ಬುಧವಾರ, ನವೆಂಬರ್ 7, 2018

574. ನಾನು ನೀನು

ಕವಯತ್ರಿ-ಪ್ರೇಮಾ ಉದಯ್ ಕುಮಾರ್

ವಿಳಾಸ- ಸಹ ಶಿಕ್ಷಕರು

            ಸ.ಪ.ಪೂ.ಕಾಲೇಜು ಐವರ್ನಾಡು

           ಸುಳ್ಯ ತಾಲೂಕು ದ.ಕ  574329


ಕವನದ ಶೀರ್ಷಿಕೆ- ನಾನೂ ನೀನೂ ಒಂದೇ

ಕವನ

ನನ್ನರಸಿ ನನ್ನ ಕೇಳೇ, ಕೋಪವೇಕೆ ಹೇಳೇ?

ನನ್ನರಸ ಬೇಕು ಎನಗೆ, ಹಬ್ಬಕೊಂದು ಸೀರೆ..

ಜಾಣೆ ನೀನು ಕೇಳು ನನ್ನ ಮಾತನ್ನೊಮ್ಮೆ ಇಲ್ಲಿ,

ಈಗ ಬೇಡ ಮೊದಲು ಬರಲಿ ಕೇಳಿದಂಥದ್ದಿಲ್ಲಿ! //ಪ//

ಮನಸಾರೆ ಪ್ರೀತಿಸುವೆ ನಿನ್ನ, ನನ್ನ ನಲ್ಲೆಯೇ..

ನಿನ್ನ ಪ್ರೀತಿಯಲ್ಲೆ ನಾನೂ ಬಾಳುತಿಲ್ಲವೇ?

ಮತ್ತೇಕೆ ನನ್ನ ಮನವೇ, ನೀ ಕೋಪಗೊಳ್ಳುವೇ?

ನನಗೇನು ಬೇಕು ಎಂದು ನೀ ಅರಿಯಲಿಲ್ಲವೇ!//೧//

ಬಳಿಸಾರಿ ಬಾರೇ ನನ್ನ ಮುದ್ದಿನ ಮಣಿಯೇ..

ಬರಲಾರೆ ನನ್ನ ಚಿನ್ನ, ಉಡುಗೊರೆ ಸಿಗದೆಯೇ..

ನನ್ನನ್ನೆ ನಾನು ತಂದೆ, ನಲ್ಲೆ ನಿನಗಾಗಿಯೇ..

ನನ್ನ ಬಾಳನ್ನು ಧಾರೆಯೆರೆದೆ ನಿನ್ನ ಪ್ರೇಮಕ್ಕಾಗಿಯೇ.//೨//

ತಡವೇಕೆ ನನ್ನ ನಲ್ಲೆ, ಮುನಿಸು ಏತಕೆ?

ನಾನು ಕೇಳಿದ್ದಕ್ಕೆ ಇದುವೇ ಉತ್ತರ ಸಾಕೇ?

ನನ್ನದೆಲ್ಲ ನಿನ್ನದೇನೇ, ಕೇಳೆ ನನ್ನ ರಾಣಿಯೇ..

ಚಿಕ್ಕಪುಟ್ಟ ಆಸೆಯನ್ನು ಪೂರೈಸಲಾರೆಯೇ..?//೩//

ನನ್ನ ರಾಣಿ ಕೇಳೆ ನೀನು, ನನ್ನವಳೆ ಅಲ್ಲವೇ?

ಸಿಹಿ ಮುತ್ತಿಗಾಗಿ ನೀನು ಕಾಯಿಸಲೇ ಇಲ್ಲವೇ?

ಬಾರೆ ಮುದ್ದು ನನ್ನ ಬಳಿಗೆ, ಪ್ರೀತಿ ನಿನಗೆ ಇಲ್ಲವೇ?

ನಾನು ನೀನು ಇಬ್ಬರೂ ಎಂದೂ ಒಂದೇ ಅಲ್ಲವೇ?//೪//

@ಪ್ರೇಮ್@



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ