ಏನಿದು ಬದುಕು-ಕವನ
ನೀ ಮಾಯೆಯೋ ಶಿವನೆ ನಿನ್ನೊಳು ಮಾಯೆಯೋ?
ನಾ ಮಾಯೆಯೋ ನನ್ನ ಬದುಕೇ ಮಾಯವೋ..
ಹರನೊಲಿದೊಡೆ ಸ್ವರ್ಗ ಸತ್ಯ, ಸುಖ
ಹರ ಮುನಿದೊಡೆ ದುಃಖ, ನಿತ್ಯ ನರಕವೋ..
ನಿಂತ ನೀರ ಕಲಕಲಾರವು ಒಳಗಿನ ಕಲ್ಲುಗಳು..
ಆದರೆ ಮನ ನೆಲೆ ನಿಲ್ಲದು ಹರನೇ
ಭಾವನೆಗಳು ಬಂಧನದೊಳಿರಲಾರವು ನೆಗೆದು ಪುಟಿವುವು..
ಮನವ ನಿಂತರೂ ಕಲಕುತ್ತಾ ಹದಗೆಡಿಸುವುವು...
ಮಾಯೆಯೊಳಗೇ ಜನನವಾಗಿ ಮಾಯೆಯಲಿ ಬದುಕ ಸವೆಸಿ, ಕೊರಗಿ,
ಜ್ಯೋತಿಷಿಯೂ ತಿಳಿದಿರಲಾರ ತನ್ನದೇ ಆದ
ಮಾಯಾ ಬದುಕಿನ ಕೊನೆಯ ಕ್ಷಣದ ಬವಣೆಯ.
ಮನದ ಕದವ ತೆರೆವ ಮಾಯೆ
ಮನದೊಳಗಣ ಕೋಲಾಹಲದ ಮಾಯೆ
ಮಾಯಾ ಕನ್ನಡಿಯು ಬದುಕ ಬಾಳ್ವೆ ಮುಗಿಯದೀ
ಪಯಣ ಮಸಣದವರೆಗಿನ ಛಾಯೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ