3. ಮನುವೈದ್ಯರ
*ಶೋಧನೆ*
ಎಲ್ಲಂತ ಹುಡುಕಲಿ ನಿನ್ನ
ನಿನಗಾಗಿ ಚಡಪಡಿಸಿದೆ..!
ಶೋಧಿಸಿದೆ ನಾವಿಬ್ಬರೂ
ಸೇರಿ ಅಲೆದ ದಾರಿಯನ್ನ..,
ಆದರೂ ನೀ ಮರೆಯಾಗೇ ಉಳಿದೆ...!!
🍐🍐🍐🍐🍐🍐🍐🍐
ವಾವ್... ಕಲ್ಪನೆ ಉತ್ತಮ. ಪರ್ಸಾನಿಫೈಡ್ ಕವನ. ಕವಿಭಾವ ಇಷ್ಟ ಆಯ್ತು.
🍐🍐🍐🍐🍐🍐🍐🍐
ನಾ ನಿನ್ನ ನಿರ್ಲಕ್ಷಿಸಬಾರದಿತ್ತು..,
ನಿನ್ನ ವಿಷಯದಲ್ಲಿ ಜಾಣ ಕುರುಡನಾಗಿಬಿಟ್ಟೆ..!
ನೀನಿದ್ದರೆ ಖುಷಿಯಲ್ಲಿ
ಮನೆಯೊಳಕ್ಕೆ ಪ್ರವೇಶಿಸಬಹುದಿತ್ತು...,
ನೀನಿಲ್ಲದೇ ಮನೆಯ
ಹೊರಕ್ಕೇ ಉಳಿದುಬಿಟ್ಟೆ..!!
🍐🍐🍐🍐🍐🍐🍐🍐
ಮೊದಲ ಸಾಲಿನಿಂದಲೇ ಆಸಕ್ತಿ ಕೆದಕುತ್ತಾ ನೈಜ ಮಾತಿನ ಸಾಲುಗಳಲಿ ಹಿತಮಿತವಾಗಿ ಸಾಗಿದೆ ಕವನ...ನೆರೇಟರ್ ತನ್ನ ಧನಾತ್ಮಕ, ಹಾಗೂ ಋಣಾತ್ಮಕ ಭಾವಗಳ ಬಿಂಬಿಸುವ ಪರಿ ಚೆನ್ನಾಗಿದೆ.
🍐🍐🍐🍐🍐🍐🍐🍐
ಕಂಡ-ಕಂಡಲ್ಲಿ ಅಲೆದೆ
ನಿನ್ನ ಹುಡುಕಿಕೊಂಡು..!
ನೀ ನನಗೆ ಗಗನ ಕುಸುಮವಾದೆ..,
ಕೈಗೆಟುಕದೇ ದೂರ ಉಳಿದುಕೊಂಡು...!!
🍐🍐🍐🍐🍐🍐🍐🍐
ಕವಿಭಾವ ಸಣ್ಣ ಘಟನೆಯ ಸುತ್ತ ಹೆಣೆಯುವ ಕವನದ ಸಾಲುಗಳು ಕವಿತ್ವದ ಆಶಯವ ಬಿತ್ತರಿಸುತ್ತಿವೆ.
🍐🍐🍐🍐🍐🍐🍐🍐
ಕೊನೆಗೆ ಅಲೆದಾಟ ಸಾಕಾಯಿತು..,
ಬೇಸತ್ತ ಮನದಲಿ ನಿರಾಶೆ..!
ನನ್ನ ಕೈ ಸಿಗರೇಟ್ ಗಾಗಿ ಪ್ಯಾಂಟ್ ಜೇಬನು ತಡಕಾಡಿತು...,
ಏನಾಶ್ಚರ್ಯ...!
ನನ್ನ ಜೇಬಲ್ಲೇ ನೀನಿರುವೆ..,
ಅಬ್ಬಾ ಎಂದುಕೊಂಡು,
ಜೇಬಿನಿಂದ ಕೀ ತೆಗೆದು,
ಮನೆಯ ಬೀಗ ತೆರೆದೆ...!!
🍐🍐🍐🍐🍐🍐🍐🍐
ಏನೂ ಸಿಗದಾಗ ಸಿಗರೇಟ್ ಹುಡುಕುವವರಿಗಿದು. ಒತ್ತಡ ಹೆಚ್ಚಾದಾಗ ದುರಭ್ಯಾಸಕ್ಕೆ ದಾಸರಾದವರ ಮನದ ತುಮುಲ. ಆದರೆ ದಕ್ಕಿದ್ದು ಖುಷಿ.
🍐🍐🍐🍐🍐🍐🍐🍐
ಮಗುವನ್ನು ಕಂಕುಳಲ್ಲಿಟ್ಟುಕೊಂಡು,
ಊರು ತುಂಬಾ ಹುಡುಕಿದ
ಕಥೆ ನನ್ನದು...!
ಆ ಕೀ ನನ್ನ ನೋಡಿ ಅನುಕಂಪದ ನಗೆ ಬೀರಿದೆ...!!!
🍐🍐🍐🍐🍐🍐🍐
ಕೊನೆಯಲಿ ಕೊಟ್ಟ ರೂಪಕ ಉತ್ತಮವಾಗಿ ಮೂಡಿ ಬಂದಿದೆ ತಮ್ಮಾ. ಒಳಿತಾಗಲಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ