ಗಝಲ್
ಮಲ್ಲಿಗೆ ಗಿಡ ಬಾಡಿ ಹೋದೊಡೆ
ಹೂವರಳಿಸಬಹುದೇ ದಿಲ್?
ಮರ ಕಡಿದು ಉರುಳಿಸಿದ ಜಾಗದಿ ಮತ್ತೆ ಹಣ್ಣ ಕಾಣಬಹುದೆ ದಿಲ್?
ಮರೆತುಾ ಮರೆಯಲಾರೆ ನಿನ್ನೊಡನೆ ಕಳೆದ ಕ್ಷಣಗಳನು.
ಮದಿರೆಯಂದದಿ ಮತ್ತೆ ಮತ್ತೆ ಜೀವಹಿಂಡಿ ನೆನಪಾಗದೆ ದಿಲ್?
ಮನವು ಅತ್ತು ಹಿಂಡಿ ಹಿಪ್ಪೆಯಂತಾಗಿದೆ ಈಗ.
ಮುದದಿ ಜತೆಗೂಡಿದ ಮುಸುಕು ಕನಸುಗಳು ಕಾಣಲಾರದೆ ದಿಲ್?
ಕರಿಮೋಡಗಳು ಬರಲು ಒಳಗಿಹ ಚಂದಿರ ಕಾಣುವನೇ?
ಕಡಿದಾದ ಬಾಳಲಿ ಬೆಳಕು ಬರುವುದೇ ನೀನಿರದೆ ದಿಲ್?
ಮೊಹಬ್ಬತ್, ಪ್ಯಾರ್, ಇಶ್ಕ್ ಎಲ್ಲವೂ ನಿನ್ನೊಳಿತ್ತು.
ಮತ್ತೊಬ್ಬರ ನಿನ್ನಂತೆ ಕಾಣಲು ಮನ ಒಪ್ಪುವುದೆ ದಿಲ್?
ಮುಸ್ಸಂಜೆಯಂದದಿ ಬಾಡಿಹುದು ಬದುಕ ಹೂವು.
ಮೌನ ತಬ್ಬಿದ ಮನಸು ಮುದುಡಿ ಹೋಗಿದೆ ದಿಲ್.
ಪ್ರೇಮವಿದ್ದರೆ ಬಾಳು, ಇರದಿದ್ದರೆ ಹೋಳಾದಂಥ ಗೋಳು!
ಪರರ ಪ್ರೀತಿಯಲಿ ನಿನ್ನನರಸಲು ಸಾಧ್ಯವಾಗುವುದೆ ದಿಲ್?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ