ಬುಧವಾರ, ಫೆಬ್ರವರಿ 13, 2019

768. ಭಾವಗೀತೆ-22 ಮನಸ ಮಲ್ಲಿಗೆ

ಮನಸ ಮಲ್ಲಿಗೆ

ನನಗೆ ನೀನು ನಿನಗೆ ನಾನು
ಬಾಳ ಬಂಡಿ ನೂಕಲು
ಕಷ್ಟ ಸುಖದಿ ಸೇರಿ ಬದುಕೆ
ಬಾಳ ನೌಕೆ ತೇಲಲು..

ಮುತ್ತು ಮತ್ತು ಎಲ್ಲ ಅದುವೆ
ಬಾಹು ಬಂಧ ಪ್ರೀತಿಯೂ
ನಾನು ನೀನು ಎನ್ನದೇನೆ
ನಾವು ಎಂಬ ಮಂತ್ರವೂ..

ಮೋಸ ದ್ವೇಷ ನಮ್ಮಲಿಲ್ಲ
ನಂಬಿಕೆಯೇ ಭರವಸೆ..
ಜಾತಿ ಮತವ ಕೇಳೋದಿಲ್ಲ
ಮನುಜ ಮತವೆ ಧರ್ಮವು..

ಆತುಕೊಂಡು ಕೂತುಕೊಳುತ
ಸುಖ ದುಃಖವ ಹಂಚುತ
ನೋವು ನಲಿವಲಿ ಒಂದಾಗುತ
ದೇಹ ಮನಸ ಬೆಸೆಯುತ...
@ಪ್ರೇಮ್@
13.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ