8. ಶಿವನಿಗೆ ಅರಿಕೆ
ಓ ಶಿವನೇ, ನಿನ್ನ ಕೈಯಲ್ಲಿರುವ ತ್ರಿಶೂಲದಿಂದ
ನನ್ನಲಿರುವ ಸೋಮಾರಿತನವ ತಿವಿದುಬಿಡು//
ಓ ಜಠಾಧರನೇ, ನಿನ್ನಲಿರುವ ವಿಭೂತಿಯಿಂದ
ನನ್ನಲಿರುವ ದರ್ಪ , ಅಗೌರವವ ಅಳಿಸಿಬಿಡು//
ಓ ಸದಾಶಿವನೇ, ನಿನ್ನ ತಲೆಯಲಿರುವ ಗಂಗೆಯಿಂದ
ನನ್ನ ಸರ್ವ ಪಾಪಗಳ ತೊಳೆದು ಸ್ವಚ್ಚಮಾಡಿಬಿಡು//
ಓ ಪಂಚಲಿಂಗೇಶ್ವರನೇ, ನಿನ್ನೆದುರಿರುವ ನಂದಿಯಿಂದ
ನನ್ನಲಿರುವ ಅಂಧಕಾರ, ಅಜ್ಞಾನವನು ತಿವಿಸಿಬಿಡು//
ಓ ಶಿವನೇ, ನೀನು ಹೊದ್ದ ಗಜ ಚರ್ಮದಿಂದ
ಲೋಕದಲ್ಲಿರುವ ಅಂಧಕಾರ, ನೋವು, ಮುಚ್ಚುವಂತೆ ಮಾಡು//
ಓ ಮಹಾಲಿಂಗೇಶ್ವರನೇ, ನಿನ್ನ ಢಮರುಗವ ಬಾರಿಸಿ
ಜಾತಿ ಮತ ಕುಲಗಳ ನಡುವಿನ ಕಂದಕವ ತೆರೆದುಬಿಡು//
ಓ ಕೈಲಾಸವಾಸನೇ, ನಿನ್ನ ಕಂಠದಲ್ಲಿರುವ ವಿಷದಿಂದ
ನನ್ನ ಪೈಶಾಚಿಕ ಕೃತ್ಯಗಳ, ದಾಹಗಳ ಕೊಂದುಬಿಡು//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ