ಶನಿವಾರ, ಏಪ್ರಿಲ್ 19, 2025

ಬದುಕು ಇಷ್ಟೇ

ಅದೇಕೋ ನನ್ನ ಹುಡುಗ ಮೌನಿಯಾಗಿದ್ದಾನೆ
ಅವನು ಮಾತನಾಡಲಿ ಎಂದು ನಾನು
ನಾನು ಮಾತನಾಡಲಿ ಎಂದು ಅವನು
ಇಬ್ಬರೂ ಒಬ್ಬರನ್ನು ಒಬ್ಬರು ಕಾಡುತ್ತಲೇ ಇದ್ದೇವೆ

ಮನದಾಳದಲ್ಲಿ ಏಕಮುಖ ಸಂಭಾಷಣೆ ನಡೆಯುತ್ತಲೇ ಇದೆ
ಅಹಂ ಅಡ್ಡ ಬರುತ್ತದೆ ನಾನೇ ಏಕೆ ಮಾತನಾಡಿಸಲಿ
ಅವನ ಧೋರಣೆ ಹಾಗಲ್ಲ ಅನಿಸುತ್ತೆ
ಕೆಲಸದ ನಡುವೆ ಸಮಯ ಇಲ್ಲ
ತಲೆಯಲ್ಲಿ ನನಗೊಬ್ಬಳು ಕಾಯುತ್ತಾ ಇದ್ದಾಳೆ ಎಂದು ನೆನಪಿದ್ದರೆ ತಾನೇ

ಎಲ್ಲೋ ಹೇಗೋ ಇರುತ್ತಾಳೆ ಬಿಡು
ನನ್ನ ಬಿಟ್ಟು ಅದೆಲ್ಲಿ ಹೋಗ್ತಾಳೆ
ನನ್ನ ಹುಚ್ಚಿ ತರಹ ಪ್ರೀತಿಸುತ್ತಾಳೆ
ನಾನೇ ಅಲ್ಲವೇ ಅವಳಿಗೆ ಬದುಕು ಕೊಟ್ಟವನು
ಬೇಕು ಬೇಕೆಂದಾಗ ಬೇಕಾದುದೆಲ್ಲವನ್ನೂ ಅವಳ ಮುಂದೆ ಸುರಿದು ಅವಳ ಮನಸ್ಸನ್ನು ತಣಿಸಿದವನು
ಅವಳ ಪ್ರೀತಿ ಗೆದ್ದವನು
ಇಂತಹ ನನ್ನ ಬಿಟ್ಟು ಅವಳೆಲ್ಲಿ ತಾನೇ ಹೋಗಲು ಸಾಧ್ಯ ಅಲ್ಲವೇ! 

ನನಗೋ ಆತಂಕ... ಇವನಿಗೆ ಬೇರೆ ಯಾರಾದರೂ ಸಿಕ್ಕಿರಬಹುದೇ?
ನನಗಿಂತ ಅಂದಗಾರ್ತಿ !
ಹಣ ನೋಡಿ, ಅಂದ ನೋಡಿ, ಗುಣ ನೋಡಿ! 
ಇವನ ಒಳ್ಳೆಯತನವನ್ನು ನೋಡಿ!
ನನ್ನ ಇವನು ಮರೆತು ಹೋಗಿರಬಹುದೇ!

ಮತ್ತೆ ಹೃದಯಕ್ಕೆ ನಾನೇ ಸಾಂತ್ವನ ಹೇಳುವ ಕಾರ್ಯ ನನ್ನದು
"ಇಲ್ಲ ಆತ ನನ್ನವನು. ಮಾತನಾಡದ ಮಾತ್ರಕ್ಕೆ ಆತ ನನ್ನ ಬಿಟ್ಟು ಬೇರೆಲ್ಲಿ ಹೋಗಲು ಸಾಧ್ಯ? 
ನನ್ನ ಬಿಟ್ಟು ಈ ಲೋಕದಲ್ಲಿ ಅವನಿಗೆ ನನ್ನಷ್ಟು ಪ್ರೀತಿ ಕೊಡುವವರು ಯಾರು!

ನನ್ನೊಳಗೆ ಅವನು, ಅವನೊಳಗೆ ನಾನು!
ನಾನು ಅವನು ಹಗಲು ಇರುಳಲ್ಲ! 
ನಾನು ಅವನು ರೈಲು ಪಟ್ಟೆಗಳೂ ಅಲ್ಲ
ನಾನು ಅವನೆಂದರೆ ಹೃದಯ - ಬಡಿತ!
ಹೃದಯ ಬಡಿಯದೆ ಇದ್ದೀತೆ! ಬಡಿತ ಇರದೆ ಹೃದಯಕ್ಕೆ ಬೆಲೆಯೇ 

ಅವನು ಅವನೇ 
ನಾನು ನಾನೇ 
ನಾನೆಂದರೆ ಅವನೇ.. ಅವನೆಂದರೆ ನಾನೇ
ನನಗೆ ಅವನು ಅವನಿಗೆ ನಾನು
ಮಾತನಾಡಲಿ, ಮೌನವಾಗಿರಲಿ
ಕೋಪಗೊಳ್ಳಲಿ, ರಾಜಿಯಾಗಲಿ

ಪ್ರೀತಿಯಲ್ಲಿ ಕೋಪ, ತ್ಯಾಗ ,ನೋವು ,ಅಪ್ಪುಗೆ ,ಸಾಂತ್ವನ ,ಒಂಟಿತನ, ಗಟ್ಟಿತನ , ಹಿರಿತನ, ಗೆಳೆತನ, ನಂಬಿಕೆ, ಸತ್ಯ, ಜಗಳ, ಮುದ್ದು, ಮುನಿಸು ಎಲ್ಲವೂ ಇದ್ದರೇನೇ ಚಂದ! 
ಪ್ರಪಂಚದಲ್ಲಿ ಒಂದು ಬಿಡಿಸಲಾಗದ ಬಿಡಲಾಗದ ಹಿತಕರ ಸಂಬಂಧ
ಅದು ನೋವು ತರುವ ಸಂಬಂಧ ಆಗಿರಬಾರದು
ಹಾಗಿದ್ದರೆ ಅದು ಪ್ರೀತಿಯಲ್ಲ ಬಂಧನ

ಬಂಧನ ಮಧುರವಾಗಿದ್ದರೆ ಮಾತ್ರ ಅದು ಪ್ರೇಮ ಬಂಧನ!
ಇಲ್ಲದೆ ಹೋದರೆ ಅದು ಆತ್ಮ ಬಂಧನ!
ಹಲವು ಸಂಬಂಧಗಳಿಲ್ಲಿ  ಭೂಮಿಯಲ್ಲಿ ಆತ್ಮ ಬಂಧನದಲ್ಲೇ ಬದುಕುತ್ತಿವೆ
ಸಮಾಜಕ್ಕಾಗಿ, ಹಿರಿಯರಿಗಾಗಿ, ಮಕ್ಕಳಿಗಾಗಿ, ಕುಟುಂಬಕ್ಕಾಗಿ
ಮತ್ತೆ ಪ್ರೀತಿ? ನಂಬಿಕೆ? ಅರಿವು?
ಅವೆಲ್ಲ ಗಾಳಿಗೆ ತೂರಿ ಆಗಿದೆ! 
ಏಕೆ? ಉತ್ತರ ಇಲ್ಲ! ಜೊತೆಯಾಗಿಯೇ ಇದ್ದೇವಲ್ಲ! ಸಮಾಜದಲ್ಲಿ ಮರ್ಯಾದೆಗೆ ಅಷ್ಟು ಸಾಕು! ಅಷ್ಟೇ! ಗಂಡ! ಯಜಮಾನ, ಸಹಧರ್ಮಿಣಿ ಆಕೆ! 

ಮತ್ತೆ ಪ್ರೀತಿ, ನಂಬಿಕೆ, ಅಪ್ಪುಗೆ
ಕೇಳಬೇಡಿ, ಅದು ಅವರ ಬದುಕು
ಪರರ ಚಿಂತೆ ನಮಗೇಕೆ ಬೇಕು
ಮಾತನಾಡುವ ನಾವು ನಮ್ಮ ಬಗ್ಗೆ

ನನಗೆ ಅವನು ಅವನಿಗೆ ನಾನು
ಕಷ್ಟದಲ್ಲೂ, ಸುಖದಲ್ಲೂ
ಮತ್ತೆ ಮಾತಿನಲ್ಲೂ, ಮೌನದಲ್ಲೂ
ಅಷ್ಟೇ ಅಲ್ಲ. ಇಂದೂ. ನಾಳೆಯೂ
ಬೇರು, ಮರ ಬಳ್ಳಿ, ಹೂವು, ಕಾಯಿ, ಹಣ್ಣು???
ಎಲ್ಲಾ ಒಂದೇ.. ಪ್ರೀತಿ. ನಂಬಿಕೆ ಅಷ್ಟೇ!
ಮತ್ತೇನಿದೆ ಈ ಜಗದಲ್ಲಿ ಮಣ್ಣು!
@ಹನಿಬಿಂದು@
20.04.2025

ದಶಕ -138

ದಶಕ -138

ನಾನೂ ನಿನ್ನಂತೆಯೇ ಸರ್ವರ ಖುಷಿಪಡಿಸಬೇಕು
ಕಾನೂನು ಅರಿವು ಮೂಡಿಸಿ ಬಾಳಬೇಕು
ತಾನೂ ಬದುಕಿ ಇತರರ ಬದುಕಗೊಡಬೇಕು
ಜಾ ಎಂದು ಪ್ರೀತಿಸಿ ಬಾಳು ಕಟ್ಟಿಕೋಬೇಕು

ಅವರಿವರ ಸುದ್ದಿ ನಮಗೇತಕೆ ಬೇಕು
ನಮ್ಮ ಗುರಿಯತ್ತ ನಿತ್ಯ ಹೆಜ್ಜೆಹಾಕಬೇಕು
ಪರರ ನೋಡಿ ತುಲನೆ ಮಾಡದಿರಬೇಕು
ಸಾಧಿಸಿ  ನಾಲ್ಕು ಜನ ಮೆಚ್ಚುವಂತಿರಬೇಕು

ಆದರೂ ಏನೋ ಭೀತಿ ಭಯ ಗೊಂದಲ
ಅವರಿವರ ನೋಡಿ ಕಲಿಯಬೇಕೆಂಬ ಹಂಬಲ
@ಹನಿಬಿಂದು@
19.04.2025

ಮಂಗಳವಾರ, ಏಪ್ರಿಲ್ 15, 2025

ಚಿಟ್ಕಾ

ಜೋಕುಲು ಕಲ್ಪಡ್ (ಚಿಟ್ಕಾ )

ಮಲ್ಪುಲೆ ಉಪ್ಪಡ್ ಮರ್ಯಲಗ್ ದೀದ್
ಕಾಟ್ ಕುಕ್ಕು ಅಂಬಡೆ ನೆಲ್ಲಿಕಾಯಿ ಕನತ್‌ದ್
ಉಪ್ಪುಡು ಪಾಡ್ದ್ ಬರಣಿಡ್ ಟೈಟ್ ಕಟ್ಟದ್ 
 ಬುಳೆವುನ ಜೋಕ್ಲೆಗ್ ದುಂಬುಗು ಕಲ್ಪರೆಗಾದ್ 
@ಹನಿಬಿಂದು@
15.04.2025

ಶನಿವಾರ, ಏಪ್ರಿಲ್ 12, 2025

ಗಝಲ್

ತಂದೆಯಂತೆ ಪೊರೆದು ತಾಯಿಯಂತೆ ಕರೆದು ನೋಡಿಕೊಳ್ಳುವ ಶಿವ
ಮಂದಿಯೊಳಗೆ ಗುರುತಿಸಿ ಮಗುವಿನಂತೆ ಪೊರೆದು ಕಾಯುವ ಶಿವ

ಮುಗ್ಧತೆಯ ಅರಿತು ಸತ್ಯ ಸಂಧತೆ ಬೆಳೆಸಿಕೊಳ್ಳುವುದ ಅರಿಯುವನು
ಸ್ನಿಗ್ಧ ನಗುವ ಕೊಟ್ಟು ಸರ್ವರಲಿ ಒಂದಾಗಿ ಬಾಳಿ ಬದುಕುವ ಪರಿ ತಿಳಿಸುವ ಶಿವ

ಹಸಿರು ಬಣ್ಣವ ಬೆಳೆವ ಖುಷಿಯ  ಜಗದೊಳಗೆ ಎಲ್ಲಾ ತಿಳಿದಿರಬೇಕು
ಮೊಸರಿನಂತೆ ಬಿಳಿಯಾಗಿ ರುಚಿಯಾಗಿ ಆರೋಗ್ಯಕರವಾದ ಬಾಳು ನೀಡುವ ಶಿವ 

ನಾನು ನೀನೆನ್ನದ ಜಾತಿ ಮತ ಪಂಥವಿರದ ಮಾನವ ಧರ್ಮ ಕಟ್ಟಬೇಕು ಇಲ್ಲಿ
ತಾನು ಬರುತ ಹರಸೆ ಸಕಲ ಸಮಯಗಳಲ್ಲೂ ಧೈರ್ಯ ತೋರುವ ಶಿವ

ಪ್ರೀತಿ ನೀತಿ ಕಾಂತಿ ಭಕ್ತಿ ಸ್ಪೂರ್ತಿ ಶಾಂತಿ ಶಕ್ತಿ ಬೇಕು ಜನರಲ್ಲಿ ಇಂದು
ಕೀರ್ತಿ ಪತಾಕೆ ಹಾರಿಸಲು ಮನದಲಿ ಹನಿ ಹನಿ ಪ್ರೇಮ ತುಂಬುವ ಶಿವ
@ಹನಿಬಿಂದು@
13.04.2025

ಕವಿತೆ

ಕವಿತೆ
ಬರೆಯಲು ಹೊರಟೆ ಒಲವಿನ ಕವಿತೆ
ತಡೆವವರಾರಿಲ್ಲಿ
ನಾನು ಅವಳು ಒಂದೇ ಅಲ್ಲವೇ
ಹಿಡಿಯುವರಾರಿಲ್ಲಿ

ಮೋಹದ ಜಾಲದಿ ಬಂಧಿಯಾಗಿಹೆ 
ನೋಡುವರಾರಿಲ್ಲಿ
ನೋವು ನಲಿವು ಏನೇ ಬರಲಿ
ಕೇಳುವರಾರಿಲ್ಲಿ

ನನಗೆ ನೀನು ನಿನಗೆ ನಾನು
ಸರಿಸಾಟಿ ಬೇರೆಲ್ಲಿ
ಪ್ರೇಮವು ಶೂನ್ಯ ಬದುಕೇ ಮಾನ್ಯ
ತಿಳಿದವರ್ಯಾರಿಲ್ಲಿ 
@ಹನಿಬಿಂದು@
13.04.2025

ಶುಕ್ರವಾರ, ಏಪ್ರಿಲ್ 11, 2025

ಗಝಲ್

ಗಝಲ್ 

ನೆಮ್ಮದಿ ನೀಡಿ ಆರೋಗ್ಯ ಕೊಡುವ ನಮ್ಮ ಹನುಮ
ಬಡವ ಬಲ್ಲಿದರ ಒಂದೇ ತೆರದಿ ಕಾಯುವ ನಮ್ಮ ಹನುಮ

ಅನವರತ ಬೇಡಲು ವರವನು ಒದಗಿಸುವ
ಆರೋಗ್ಯ ರಕ್ಷಿಸಿ ವರವನು ನೀಡುವ ನಮ್ಮ ಹನುಮ

ಪರರ ಚಿಂತೆಯೆಂಬ ಚಿತೆಯಲಿ ಬೇಯದಿರಿ
ನರರಿಗೆ ಸಹಾಯ ಮಾಡಲು ಕಾಪಾಡುವ ನಮ್ಮ ಹನುಮ

ಕಲ್ಲೇ ಇರಲಿ ಮುಳ್ಳೇ ಇರಲಿ ಮುನ್ನಡೆಯೋಣ
 ಗುರಿಯೆಡೆ ಮುನ್ನಡೆಯ ನೆರವಾಗುವ  ನಮ್ಮ ಹನುಮ

ಪ್ರೀತಿ ಪ್ರೇಮ ಶಾಂತಿ ಸಹಬಾಳ್ವೆಯ ಬೆಳೆಸಿಕೊಳ್ಳೋಣ
ತಾನೇ ತಾನಾಗಿ ಹನಿ ಹನಿಯಾಗಿ ವರವೀವ ನಮ್ಮ ಹನುಮ.
@ಹನಿಬಿಂದು@
12.04.2025

ನಾನೇ ನೀನು

ನಾನೇ ನೀನು

ನಿತ್ಯ ನೆನಪು ಮಾಡಿಕೊಂಡು
ಸತ್ಯವೆಲ್ಲ ಹೇಳಿಕೊಂಡು
ಮಿಥ್ಯವಿರದ ಸ್ತುತ್ಯಾರ್ಹ ಬದುಕು ನಮ್ಮದು

ನಾನೇ ನೀನು ಎಂದುಕೊಂಡು
ನನಗೆ ನೀನೆ ಅಂದುಕೊಂಡು
ಬಾಳು ನಡೆಸೋ ಧೈರ್ಯ ಸದಾ ನಮ್ಮದು

ಅವರು ಇವರು ಇದ್ದರೇನು
ಕೊಡುವರೇನೋ ಬರುವರೇನು
ನಾಲ್ಕು ಮಾತು ಸರಳ ನಗುವು ಅಷ್ಟೇ ನಮ್ಮದು

ನೂರಾರು ಯೋಜನೆಗಳು
ಸಾವಿರಾರು ಕಾರ್ಯಗಳು
ನಡುವೆ ಪ್ರೀತಿ ರೀತಿ ನೀತಿ ನಮ್ಮದು

ರಾಜ್ಯ ಜಿಲ್ಲೆ ಎಲ್ಲೆ ಮೀರಿ
ರಾಷ್ಟ್ರ  ದೇಶ ಒಂದೇ ಎನುವ
ಸಾಮರಸ್ಯದ ಜೀವ ಎರಡು ಜನರದು

ಸಿಹಿಯ ಮಾತು ಸವಿಯ ನೋಟ
ಕೆಲಸದಲ್ಲಿ ಒಂದೇ ಕೂಟ
ಸರ್ವ ಹಿತವ ಬಯಸುವಂಥ ಭಾವ ನಮ್ಮದು

ನಾನು ನೀನು ಬೇರೆ ಅಲ್ಲ
ಪ್ರೇಮವೆಂಬ ಕೊಂಡಿ ಎಲ್ಲಾ
ಒಟ್ಟು ಸೇರಿ ಜಗವ ಗೆಲುವ ಪಯಣ ನಮ್ಮದು
@ಹನಿಬಿಂದು@
10.04.2025

ಬುಧವಾರ, ಏಪ್ರಿಲ್ 9, 2025

ಚುಟುಕು

ಚುಟುಕು

ನೋವಿನ ಮನದಲಿ ನಗುವಿನ ಕಲೆಯು 
ಸೋತಿಹ ಬಾಳಲಿ ನೂಲಿನ ಎಳೆಯು
ಗೋರಿಯ ಒಳಗೆ ನೆಮ್ಮದಿ ನಿದ್ರೆಯು 
ಹೋರಿಯ ಹಾಗೆ ಸರ್ವೆಡೆ ಸ್ವತಂತ್ರವು 
@ಹನಿಬಿಂದು@
09.04.2025

ಮಂಗಳವಾರ, ಏಪ್ರಿಲ್ 8, 2025

ಚಿಟ್ಕಾ

ಚಿಟ್ಕ 
ನಾಟಕ

ಇಲ್ಲದ ಉಲಾಯಿ ನಾಯಿದ ನಲಿಕೆ
ಪಿದಯಿಡ್ ತೂನಗ ಮಾಮಲ್ಲ ತೆಲಿಕೆ 
ಅಲ್ಪ ಮುಲ್ಪ ತಿಂದ್‌ದ್ ಬಲಕೆ 
ಎಂಕುಲೆ ಮಲ್ಲ ಪನ್ಪಿ ಮನಸ್‌ದ ಎನಿಕೆ 
@ಹನಿಬಿಂದು@
08.04.2025