ಮಂಗಳವಾರ, ಮೇ 26, 2020

1419. ಒಲವು

ಒಲವು

ಮೇಘದೊಡನೆ ಹೇಳಿ ಬಂದೆ
ಹಿಮದೊಳಡಗಿಸೆನ್ನ
ಹೋಗ ಬೇಡ ಅವಳ ಬಿಟ್ಟು
ಮಳೆ ಸುರಿವುದಣ್ಣ..

ಚೈತ್ರ ಮಾಸ ಬರಲು ಬೇಗ
ಚಿಗುರ ತುಂಬ ಬಣ್ಣ..
ಒಲವ ಹಣತೆ ಮೂಡಿ ಬರಲು  
ಮನದ ತುಂಬಾ ಕನಸಣ್ಣ..

ಬದುಕು ಸಂತಸದ ಹಾದಿಯಲ್ಲ
ಉಸಿರು ನಿಲ್ಲಲು ಕೊನೆಯು ಎಲ್ಲ
ಬೇಕು ಛಲ ನಮಗೆ ಬೆಳೆಯೆ ಹಸಿರೆಲ್ಲ
ಧೀರನಾಗಿ ತಲೆಯೆತ್ತಿದೊಡೆ ಬಾಳು ಬೆಲ್ಲ..

ನೀರು ಬೆಳಕನು ದೇವ ಕೊಡುವನು
ಸ್ವಂತ ಕಾರ್ಯವ ಮಾಡೆ ಕಾಯ್ವನು
ತಾನು ತನ್ನದು ಎಂಬುದೇನಿದೆ
ಉಸಿರ ಹಿಡಿದು ತಾ ಬದುಕ ಬೇಕಿದೆ..

ಬೆರಗುಗೊಳ್ಳುವ ಬಾಳ್ವೆ ನಮ್ಮದು
ಪ್ರತಿ ಕ್ಷಣದಲು ಕವಲು ತಪ್ಪದು
ಒಬ್ಬರಂತೆ ಮತ್ತೊಬ್ಬರ ಸಮಯವಿರದು
ಪರರೊಂದಿಗೆ ನಮ್ಮ ಬಾಳ ಹೋಲಿಸಲಾಗದು..

ನಾನೆ ಮೇಲು ನಾನೆ ಕೀಳು
ಎಂಬ ಮಾತು ಬರಿಯ ಸುಳ್ಳು
ಪ್ರತಿ ಜೀವ ತಾನು ಬೇರೆಯೇ
ಕೈಯ ಹಿಡಿಯುವ ಒಂದೇ ಶಕ್ತಿಯೇ..
@ಪ್ರೇಮ್@
20.05.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ