ಬರಡಾದ ಭೂಮಿ
ಬರಡಾದ ಭುವಿಯಿಂದು
ನಿಟ್ಟುಸಿರ ಬಿಡುತಿಹುದು
ಭವಣೆಯಿಂದ ಬಸವಳಿದು
ಬೆಂಡಾಗಿ ಬಳಲಿಹುದು...
ಭಯದಿ ತಾ ಬದುಕುತಿಹುದು
ಭಕುತರನು ಪೊರೆದಿಹುದು
ಭಯಾನಕ ಮನುಜರ
ಬರ್ಭರಕ್ಕೆ ಭಯಪಡುತಿಹುದು..
ಬಾಳ ಬಂಡಿ ಬಡಿಯುತಿಹುದು
ಬಾನ ಭಾನು ಉರಿಯುತಿಹನು
ಬಯಲು ಬೆತ್ತಲಾಗಿಹುದು
ಬೇಟೆ ಭೇಟಿ ನೀಡಿಹುದು
ಬುಗುರಿಯಂತೆ ತಿರುಗಿದರೂ
ಬಟಾ ಬಯಲು ಎಲ್ಲೆಡೆ
ಬರಹದಲ್ಲಿ ಬರೆಯುವರು
ಬಳಿಯೆ ಉಳಿಸಲಾರರು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ