ಶನಿವಾರ, ಮಾರ್ಚ್ 24, 2018

202. ಭಾವಗೀತೆ-ಮನೆಮಲ್ಲಿಗೆಗೆ

ಭಾವಗೀತೆ

ನಗೆ ಮಲ್ಲಿಗೆ ನಮ್ಮ ಮನೆ ಮಲ್ಲಿಗೆ
ಬೆಳಗು ನಮ್ಮೆಲ್ಲರ ಮನ ಮಲ್ಲಿಗೆ//

ಇದ್ದ ಮನೆ ಹೋದ ಮನೆ ನಿನ್ನದೆ
ಬಾಳು ಯಾವುದೇ ವೇದನೆಯಿಲ್ಲದೆ//

ಬದುಕು ಮಲ್ಲಿಗೆಯಂತೆ ಬಾಳು ದೇವತೆಯಂತೆ
ಬಿಡು ಜೀವನದ ಅಂತೆ ಕಂತೆಗಳ ಚಿಂತೆ//

ಹೆಸರು ತಾ ಹುಟ್ಟಿದ ಮನೆಗೆ
ಉಸಿರಿರಲಿ ಸೇರಿದ ಮನೆಗೆ//

ಹೆತ್ತವ್ವನ ಮಾತು ನೆನಪಿರಲಿ
ಬಾಳ ಬವಣೆಯ ಅರಿವಿರಲಿ//

ನಮ್ಮ ಸಂಸ್ಕೃತಿ ಬಗ್ಗೆ ಅರಿವಿರಲಿ
ಬದುಕ ಗೆಲ್ಲುವ ಮಹಾ ಛಲವಿರಲಿ//

ನಾಳೆಯ ಅರಿವು ಸದಾ ಇರಲಿ
ಬದುಕು ಬಂಗಾರವಾಗಿರಲಿ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ