ಬುಧವಾರ, ನವೆಂಬರ್ 21, 2018

604. ಸಂಕ್ರಾಂತಿ

ಸಂಭ್ರಮದ ಸಂಕ್ರಾಂತಿ

ಸಾಗುತ್ತಲಿ ಬಂದಿದೆ ಇಂದು
ಸಂಭ್ರಮದ ಸಂಕ್ರಾಂತಿ ಸಿಂಧು...
ಸಡಗರದ ಸವಿಯನ್ನು ಉಂಡು
ಎಳ್ಳಿನ ಜೊತೆಗೆ ಬೆಲ್ಲದ ತುಂಡು...

ಸಮರಸದಿ ಇರಿ, ಸುಶಾಂತಿಯ ತಾಳಿ
ಸದ್ಗತಿಯ ಕೋರಿ, ಸರಸದಿ ಬಾಳಿ..
ಸಂಪ್ರೀತಿ ಇರಲಿ, ಸಂತಸವ ತರಲಿ
ಆರೋಗ್ಯ ಚೆನ್ನಾಗಿರಲಿ, ಜಗವೆಲ್ಲ ಹಾಯಾಗಿರಲಿ..

ಸಿಹಿಯನ್ನು ಉಣ್ಣುತ್ತಾ ಕಹಿಯನ್ನು ಮರೆತು,
ಬುವಿಯೊಳಗೆ ಬದುಕುತ್ತಾ, ಮೇಲು ಕೀಳನು ತೊರೆದು..
ಮನದ ದುಗುಡವ ಬಿಸುಟು, ಸ್ವಚ್ಛತೆಯ ಕಾಪಾಡಿ..
ಕಸದ ಕೊಳೆಯನು ಗುಡಿಸಿ, ಸಂಸ್ಕೃತಿಯ ಬಿಡಬೇಡಿ...

ಹಬ್ಬಗಳ ಸಾಲಿನಲಿ ಹೊಸ ಬೆಳೆಗೆ ಸುಗ್ಗಿ,
ಸುಗ್ಗಿಯ ಕುಣಿತಕ್ಕೆ ಹಿರಿ-ಕಿರಿಯರು ತಗ್ಗಿ..
ತೆನೆ ಹೊತ್ತು ಮನೆ ಬೆಳಗಿ ಹೊಸದಾದ ಬಾಳು,
ಕಷ್ಟ ಪಡದಿರುವವನ ಬದುಕೆಲ್ಲಾ ಗೋಳು...

ಸಂಕ್ರಾಂತಿ ಬಂತು, ಸಡಗರವ ತಂತು
ಸಂದೇಶ ಹೊತ್ತು, ಸಂತೋಷ ಮಿಳಿತು
ಸಂದೀಪ ಬೆಳಗಿ, ಸಂತಾಪ ಕರಗಿ
ಸಂಬಂಧ ಒಂದಾಗಿ, ಸಂಗೀತ ಮಿರುಗಿ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ