1.ನನ್ನ ಜೀವನ ಸಂಗಾತಿ ಬಗೆಗಿನ ಕನಸು
"ಕನಸೆನ್ನುವುದು ನಿದ್ದೆ ಮಾಡಿದಾಗ ಬರುವಂಥದ್ದಲ್ಲ, ನಿಜವಾದ ಕನಸು ನಿದ್ದೆ ಮಾಡಲು ಬಿಡದೆ ಇರುವಂಥದ್ದು" ಇದು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನುಭಾವ್ಯ ನುಡಿ. ಪ್ರತಿಯೊಬ್ಬರ ಜೀವನದಲ್ಲಿ ಎರಡು ರೀತಿಯ ಕನಸುಗಳಿವೆ. ಒಂದು ರಾತ್ರಿ ಅರೆನಿದ್ರೆಯಲ್ಲಿ ಕಾಣುವ ಕನಸು, ಇನ್ನೊಂದು ಹಗಲು-ಇರುಳು ಮನಸಲ್ಲೆ ಕಾಣುವ ಕನಸು.
ರಾತ್ರಿ ಮಲಗಿದಲ್ಲಿ ಬಾಳೆಹಣ್ಣು ಕದ್ದು ಸಿಕ್ಕಿ ಹಾಕಿಕೊಂಡು ಪೊಲೀಸ್ ಹಿಡಿದು ಕೋಳ ಹಾಕಿದ್ದೂ ಉಂಟು! ಅತ್ತು ಅತ್ತು ಕಣ್ಣು ಊದಿದ್ದು, ಮದುವೆಗೆ ಮೊದಲೆ ಮದುವೆಯೂ ಆಗಿದ್ದು, ಫಿಲಂ ನೋಡಿದ್ದು ಒಂದೆಡೆಯಾದರೆ ನಿಜ ಜೀವನದ ಬಾಳ ಸಂಗಾತಿ ಬಗೆಗಿನ ಕನಸೇ ಬೇರೆ.
ನನ್ನನ್ನು ನಾನಾಗಿ ಸ್ವೀಕರಿಸಿ, ನನ್ನ ಮನಸನ್ನು ಅರ್ಥೈಸಿಕೊಂಡು, ನನ್ನ ಬದುಕನ್ನು ತನ್ನೊಡನೆ ಸಂಪೂರ್ಣವಾಗಿ ಹಂಚಿಕೊಳ್ಳುವ ಸಾಧಾರಣ, ನಿಜವಾದ ಅಕ್ಷರಸ್ಥ, ನನ್ನ ಬಾಳ ಸ್ನೇಹಿತನಾಗಿ ನನ್ನ ಭಾವನೆದಳನ್ನು ಗೌರವಿಸುವ ಸಂಗಾತಿ ಬೇಕೆಂಬುದು ನನ್ನ ಕನಸಾಗಿತ್ತು.
ಅದರೊಂದಿಗೆ ನನ್ನ ಬಾಳ ಸಂಗಾತಿ ಉದ್ಯಮಿಯಾಗಿರಬೇಕು, ದಿನನಿತ್ಯ ಹೊರಡಿಸಿ,ಟೈ ಹಾಕಿ ಕಳುಹಿಸಿ ಕೊಡಬೇಕು, ನನ್ನ ಕವನಗಳನ್ನು ಓದಿ ಸಂತಸ ವ್ಯಕ್ತಪಡಿಸುವುದರೊಂದಿಗೆ ತಿದ್ದಿ ಹೇಳಬೇಕು, ಆಗಾಗ ಹೊರಗೆ ಕರೆದುಕೊಂಡು ಹೋಗಿ ಸಣ್ಣ ಕೌಟುಂಬಿಕ ಪ್ರವಾಸ ಕರೆದುಕೊಂಡು ಹೋಗಬೇಕು ಮೊದಲಾದ ಸಣ್ಣಪುಟ್ಟ ಆಸೆಗಳು ನನ್ನ ಕನಸಾಗಿತ್ತು.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ