ಕಲಿ
ಕಲಿಯಬೇಕಮ್ಮ ಮಗಳೇ ಕರಾಟೆ
ಆಗ ಬೇಡವೆನುವರು ನಿನ್ನ ಭರಾಟೆ
ಮಾಡಲಾರರು ನಿನ್ನೊಡನೆ ಯಾರೂ ಗಲಾಟೆ
ಬಡಿಯುವರು ದೂರದಿಂದಲೇ ತಮ್ಮ ಜಾಗಟೆ!
ಜೋರಿರಲು ಬರಲಾರರು ಯಾರೂ ನಿನ್ನ ತಂಟೆಗೆ
ಬಂದು ರುಚಿ ನೋಡಿದರೆ ತಿಳಿವುದು ನಿನ್ನ ಗುಂಡಿಗೆ
ಪೆಟ್ಟು ಬೀಳಲು ಶಕ್ತಿ ಬರುವುದಂತೆ ಬುದ್ಧಿಗೆ
ಮತ್ತೆ ಬರಲು ಭಯವಿರುವುದು ಮನಸಿಗೆ
ನಾರಿ ಮುನಿದರೆ ಮಾರಿಯಂತೆ ಸಕಲಗೆ
ಹಾರಿ ಗುದ್ದುವಾಗಲೇ ಬರಬೇಕು ಬುದ್ಧಿ ತನುವಿಗೆ
ಸ್ವಯಂ ಮಾನ, ಪ್ರಾಣ ರಕ್ಷಣೆ ಹಕ್ಕು ಹೆಣ್ಣಿಗೆ
ಬಿಡಬಾರದು ಸುಖದಿ ಬಾಳಲು ಮಂಕುಬುದ್ಧಿಗೆ..
@ಪ್ರೇಮ್@
19.12.2020
🐍🐍🐍🐍
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ