ಗುರುವಾರ, ಫೆಬ್ರವರಿ 8, 2018

108. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ -10

ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ

     ಇತ್ತೀಚೆಗೆ ಹೆಚ್ಚುತ್ತಿರುವ ಹೆಣ್ಣು ಮಕ್ಕಳ, ಅದರಲ್ಲೂ ಹೆಣ್ಣು ಹಸುಳೆಗಳ ಅತ್ಯಾಚಾರ ಪ್ರಸಂಗಗಳು ಎದೆಯನ್ನು ಸೀಳಿ ಬಗೆದ ಅನುಭವವನ್ನು ತರುವುದಿಲ್ಲವೇ? ಮೊನ್ನೆ ಮೊನ್ನೆ ಎಂಟು ತಿಂಗಳ ಹಸುಗೂಸಿನ ಮೇಲೊಬ್ಬ ಅತ್ಯಾಚಾರವೆಸಗಿದ್ದ ಕಟುಕ! ಅಬ್ಬಾ... ನೆನೆಸಿದರೇ ಮೈ ಜುಮ್ಮೆಂದು ರಕ್ತ ಕುದಿಯುತ್ತದೆ. ಅಂಥವರನ್ನು ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಬೇಕು. ಅರಬ್ ರಾಷ್ಟ್ರಗಳಂತೆ ರಸ್ತೆಯಲ್ಲಿ ಎಳೆದಾಡಿ ಇಲ್ಲವೇ ತಕ್ಷಣ ಗುಂಡಿಕ್ಕಿ ಸಾಯಿಸಬೇಕು. ಕೋರ್ಟ್, ತೀರ್ಪು ಅಂತ ಕುಳಿತರೆ ಇನ್ನಷ್ಟು ಮರಿ ಕಂದಮ್ಮಗಳ ಮಾನ, ಜೀವ ಹೋಗಿರುತ್ತದೆ!
     ಈ ಹೆಣ್ಣುಗಳ ಪಿಪಾಸು ರಾಕ್ಷಸರಿಗೆ ಜಾತಿ-ಮತಗಳಿಲ್ಲ, ಬಡವ-ಬಲ್ಲಿದರಂತಿಲ್ಲ, ವಯಸ್ಸು-ಲಿಂಗಗಳ ಪರಿವೆಯೂ ಇಲ್ಲ! ತಮ್ಮ ಆಸೆ ಪೂರೈಸಿಕೊಂಡರಾಯಿತು! ಭೂಮಿಯ ಮೇಲೆ ಅವರು ಹುಟ್ಟಿದ್ದೇ ಈ ಕೆಟ್ಟ ಕಾರ್ಯ ಮಾಡಲು!
    ಸಾಮಾಜಿಕ ಜಾಲ ತಾಣಗಳಾದ ಯೂ ಟ್ಯೂಬ್, ವಾಟ್ಸಪ್, ಹೈಕ್, ಟೆಲಿಗ್ರಾಂ, ಫೇಸ್ಬುಕ್ ಮತ್ತು ಅವುಗಳನ್ನು ಹೊತ್ತ ಮೊಬೈಲ್ ಇವೆಲ್ಲಾ ಅವಾಂತರಗಳಿಗೆ ಕಾರಣ.
  ಜನ ವೈಜ್ಞಾನಿಕತೆ ಮುಂದುವರಿದಂತೆ ಅದನ್ನು ದುರುಪಯೋಗಪಡಿಸಿಕೊಂಡು ಕೆಡುತ್ತಿರುವುದರ ದ್ಯೋತಕವಿದು.
    ಎಚ್ಚೆತ್ತುಕೊಳ್ಳಬೇಕಾದುದು ಪ್ರತಿ ಮನೆಯ ಗಂಡು ಮಕ್ಕಳು ಮತ್ತು ಪುರುಷರು. ಇಲ್ಲದಿದ್ದರೆ ತಮ್ಮ ಮನೆಯ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಉಳಿಗಾಲವೇ ಇಲ್ಲ!
    ಮೊದಲೇ ದೇಶದಲ್ಲಿ ಮಹಿಳೆಯರ ಸಂಖ್ಯೆ ಕುಗ್ಗಿದೆ,ಕುಗ್ಗುತ್ತಿದೆ, ರಾಕ್ಷಸರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಹೆಣ್ಣು ಮಕ್ಕಳೂ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ