ಭಾನುವಾರ, ಮಾರ್ಚ್ 4, 2018

166. ಶಿವಸ್ತುತಿ-20

20. ಶಿವಸ್ತುತಿ-20

ಬನ್ನಿರಿ ಶಿವಾಲಯಕೆ ಹೋಗೋಣ
ಮಂಜುನಾಥನ ದರುಶವ ಮಾಡೋಣ

ಪಂಚಲಿಂಗೇಶ್ವರನ ಬಳಿಗೆ ಹೋಗೋಣ
ಲಿಂಗಕೆ ಅಭಿಷೇಕ ಮಾಡೋಣ//

ಶಿವ ಪಂಚಾಕ್ಷರಿಯ ಜಪಿಸೋಣ
ಈಶನ ಆರಾಧನೆ ಮಾಡೋಣ

ನರಹರಿ ಪರ್ವತ ಏರೋಣ
ಸದಾಶಿವನ ನೆನೆದು ಬೇಡೋಣ//

ಕಾರಿಂಜೇಶ್ವರ ಬೆಟ್ಟವ ಏರೋಣ
ಗೋಕರ್ಣನಾಥನ ಬಳಿಗೆ ಸಾಗೋಣ

ಮಹಾಲಿಂಗೇಶ್ವರ ಆರಾಧನೆ ಮಾಡೋಣ
ಸಹಸ್ರಲಿಂಗೇಶ್ವರನಿಗೆ ನಮಸ್ಕಾರ ಹೇಳೋಣ//

ವಿಶ್ವೇಶ್ವರ ಸನ್ನಿಧಿ ನೆನೆಯೋಣ
ವೀರೇಶ್ವರನನ್ನು ಬೇಡಿಕೊಳ್ಳೋಣ

ಸರ್ವೇಶ್ವರನ ಗುಣಗಾನ ಮಾಡೋಣ
ವೀರಭದ್ರೇಶ್ವರನ ಭಜನೆ ಹಾಡೋಣ//

ಈಶ್ವರ ಲಿಂಗಕೆ ನಮಿಸೋಣ
ಮಹೇಶ್ವರನ ನಾಮು ಸ್ಮರಿಸೋಣ

ಮಹಾದೇವನ ಧ್ಯಾನದಿ ಸ್ತುತಿಸೋಣ
ಯೋಗೇಶ್ವರನ ಸಾನಿಧ್ಯ ಸೇರೋಣ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ