ಶುಕ್ರವಾರ, ಸೆಪ್ಟೆಂಬರ್ 29, 2023

ಶನಿವಾರ, ಸೆಪ್ಟೆಂಬರ್ 16, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 202

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 202

    ಮನದ ಕದವ ತೆರೆದು ಬದುಕೆ ಮನಕೆ ನಿತ್ಯ ಹರ್ಷವು
    ಕನಸ ಗೂಡಿನೊಳಗೆ ಇಣುಕೆ ಸಾಧನೆಯು ಸಾಧ್ಯವು..
ಹೌದು, ನಮ್ಮ ಜೀವನವೆಲ್ಲಾ ಪಕ್ಕದ ಮನೆಯವರು ಏನು ಮಾಡುತ್ತಾರೆ, ಅವರು ಯಾವ ರೀತಿಯ ಬಟ್ಟೆ ಬರೆಗಳನ್ನು ತೊಡುತ್ತಾರೆ, ಅವರು ಎಲ್ಲೆಲ್ಲಿಗೆ ಹೋಗುತ್ತಾರೆ, ಅವರೊಂದಿಗೆ ಯಾರ್ಯಾರು ಇರ್ತಾರೆ, ಅವರ ಬಂಧುಗಳು ಯಾರೆಲ್ಲ, ಗೆಳೆಯರು, ಫ್ಯಾಮಿಲಿ ಫ್ರೆಂಡ್ಸ್ ಯಾರೆಲ್ಲಾ, ಅವರು ಯಾವಾಗೆಲ್ಲಾ ಮನೆಗೆ ಬಂದು ಹೋಗುತ್ತಾರೆ, ಸಂತೆಗೆ ಹೋಗಿ ಅವರು ಎಂತೆಲ್ಲ ತರಕಾರಿ ತಂದ್ರು, ಅವರ ಮನೆಯಲ್ಲಿ ಇರುವಂತಹ ಅಂಡ್ರಾಯ್ಡ್ ಟಿವಿನೆ ನಮ್ಮ ಮನೆಗೂ ಬೇಕು. ನಾವು ಅವರು ಹಾಕಿದ್ದಕ್ಕಿಂತ ಹೆಚ್ಚಿನ ಬೆಲೆಯ ಬಟ್ಟೆಗಳನ್ನು ಹಾಕಿ ಕೊಳ್ಳಬೇಕು.ಹೀಗೆಲ್ಲಾ  ಯೋಚನೆ ಮಾಡುವ ಬದಲು, ಪಕ್ಕದ ಮನೆ, ಆಚೀಚೆ ಮನೆಯವರ ಬಿಟ್ಟು, ನಿನ್ನೆ ನಾನು ಏನೆಲ್ಲಾ ಮಾಡಿದ್ದೇನೆ, ನನ್ನ ಬದುಕನ್ನು ನಾನು ನಿನ್ನೆಗಿಂತ ಇಂದು ಹೇಗೆ ಉತ್ತಮಗೊಳಿಸಿಕೊಳ್ಳಬಹುದು, ಇನ್ನಷ್ಟು ನನ್ನ ವ್ಯಕ್ತಿತ್ವವನ್ನು ನಾನು ಹೇಗೆ ಚೆನ್ನಾಗಿ ರೂಪಿಸಿಕೊಳ್ಳಬಹುದು, ನನ್ನ ಜೀವನವನ್ನು ನಾನು ಇತರರಿಗಿಂತ ಹೇಗೆ ವಿಭಿನ್ನವಾಗಿ ನಡೆಸಬಹುದು ಹೀಗೆ ತರಹೇವಾರಿ ಆಲೋಚನೆ, ಅಭಿವ್ಯಕ್ತಿಗೊಳಿಸುತ್ತಾ ಮತ್ತೆ ಹಲವಾರು ಪುಸ್ತಕಗಳನ್ನು ಓದುತ್ತಾ ನಮ್ಮ ಮಸ್ತಕದ ಬ್ಯಾಂಕಿಗೆ ಒಂದಷ್ಟು ಹೆಚ್ಚಿನ ವಿಷಯಗಳನ್ನು ಡೆಪಾಸಿಟ್ ಮಾಡಿಕೊಂಡು ಅದನ್ನು ಜೀವನಪೂರ್ತಿ ಉಪಯೋಗಿಸಿಕೊಳ್ಳಬಹುದು. ಪುಸ್ತಕಗಳನ್ನು ಓದುವುದು ಎಲ್ಲಾ ಬಗೆಯ ಹವ್ಯಾಸಗಳಲ್ಲಿ ಉತ್ತಮ ಹವ್ಯಾಸ. ಇದರಿಂದ ಯಾರಿಗೂ ತೊಂದರೆಯಾಗದ ಹಾಗೆ ಹೊಸ ಹೊಸ ವಿಚಾರಗಳನ್ನು ತಲೆಯೊಳಗೆ ತುಂಬಿಸಿ ನಮ್ಮನ್ನು ನಾವು ಬದುಕಲ್ಲಿ ಎತ್ತರಕ್ಕೆ ಏರಿಸಿಕೊಳ್ಳಲು ಅನುಕೂಲ ಅಲ್ಲವೇ?
   ನಾವು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ರಾಜಕೀಯ, ಸಾಮಾಜಿಕ, ಆರ್ಥಿಕ, ಆಟೋಟಗಳ ವಿಚಾರ ನಿರರ್ಗಳವಾಗಿ ಮಾತನಾಡುವ, ಚರ್ಚಿಸುವ ನಮಗೆ ಪಕ್ಕದ ಮನೆಯ ಆಂಟಿ ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ಗೊತ್ತೇ ಇರುವುದಿಲ್ಲ. ಅದು ತಿಳಿಯುವಷ್ಟರಲ್ಲಿ  ಅವರ ನಲವತ್ತು ದಿನದ ಬ್ಯಾಂಡೇಜ್ ಬಿಚ್ಚುವ ಸಮಯ ಆಗಿರುತ್ತದೆ. 
      ನಾವು ಬಸ್ಸಿನಲ್ಲಿ ಓಡಾಡುವ ಕಾಲಕ್ಕೆ ಸರ್ವರನ್ನು ಮಾತನಾಡಿಸುವ, ಸರ್ವರ ಕಷ್ಟ ಸುಖ ಅರಿಯುವ, ವಿವಿಧ ಸ್ತರದ ಜನ ಜೀವನ ಓದುವ, ಪರರಿಗೆ ಸಹಾಯ ಮಾಡುವ, ಹಿರಿಯರಿಗೆ ಗೌರವ ಕೊಡುವ, ಪರರ ಕಷ್ಟಗಳನ್ನು ಅರಿತು ಸ್ಪಂದಿಸುವ ಗುಣಗಳು ಹಿರಿಯರಿಗೂ, ಅವರಿಂದ ಮಕ್ಕಳಿಗೂ ತಿಳಿಯುತ್ತಿತ್ತು. ಆದರೆ ಈಗ ಕಾರುಗಳ ಯುಗ. ಹೆಚ್ಚಿನ ಪ್ರತಿಯೊಂದು ಕುಟುಂಬಕ್ಕೂ ಅವರದೇ ಸ್ವಂತ ಕಾರುಗಳಿವೆ. ಅವರು ಎಲ್ಲಿ ತಿರುಗಾಡಲು ಹೋಗುವಾಗಲೂ ತಾನು,ತನ್ನ ಕುಟುಂಬ, ತನ್ನದು ಅಷ್ಟೇ. ಪರರ ಬಗ್ಗೆ ಯೋಚಿಸಲು ಹೋಗುವುದಿಲ್ಲ ಅವರು. ಇದರಿಂದ ಈಗಿನ ಜನರೇಶನ್ ಮಾನಸಿಕವಾಗಿ ಸಂಕುಚಿತವಾಗಿದೆ. ಪ್ರಪಂಚದ ವಿಷಯಗಳು ತಿಳಿದರೂ ತನ್ನ ಜೀವನ, ಕುಟುಂಬ, ಕಷ್ಟವನ್ನು ಹಾಗೂ ಸುಖವನ್ನು ಒಂದೇ ಸಮನಾಗಿ ಎದುರಿಸುವ ಧೈರ್ಯ, ತಮಗಿಂತ ಕೆಳಗಿನವರು ಕೂಡ ಬದುಕುವರು, ಅವರ ಬದುಕಿನ ಸೂತ್ರ ತಿಳಿದು ತನ್ನ ಸ್ಥಾನವನ್ನು ಅರಿಯುವ ಧೈರ್ಯ, ತಿಳಿಯದವರಿಗೆ ಬುದ್ಧಿ ಹೇಳುವ ಚಾಕಚಕ್ಯತೆಯನ್ನು ಇಂದಿನ ಜನಾಂಗ ಕಲಿಯಬೇಕಿದೆ. ಫಸ್ಟ್ ಏಡ್ ಕಲಿತವ ಮಾತ್ರ ಪರರಿಗೆ ಬಿದ್ದಾಗ ಸಹಾಯ ಮಾಡಲು ಹೋಗುವುದು, ತನ್ನ ಕಾಲ ಕೆಳಗೆ ಕಸ ಬಿದ್ದಿದ್ದರೂ, ಗಮನಿಸಿದರೂ ಗಮನಿಸದಂತೆ ಇರುವುದು, ತೆಗೆದ ವಸ್ತುಗಳನ್ನು ಉಪಯೋಗಿಸಿದ ಬಳಿಕ ಮರಳಿ ಅದರ ಸ್ಥಾನಕ್ಕೆ ಇಡದೆ ಇರುವುದು, ಬೆಳಗ್ಗೆ ಎದ್ದ ಕೂಡಲೇ ತಾನು ಹೊದ್ದುಕೊಂಡು ಮಲಗಿದ ಬೆಡ್ ಶೀಟ್ ಮಡಚದೆ ಇರುವುದು,ಹೊರಗೆ ಹೋಗಿ ಬಂದು ಕೈ ಕಾಲು ತೊಳೆಯದೆ ಮಲಗುವುದು, ಹಿರಿಯರಿಗೆ ಗೌರವ ಕೊಡುವ ಕಾರ್ಯದಲ್ಲಿ ಹಿಂದೆ ಬೀಳುವುದು, ಪೋಷಕರಿಗೆ ತಿರುಗಿ ಮಾತನಾಡುವುದು, ಸ್ವಾರ್ಥ, ಹoಚಿ ತಿನ್ನುವ ಗುಣ ಇಲ್ಲದೆ ಇರುವುದು,  ಶಿಕ್ಷಕರಿಗೂ ಗೌರವ ಕೊಡದೆ ಇರುವುದು ಇವೆಲ್ಲ ನಾವು ಹಲವಾರು ಮಕ್ಕಳಲ್ಲಿ ಕಾಣುವ ಗುಣಗಳು. ಇವು ಮಕ್ಕಳು ಬೆಳೆಯುತ್ತಾ ಹೋದಂತೆ ಹೆಚ್ಚಾಗುತ್ತಲೇ ಹೋಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿಯೇ ತಿಳಿಯುತ್ತದೆ ಎಂಬ ಹಾಗೆ ಸಣ್ಣ ಮಕ್ಕಳಲ್ಲಿಯೆ ಉತ್ತಮ ಗುಣ ಬೆಳೆದರೆ ಮುಂದೆ ಅದು ಹೆಚ್ಚುತ್ತಾ ಹೋಗುತ್ತದೆ ಅಲ್ಲವೇ?
        ಉತ್ತಮ ಗುಣ ನಡತೆ ಕಲಿಸಲು ,  ಮಕ್ಕಳನ್ನು ತಿದ್ದಿ ಸರಿಪಡಿಸಲು, ತಪ್ಪುಗಳನ್ನು ಸರಿ ಅಲ್ಲ ಎಂದು ಅಲ್ಲಲ್ಲೇ ಹೇಳಿ ಕೊಡಲು ಇಂದಿನ ಪೋಷಕರಿಗೆ ಸಮಯ ಇಲ್ಲ, ಹಣದ ಹಿಂದೆ ಓಡುವ ಕಾಲ ಇದಾಗಿದೆ. ಹಾಗಾಗಿ ಹಣ ಹೆಚ್ಚಿದಷ್ಟೂ ಗುಣ ಕಾಣೆಯಾಗಿದೆ. ಹಣದ ಜೊತೆ ಉತ್ತಮ ಗುಣ ಇರುವವರನ್ನು ಇಂದು ಸಿರಿವಂತರು ಎನ್ನಬಹುದು ಆದರೆ ಒಳ್ಳೆಯ ಹೃದಯದ ಜೊತೆಗೆ ಒಳ್ಳೆಯ ಆರೋಗ್ಯವೂ ಇರಬೇಕು. ಇಂದಿನ ಊಟವನ್ನು ಗಮನಿಸಿದರೆ ಸಸ್ಯಾಹಾರವೇ ಆಗಲಿ  ಮಾಂಸಾಹಾರವೇ ಆಗಲಿ ವಿಷವಿಲ್ಲದ ಸಾವಯವ ಊಟ ಇಂದು ಇಲ್ಲ. ಎಲ್ಲಾ ಆಹಾರಕ್ಕೂ ನಾವು ವಿಷ ಬೆರೆಸಿ ಬಿಟ್ಟಿದ್ದೇವೆ. ಅಷ್ಟೇ ಅಲ್ಲದೆ ನಮ್ಮ ಮನಸ್ಸಿನ ಜೊತೆಗೆ ಮಕ್ಕಳ ಮನಸ್ಸನ್ನೂ ಕೂಡಾ ಕಲುಷಿತಗೊಳಿಸಿ ಹಾಕಿದ್ದೇವೆ. ಮತ್ತೆ ಕಿರಿಯರನ್ನು ತಿದ್ದಬೇಕಾದ ಹಿರಿಯರೇ ಮಕ್ಕಳ ಹಾಗೆ ಆಡುವಾಗ ಇನ್ನು ಮಕ್ಕಳು ತಾನೇ ಏನು ಮಾಡಿಯಾರು? ಈಗ ಮಕ್ಕಳ ಶಾಲೆಗಿಂತ ಹೆಚ್ಚಾಗಿ ಹಿರಿಯರಿಗೆ ನ್ಯಾಯಾಲಯಗಳು ಬೇಕಿವೆ. ಹಿರಿಯರೇ ಪರಿಸರ ಮಲಿನ ಮಾಡುವುದರಲ್ಲಿ ಮಕ್ಕಳಿಗಿಂತ ಹೆಚ್ಚಿನ ಪಾಲು. ಇನ್ನು ಬುದ್ಧಿ ಹೇಳುವುದು ಯಾರಿಗೆ? ಬೇಲಿಯೇ ಎದ್ದು ಹೊಲ ಮೇದಂತೆ ಅಲ್ಲವೇ? ನಮಗೆ ನಾವೇ ಬುದ್ಧಿ ಹೇಳಿಕೊಂಡು ನಮ್ಮನ್ನು ನಾವೇ ತಿದ್ದಿಕೊಳ್ಳಬೇಕಾದ ಕಾಲವಿದು. ನಮ್ಮ ಬದುಕಿನಲ್ಲಿ ನಾವು ಒಳ್ಳೆಯ ಕೆಲಸ ಮಾದ ಬೇಕೋ, ಕೆಟ್ಟ ಕೆಲಸ ಮಾಡಬೇಕೋ ನಿರ್ಧರಿಸುವವರು ನಾವೇ. ಕರ್ಮ ನಮ್ಮದು. ಫಲ ದೇವರದ್ದು. ನೀವೇನಂತೀರಿ?
@ಹನಿಬಿಂದು@
17.09.2023

ಗುರುವಾರ, ಸೆಪ್ಟೆಂಬರ್ 7, 2023

ಉಪ್ಪಿಟ್ಟು

ಉಪ್ಪಿಟ್ಟು

ಯಾರದು ಏನೇ ಹೆಸರನು ಪಡೆಯಲಿ
ಕಾಲವು ಆಂಗ್ಲರ ಜತೆಗೇ ಓಡಲಿ
ಹೆಸರನು ಬದಲಿಸೆ ಕನ್ನಡವಾಗೆ ಉಳಿದಿಹೆ
ಉಪ್ಪಿಟ್ಟು ಎನುವರು ಎನ್ನ ಸಜ್ಜಿಗೆ ಕರಾವಳಿಯಲಿ ನಾ..

ಈರುಳ್ಳಿ ಬೆಳ್ಳುಳ್ಳಿ ಇದ್ದರು ಸರಿಯೇ
ಕೆಲವೆಡೆ ಇವು ಇಲ್ಲದಿದ್ದರೂ ಸರಿಯೇ
ರವೆಯನು ಚೆನ್ನಾಗಿ ನೀ ಹುರಿಯೇ
ಉಪ್ಪು ಮೆಣಸು ರುಚಿಗೆ ಸಾಕು!

ಸರ್ವ ಕಾಲದ ಬಡವರ ಬಂಧು
ಉಪವಾಸಕೂ ನಾನೇ ಸಿಂಧು
ತಿನುವಿರಿ ನನ್ನ ಬೇಗನೆ ಮಿಂದು
ಬಿಸಿ ಬಿಸಿ ತಿನ್ನಲು ಎಲ್ಲರೂ ಮುಂದು

ಸಣ್ಣಗೆ ಉರಿಯಲು, ಒಲೆಯಲಿ ರವೆಯ
ಬೇಗನೆ ಆಗುವ ತಿಂಡಿಯು ನಾನೇ!
ರೋಗಿಗು ಯೋಗಿಗು ಹೊಟ್ಟೆಯ ತಣಿಸಲು
ಭೋಗ ಭಾಗ್ಯಕೆ ನಮಿಸುವ ಪರಿಯೊಳು
@ಹನಿಬಿಂದು@
01.08.2023

ಸೋಮವಾರ, ಸೆಪ್ಟೆಂಬರ್ 4, 2023

change

                      Change

Change the change before it changes our life
Change our life before change enters there
Try to change the change according to our mind
Not change the change as it likes to change us

Change may rush to us to change us
Before the change changes us we should change
Changing ourselves is must for our goodness
We should change in a good manner too

Let's try to change the change in our own way
Never let change to  run  to change our day
Let the change change us in positive path
Let it make us to move in great efforts..

Come let's change the change in our life
Let the change should be useful for us
It should  be useful to our mind  too
Change should change our lifestyle too

All the changes should be born inside our mind
Not by looking into others attire and bind
Change is an inherent feel and decision
Later the change changed us to lead the nation
@HoneyBindu@
02.09.2023





ಗೆಳೆಯ ನೋವಿಗೆ

ಗೆಳೆಯ ನೋವಿಗೆ

ನೋವೇ ನಾನೇ ನಿನ್ನ ಗೆಳೆಯನಾಗಿರುವಾಗ
ಮತ್ತೆ ಮತ್ತೆ ನನ್ನ ನೀನೇಕೆ ಪರೀಕ್ಷೆಗೊಡ್ಡುವೆ?
ಮನದ ನೋವು ಹೃದಯದ ನೋವು ಎರಡೂ
ದೇಹದ ನೋವಿಗಿಂತ ದೊಡ್ಡದು ಎಂಬ ಮಾತು
 ನಾ ನಿನಗೆ ತಿಳಿಸಿ ಹೇಳಬೇಕಾದ ಅವಶ್ಯಕತೆ ಇದೆಯೇ?

ನೋವೇ ನನ್ನೊಂದಿಗೆ ನೀ ಸದಾ ಇದ್ದರೂ 
ಇನ್ನೂ ನೀನೇಕೆ ನನ್ನ ಅರ್ಥ ಮಾಡಿಕೊಂಡಿಲ್ಲ?
ನನ್ನ ನೋವುಗಳಲಿ ಜೊತೆ ಆದ ನಿನಗೆ ತಿಳಿದಿಲ್ಲವೆ
ನಗು ಎಂದಿಗೂ ನನ್ನ ಬಳಿ ಇಲ್ಲ ಎಂದು!

ನಿನ್ನ ಜೊತೆಗಾರನಾಗಿ ಮಾಡಿಕೊಂಡ ನಾನು
ಬದುಕಿ ಬಾಳುತ್ತಿರುವುದು ನಿನ್ನೊಂದಿಗೆ ಎಂದ ಮೇಲೆ
ಮತ್ತೆ ನನ್ನ ಪರೀಕ್ಷೆ ಮಾಡುವುದರಲ್ಲಿ ಅದೇನಿದೆ ಹೊಸತು?
ಅದೇಕೆ ನಿನಗೆ ಆ ಹುಚ್ಚು ಸೊಗಸು?

ನನ್ನ ಪರೀಕ್ಷಿಸಿ ಇನ್ನೂ ನೋವು ಕೊಡುತ್ತಾ
ಅದಾವ ಆಟ ಆಡಲಿರುವೆ ಬಾಳಲಿ?
ನೋವುಂಡ ದೇಹಕೆ ನೋವನುಣಿಸಿ
ಅದಾವ ಪರಿಯ ಸಂತಸ ಕಾಣುವೆ?

ನೋವೇ , ನೋವುಂಡ ಮನಕೆ 
ಮತ್ತೆ ಮತ್ತೆ ನೋವು ಕೊಡದಿರು
ಒಂಟಿಯಾದ ತನುವಿಗೆ ಇನ್ನೂ
ಒಂಟಿತನದ ಬಣ್ಣ ಹಚ್ಚದಿರು

ಯಾರಿರದೆ ಇದ್ದರೇನು ಬದುಕಲಿ
ದೇವನಿಹನಲ್ಲ ಒಳಿತು ಕೆಡುಕುಗಳ ಅರಿತು
ಸರಿಯಾಗಿ ಕೂಡಿ ಕಳೆದು ಲೆಕ್ಕ ಹಾಕಲು!
ನೋವಿನ ಕಾಗದವೇ ಆದ ಬದುಕಲ್ಲಿ
ನಗುವಿನ ಅಕ್ಷರಗಳ ಎಲ್ಲಿ ಹುಡುಕಲಿ?

ನೋವಿನ ಅಂಗಳದಿ ನಲಿವಿನ ಹೂವು
ಅದು ಯಾವಾಗ  ಅರಳಬಹುದು ಜಗದಲಿ
ನೋವ ಅರೆದು ಕುಡಿದ ಉದರದಲಿ
ನಗೆಯ ಪರಿಮಳ ಸೂಸಬಹುದೆ!

ನೋವಿನ ಆಗಸದ ಹುಣ್ಣಿಮೆಯ ದಿನ
ನಗುವಿನ ಚಂದಿರ ಉದಯಿಸುವನೇ?
ನೋವೆಂಬ ಗಿಡದ ಕಾಯಿ ನಗುವಾದೀತೆ!
ನೋವೆಂಬ ಕತ್ತಲ ಸರಿಸಿ ನಗು ಎನುವ
ಬಿರುಸಾದ ಬೆಳಕು ಬರುವ ಕನಸು ಕಾಣಬಹುದೇ?

ಮುಳ್ಳನ್ನು ಮುಳ್ಳಿನಿಂದಲೆ ತೆಗೆವಂತೆ
ನೋವನ್ನು ನೋವಿಂದ ತೆಗೆಯಲು ಸಾಧ್ಯವೇ!
ನೋವಿನಲ್ಲೇ ಜನನ ನೋವಿನಲ್ಲೇ ಮರಣ
ನೋವಿನಲ್ಲೇ ಬದುಕು ನೋವಿನಲ್ಲೇ ಬಿರುಕು

ನೋವು ಕೊಟ್ಟವ ನೋವ ತಂದವ
ನೋವು ಬಂದಾಗ ಸ್ಪಂದಿಸದವ
ನೋವ ನೋಡಿಯೂ ನೋಡದಂತಿರುವವ
ಇದ್ದರೂ ಇಲ್ಲದಿದ್ದರೂ ನೋವೇ ಅಲ್ಲವೇ!

ನೋವಿನ ಹನಿ ಬಿಂದುವಿನಲಿ ನಗೆಯ ಕಿರಣ
ಉಕ್ಕಿ ತೂರಿ ಬಂದರೂ ನೋವಿನ
ಹನಿ ಆವಿಯಾಗುವ ಲಕ್ಷಣ ಬಾರದು
ನೋವೇ ನಲಿವಾಗಿರುವಾಗ ಆಸೆ ಇರದು!
@ಹನಿಬಿಂದು@
01.09.2023

ಸಾಲವೆಂಬ ಶೂಲ

ಸಾಲವೆಂಬ ಶೂಲ

ಸಾಲವೆಂಬ ಶೂಲದಲ್ಲಿ
ಬೀಳಬೇಡ ಮಾಲಕ
ಬೋಳನಂತೆ ಖರ್ಚುಮಾಡಿ
ಕೀಳಾಗಬೇಡ ನಾಯಕ
ದಾಳದಲ್ಲಿ ಆಟವಾಡಿ
ತಾಳದಲ್ಲಿ ಸಿಕ್ಕಿ ಬಿದ್ದು
ಹಾಳಾದ ಧರ್ಮರಾಯ
ನೀಳವಾದ ಮಾತು ನಂಬಿ
ಬಾಳಿ ಬದುಕೊ ಮಾನಕ
ಮಾಡಿಕೊಂಡು ಕಾಯಕ
ಹರ್ಷವಿರಲಿ ಮನಕ
ಆರೋಗ್ಯವಿರಲಿ ಜೀವಕ
@ಹನಿಬಿಂದು@
03.09.2023

ಭಾನುವಾರ, ಸೆಪ್ಟೆಂಬರ್ 3, 2023

ಒಂದಿಷ್ಟು...200

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 200

    ಇನ್ನೂರನೇ ವಾರಕ್ಕೆ ಸರ್ವ ಓದುಗರಿಗೆ ಸ್ವಾಗತ ಕೋರುತ್ತಾ ನಿಮ್ಮ ಸಹೃದಯಕ್ಕೆ ನಾ ಸದಾ ಚಿರಋಣಿ. ಒಂದೊಂದು ಅಕ್ಷರವನ್ನೂ ತಿದ್ದಿ ತೀಡಿ ಕಲಿಸಿ ಬೆಳೆಸಿದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ, ಕಾಲೇಜು ಹಾಗೂ ಉನ್ನತ ತರಗತಿಗಳಲ್ಲಿ ಬೋಧಿಸಿದ ನನ್ನೆಲ್ಲಾ ಗುರು ವೃಂದದ ಪಾದಾರವಿಂದಕ್ಕೆ ನಮಿಸುತ್ತಾ, ಮೊದಲ ಗುರು ಅಮ್ಮನಿಗೂ , ನನ್ನೊಡನೆ ವಿದ್ಯಾರ್ಥಿಗಳಿಗೆ ಬೋಧಿಸುತ್ತ, ಬೋಧಿಸುವ ಕಾಯಕವನ್ನು ಜೀವನದ ಧ್ಯೇಯ, ವೃತ್ತಿ ಹಾಗೂ ಪ್ರವೃತ್ತಿಯಾಗಿಸಿಕೊಂಡ  ಸರ್ವ ಗುರು ಸಂ ನುಕುಲಕ್ಕೆ ಶಿಕ್ಷಕರ ದಿನದ ಶುಭಾಶಯಗಳನ್ನು ಕೋರುತ್ತೇನೆ. 
      ಒಂದೆಡೆ ವಿಪರೀತ ಹರ್ಷದಲ್ಲಿ ಈ ಅಂಕಣ ಪ್ರಾರಂಭಿಸಿರುವೆ. ಇನ್ನೊಂದೆಡೆ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಇರುವ ಕಾರಣ ನನ್ನ ಆರೋಗ್ಯ  ಹದಗೆಟ್ಟು ಹೋಗಿದೆ. ಕಾರಣ ಇಷ್ಟೇ. ಬೆಂಗಳೂರಿನಲ್ಲಿ ಇರುವ ವಿಪರೀತ ಜನದಟ್ಟಣೆ ಹಾಗೂ ವಾಹನಗಳ ಸಂಖ್ಯೆಯ ಏರುವಿಕೆಯಿಂದಾಗಿ ಇಲ್ಲಿನ ಪರಿಸರ ಪೂರ್ತಿ ಬಿಸಿಯಾಗಿ ಗಾಳಿ ಎಲ್ಲಾ ವಿಷಯುಕ್ತವಾಗಿದೆ. ಇದು ಹೊರಗಿನಿಂದ  ಬಂದ ಜನರಿಗೆ ಆದಷ್ಟು ಬೇಗ ಹೊಂದಾಣಿಕೆ ಆಗಲು ಸಾಧ್ಯವಾಗದ ಹಾಗೆ ಮಾಡುತ್ತದೆ. ಎಷ್ಟೇ ಒಳ್ಳೆಯ ಶಕ್ತಿಯುತ ಜನರಿಗೂ ಇಲ್ಲಿನ ಬಿಸಿಲಿನಲ್ಲಿ ಒಂದು ದಿನ ರಸ್ತೆ ಬದಿ ನಡೆದರೆ ಇಲ್ಲಿನ ವಿಷಪೂರಿತ ಮಲಿನ ಗಾಳಿಯ ಅನುಭವ ದೇಹದ ಮೇಲೆ ಆಗಿಯೇ ಆಗುತ್ತದೆ. ಇಲ್ಲೇ ಇದ್ದವರಿಗೆ ದೇಹ ಹೊಂದಾಣಿಕೆ ಆಗಿಬಿಟ್ಟಿದೆ. ಹೊರಗಿನಿಂದ ಬಂದವರು ಸರಿಯಾಗಿ ಇಲ್ಲಿಗೆ ಹೊಂದಿಕೊಳ್ಳಲು ಬಹಳ ಕಾಲ ಬೇಕಾಗಬಹುದು. ವಿಪರೀತ ಬಿಸಿಲು ಹಾಗೂ ಮೈ ಪೂರ್ತಿ ಬೆವರಿನಿಂದ ತೊಯ್ದು ಒದ್ದೆಯಾಗುವ ದಕ್ಷಿಣ ಕನ್ನಡದ ಊರುಗಳಲ್ಲಿ ಇದ್ದು ಇಲ್ಲಿಗೆ ಬಂದು ತಕ್ಷಣ ಹೊಂದಿಕೊಳ್ಳಲು ಕಷ್ಟವೇ ಸರಿ. ಚೆನ್ನಾಗಿಯೇ ಇದ್ದರೆ ಓಕೆ.ಒಮ್ಮೆ ವೈರಲ್ ಶೀತ, ತಲೆನೋವು ಜ್ವರ ಪ್ರಾರಂಭವಾದರೆ ಸಾಕು. ಸಧ್ಯಕ್ಕೆ ಕಡಿಮೆ ಆಗುವ ಲಕ್ಷಣವೇ ಇಲ್ಲ, ಇದರ ಜೊತೆಗೆ ಕೆಮ್ಮು ಫ್ರೀ. ಹಾಗೆಯೇ ಇಲ್ಲಿನ ಬೋರ್ ನೀರಿಗೆ ಮೈಯ ಚರ್ಮವೆಲ್ಲಾ ಒಣಗಿ ಸುಕ್ಕಾಗಿ ತಲೆ ಕೂದಲಲ್ಲಿ ಹೊಟ್ಟಾಗಿ, ಚರ್ಮ ಹಾವಿನ ಪೊರೆಯ ಹಾಗೆ ಆಗಿ ಬಿಡುತ್ತದೆ. ತಂಪು ಹವೆಯಿದ್ದರೂ ದೇಹ ಒಣಗುವ ಕಾರಣ ಭೂ ವಾತಾವರಣ ವಿಪರೀತ ವಾಹನದ ಹೊಗೆಯಿಂದ ದೇಹದ ಚರ್ಮ ಒಣಗಿ ಹೋಗುತ್ತದೆ. ಇಲ್ಲಿನ ಹವಾಮಾನಕ್ಕೆ ಹೊಂದಾಣಿಕೆ ಆದ ದೇಹಕ್ಕೆ ಇದರ ತೊಂದರೆ ಇಲ್ಲ ಅನ್ನಿಸುತ್ತದೆ. 
     ನಮ್ಮ ಪರಿಸರ, ನಮ್ಮ ಭೂಮಿ, ನಮ್ಮ ನೆಲ, ನಮ್ಮ ಜಲ, ಪಂಚ ಭೂತ ಎನ್ನುತ್ತಾ ಭೂಮಿಯನ್ನು ಪೂಜೆ ಮಾಡುವ ನೆಪ ಮಾತ್ರ ಇಂದಿನ ಜನರಲ್ಲಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಸಾವಿರಾರು ಆಚರಣೆಗಳು ವೇದಿಕೆಯಲ್ಲಿ ಮಾತ್ರ. ವನ ಮಹೋತ್ಸವದ ದಿನ ನೆಟ್ಟ ಗಿಡ ಮರುದಿನವೇ ಒಣಗಿ ಹೋಗಿರುತ್ತದೆ. ಮತ್ತೆ ಅದಕ್ಕೆ ನೀರು ಹಾಕುವ ಗತಿಯಿಲ್ಲ. ಇನ್ನು ವೇದಿಕೆಯಲ್ಲಿ ಉದ್ದುದ್ದ ಭಾಷಣ ಮಾಡುವುದರಲ್ಲಿ ನಾವು ನಿಸ್ಸೀಮರು. ಆದರೆ ನಿಜವಾಗಿ ಪ್ರಕೃತಿ ಉಳಿಸುವ ಕಾರ್ಯ ಅದೆಷ್ಟು ಆಗಿದೆಯೋ ಅದು ನಮ್ಮ ಬಿಸಿಯಾಗುತ್ತಿರುವ ಭೂಮಿಯಲ್ಲಿ, ತೇಲಿ ಬರುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ, ರಾಶಿ ಬಿದ್ದಿರುವ ಕಸದ ಗುಡ್ಡಗಳಲ್ಲಿ ನಮಗಿರುವ ಪ್ರಕೃತಿ ಮಾತೆಯ ಕಾಳಜಿ ಕಾಣುತ್ತದೆ. ಎಲ್ಲೋ ಅಲ್ಲಲ್ಲಿ ಒಬ್ಬೊಬ್ಬ ಪರಿಸರ ಕಾಳಜಿ ಇರುವ ವ್ಯಕ್ತಿಗಳು ಗಿಡ ಮರ ನೆಟ್ಟು, ನೀರು ಇಂಗಿಸಿ, ನದಿ ಸ್ವಚ್ಛಗೊಳಿಸಿ, ಊರನ್ನು ಹಸಿರಾಗಿಸಿ ಪ್ರಕೃತಿಗೆ ಒಳಿತು ಮಾಡಿರುವುದು ಬಿಟ್ಟರೆ ನಾವೆಲ್ಲರೂ ಪ್ಲಾಸ್ಟಿಕ್, ಚೂಯಿಂಗ್ ಗಮ್ ನಿಂದ ಹಿಡಿದು ಬಳಸಿದ ಪೇಸ್ಟ್, ಬ್ರಷ್ ಎಲ್ಲವನ್ನೂ  ಭೂಮಿಗಿಳಿಸಿ ನಿರಾಳರಾಗುವ ನಾವು. ರೈತರೂ ಕೂಡಾ ಹಣದ ಆಸೆ, ಬೆಳೆ ಉತ್ತಮವಾಗಿ ಬರಲು ವಿವಿಧ ರಾಸಾಯನಿಕಗಳನ್ನು ಮಣ್ಣಿಗೆ ಸುರಿದು ಉತ್ತಮ ಬೆಳೆ ಪಡೆದು ಅದನ್ನು ಒಳ್ಳೆಯ ಬೆಲೆಗೆ ಮಾರುತ್ತಾರೆ. ರಾಸಾಯನಿಕ ವಿಷ ಸುರಿದ ತಾವೇ ಬೆಳೆದ ಬೆಳೆಯನ್ನು ಉಪಯೋಗಿಸದ ರೈತರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ. ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರವನ್ನು ಕಡಿಮೆ ಆಗದ ಹಾಗೆ ಪೂರೈಸುವ ಜವಾಬ್ದಾರಿಯೂ ರೈತರ ಮೇಲೆ ಇದೆ ಅಲ್ಲವೇ? ಪಾಪ ಅವರಾದರೂ ಏನು ಮಾಡಿಯಾರು? ಇನ್ನು ಬೇಡಿಕೆ ಹೆಚ್ಚಿದರೂ ಹಣ ದಲ್ಲಾಳಿಯ ಪಾಲಿಗೆ, ಮಾರಾಟಗಾರರಿಗೆ ಹೊರತು ಕಷ್ಟ ಪಟ್ಟ ರೈತರಿಗೆ ಸಿಗುವ ಹಣ ಕೊಂಚವೇ. ಇದು ನಮ್ಮ ಜೀವನ ಪದ್ಧತಿಯೇ ಆಗಿ ಹೋಗಿದೆ ಬಿಡಿ. ಕಾಲಾಯ ತಸ್ಮಯೇ ನಮಃ ಎನ್ನ ಬೇಕಷ್ಟೆ! ಬೇರೇನೂ ವಿಧಿ ಇಲ್ಲ. ರಾಸಾಯನಿಕ ಇಲ್ಲದ ಸಾವಯವ ಆಹಾರ ತುಂಬಾ ತುಟ್ಟಿ. ಅದನ್ನು ಎಲ್ಲರೂ ಬಳಸಲು ಸಾಧ್ಯ ಆಗದ ಮಾತು. ಬಡ ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳು ಭಾರತದಲ್ಲಿ ಅಧಿಕ ಆಗಿರುವ ಕಾರಣ ಅವರ ಬದುಕು ಯಾವಾಗಲೂ ದುಸ್ತರವೇ. ಆರಕ್ಕೆ ಏರುವುದಿಲ್ಲ,ಮೂರಕ್ಕೆ ಇಳಿಯುವುದಿಲ್ಲ ಅಂಥವರ ಬದುಕು. ಇನ್ನು ಗಂಡ ಕುಡುಕನಾಗಿದ್ದು ಅವನು ದುಡಿದ ಎಲ್ಲಾ ಹಣ ಕುಡಿತ, ಗೆಳೆಯರು ಅಂತ ಖರ್ಚು ಮಾಡಿ ಮಹಿಳೆಯೇ ಕುಟುಂಬ ನೋಡಿಕೊಳ್ಳುವ ಅನಿವಾರ್ಯತೆ, ಗಂಡ ಸತ್ತು ಮಹಿಳೆ ಕುಟುಂಬದ ಭಾರ ಎಳೆಯುವ ಕುಟುಂಬಗಳು ನಮ್ಮ ದೇಶದಲ್ಲಿ ಹಲವಾರು ಇರುವ ಕಾರಣ ಬಡತನ ಇನ್ನೂ ಇದೆ. ಇಂತಹ ದೇಶಕ್ಕೆ ಗುಣಮಟ್ಟದ ಬದಲು ಪ್ರಮಾಣವನ್ನು ಮಾನದಂಡವಾಗಿ ಇಡಬೇಕಾಗುತ್ತದೆ. ಹೀಗಾಗಿಯೇ ಸರಕಾರದ ಉಚಿತ ಪಡಿತರ ವಿತರಣೆಯ ಸಾಮಾಗ್ರಿಗಳಿಗೆ ಬಹು ಬೇಡಿಕೆ. ಅಲ್ಲಿ ಸಿಗುವ ಅಕ್ಕಿ, ಗೋಧಿ , ರಾಗಿ, ಎಣ್ಣೆ, ಸಕ್ಕರೆಗೆ ಜನ ಸರತಿಯ ಸಾಲಲ್ಲಿ ನಿಂತು, ಪಡೆದು, ರಿಕ್ಷಾ ಮಾಡಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಹೀಗಿರುವಾಗ ಎಲ್ಲವನ್ನೂ ಒಳ್ಳೆಯ ಗುಣಮಟ್ಟದಲ್ಲಿಯೇ ಬಯಸಲು ಸಾಧ್ಯವೇ? ಆದರೂ ಭಾರತೀಯರಲ್ಲಿ ಇರುವ ಕಡಿಮೆ ಬೆಲೆಯ ಕೊಳ್ಳುಬಾಕ ಸಂಸ್ಕೃತಿಯನ್ನು ಚೀನಾ ದೇಶದ ಜನ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಚೀನಾ ಬಜಾರ್ ಭಾರತದಲ್ಲಿ ನೆಲೆ ಊರುವಂತೆ ಮಾಡಿ ಬಿಟ್ಟಿದ್ದಾರೆ ಅಲ್ಲವೇ! ಅಲ್ಲಿ ಸಿಗುವ ಕಡಿಮೆ ಬೆಲೆಯ ಎಲ್ಲಾ ವಸ್ತುಗಳೂ, ಬಳಸಿ ಬಿಸಾಕುವ ವಸ್ತುಗಳೂ ಪರಿಸರಕ್ಕೆ ಮಾರಕವೇ. ಆದರೂ ಜನರ ಆಸೆ ಕಡಿಮೆ ಆಗಿಲ್ಲ. 
   ಭೂಮಿಯನ್ನು ಮನುಷ್ಯನ ಹೊರತು ಯಾವುದೇ ಪ್ರಾಣಿ ಪಕ್ಷಿಗಳೂ ಭೂಮಿಯನ್ನು ಹಾಳು ಮಾಡಲಾರವು. ಎಲ್ಲವೂ ತಮ್ಮ ಆಹಾರಕ್ಕಾಗಿ , ಅವಾಸಕ್ಕಾಗಿ, ಬದುಕಿಗಾಗಿ ಅವಲಂಬಿಸಿರುವ ಏಕೈಕ ಜಾಗ ಭೂಮಿ. ಅದನ್ನು ಚೆನ್ನಾಗಿ ಕಾಯ್ದುಕೊಳ್ಳಬೇಕಾದುದು ನಮ್ಮ ಧರ್ಮ. ಆದರೆ ಮನುಷ್ಯ ಬುದ್ಧಿ ಜೀವಿ ಆಗಿದ್ದರೂ ಕೂಡಾ ತನ್ನ ವಿಪರೀತ ದುರಾಸೆಯಿಂದ ಭೂಮಿಯ ಒಳಗೆ ಕೈ ಹಾಕಿ ಭೂಮಿಯನ್ನು ಬರಿದು ಮಾಡಿರುವುದೇ ಅಲ್ಲದೆ, ಮಣ್ಣು, ನೀರು, ಗಾಳಿಗೂ ವಿಷ ಹಾಕಿ ಇನ್ನು ಮುಂದಿನ ಜನಾಂಗ ಒಳ್ಳೆಯ ಬದುಕು ನಡೆಸಲು ಕೂಡಾ ಸಾಧ್ಯವಾಗದ ಹಾಗೆ ಮಾಡಿರುವುದು ವಿಪರ್ಯಾಸವೇ ಸರಿ. 
   ಪ್ರತಿಯೊಬ್ಬ ಮಾನವನೂ ತಾನು ಪರಿಸರವನ್ನು ಸ್ವಚ್ಚವಾಗಿ ಇಡುತ್ತೇನೆ ಎಂಬ ಪಣ ತೊಟ್ಟರೆ ಗಾಂಧಿ ಜಯಂತಿ ಆಚರಣೆ ಸಾರ್ಥಕವಾದಂತೆ. ಅಲ್ಲದೆ ನನ್ನಿಂದ ಪರಿಸರಕ್ಕೆ  ಹಾನಿ ಆಗುವ ಯಾವ ವಸ್ತುವೂ ಎಸೆಯಲ್ಪಡುವುದಿಲ್ಲ ಎಂಬ ಧ್ಯೇಯ ವಾಕ್ಯವನ್ನು ಎಲ್ಲರೂ ಪಾಲಿಸಬೇಕು. ಐಸ್ ಕ್ರೀಂ ಕಪ್, ಚಾಕೋಲೇಟ್ ಪೇಪರ್ ಗಳನ್ನು ಕಂಡ ಕಂಡಲ್ಲಿ ಎಸೆಯುವುದನ್ನು ತಪ್ಪಿಸಬೇಕು. ನನ್ನಿಂದ ಪರಿಸರ ಹಾಳಾಗಬಾರದು ಎಂಬುದನ್ನು ಮನದಲ್ಲಿ ಇರಿಸಬೇಕು. ಎಲ್ಲರೂ ಈ ರೀತಿ ವರ್ತಿಸಿದರೆ ಶಿಕ್ಷಕರಿಗೂ ಸಂತೋಷ. ವಿದ್ಯಾರ್ಥಿಗಳು ಶಿಕ್ಷಕರಿಗೆ ಖುಷಿ ಪಡಿಸಲು ಈ ಶಿಕ್ಷಕರ ದಿನಾಚರಣೆಯ ಬಳಿಕ ನಾವೆಂದೂ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವುದಿಲ್ಲ ಎಂದು ಪಣ ತೊಡಿ. ಶಿಕ್ಷಕರನ್ನು ಸಂತಸವಾಗಿ ಇಡಲು ನಿಮ್ಮ ತರಗತಿ ಹಾಗೂ ಶಾಲೆಯ ಪರಿಸರ ಶುಚಿ ಇಡಿ. ಅಷ್ಟೇ ಸಾಕು. ನಮ್ಮ ದೇಹ, ಮನೆ, ಶಾಲೆ, ಸುತ್ತ ಮುತ್ತ, ಪ್ರಕೃತಿ, ಭೂಮಿ ಎಲ್ಲವೂ ನಮ್ಮದೇ, ಎಲ್ಲವನ್ನೂ ಶುಚಿಯಾಗಿ ಇಡೋಣ, ಮುಂದಿನ ಜನಾಂಗಕ್ಕೆ ಒಳ್ಳೆಯ ಭೂಮಿಯನ್ನು  ಧಾರೆ ಎರೆಯುವ ಕಾರ್ಯ ಮಾಡೋಣ. ನೀವೇನಂತೀರಿ?
@ಹನಿಬಿಂದು@
02.09.2023

ಭಾರತ ಪ್ರಕಾಶಿಸುತ್ತಿದೆ. ವಿಕ್ರಮ್ ಲ್ಯಾಂಡರ್  ಚಂದ್ರನನ್ನು ತಲುಪಿ ಇನ್ನೇನು ಪ್ರಗ್ಯಾನ್ ರೋವರ್ ವಿಷಯ ಕಲೆ ಹಾಕಿ ಭಾರತ ಅದನ್ನು ಪಡೆಯಲಿದೆ. ಚಂದ್ರನ ಮೇಲೆ ತಾನು ತಲುಪಿರುವ ಸುದ್ದಿ ನಾಲ್ಕು ಫೋಟೋಗಳನ್ನು ಕಳುಹಿಸುವ ಮೂಲಕ ಅದು ನಮಗೆ ನೀಡಿದೆ. ಚಂದ್ರನ ಒಂದು ದಿನ ಎಂದರೆ ಭೂಮಿಯ ಹದಿನಾಲ್ಕು ದಿನಗಳಂತೆ. ವಿಕ್ರಮ್ ಲ್ಯಾಂಡರ್ ಸ್ವಲ್ಪ ರೆಸ್ಟ್ ಮಾಡಲಿದೆ. ಕಾರಣ ಚಂದ್ರನಲ್ಲಿನ ಧೂಳಿನಿಂದ ಮುಕ್ತಿ ಸಿಗಲಿ ಅಂತ. ಇದೆಲ್ಲ ನಮಗೆ ವಿಜ್ಞಾನಿಗಳು ಕೊಟ್ಟ ಹೇಳಿಕೆ, ವಾರ್ತೆಗಳ ಮೂಲಕ ತಿಳಿದದ್ದು. ಇದರ ಮುಂದೆ ಮೊದಲೇ ಚಂದ್ರನಲ್ಲಿಗೆ ವ್ಯೋಮ ನೌಕೆಗಳನ್ನು ಕಳುಹಿಸಿದ್ದ ರಷ್ಯಾ, ಅಮೆರಿಕ, ಚೀನಾ ದೇಶಗಳ ಸಾಲಿಗೆ ಭಾರತ ಸೇರುತ್ತದೆ. ಭಾರತದ ಶಿಖರಕ್ಕೆ ಒಂದು ಗರಿ ಇದು.  ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಇನ್ನೂ ಕೂಡ. ಇಲ್ಲಿ ಅತಿ ಸಿರಿವಂತರು ಕೂಡಾ ಇದ್ದಾರೆ, ಏನೂ ಇಲ್ಲದೆ ಕಿತ್ತು ತಿನ್ನುವ ಬಡತನವೂ ಇದೆ. ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ, ಹಗ್ಗದ ಮೇಲೆ ನಡೆಯುವ, ತನಗೆ ತಾನೇ ಹಿಂಸೆ ಕೊಟ್ಟುಕೊಳ್ಳುವ, ಹೊರಲಾರದ ಹೊರೆ ಹೊರುವ, ಮೊಬೈಲ್ ಟವರ್ ಗಳನ್ನು ಕಟ್ಟುವಂತಹ ಕಷ್ಟದ ಕೆಲಸ ಮಾಡುವ, ನಿತ್ಯ ಕೂಲಿಯ ಜನ ಅಷ್ಟೇ ಅಲ್ಲದೆ ಮೈ ಮಾರಿಕೊಂಡು ಬದುಕುವ, ಪರರ ಮನೆಯ ಪಾತ್ರೆ ತೊಳೆಯುವುದು, ಬಟ್ಟೆ ಒಗೆದು ಅವರು ಕೊಟ್ಟದ್ದನ್ನು ತಿಂದು ಬದುಕುವ ಜನರೂ ಅದೆಷ್ಟೋ ಇದ್ದಾರೆ. ಬದುಕಲು ಕೂಡದೆ ಕಳ್ಳತನ ಮಾಡಿ, ಅವರಿವರಿಗೆ ಮೋಸ ಮಾಡಿ ಬದುಕುವವರು ಒಂದೆಡೆ ಆದರೆ, ದೊಡ್ಡ ದೊಡ್ಡ ಮಂತ್ರಿಗಳ, ಅಫೀಸರುಗಳ ಹಿಂದೆ ಹಿಂದೆ ಸುತ್ತುತ್ತಾ ಅವರ ಹಣದಲ್ಲೇ ಬದುಕುವ ಅಡ್ನಾಡಿ ಜನರೂ ನಮಗೆ ಸಿಗುತ್ತಾರೆ. ಒಟ್ಟಿನಲ್ಲಿ ಬದುಕು ಪ್ರತಿಯೊಬ್ಬರಿಗೂ ವಿಭಿನ್ನ. ಕೆಲವರಿಗೆ ಹಣದ ಹೊಳೆ ಹರಿದರೆ ಇನ್ನೊಬ್ಬ ಒಂದೊಂದು ರೂಪಾಯಿಗೂ ಪರದಾಡುತ್ತ ಇರುತ್ತಾನೆ. ಒಬ್ಬರ ಮನೆಯಲ್ಲಿ ನಾಲ್ಕೈದು ಗಾಡಿಗಳಿದ್ದರೆ ಇನ್ನೊಬ್ಬನಿಗೆ ಸೈಕಲ್ ಕೊಳ್ಳಲೂ ಸಾಧ್ಯವಾಗುವುದಿಲ್ಲ. 
      ಒಬ್ಬ ವರ್ಷಕ್ಕೆರಡು ಬಾರಿ ಐಷಾರಾಮಿ ಕಾರು ಬದಲಿಸಿದರೆ ಇನ್ನೊಬ್ಬ ವರ್ಷವಿಡೀ ಎರಡೇ ಬಟ್ಟೆಯಲ್ಲಿ ಜೀವನ ಸಾಗಿಸುತ್ತಾನೆ. ಇದು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಲ್ಲೆಲ್ಲ ಹೀಗೆಯೇ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶ ಏನೇನೋ ಸಾಧನೆ ಮಾಡಿದ್ದರು ಕೂಡ ತಮ್ಮ ದೈಹಿಕ ಅನಾರೋಗ್ಯಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಎಲ್ಲರ ಬಳಿ ಸಾಮಾಜಿಕ ಜಾಲ ತಾಣಗಳ ಮೂಲಕ  ಕೇಳಿ ತಮ್ಮ ಬದುಕುವ ಆಸೆ ವ್ಯಕ್ತ ಪಡಿಸುವ ಅದೆಷ್ಟು ಮಂದಿ ನಮ್ಮ ಮುಂದೆ ಇದ್ದಾರೆ! ಯಾಕೆಂದರೆ ನಮ್ಮ ಸುತ್ತಮುತ್ತ ನಮ್ಮನ್ನೂ ಸೇರಿಸಿ ಸಾಧಾರಣ ಜನರೇ ಹೆಚ್ಚು. ಕೆಲವರು ದಾನಿಗಳೂ ಇದ್ದಾರೆ. ಕೆಟ್ಟ ಜನರು ಮೋಸ, ದರೋಡೆ, ಕಳ್ಳತನ, ಕೊಲೆ, ಸುಲಿಗೆ ಮಾಡಿ ಜೀವಿಸುವವರು ಒಂದೆಡೆ ಆದರೆ ತಾನು ದುಡಿದ ಹಣದಲ್ಲಿ ವೃದ್ಧಾಶ್ರಮ, ವಿದ್ಯಾರ್ಥಿಗಳಿಗೆ ಶಾಲೆ, ಹಾಸ್ಟೆಲ್, ಉಚಿತ ವಿದ್ಯೆ, ಬಡವರಿಗೆ ನಿತ್ಯ ಬಳಕೆಯ ಸಾಮಾನು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ , ರೋಗಿಗಳಿಗೆ ಸಹಾಯ ಮಾಡುವ ಉನ್ನತ ಹೃದಯಿ, ಉದಾರ ದಾನಿಗಳಿಗೂ ಕೊರತೆ ಇಲ್ಲ. ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇರುವವರು ಒಂದೆಡೆ ಆದರೆ ಇನ್ನೊಂದೆಡೆ ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ, ಬೆಳಗ್ಗೆ ಪ್ರಾರ್ಥನೆ ಯಾಕೆ ಮಾಡಬೇಕು? ಸಾರ್ವಜನಿಕ ಪೂಜೆ ಸಲ್ಲದು, ಬೇಕಿದ್ದರೆ ಮನೆಯೊಳಗೆ ಕುಳಿತು ಒಬ್ಬನೇ ಪೂಜೆ ಮಾಡು ಎನ್ನುವ ಜನರೂ ಇರುವ ಈ ದೇಶದಲ್ಲಿ ಪ್ರತಿಯೊಂದು ಕಡೆಯೂ ವಿವಿಧತೆ. ಆ ವಿವಿಧತೆಯಲ್ಲಿ ಏಕತೆ ಇರಲಿ ಎಂಬುದು ನಮ್ಮ ಹಾರೈಕೆ. 
    ಭಾರತ ಹೊಳೆಯಲಿ, ಭಾರತ ಬೆಳಗಲಿ, ಭಾರತದ ಕೀರ್ತಿ ಪತಾಕೆ ಹಾರಲಿ, ಭಾರತ ವಿಶ್ವದ ನಂಬರ್ ವನ್ ರಾಷ್ಟ್ರ ಆಗಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಲಿ. ಆ ದಿಶೆಯಲ್ಲಿ ಜೀವನ ಸಾಗಲಿ. ನಾನೊಬ್ಬ ಸಿರಿವಂತ ಆದರೆ ಸಾಕು ಎಂಬ ಸ್ವಾರ್ಥ ಭಾವ ಬಾರದೆ ಇರಲಿ. ಪುಕ್ಕಟೆ ಸಿಗುವ ವಸ್ತು, ಹಣವನ್ನು ಬಯಸಿ ಜನ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಇರಲಿ, ಉತ್ತಮ ನಾಯಕರು ಪ್ರತಿ ಹಂತದಲ್ಲಿ ಇರಲಿ. ಹೆಂಡ, ತುಂಡು, ಗುಂಡಿಗೆ ಜನ ದಾಸರಾಗದೇ ಇರಲಿ. ಜಾತಿ, ಮತ, ಮೀಸಲಾತಿಗಾಗಿ ಒಳ ಜಗಳ ಬಾರದೆ ಇರಲಿ. ಪ್ರಜಾಪ್ರಭುತ್ವ ಯಶಸ್ವಿ ಆಗಲಿ ಬದಲಾಗಿ ಸ್ವಾರ್ಥಕ್ಕೆ ಉಪಯೋಗ ಆಗದೆ ಇರಲಿ.ವರ ಮಹಾಲಕ್ಷ್ಮಿ ಎಲ್ಲರ ಮೇಲೂ ಕೃಪೆ ತೋರಲಿ. ಹಣವಂತರ ಮನೆಯಲ್ಲಿ ಸೊಪ್ಪು , ತರಕಾರಿ, ಹಣ್ಣು ಕಸದ ತೊಟ್ಟಿ ಸೇರದೆ, ಬಡವರ ಹೊಟ್ಟೆ ತುಂಬುವ ಹಾಗಾಗಲಿ, ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ. ಆಸ್ಪತ್ರೆ ಬಿಲ್ಲು ಕಟ್ಟುವ ಶಕ್ತಿ ಬರಲಿ. ಚಂದ್ರನಲ್ಲಿ ಹೋದಂತೆ, ಎಲ್ಲಾ ಕ್ಷೇತ್ರದಲ್ಲೂ ಜನರಿಗೂ ಜಯ ಸಿಗಲಿ, ಮನುಷ್ಯರ ಹೃದಯ ವಿಶಾಲವಾಗಿ ಇರಲಿ ಎಂಬ ಭಾವ ನಮ್ಮದು. ಅಲ್ಲವೇ? 
ಭಾರತ ಬೆಳಗಲಿ. ನೀವೇನಂತೀರಿ?
@ಹನಿ ಬಿಂದು@
26.08.2023

ಒಂದಿಷ್ಟು.....199

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -199

ಭಾರತ ಪ್ರಕಾಶಿಸುತ್ತಿದೆ. ವಿಕ್ರಮ್ ಲ್ಯಾಂಡರ್  ಚಂದ್ರನನ್ನು ತಲುಪಿ ಇನ್ನೇನು ಪ್ರಗ್ಯಾನ್ ರೋವರ್ ವಿಷಯ ಕಲೆ ಹಾಕಿ ಭಾರತ ಅದನ್ನು ಪಡೆಯಲಿದೆ. ಚಂದ್ರನ ಮೇಲೆ ತಾನು ತಲುಪಿರುವ ಸುದ್ದಿ ನಾಲ್ಕು ಫೋಟೋಗಳನ್ನು ಕಳುಹಿಸುವ ಮೂಲಕ ಅದು ನಮಗೆ ನೀಡಿದೆ. ಚಂದ್ರನ ಒಂದು ದಿನ ಎಂದರೆ ಭೂಮಿಯ ಹದಿನಾಲ್ಕು ದಿನಗಳಂತೆ. ವಿಕ್ರಮ್ ಲ್ಯಾಂಡರ್ ಸ್ವಲ್ಪ ರೆಸ್ಟ್ ಮಾಡಲಿದೆ. ಕಾರಣ ಚಂದ್ರನಲ್ಲಿನ ಧೂಳಿನಿಂದ ಮುಕ್ತಿ ಸಿಗಲಿ ಅಂತ. ಇದೆಲ್ಲ ನಮಗೆ ವಿಜ್ಞಾನಿಗಳು ಕೊಟ್ಟ ಹೇಳಿಕೆ, ವಾರ್ತೆಗಳ ಮೂಲಕ ತಿಳಿದದ್ದು. ಇದರ ಮುಂದೆ ಮೊದಲೇ ಚಂದ್ರನಲ್ಲಿಗೆ ವ್ಯೋಮ ನೌಕೆಗಳನ್ನು ಕಳುಹಿಸಿದ್ದ ರಷ್ಯಾ, ಅಮೆರಿಕ, ಚೀನಾ ದೇಶಗಳ ಸಾಲಿಗೆ ಭಾರತ ಸೇರುತ್ತದೆ. ಭಾರತದ ಶಿಖರಕ್ಕೆ ಒಂದು ಗರಿ ಇದು.  ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಇನ್ನೂ ಕೂಡ. ಇಲ್ಲಿ ಅತಿ ಸಿರಿವಂತರು ಕೂಡಾ ಇದ್ದಾರೆ, ಏನೂ ಇಲ್ಲದೆ ಕಿತ್ತು ತಿನ್ನುವ ಬಡತನವೂ ಇದೆ. ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ, ಹಗ್ಗದ ಮೇಲೆ ನಡೆಯುವ, ತನಗೆ ತಾನೇ ಹಿಂಸೆ ಕೊಟ್ಟುಕೊಳ್ಳುವ, ಹೊರಲಾರದ ಹೊರೆ ಹೊರುವ, ಮೊಬೈಲ್ ಟವರ್ ಗಳನ್ನು ಕಟ್ಟುವಂತಹ ಕಷ್ಟದ ಕೆಲಸ ಮಾಡುವ, ನಿತ್ಯ ಕೂಲಿಯ ಜನ ಅಷ್ಟೇ ಅಲ್ಲದೆ ಮೈ ಮಾರಿಕೊಂಡು ಬದುಕುವ, ಪರರ ಮನೆಯ ಪಾತ್ರೆ ತೊಳೆಯುವುದು, ಬಟ್ಟೆ ಒಗೆದು ಅವರು ಕೊಟ್ಟದ್ದನ್ನು ತಿಂದು ಬದುಕುವ ಜನರೂ ಅದೆಷ್ಟೋ ಇದ್ದಾರೆ. ಬದುಕಲು ಕೂಡದೆ ಕಳ್ಳತನ ಮಾಡಿ, ಅವರಿವರಿಗೆ ಮೋಸ ಮಾಡಿ ಬದುಕುವವರು ಒಂದೆಡೆ ಆದರೆ, ದೊಡ್ಡ ದೊಡ್ಡ ಮಂತ್ರಿಗಳ, ಅಫೀಸರುಗಳ ಹಿಂದೆ ಹಿಂದೆ ಸುತ್ತುತ್ತಾ ಅವರ ಹಣದಲ್ಲೇ ಬದುಕುವ ಅಡ್ನಾಡಿ ಜನರೂ ನಮಗೆ ಸಿಗುತ್ತಾರೆ. ಒಟ್ಟಿನಲ್ಲಿ ಬದುಕು ಪ್ರತಿಯೊಬ್ಬರಿಗೂ ವಿಭಿನ್ನ. ಕೆಲವರಿಗೆ ಹಣದ ಹೊಳೆ ಹರಿದರೆ ಇನ್ನೊಬ್ಬ ಒಂದೊಂದು ರೂಪಾಯಿಗೂ ಪರದಾಡುತ್ತ ಇರುತ್ತಾನೆ. ಒಬ್ಬರ ಮನೆಯಲ್ಲಿ ನಾಲ್ಕೈದು ಗಾಡಿಗಳಿದ್ದರೆ ಇನ್ನೊಬ್ಬನಿಗೆ ಸೈಕಲ್ ಕೊಳ್ಳಲೂ ಸಾಧ್ಯವಾಗುವುದಿಲ್ಲ. 
      ಒಬ್ಬ ವರ್ಷಕ್ಕೆರಡು ಬಾರಿ ಐಷಾರಾಮಿ ಕಾರು ಬದಲಿಸಿದರೆ ಇನ್ನೊಬ್ಬ ವರ್ಷವಿಡೀ ಎರಡೇ ಬಟ್ಟೆಯಲ್ಲಿ ಜೀವನ ಸಾಗಿಸುತ್ತಾನೆ. ಇದು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಲ್ಲೆಲ್ಲ ಹೀಗೆಯೇ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶ ಏನೇನೋ ಸಾಧನೆ ಮಾಡಿದ್ದರು ಕೂಡ ತಮ್ಮ ದೈಹಿಕ ಅನಾರೋಗ್ಯಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಎಲ್ಲರ ಬಳಿ ಸಾಮಾಜಿಕ ಜಾಲ ತಾಣಗಳ ಮೂಲಕ  ಕೇಳಿ ತಮ್ಮ ಬದುಕುವ ಆಸೆ ವ್ಯಕ್ತ ಪಡಿಸುವ ಅದೆಷ್ಟು ಮಂದಿ ನಮ್ಮ ಮುಂದೆ ಇದ್ದಾರೆ! ಯಾಕೆಂದರೆ ನಮ್ಮ ಸುತ್ತಮುತ್ತ ನಮ್ಮನ್ನೂ ಸೇರಿಸಿ ಸಾಧಾರಣ ಜನರೇ ಹೆಚ್ಚು. ಕೆಲವರು ದಾನಿಗಳೂ ಇದ್ದಾರೆ. ಕೆಟ್ಟ ಜನರು ಮೋಸ, ದರೋಡೆ, ಕಳ್ಳತನ, ಕೊಲೆ, ಸುಲಿಗೆ ಮಾಡಿ ಜೀವಿಸುವವರು ಒಂದೆಡೆ ಆದರೆ ತಾನು ದುಡಿದ ಹಣದಲ್ಲಿ ವೃದ್ಧಾಶ್ರಮ, ವಿದ್ಯಾರ್ಥಿಗಳಿಗೆ ಶಾಲೆ, ಹಾಸ್ಟೆಲ್, ಉಚಿತ ವಿದ್ಯೆ, ಬಡವರಿಗೆ ನಿತ್ಯ ಬಳಕೆಯ ಸಾಮಾನು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ , ರೋಗಿಗಳಿಗೆ ಸಹಾಯ ಮಾಡುವ ಉನ್ನತ ಹೃದಯಿ, ಉದಾರ ದಾನಿಗಳಿಗೂ ಕೊರತೆ ಇಲ್ಲ. ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇರುವವರು ಒಂದೆಡೆ ಆದರೆ ಇನ್ನೊಂದೆಡೆ ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ, ಬೆಳಗ್ಗೆ ಪ್ರಾರ್ಥನೆ ಯಾಕೆ ಮಾಡಬೇಕು? ಸಾರ್ವಜನಿಕ ಪೂಜೆ ಸಲ್ಲದು, ಬೇಕಿದ್ದರೆ ಮನೆಯೊಳಗೆ ಕುಳಿತು ಒಬ್ಬನೇ ಪೂಜೆ ಮಾಡು ಎನ್ನುವ ಜನರೂ ಇರುವ ಈ ದೇಶದಲ್ಲಿ ಪ್ರತಿಯೊಂದು ಕಡೆಯೂ ವಿವಿಧತೆ. ಆ ವಿವಿಧತೆಯಲ್ಲಿ ಏಕತೆ ಇರಲಿ ಎಂಬುದು ನಮ್ಮ ಹಾರೈಕೆ. 
    ಭಾರತ ಹೊಳೆಯಲಿ, ಭಾರತ ಬೆಳಗಲಿ, ಭಾರತದ ಕೀರ್ತಿ ಪತಾಕೆ ಹಾರಲಿ, ಭಾರತ ವಿಶ್ವದ ನಂಬರ್ ವನ್ ರಾಷ್ಟ್ರ ಆಗಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಲಿ. ಆ ದಿಶೆಯಲ್ಲಿ ಜೀವನ ಸಾಗಲಿ. ನಾನೊಬ್ಬ ಸಿರಿವಂತ ಆದರೆ ಸಾಕು ಎಂಬ ಸ್ವಾರ್ಥ ಭಾವ ಬಾರದೆ ಇರಲಿ. ಪುಕ್ಕಟೆ ಸಿಗುವ ವಸ್ತು, ಹಣವನ್ನು ಬಯಸಿ ಜನ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಇರಲಿ, ಉತ್ತಮ ನಾಯಕರು ಪ್ರತಿ ಹಂತದಲ್ಲಿ ಇರಲಿ. ಹೆಂಡ, ತುಂಡು, ಗುಂಡಿಗೆ ಜನ ದಾಸರಾಗದೇ ಇರಲಿ. ಜಾತಿ, ಮತ, ಮೀಸಲಾತಿಗಾಗಿ ಒಳ ಜಗಳ ಬಾರದೆ ಇರಲಿ. ಪ್ರಜಾಪ್ರಭುತ್ವ ಯಶಸ್ವಿ ಆಗಲಿ ಬದಲಾಗಿ ಸ್ವಾರ್ಥಕ್ಕೆ ಉಪಯೋಗ ಆಗದೆ ಇರಲಿ.ವರ ಮಹಾಲಕ್ಷ್ಮಿ ಎಲ್ಲರ ಮೇಲೂ ಕೃಪೆ ತೋರಲಿ. ಹಣವಂತರ ಮನೆಯಲ್ಲಿ ಸೊಪ್ಪು , ತರಕಾರಿ, ಹಣ್ಣು ಕಸದ ತೊಟ್ಟಿ ಸೇರದೆ, ಬಡವರ ಹೊಟ್ಟೆ ತುಂಬುವ ಹಾಗಾಗಲಿ, ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ. ಆಸ್ಪತ್ರೆ ಬಿಲ್ಲು ಕಟ್ಟುವ ಶಕ್ತಿ ಬರಲಿ. ಚಂದ್ರನಲ್ಲಿ ಹೋದಂತೆ, ಎಲ್ಲಾ ಕ್ಷೇತ್ರದಲ್ಲೂ ಜನರಿಗೂ ಜಯ ಸಿಗಲಿ, ಮನುಷ್ಯರ ಹೃದಯ ವಿಶಾಲವಾಗಿ ಇರಲಿ ಎಂಬ ಭಾವ ನಮ್ಮದು. ಅಲ್ಲವೇ? 
ಭಾರತ ಬೆಳಗಲಿ. ನೀವೇನಂತೀರಿ?
@ಹನಿ ಬಿಂದು@
26.08.2023

ಒಂದಿಷ್ಟು......198

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 198

                 ಆಗಸ್ಟ್ ಬಂದಿದೆ. ಆಷಾಡ ಕಳೆದಿದೆ. ಹಬ್ಬಗಳ ಸಾಲು ಪ್ರಾರಂಭವಾಗಿದೆ. ಇನ್ನು ಅಲ್ಲಿ ಇಲ್ಲಿ ಸಿಹಿ ಖಾರ ಅಂತ ತಿಂದು, ಹೊಟ್ಟೆ ಕೆಟ್ಟು ಆರೋಗ್ಯ ಹಾಳಾಗುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಹಲವೆಡೆ ಮಳೆ, ಕೆಸರು, ಸೊಳ್ಳೆ, ಶೀತ, ಕೆಮ್ಮು, ಡೆಂಗ್ಯೂ, ವೈರಲ್ ಜ್ವರ, ಸಾಂಕ್ರಾಮಿಕ ರೋಗಗಳು, ಆಸ್ಪತ್ರೆಗೆ ಹೋದರೆ ಲಕ್ಷಗಟ್ಟಲೆ ಉದ್ದದ ಬಿಲ್ಲುಗಳು! ಅದಕ್ಕೆ ವಾಕಿಂಗ್ ಜಾಗಿಂಗ್ ರನ್ನಿಂಗ್! ಒಂದು ದಿನ ಹೋದರೆ ಮರುದಿನ ಕೈ ಕಾಲು ನೋವು. ಸಂಜೆ ಕೆಲಸ ಮಾಡಿ ಸುಸ್ತು! ಬೆಳಗ್ಗೆ ಬೇಗ ಏಳಲು ಆಗದು! ಮನೆಗೆ ಬಂಧುಗಳು ಬಂದರೆ ಬಹಳ ಕೆಲಸ! ಸಮಯ ಸಿಗದು! ಇದನ್ನು ಪ್ರತಿದಿನ ಪಾಲಿಸುವುದು ಕಷ್ಟ! ಇದೆಲ್ಲ ಎಲ್ಲರ ಸಾಮಾನ್ಯ ಸಮಸ್ಯೆ! ಆದರೆ ಹಿಂದಿಯಲ್ಲಿ ಒಂದು ಮಾತಿದೆ. ಕುಚ್ ಪಾನೇ ಕೇ ಲಿಯೇ ಕುಚ್ ಖೋನ ಪಡ್ತಾ ಹೆ. ಏನನ್ನಾದರೂ ಪಡೆದುಕೊಳ್ಳಬೇಕು ಅಂದರೆ ಮತ್ತೆ ಏನನ್ನಾದರೂ ಕಳೆದುಕೊಳ್ಳಲೆ ಬೇಕು! ತ್ಯಾಗಕ್ಕೆ ನಾವು ಸಿದ್ಧರಾಗಬೇಕು. ಯಾವುದೇ ಸಾಧಕರ ಬಳಿ ಕೇಳಿ ನೋಡಬೇಕು. ಅವರ ಸಾಧನೆಯ ಹಿಂದಿನ ಕಷ್ಟಗಳನ್ನು! ಡಾ.  ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಹೇಳುವ ಪ್ರಕಾರ ನಾವು ನಿದ್ದೆಯಲ್ಲಿ ಕಾಣುವುದು  ನಿಜವಾಗಿ ನಮ್ಮ ಜೀವನದ ಕನಸಲ್ಲ. ನಮ್ಮ ನಿಜ ಜೀವನದ ಕನಸು ಯಾವುದೆಂದರೆ ಅದು ನಮ್ಮನ್ನು ಮಲಗಲು ಬಿಡುವುದಿಲ್ಲ. ಆ ಕನಸನ್ನು ಸಾಧಿಸುವವರೆಗೆ ನಾವು ಅದರ ಕಡೆಗೇ ಗಮನ ಕೊಟ್ಟು, ಹಗಲು ರಾತ್ರಿ ಅದಕ್ಕಾಗಿ ದುಡಿದು ಅದನ್ನು ಸಾಧಿಸಿ ಸಂತಸ ಮರೆಯುತ್ತೇವೆ. ಹೌದು, ನಮ್ಮ ಸಣ್ಣ ಕನಸನ್ನು ಸಾಧಿಸಲು ನಾವು ಒಂದಿಷ್ಟು ತ್ಯಾಗಕ್ಕೆ ಸಿದ್ಧರಾಗಬೇಕು ಅಷ್ಟೇ! ಸಾಧಿಸಿದರೆ ಸಬಳವನ್ನೂ ನುಂಗಬಹುದಂತೆ! ಗಾದೆ ಮಾತು ಸುಳ್ಳಾಗದು! ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ,  ದಿಟ್ಟ ನಿರ್ಧಾರ ನಮ್ಮಲ್ಲಿ ಇರಬೇಕು ಅಷ್ಟೇ. 
    " ನನ್ನಿಂದ ಇದು ಸಾಧ್ಯವೇ ಇಲ್ಲಪ್ಪ, ಅದೆಲ್ಲ ದೊಡ್ಡ ದೊಡ್ಡವರಿಗೆ ಮಾತ್ರ ಸಾಧ್ಯ.." ಎಂದು ಹಲವಾರು ಜನ ಮಾತನಾಡಿಕೊಳ್ಳುತ್ತಿರುತ್ತಾರೆ, ಅದರ ಬದಲು "ಆ ದೊಡ್ಡವರು ನಾವೂ ಆಗಬಾರದು ಏಕೆ?" ಎಂದು ಧನಾತ್ಮಕವಾಗಿ, ವೈವಿಧ್ಯಮಯವಾಗಿ ಯಾಕೆ ಯೋಚನೆ ಮಾಡಬಾರದು? ನಮ್ಮ ಬದುಕನ್ನು ಬೇರೆಯವರು ಆಡಿಕೊಳ್ಳುವುದರ ಮೇಲೆ ನಿಲ್ಲಲು ಬಿಡಬಾರದು. ಬದಲಾಗಿ ನಮ್ಮ ಬಾಳು ನಮ್ಮ ಆಲೋಚನೆಗಳ ಮೇಲೆ ನಿಲ್ಲುತ್ತದೆ. ಆ ಆಲೋಚನೆಗಳು ಉದಾತ್ತವಾದರೆ ಸಾಕು, ಬದುಕು ಮೇಲೇರುತ್ತದೆ. ನಮ್ಮ ಭೂಮಿಯಲ್ಲಿ ನಮ್ಮ ಸ್ಥಾನವನ್ನು ದೇವರು ನಿರ್ಧರಿಸುತ್ತಾನೆ ಆದರೂ ಕಷ್ಟ ಪಟ್ಟವನಿಗೆ ಸುಖ ಇದ್ದೇ ಇದೆ. ಕಷ್ಟಪಟ್ಟು ಮರ ಹತ್ತಿದವನು ಮೇಲೆ ಏರಲೆ ಬೇಕು ಅಲ್ಲವೇ? ಕಠಿಣ ಪರಿಶ್ರಮಕ್ಕೆ ಯಶಸ್ಸು ಎಂದೂ ಕಟ್ಟಿಟ್ಟ ಬುತ್ತಿ ಅಲ್ಲವೇ?

     ಒಂದು ಸಣ್ಣ ಕೆಲಸವೂ ನಾವು ಗಮನ ಕೊಡದೆ ಇದ್ದರೆ ಅದೆಷ್ಟು ದೊಡ್ಡದಾಗಿ ಬಿಡುತ್ತದೆ ಅಲ್ಲವೇ? ಉದಾಹರಣೆಗೆ ಮನೆಯ ಮೂಲೆಯಲ್ಲಿ ಬಲೆ ಕಟ್ಟುವ ಜೇಡ. ಜೇಡರ ಬಲೆ! ದಿನ ದಿನ ಗುಡಿಸುವುದು ಸುಲಭ! ಅದೇ ತಿಂಗಳುಗಟ್ಟಲೆ ಹಾಗೆಯೇ ಬಿಟ್ಟರೆ ಮನೆಯ ಸ್ವಚ್ಛತೆಯ ಕಾರ್ಯವೇ ಒಂದು ದೊಡ್ಡ ಕೆಲಸವಾಗಿ ಬಿಡುತ್ತದೆ ಅಷ್ಟೇ! ಹಿಂದಿನ ಕಾಲದ ಮಹಿಳೆಯರು ವಾಕಿಂಗ್, ಜಾಗಿಂಗ್ ಏನೂ ಮಾಡುತ್ತಿರಲಿಲ್ಲ! ಹತ್ತು ಹನ್ನೆರಡು ಮಕ್ಕಳ ಹೆತ್ತರೂ ಆರೋಗ್ಯವಾಗಿ ಇದ್ದರು. ಚೆನ್ನಾಗಿ ಮನೆಯ ಒಳಗೆ, ತೋಟ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೆ ಕಾಡಿಗೆ ಹೋಗಿ ಕಟ್ಟಿಗೆ ಹೊರೆ ತರುತ್ತಿದ್ದರು. ಬಹಳ ದೂರ ನಡೆದು ತಮ್ಮ ಬಂಧುಗಳ ಮನೆ ತಲುಪುತ್ತಿದ್ದರು, ನಡೆದೇ ದೇವಾಲಯಗಳ ದರ್ಶನ ಪಡೆಯುತ್ತಿದ್ದರು. ಬೀಸುವ ಕಲ್ಲು, ರುಬ್ಬುವ ಕಲ್ಲು ಬಳಸುತ್ತಿದ್ದರು, ಒನಕೆ ಹಿಡಿದು ಬತ್ತ ಕಟ್ಟುತ್ತಿದ್ದರು, ಸಣ್ಣ ಹಿಡಿಸೂಡಿ ಅಥವಾ ತೆಂಗಿನ ಗರಿಯ ಪೊರಕೆ ಹಿಡಿದು ಬಗ್ಗಿ ದೊಡ್ಡದಾದ ಅಂಗಳ ಗುಡಿಸುತ್ತಿದ್ದರು, ಬಾವಿಯಲ್ಲಿ ರಾಟೆಯ ಮೂಲಕ ನೀರೆಳೆದು ಮನೆಗೂ, ಗಿಡಗಳಿಗೂ ಹಾಕುತ್ತಿದ್ದರು. ತೋಟದಲ್ಲಿ ಗಿಡಗಳ ಆರೈಕೆ, ಕಳೆ ತೆಗೆಯುವುದು, ಚಿಗುರು ತೆಗೆಯುವುದು, ಕಾಯಿ ಹಣ್ಣು ಕೊಯ್ಯುವುದು, ಬಗ್ಗಿ ಎದ್ದು ಮಾಡುವ ಈ ಕಾರ್ಯಗಳು, ಗದ್ದೆಯಲ್ಲಿ ಉಳುಮೆ, ಬಿತ್ತನೆ, ಕಳೆ ಕೀಳುವ ಕಾರ್ಯ, ಕಟಾವು, ಸ್ವಚ್ಛತೆ ಹೀಗೆ ಪ್ರತಿ ಕಾರ್ಯವೂ ದೈಹಿಕ ವ್ಯಾಯಾಮವೇ ಆಗಿತ್ತು. ಯಾವುದೇ ಹೊಸ ವಾಕ್ ಬೇಕಿರಲಿಲ್ಲ! 

  ಆದರೆ ಹೊಸ ತಾಂತ್ರಿಕ ಯುಗ ಹಾಗಲ್ಲ, ಜನರಿಗೆ ದೈಹಿಕವಾಗಿ ಕಷ್ಟ ಪಡುವ ಎಲ್ಲಾ ಕೆಲಸಗಳನ್ನೂ ಬುದ್ಧಿವಂತರಾದ ನಾವು ಯಂತ್ರಗಳಿಂದ ಮಾಡಿಸುತ್ತೇವೆ. ಹಾಗಾಗಿ ರುಬ್ಬುವ, ಬೀಸುವ, ನೀರೆಳೆಯುವ, ಉಳುವ, ಕಟಾವು ಮಾಡುವ, ನಡೆಯುವ ಯಾವ ಕಷ್ಟ ಕಾರ್ಯಗಳೂ ಇಲ್ಲದ ಕಾರಣ ನಾವು ದೈಹಿಕವಾಗಿ ಅದರ ಜೊತೆ ಯೋಚನೆ ಹೆಚ್ಚಾಗಿ, ಒತ್ತಡಕ್ಕೆ ಮನಸ್ಸನ್ನು ಒಳಪಡಿಸಿ ಮಾನಸಿಕವಾಗಿಯೂ ನೊಂದು ದಿನದಿಂದ ದಿನಕ್ಕೆ ರೋಗಿಗಳಾಗಿ ಹೋಗುತ್ತಿದ್ದೇವೆ. ಹೊಸ ಹೊಸ ರೋಗಗಳಿಗೆ ಮದ್ದು ಕಂಡು ಹಿಡಿಯುತ್ತಿದ್ದ ಹಾಗೆಯೇ ಮದ್ದಿಲ್ಲದ ಹೊಸ ರೋಗಗಳೂ, ಹೊಸ ರೋಗಾಣು ಜೀವ ತಳಿಗಳೂ ನಮ್ಮಿಂದಲೇ ಸೃಷ್ಟಿಯಾಗಿ ನಮ್ಮನ್ನೇ  ನಾಶ ಮಾಡುವ ಕಾಲ ಬಂದಿದೆ. ಬಿ ಎ ರೋಮನ್ ವೆನ್ ಯು ಆರ್ ಇನ್ ರೋಮ್ ಎನ್ನುವ ಆಂಗ್ಲ ಗಾದೆಯ ಹಾಗೆ ಕಾಲವನ್ನು ಬದಲಾಯಿಸಿರುವ ನಾವು ಕಾಲಕ್ಕೆ ತಕ್ಕಂತೆ ಕುಣಿಯಲೆ ಬೇಕಲ್ಲವೇ? ನೀವೇನಂತೀರಿ?
@ಹನಿ ಬಿಂದು@
19.08.2023

Daughter

Daughter

She is as star as my sky
Who cares me very high
Missing each and every seconds 
When I am faraway for minutes

She is like a small godess
Who holds my hand to go ahead
And leads me light to open eyes
Correct my faults to go first

Like  a sticker on my forehead
Like a bangle in my hand
Like a frock around my body
Like a wall of our house
Her care throughout life.

She is my life for ever
Likes me for all I do
She is first if I am with her
Fear to move alone..
@HoneyBindu@
03.09.2023


ಕಿವಿ ಮಾತು

ಸಾಲವೆಂಬ ಶೂಲ

ಸಾಲವೆಂಬ ಶೂಲದಲ್ಲಿ
ಬೀಳಬೇಡ ಮಾಲಕ
ಬೋಳನಂತೆ ಖರ್ಚುಮಾಡಿ
ಕೀಳಾಗಬೇಡ ನಾಯಕ
ದಾಳದಲ್ಲಿ ಆಟವಾಡಿ
ತಾಳದಲ್ಲಿ ಸಿಕ್ಕಿ ಬಿದ್ದು
ಹಾಳಾದ ಧರ್ಮರಾಯ
ನೀಳವಾದ ಮಾತು ನಂಬಿ
ಬಾಳಿ ಬದುಕೊ ಮಾನಕ
ಮಾಡಿಕೊಂಡು ಕಾಯಕ
ಹರ್ಷವಿರಲಿ ಮನಕ
ಆರೋಗ್ಯವಿರಲಿ ಜೀವಕ
@ಹನಿಬಿಂದು@
03.09.2023