ಭಾನುವಾರ, ಜುಲೈ 13, 2025

ಚುಟುಕು

ಚುಟುಕು 

ಒಲವ ಧಾರೆ ಹರಿಸಲೇನು ಕೋಡು 
ಹಿಡಿದು ಹೋಗಬೇಕು ಮನದ ಜಾಡು
ಕಡಿದು ಮಾಡದಿರಿ ನೋವ ಕಾಡು
ಜಡಿದು ಬೀಗ ಹಾಕಿ ಬಾಯ ನೋಡು
@ಹನಿಬಿಂದು@
13.07.2025

ಶುಕ್ರವಾರ, ಜುಲೈ 11, 2025

ನ್ಯಾನೋ ಕಥೆ

ಕ್ಷಣ

ಪ್ರೀತಿಸಿ ಏಳು ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಹಿರಿಯರ ಒಪ್ಪಿಗೆ ಪಡೆದು ಪ್ರಕಾಶ ಮತ್ತು ಹರಿಣಿ ಸರ್ವ ಹಿರಿಯ ಹೃದಯಗಳ ಸಮ್ಮುಖದಲ್ಲಿ ಪಾನಿಗ್ರಹಣ ಮಾಡಿಕೊಂಡರು. ಇಬ್ಬರಿಗೂ ಬದುಕಿನಲ್ಲಿ ತನ್ನ ಪ್ರೀತಿಯನ್ನು ಪಡೆದ ಖುಷಿ.  ಅಂದಿನಿಂದ ಅವರ ಬಾಳಲ್ಲಿ ಹಿತವಾದ ತಂಗಾಳಿ ಬೀಸಿತು. 
@ಹನಿಬಿಂದು@
11.07.2025

ಗುರುವಾರ, ಜುಲೈ 10, 2025

ಗಜಲ್

ಗಜಲ್ 

ಗುರುತರ ಜವಾಬ್ದಾರಿ ಹೊತ್ತ ಗುರುವೇ ನಿಮಗೆ ಋಣಿ
ಗುರುಗಳ ತಾಳ್ಮೆಯ ಕಲಿಕಾ ಪ್ರೋತ್ಸಾಹದ ಚಿಲುಮೆಗೆ ಋಣಿ

ಗುರು ಎಂಬ ನಾಮಕ್ಕೆ ಲಘುವಲ್ಲದೆ ದುಡಿದವರು
ಗುರುತಾಗಿ ಉಳಿದ ಹಿರಿತನದ ಗುರುತಿಗೆ ಋಣಿ

ಮರೆತರೂ ಮರೆಯದ ನೆನಪುಗಳ ಬದುಕಿನಲಿ ಉಳಿಸಿದವರು
ಸರಿ ದಾರಿಯಲಿ ನಡೆವ ಗುರುತಿನ ಹಾದಿಗೆ ಋಣಿ

ಗರಿಗೆದರಿ ಹಾಡುವುದು ಮೈಮನ ನೆನೆದಾಗ ಗುರುಹಿರಿಯರನ್ನು
ಪರಿಪರಿಯಲಿ ಹೇಳುತ ನಮಸ್ಕಾರವನು ಶಿಕ್ಷಕರಿಗೆ ಋಣಿ

ಸಾಧನೆಯ ಮಾಡಲು ಬೀಗುತ್ತಾ ಹರಸಿ ಆಶೀರ್ವಾದದ ಕೊಡುಗೆ
ಹನಿ ಹನಿ ಜ್ಞಾನದ ತುತ್ತುಣಿಸಿದ ಕೈಗಳಿಗೆ ಋಣಿ..
@ಹನಿಬಿಂದು@
10.07.2025