ಚಂದಿರ ಹೆದರುವನೇ ತಾರಾ ತಂಡಕೆ
ತನ್ನಿಂದ ಬೆಳಕಿನ ತಾರೆಗಳಿದ್ದರೂ ಎಲ್ಲರಿಗಿಂತಲೂ ಪ್ರಖರವಾಗಿ ಹೊಳೆಯುವನು,
ತಾರೆಗಳ ಜತೆಯಲವನು ಕಿಂದರಿ ಜೋಗಿಯಂತಿರುವನು!
ತಾರೆಗಳ ತನ್ನೊಡನಿಟ್ಟು ನಾಯಕನಾಗಿ ಬಂದಿಹನು!ನಾಯಕತ್ವದ ಗುಣ ನೋಡಿ ತಾರೆಗಳೇ ಹಿಂದೆ ಸರಿದಿಹವು!
ಆಕಾರ, ಗಾತ್ರ, ರೂಪದಲ್ಲೂ ನಗುಮೊಗದಿ ಮೆರೆಯುವನು!
ತನಗಗಾಧ ಶಕ್ತಿಯಿದ್ದರೂ ತಂಪಾಗೇ ಇರುವನು.
ಸೂರ್ಯನಿಂದ ಬೆಳಕ ಪಡೆದು ಜಗವಿಡೀ ಹಂಚುವನು,
ತಾನು ಪಡೆದ ಬೆಳಕ ಇತರಗೆ ಹಂಚಿರೆಂಬ ಸಂದೇಶ ನೀಡುವನು..
ತನ್ನಲಿ ಬೆಳಕಿರದಿದ್ದರೂ ತಾನು ಜಗವ
ಬೆಳಗಬಲ್ಲೆನೆಂಬ ನಿಜಸತ್ಯ ಸಾರಿಹನು!
ಕೀರ್ತಿಗೆಂದೂ ಬೇಕಾದುದು ಹಣವಲ್ಲ ಗುಣವೆಂಬ ಅರಿವ ನೀಡಿಹನು!
ಮನದ ಮಾತ ಬಿತ್ತಿ ಹೇಳಿ ಸರ್ವರೆದೆಯಲಿ ನೆಲೆಸಿಹನು,
ಭೂಮಿ ಭಾನಿನಾಟದಲಿ ಜಜ್ಜಿ ಹೋಗಿ ನೋವುಂಡವನು!
ನಲಿಯುವ ಮನವ ತಡೆಹಿಡಿದು ಇತರರ ಹಿಡಿದೆತ್ತಿ ನಡೆಸುವವನು!
ತನ್ನತನವ ಮರೆತು ಪರರಿಗೆ ಬೆಳಕ ನೀಡುವವನು!
@ಪ್ರೇಮ್@
03.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ