.ನನ್ನ ಕವನ
ನಾನೂ ಸಹ( ಮೀ ಟೂ)
ಇತರ ಭ್ರೂಣಗಳಂತೆ ಜೀವ ನಾನೂ ಸಹ
ಮನುಜರೇ ಕೊಲ್ಲುವಿರೇಕೆ ನನ್ನ ಜೀವಸಹಿತ..?
ಇತರ ಜೀವಿಗಳಂತೆಯೇ ಅಲ್ಲವೇ ನಾನೂ ಸಹ
ಕಡಿಯುವಿರೇಕೆ ನನ್ನ ಕೊಡಲಿಯಿಂದ ಭಾವರಹಿತ?
ಎಲ್ಲ ಮಾನವರಂತಲ್ಲವೇ ಹೆಣ್ಣು ನಾನೂ ಸಹ
ಬದುಕ ಬಿಡಲಾರಿರೇಕೆ ನನ್ನ ಭಯರಹಿತ?
ಭೂಮಿಗೆ ತಂಪನೀಯುವ ಚಂದಿರ, ಉಪಗ್ರಹ ನಾನೂ ಸಹ
ನನ್ನ ಮೇಲೇನು ಕೆಲಸ ನಿಮಗೆ ಉಪಗ್ರಹಸಹಿತ?
ಜಗಕೆ ಮಳೆ ತರುವ ಮೋಡವಲ್ಲವೆ ನಾನೂ ಸಹ..
ನಿಮ್ಮದೇನು ಸವಾರಿ ನನ್ನ ಮೇಲೂ ಅನವರತ?
ಸ್ವಂತ ಹೆತ್ತ, ಹೊತ್ತ ಮಾತೆಯಲ್ಲವೇ ನಾನೂ ಸಹ
ನನ್ನ ಮೇಲೇಕೆ ರೇಗಾಟ? ನಾ ಪ್ರೀತಿಸುವೆ ಸತತ...
ಹೊರಗೆ ಜನರೆದುರು ಮೆರೆವೆ ಸುಳ್ಳು ಹೇಳುತ ನೀನು ಸಹ
ಮನೆಯೊಳಗೆ ಮಳೆಯಂತೆ ಗುಡುಗು ಸಹಿತ...
ದಾನವನಾಗುತಲಿರುವೆ ನೀನು ಸಹ
ಮಾನವತೆಯ ಮೆರೆಯಬಾರದೆ ನೀತಿ- ಪ್ರೀತಿ ಸಹಿತ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ