ಭಾವಗೀತೆ
ಅರಿಕೆ
ದಿನಕರನೆ ನಿನ್ನ ಉರಿಯ ಕಡಿಮೆಮಾಡೊ
ನಾ ತಾಪ ತಾಳಲಾರೆ ಶಕ್ತಿ ನೀಡೊ..
ನಮಸ್ಕರಿಸುತಿರುವೆ ದೇವ ನೀನೇ ಕಾಪಾಡೊ
ಬೆಂಕಿಯಲ್ಲಿ ಬೇಯಲಾರೆ ಮಳೆಯ ತಾರೊ//
ರವಿಚಂದಿರ ಒಟ್ಟಾಗಿ ಬೆಳಕ ತರುವಿರಿ
ನನ್ನ ಮನವ ಅರಿತುಕೊಂಡು ನೀವು ಬರುವಿರಿ
ಆದರೇನೊ ಬದುಕು ಅಂಧಕಾರದಲ್ಲಿ ಮುಳುಗಿದೆ
ನೀವೆ ನನ್ನ ಬೆಳಗಬೇಕು ದಾರಿ ಕಾಣದಾಗಿದೆ//
ಬಿಸಿಲು ಏರಿ ಮಳೆಯು ಇರದೆ
ತಬ್ಬಾಗಿಹೆ ತಂಗಾಳಿ ಇತ್ತ ಬರದೆ
ಆದಿತ್ಯ ನೀನೆ ಬಲವು ಈ ಧರೆಗೆ
ಬರವು ನೀನಿಲ್ಲದೆ ಎಂದೂ ನನಗೆ//
ತಿರೆಯ ಬೇಡಿಕೆ ಅರಿತುಕೊಳ್ಳೊ
ನನ್ನೆದೆಗೆ ತಂಪ ತಂಗಾಳಿ ತಳ್ಳೊ
ಜಗದ ಎಲ್ಲ ಜೀವದಾಗರ ನೀನೆ
ನನ್ನ ಜೀವ ರಕ್ಷಕ ನೀನೆ ತಾನೇ//
ಬರದ ಬೇಗೆ ತಾಳಲಾರೆ
ಮನಕೆ ಮುದವ ನೀಡಲಾರೆ
ನನ್ನೆದೆಗೆ ತಂಪ ಹರಿಸಬೇಕು
ಈ ಧರಣಿಯ ನೀನೆ ಕಾಯಬೇಕು//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ