1. ಬಾಳದೀವಿಗೆ (ಭಾವಗೀತೆ)
ಬಾಳ ದೀವಿಗೆಗಿಂದು ಬಾರೀ ಗೋಳು,
ಇರುಳು ಬೆಳಕಂಥಾ ಅರಳು-ಮರುಳು1ಪ1
ತನ್ನ ಕಾಡುವರಾರೋ,ನಿತ್ಯ ನೋಡುವರಾರೋ?
ಹಗಲಿರುಳು ಸೇವೆಗೈಯ್ಯುವರಾರೋ?
ಬಾಳ ಪಯಣದಲಿ ಋತು ಬದಲಿಸಿ ನಕ್ಕಾಗ,
ನಗೆಯ ಮಾತನು ಉಳಿಸಿ ಕೊಡುವವರ್ಯಾರೋ1೧1
ತಂದೆ-ತಾಯಿಯ ಪ್ರೀತಿ, ಅಕ್ಕ-ತಂಗಿಯ ನೀತಿ,
ಬದುಕಲಿ ಜೊತೆಯಾದ ಸಂಗಾತಿ ,
ಎಲ್ಲ ಸರಿಯಾಗಿರಲು ಇಲ್ಲ ನಮಗೆ ಭೀತಿ,
ಬದಲಾಗುತಿರುವುದು ಸರಿಯಲ್ಲ ರೀತಿ1೨1
ಬರುವರು ತೊರೆವರು ಹಲವಾರು ಜನರು,
ಪರರು ತಮ್ಮವರೆಂಬ ಮನಸಿನ ಉಸಿರು,
ಒಳ್ಳೆ ಗುಣಗಳು ಎಲ್ಲಾ ಗೆಲ್ಲುವುವು ಇಲ್ಲಿ,
ಕೆಟ್ಟ ಮನಗಳಿಗೆ ಇದೆ ಕಾಲ ಎಲ್ಲಿ?1೩1
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ