ಗುರುವಾರ, ಜನವರಿ 27, 2022
ಮಂಗಳವಾರ, ಜನವರಿ 4, 2022
ಹಾಯ್ಕು
ಹಾಯ್ಕು
ಮೋಡ ಕರಗಿ
ಮಳೆಯು ಸುರಿಯಲಿ
ಮತ್ತೆ ಭೂಮಿಗೆ
ಬಿಳಿಯ ನೀರು
ಹರಿದು ಬರುತಲಿ
ಮತ್ತೆ ಭೂಮಿಗೆ
ಕೆರೆ ಹೊಳೆಯು
ತುಂಬುತ್ತಾ ಹರಿಯಲಿ
ಭೂಮಿಯ ಮೇಲೆ
ಪಶು ಪಕ್ಷಿಯು
ಕುಣಿದು ನಲಿಯಲಿ
ಧನ್ಯವಾದದಿ
ಬಿಳಿಯ ಮೋಡ
ಇಳೆಯ ಸೇರುತಲಿ
ಗಿಡಮರಕೆ
ಹಸಿರು ಹೆಚ್ಚಿ
ಜೀವವು ಸ್ವಚ್ಛತೆಯ
ಉಸಿರಾಡಲು
ಸಾಲು ಪರ್ವತ
ನೀರಿನ ಒರತೆಯು
ಸಂತಸಪಟ್ಟು
ಮೋಡ ತನ್ನಲಿ
ಬಿಂಬ ಬಿತ್ತಿದೆ ನೋಡಾ
ಹಾರುತಲಿದೆ
ಬೆಳ್ಳನೆ ನೊರೆ
ಹಾಲಿನಂದದ ಮೇಘ
ನೀರ ಸುರಿಸೆ
ತನ್ನನ್ನು ತಾನು
ಅರಿತುಕೊ ಮನುಜ
ಎಂದು ಹಾಡುತ
ಪರರಿಗೆ ನೀ
ಉಪಕಾರ ಮಾಡುತ್ತಾ
ಕಳೆ ಬದುಕ..
@ಪ್ರೇಮ್@
04.01.2022
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)