ಶನಿವಾರ, ಏಪ್ರಿಲ್ 7, 2018

230. ಕಿರು ಕಥೆ-ನಾನು

ನೀನೆಂದರೆ ನನಗೆ ಪ್ರೀತಿಯ ಅಲರ್ಜಿ

ನಿನ್ನೊಡನೆ ಕಾತರದಿ ಕಳೆವ ಸಮಯಕ್ಕಾಗಿ ಕಾದು ಕುಳಿತ ನನಗೆ ನೀ ಬರದೆ ಹೋದಾಗ ತುಂಬಾ ದುಃಖ.. ಅದೇಕೋ ತುಂಬಾ ಮಿಸ್ಸಿಂಗ್! ನಿನಗೆಲ್ಲಿ ಅರ್ಥ ಆಗುತ್ತೆ ಈ ಫೀಲ್ಂಗ್ ಎಲ್ಲಾ..

ನೀನು ಪ್ರಾಕ್ಟಿಕಲ್ ಮಾತ್ರ. ಜೀವನ ತಿಯರಿ ನೀನಿನ್ನೂ ಕಲಿಯ ಬೇಕಾದ್ದು ತುಂಬಾ ಇದೆ. ನಿನಗೆ ನೀನು ಗ್ರೇಟ್ ಬಟ್ ನಿನ್ನ ನಂಬಿಕೊಂಡವರ ಮನಸಲ್ಲೂ ನೀ ಗ್ರೇಟ್ ಅಂತ ಕರೆಸಿಕೊಳ್ಳೋದೇ ನಿಜವಾಗಿ ಗ್ರೇಟ್!

  ನೀ ನಿಜವಾಗಿ ಗ್ರೇಟ್, ಒಂಥರಾ ಅಹಂಕಾರಿ, ಒಂಥರಾ ಕೂಲ್, ಜಾಣ ಅಷ್ಟೆ ಶಿಸ್ತಿನ ಸಿಪಾಯಿ, ಅದಕ್ಕಿಂತ ಹೆಚ್ಚು ಸೋಮಾರಿ..

ಹೇಗೆ ನಿನ್ನ ಸಂಬಾಳಿಸುವೆಯೋ  ದೇವರಿಗೇ ಗೊತ್ತು! ನೀ ತುಂಬಾ ತುಂಟ! ಆ ತುಂಟತನವೇ ನನಗೆ ತುಂಬಾ ಇಷ್ಟ! ಆದರೆ ಕೆಲವೊಮ್ಮೆ ಅದವನ್ನೂ ನಿನ್ನ ಸೆಲ್ಫಿಶ್ ಐಡಿಯಾಗಳಿಂದ ಮರೆತೇ ಬಿಡ್ತೀಯಾ..ಛೆ !ಬಡ್ಕೋಬೇಕು ನಾನು...ಆದ್ರೂ ವೇಸ್ಟ್!
ನೀನೇನೋ ದೊಡ್ಡ ಜನ ಊರಲ್ಲೆಲ್ಲಾ.. ಆದರೆ ನನಗೆ? ಕೈಗೇ ಸಿಗಲ್ಲ! ನಿನ್ನೊಡನೆ ಕಳೆದ ಕ್ಷಣಗಣನೆ ಮಾಡಿಟ್ಟಿರುವೆ.. ಏನೋ..ಚೆನ್ನಾಗಿರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ