ಶನಿವಾರ, ಅಕ್ಟೋಬರ್ 20, 2018

543. ಗಝಲ್-36

ಗಝಲ್

ಅರಳಿ ನಗುವೆ ನಾನು ಬೀರುವೆ ಸುಮಧುರ ಸುಗಂಧ
ಬಿರಿದು ನಲಿಯುವೆ ನಾನು ಹರಡುವೆ ಮಧುರ ಸುಗಂಧ..

ನನ್ನರಸಿ ಬರುವೆ ನೀ ಮುಡಿಗೆ ಮುಡಿಯಲು
ನಾ ತರುವೆ ನಿನ್ನ ಕೂದಲಿಗೆ ಅಮರ ಸುಗಂಧ..

ನನ್ನ ಕರೆವರು ದೇವರ ಗುಡಿಯೊಳಗೆ
ಅಲ್ಲಿ ನಾ ಬೀರುವೆ ಸವಿವರ ಸುಗಂಧ..

ಮನೆಯೊಳಗಿನ ದೇವರ ಫೋಟೋಗೆ ನನ್ನ ಜೋಡಿಸುವರು
ಮನೆಯೊಳಗೆಲ್ಲ ನನ್ನ ದೇವರ ಸುಗಂಧ..

ಮದುವೆಗೂ ನನ್ನ ಕರೆದೊಯ್ಯುವರು
ಅಲ್ಲಿ ನಾ ಪಸರಿಸುವೆ ಹಗುರ ಸುಗಂಧ..

ಬದುಕಿನ ಪ್ರೇಮ-ಪ್ರೀತಿಗೆ ನಾನೆ ಬರಬೇಕು
ನನ್ನಿರವು ಹರಡುವುದು ಪ್ರಿಯಕರ ಸುಗಂಧ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ