ಮಗಳು
ಮಗನೆಂದರೆ ಅಕ್ಕರೆ ಮಾತೆಯ ಮನಕೆ
ಮಗಳೂ ಸಕ್ಕರೆಯಂತಲ್ಲವೆ ಜಗದಗಲಕೆ..
ಕನಸಿನ ರಾಣಿಯಾಗಿ ಮೆರೆಯುವಳು ಆಕೆ
ಮನಸಿಟ್ಟು ಬೆಳೆಸಿದರೆ ಆಕೆಯ ಅರಿಕೆ..
ತಿದ್ದಿ ತೀಡುತ್ತ ಸುತೆಯ ಬೆಳೆಸಲು ಬೇಕು
ಕನಸು ನನಸಾಗಿಸುವ ಮುದ್ದು ಮನಸು ಸಾಕು
ತನ್ನುಸಿರು ಇರೊವರೆಗೆ ಪ್ರೀತಿ ಹಂಚಬೇಕು
ಮಗನಿಂದ ತಾನು ಕಡಿಮೆ ಇಲ್ಲದಿರೆ ಸಾಕು!
ಕನಸಿನ ಕೂಸವಳು ಬೆಳೆದಷ್ಟು ಎತ್ತರ
ಅಪ್ಪನೂ ಬೆಳೆಯುವನು ಬಾನಿಗೆ ಹತ್ತಿರ
ಪುತ್ರಿಯ ಸಾಧನೆಯದು ಹೆಮ್ಮೆ ಜನರ
ಗುಣಕೆ ತಲೆಬಾಗುವೆವು ಮನ-ಮಂದಿರ.
ಕನ್ಯೆ ಜನಿಸಿದರೆ ಹಸುಗೂಸ ಮುರುಟುವರು
ಜನರೆಲ್ಲ ಹೊರಗಿನ ಕುವರಿಯೆನ್ನುವರು
ಬೆಳೆಸಿ ತೋರಿಸಿ ಮಗಳ ಹೇಳಲಿ ಅವರು
ಸಾಧನೆಯಾದಾಗ ಬಾಯಿ ಮುಚ್ಚುವರು!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ