ಹಾಕ್ರಪ್ಪೋ ಓಟು
ಹಾಕ್ರಪ್ಪೋ ಓಟ
ನೂಕ್ರಪ್ಪೋ ದೇಶಾನಾ..
ನಾವು ಹಾಕಿದ್ ಓಟ್ ಮ್ಯಾಲೇನೇ
ಆರ್ಸಿ ಬರ್ತಾರ್ ಮಂದಿ..
ಮಂತ್ರಿಗಳ್ನ ಆರ್ಸೋವಾಗ
ಚೆನ್ನಾಗಿರೋದ್ ಬೇಡ್ವೆ
ಚಿಲ್ರೆ ಕಾಸಿಗಾಗಿ
ಕೆಲ್ಸಕ್ ಬಾರ್ದವ್ನ್ ಬೇಕೇ..
ಕಾಸೀನ್ ಆಸೆ ಬಿಡ್ರೋ
ದೇಶದ್ ಬಗ್ಗೆ ಯೋಚ್ಸಿ
ನಮ್ ದೇಶ ಉದ್ಧಾರಾಗ್ ಬಾರ್ದಾ
ಯೋಚ್ನೆ ಮಾಡಿ
ಹಾಕ್ದೆ ಇದ್ರೆ ಓಟು
ದೇಶ ಹಾಳಾಯ್ತದೆ
ಓದೋಕ್ ಬರ್ದ ಜನ್ ರನ್ನೆಲ್ಲ
ಒತ್ತಿಸ್ಕೊಳ್ತಾರಲ್ಲ!!
ಮುಂದುವರಿಯ ಬೇಕ್ರಿ
ಪಕ್ಷ ನೋಡ್ದೆ ನಾಯ್ಕನ್ ನೋಡಿ
ಒಳ್ಳೆ ಜನಾನ ಆರ್ ಸ್ರಿ
ನಿಮ್ ಊರು ಉದ್ಧಾರಾಗ್ಲಿ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ