ಶುಕ್ರವಾರ, ಜನವರಿ 1, 2021

ಹೊಸ ವರುಷ

ಹೊಸ ವರುಷ (ಶಿಶುಗೀತೆ)

ಬಂದಿತು ಬಂದಿತು ಹೊಸವರುಷ
ತಂದಿತು ತಂದಿತು ನವ ಹರುಷ

ಹೊಸತನ ಹೊಸದಿನ ಬರುತಲಿದೆ
ಹೊಸ ಹೊಸ ಕನಸನು ತರುತಲಿದೆ..

ಸರ್ವರ ಹಿತವನು ಬಯಸೋಣ.
ಸರ್ವರಿಗೊಳಿತನು ಹರಸೋಣ..

ನವ ವರುಷದಲಿ ನವ ಕಾರ್ಯಕೆ ನಾಂದಿಯ ಹಾಡೋಣ
ನವ ದಿನಗಳಲಿ ನವೀನ ಯೋಜನೆಗಳ ಹಾಡ ಕಟ್ಟೋಣ..

ಭರತ ಮಾತೆಯ ಮಕ್ಕಳೆಲ್ಲ ಒಂದಾಗೋಣ
ಜಾತಿ ಧರ್ಮಗಳ ಮೌಢ್ಯತೆಯನು ಕಿತ್ತೆಸೆಯೋಣ

ಅಂಧಕಾರದಿಂದ ಜನರನು ಹೊರ ತರೋಣ
ಬಾಳ ಬೆಳಗಲು ಸರ್ವರಿಗೂ ಸಹಕರಿಸೋಣ..
@ಪ್ರೇಮ್@
01.01.2020
🍧🍧🍧🍧💐💐💐💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ