ಬುಧವಾರ, ಏಪ್ರಿಲ್ 3, 2019

2. ವಿಮರ್ಶೆಗಳು

[3/26, 8:31 AM] +91 98446 38300: ಪ್ರೇಮ್ ಅವರ ಶಾಕುಂತಲ ದುಷ್ಯಂತ ಶಕುಂತಲೆಯರ ಪ್ರೇಮ ವಿವಾಹ ಗಾಂಧರ್ವ ವಿವಾಹ ಪ್ರೀತಿ ಪ್ರೇಮ ಪ್ರಣಯದ ಸ್ವರೂಪ ತನ್ನನ್ನು ಮರೆತ ದುಶ್ಯಂತನ ಬಗ್ಗೆ ಶಾಕುಂತಲೆಯ ಮನದಲ್ಲಿ ಉಂಟಾಗುವಂತಹ ತೊಳಲಾಟದ ನುಡಿಗಳು ಕವನ ರೂಪದಲ್ಲಿ ಬಿಂಬಿತವಾಗಿದ್ದು ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದನ್ನು ತನ್ನ ಮನದಾಳದ ಮಾತುಗಳಲ್ಲಿ ವ್ಯಕ್ತಪಡಿಸುತ್ತಾ ಮಹಿಳಾ ರಾಜ್ಯ  ಕಟ್ಟಬೇಕೆಂದು ಹೊರಟವಳು ತನ್ನ ಇನಿಯ ತನ್ನನ್ನು ಮರೆಯಲು ಕಾರಣವೇನೆಂದು ತಿಳಿಯುವ ನೆಂದು ಕುತೂಹಲ ವ್ಯಕ್ತಪಡಿಸಿದ ಕವನ ಸೊಗಸಾಗಿದೆ .👌🏻👌🏻👌🏻
[3/26, 11:35 AM] Wr Shivkumar: ಪ್ರೇಮ...

ಅವಳು ಅವನಿಗೆ ಹೇಳುತ್ತಿರುವ ಶೈಲಿಯಲ್ಲೆದೆ,
ಆದರೆ ಮೊದಲ ಚಿರಣದ ಕೊನೆಸಾಲು, ಮಿಸ್ಮಾಡ್ಕೋಬೇಡ ನೀಲು...
ಇದು ಅವನು ಅವಳಿಗೇಳಿದಂತಿದೆ,

ಕವನದ ಕೊನೆ ಎರಡು ಸಾಲುಗಳು ಒಂದಕ್ಕೊಂದು ಪೂರಕವಾಗಿಲ್ಲ, ಪ್ರಾಸಕ್ಕಾಗಿ ಬರೆದಂತಿದೆ..
[3/27, 1:53 PM] +91 83103 59376: ಪ್ರೇಮ್ ಅವರ ನೆನಪುಗಳು
  ಕವಿತೆಯಲ್ಲಿ ನಿಮ್ಮ ಹಿಡಿ ರಾತ್ರಿ ನೋಡಿದ ನಾಟಕದ ನೋಟ ಕಣ್ಣ ಮುಂದೆ ಹಾದುಹೋಗುವ ಅನುಭವ.

ಆ ನಾಟಕದ ಪಾತ್ರಗಳು.,ವೇಷಭೂಷಣ, ಅಲಂಕಾರ ಎಲ್ಲವೂ ಚನ್ನಾಗಿ ವರ್ಣಿಸಿದ್ದೀರಿ.
ಬಾಲ್ಯದ ಜೀವನವೇ ಹಾಗೆ ನಾವು ನೋಡಿದ ಕೇಳಿದ ನೆನಪುಗಳು ಮನದಾಳದಲ್ಲಿ ಉಳಿದುಬಿಡುತ್ತವೆ.

ಮಂಜುಳಾ. ಬಿ. ಕೆ
[3/27, 2:06 PM] Wr Shindhe: ಕವಯತ್ರಿ *ಪ್ರೇಮ್* ಮೇಡಂ ಅವರ *ನೆನಪುಗಳು* ಬಾಲ್ಯದ ನೆನಪು ಮತ್ತೆ ತಾಜಗೊಳಿಸಿಕೊಂಡ ಮೂಡಿರಬೇಕು ಇಂದಿನ ಯಕ್ಷ & ಯಕ್ಷಿಣಿ ವಿಷಯಕ್ಕೆ
*ಚಿಕ್ಕವರಿದ್ದಾಗ ಅರ್ಥ ಆಗದ ಕೆಲವು ವಿಷಯಗಳು ನಮ್ಮ ಬೆಳವಣಿಗೆ ಜೊತೆಗೆ ಜೊತೆಗೆ ತಿಳಿಯುತ್ತಾ ಹೋಗುತ್ತದೆ ಹಾಗೆ ನಿಮ್ಮ ಕವನದಲ್ಲಿ ಯಕ್ಷಗಾನ ಪ್ರಸಂಗವನ್ನ ಅತ್ಯಂತ ಮನಮೋಹಕವಾಗಿ ಕಟ್ಟಿಕೊಟ್ಟಿದ್ದಿರಿ ಅಲ್ಲಿ ಬರುವ ಪಾತ್ರಗಳ ಪರಿಚಯ ಬಿಡದೆ ಪರಿಚಯಿಸಿ ಅವ್ವುಗಳ ವರ್ಣನೆಯೊಂದಿಗೆ ವೇಷಭೂಷಣ ಅಲಂಕಾರ ಹಾವಭಾವ ಬಗೆಯ ಭಂಗಿಗಳ ದರ್ಶನ, ಪಾತ್ರಗಳ ಆಗಮನ ನಿರ್ಗಮನ ವಾದ್ಯಗಳ ಸದ್ದು ಗದ್ದುಗೆ ವೇದಿಕೆ ಎಲ್ಲವೂ ವೇದಿಕೆ ಮೇಲೆ ನೋಡಿದಂತೆ ನಮ್ಮವರೆ ಯಾರೋ ಭುಜಕ್ಕೆ ವರಗಿಸಿಕೊಂಡು ಹೇಳಿದಂತೆ ಆಯ್ತು 'ನೆನಪಿನ ಧರೆಗೆ ಅರಿವಿನ ಮಳೆಯಾಗಿ  ಹಸಿರಾಗಿದೆ ನೆನಪಿನಂಗಳ👌🏻👌🏻ಯಕ್ಷ ಅನ್ನೋದರ ಬಗ್ಗೆ ಬೇರೆ ಬೇರೆಯ ಅರ್ಥಗಳಿದ್ದರು ನೀವು ನೈಜತೆಯನ್ನೆ ಕವನಕ್ಕೆ ಇಳಿಸಿ ಮೆರಗು ತಂದಿರುವಿರಿ ಊಹೆಯು ಇರಲಿಲ್ಲಾ ನನಗೆ👌ಶುಭವಾಗಲಿ*
✍🏻✍🏻✍🏻✍🏻✍🏻
*ರಾಜೇಶ ಎಲ್ ಶಿಂಧೆ*
[3/27, 6:36 PM] Wr Pramila Chullikana: ಪ್ರೇಮ್ ಅವರ ನೆನಪುಗಳು ತನ್ನ ಬಾಲ್ಯ ದಲ್ಲಿ  ತಾನು ಮೈ ಮರೆತು ನೋಡಿದ ಯಕ್ಷಗಾನ prasangavannu ಚೆನ್ನಾಗಿ  ವರ್ಣಿಸಿದ್ದಾರೆ. (Varnane) ವರ್ನನೇ ಸೊಗಸಾಗಿ ಮೂಡಿ ಬಂದಿದೆ🙏🙏
[3/28, 7:20 AM] Wr Shindhe: ಕವಯತ್ರಿ *ಪ್ರೇಮ್* ಮೇಡಂ ಅವರ *ನಮನ* ಬೆಳಗ್ಗೆ
ಮೊದಲ ಕವಿತೆಯ ದೇಶ, ದೇಶದ ಸೈನಿಕ,ದೇಶದ ರಕ್ಷಣಾ ಇಲಾಖೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯ,ದೇಶದ ಕರಾವಳಿಯಿಂದ ಹಿಡಿದು ಕಡೆಯ ಗಡಿಯಿಂದ ಹಿಡಿದು ಮುಡಿಯ ಕಾಂಚಕ ಚುಂಗವರೆಗೆ ಇತ್ಯಾದಿ ಇತ್ಯಾದಿ...ದರ್ಶನ👌🏻
*ತಾಯಿ ಭಾರತಿಗೆ ನಮಿಸಿ ಸದ್ಯ ನಡಿತಿರೋ ತಂತ್ರಜ್ಞಾನ ಅನ್ನೋ ಯುದ್ದದಲ್ಲಿ ಜಗತ್ತಿನಲ್ಲೆ ನಾಲ್ಕನೆ ಸ್ಥಾನಕ್ಕೆ ಹೋಗಿಬಿಟ್ಟಿದ್ದೇವೆ.ಇಂತಹ ಅತ್ಯಾಧುನಿಕ ತಂತ್ರಜ್ಞಾನ ಇದ್ದ ಬರಿ ನಾಲ್ಕು ದೇಶಗಳ ಪೈಕಿ ಭಾರತವೊಂದು ಇಲ್ಲಿವರೆಗೂ ಉಪಗೃಹಗಳ ಉಪದ್ರವವೇನೂ ಕಮ್ಮಿ ಇರಲಿಲ್ಲಾ ಬಾಹ್ಯಕಾಶದಲ್ಲಿಯು ಸಹಿತ ಷಡ್ಯಂತ್ರ ಹೆಣೆದಿದ್ದ ಶತ್ರುಗಳು ಇಂದು ಬೆಚ್ಚಿಬಿದ್ದಿದ್ದಾರೆ.ತಂತ್ರಾತಿಕವಾಗಿ ದೇಶ ಮುಂದೆ ನಂ.೧ ಆಗುತ್ತೆ ಒಂದಿನಾ.ನೌಕಸೇನೆಯ ಸಾಮರ್ಥ ಸಾರುವ ಪ್ಯಾರ್👌🏻👌🏻ತಾಯಿ ಭಾರತೀಯ ರಕ್ಷಣೆ ಎಲ್ಲಿಂದ ಎಲ್ಲಿವರೆಗೆ ಉಕ್ಕಿನ ಗೋಡೆಯಂತೆ ನಮ್ಮ ಸೈನ್ಯ ನಿಂತಿದೆ ಅನ್ನೋ ಹೆಮ್ಮೆಯನ್ನು ಹೇಳಿದ್ದಾರೆ. ("ದಕ್ಷಿಣದ ಹಿಂದೂ ಸಾಗರ ಕಾಲ್ತೊಳೆಯಲು" ಬಹಳ ಇಷ್ಟವಾಯ್ತು).ಹಿಮಗಿರಿಯಿಂದಿಡಿದು ನದಿಗಳ ಉಗಮ ಆಗಮನಗಳ ಪ್ರತಿ ಹೆಜ್ಜೆಗೂ ಪಹರೆ ಗಂಗಾ ಯಮುನಗಳ ಸಂಗಮವು ನೆನದದ್ದು.👌🏻ದೇಶದ ಬೆಳೆಯುವ ಬೆಳೆ ಕರಾವಳಿ ತೀರದ ಪರಿಚಯ.ಬೆಟ್ಟ ಗುಡ್ಡಗಳ ಸಾಲು ಒಟ್ಟಲ್ಲಿ ಭಾರತೀಯು ಅಡಿಯಿಂದ ಮುಡಿವರೆಗೂ ವಿವಿಧತೆಯಿಂದ ಶ್ರಿಂಗಾರಗೊಂಡ ಪರಿ ಕವನದಲ್ಲಿ ಚೆನ್ನಾಗಿ ಹೇಳಿರುವಿರಿ.ಆರಂಭದಲ್ಲಿ ನಮಿಸಿ ಕೊನೆಯಲ್ಲು ಅಷ್ಟೆ ಭಕ್ತಿಯಿಂದ ವಂದನಾರ್ಪಣೆ ಮಾಡಿದ್ದು ಒಂದು ಅರ್ಥಪೂರ್ಣ ಮುಕ್ತಾಯ ದೊರಕಿಸಿಕೊಟ್ಟಿದ್ದಿರಿ👏🏻👏🏻*
👏🏻👏🏻👏🏻👏🏻👏🏻👏🏻
*ಕೆಲವು ಅಕ್ಷರ ದೋಷಗಳಿವೆ ಗಮನಿಸಿ ಹಾಗೆ ಮೊದಲ ಸಾಲಲ್ಲಿ "ನಿನಗೆ" ಆಗಬೇಕಿತ್ತು ನೋಡಿ ಸ್ವಲ್ಪ*
✍🏻✍🏻✍🏻✍🏻✍🏻
*ರಾಜೇಶ ಎಲ್ ಶಿಂಧೆ*
[3/28, 7:56 AM] Wr Shamsundar: ಪ್ರೇಮ ರವರ ಕವನ ನಮನದ ಬಗ್ಗೆ ವಿಶೇಷವಾಗಿ ರಾಜೇಶ್ರವರು ವಿಮರ್ಶೆ ಮಾಡಿದ್ದಾರೆ. ನಾನು ಏನು ಹೇಳಿದರೂ ಕಡಿಮೆಯೇ ಸರಿ. ಅವರು ಕವನದ ಉತ್ತಮ ವಿಚಾರಗಳನ್ನು ಹೇಳಿದ್ದಾರೆ. ನಾನು ಕವನದ ಲೋಪಗಳನ್ನು ಹೇಳುವೆ. ಬೇಸರ ಪಡಬಾರದೆಂಬ ಕೋರಿಕೆಯೊಂದಿಗೆ.
ಆದರೂ ನನಗನಿಸಿದ ಎರಡು ಮಾತುಹೇಳುವೆ.
ಬರೆಯುವ ಖುಷಿಯಲ್ಲಿ ಕೆಲವು ಕಡೆ ಅರ್ಥ ಪೂರ್ಣವಾಗಿಲ್ಲ

ಭಾರತ ಮಾತೆಯ ಮಕ್ಕಳು ನಿನ್ನಯ
ಬಾಗುವೆವು ತಲೆ ಆಶೀರ್ವದಿಸು!

ಇದನ್ನು
*ಭಾರತ ಮಾತೆಯೆ ನಿನ್ನಯ ಮಕ್ಕಳು*
*ಬಾಗುವೆವು ತಲೆ ಆಶೀರ್ವದಿಸು*
ಮಾಡಬಹುದಿತ್ತು.
*ಪಡೆದಿಹೆನಿಲ್ಲಿ  ಬಿಸಿ ಉಸಿರಿನ ಸ್ಥಾನ*
ಬಿಸಿ ಉಸಿರು ಬಿಡುವುದು ತನುಮನಗಳಲ್ಲಜ ಬಗೆಹರಿಯದ ವ್ಯಾಕುಲತೆ,  ನೋವು, ಆಪತ್ತು ತುಂಬಿದಾಗ. ಅಂದಮೇಲೆ ಕವಿ ಭಾವನೆಗೆ ವಿರುದ್ಧವಾದ ಭಾವನೆಯಾಗಿದೆ ಈ ಸಾಲು.

ಉಳಿದಂತೆ ಕವನ ಪ್ರಾಸಗಳಿಂದಲೂ,ಪದಗಳ ಲಾಲಿತ್ಯದಿದಲೂ,  ಪ್ರಸ್ತುತ ವಿದ್ಯಮಾನವನ್ನು ಬಿಂಬಿಸುತ್ತಲೂ, ಭಾರತಾಂಬೆಯ ಮಡಿಲ ಮಕ್ಕಳಾಗಿರಲು ಧನ್ಯತಾ ಭಾವನೆಯೂ,  ಭಾರತದ ಭೌಗೋಳಿಕ ವಿವರಣೆಯನ್ನು ನೀಡುತ್ತ ಸುಂದರವಾದ ಕವನ.  

ಕವಿ ಮನಕ್ಕೆ ಬೇಸರ ತಂದಿದ್ದರೆ ಕ್ಷಮೆಯಿರಲಿ
ಧನ್ಯವಾದಗಳು
ಶ್ಯಾಮ
[3/28, 9:59 AM] +91 97437 88855: ಪ್ರೇಮ್ ರವರ

ನಮನ

ಕವನದ ಬಗ್ಗೆ ಗುರುಗಳು ಹಾಗೂ ರಾಜೇಶ್ ಸರ್ ಸವಿಸ್ತಾರವಾಗಿ ಹೇಳಿದ್ದಾರೆ.....

ಹೆಮ್ಮೆಯ ಜನ್ಮಭೂಮಿ ಯ ಬಗ್ಗೆ ಅಭಿಮಾನ ತುಂಬಿ ಹರಿಯುತ್ತಿರುವ ಕವನ...👌👌
ಸಾಲುಗಳು ಕೆಲವು ಲಯ ತಪ್ಪಿದರೂ ಕವನ ಸುಂದರವಾಗಿ ಮೂಡಿ ಬಂದಿದೆ

👌👌🙏🙏💐💐
[3/29, 3:14 PM] +91 83103 59376: ಪ್ರೇಮ್ ಅವರ ಅಪ್ಪ

ಅಪ್ಪನ ಪಾತ್ರದ ಬಗ್ಗೆ ಮಹತ್ವ ನೀಡುವ ಕವನ.
ಜಗತ್ತಿನಲ್ಲಿ ತಾಯಿ ಎಂದು ಯಾರನ್ನಾದರೂ ಕರೆದರೂ ತಂದೆಎಂದು ಯಾರನ್ನಾದರೂ ಕರೆಯಬಹುದೇ.
ಅಮ್ಮ ಪಾತಾಳ ಆಳದಷ್ಟು ಕಷ್ಟ ಪಟ್ಟರೆ ತಂದೆ ಅಂಬರದಷ್ಟೇ ಕಷ್ಟ ಪಡುವನು.

ಹಾಗೆ  ತಂದೆ ಎಂಬ ಪಾತ್ರಕ್ಕೆ ದಕ್ಕೆ ತರುವವರು ಇದ್ದರೆ. ಅಂತವರ ಕುರಿತಾದ ಆಕ್ರೋಶದ ನುಡಿಗಳು ಮನ ತಟ್ಟುತ್ತದೆ
[4/1, 1:44 PM] +91 78297 61793: ಪ್ರೇಮ್ ಅವರ ಭಾವಸುಮ

ಕವನದ ಭಾವ ಚೆಂದವಾಗಿದೆ.
ಪ್ರೇಮದ ನವಿರಾದ ಒಲುಮೆಯ ಕಾವ್ಯ ಸರಳವಾಗಿ ಸುಂದರವಾಗಿದೆ.

ತುಸು ಬೇಸರ ಯಾಕೆ ಅಂಥಾ ಅರ್ಥ ಆಗಲಿಲ್ಲ‌.
ಪದ್ಯದ ಸಾಲಂಕಾರಗಳ ಬಗ್ಗೆ ಹೆಚ್ಚು ಒತ್ತು ಕೊಡಿ ಉಳಿಂದಂತೆ ಕವನ  ಉತ್ತಮವಾಗಿದೆ.🙏
[4/2, 6:41 PM] Wr Vijaya Kundapur: *ಪ್ರೇಮ್ ಅವರ ಅವಸರವೇಕೆ*

ಅವಸರಿಸರಿ ಬಾರದಿರು ಓ ತರುಳೆ
ಇಂದಿಗೂ ಎಂದೆಂದಿಗೂ ಈ ಮನಸು ಕೇವಲ ನಿನ್ನದು
ನಿನ್ನ ಮಧುರ ಅನುಭೂತಿಯಲಿ ಈ ಮನಸು ತೇಲಿ ನೂರು ಕನಸು ಹೆಣದರೂ ಅದನ್ನು ಆವರಿಸಿ ರಮಿಸುವ ಸಖಿ ಮಾತ್ರ ನೀನೇ ಎಂಬ ಭಾವದ ಕವನ ಸೊಗಸಾಗಿದೆ...

ಶುಭವಾಗಲಿ💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ