ಕುಂಬಾರ
ಜೀವನವಾಗಿದೆ ಭಾರ
ನಾನೊಬ್ಬ ಕುಂಬಾರ
ಹೀರಲು ಮಣ್ಣಿನ ಸಾರ
ಬೇಯಿಸಿ ಮಣ್ಣ ಪೂರ
ಕುಟ್ಟಿ ಹದಮಾಡುವ ಕಾರ್ಯ
ನೀಡುವೆ ಬೇರೆ ಬೇರೆ ಆಕಾರ
ಮಡಿಕೆ ಕುಡಿಕೆ ಬಟ್ಟಲಾಕಾರ
ಬಳಸಿ ತಣಿವ ಮನುಜನಾಧಾರ
ಪ್ರಕೃತಿಗಿಲ್ಲ ಸಂಚಕಾರ
ಒಡೆದರೂ ಮಣ್ಣಿನಲಿ ಮಣ್ಣಾಕಾರ..
ಜನರಿಗಿಲ್ಲ ಬಳಸುವ ಉತ್ಸಾಹ ನಿರಂತರ
ಇಲ್ಲಿನ ಮಡಿಕೆಗಳ ಬಗೆಗೆ ತಾತ್ಸಾರ
ಇಂಡಾಲಿಯಂ ನಾನ್ ಸ್ಟಿಕ್ ಗಳ ಹಾಹಾಕಾರ
ಹೊತ್ತು ಮನೆ ಮನೆ ಸುತ್ತಿದರೂ ನಕಾರ
ಕುಂಬಾರನ ಬದುಕಾಗಲಿದೆ ಬರಗಾಲದಂತೆ ಭೀಕರ
ತಂಪಾದ ನೀರಿಗೆ,ಮಜ್ಜಿಗೆಗೆ ಬಳಸಿ
ಮೀನು, ತರಕಾರಿ ಸಾಂಬಾರುಗಳನೂ ಕುದಿಸಿ
ಮನೆಯೊಳಗೆ ಮಣ್ಣಿನ ಪಾತ್ರೆ ಉಪಯೋಗಿಸಿ
ಸಾವಿರಾರು ರೋಗಗಳ ತೊಲಗಿಸಿ
ಗ್ರಾಮೀಣ ಕಲೆಗಳನು ಪ್ರೋತ್ಸಾಹಿಸಿ
ಕುಲಕಸುಬುದಾರರಿಗೆ ಅವಕಾಶ ಒದಗಿಸಿ
ನಮ್ಮವರ ಬದುಕುಗಳ ಎತ್ತರಕ್ಕೇರಿಸಿ
ಸುತ್ತಮುತ್ತ ಸಿಗುವ ಪ್ರಕೃತಿ ಪೂರಕ ವಸ್ತುಗಳ ಬಳಸಿ
ಮಣ್ಣಿನ ಮಕ್ಕಳ ಜೀವನಕೆ ಹೊಸ ಆಯಾಮ ವೃದ್ಧಿಸಿ..
@ಪ್ರೇಮ್@
24.12.2020
🎪🎪🎪
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ