ನನ್ನ ಬದುಕಿನಲ್ಲಿ ಹಲವಾರು ಕಷ್ಟಗಳಿವೆ. ಅವುಗಳನ್ನೆಲ್ಲ ಹೇಳಿಕೊಳ್ಳಲು ಆಗದು. ಅದರ ಜೊತೆಗೆ ಇನ್ನೊಂದಷ್ಟು ಕಷ್ಟ ಸಿಗಲಿ ಎಂದು ಆ ದೇವರೇ ನಿನ್ನನ್ನು ಕೂಡ ಕಳಿಸಿ ಕೊಟ್ಟಿದ್ದಾರೋ ಏನೋ. ಹಣ, ಚಿನ್ನ ಎಲ್ಲಾ ಕಳೆದುಕೊಂಡೆ. ಆದರೆ ಎಲ್ಲವನ್ನೂ ಕೂಡ ಕಷ್ಟಪಟ್ಟು ನಾನೇ ಸಂಪಾದಿಸಿದ ಕಾರಣ ಅದಕ್ಕೆ ಸಾವಿಲ್ಲ. ನನಗೆ ಸೇರಬೇಕು ಎಂದು ಬರೆದಿದ್ದರೆ ಯಾವ ಕಡೆಯಿಂದಲಾದರೂ ಅದು ನನಗೆ. ಬರುತ್ತದೆ ಅದು ಸತ್ಯ. ಅದು ನನಗೆ ಸೇರಲೇ ಬಾರದು ಎಂದಿದ್ದರೆ ಆ ದೇವರೇ ನೋಡಿಕೊಳ್ಳಲಿ. ಎಲ್ಲವನ್ನೂ ಕೊಡುವ ದೇವರಿಗೆ ಇದು ಯಾವ ಲೆಕ್ಕ ಅಲ್ವಾ? ನೀನು ಮೋಸ ಮಾಡಲೆಂದೇ ನನ್ನ ಬಾಳಿಗೆ ಅಡಿ ಇಟ್ಟಿದ್ದರೆ ಇನ್ನು ಯಾರಿಂದ ತಾನೇ ಅದನ್ನು ತಡೆಯಲು ಸಾಧ್ಯ ಹೇಳು?
ನಿನ್ನ ಬದುಕಿನಲ್ಲಿ ನಾನು ಯಾರೋ..ನನ್ನ ಬದುಕಿನಲ್ಲಿ ನೀನು ಯಾರೋ..ನಿನ್ನ ಕಷ್ಟ ನೋಡಿ ನಿನಗೆ ಒಳ್ಳೆಯದಾಗಲಿ ಎಂದು ನಾನು ಬಯಸಿ, ನಾನೂ ಕಷ್ಟ ಪಡುತ್ತ ನಿನಗೆ ಸಹಕಾರ ನೀಡಿದೆ. ನೀನು ಕೃತಜ್ಞಾನಾಗುವ ಬದಲು ಕೃತಘ್ನನಾದೆ. ನನ್ನ ಮಗುವಿಗೆ ನಾನು ದುಡಿದದ್ದನ್ನು ತಿನ್ನುವ ಯೋಗ ಇಲ್ಲವೋ ಏನೋ. ಅದು ನಿನಗೆ ಸೇರಬೇಕಿತ್ತು ಅಂತ ದೇವರು ಬರೆದಿದ್ದರೆ ತಡೆಯಲು ನಾನು ಯಾರು? ಒಟ್ಟಿನಲ್ಲಿ ಒಳ್ಳೆಯದನ್ನು ಮಾತನಾಡುತ್ತಾ ನಿನ್ನ ಇನ್ನೊಂದು ಮುಖವನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್. ನಾನು ಏನೂ ಹೇಳುವುದಿಲ್ಲ. ಕೋರ್ಟು, ಕಚೇರಿಗೆ ಹೋಗಲು ನನ್ನ ಬಳಿ ಸಮಯ ಹಾಗೂ ಇನ್ನಷ್ಟು ಹಣವಿಲ್ಲ. ದೇವರನ್ನು ನಂಬಿ ಕೊಟ್ಟಿದ್ದೇನೆ. ದೇವರೇ ನೋಡಲಿ. ಮೇಲೆ ದೇವರಿರುವಾಗ ಹಣವಾಗಲಿ, ಆರೋಗ್ಯವಾಗಲಿ, ಆಯುಷ್ಯವಾಗಲಿ, ಆಸ್ತಿಯಾಗಲಿ, ಬದುಕಾಗಲೀ, ಕೊಡುವವನು ಅವನೇ, ಕಿತ್ತುಕೊಳ್ಳುವವನೂ ಅವನೇ. ನಮ್ಮದು ಅಂತ ಏನಿದೆ ಅಲ್ವಾ? ಸಮಯ ಬಂದಾಗ ಇಲ್ಲಿ ಗೊತ್ತಾಗದೆ ಹೋದರೂ ಮುಂದಿನ ಜನ್ಮದಲ್ಲಿ ಆದರೂ ಅದು ಕಟ್ಟಿಟ್ಟ ಬುತ್ತಿ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಈ ಜನ್ಮದಲ್ಲಿ ಅನುಭವಿಸಿದ್ದು ಸಾಕಾಗಲಿಲ್ಲ ಅಂತ ಮುಂದಿನ ಜನ್ಮಕೂ ಪಾಪದ ಮೂಟೆ ಕಟ್ಟಿಕೊಂಡು ಹೋಗುತ್ತೀಯಾದರೆ ಹೋಗು. ಮತ್ತೆ ಸಾಲ ತೀರಿಸಲು ನನ್ನ ಮನೆಯ ಆಳಾಗಿ ಹುಟ್ಟುವೆ. ನೆನಪಿರಲಿ.
ಅಪರಿಚಿತರನ್ನು ನಂಬಿದ್ದು , ಹುಚ್ಚರ ಸಹಾಯ ಮಾಡಿದ್ದು ಎಲ್ಲವೂ ನನ್ನದೇ ತಪ್ಪಿರುವಾಗ ಇನ್ನು ಯಾರಿಗೆ ಹೇಳುವುದು? ಎಲ್ಲಾ ದೈವೇಚ್ಛೆ ಅಷ್ಟೇ. ಬದುಕಿನಲ್ಲಿ ಕಷ್ಟ ಕೊಡಲೆಂದೇ ದೇವರು ಕೆಲವರನ್ನು ಸೃಷ್ಟಿಸಿ ಇರುತ್ತಾರೆ ಅನ್ನಿಸುತ್ತದೆ.
ಗಂಡಸರ ಗುಣವನ್ನು ಸರಿಯಾಗಿ ತೋರಿಸಿದ್ದಕ್ಕೆ ಧನ್ಯವಾದಗಳು. ಇದು ನನ್ನ ಕೊನೆಯ ಮೆಸ್ಸೇಜ್. ಇನ್ನು ಮುಂದೆ ನಂಬರ್ ಡಿಲೀಟ್ ಮಾಡಿ ಬ್ಲಾಕ್ ಮಾಡಿ ಬಿಡುತ್ತೇನೆ. ಪದೇ ಪದೇ ಕಿರಿ ಮಾಡೋದು ಯಾಕೆ ಅಲ್ವಾ? ಒಳ್ಳೆಯವನಿಗೆ ಒಂದು ಬಾರಿ ಹೇಳಿದರೆ ಸಾಕು. ಮತ್ತೆ ಮತ್ತೆ ನನಗೆ ತಾಳ್ಮೆ ಇಲ್ಲ.
ಇಷ್ಟೇ...