೊಳಗೆ ಒಂದಾಗಿ
ಇಳೆಯೊಡನೆ ಬೆರೆತು ಹೋಗಬೇಕು

ಮತ್ತೊಮ್ಮೆ ಇಳೆಯಲಿ ಹಸಿರಾಗಿ ಹುಟ್ಟಿ
ಕುದಿಯುತಿಹ ಧರೆಯ ತಣ್ಣಗೆ ಇರಿಸಬೇಕು

ತಣ್ಣಗಿನ ಮಂಜು ಹೊದ್ದ
ಹಿಮಾಲಯದ ತಪ್ಪಲಿನ ಬೆಟ್ಟದಲಿ
ಒಂಟಿಯಾಗಿ ನಡೆದು ಕುಣಿದು ಕುಪ್ಪಳಿಸಬೇಕು
ಇನ್ನೊಮ್ಮೆ ಭಾರತ ಮಾತೆಯ ಶಿಖರದ
ಹಿಮ ಮಣಿಯಾಗಿ ಮಿಂಚುವ 
ರವಿಕಿರಣವಾಗಿ ಪುಟಿದೇಳಬೇಕು

ಹೀಗೆಲ್ಲಾ ಕನಸು ಕಾಣುತ್ತಾ
ಮನದಲ್ಲೇ ಮಂಡಿಗೆ ಮೆಲ್ಲುತ್ತಾ
ಸೆಕೆಯಲಿ ಬಿಸಿಯಾದ ಭಾವಗಳ
ದೂರ ಬಿಸಾಕಿ ಕುಳಿತಾಗ

ಅದೆಲ್ಲಿಂದ ಬಂತೋ
ಎದೆ ಝಲ್ಲೆನಿಸುವ
ತಂಪು ತಂಪಾದ
ಭವ್ಯತೆಯ ಹೊತ್ತ
ಅಂಜದ ಅಳುಕದ
ನೆಚ್ಚಿನ ಮೆಚ್ಚಿನ
ಇಣುಕಿದರೂ ಬೇಕೇನಿಸುವ
ತಣ್ಣನೆಯ ಕುಳಿರ್ಗಾಳಿ..
ಮೈ ಮನ ತಣ್ಣಗಾಗಿಸಲು

ಯಾರೋ ನನ್ನೆದೆಯ ಬಳಿಗೆ
ಉಡುಗೊರೆಯ ಕಳಿಸಿ ಕೊಟ್ಟಂತೆ
ಅದಾರೋ ನನ್ನ ಮೊರೆಯ ಕೇಳಿ
ಸಾಂತ್ವನದ ಐಸ್ ಕ್ರೀಂ ಕೊಡಿಸಿದಂತೆ
ಅದೆಲ್ಲಿಂದಲೋ ಮಗು ಆಸೆ ಪಟ್ಟ
ದೊಡ್ಡ ಚಾಕೋಲೇಟ್ ಸಿಕ್ಕಂತೆ

ಮತ್ತೆ ಮತ್ತೆ ಕಚಗುಳಿ ಇಡುತ್ತಾ
ಬಂದೇ ಬಂತು
ತಣ್ಣನೆಯ ಸ್ಪರ್ಶದ ಅನುಭವದ
ತಂಪು ಭಾವಗಳ ಬೀಜ ಹೊತ್ತ
ಈಗಷ್ಟೇ ಮೊಳಕೆ ಕಟ್ಟಿ
ಗಿಡವಾಗಲು ತಯಾರಾದ
ಮುದ್ದು ಮುಖದ ಚೆಲುವೆಯಂತೆ

ನವೋಲ್ಲಾಸದ ಹಾಡು ಹೊತ್ತ
ಕವನದ ಪ್ರಾಸ ಪಡೆದ
ದಾಹದಲ್ಲಿ ಉದಕದಂಥ
ತಣ್ಣನೆಯ ಕುಳಿರ್ಗಾಳಿ.. 
ಬೀಸಿತು ತಂಪು ತಂಗಾಳಿ..
ಮತ್ತೆ ಮತ್ತೆ
ಮಾಸದಿರಲಿ
ಸದಾ ಬೀಸುತಿರಲಿ
ಮರಳುಗಾಡಿನ ಓಯಸಿಸ್ ನಂತೆ
ಮತ್ತೆ ಮತ್ತೆ ಹಿತವಾಗಿ..
ಬೀಸುತಿರಲಿ ಪ್ರೀತಿಯ ತಂಗಾಳಿ..
@ಹನಿಬಿಂದು@
26.10.2023

ಭಾನುವಾರ, ಅಕ್ಟೋಬರ್ 22, 2023

ಕನ್ನಡ ಭಾಷಾ ಸಾಹಿತ್ಯಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ

ಕನ್ನಡ ಭಾಷೆಯ ಸಾಹಿತ್ಯಕ್ಕೆ ಜಾಲತಾಣಗಳ ಕೊಡುಗೆ
   ಇಂದಿನ ದಿನಗಳಲ್ಲಿ ಹೆಚ್ಚಿನವರು ಹೇಳೋದಿದೆ. ಏನಂತ ಹೇಳಿದ್ರೆ ಇಂದಿನ ದಿನದಲ್ಲಿ ಪುಸ್ತಕಗಳ ಓದು ಕಡಿಮೆಯಾಗಿದೆ ಹಾಗೂ ಮೊಬೈಲ್ ಬಳಕೆ ಜಾಸ್ತಿಯಾಗಿದೆ. ಜನರ ಜ್ಞಾನಮಟ್ಟ ಕಡಿಮೆಯಾಗಿದೆ ಮತ್ತು ಪುಸ್ತಕ ಓದದೇ ಇರುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಮತ್ತು ಜ್ಞಾನದ ಮಟ್ಟ ಕಡಿಮೆಯಾಗಿದೆ. ನೇರವಾಗಿ ಬೆಳಕು ಬಿದ್ದಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಓದು ಉತ್ತಮವಲ್ಲ ಬದಲಾಗಿ ಕಣ್ಣಿಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ಬೆಳಕು ಬಿದ್ದು ಅದನ್ನು ಓದಿದರೆ ಅದು ಬಹಳ ಕಾಲ ನೆನಪಲ್ಲಿ ಉಳಿಯುತ್ತದೆ ಎಂಬ ವೈಜ್ಞಾನಿಕ ತತ್ವವು ಮೊಬೈಲಿಗೂ ಅನ್ವಯಿಸುತ್ತದೆ ಎಂದು ಇನ್ನೂ ಕೆಲವರು ಹೇಳುತ್ತಾರೆ. ಅದರ ಜೊತೆ ಜೊತೆಗೆ ಲೇಖಕರು ಹಿಂದಿನ ಕಾಲದಲ್ಲಿ ಪುಸ್ತಕವನ್ನು ಆನ್ಲೈನಲ್ಲಿ ಬಿಡುಗಡೆ ಮಾಡುತ್ತಾ ಇರುವವರೂ ಇದ್ದಾರೆ. 
  ಹೇಳಿ ಕೇಳಿ ಎಲೆಕ್ಟ್ರಾನಿಕ್ ಯುಗವಿದು. ಲೈಬ್ರರಿಗೆ ಹೋಗಿ ಕುಳಿತುಕೊಳ್ಳಲು ಯಾರಿಗೆ ಸಮಯವಿದೆ ಹೇಳಿ? ಹಾಗೆಯೇ ಪುಸ್ತಕದ ಕಟ್ಟನ್ನು ಎದುರಿಗಿಟ್ಟುಕೊಂಡು ಓದುವಂತವರು ಎಂದು ಕಡಿಮೆ ಎಂದು ಹೇಳಬೇಕು. ಆದರೆ ಮೊಬೈಲನ್ನು ಕೈಯಲ್ಲಿಟ್ಟುಕೊಂಡು ಒತ್ತುತ್ತಾ ಗಂಟೆಗಟ್ಟಲೆ ಅದರಲ್ಲೇ ಕಳೆಯುವವರು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನಾವೆಂದು ಕಾಣುತ್ತೇವೆ. ಆದಕಾರಣ ಓದುವುದು ಕೂಡ ಎಂದು ಹೆಚ್ಚಾಗಿ ಮೊಬೈಲ್ ಗಳಲ್ಲಿ ನಡೆಯುತ್ತದೆ ಅಥವಾ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಹೀಗಿರುವಾಗ ಕನ್ನಡ ಸಾಹಿತ್ಯಕ್ಕೂ ಕೂಡ ಜಾಲತಾಣಗಳ ಕೊಡುಗೆ ಬಹಳಷ್ಟು ಇದೆ ಎಂದೇ ಹೇಳಬಹುದು. 
  ಹಿಂದಿನ ಕಾಲದಲ್ಲಿ ಕವಿಗಳು ಅದೆಷ್ಟೇ ಬರೆದರೂ ಕೂಡ ಅದನ್ನು ಪ್ರಚಾರ ಮಾಡಲು ಪುಸ್ತಕಗಳೇ ಬೇಕಿತ್ತು. ಅದಕ್ಕೆ ಲೈಬ್ರರಿಗಳು ಹುಟ್ಟಿಕೊಂಡವು. ಸಣ್ಣ ಸಣ್ಣ ಗ್ರಾಮಗಳಲ್ಲಿ ಗ್ರಾಮಾಂತರ ಲೈಬ್ರರಿಗಳು ಹಾಗೆಯೇ ತಾಲೂಕು ಕೇಂದ್ರಗಳಲ್ಲಿ ದೊಡ್ಡದಾದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಲೈಬ್ರರಿಗಳು ತೆರೆದು ಕೊಂಡವು. ಆದರೆ ಇಂದಿನ ದಿನಗಳಲ್ಲಿ ಈ ಲೈಬ್ರರಿಗಳು ಹೆಚ್ಚು ಕೆಲಸ ಮಾಡುತ್ತಿವೆ ಅನ್ನಿಸುತ್ತಿದೆ. 
ಹೆಚ್ಚಿನ ಜನ ಓದಲಿ ಎಂಬ ಆಸೆಯಿಂದ ಚಿತ್ರವಿಚಿತ್ರವಾಗಿ ಬರೆಯುವುದು, ಅತಿ ಹೆಚ್ಚು ಜನರಿಂದ ಲೈಕುಗಳನ್ನು ಗಿಟ್ಟಿಸಿಕೊಳ್ಳಲು ಅಶ್ಲೀಲವಾಗಿ ಬರೆಯುವುದು, ಹುಡುಗಿಯರ ಬಗ್ಗೆ ಹೆಚ್ಚಾಗಿ ಬರೆದು ಜನಮನ್ನಣೆ ಪಡೆದುಕೊಳ್ಳುವುದು, ತನ್ನ ಪ್ರೇಮಿಗೆ ಅಥವಾ ಪ್ರಿಯಕರಣಿಗೆ ಹೇಳಲು ಸಾಧ್ಯವಾಗದನ್ನು ಕವನದ ಮೂಲಕ ಅಥವಾ ಕಥೆಗಳ ಮೂಲಕ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ತನ್ನದೇ ಕಥೆಯನ್ನು ಸ್ವಲ್ಪ ಹೆಸರು ಬದಲಾಯಿಸಿ ಬೇರೆ ತರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಇದೆಲ್ಲವನ್ನು ಕೂಡ ನಾವು ಇಂದು ಕಾಣತ್ತೇವೆ. ಆದರೂ ಕೂಡ ಸಾಮಾಜಿಕ ಜಾಲತಾಣಗಳು ಕನ್ನಡ ಸಾಹಿತ್ಯಕ್ಕೆ ಏನನ್ನು ಕೊಡುಗೆಯಾಗಿ ಕೊಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ವಾಟ್ಸಪ್ ಗುಂಪುಗಳಲ್ಲಿ ಮತ್ತು ಫೇಸ್ಬುಕ್ ಗುಂಪುಗಳಲ್ಲಿ ನಾನು ಪ್ರತಿನಿತ್ಯ ಕನ್ನಡ ಬರವಣಿಗೆಗಳನ್ನು ಕಾಣುತ್ತೇನೆ. ಬೇರೆ ಬೇರೆ ರೀತಿಯ ಬರಹಗಳು ಪ್ರತಿನಿತ್ಯವೂ ಜಾಲತಾಣಗಳಲ್ಲಿ ಸಿಗುತ್ತವೆ. ಒಂದೇ ರೀತಿ ಕವನವನ್ನು ಮಾತ್ರ ಎಂದು ಕವಿಗಳು ಬರೆಯುತ್ತಿಲ್ಲ. ಬದಲಾಗಿ ಜಾಲತಾಣಗಳ ಸಹಾಯದಿಂದ ಹಲವಾರು ಹಿರಿಯ ಕವಿಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಅವರ ಜೊತೆಯಲ್ಲಿ ಕೇಳಿ ಕಲಿತು ಗಜಲ್, ಭಾವಗೀತೆ, ಕವನ, ಕವಿತೆ , ಲಾವಣಿ , ಚುಟುಕು , ಹಾಯ್ಕು ಇದೇ ಮುಂತಾದ ಹಲವರು ವಿವಿಧ ಪ್ರಕಾರಗಳಲ್ಲಿ ಬರೆಯುವುದು ಹೇಗೆ ಎಂದು ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುತ್ತಾ, ಒಬ್ಬರನ್ನು ಮತ್ತೊಬ್ಬರು ತಿದ್ದುತ್ತಾ,  ಪ್ರತಿ ಕವಿಯ ವಿಮರ್ಶೆಯನ್ನು ಮಾಡುತ್ತಾ ಕಲಿಕೆ ಮತ್ತಷ್ಟು ಮಗದಷ್ಟು ಸಾಗಿದೆ. ಬರವಣಿಗೆಯನ್ನು ತಿಳಿದುಕೊಂಡವರು ಮತ್ತಷ್ಟು ಮಗದಷ್ಟು ಓದಿ ಇನ್ನೂ ಒಂದಷ್ಟು ಬರೆದು ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಹಲವಾರು ಕವನಗಳ ಕವಿತೆಗಳ ಪುಸ್ತಕಗಳು ಬಿಡುಗಡೆಯಾಗುವುದನ್ನು ನಾವು ನೋಡುತ್ತಿದ್ದೇವೆ. 
  ಸಹಜವಾಗಿಯೂ ಉಪಯೋಗ ಮತ್ತು ದುರುಪಯೋಗ ಎಲ್ಲಾ ಕಡೆ ಕಂಡು ಬರುತ್ತದೆ ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಒಬ್ಬರ ಕವನಗಳನ್ನು ಮತ್ತು ಬರಹಗಳನ್ನು ಕದ್ದು ಮತ್ತೊಬ್ಬರು ತಮ್ಮ ಬ್ಲಾಗ್ ಗಳಲ್ಲಿ ಹಾಕಿಕೊಳ್ಳುವುದು, ಹಿರಿಯ ಕವಿಗಳ ಕವನದ ಸಾಲುಗಳನ್ನು ಕದ್ದು ತಮ್ಮ ಕವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆ ಬೇರೆ ಭಾಷೆಯ ಕವಿಗಳ ಕವನದ ಸಾಲುಗಳನ್ನು ಭಾಷಾಂತರಿಸಿ ಅವರ ಗಮನಕ್ಕೆ ತರದೆ ತಮ್ಮ ಕವನಗಳ ಮಧ್ಯದಲ್ಲಿ ಸೇರಿಸಿಕೊಳ್ಳುವುದು, ನಿಜವಾದ ಕವನ ಬರೆದವರ ಹೆಸರನ್ನು ತೆಗೆದು ತನ್ನ ಹೆಸರನ್ನು ಸೇರಿಸಿ ಪೋಸ್ಟ್ ಮಾಡುವುದು ಇದೆಲ್ಲ ನಡೆದೇ ಇದೆ. ಆದರೆ ನಿಜವಾದ ಬುದ್ಧಿಮತ್ತೆ ಇರುವ ಕವಿಗಳು ಎಲ್ಲಾ ಕಡೆಯೂ ಗುರುತಿಸಲ್ಪಡುತ್ತಾರೆ ಅವರು ಸಾಮಾಜಿಕ ಜಾಲತಾಣಗಳನ್ನು ಕೂಡ ಅತ್ಯುತ್ತಮವಾಗಿ ಬಳಸಲು ಕಲಿತುಕೊಂಡಿರುತ್ತಾರೆ. 
ಒಂದು ಕಡೆ ನೋಡಿದರೆ ನಮಗೆ ಪಾಸಿಟಿವ್ ಥಿಂಕಿಂಗ್ ಅಥವಾ ಧನಾತ್ಮಕ ಆಲೋಚನೆಗಳು ಉತ್ತಮ ಎಂದು ಹೇಳುವಂತೆ ಧನಾತ್ಮಕವಾಗಿ ಯೋಚನೆ ಮಾಡುವುದಾದರೆ ಹೆಚ್ಚಿನ ಕವಿಗಳನ್ನು ನಾವು ಮಾತನಾಡಿಸಲು ಸಾಧ್ಯವಾಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಅವರ ಬರಹಗಳನ್ನು ಕೂಡ ಓದಲು ಸುಲಭವಾಗಿ ಸಿಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಕೇವಲ ಕನ್ನಡ ಸಾಹಿತ್ಯದ ಬರಹ ಮಾತ್ರವಲ್ಲ ಸಾಹಿತ್ಯದ ಓದು ಹಾಡು ಅಭಿನಯ ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳ ಬಳಕೆ  ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ ಅಲ್ಲವೇ? 
ನಿಜವಾಗಿ ಓದಿ ಬರೆಯುವವನು ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದಿರುವವನು ಸಾಮಾಜಿಕ ಜಾಲವಾದರೆ ಏನು ಪುಸ್ತಕವಾದರೆ ಏನು ಎಲ್ಲಾ ಕಡೆಯೂ ಓದಿಕೊಂಡು ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಬರೆಯುತ್ತಾನೆ. ಕಳ್ಳ ಕವಿಗಳಿಗೆ ವಾಚನಾಲಯ ಗ್ರಂಥಾಲಯಗಳಿಂದ ಪುಸ್ತಕಗಳನ್ನು ತಂದು ಓದಿ ಅದರಿಂದಲೂ ಹಲವಾರು ಸಾಲುಗಳನ್ನು ಕದಿಯಬಹುದಲ್ಲವೇ? ಜಾನಕ್ಕೆ ಯಾವಾಗಲೂ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ . ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಜ್ಞಾನಿಯಾದವ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಜ್ಞಾನದಿಂದ ಉತ್ತಮವಾದ ಸಾಹಿತ್ಯವನ್ನು ಹೊರಗೆ ತಂದು ಅದರ ಮೂಲಕ ಹಲವಾರು ಬರಹಗಳಿಂದ ಕನ್ನಡದ ಸಾಹಿತ್ಯ ಸೇವೆಯನ್ನು ಮಾಡುತ್ತಾ ತನ್ನ ಮಾತೃಭಾಷೆಯ ಋಣವನ್ನು ತೀರಿಸಲು ಇದು ಅತ್ಯಂತ ಸುಲಭದ ವಿಧಾನವಾಗಿದೆ. 
ಎಲ್ಲೋ ಅಲ್ಲಿ ಇಲ್ಲಿ ಒಂದಷ್ಟು ಕಡೆ ಇದರ ಋಣಾತ್ಮಕತೆ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಆಲೋಚಿಸುತ್ತಾ ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಾ ವಾರ್ತಾ ಪತ್ರಿಕೆಗಳಿಗೆ ಈಮೇಲ್ ಮೂಲಕ ತನ್ನ ಬರಹವನ್ನು ಕಳುಹಿಸುತ್ತಾ ಹಾಗೆಯೇ ಅವುಗಳಿಂದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಓದುತ್ತಾ ಹೀಗೆ ಸಾಮಾಜಿಕ ಜಾಲ ತಾಣಗಳು ಕನ್ನಡದ ಸಾಹಿತ್ಯದ ಪ್ರಚಾರಕ್ಕೆ ಮತ್ತು ತಮ್ಮದೇ ಆದ ಸಾಹಿತ್ಯದ ಬಳಕೆಯನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನನ್ನ ಅನಿಸಿಕೆ. ನೀವೇನಂತೀರಿ?
@ಹನಿಬಿಂದು@
18.10.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -206

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -206

       ಭಾರತ ಮಾತ್ರವಲ್ಲ ಕರ್ನಾಟಕವೂ ವಿವಿಧ ಸಂಸ್ಕೃತಿಯ ನೆಲೆವೀಡು. ಉತ್ತರ ಕರ್ನಾಟಕ, ಕೊಡವ, ಗಡಿ ಭಾಗದಲ್ಲಿ ಮರಾಠಿ, ತೆಲುಗು, ಕೊಂಕಣಿ, ತಮಿಳು, ಲಂಬಾಣಿ, ಬುಡಕಟ್ಟು ಜನಾಂಗ ಹೀಗೆ ಬೇರೆ ಬೇರೆ ಸಂಸ್ಕೃತಿಯ ಹಾಗೆಯೇ ತುಳುವರದ್ದೂ ಕೂಡ ಬೇರೆಯೇ ತೆರನಾದ ಸಂಸ್ಕೃತಿಯಿದೆ. ಬೆಳಗ್ಗೆ ಎದ್ದು ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಕಲೆ ಇಲ್ಲಿನದಲ್ಲ ಬದಲಾಗಿ ಬಾಗಿಲು, ಅಂಗಳ, ಮನೆಯೊಳಗೂ ಗುಡಿಸಿ, ಪಾತ್ರೆ ತೊಳೆದು, ಅಂಗಳವನ್ನು ಸೆಗಣಿ  ನೀರಿನಿಂದ ಸಾರಿಸುವ ಕಾರ್ಯ ಹಿಂದಿನದು. ಯಾವುದೇ ಕಾರ್ಯಕ್ರಮ ಇರಲಿ, ಪೂಜೆ ಇರಲಿ ಮನೆಯ ಅಂಗಳವನ್ನು ಸಾರಿಸಲೇ ಬೇಕು. ಹಿಂದಿನ ಕಾಲದಲ್ಲಿ ಸಿಮೆಂಟ್ ಇಲ್ಲದಾಗ ಮನೆಯ ನೆಲವನ್ನೂ ಹೀಗೆಯೇ ಸಾರಿಸುತ್ತಿದ್ದರಂತೆ. ಬಟ್ಟೆ ತೊಡುವಲ್ಲೂ ವಿಶೇಷ. ಮಹಿಳೆಯರಿಗೆ ಸೀರೆಯ ನೆರಿಗೆ ಉದ್ದ ಬಿಟ್ಟು, ಉದ್ದವಾದ ಕಪ್ಪು ಮಣಿಯ ಕರಿಮಣಿ ಸರ, ಒಂಕಿ ಉಂಗುರ. ಕಾಲಿಗೆ ಹಲವು ಸುತ್ತಿನ ಕಾಲುಂಗುರ ಪತಿವ್ರತೆಗೆ. ದೊಡ್ಡದಾದ ರೌಂಡ್ ತುರುಬು. ಅದರ ಸುತ್ತ ಮಂಗಳೂರು ಮಲ್ಲಿಗೆಯ ಅಲಂಕಾರ.  
ಊಟದಲ್ಲೂ ಅಷ್ಟೇ. ಇಲ್ಲಿ ಬಹಳ ವಿಶೇಷತೆ. ಕುಚ್ಚಲಕ್ಕಿ ಅನ್ನ, ತೆಂಗಿನ ಕಾಯಿ ರುಬ್ಬಿ ಹಾಕಿ ತಯಾರಿಸಿದ ಗಟ್ಟಿ ಸಾಂಬಾರ್,  ಸುಕ್ಕ, ಗಸಿ, ಪಲ್ಯ, ಉಪ್ಪಿನ ಕಾಯಿ, ಚಟ್ನಿ, ಪಾಯಸ, ಹೋಳಿಗೆ, ಹಪ್ಪಳ, ಚಕ್ಕುಲಿ ಇಲ್ಲಿನ ವಿಶೇಷ. ಮಿಶ್ರಾಹಾರಿಗಳಿಗೆ ಕೋಳಿ ಸುಕ್ಕಾ ಹಾಗೂ ಕೋಳಿ ಸಾರು, ಅಕ್ಕಿ ರೊಟ್ಟಿ ಇಲ್ಲಿನ ವಿಶೇಷ. ಆಟಿ (ತುಳು ತಿಂಗಳಿನ ಆಷಾಡ) ದಲ್ಲಿ  ಮಾಡುವ ಪತ್ರೊಡೆ, ತಜಂಕ್ ಮತ್ತು ಹಲಸಿನ ಬೀಜದ ಪಲ್ಯ, ಕೆಡ್ಡಸ ಹಬ್ಬಕ್ಕೆ ತಯಾರಿಸುವ ನನ್ಯರಿ ಅಥವಾ ಕುಡುವರಿ, ಬದನೆ ನುಗ್ಗೆ ಸಾಂಬಾರ್, ಇತರ ದಿನಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ತಯಾರಿಸುವ  ಮಂಗಳೂರು ಸೌತೇಕಾಯಿ ಸಾಂಬಾರ್, ಹಾಗೆಯೇ ಮಾವಿನಕಾಯಿ, ಅಮಟೆ ಕಾಯಿ, ಸೌತೆಕಾಯಿ, ಹಲಸಿನ ಎಳೆ ಕಾಯಿಯ ಉಪ್ಪಿನಕಾಯಿ, ತೊಂಡೆಕಾಯಿ ಉಪ್ಪಿನಕಾಯಿ ಇಲ್ಲಿನ ವಿಶೇಷ. 
  ಇನ್ನು ಕಾರ್ಯಕ್ರಮಗಳ ಊಟದಲ್ಲಿ ಕೂಡ ವಿಶೇಷತೆ. ಐಸ್ ಕ್ರೀಮ್ ಇಲ್ಲಿ ಸರ್ವರ ಆಯ್ಕೆ. ಹಾಗೆಯೇ ಇಲ್ಲಿನ ಜೈನರ ಊಟದ ರುಚಿಯೇ ಬೇರೆ. ಅದನ್ನು ತಿಂದವ ಮತ್ತೆ ಮತ್ತೆ ಬೇಕೇನುವ. ಹುಣಸೆ ಹುಳಿ, ಬೆಳ್ಳುಳ್ಳಿಯ ಉಪ್ಪಿನಕಾಯಿ, ಮೆಣಸಿನ ಚಟ್ನಿ, ವಿಶೇಷ ಸಾರು, ಸಿಹಿ ತಿನಿಸು ಮೆಚ್ಚಿ ಒಪ್ಪುವವರೆ ಎಲ್ಲರೂ. ಇನ್ನು ಅಡುಗೆ ಎಂದರೆ ನೆನಪಾಗುವುದು ಭಟ್ಟರು. ಭಟ್ಟರ ಊಟ, ಹೋಟೆಲ್, ಅದರ ಸವಿ ಇನ್ನೊಂಥರ! ಇಡ್ಲಿ ಸಾಂಬಾರ್,  ಹೋಳಿಗೆ ಊಟ, ಭಟ್ಟರ ಸ್ಪೆಷಲ್ ಸಾರು, ಚಟ್ನಿ, ಸಿಹಿ ತಿನಿಸುಗಳು , ಊಟದ, ತಿನ್ನುವ ಪದ್ಧತಿ, ಮಜ್ಜಿಗೆ ಊಟ ಎಲ್ಲವೂ ವಿಶೇಷ. ತಂಬುಳಿ ಯಂತೂ ಆರೋಗ್ಯಕ್ಕೆ ಲೋಕಪ್ರಿಯವಾಗಿದೆ. ಇನ್ನು  ಅದು ಆರೋಗ್ಯಕರ ಊಟ ಕೂಡ. ಬುದ್ಧಿಶಕ್ತಿಯ ಬೆಳವಣಿಗೆಯೂ. 
  
ಇನ್ನು ಮನೆಗಳ ಅಂದ ಅದೊಂದು ಬೇರೆಯೇ. ಎಲ್ಲಾ ಕಡೆ ಮನೆಗಳು ಪೂರ್ವಾಭಿಮುಖವಾಗಿ ಇದ್ದರೆ ಇಲ್ಲಿ ಅದು ಉತ್ತರಾಭಿಮುಖ. ಪೂರ್ವಕ್ಕೊಂದು ಬಾಗಿಲು. ಮಂಗಳೂರು ಹಂಚಿನ ಮನೆ ನೋಡಲು ಸುಂದರ. 
ಊರಲ್ಲಿಯೇ ಬೆಳೆದ ತೆಂಗಿನ ಎಣ್ಣೆಯನ್ನು ಬಳಸಿ ತಯಾರಿಸಿದ ನೀರ್ ದೋಸೆ, ಅದರಲ್ಲೇ ಒಗ್ಗರಣೆ ಹಾಕಿದ ಕೆಂಪು ಚಟ್ನಿ. ತೆಂಗಿನ ಎಣ್ಣೆ ಆಲೀವ್ ಎಣ್ಣೆಗಿಂತಲೂ ಭಾರತದ ಪರಿಸರಕ್ಕೆ ಉತ್ತಮ ಆಹಾರ ಎಂದು ತಜ್ಞರು ಹೇಳುತ್ತಾರೆ. ಬೆಳಗ್ಗೆ ತಿನ್ನುವ ಕುಚಲಕ್ಕಿ ಗಂಜಿ ಚಟ್ನಿ ಯಿಂದ ಯಾವುದೇ ಗ್ಯಾಸ್ಟ್ರಿಕ್ ರೋಗ ಬಾರದು.
ಯಾವುದೇ ಕಾರ್ಯಕ್ರಮಕ್ಕೆ ಆಸನ, ವೇದಿಕೆಗೆ ಹೆಚ್ಚು ಒತ್ತು ಕೊಡದ, ಕೆಲಸಕ್ಕೆ ಹೆಚ್ಚು ಸಮಯ ವ್ಯಯ ಮಾಡುವ ಪ್ರಾಕ್ಟಿಕಲ್ ಜನ ಇಲ್ಲಿನವರು. ಹೆಚ್ಚು ಸಿನೆಮಾ ನೋಡಲು ಸಮಯ ಮೀಸಲಿಡುವುದಿಲ್ಲ. ಬದಲಾಗಿ ತುಳು ನಾಟಕಗಳನ್ನು ಹೆಚ್ಚು ನೋಡುತ್ತಾರೆ. ಈಗಲೂ ಸಿನೆಮಾ ಕಾಲದಲ್ಲಿ ನಾವಿದ್ದರೂ ನಾಟಕದ ಮೋಹ ಜನರನ್ನು ಬಿಟ್ಟಿಲ್ಲ. ಅದರ ಜೊತೆಗೆ ತೆಂಗಿನ ಕಾಯಿಯ ಹಾಗೆಯೇ ಯಕ್ಷಗಾನ ಕೂಡ ಇಲ್ಲಿನ ಜನರ ಉಸಿರು. ಯಕ್ಷಗಾನ ನೋಡದ ತುಳುವನಿಲ್ಲ. 
ಹಣಕ್ಕಾಗಿ ಪರದೇಶ, ಪರವೂರಿಗೆ ಹೆಚ್ಚು ವಲಸೆ. ಅದರಲ್ಲೂ ಉದ್ಯಮ ಇವರ ಕೈ ಬಿಡುವುದಿಲ್ಲ. ಹೋಟೆಲ್ ಗಳು ಇವರ ಆಪ್ಯಾಯಮಾನ ಕೆಲಸ.  ಹಲವರಿಗೆ ಹೊಟ್ಟೆ ತುಂಬಾ ಊಟ ಕೊಡುವ ಕಾರ್ಯ. 
ಇನ್ನು ಸತ್ಯಪ್ರಿಯರು. ನಂಬಿಕೆ ಉಳಿಸಿಕೊಳ್ಳುವಲ್ಲಿ ನಾನು ಹೆಸರಾದವರು. ಕಪಟ ಅರಿಯದವರು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವವರು. ಸ್ವಾಭಿಮಾನಿಗಳು. ಎಷ್ಟೇ ಕಷ್ಟ ಬಂದರೂ ಹೊರಗಿನ ಜನರಿಗೆ ಅದನು ತೋರಿಸಿ ಕೊಳ್ಳದೆ ತಾವೇ ಕಷ್ಟ ಪಡುವವರು. ಯಾರೊಡನೆಯೂ ಉಚಿತಕ್ಕಾಗಿ ಅಂಗಲಾಚದವರು. ತಾವಾಯಿತು ತಮ್ಮ ಬದುಕಾಯಿತು ಎಂದು ದಿನ ಕಳೆಯುವವರು. ಹೆಣ್ಣು ಮಕ್ಕಳನ್ನು , ಹೆಂಗಸರನ್ನು ಗೌರವಿಸುವವರು. ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಅಳಿಯಕಟ್ಟು ಸಂಪ್ರದಾಯ ರೂಢಿಸಿಕೊಂಡವರು.  ತಾಯಿ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವವರು .

ಹೀಗೆಯೇ ಅದರದೇ ಆದ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ, ವಿವಿಧತೆಯಲ್ಲಿ ಏಕತೆ ಮೆರೆವ ತುಳುನಾಡು ತುಳುಲಿಪಿಯನ್ನು ಹೊಂದಿದ್ದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡಾ ಒಂದಾಗಿದೆ. ಮಾತೃಭಾಷೆ ತುಳು ಆದರೂ ಕಲಿಯುವ ಭಾಷೆ ರಾಜ್ಯಭಾಷೆ. ಹಿಂದಿ , ಕನ್ನಡ, ಮಲಯಾಳಂ, ಕೊಂಕಣಿ ಬ್ಯಾರಿ ಭಾಷೆ ಇಲ್ಲಿನ ಜನ ತುಳುವಿನ ಜೊತೆಗೆ ಕಲ್. ಇಂತಹ ತುಳುನಾಡ ಜನ ಪ್ರಪಂಚದ ವಿವಿಧ ಭಾಗಗಳಲ್ಲಿ ಇದ್ದಾರೆ. ತುಳುನಾಡು, ತುಳು ಸಂಸ್ಕೃತಿ ಮೆರೆಯಲಿ, ಬೆಳೆಯಲಿ, ಬೆಳಗಲಿ ಎಂಬ ಸದಾಶಯಗಳು. ನೀವೇನಂತೀರಿ?
@ಹನಿಬಿಂದು@
11.10.2023

  

ಅವನ ಅಂತರಂಗ

ಅವನ ಅಂತರಂಗ

ಅದೇಕೋ ಬೇಡ ಬೇಡ ಎಂದರೂ
ನೀನೇ ಮನಸ್ಸಿಗೆ ಬಂದು ಕಾಡ್ತೀಯ ಕಣೆ 
ಮುದ್ದು ಮುಖದ ಹೊನ್ನ ನಗೆ ಕನ್ನಡಿಯಲ್ಲಿ
ನನ್ನೇ ನಾ ಕಾಣುವ ಹಾಗೆ..

ಆ ಬಟ್ಟಲು ಕಂಗಳ ಕಾಂತಿಯ
ಮಿಂಚಿನ ಒಳಗೂ ನನ್ನದೇ ಪ್ರತಿರೂಪ ಕಂಡಂತೆ
ಕನಸಲೂ ನೀನೇ ಮನದ ತುಂಬೆಲ್ಲಾ ನೀನೇ
ಅದ್ಯಾವ ಶಿಲ್ಪಿ ಕೆತ್ತಿ ಜೀವ ತುಂಬಿದರು ನಿನಗೆ

ಬರೆದಷ್ಟು ಪದ ಸಿಗದು
ಗೀಚಿದಷ್ಟು ಸಾಲು ಸಣ್ಣದು
ನಿನ್ನ ಅದು ಹೇಗೆ ಹೊಗಳಲಿ ಚೆಲುವೆ
ನನ್ನೊಡಲ ಕಾವ್ಯದೊಲವೆ

ನೀ ಒಮ್ಮೆ ಮನಸಾರೆ ನಕ್ಕರೆ 
ನನ್ನ ಹೃದಯ  ಬಾಯಿಗೆ ಬಂದಂತೆ
ನಿನ್ನ ಕಣ್ಣಿಂದ ಹನಿ ಮುತ್ತುಗಳು ಉದುರಿದರೆ
ನನ್ನ ನಾ ಮರೆತು ಹೋದಂತೆ

ಧರೆಯೊಳಗಿನ ಸುಖ ಸ್ವರ್ಗ ಸಂತೋಷ ನೀನೇ
ಪೊರೆಯೊಳಗಿನ ಹಾವಿನ ತೆರದಿ ಪೊರೆವೆ
ಮನದಾಳದ ಹೊಂಡದಿಂದ ಆಚೆ ತೆಗೆಯದೆ
ಎದೆ ಗುಡಿಯ ಗರ್ಭ ಗುಡಿಯಲ್ಲಿ ಇಟ್ಟು ಪೂಜಿಸುವೆ

ಮತ್ತೆ ಹಠ ಮಾಡದೇ ಬಾರೆ ಕನಸೇ
ಸತಾಯಿಸದೆ ನನ್ನ ಸೇರೆ ಮುಗಿಲೆ
ನೀರಿನಿಂದ ತೆಗೆದ ಮೀನಂತೆ ಚಡಪಡಿಸುತಿಹೆ
ಮನದ ಕದ ತೆರೆದಿಲ್ಲ ನೀ ಹೊರಗೆ ಓಡುವೆ ಎಂದು
@ಹನಿಬಿಂದು@
04.10.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 205



ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 205
   ಇನ್ನೊಂದು ವಾರದಲ್ಲಿ ನಾಡ ಹಬ್ಬ ದಸರಾ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಶಾಲೆಯಲ್ಲಿ ದಸರಾ ರಜೆ ಘೋಷಿಸಲಾಗಿದೆ. ಕಾನ್ವೆಂಟ್ ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಮುಂದಿನ ವಾರದಿಂದ ರಜೆ. ಇಂತಹ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಅಲ್ಲಿ ಇಲ್ಲಿ ಸುತ್ತಲೂ ಅದರ ಜೊತೆಗೆ ನದಿಗೆ ಸ್ನಾನಕ್ಕೆ ಹೋಗುವುದು, ತಮಗೆ ಗೊತ್ತಿಲ್ಲದ ಹೊಸ ಜಾಗದಲ್ಲಿ ನೀರಿನಾಳ ತಿಳಿಯದೆ ಈಜಾಡಲು ಹೋಗುವುದು ಹಾಗೆ ಗೊತ್ತಿಲ್ಲದ ರಸ್ತೆಯಲ್ಲಿ ಬಂಧುಗಳ ಮತ್ತು ಕಾರುಗಳನ್ನು ಪರವಾನಗಿಲ್ಲದೆ ಓಡಿಸುವುದು ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇವೆಲ್ಲ ಜೀವಕ್ಕೆ ಅಪಾಯ ತಂದುಕೊಡುವ ಕೆಲಸಗಳು. 
   ಯಾವುದೇ ವಿದ್ಯಾರ್ಥಿಯಾಗಲಿ 18 ವರ್ಷಕ್ಕಿಂತ ಮೊದಲು ಪರವಾನಗಿ ಇಲ್ಲದೆ ಯಾರ ವಾಹನಗಳನ್ನು ಓಡಿಸುವಂತಿಲ್ಲ ಹಾಗೆ ವಾಹನ ಕೊಟ್ಟವರ ಮೇಲೆ ದಂಡ ವಿಧಿಸಲಾಗುತ್ತದೆ. ಬೇರೆ ಊರಿಗೆ ಬಂದುಗಳ ಮನೆಗೆ ಹೋಗುವಾಗ ಅಲ್ಲಿ ಅವರ ಮೊಬೈಲ್ ಫೋನನ್ನು ತೆಗೆದುಕೊಂಡು ತಮಗೆ ಬೇಕಾದ ಹಾಗೆ ಸಿಕ್ಕಿಸಿದ್ದನ್ನೆಲ್ಲ ಒತ್ತಿ, ನೋಡಬಾರದ್ದನ್ನೆಲ್ಲ ನೋಡಿ ತಮ್ಮ ಬದುಕಿನಲ್ಲಿ ಹಾಳಾಗುವ ಮಕ್ಕಳು ಅದೆಷ್ಟೋ ಇದ್ದಾರೆ. ಪೋಷಕರು ಈ ಬಗ್ಗೆ ತುಂಬಾ ಜಾಗರೂಕರ ಆಗಿರಬೇಕು. ತಮ್ಮ ಮಕ್ಕಳನ್ನು ಬಂಧುಗಳೊಡನೆ ಬಿಡುವಾಗ ಅವರು ಯಾವ ರೀತಿಯ ಜನ ಅವರ ನಡತೆ ಇವುಗಳನ್ನೆಲ್ಲ ನೋಡಿ ಅವರ ಜೊತೆ ತಮ್ಮ ಮಕ್ಕಳನ್ನು ಬೆರೆಯಲು ಬಿಡಬೇಕು. ಅದರಲ್ಲೂ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿರುವ ಮಕ್ಕಳದ್ದು ಟೀನೇಜ್ ಮತ್ತು ಟರ್ನಿಂಗ್ ಪಾಯಿಂಟ್ ಆ ಸಮಯದಲ್ಲಿ ಕುತೂಹಲ ಹೆಚ್ಚಾಗಿರುತ್ತದೆ ಇಂತಹ ಸಮಯದಲ್ಲಿ ಮಗುವೊಂದು ದಾರಿ ತಪ್ಪಿದರೆ ತಾನೇನು ಮಾಡುತ್ತಿದ್ದೇನೆ ಎನ್ನುವಷ್ಟು ತಿಳುವಳಿಕೆ ಆ ವಯಸ್ಸಿನಲ್ಲಿ ಇರುವುದಿಲ್ಲ. ನಾನು ಹೇಗಾದರೂ ಬದುಕಬಲ್ಲೆ ನಾನೆನಾದರೂ ಮಾಡಬಲ್ಲೆ ನನ್ನ ಜೀವನವನ್ನು ನಾನು ಜೀವಿಸಬಲ್ಲೆ ಎನ್ನುವಂತಹ ಭಂಡ ಧೈರ್ಯ ಚಲನಚಿತ್ರಗಳನ್ನು ನೋಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ವಿದ್ಯಾರ್ಥಿಗಳಿಗೆ ಅನ್ನಿಸುತ್ತದೆ.
  ಪೋಷಕರು ಕೂಡ ಎಂತಹ ಸಮಯದಲ್ಲಿ ಬಹಳ ನಾಜ್ಯುಕಾಗಿ ಅವರನ್ನು ವಿಚಾರಿಸಿಕೊಳ್ಳಬೇಕು. ಸ್ವಲ್ಪ ಹೆಚ್ಚು ಕಡಿಮೆ ನಾವೇ ದೊಡ್ಡವರು ಎನ್ನುವ ಹಾಗೆ ವರ್ತಿಸುವ ಈ ಮಕ್ಕಳನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಥಳಿಸುವ ಹಾಗೂ ಇಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳು ಮತ್ತು ಟಿವಿಯ ನ್ಯೂಸ್ ಚಾನೆಲ್ ಗಳು ಸತ್ತ ಹೆಣಗಳನ್ನು ಮತ್ತು ಸಾಯುವ ವಿಧಾನವನ್ನು ಲೈವ್ ಆಗಿ ತೋರಿಸುತ್ತಿರುವುದರಿಂದ ಎರಡನೇ ತರಗತಿಯ ಮಗುವಿಗೂ ಸುಯಿಸೈಡ್ ಮಾಡಿಕೊಳ್ಳುವ ವಿಧಾನ ತಿಳಿದಿದೆ. ಹೆತ್ತವರನ್ನು ಬಗ್ಗಿಸಲು ಇದೊಂದೇ ವಿಧಾನ ಎಂದು ಮಕ್ಕಳು ಆಟವಾಡುವಂತೆ ಮಾಡಲು ಹೋಗಿ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ ಮಗುವಿನ ಪ್ರತಿಯೊಂದು ನಡವಳಿಕೆಯನ್ನು ತಿದ್ದುವಾಗಲು ಪ್ರತಿ ಹೆಜ್ಜೆಯಲ್ಲೂ ತುಂಬಾ ಜಾಗರೂಕರಾಗಿರಬೇಕು. ಸಾಯುವುದು ಸುಲಭ ಈಗಿನ ಜನಾಂಗಕ್ಕೆ, ಆದರೆ ಬದುಕುವುದು ಕಷ್ಟ. ಪೋಷಕರು ಓದು ಎಂದು ಒಂದೆರಡು ಮಾತನಾಡಿದರು ಕೂಡಾ ಮಕ್ಕಳು ಸಾಯಲು ಮುಂದೆ ಮುಂದೆ ನೋಡುವುದಿಲ್ಲ. ಸಾವು ಎನ್ನುವುದರ ಬಗ್ಗೆ ಭಯ ಬರುವ ಬದಲು ಫೈಟಿಂಗ್ ಸೀನನ್ನೇ ನೋಡುತ್ತಾ ಬೆಳೆದ ಮಕ್ಕಳ ಮನಸ್ಸಿನಲ್ಲಿ ಸಾವಿನ ಬಗ್ಗೆ ಭಯವಿಲ್ಲ.  ಬದಲಾಗಿ ತಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ಪೋಷಕರಿಗೆ ಬುದ್ಧಿ ಕಲಿಸುವ ಕೆಲಸದಲ್ಲಿ ತೊಡಗಿರುತ್ತಾರೆ ಅವರು. ಇನ್ನು ಮೇಲೆ ನಮಗೆ ಹೇಗೆ ಬುದ್ಧಿ ಹೇಳುತ್ತಾರೆ ನೋಡುತ್ತೇನೆ. ನಾನು ಬದುಕಿದ್ದರಲ್ಲವೇ ಇವರು ನನಗೆ ಬುದ್ಧಿವಾದ ಹೇಳುವುದು ಅಂದುಕೊಂಡು ಸಾವಿಗೆ ಸಿದ್ಧರಾಗುತ್ತಾರೆ. ತಮ್ಮ ಸಾವಿನ ಪರಿಣಾಮ ಪೋಷಕರಲ್ಲಿ ಹೇಗಿರಬಹುದು ಎಂಬುದನ್ನು ಅವರು ಎಂದು ಊಹೆ ಕೂಡ ಮಾಡುವುದಿಲ್ಲ. 
   ಆದ್ದರಿಂದ ರಜೆಯಲ್ಲಿ ಮಕ್ಕಳನ್ನು ಎಲ್ಲೇ ಹೊರಗೆ ಬಿಡುವಾಗ ಪೋಷಕರು ಬಹಳವೇ ಗಮನವಿಟ್ಟು ನೋಡಿಕೊಳ್ಳುತ್ತಿರಬೇಕು. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಕಣ್ಣಲ್ಲಿ  ಕಣ್ಣಿಟ್ಟು ನೋಡಿಕೊಳ್ಳಬೇಕು ಯಾಕೆಂದರೆ ಹೊರಗಡೆ ಪ್ರಪಂಚ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಗೆ ಬೇರೆ. ಅದು ಹೆಣ್ಣು ಮಕ್ಕಳೆಂದರೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಆಗಬೇಕೆಂದಿಲ್ಲ ಇತ್ತೀಚೆಗೆ ನಾವು ನೋಡುವಂತಹ ಮಾಧ್ಯಮಗಳಲ್ಲಿ ಓದುವಂತಹ ಪತ್ರಿಕೆಗಳಲ್ಲಿ ಬಂದಂತಹ ವಿಚಾರಗಳನ್ನು ನೋಡುವಾಗ ಸಣ್ಣ ಮಗುವಿನ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಹೆಂಗಸರನ್ನು ಕಾಮದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಎಂದು ಕರೆಸಿಕೊಳ್ಳುತ್ತಿದ್ದವರು ಮಾತ್ರ.  ಆದರೆ ಇಂದು ಇಡೀ ಸಮಾಜವೇ ಪಡ್ಡೆಯಾಗಿಬಿಟ್ಟಿದೆ ಏನೋ ಅನ್ನಿಸುತ್ತದೆ. ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡಿದ್ದರು ಕೂಡ ಅರ್ಧ ರಾತ್ರಿಯಲ್ಲಿ ಹೆಣ್ಣು ಮಕ್ಕಳು ಓಡಾಡುವ ಸ್ವಾತಂತ್ರ್ಯ ಭಾರತದಲ್ಲಿ ಸಿಗಬೇಕು ಎನ್ನುವ ನಂಬಿಕೆ ಅವರಿಗಿದ್ದರೂ ಕೂಡ ಇಂದು ಅಂತಹ ಯಾವುದೇ ನಂಬಿಕೆಯು ಸತ್ಯವಾಗಲಿಲ್ಲ. ಕಾರಣ ರಾತ್ರಿಯೆ ಏನು ಹಗಲಲ್ಲಿ ಕೂಡ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಓಡಾಡುವುದು ಬಹು ಕಷ್ಟದ ವಿಚಾರ. ಮದಿರೆ ಒಂದು ಕಡೆಯಾದರೆ ಹಲವಾರು ರೀತಿಯ ಬೇಡದ ವಿಷ ಪದಾರ್ಥಗಳು ಮನುಷ್ಯನ ಜೀವನದಲ್ಲಿ ನಶೆಯನ್ನು ಹೆಚ್ಚಿಸಲು ಇಂದು ಲಭ್ಯವಿದೆ. ಅದಕ್ಕೆಲ್ಲ ಮತ್ತೇನು ಬೇಡ ಹಣ ಇದ್ದರೆ ಆಯ್ತು. ಹಿಂದಿನ ಕಾಲದಲ್ಲಿ ಜನರಿಗೆ ಹಣ ಮಾಡುವುದು ಕಷ್ಟವಿತ್ತು ಆದರೆ ಇಂದು ಕಸದಲ್ಲೂ ಕೂಡ ಹಣ ತೆಗೆಯುವವರಿದ್ದಾರೆ. ಹಾಗಾಗಿ ಎಲ್ಲಾ ಕಡೆ ಸಿಗುತ್ತದೆ ಹಣದ ಜೊತೆಗೆ ಬೇಡದ ವಸ್ತುಗಳು ಕೂಡ ನಮ್ಮನ್ನು ಹುಡುಕಿಕೊಂಡು ಬಂದು ಹಾಳು ಮಾಡುತ್ತವೆ. ಗಂಡಸರು ಮಾತ್ರವಲ್ಲ ಹೆಣ್ಣು ಮಕ್ಕಳು ಕೂಡ ಇಂತಹ ನಶೆಯ ವಿಷ ವಸ್ತುವಿಗೆ ದಾಸರಾಗಿ ತಮ್ಮ ಬಟ್ಟೆಗಳನ್ನೆಲ್ಲ ಬಿಚ್ಚಿ ನಡು ರಸ್ತೆಯಲ್ಲಿ ಓಡಾಡುವ ದೃಶ್ಯವನ್ನು ಕೂಡ ನಾವು ಮಾಧ್ಯಮಗಳ ಮೂಲಕ ತಿಳಿದುಕೊಂಡವರಾಗಿದ್ದೇವೆ. 
   ಕೆಲವೊಮ್ಮೆ ನನಗೆ ಕನ್ಫ್ಯೂಸ್ ಆಗುತ್ತದೆ ನಾವು ಮುಂದುವರಿಯುತ್ತಿರುವ ದೇಶದಲ್ಲಿದ್ದೇವೆಯೋ ಅಥವಾ ಮತ್ತೆ ಹಿಂದೆ ಹಿಂದೆ ಹೋಗುತ್ತಿದ್ದೇವೆಯೋ ಎಂದು! ವಿದ್ಯೆ ಬುದ್ಧಿ ಹೆಚ್ಚಿದಷ್ಟೂ ಮಾನವನ  ಕಳ್ಳತನ, ಕೊಲೆ, ಸುಲಿಗೆ ಹೆಚ್ಚಿದೆ. ಪರಿಸರ ನಾಶದ ಪ್ರಮಾಣವನ್ನು ಅತ್ಯಧಿಕವಾಗಿದೆ. ನಮ್ಮನ್ನು ನಾವೇ ಸರಿ ಮಾಡಬೇಕು ಅಲ್ಲದೆ ಬೇರೆ ಯಾರಿಲ್ಲ, ನೀವೇನಂತೀರಿ?
@ಹನಿಬಿಂದು@
07.10.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

          ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

ಮಕ್ಕಳಿಗೆ ಶಾಲೆಯಲ್ಲಿ ಭಾಷೆ ಮತ್ತು ವಿಜ್ಞಾನ ಶಿಕ್ಷಕರು ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಮಣ್ಣಿನ ಮಾಲಿನ್ಯ ಇವುಗಳ ಬಗ್ಗೆ ತಿಳಿಸಿ ಹೇಳಿ ಕೊಡುತ್ತಾರೆ, ಹಾಗೆಯೇ ಅವರಿಂದ ಬೇರೆ ಬೇರೆ ಮಾಡೆಲ್ ರಚನೆ ಮಾಡಿಸಿ ಅವು ಹೇಗೆ ಆಗುತ್ತವೆ ಎಂಬುದನ್ನು ಹೇಳುತ್ತಾರೆ. ಪರಿಹಾರ ಎಲ್ಲರೂ ಹೇಳಿ ಕೊಟ್ಟರೂ ಕೊಡದೆ ಇದ್ದರೂ ಅದು ಒಂದೇ. ಕಾಡು ಬೆಳೆಸಿ, ನಾಡು ಉಳಿಸಿ! ಆದರೆ ಈ ಎಲ್ಲಾ ಮಾಲಿನ್ಯಗಳಿಗಿಂತ  ಭೀಕರ ಮಾಲಿನ್ಯ ಒಂದು ಇಡೀ ಪ್ರಪಂಚದಾದ್ಯಂತ ಆಗುತ್ತಿದೆ. ಅದನ್ನು ಯಾರೂ ಗಮನಿಸಿದಂತೆ ಕಾಣುತ್ತಿಲ್ಲ. 
      ಪ್ರತಿ ಮಕ್ಕಳೂ ಕೂಡ ನ್ಯಾರೋ ಮೈಂಡೆಡ್ ಆಗುತ್ತಿದ್ದಾರೆ. ನಾನು, ನನ್ನದು, ನನ್ನದು ಮಾತ್ರ. ಸ್ನೇಹಿತರ ಜೊತೆ ನೀರು, ಸ್ನಾಕ್ಸ್ ಶೇರ್ ಮಾಡುವುದು ಶಾಲೆಯಲ್ಲಿ ತಪ್ಪು. ಕರೋನ ಪರಿಣಾಮ. ಹಂಚಿ ತಿಂದರೆ ಹಸಿವಿಲ್ಲ ಎಂಬ ಗಾದೆ ಮಾತು ಇಂದಿನ ಯುಗಕ್ಕೆ ಅನ್ವಯಿಸುವುದಿಲ್ಲ. ಕಾರಣ ಹಂಚಿ ತಿಂದರೆ ಸಾಂಕ್ರಾಮಿಕ ರೋಗ ಇಂದು. ಕೈ ಕುಲುಕಿದರೂ ರೋಗ ಬರುವ ಕಾಲದಲ್ಲಿ ಒಬ್ಬ ನೀರು ಕುಡಿದ ಬಾಟಲಿಯಿಂದ ಮತ್ತೊಬ್ಬ ನೀರು ಕುಡಿಯುವ ಹಾಗಿಲ್ಲ. ಒಬ್ಬ ತಿಂದ ಬುತ್ತಿಯ ತುತ್ತು ಮತ್ತೊಬ್ಬರ ಜೊತೆ ಹಂಚಿ ತಿನ್ನುವ ಹಾಗಿಲ್ಲ. ಪ್ಲಾಸ್ಟಿಕ್ ಬ್ಯಾನ್ ಆದ ಪರಿಣಾಮ ಅದರ ಮೇಲೂ ಹಬ್ಬದೆ ಇರುವುದೇ?
             ಇನ್ನು ನಾವೆಲ್ಲಾ ಹಾಸ್ಟೆಲ್ ನಲ್ಲಿ ಓದುತ್ತಿದ್ದಾಗ ನಮ್ಮ ಬಳಿ ಸರಿಯಾದ ಬಟ್ಟೆಗಳು ಇರಲಿಲ್ಲ. ಹಾಸ್ಟೆಲ್ ನ ಗೆಳತಿಯರು ಅವರ ಬಟ್ಟೆಗಳನ್ನು ನಮಗೆ ತೊಡಿಸಿ ಕಾಲೇಜಿನ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ನೆರವಾಗುತ್ತಿದ್ದರು. ಯಾರದೇ ಗೆಳತಿಯರ ಬಟ್ಟೆಯಾಗಲಿ ಅದನ್ನು ನಾವು ನಮ್ಮದೇ ಎನ್ನುವಂತೆ ಉಪಯೋಗಿಸುತ್ತಿದ್ದೆವು. ಅಥವಾ ನಮ್ಮ ಬಟ್ಟೆಗಳಿದ್ದರೆ ಅವರು ಕೂಡ ಅದನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಬೇಕಾದಂತೆ ಉಪಯೋಗ ಮಾಡಿಕೊಳ್ಳುತ್ತಿದ್ದರು. ನಾವೆಲ್ಲ ಒಂದೇ ಮನೆಯವರ ಹಾಗೆ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾ ಬದುಕುತ್ತಿದ್ದೆವು. ಆ ಸಹಾಯ ಸಹಕಾರ ಮುಂದೆಯೂ ಕೂಡ ನಮ್ಮ ಜೀವನದಲ್ಲಿ ಅಚ್ಚಳಿಯದೆ ನಿಂತು ಯಾವಾಗ ಅವರು ಸಿಕ್ಕಿದರು ಕೂಡ ಅವರು ನಮ್ಮ ಮನೆಯವರು ಎಂಬಂತೆ ಭಾಸವಾಗುವುದಲ್ಲದೆ ಅವರ ಮೇಲಿನ ನಮ್ಮ ಪ್ರೀತಿ ಎಂದಿಗೂ ಕೂಡ ಎಂದು ಕಡಿಮೆ ಆಗಲಿಲ್ಲ. ಕುಟುಂಬದ ಹಾಗೆ ಸ್ನೇಹಿತರು ಕೂಡ ಎಂಬ ಪ್ರೀತಿ ವಾತ್ಸಲ್ಯವನ್ನು ಬೆಳೆಸಿಕೊಂಡು ಬಂದವರು ನಾವು. 
  ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ಪ್ರೀತಿ ವಾತ್ಸಲ್ಯವನ್ನು ನಾವು ಕಾಣಲು ಸಾಧ್ಯವಿಲ್ಲ. ಗೆಳೆಯರು ಅಂದರೆ ತಕ್ಷಣಕ್ಕೆ ಆ ಕಾಲದಲ್ಲಿ ಮಾತ್ರ. ಮುಂದಿನ ದಿನಗಳಲ್ಲಿ ಅವರ್ಯಾರು ಇವರ್ಯಾರು ಅವರ ಪರಿಚಯ ಇವರಿಗಿದ್ದರೂ ಕೂಡ ಇವರು ಅವರನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ ಮತ್ತು ಅವರು ಇವರನ್ನು ಬಹಳವಾಗಿ ಹಚ್ಚಿಕೊಳ್ಳುವ ವಿಷಯವೇ ಇಲ್ಲ. ಅವರ ಜೊತೆಗಿರುವಷ್ಟು ದಿನ ಮಾತ್ರ ಪ್ರಾಧಾನ್ಯತೆ. ಅದು ಗೆಳೆತನಕ್ಕೆ ಮಾತ್ರವಾಗಿ ಉಳಿದಿಲ್ಲ ಸಂಬಂಧಕ್ಕೂ ಹಾಗೆ ಆಗುತ್ತಿದೆ. ಪೋಷಕರೆಂದರೆ ಅವರನ್ನು ಹೆತ್ತು ಹೊತ್ತು ಬೆಳೆಸಿ ಓದಿಸಿ ಒಂದು ಹಂತದವರೆಗೆ ತಂದು ನಿಲ್ಲಿಸುವವರೆಗೆ ಮಾತ್ರ ಅವರ ಜವಾಬ್ದಾರಿ. ತದನಂತರ ಬದುಕಿನಲ್ಲಿ ಸಂಗಾತಿಯ ಆಯ್ಕೆಯನ್ನು ಮಾಡಬೇಕೆಂದರೆ ಹೆಚ್ಚಿನವರು ಅವರವರೇ ತಮ್ಮ ಸಂಗಾತಿಯ ಆಯ್ಕೆಯನ್ನು ತಮಗೆ ಬೇಕಾದ ಹಾಗೆ ಮಾಡಿಕೊಂಡಿರುತ್ತಾರೆ ಮತ್ತು ಹಿರಿಯರು ಏನಾದರೂ ಅದಕ್ಕೆ ವಿರುದ್ಧವಾಗಿ ಮಾತನಾಡಿದರೆ ಮನೆಯನ್ನು ಬಿಟ್ಟು ತಮ್ಮ ಸಂಗಾತಿ ಜೊತೆ ಸೇರಿಕೊಂಡು ಬಿಡುತ್ತಾರೆ. ಇದು ಇಂದಿನ ಬದುಕಿನ ಪದ್ಧತಿ, ದುಡಿಯುವಾಗಲು ಹಾಗೆಯೆ ದುಡಿಯುತ್ತಿರುವ ಕಂಪನಿಯನ್ನು ಬಿಟ್ಟು ನಾಲ್ಕಾರು ದಿನಕ್ಕೊಮ್ಮೆ ಹೊಸ ಕಂಪನಿಗೆ ಬದಲಾಯಿಸುತ್ತಿರುತ್ತಾರೆ. ಅಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅಥವಾ ಸಂಬಳ ಕಡಿಮೆಯಾದರೆ ಹೆಚ್ಚು ಸಂಬಳವಿರುವ ಇನ್ನೊಂದು ಕಂಪನಿಗೆ ಹೋಗಿ ಕೆಲಸ ಮಾಡುತ್ತಾರೆ. ಇಷ್ಟು ದಿನ ನನಗೆ ಅನ್ನ ಕೊಟ್ಟ ಕಂಪನಿದು ಇದಕ್ಕೆ ನಾನು ನನ್ನ ಕೆಲಸವನ್ನು ನಾನು ಮಾಡಬೇಕು ಸೇವೆಯನ್ನು ಅರ್ಪಣೆ ಮಾಡಬೇಕು ಈ ರೀತಿಯ ಯಾವುದೇ ಭಾವನಾತ್ಮಕ ಸಂಬಂಧಗಳು ಈಗಿನ ಕಾಲದಲ್ಲಿ ಇಲ್ಲ. ಹಿಂದಿನ ಕಾಲದಲ್ಲಿ ಲ್ಯಾಂಡ್ ಲಾರ್ಡ್ಸ್ ಅಥವಾ ಗದ್ದೆ ತೋಟಗಳು ಹೆಚ್ಚು ಇರುವವನ ಮನೆಯಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿದ್ದ ಹಲವಾರು ಜನರು ವರ್ಷಂ ಪ್ರತಿ ಒಂದೇ ಮನೆಯಲ್ಲಿ ದುಡಿದು ಅವರಿಂದ ಸಂಬಳವನ್ನು ಪಡೆದು ಅವರ ಕಷ್ಟಕಾಲದಲ್ಲಿ ಸಂಬಳ ಇಲ್ಲದೆಯೂ ದುಡಿಯುವಂತಹ ಕ್ರಮವಿತ್ತು. ಕೆಲಸ ಮಾಡಿಸಿಕೊಳ್ಳುವವರು ಅಷ್ಟೇ ತಮ್ಮ ಕೆಲಸಗಾರರ ಬದುಕಿನಲ್ಲಿ ಏನಾದರೂ ಕಷ್ಟಗಳು ಅಥವಾ ತೊಂದರೆಗಳು ಬಂದಾಗ ಅವರು ಕೂಡ ಸಹಾಯ ಮಾಡುತ್ತಿದ್ದರು ಅದು ಧನಸಹಾಯವೇ ಇರಬಹುದು ಅಥವಾ ಬೇರೆ ಏನಾದರೂ ವಸ್ತುಗಳ ರೂಪದಲ್ಲಿ ಸಹಾಯವನ್ನು ಮಾಡುತ್ತಿದ್ದರು. ಈ ರೀತಿಯ ಕೊಡುಕೊಳ್ಳುವಿಕೆಯ ಸಹಾಯದಿಂದಾಗಿ ಅವರೆಲ್ಲರೂ ಹತ್ತಿರವಾಗಿರುತ್ತಿದ್ದರು. ಇದು ಸಮಾಜದಲ್ಲಿ ಭಾವನಾತ್ಮಕ ಬೆಸುಗೆಯನ್ನು ಪ್ರಾರಂಭಿಸಿತ್ತು. ಆದರೆ ಇಂದು ಹಾಗಿಲ್ಲ ಎಲ್ಲರನ್ನೂ ಹಣದ ರೂಪದಲ್ಲಿ ಅಳೆಯುತ್ತಾರೆ. ಅದರಿಂದಾದರೂ ಯಾವುದಾದರೂ ಸಹಾಯ ಬೇಕಿದ್ದಲ್ಲಿ ಅವರು ಹಣ ಕೊಟ್ಟೆ ಅದನ್ನು ಖರೀದಿಸಬೇಕು. ಹಣ ಪಡೆದುಕೊಂಡ ಮೇಲೆ ಅವರಿಬ್ಬರಿಗೂ ಯಾವುದೇ ರೀತಿಯ ಭಾವನಾತ್ಮಕತೆ ಇರುವುದಿಲ್ಲ. ಇದನ್ನೇ ಬಿಜಿನೆಸ್ ಮೈಂಡ್ ಎನ್ನುತ್ತಾರೆ. ಇದು ಪಾಶ್ಚಾತ್ಯರ ಸಂಸ್ಕೃತಿ. ಭಾರತವು ಪ್ರೀತಿ ಸ್ನೇಹ ಹೊಂದಾಣಿಕೆ ಸರ್ವೇ ಜನ: ಸುಖಿನೋ ಭವಂತು ಎನ್ನುವ ಭಾವನಾತ್ಮಕತೆಗೆ ಹೆಚ್ಚು ಒತ್ತು ಕೊಡುವ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. 
     ಆದ್ದರಿಂದ ಈಗ ನಾವು ಮನಸ್ಸಿನ ಮಾಲಿನ್ಯವಾಗಿದೆ ಎಂದು ಹೇಳಬಹುದು. ಯಾವುದೇ ಅಪಘಾತವಾಗಿ ಯಾರಾದರೂ ಕೆಳಗೆ ಬಿದ್ದಿದ್ದರೆ ಅವರನ್ನು ಸಂತೈಸುವ ಅಥವಾ ಅವರಿಗೆ ಸಹಾಯ ಮಾಡುವ ಯಾವುದೇ ಸಹಾಯ ಹಸ್ತವನ್ನು ನಾವೆಗಾ ಕಾಣಲಾರೆವು. ಯಾಕೆಂದರೆ ಅವರವರ ಕೆಲಸ ಅವರವರಿಗೆ ಬೇರೆಯವರನ್ನು ನೋಡುವ , ಅವರಿಗೆ ಸಹಾಯ ಮಾಡುವ ಮತ್ತು ಅವರಿಗೆ ಏನಾದರೂ ಬೇಕಾದನ್ನು ಕೊಡುವಂತಹ ವ್ಯವದಾನ , ಸಮಯ,  ಕಾಲ ಯಾರಿಗೂ ಈ ಸಮಯದಲ್ಲಿ ಇಲ್ಲ. ಏನಿದ್ದರೂ ನಾನು , ನನ್ನ ಕೆಲಸ,  ನನ್ನ ಕುಟುಂಬ,  ನನ್ನ ಮಕ್ಕಳು , ನನ್ನ ಜವಾಬ್ದಾರಿಗಳು ಇವಿಷ್ಟೇ ಇಂದಿನ ಜೀವನದ ಮೂಲತತ್ವಗಳು. ಯಾರೋ ಅಲ್ಲಿಲ್ಲಿ ಒಂದಿಬ್ಬರು ಸಮಾಜ ಸೇವೆ ಎಂದು ಕಷ್ಟಪಟ್ಟು ಪರರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡಿ ಯಾರು ಬಿಟ್ಟರೆ ಉಳಿದವರು ಯಾರು ಈ ಕೆಲಸಕ್ಕೆ ಹೋಗುವುದಿಲ್ಲ. ಪರರೇನಾದರೂ ಸಹಾಯ ಕೇಳಿದರೆ ನಮ್ಮ ಸಮಯ ವ್ಯರ್ಥವಾಗುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಹೋದರೆ ನಮ್ಮ ಹಣವು ಖರ್ಚಾಗುತ್ತದೆ ಎಂದು ಯೋಚನೆ ಮಾಡುವ ಜನರೇ ಹೆಚ್ಚು. ಹೋಗುತ್ತಾ ಇರುವಾಗ ದಾರಿಯಲ್ಲಿ ಬಂಧುಗಳ ಮನೆ ಸಿಕ್ಕಿದರು ಇಂದಿನವರು ಅಲ್ಲಿ ನಿಲ್ಲಿಸಿ ಮಾತನಾಡಿ ಬರುವುದು ತೀರಾ ವಿರಳ.  ಕಾರಣ ಸಮಯದ ಅಭಾವ. 
    ಮನಸ್ಸು ಮತ್ತು ಆಲೋಚನೆಗಳಲ್ಲಿ ವಿಶಾಲ ಭಾವ ಮೂಡಿ ಆ ವಿಶಾಲ ಭಾವದಲ್ಲಿ ಎಲ್ಲರೂ ನಮ್ಮವರು ತಮ್ಮವರು ನಾವು ಸಹಾಯ ಮಾಡಬೇಕು ಪರರೂ ಕೂಡ ನಮ್ಮಂತೆ ಮುಂದೆ ಬರಬೇಕು ಎಂಬ ಭಾವನೆಗಳು ಜನರಲ್ಲಿ ಯಾವಾಗ ಮೊಳಕೆ ಒಡೆಯಲು ಪ್ರಾರಂಭಿಸುತ್ತದೆಯೋ ಅಂದು ದೇಶದ ಉದ್ದಾರ ಪ್ರಾರಂಭವಾಗುತ್ತದೆ. ನಾನು ಬದುಕಿ ಪರರನ್ನು ಬದುಕಲು ಬಿಡಬೇಕು ಎಂಬ ಭಾವನೆ ಬಂದಾಗ ಮಾತ್ರ ದೇಶ ಕಟ್ಟುವ ಕಾರ್ಯ ಮುಂದುವರಿಯುತ್ತದೆ. ನಾನು ನನ್ನ ಹೆಂಡತಿ ನನ್ನ ಮಗು ನನ್ನ ಮನೆ ನನ್ನ ಪರಿಸರ ಇದಿಷ್ಟೇ ಬಂದಾಗ ನನ್ನ ದೇಶ ನನ್ನ ರಾಜ್ಯ ನಮ್ಮ ಭೂಮಿ ಎನ್ನುವ ವಿಶಾಲವಾದ ಆಲೋಚನೆಗಳು ಬದಿಗೆ ನಿಲ್ಲುತ್ತವೆ. ಭಾರತ ಸ್ವತಂತ್ರವಾಗಬೇಕಾದರೆ ಅದೆಷ್ಟೋ ಮಾತೆಯರು ತಮ್ಮ ಮಕ್ಕಳ ಜೀವವನ್ನು ಅದಕ್ಕೆ ಬಲಿ ಕೊಟ್ಟಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಬಲಿಕೊಟ್ಟು ತಮ್ಮ ಮಕ್ಕಳ ಜೀವನವನ್ನು ಒತ್ತೆ ಇಟ್ಟು ದೇಶಕ್ಕಾಗಿ ವೀರ ಮರಣವನ್ನು ಅಪ್ಪಿಕೊಂಡಿದ್ದಾರೆ. ಅವರೆಲ್ಲ ತಮ್ಮ ಕುಟುಂಬ ತಮ್ಮ ಮಕ್ಕಳು ತಮ್ಮ ಮಡದಿಯರು ಎಂದು ಯೋಚನೆ ಮಾಡಿದ್ದಿದ್ದರೆ ಸ್ವಾತಂತ್ರ್ಯ ಹೋರಾಟದ ಸಂಗ್ರಾಮವೂ ಆಗುತ್ತಿರಲಿಲ್ಲ , ಹಲವಾರು ದಂಗೆಗಳು ನಡೆಯುತ್ತಿರಲಿಲ್ಲ , ಭಾರತಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. 
  ಇಂದಿನ ಜಾತಿ ರಾಜಕೀಯಗಳು ಹಣ ಮಾಡುವ ದಂದೆಗಳು , ರಾಶಿ ರಾಶಿ ಮೂಟೆಗಟ್ಟಲೆ , ಕೋಟಿಗಟ್ಟಲೆ, ಹಣವನ್ನು ಒಬ್ಬನೇ ತಿಂದು ತೇಗುವ, 35 ರಿಂದ 40 ತಲೆಮಾರುಗಳಿಗೆ ಬೇಕಾಗುವಷ್ಟು ಹಣವನ್ನು ಇಂದೇ ಕೂಡಿಟ್ಟು ತಾನು ಸತ್ತರೂ ಪರವಾಗಿಲ್ಲ ತಮ್ಮ ಮುಂದಿನ ಪೀಳಿಗೆಯ ಸರಿ ಇರಬೇಕು ಎಂದು ಯೋಚನೆ ಮಾಡುವಂತ ಮನುಷ್ಯನು ತನ್ನ ಸುಖವನ್ನು ಮಾತ್ರ ಬಯಸಿ ಪರರಿಗೆ ನೋವು ಕೊಡುವವನು ಹೇಗೆ ತಾನೇ ಸ್ವರ್ಗಕ್ಕೆ ಹೋಗಲು ಸಾಧ್ಯ? ಚೆನ್ನಾಗಿ ಒಳ್ಳೆಯ ಆಲೋಚನೆ ಮಾಡುತ್ತಾ ಸರ್ವರಿಗೂ ಸುಖವನ್ನು ಕೊಡುತ್ತಾ ಸರ್ವರ ಬಗ್ಗೆಯೂ ಯೋಚನೆ ಮಾಡುತ್ತಾ ಬದುಕು ಅವನಿಗೆ ಭೂಲೋಕವೇ ಸ್ವರ್ಗವಂತೆ. ಇನ್ನು ಮೋಸ, ವಂಚನೆ, ಹಗೆತನ, ದ್ವೇಷ , ಹೊಟ್ಟೆಕಿಚ್ಚು , ರಾಕ್ಷಸತನ ಇವುಗಳನ್ನೇ ಬದುಕಿನಲ್ಲಿ ಮೆಚ್ಚಿಕೊಂಡವನಿಗೆ ಇಲ್ಲು ನರಕ ಸತ್ತ ಮೇಲೂ ನರಕ ಅಲ್ಲವೇ?
  ಬದುಕಿನಲ್ಲಿ ಸಾಧ್ಯವಾದರೆ ನಾಲ್ಕು ಜನಕ್ಕೆ ಸಹಾಯ ಮಾಡೋಣ. ಅಸಾಧ್ಯ ಎಂದಾದರೆ ಸುಮ್ಮನಿದ್ದು ಬಿಡೋಣ. ಪರರಿಗೆ ಉಪದ್ರ ಮಾಡದೇ ಇರೋಣ. ಇತರರನ್ನು ನಿಂದಿಸಲು ,ಜಗಳವಾಡಲು , ಬೇಸರ ಮಾಡಲು,  ಬರದ ಕಣ್ಣಲ್ಲಿ ದುಃಖ ತರಲು,  ಕಣ್ಣೀರನ್ನು ತರಲು ನಾವು ಈ ಭೂಮಿಗೆ ಬರಲಿಲ್ಲ . ದೇವರು ನಮ್ಮನ್ನು ಈ ಭೂಮಿಗೆ ಒಂದು ಉತ್ತಮ ಕಾರ್ಯಕ್ಕಾಗಿ ಕಳಿಸಿದ್ದಾನೆ.  ಆ ಕಾರ್ಯವನ್ನು ಮಾಡುತ್ತಾ,  ನಮ್ಮ ಈ ಜನ್ಮವನ್ನು ಸಾರ್ಥಕ ಗೊಳಿಸಿಕೊಳ್ಳೋಣ.  ನಮ್ಮ ಮನಸ್ಸಿನ ಮಾಲಿನ್ಯವನ್ನು ನಾವೇ ಸರಿಪಡಿಸಿಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
30.09.2023





ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -203

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -203

       ಹಿಂದಿನ ದಿನಗಳ ನೆನೆಸಿಕೊಂಡರೆ ಕೆಲವೊಮ್ಮೆ ನಗು ತರಿಸುತ್ತದೆ, ಇನ್ನೂ ಕೆಲವೊಮ್ಮೆ ಕ್ಯೂರಿಯಾಸಿಟಿಯ ಬಗ್ಗೆ ನೆನಪಾಗುತ್ತದೆ. ಸಾಧಾರಣವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಅದರಲ್ಲೂ ಹಳ್ಳಿಯಲ್ಲಿ ಹುಟ್ಟಿದ ಮಕ್ಕಳಿಗೆ ಈ ಕಾತರ, ಬೇಸರ, ಕಾಯುವಿಕೆಯ ಅನುಭವ ಇರಬಹುದು. 
    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
  ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು..
ಮುಂದೆ...
ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ...
ಹೌದು, ಅಮ್ಮಂದಿರು ಪ್ರತಿ ತಿಂಗಳು ಆ ಮುಟ್ಟಿನ ದಿನಗಳಲ್ಲಿ ಅಡುಗೆ ಮನೆ ಹಾಗೂ ಮಲಗುವ ಕೋಣೆ, ದೇವರ ಕೋಣೆ, ಒಳಗಿನ ಕೋಣೆಗಳಿಗೆ ಬರುವ ಹಾಗೆ ಇರಲಿಲ್ಲ. ಬದಲಾಗಿ ಹೊರಗಿನ ಕೋಣೆ ಅಥವಾ ಕೊಟ್ಟಿಗೆಯಲ್ಲಿ ಇರಬೇಕಿತ್ತು. ಅವರಿಗೆ ಅಲ್ಲಿಗೇ ಊಟ ತಿಂಡಿ ಸಪ್ಲೈ ಮಾಡುತ್ತಿದ್ದರು. ಅತ್ತೆ ಅತ್ತಿಗೆ ನಾದಿನಿ ಯಾರೂ ಇಲ್ಲದ ಮನೆಯಲ್ಲಿ, ಮಕ್ಕಳು ಇಲ್ಲದಾಗ ಗಂಡನೇ ಕುಕ್! ಆಗ ಹೆಚ್ಚಿನ  ಎಲ್ಲಾ  ಗಂಡಸರೂ ಅಡುಗೆ ಅಲ್ಪ ಸ್ವಲ್ಪ ಆದರೂ ಕಲಿತಿರುತ್ತಿದ್ದರು. ಕಲಿಯದೆ ಇದ್ದವರ, ಸೋಮಾರಿಗಳ ಆ ಎರಡು ದಿನದ ಪಡಿಪಾಟಲು ಹೇಳ ತೀರದು.
ಉಪ್ಪಿಲ್ಲ, ಮೆಣಸಿಲ್ಲ, ದಾಲ್ಚಿನ್ನಿ ಚೂರಿಲ್ಲ
ಏನ್ ಮಾಡಲಿ ನಾನು ಏನ್ ಮಾಡಲಿ . ಎನ್ನುತ್ತಾ ಕೈಗೆ ಸಿಕ್ಕಿದ್ದು ಹಾಕಿ ಏನೋ ಒಂದು ಮಾಡಿ, ಮೂರು ದಿನಗಳ ಬಳಿಕ ಒಳ ಬಂದ ಮಡದಿಗೆ ಇಡೀ ದಿನ ತಳ ಸುಟ್ಟು ಹಾಕಿದ ಪಾತ್ರೆಗಳನ್ನು ತೊಳೆಯುವುದೇ ಕೆಲಸ. ಅಡುಗೆ ಮನೆ ಸ್ವಚ್ಚ ಮಾಡಲು ಒಂದೆರಡು ದಿನಗಳೇ ಬೇಕಿತ್ತು. ಯಾರು ಮಾಡಿರುವರೋ ಈ ರೂಲ್ ಅಂತ ಬೇಸತ್ತು ಕ್ಲೀನ್ ಮಾಡುವ ಸರದಿ ಮಹಿಳೆಯರದ್ದು ಆಗಿತ್ತು! ಮತ್ತೆ ಉಳಿದ ಕೋಣೆಗಳ ಸ್ವಚ್ಛತೆ. ಬೆಡ್ ಶೀಟ್, ಬೆಡ್ ಸ್ಪ್ರೆಡ್ ಚಾಪೆ ಎಲ್ಲಾ ತೊಳೆದು ಒಣಗಿಸುವ ಕಾರ್ಯಕ್ರಮ! ಎರಡು ದಿನವಪ್ಪ ಹೇಗೆ ಹೇಗೋ ಬೇಯಿಸಿ ಮಾಡಿದ ಅಡುಗೆ ತಿಂದು ಬೇಸತ್ತ ಮಕ್ಕಳು(ಆಗ ಈಗಿನ ಹಾಗೆ ನೂಡಲ್ಸ್, ಪಾಸ್ತಾ ಇರಲಿಲ್ಲ!) ಅದೇ ಮನೆ ಊಟ, ಉತ್ತಮ ಗಾಳಿ, ಉತ್ತಮ ಆರೋಗ್ಯ, ಎರಡೇ ಒಲೆಯ ಅಡುಗೆ! (ಈಗೆಲ್ಲಾ ಅರ್ಜೆಂಟಿನ ಅಡುಗೆ ಮಾಡಲು ಮೂರು ನಾಲ್ಕು ಒಲೆಯ ಸ್ಟವ್ ಬಂದಿವೆ ಅಲ್ಲವೇ?) ಅಮ್ಮ ಅಲ್ಲಿ ಉಫ್ ಅಂತ ಊದುವುದು ಕೇಳಿ ಬರುತ್ತಿತ್ತು. 
   ವೈಜ್ಞಾನಿಕವಾಗಿ  ಆಲೋಚನೆ ಮಾಡುವುದಾದರೆ ಅಂತಹ ಸಮಯದಲ್ಲಿ ದೈಹಿಕವಾಗಿ ತುಂಬಾ ಸುಸ್ತು, ಸಂಕಟ ಆಗುತ್ತದೆ. ಹಿಮೋಗ್ಲೋಬಿನ್ ಕಡಿಮೆ ಆಗುವ ಕಾರಣ ಕಷ್ಟದ ಕೆಲಸ ಸಾಧ್ಯ ಆಗುವುದಿಲ್ಲ. ಯಾವುದೇ ಕೆಲಸ ಮಾಡದೆ ದೈಹಿಕ ಶ್ರಮ ಸಿಗದೇ ಇರಲಿ ಎಂಬ ಉತ್ತಮ ಕಾರಣಕ್ಕೆ ಹಿರಿಯರು ಹೆಂಗಸರಿಗೆ ಹಿಂದಿನ ಕಾಲದಲ್ಲಿ ಮನೆಯ ಒಳಗೆ ಬರಲು ಬಿಡದೆ ಹೊರಗಿನ ಒಂದು ಮೂಲೆಯಲ್ಲಿ ಕುಳ್ಳಿರಿಸಿ ರೆಸ್ಟ್ ಮಾಡಲು ಬಿಡುತ್ತಿದ್ದರು. ಅದು ಅವರ ಆರೋಗ್ಯ ಉತ್ತಮ ಪಡಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಸುಲಭವಾಗುತ್ತಿತ್ತು. ಆದರೆ ಇಂದಿನ ಮಾಡ್ರನ್ ಟೆಕ್ನಾಲಜಿ ಕಾಲದಲ್ಲಿ  ಮಹಿಳೆಯರು ಆಟೋಟ, ಪೈಲಟ್, ಎಂಜಿನಿಯರ್, ಡಾಕ್ಟರ್,ಸೈನಿಕ ಹುದ್ದೆಯಲ್ಲಿ ಮಾತ್ರ ಅಲ್ಲದೆ ಸಮಾಜದ ಸರ್ವ ಹುದ್ದೆಗಳಲ್ಲೂ ಪುರುಷರ ಹೆಗಲಿಗೆ ಹೆಗಲಾಗಿ ಅವರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವ ಹಾಗೆ ದುಡಿಯುತ್ತಿದ್ದಾರೆ. ಅದೊಂದು ಕಾರಣಕ್ಕೆ ಮೂರು ನಾಲ್ಕು ದಿನ ರಜೆ ತೆಗೆದುಕೊಂಡು ಕೆಲಸದಿಂದ ಹೊರಗೆ ಉಳಿಯಲು ಅಸಾಧ್ಯ. ಟೈಲರ್ ಗಳು, ವಿವಿಧ ವ್ಯಾಪಾರಿಗಳು ಅವರದ್ದೇ ಕೆಲಸ ಬಿಡುವಿಲ್ಲದೆ ಮಾಡಬೇಕಾಗುತ್ತದೆ. ಹಾಗಾಗಿ ಕೆಲಸದ ಮಹತ್ವ ತುಂಬಾ ಇದ್ದು, ಕಾಲಕ್ಕೆ ತಕ್ಕಂತೆ ಬದುಕಬೇಕಾಗಿದೆ. ಹೀಗಿರಲು ನಾವು ನಮ್ಮ ಜೀವನವನ್ನು ಸಾಗಿಸುತ್ತಾ, ಎಲ್ಲರಿಗೆ ಸರಿಸಾಟಿಯಾಗಿ ಬದುಕುತ್ತಾ, ಹಿಂದಿನದನ್ನು  ಮರೆಯದೆ, ಹೊಸ ಬದುಕನ್ನು ನಾವೀನ್ಯತೆಯಿಂದ ಕಟ್ಟುತ್ತಾ, ಆರೋಗ್ಯದ ಕಡೆ ಗಮನ ನೀಡುತ್ತಾ ಬದುಕಬೇಕಿದೆ. ಓಡುವ ಕಾಲದ ಜೊತೆ ನೆನಪುಗಳ ಸಿಂಹಾವಲೋಕನದ ಜೊತೆ ಓಡಬೇಕಿದೆ. ನೀವೇನಂತೀರಿ?
@ಹನಿಬಿಂದು@
23.09.2023
     

ಶುಕ್ರವಾರ, ಸೆಪ್ಟೆಂಬರ್ 29, 2023