ಗಝಲ್
ನೀ ನನ್ನ ಕಂಡು ಕಣ್ಣಲ್ಲೆ ಮಾತನಾಡಿದ ನೆನಪು
ನಿನ್ನ ನನ್ನ ಮನಗಳು ಒಂದಾದ ನೆನಪು..
ನಿನ್ನ ಬಿಸಿ ಉಸಿರೆನಗೆ ತಾಗಿದಾಗ
ನನ್ನೆದೆ ಪುಳಕದಿ ಪುಟಿದೆದ್ದ ನೆನಪು..
ನಿನ್ನ ಹಿತವಾದ ಸ್ಪರ್ಶದ ಸುಖಕೆ
ತನುಮನ ರೋಮಾಂಚನಗೊಂಡ ನೆನಪು..
ನೀ ನನ್ನ ಬಾಳಲ್ಲಿ ಬರುವೆಯೆಂದಾಗ
ಬಾಳ ಹೂಜೇನು ಸವಿದಂಥ ನೆನಪು..
ನಡು ನದಿಯ ಕಲ್ಲಲಿ ಕುಳಿತು
ಭವಿಷ್ಯದ ಬಗೆಗಿನ ಕನಸ ಕಟ್ಟಿದ ನೆನಪು..
ಹಚ್ಚ ಹಸಿರ ಪಚ್ಚೆ ಗದ್ದೆಯ ನಡುವಲಿ
ನೀ ನನ್ನನೆತ್ತಿ ಮುದ್ದಾಡಿದ ನೆನಪು..
ನಿನ್ನ ಮಾತನು ಕೇಳುತ್ತಾ ಕೇಳುತ್ತಾ
ನಿನ್ನ *ಪ್ರೇಮ* ಪಾಶದಿ ಬಿದ್ದಂತ ನೆನಪು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ