✍ *ಪ್ರೇಮ್ ರವರ ಬಹು ಮೌಲ್ಯಯುತ ಕವನ ನಾವು*
ಹೌದು ಮನುಷ್ಯರ ಜೀವನವೇ ಹಾಗೆ ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೆ ಜೀವನ ಎನ್ನುವಂತಹುದ್ದು....
ಇರುವುದರೊಳಗೆ ತೃಪ್ತಿ ಕಾಣಲಾರ...ಯಾರನ್ನು ಗೌರವಿರಸಲಾರ ಯಾವುದರಲ್ಲು ಸುಖ ಕಾರಣಲಾರ....
ಕೆಲವರಂತು ಆನೆ ನೆಡೆದ್ದದ್ದೆ ದಾರಿಯೆಂದು ನೆಡೆಯಲು ಹೋಗಿ ಸಿಕ್ಕ ಗೌರವವನ್ನು ಕೈಯಾರೆ ಕೆಡಿಸಿಕೊಂಡು ಬಿಡುತ್ತಾರೆ...
ಇನ್ನಷ್ಟು ಜನ ಅತೃಪ್ತಿಯ ನೆರಳೊಳಗೆ ಚೆಂದದ ಜೀವನವ ಮುಗಿಸಿಕೊಂಡು ಬಿಡುತ್ತಾರೆ...
ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವಂತೆ ಎಲ್ಲರ ಜೊತೆಜೊತೆಗೆ ಸಾಗಬಲ್ಲವರು ಮಾತ್ರ...ಸದಾ ಸುಖಿಗಳಾಗಿರುತ್ತಾರೆ....ಏನೋ ಒಂದು ಸಾಧಿಸುತ್ತಾರೆ...ಅದನ್ನು ನೋಡಿ ಕರುಬುವವರು ಕರುಬುತ್ತಲೆ ಇರುತ್ತಾರೆ...
ಒಟ್ಟಾರೆ ಮನುಷ್ಯನ ಜೀವನವೊಂದು ಪ್ರಯೋಗಶಾಲೆ....ಇಲ್ಲಿ ನಿತ್ಯ ಪ್ರಯೋಗಕ್ಕೊಳಗಾಗಬೇಕು...
ಯಶಸ್ವಿಯಾಗಬೇಕು.
ತಮ್ಮ ಮೌಲ್ಯಯುತ ಕವನಕ್ಕೆ ಈ ಕಿರಿಯನ ನಮನಗಳು 🙏
ಧನ್ಯವಾದಗಳೊಂದಿಗೆ
ಅತ್ಯಂತ ಪ್ರೀತಿಯಿಂದ
ಸಾಮಾನ್ಯ ಸಾಹಿತ್ಯ ಸೇವಕ
✍ಖುಷಿಕೃಷ್ಣ ✍
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ