ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಮತ್ತೆ ಬಂದಿದೆ 2018ರ ಸಂಕ್ರಾಂತಿ ಹಬ್ಬ.ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವನ್ನು ಹೇಗೇ ಆಚರಿಸಿ,ಅದು ನಿಮಗೆ ಬಿಟ್ಟದ್ದು, ಆದರೆ ಅಪ್ಪಟ ದೇಸಿ ಶೈಲಿಯಲ್ಲಿ ಮನಸ್ಸಿಗೆ ಖುಷಿ ಕೊಡಿ ಎಂಬ ಆಶಯ ಈ ಲೇಖನದಲ್ಲಿ!
ಮದುವೆಯೊಂದಕ್ಕೆ ಹೋಗಿದ್ದೆ, ಮಾಮೂಲಿ, ಹಗಲಲ್ಲಿ ಮದುವೆ ಊಟ,ಭೂರಿ ಭೋಜನವಾದರೆ,ರಾತ್ರಿ ಪಾರ್ಟಿ, ಇಂಗ್ಲಿಷ್ನವರ ಆಚರಣೆಗೆ ಇಂಗ್ಲಿಷ್ ಪದವೇ ಸೂಟ್ ಆಗೋದು ಅಲ್ವೇ? ಭಾಷಾ ಬಳಕೆಯಲ್ಲೂ ನಾವು ಇಂಗ್ಲಿಷ್ ಗೆ ತುಂಬಾ ರೆಸ್ಪೆಕ್ಟ್ ಕೊಡೋದೇ ಅಲ್ಲದೇನೇ ಅದನ್ನು ಇನ್ನೂ ತುಂಬಾ ಗೌರವಿಸುತ್ತೇವೆ! ಅಷ್ಟು ಪ್ರಾಂಪ್ಟ್ ನಾವು!
ಅಜ್ಜ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಂಡು ಸಾಯೋದು ನಮ್ಮ ಲಕ್ಷಣ! ನಮ್ಮ ತಾತನ ತಾತನ ಕಾಲದಿಂದಲೂ ಆಂಗ್ಲರಿಗೆ ತಲೆಬಾಗಿ ನಡೆಯೋದು ಮಾಮೂಲಾಗಿದೆ! ನಮ್ಮ ಹೊಸತನ ಅದೇ... ಅವರನ್ನು ಫಾಲೋ ಮಾಡೋದು!
ನಮ್ಮ ಹಲವಾರು ಧರ್ಮ ಗುರುಗಳು, ಧಾರ್ಮಿಕ ಮುಖಂಡರು ಈಗೀಗ ಎಚ್ಚೆತ್ತುಕೊಂಡಿದ್ದಾರೆ! (ಇನ್ನು ಕೆಲವರು ಇನ್ನೂ ಎದ್ದಿಲ್ಲ! )ಹೇಗೆಂದರೆ ಬೇರೆ ಬೇರೆ ಧಾರ್ಮಿಕ ಮುಖಂಡರು,ಧರ್ಮ ಗುರುಗಳು ಅವರವರ ಧರ್ಮದ ಒಳ್ಳೆಯ ತತ್ವಗಳನ್ನು, ತಿರುಳನ್ನು, ನಂಬಿಕೆಗಳನ್ನು, ವಿಚಾರಗಳನ್ನು ತಮ್ಮ ಧರ್ಮದ ಇತರರಿಗೆ ಪ್ರತಿನಿತ್ಯ ತಿಳಿಸುತ್ತಾರೆ,ಆ ಮೂಲಕ ಧಾರ್ಮಿಕ ಅರಿವನ್ನು ಮೂಡಿಸುತ್ತಾರೆ,ಆದರೆ ನಾವು ಯಾರೂ ಆ ಕೆಲಸ ಮಾಡುತ್ತಿಲ್ಲ, ನಮ್ಮ ಧರ್ಮದ ಆಚಾರ-ವಿಚಾರಗಳ ಬಗ್ಗೆಯೂ ಜನರಿಗೆ ಅರಿವು ಮೂಡಿಸಬೇಕು ಎಂದು...
ಹಬ್ಬಗಳ ಆಚರಣೆಯೂ ಅಷ್ಟೆ.. ಎಲ್ಲೂ ಒಂದೇ ಸಮನಾಗಿಲ್ಲ..ಕರಾವಳಿಯ ಜನರಿಗೆ ಸಂಕ್ರಾಂತಿ ಎಂದರೆ ಹೊಸ ತಿಂಗಳ ಆರಂಭ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ,ಊಟ ಮಾಡಿ ಬರುವುದು. ಮೈಸೂರು-ಬೆಂಗಳೂರು ಕಡೆ ಹೆಣ್ಣು ಮಕ್ಕಳು ಹತ್ತಿರದ ಮನೆಗೆಲ್ಲಾ ಹೋಗಿ ಎಳ್ಳು ಬೀರಿ,ಎಳ್ಳು-ಬೆಲ್ಲ ಹಂಚಿದರೆ, ಉತ್ತರ ಕನ್ನಡದಲ್ಲಿ ಹೊಸ ವರುಷದಷ್ಟೇ ಸಡಗರದಲ್ಲಿ ಎಳ್ಳಿನೊಡನೆ ಸಕ್ಕರೆ ಅಥವಾ ಸಿಹಿಯನ್ನೂ ಹಂಚುತ್ತಾರೆ.
ಇನ್ನು ಚಿಕ್ಕಮಗಳೂರಿನ ಹಲವೆಡೆ ಹಗಲು ಎಳ್ಳು -ಬೆಲ್ಲವಾದರೆ ರಾತ್ರಿ ತುಂಡಿನ ಬಾಡೂಟ..ಹಿರಿಯರಿಗಾಗಿ! ಉತ್ತರ ಕರ್ನಾಟಕದಲ್ಲಿ ನೆಂಟರ ಆಗಮನ.. ಸಿಹಿ-ಒಗರಿನ ರುಚಿಕಟ್ಟಾದ ಮಿಲನ! ಬಾಂಧವ್ಯ ಬೆಸೆಯುವ ಆನಂದ! ತಮಿಳರಿಗೆ ಹೊಸ ವರುಷದ ಪೊಂಗಲ್ ಸಿಹಿಯೂಟ! ಹಬ್ಬವೋ ಹಬ್ಬ.
ಉತ್ತರ ಭಾರತಕ್ಕೆ ಬಿಹೂ, ಬೈಸಾಕಿ,ವೈಸಾಕಿ ಹೊಸ ಹಬ್ಬ. (ತಪ್ಪಿದ್ದರೆ ಕ್ಷಮೆ ಇರಲಿ)
ಈ ದೇಸೀ ಹಬ್ಬದಲ್ಲಿ ಅರ್ಥವಾಗದ ಡಿಜೆ ಮ್ಯೂಸಿಕ್,ಕುಡಿದ ನೃತ್ಯ ಬೇಡ! ಇದುವೇ ಹಬ್ಬ,ಪಾರ್ಟಿ ಎಲ್ಲ ಆಗಿದೆ ಈ ಕಾಲದಲ್ಲಿ! ಭಜನೆ,ದೇವರ ನಾಮಾವಳಿ 1% ಗಿಳಿದಿದೆ.
ಇನ್ನಾದರೂ ಎಚ್ಚೆತ್ತು ನಮ್ಮತನವ ಮರೆಯದಿರೋಣ..ಸ್ತ್ರೀ ಶಕ್ತಿಯಿಂದ ಎಲ್ಲವೂ ಸಾಧ್ಯ. ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ