ಬದುಕ ನಾವೆ
ಬದುಕ ನಾವೆ ತೇಲುತಿರಲಿ ಅಂದವಾಗಿ ಬುವಿಯಲಿ
ಕೆದಕ ಹೋಗ ಬೇಡಿರದನು ಚಂದವಿಲ್ಲ ಎನುತಲಿ..
ಚಂದ್ರ ತಾರೆ ಸೂರ್ಯನಿರುವ ಬಾನ ಬೆಳಗಿನಲ್ಲಿ
ಧರೆಯ ಹಸಿರ ಬಿಂಬದೊಡಲ ತೊಡೆಯ ಮಡಿಲಿನಲ್ಲಿ..
ಬಣ್ಣಬಣ್ಣದಿಂದ ಬಳಿದ ನಾಕವದು ಭವ್ಯ
ಸಣ್ಣಪುಟ್ಟ ಜೀವಿಗಳಿಗೂ ಆಸರೆಯದು ದಿವ್ಯ..
ನಂದನವನದಂಥ ಒಲವು ಹರಿಸಬೇಕು ಇಲ್ಲಿ
ಸರ್ವ ಮನವು ಬಂದಿಳಿದಿದೆ ಒಂದೆ ಕರುಳ ಬಳ್ಳಿ
ಭಾವವೊಂದೆ ನಾವೆಯೊಂದೆ ಸೇರಬೇಕು ದಡಕೆ
ತಾಳವೊಂದೆ ಮೇಳವೊಂದೆ ಗುರಿಯ ತಲುಪಬೇಕೆ
ಮಾನವತೆಯ ನಾವೆ ತೇಲಿ ಬರಲಿ ದಿನವೂ
ದಾನವತೆಯು ತೊಲಗಿ ಬೆಳಗಲೆಂದು ಜಗವೂ..
@ಪ್ರೇಮ್@
26.12.2020⛴️⛴️⛴️⛴️⛴️⛱️⛱️⛱️⛱️
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ