ಹನಿಗವನಗಳು
ಅಮೃತ ಶೀರ್ಷಿಕೆಗೆ
1. ಗೋಮಾತೆ
ನನ್ನ ಗೋತಾಯಿ ನೀ
ನಿನ್ನ ಹಾಲೇ ಅಮೃತ..
ನಿನ್ನ ಸೆಗಣಿ ಕ್ರಿಮಿನಾಶಕ
ಸಸ್ಯ ಬೆಳೆಯಲು ಗೊಬ್ಬರ
ಬೆಣ್ಣೆ ತುಪ್ಪಕೆ ಹಾಲೇ ಬೇಕು!
ನಿನ್ನನುಳಿಸಲು ಪಣ ತೊಡಬೇಕು!
ನಿನಗೂ ಉಣಿಸುವರು ವಿಷ!
ಪಡೆಯಲು ಹೆಚ್ಚು ಹಾಲ
ಮಾಡುವರು ಅದನು ಹಾಲಾಹಲ.
2. ವಿಷ
ಪ್ರತಿ ಊಟ ಆಗಿರಬೇಕು ಅಮೃತ
ಆದರೀಗ ವೈಜ್ಞಾನಿಕ ಯುಗ
ತಿನ್ನುವುದೆಲ್ಲ ಆಹಾರ
ವಿಷ!
ಫಿಜ್ಜಾ ಬರ್ಗರ್ ಡೀಪ್ ಫ್ರೈ..
ಎಣ್ಣೆ ಇಲ್ಲದ ತಿನಿಸಿಲ್ಲ!
ಬಣ್ಣಕ್ಕು ವಿಷ, ಎಣ್ಣೆಗು ವಿಷ!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ