1. ನೋಟ
ಮೊದಲ ನೋಟದಲ್ಲೇ
ನನ್ನ ಕೊಂದೆ ನೀನು!!
ಸತ್ತ ಮರುಕ್ಷಣವೇ
ಸೇರಿದೆ ನರಕ ನಾನು!!!
2.ಪಾಲಿಶ್
ನೋಡುತ್ತಾ ಕುಳಿತಿದ್ದೆ
ಅವಳ ನೇಲ್ ಪಾಲಿಶ್!
ಅರಿತೇ ಇಲ್ಲ ನನ್ನ ಕೆನ್ನೇಲಿ
ಅಚ್ಚಾದ ಅವಳ ಬೂಟ್ ಪಾಲಿಶ್!!
3. ಸತ್ಕಾರ
ಮಾತಲಿ ಮಮಕಾರ!
ಬಿರುಸಿನ ಸತ್ಕಾರ!!
ಎದೆಯಲಿ ಬರಬರ
ಮೆಣಸಿನ ಉರಿಕಾರ!!
4. ಗೆಲುವು
ಕೌರವ-ಪಾಂಡವರು ಮಾಡಿದರು ಯುದ್ಧ
ಅವರಲಿ ಪಾಂಡವನೇ ಗೆದ್ದ!
ಗೆದ್ದನು ಕೌರವನೂ ಕೂಡಾ
ಯುದ್ಧದಲ್ಲಲ್ಲ...
ಛಲದಲ್ಲಿ ಗೆದ್ದ,.
5. ನಾನು
ನಾನು ನಾನೇ
ನಾನಾರೆಂಬುದ
ನಾನರಿಯೆ
ನಾನಾರೆಂಬುದ
ತಿಳಿಯುವ ಸಮಯದಿ
ನಾನಿರಲಾರೆ!
6. ನೀನು
ನೀ ನನ್ನ ಜೀವನ ಚಕ್ರ
ನೀ ನನ್ನ ಬಾಳಿನ ಮಿತ್ರ
ನೀ ನನ್ನ ಪ್ರೇಮದ ಪತ್ರ
ನೀ ನನಗಾಗಿಯೇ ಪವಿತ್ರ!!!
7. ಲೇಖನಿ
ಬರೆಯುವೆ ಕಕ್ಕುವೆ
ನಿನ್ನ ಮನದಿಂಗಿತವ
ಹೊರಹಾಕುವೆ ನಿನ್ನಯ
ಹೃದಯದ ಭಾವನೆಯ....
8. ಪುಸ್ತಕ
ಪುಸ್ತಕ ಮಸ್ತಕದ
ಬುದ್ಧಿಯ ಸಾರವು..
ತಕತಕ ಬರೆವನು
ಸದ್ದಿಲ್ಲದೆ ಕವಿಯು..
ಒಳ್ಳೆಯದೆಲ್ಲ, ಹಾಳೇ ಇಲ್ಲ!
9. ಜನುಮ ದಿನ
ಅಮ್ಮನ ಜನುಮದಿನ
ನಮ್ಮಯ ದಿನಕೆ
ಅವಳದೆ ಅಡಿಗೆ..
ಅದಕೇ ಕರೆದೊಯ್ದೆ
ಅವಳ ದೂರದ ಹೋಟೆಲ್ಗೆ..
10. ನನ್ನರಸ
ಹಾಸ್ಯರಸ ಉಕ್ಕಿಸುವ
ವಿಕಟಕವಿ ನನ್ನರಸ..
ತಿಂಡಿ ತಾರೆನಲು
ತರುವನು ಕಸ..
@ಪ್ರೇಮ್@
11. ಬಳಿ
ನನ್ನ ಬಳಿ ಬಾ
ಬಿಳಿಯನ್ನ ತಾ
ಕಲಿಸಲು ಬೇಗಾ
ಬಳಿಸಾರಿ ನೀ ಬಾ..
12. ಆಕಳು
ನನ್ನ ಮುದ್ದಿನ ಆಕಳು
ಪ್ರತಿದಿನ ಕೊಡುತ್ತೆ ಹಾಲು
ಆಕಳ ಕರು ಕಪ್ಪು
ಅದು ತಿನ್ನುವುದು ಸೊಪ್ಪು...
13. ಕನಸು
ಸಿರಿವಂತನಾಗುವ ಕನಸು ಕಂಡೆ
ದೂರದ ದೇಶಕ್ಕೆ ಹಾರಿದೆ
ದುಡ್ಡಿನ ಗುಡ್ಡೆಯ ನೆನೆದೆ
ಇದ್ದುದೆಲ್ಲವ ಕಳೆದುಕೊಂಡೆ
ಬಿಕಾರಿಯಾಗಿ ಮನೆಗೆ ಮರಳಿದೆ
ನನ್ನ ದೇಶವೇ ದೇವಾಲಯವೆಂದೆ!
14. ವನ
ಬೆಳೆಯುತಲಿದ್ದರೆ ವನ
ದೇಶವಾಗುವುದು ನಂದನವನ
ಮನೆಯಲೆಲ್ಲ ಗಿಡಗಳ ನರ್ತನ
ಊರಲೆಲ್ಲ ಕರತಾಡನ!!
15. ವಸಂತ
ನೀ ನನ್ನ ಬಾಳಲಿ ಬಂದೆ
ನವವಸಂತವ ನೀ ತಂದೆ!
ನಾ ಹಸಿರುಟ್ಟ ಧರೆಯಾದೆ..
ಭುವಿಗೆ ಬಂದಂತೆ ವಸಂತ
ಗಿಡಮರ ಚಿಗುರಿಸಿ ನಿಂತ!!
16. ಮೌನ
ನಮ್ಮಿಬ್ಬರ ನಡುವೆ
ಶೀತಲ ಸಮರ!
ಅವಳ ವಟಗುಟ್ಟುವಿಕೆಗೆ
ನನ್ನದು ಮೌನ!
ಅಡಿಗೆಯಲಿ ಪಾತ್ರೆಗಳ ಮಾತು
ನನ್ನ ಮೊಬೈಲಲಿ ಗೆಳತಿಯ ಚಾಟು!!
17. ದೀವಿಗೆ
ತಾ ನಕ್ಕು ಇತರರ ಬೆಳಗಿಸುವೆ
ಜಗವೆಲ್ಲ ಬೆಳಕ ತರುವೆ
ಒಳಗೊಳಗೆ ನಾ ಸುಡುತಿರುವೆ
ನನ್ನ ಬಾಳ ಬರಿದಾಗಿಸುತಲಿರುವೆ!
18. ಮಾತು
ಮನೆ ಮಠ ಮಂದಿರ
ಎಲ್ಲೆಡೆ ನಾನೇ ಸುಂದರ!
ಮಾತಿಲ್ಲದ ಬದುಕಿದು ಏಕೆ?
ಮಾತಿನಲೆ ಜೀವನ ಸಾಕೇ?
19. ಭಾರ
ನನ್ನ ಹೆಂಡತಿಯ ಭಾರ
ಹೊರಲಾರೆ ಓ ತಾರಾ
ನನ್ನಜ್ಜಿ ನೀ ಬಾರಾ
ನಿನ್ನ ಶಕ್ತಿ ನನಗೆ ತೋರಾ!!
20. ವದನ
ವದನದಲಿ ನವನವೀನ
ತಲ್ಲಣವಿಲ್ಲದ ತನುಮನ
ನಗೆಯುಕ್ಕಿಸುವ ಕವನ
ನಮಗೆ ಬೇಕು ಪ್ರತಿದಿನ
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ