.ಶಿವ ಸ್ತುತಿ
ಶಿವನೆ ಗೌರಿವರನೆ ಬೇಡುವೆ
ನಮ್ಮ ಕಾಯೊ ಮಹಾ ದೇವನೆ
ಬೇಡಿ ಕೊಳ್ಳುವೆನು ನಿನ್ನ ನಾನು
ವರವ ಕರುಣಿಸೊ ಈಶನೆ..
ನಿನ್ನ ಬೇಡುವ ಭಕ್ತರಿಗೆ ನೀನು
ಬೇಡಿದ ವರವ ನೀಡುವೆ
ತಂದೆ ತಪ್ಪಿಸು ನಮ್ಮ ಕಷ್ಟವ
ನಿನ್ನ ದಯೆಯನು ಕರುಣಿಸು
ಮನದಿ ನಿನ್ನಯ ಭಕ್ತಿ ಮಾಡುವೆ
ಕಾಯೊ ನನ್ನನು ಮಹೇಶನೆ
ನಿನ್ನ ಪಾದದ ಧೂಳು ನಾನು
ತಪ್ಪುಗಳ ಕ್ಷಮಿಸೆಮ್ಮಯ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ