ನಮ್ವಿಮ ಬರಹಗಳಿಗೆ ವಿಮರ್ಶೆ ಬೇಕು. ಕವಿಯು ತನ್ನ ತಾ ತಿಳಿಯಲು, ಪರರ ಭಾವವ ಅರ್ಥೈಸಿಕೊಳ್ಳಲು...
ಕಲಿಕೆಗೆ, ಬೆಳವಣಿಗೆಗೆ..
ವಿಮರ್ಶೆ ನಮ್ಮನ್ನು ಕಣ್ತೆರೆಸುತ್ತದೆ, ಹರಿತಗೊಳಿಸುತ್ತದೆ, ಅಹಂ ನ್ನು ತಡೆಯುತ್ತದೆ.
ವಿಮರ್ಶಿಸುವವ ಸಾಕಷ್ಟು ತಿಳಿದುಕೊಂಡಿದ್ದರೆ ಮಾತ್ರ ಸರಿಯಾದ ವಿಮರ್ಶೆ ಸಾಧ್ಯ, ಕವನ ಬರೆಯುವುದು ಸುಲಭ, ವಿಮರ್ಶೆ ಕಷ್ಟ,ಅಲಂಕಾರ, ಪ್ರಾಸ, ಛಂದಸ್ಸು, ಕನ್ನಡ ಸಾಹಿತ್ಯದ ಮಜಲುಗಳನ್ನು ಅರೆದು ಕುಡಿದವ ಮಾತ್ರ ಉತ್ತಮ ವಿಮರ್ಶಕನಾಗಬಲ್ಲ, ಅದೇ ತಲೆಬರಹದ ಬೇರೊಂದು ಬರಹವನ್ನು ಓದಿದ್ದರೆ ಮಾತ್ರ ಅವೆರಡನ್ನು ಹೋಲಿಕೆ ಮಾಡಬಹುದು. ಹಾಗಾಗಿ ಯಾವುದೇ ಭಾಷೆಯಲ್ಲಿ ಕವಿಗಳ ಸಂಖ್ಯೆ ಜಾಸ್ತಿ, ವಿಮರ್ಶಕರ ಸಂಖ್ಯೆ ಕಡಿಮೆ.
ವಿಮರ್ಶಕ ಹೇಳಿದ್ದನ್ನೆಲ್ಲಾ ಕವಿ ಒಪ್ಪಲೇ ಬೇಕೆಂದಿಲ್ಲ, ಕವಿ ಬರೆದದ್ದನ್ನೆಲ್ಲಾ ವಿಮರ್ಶಕ ಉತ್ತಮವೆಂದು ಹೇಳಬೇಕಾಗಿಯೂ ಇಲ್ಲ. ಇಂಗ್ಲಿಷ್ ಸಾಹಿತ್ಯದೊಡನೆ ಕನ್ನಡ ಸಾಹಿತ್ಯದಲ್ಲೂ ಸ್ನಾತಕೋತ್ತರ ಪದವಿ ಪಡೆದ ಕಾರಣ, ಕನ್ನಡದ ತೌಲನಿಕ ಅಧ್ಯಯನ ಹಾಗೂ ಆಂಗ್ಲ ಭಾಷೆಯ ಕ್ರಿಟಿಕ್ಸ್ ಅಲ್ಪ ಸ್ವಲ್ಪ ಓದಿದ ಜ್ಞಾನದಿಂದ ಈ ಮಾತು ಹೇಳುತ್ತಿರುವೆ.
ಯಾರು ಉತ್ತಮ ಓದುಗಾರರೋ ಅವರು ಉತ್ತಮ ವಿಮರ್ಶಕರಾಗಬಲ್ಲರು. ಯಾವ ದೃಷ್ಟಿಕೋನದಲ್ಲಿ ಬೇಕಾದರೂ ವಿಮರ್ಶಕ ಒಂದು ಸಾಹಿತ್ಯವನ್ನು ವಿಮರ್ಶಿಸಬಹುದು. ಆದರೆ ಬರಹಗಾರನ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಬೇಕೆಂದೆ ಬರವಣಿಗೆ ಸರಿಯಿಲ್ಲವೆಂದು ಹಿಡಿದೆತ್ತಿ ಪದೇಪದೇ ದೂರುವಂತಿರಬಾರದು.
ಯಾವುದೇ ಪೂರ್ವಾಗ್ರಹ ಪೀಡಿತನಾಗದೆ ಸಾಹಿತ್ಯವನ್ನು ವಿಮರ್ಶಿಸಬೇಕು.
ವಿಮರ್ಶಕನಿಗೆ ವಿಮರ್ಶೆಯ ನಂತರ ಬರುವ ಸಂತಸದಾಯಕ ಪದಗಳನ್ನೂ, ನಿಂದನೆಗಳನ್ನೂ ಒಪ್ಪಿಕೊಂಡು ಅದಕ್ಕೆ ಸರಿಯಾಗಿ ಉತ್ತರಿಸುವ ತಾಕತ್ತೂ ಇರಬೇಕಾಗುತ್ತದೆ. ತಾನೇಕೆ ಹೀಗಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವೂ ಇರಬೇಕಾಗುತ್ತದೆ.
ಎಲ್ಲದಕ್ಕೂ ಜ್ಞಾನ ಭಂಢಾರ ಹಾಗೂ ಅಧ್ಯಯನವೇ ಪೂರಕ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ