ಒತ್ತಡವೇಕೆ...
ಟೆನ್ಶನ್ ಪದದಲಿ ಅಡಗಿದೆ ಒತ್ತಡ
ಜಯಮಾಲೆಯನದು ನೂಕುವುದು ದೂರ!
ಏನೇ ಬರಲಿ ಬಾಳಲಿ ಎದುರಿಗೆ
ಎದೆಗುಂದದೆ ನಿತ್ಯವು ನಮ್ಮಯ ಕಾಯಕ ಮಾಡಲು,
ಒತ್ತಡ ಏಕದು ಮೈ ಮನದೊಳಗೆ,
ಬರುವ ಕ್ಷಣಗಳ ತಪ್ಪಿಸಬಹುದೇ ಬಳಿಗೆ?
ಮಕ್ಕಳಿಗೆಂದೂ ಓದುವ ಒತ್ತಡ
ಶಾಲೆಗೆ ಹೋಗಲು ಮನೆಕೆಲಸದ ಒತ್ತಡ!
ಡ್ರಾಯಿಂಗ್, ಸಂಗೀತ, ಕ್ರಾಫ್ಟ್ ನ ಒತ್ತಡ
ಪ್ರಾಜೆಕ್ಟ್, ಪ್ರಬಂಧ, ಭಾಷಣದೊತ್ತಡ!
ಮನೆಯಲಿ ಅಮ್ಮಗೆ ಅಡಿಗೆ ಮನೆಯೊತ್ತಡ!
ತಿಂಡಿ, ಊಟ, ಡಬ್ಬಿಯ ಒತ್ತಡ
ಒಗೆಯುವ, ಒರೆಸುವ, ಆರಿಸುವೊತ್ತಡ,
ಬೇಯಿಸೊ, ಕರಗಿಸೋ, ತಿನ್ನಿಸೊ ಒತ್ತಡ!
ತೊಳೆಯೋ, ಬಳಿಯೋ, ಉಳಿದರೆ ಎಸೆಯೋ ಒತ್ತಡ!
ಯಜಮಾನನಿಗೆಂದೂ ಬಹಳವೇ ಒತ್ತಡ,
ಸಾಲದ, ನೋಟಿನ, ಸಾಮಾನಿನ ಒತ್ತಡ!
ಕೊಡುವ, ತರುವ, ತೆರುವ ಒತ್ತಡ!
ಬಡ್ಡಿಯ ಕಟ್ಟುವ, ಕೊಡೊ ತರೋ ಒತ್ತಡ!
ಸಂಸಾರವ ಸಾಗಿಸೊ ಮನೆ ಮನದೊತ್ತಡ!
ಮಕ್ಕಳ ಫೀಸು, ಗಾಡಿಯ ಲೋನು!
ಮಗಳ ಮದುವೆ, ಮಗನಿಗೆ ಬೈಕು!
ಹೆಂಡತಿಗೊಡವೆ, ಸೀರೆಯು ಬೇಕು!
ತಂದೆ, ತಾಯಿಗೆ ತಿಂಗಳ ಕೊನೆಗೆ ಕೊಡಬೇಕು!
ಕಾಲೇಜಿಗೆ ಹೋಗಲು ಬಸ್ ಹಿಡಿಬೇಕು,
ಗೆಳೆಯರ ಜೊತೆಗೆ ಉತ್ತರ ಬೇಕು!
ಅಂದದ ಬಟ್ಟೆಯ ಹಾಕಲು ಬೇಕು!
ಮನೆಯಲಿ ಕೇಳಲು ಧೈರ್ಯವು ಬೇಕು!
ಎಲ್ಲ ವಯಸಲೂ ಒತ್ತಡ ಏಕೆ?
ಓದು ಬರಹವದು ಇಂದು ನಿನ್ನೆಯದೇ?
ಮನೆ ಮನ ಸರಿತೂಗಿಸೋ ಕಾಯಕ ನಿರಂತರ!
ಅಡಿಗೆ ಮನೆ ಕೆಲಸವು ಹೆಣ್ಣಿಗೆ ಅವಿರತ!
ಅದರಲಿ ಒತ್ತಡ ಏಕದು ಬೇಕು!?
ಬದುಕದು ಸರಾಗ ಸಾಗಲು ಬೇಕು!
@ಪ್ರೇಮ್@
03.05.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ